ಏಂಜೆಲಿಕ: ಕೊತ್ತಂಬರಿ ಬಳಗಕ್ಕೆ (ಏಪಿಯೇಸೀ) ಸೇರಿದ, ಚಿಕ್ಕಗಾತ್ರದ ಬಹುವಾರ್ಷಿಕ, ಸುಗಂಧಸಸ್ಯ, ಸಿರಿಯ ಇದರ ತವರೂರು. ದಿವ್ಯವಾದ, ಅತಿ ಮಾನುಷ ಗುಣಗಳನ್ನು ಹೊಂದಿರುವುದರಿಂದ ಇದಕ್ಕೆ ಏಂಜೆಲಿಕ ಎಂಬ ಹೆಸರು, ಬೇರು ಮತ್ತು ಫಲಗಳನ್ನು ಒಣಗಿಸಿ ಕೇಕ್, ರೊಟ್ಟಿ, ಕ್ಯಾಂಡಿ ಮತ್ತು ಅನೇಕ ಜನಪ್ರಿಯ ಮಾದಕಪಾನೀಯ ಗಳಿಗೆ ಮನಮೋಹಕ, ಆಕರ್ಷಕ, ಸುವಾಸನೆ ನೀಡಲು ಉಪಯೋಗಿಸುತ್ತಾರೆ. ಸಸ್ಯ ದಟ್ಟ ಹಸುರುಬಣ್ಣದಿಂದ ಕೂಡಿರುವುದರಿಂದ ಎಳೆಯ ಕುಡಿಗಳನ್ನು ಶೀತಲೀಕರಿಸಿ ಕೇಕುಗಳಿಗೆ ಅಂದ ಕೊಡಲು ಬಳಸುತ್ತಾರೆ. ಬಟ್ಟಿ ಇಳಿಸಿ ತೆಗೆದ ತೈಲವನ್ನು ಔಷಧಿ, ಸುಗಂಧ ತೈಲಗಳ ತಯಾರಿಕೆಯಲ್ಲಿ ಬಳಸಲಾಗುತ್ತಿದೆ. 1500 ವರ್ಷಗಳಿಗೂ ಮುಂಚೆಯೇ ಇದರ ಪ್ರಯೋಜನವನ್ನು ಜನ ಕಂಡುಕೊಂಡಿದ್ದರೆಂಬುದಕ್ಕೆ ದಾಖಲೆಗಳಿವೆ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಏಂಜೆಲಿಕ&oldid=625365" ಇಂದ ಪಡೆಯಲ್ಪಟ್ಟಿದೆ