ಎಮ್ಮಾ ವ್ಯಾಟ್ಸನ್‌

ಎಮ್ಮಾ ಚಾರ್ಲೊಟ್ಟ್ ಡ್ಯುರ್ರ್ ವ್ಯಾಟ್ಸನ್‌ (ಜನನ:15 ಏಪ್ರಿಲ್ 1990) ಒಬ್ಬ ಬ್ರಿಟಿಷ್ ನಟಿ ಮತ್ತು ರೂಪದರ್ಶಿ. ಈಕೆ ಹ್ಯಾರಿ ಪಾಟರ್‌ ಚಲನಚಿತ್ರ ಸರಣಿಯ ಮೂರು ಪ್ರಮುಖ ಪಾತ್ರಗಳಲ್ಲಿ ಒಂದಾದ ಹರ್ಮೈನಿ ಗ್ರೇಂಜರ್ ಪಾತ್ರವನ್ನು ಅಭಿನಯಿಸುವ ಮೂಲಕ ಪ್ರಸಿದ್ಧಿ ಪಡೆದಳು. ವ್ಯಾಟ್ಸನ್ ತನ್ನ ಒಂಬತ್ತನೇಯ ವಯಸ್ಸಿನಲ್ಲಿ ಹರ್ಮೈನಿ ಪಾತ್ರವನ್ನು ಅಭಿನಯಿಸಿದಳು. ಇದಕ್ಕೂ ಮೊದಲು ಆಕೆ ಶಾಲೆಯ ನಾಟಕಗಳಲ್ಲಿ ಮಾತ್ರ ನಟಿಸಿದ್ದಳು.[] 2001 ರಿಂದ 2009ರವರೆಗೆ ಈಕೆ ಎಂಟು ಹ್ಯಾರಿ ಪ್ಯಾಟರ್‌ ಚಲನಚಿತ್ರಗಳಲ್ಲಿ ಡ್ಯಾನಿಯಲ್ ರಾಡ್‌ಕ್ಲಿಫ್‌ ಮತ್ತು ರುಪೆರ್ಟ್ ಗ್ರಿಂಟ್‌ ಅವರ ಜೊತೆಯಾಗಿ ಅಭಿನಯಿದಳು; []. ವ್ಯಾಟ್ಸನ್ ಹ್ಯಾರಿ ಪಾಟರ್‌ ಸರಣಿಯ ಕೆಲಸಕ್ಕಾಗಿ ಹಲವು ಪ್ರಶಸ್ತಿಗಳನ್ನು ಮತ್ತು £10 millionಗಿಂತ ಹೆಚ್ಚು ಗಳಿಸಿದಳು.[] 2009ರಲ್ಲಿ ಬರ್ಬೆರ್ರಿಯ ಶರತ್ಕಾಲ/ಚಳಿಗಾಲದ ಕ್ಯಾಂಪೇನ್‌ಗೆ ರೂಪದರ್ಶಿಯಾಗಿ ರಂಗ ಪ್ರವೇಶ ಮಾಡಿದಳು. 2007ರಲ್ಲಿ, ವ್ಯಾಟ್ಸನ್ ಹ್ಯಾರಿ ಪಾಟರ್‌ ಯೇತರ ನಿರ್ಮಾಣಗಳಲ್ಲಿ ಪಾಲುಗೊಳ್ಳುವಿಕೆಯನ್ನು ಘೋಷಿಸಿದಳು: ಬ್ಯಾಲ್ಲೆಟ್ ಶೂಸ್‌ ಕಾದಂಬರಿಯ ದೂರದರ್ಶನ ರೂಪಾಂತರ ಮತ್ತು ಒಂದು ಆನಿಮೇಶನ್‌ ಚಲನಚಿತ್ರ, ದಿ ಟೇಲ್ ಆಫ್ ಡೆಸ್ಪೆರ್ರೂ ಚಿತ್ರಗಳಲ್ಲಿ ನಟಿಸಿದರು. ಬ್ಯಾಲ್ಲೆಟ್ ಶೂಸ್ 26 ಡಿಸೆಂಬರ್ 2007ರಂದು 5.2 ಮಿಲಿಯನ್‌ ವೀಕ್ಷಕರಿಗೆ ತಲುಪುವ ಟಿವಿವಾಹಿನಿಯಲ್ಲಿ ಪ್ರಸಾರಮಾಡಲಾಯಿತು ಮತ್ತು ಕೆಟ್ ಡಿಕ್ಯಾಮಿಲ್ಲೊ ಬರೆದ ಕಾದಂಬರಿ ಆಧಾರಿತ ಟೇಲ್ ಆಫ್ ಡೆಸ್ಪೆರ್ರೂ 2008ರಲ್ಲಿ ಬಿಡುಗಡೆಯಾಯಿತು ಮತ್ತು ಪ್ರಪಂಚದಾದ್ಯಂತ ಮಾರಾಟದಲ್ಲಿ US $70 ಮಿಲಿಯನ್‌‌ಗಿಂತ ಹೆಚ್ಚು ಹಣವನ್ನು ಸಂಪಾದಿಸಿತು.[][]

