ಎಸ್. ಎಂ. ಮುತ್ತಯ್ಯ
ಡಾ. ಎಸ್. ಎಂ. ಮುತ್ತಯ್ಯ (ಡಿಸೆಂಬರ್ ೧೨, ೧೯೭೫) ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದು ಕನ್ನಡ ಸಾಹಿತ್ಯ
ಡಾ. ಎಸ್. ಎಂ. ಮುತ್ತಯ್ಯ | |
---|---|
Born | ಎಸ್. ಎಂ. ಮುತ್ತಯ್ಯ ೧೨ ಡಿಸೆಂಬರ್ ೧೯೭೫ ನಲಗೇತನಹಟ್ಟಿ, ಚಳ್ಳಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ. |
Nationality | ಭಾರತೀಯ |
Occupation(s) | ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸಹ್ಯಾದ್ರಿ ವಿಜ್ಞಾನ ಕಾಲೇಜು. |
ಸಾಂಸ್ಕೃತಿಕ ಲೋಕದಲ್ಲಿ ತಮ್ಮ ಬರಹ, ಚಿಂತನೆ, ಸಂವಾದಗಳ ಮೂಲಕ ಗುರುತಿಸಲ್ಪಟ್ಟವರು. ವಿಮರ್ಶೆ, ಜಾನಪದ, ಸಂಸ್ಕೃತಿ ಮತ್ತು ಬುಡಕಟ್ಟು ಅಧ್ಯಯನ ಕುರಿತಾದ ಸಂಶೋಧನೆಗಳಿಗೆ ಹೆಸರುವಾಸಿಯಾಗಿದ್ದಾರೆ. ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ .ಈಗಾಗಲೇ ಇಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
ಜನನ, ಜೀವನ
ಬದಲಾಯಿಸಿಎಸ್. ಎಂ. ಮುತ್ತಯ್ಯ ಇವರು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು 'ನಲಗೇತನಹಟ್ಟಿ' ಗ್ರಾಮದಲ್ಲಿ ೧೯೭೫ ರಲ್ಲಿ ಜನಿಸಿದರು. ನಾಯಕ ಜನಾಂಗಕ್ಕೆ ಸೇರಿದ ಇವರು ನಲಗೇತನಹಟ್ಟಿಯಲ್ಲಿ ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಹಂತದ ವಿದ್ಯಾಭ್ಯಾಸವನ್ನು ಮುಗಿಸಿ, ಜಗಳೂರಿನ ಮಾಲತಿ ಪಿಯು ಕಾಲೇಜಿನಲ್ಲಿ ಪಿ.ಯು.ಸಿ. ಶಿಕ್ಷಣ, ಚಳ್ಳಕೆರೆಯ ಎಚ್.ಪಿ.ಪಿ.ಸಿ ಸರ್ಕಾರಿ ಪ್ರಥಮ ದರ್ಜೆಕಾಲೇಜಿನಲ್ಲಿ ೯ನೇ ರಾಂಕಿನೊಂದಿಗೆ ಬಿ.ಎ. ಪದವಿ. ಕುವೆಂಪು ವಿಶ್ವವಿದ್ಯಾಲಯಲ್ಲಿ ೧೯೯೯ ರಲ್ಲಿ ಎರಡನೇ ರಾಂಕಿನೊಂದಿಗೆ ಕನ್ನಡ ಎಂ.ಎ. ಪದವಿ. ೧೯೯೯ ರಲ್ಲಿ ಯು.ಜಿ.ಸಿ ನೆಟ್ (ಜೆ.ಆರ್.ಎಫ಼್) ತೇರ್ಗಡೆ. ವಿದ್ಯಾರ್ಥಿ ದೆಸೆಯಲ್ಲಿಯೇ ಇವರು ಉತ್ತಮ ಭಾಷಣಕಾರರಾಗಿದ್ದರು. ಸಂವಿಧಾನ ಮತ್ತು ಅಂಬೇಡ್ಕರ್ ವಿಚಾರಧಾರೆಗಳಿಂದ ಆಕರ್ಷಿತರಾಗಿದ್ದರು.
ಕೃತಿಗಳು[ಬದಲಾಯಿಸಿ]
ಬದಲಾಯಿಸಿಪಿ.ಎಚ್ ಡಿ ಸಂಶೋಧನಾ ಪ್ರಬಂಧ
ಬದಲಾಯಿಸಿ- ಕನ್ನಡ ಜನಪದ ಮಹಾಕಾವ್ಯಗಳಲ್ಲಿ ಸಾಂಸೃತಿಕ ಮುಖಾಮುಖಿಯ ಸ್ವರೂಪಗಳು, ೨೦೦೪
ಕೃತಿಗಳು
ಬದಲಾಯಿಸಿ- ಲಿಖಿತ-ಅಲಿಖಿತ, (೨೦೦೫)
- ಜಾನಪದ ಸಂಕಥನ, (೨೦೦೭)
- ಜನಪದ ಮಹಾಕಾವ್ಯಗಳು ಮತ್ತು ಪ್ರತಿಸಂಸ್ಕೃತಿ, (೨೦೦೮)
- ವಾಲ್ಮೀಕಿ ಜ್ಯೋತಿ (ಸಹ ಸಂಪಾದನೆ), ೨೦೦೩
- ಕಿಲಾರಿ (ಕಿಲಾರಿಯ ಆತ್ಮಕತೆ ನಿರೂಪಣೆ), ೨೦೦೮
- ಬಡಗಿಕಟ್ಟಿದ ಬೆಡಗಿನ ಮಾಳಿಗೆ (ಸಂ), ೨೦೧೧
- ಬುಡಕಟ್ಟು ಬೆರಗು, ೨೦೧೧
- ಕನ್ನಡ ಜನಪದ ಸಂಸ್ಕೃತಿ, ೨೦೧೨,
- ಶಿಕ್ಷಣ ಮತ್ತು ಸಮಾಜ (ಸಂ), ೨೦೧೨
- ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿ, (ಸಂ), ೨೦೧೩
- ಕಂಪಳ, ೨೦೧೪
- ಅಂತರಾಳ,(ಸಂ), ೨೦೧೫
- ಬುಡಕಟ್ಟು ಜ್ಞಾನ ಪರಂಪರೆ, ೨೦೧೭
- ಜಾನಪದ ದರ್ಶನ , ೨೦೧೮
- ಸಂಸ್ಕೃತಿ ದರ್ಶನ, ೨೦೧೮
- ಚಿತ್ರದುರ್ಗ ಜಿಲ್ಲೆಯ ಪಶುಪಾಲನಾ ಸಂಸ್ಕೃತಿ, ೨೦೧೮
- ಆದಿವಾಸಿ ಪರಂಪರೆ ಮತ್ತು ಆಧುನಿಕತೆ, ೨೦೧೯
- ಸಿಂಧೋಳ್ಳು, ೨೦೧೯
- ಪ್ರಭುತ್ವ ಮತ್ತು ಸಂಘರ್ಷ, ೨೦೨೦
- ಅಂಬೇಡ್ಕರ್ ಅವರ ಸಂಸ್ಕೃತಿ ಚಿಂತನೆ, ೨೦೨೧
ಸಂಶೋಧನಾ ಯೋಜನೆಗಳು
ಬದಲಾಯಿಸಿ- ಸಿಂದೋಳ್ಳು ಸಮುದಾಯದ ಸಾಮಾಜಿಕ,ಸಾಂಸ್ಕೃತಿಕ, ಆರ್ಥಿಕ, ರಾಜಕೀಯ ಸ್ಥಿತಿಗತಿಗಳು.(ಡಾ.ಅಂಬೇಡ್ಕರ್ ಸಂಶೋಧನಾ ಕೇಂದ್ರ, ಬೆಂಗಳೂರು) ೨೦೧೭-೧೮
- ಮ್ಯಾಸಬೇಡರ ನ್ಯಾಯಪದ್ಧತಿ (ಯು.ಜಿ.ಸಿ) ೨೦೧೧-೧೨
- ಚಿತ್ರದುರ್ಗಜಿಲ್ಲೆಯ ಪಶುಪಾಲನಾ ಸಂಸ್ಕೃತಿ (ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ) ೨೦೧೨-೧೩
- ಅಂಬೇಡ್ಕರ್ ಅವರ ಸಂಸ್ಕೃತಿ ಚಿಂತನೆ (ಪ್ರಸಾರಾಂಗ, ಕುವೆಂಪು ವಿಶ್ವವಿದ್ಯಾಲಯ) ೨೦೨೧
ಗೌರವ, ಪ್ರಶಸ್ತಿಗಳು
ಬದಲಾಯಿಸಿ- ಬುಡಕಟ್ಟು ಜ್ಞಾನ ಪರಂಪರೆ ಕೃತಿಗೆ – ಲೋಕಸರಸ್ವತಿ ಗ್ರಂಥ ಪ್ರಶಸ್ತಿ, ಕರ್ನಾಟಕ ಜಾನಪದ ಪರಿಷತ್, ೨೦೧೯
ಉಲ್ಲೇಖಗಳು
ಬದಲಾಯಿಸಿ- Book Review 36, Prajavani. Retrieved from https://www.prajavani.net/art-culture/book-review/book-review-36-620112.html
- Syndicate members nominated for Hampi University, Prajavani. Retrieved from https://www.prajavani.net/district/vijayanagara/syndicate-members-nominated-for-hampi-university-2946952
- Varthabharati article, Varthabharati. Retrieved from https://www.varthabharati.in/article/2019_03_24/183762