ಎಮ್ಮಾ ವ್ಯಾಟ್ಸನ್‌

Emma Watson at the premiere of Harry Potter and the Goblet of Fire in 2005
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಎಮ್ಮಾ ಚಾರ್ಲೊಟ್ಟ್ ಡ್ಯುರ್ರ್ ವ್ಯಾಟ್ಸನ್‌[]
(1990-04-15) ೧೫ ಏಪ್ರಿಲ್ ೧೯೯೦ (ವಯಸ್ಸು ೩೪)
Paris, ಫ್ರಾನ್ಸ್
ವೃತ್ತಿ ನಟಿ, ರೂಪದರ್ಶಿ
ವರ್ಷಗಳು ಸಕ್ರಿಯ 2001 – ಪ್ರಸ್ತುತ
Official website

ಆರಂಭಿಕ ಜೀವನ

ಬದಲಾಯಿಸಿ

ಬ್ರಿಟಿಷ್ ನ್ಯಾಯವಾದಿಗಳಾದ ಜಾಕ್‌ಕ್ವಿಲೈನ್ ಲ್ಯುಸ್ಬೈ ಮತ್ತು ಕ್ರಿಸ್ ವ್ಯಾಟ್ಸನ್‌ರ ಮಗಳಾಗಿ ಎಮ್ಮಾ ವ್ಯಾಟ್ಸನ್ ಪ್ಯಾರಿಸ್‌ನಲ್ಲಿ ಜನಿಸಿದಳು.[][] ವ್ಯಾಟ್ಸನ್ ಒಬ್ಬ ಫ್ರೆಂಚ್ ಅಜ್ಜಿಯನ್ನು ಹೊಂದಿದ್ದಾಳೆ [] ಮತ್ತು ತನ್ನ ಐದನೇ ವರ್ಷ ವಯಸ್ಸಿನವರೆಗೆ ಆಕೆ ಪ್ಯಾರಿಸ್‌ನಲ್ಲಿ ನೆಲೆಸಿದ್ದಳು. ನಂತರ ಅವಳ ಹೆತ್ತವರ ವಿವಾಹ ವಿಚ್ಚೇದನವನ್ನು ಅನುಸರಿಸಿ ಆಕೆ ತನ್ನ ತಾಯಿ ಮತ್ತು ತಮ್ಮ ಅಲೆಕ್ಸ್‌ನ ಜೊತೆ ಆಕ್ಸ್‌ಫೊರ್ಡ್‌ಶೈರ್‌ಗೆ ಸ್ಥಳಾಂತರವಾದಳು.[] ಆರು ವರ್ಷ ವಯಸ್ಸಿನಿಂದ ವ್ಯಾಟ್ಸನ್ ನಟಿಯಾಗಲು ಆಶಿಸುತ್ತಿದಳು [೧೦] ಮತ್ತು ಹಲವು ವರ್ಷಗಳವರೆಗೆ ಸ್ಟೇಜ್‌ ಕೋಚ್ ಥೆಯಟರ್ ಆರ್ಟ್ಸ್‌ ಆಕ್ಸ್‌ಫರ್ಡ್‌ ಶಾಖೆಯಲ್ಲಿ ತರಬೇತಿ ಪಡೆದಳು. ಅದು ಒಂದು ಅರೆಕಾಲಿಕ ನಾಟಕ ಶಾಲೆಯಾಗಿದ್ದು ಅಲ್ಲಿ ಆಕೆ ಹಾಡುಗಾರಿಕೆ, ನೃತ್ಯ ಮತ್ತು ಅಭಿನಯವನ್ನು ಕಲಿತಳು.[೧೧] ಹತ್ತು ವರ್ಷ ವಯಸ್ಸಿನ ಹೊತ್ತಿಗೆ, ಆಕೆ ಹಲವು ಸ್ಟೇಜ್‌ಕೋಚ್‌ ನಿರ್ಮಾಣಗಳಲ್ಲಿ ಮತ್ತು ಶಾಲಾ ನಾಟಕಗಳಲ್ಲಿ ನಟಿಸಿದ್ದಳು. ಅವುಗಳಲ್ಲಿ ಅರ್ಥರ್‌: ದಿ ಯಂಗ್ ಇಯರ್ಸ್‌ ಮತ್ತು ದಿ ಹ್ಯಾಪಿ ಪ್ರಿನ್ಸ್‌ ಸೇರಿದೆ. ಆದರೆ ಆಕೆ ಹ್ಯಾರಿ ಪಾಟರ್‌ ಸರಣಿಯ ಮುನ್ನ ವೃತ್ತಿನಿರತವಾಗಿ ಅಭಿನಯಿಸಿರಲಿಲ್ಲ.[] "ನನಗೆ ಚಲನಚಿತ್ರದಲ್ಲಿ ನಟಿಸಲು ಅಗತ್ಯವಾದ ಮಾನದಂಡದ ಕಲ್ಪನೆ ಇರಲಿಲ್ಲ" ಎಂದು ಆಕೆ 2007ರಲ್ಲಿ ಪೆರೇಡ್‌ ಜೊತೆಯ ಸಂದರ್ಶನದಲ್ಲಿ ಹೇಳಿದ್ದಾಳೆ; "ಒಂದುವೇಳೆ ನನಗೆ ಆ ಸಾಮರ್ಥ್ಯ ಇದ್ದಿದ್ದರೆ ನಾನು ಸಂಪೂರ್ಣವಾಗಿ ಭಾವಪರವಶವಾಗುತ್ತಿದ್ದೆ."[೧೨]

ವೃತ್ತಿ

ಬದಲಾಯಿಸಿ

ಹ್ಯಾರಿ ಪಾಟರ್

ಬದಲಾಯಿಸಿ

1999ರಲ್ಲಿ, ಬ್ರಿಟಿಷ್ ಲೇಖಕಿ ಜೆ. ಕೆ. ರೌಲಿಂಗ್‌ರ ಹೆಚ್ಚು ಮಾರಾಟವಾಗುವ ಕಾದಂಬರಿಯ ಚಲನಚಿತ್ರ ಆಳವಡಿಕೆ,[೧೦] ಹ್ಯಾರಿ ಪಾಟರ್ ಆಂಡ್ ದಿ ಫಿಲೊಸೊಫರ್‌’ಸ್ ಸ್ಟೋನ್‌ ನ ಪಾತ್ರಗಳ ಹಂಚಿಕೆ ಆರಂಭವಾಗಿತ್ತು. (ಹ್ಯಾರಿ ಪಾಟರ್ ಆಂಡ್ ದಿ ಸೊರ್ಕೆರೆರ್‌‌’ಸ್ ಸ್ಟೋನ್ ಎಂದು ಸಂಯುಕ್ತ ಸಂಸ್ಥಾನದಲ್ಲಿ ಬಿಡುಡೆಯಾಯಿತು), ಈ ಚಿತ್ರದಲ್ಲಿಯ ಪ್ರಮುಖ ಪಾತ್ರ ಹ್ಯಾರಿ ಪಾಟರ್ ಹಾಗೂ ಇನ್ನುಳಿದ ಮುಖ್ಯ ಪೋಷಕ ಪಾತ್ರಗಳಾದ ಹ್ಯಾರಿಯ ಸ್ನೆಹಿತರಾದ ಹರ್ಮಿಯೋನ್ ಗ್ರಾಂಗರ್ ಮತ್ತು ರಾನ್‌ ವೆಸ್ಲೆ ಪಾತ್ರಗಳಿಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ಪಾತ್ರ ಹಂಚಿಕೆಯ ಪ್ರತಿನಿಧಿಗಳು ವ್ಯಾಟ್ಸನ್‌ಳನ್ನು ಅವಳ ಆಕ್ಸ್‌ಫರ್ಡ್ ನಾಟಕ ಶಾಲೆಯ ಶಿಕ್ಷಕಿಯ ಮೂಲಕ ಪತ್ತೆಹಚ್ಚಿದರು [೧೦] ಮತ್ತು ನಿರ್ಮಾಪಕರು ಅವಳ ಅತ್ಮವಿಶ್ವಾಸವನ್ನು ಮೆಚ್ಚಿದರು. ಎಂಟು ಸುತ್ತಿನ ಪ್ರತಿಭಾ ಪರೀಕ್ಷೆಯ[೧೩] ನಂತರ ನಿರ್ಮಾಪಕ ಡೆವಿಡ್ ಹೆಯ್ಮಾನ್‌, ವ್ಯಾಟ್ಸನ್ ಮತ್ತು ಜೊತೆಗಾರ ಆಭ್ಯರ್ಥಿಗಳಾದ ಡ್ಯಾನಿಯಲ್ ರಾಡ್ಕ್ಲಿಫ್ಫ್ ಮತ್ತು ರುಪರ್ಟ್ ಗ್ರಿಂಟ್ ಅವರಿಗೆ ಕ್ರಮವಾಗಿ ಹರ್ಮಿಯೊನ್‌, ಹ್ಯಾರಿ ಮತ್ತು ರಾನ್ ಪಾತ್ರಗಳಿಗೆ ನಟರನ್ನಾಗಿ ಆಯ್ದುಕೊಳ್ಳಲಾಗಿದೆ ಎಂದು ಹೇಳಿದರು. ರೌಲಿಂಗ್‌ಳು ವ್ಯಾಟ್ಸನ್‌ಳನ್ನು ಅವಳ ಮೊದಲ ಪ್ರತಿಭಾ ಪರೀಕ್ಷೆಯಿಂದಲೇ ಬೆಂಬಲಿಸಿದ್ದಳು.[೧೦] 2001ರಲ್ಲಿ ಹ್ಯಾರಿ ಪಾಟರ್ ಆಂಡ್ ದಿ ಫಿಲೊಸೊಫರ್‌’ಸ್ ಸ್ಟೋನ್‌ ನ ಬಿಡುಗಡೆಯಲ್ಲಿ ವ್ಯಾಟ್ಸನ್‌ಳು ಪ್ರಪ್ರಥಮವಾಗಿ ಪರದೆಯ ಮೇಲೆ ಕಾಣಿಸಿಕೊಂಡಳು. ಚಲನಚಿತ್ರವು 2001ರಲ್ಲಿ ಆರಂಭ-ದಿನದ ಮಾರಾಟ ಮತ್ತು ಆರಂಭ ವಾರಾಂತ್ಯದ ಮಾರಾಟದಿಂದ ಬಂದ ಹಣದ ಮತ್ತು ಅತಿ ಹೆಚ್ಚು ಹಣ ಗಳಿಸಿದ ಚಲನಚಿತ್ರಗಳ ದಾಖಲೆಯನ್ನು ಮುರಿಯಿತು.[೧೪][೧೫] ವಿಮರ್ಶಕರು ಪ್ರಮುಖ ಮೂರು ಪಾತ್ರಗಳ ಪ್ರದರ್ಶನವನ್ನು ಹೊಗಳಿದರು, ಪದೇಪದೇ ವ್ಯಾಟ್ಸನ್‌ಳನ್ನು ಪ್ರತ್ಯೇಕವಾಗಿ ವಿಶಿಷ್ಟವಾಗಿ ಶ್ಲಾಘಿಸಿದರು; ದಿ ಡೈಲಿ ಟೆಲಿಗ್ರಾಫ್ ಅವಳ ಪ್ರದರ್ಶನವನ್ನು "ಮೆಚ್ಚತಕ್ಕದ್ದು" ಎಂದು ಕರೆಯಿತು [೧೬] ಮತ್ತು "ಅವಳು ಚಿತ್ರದ ತುಂಬ ಆವರಿಸಿಕೊಂಡಿದ್ದಾಳೆ " ಎಂದು IGN ಹೇಳಿತು.[೧೭] ಫಿಲೊಸೊಫರ್‌’ಸ್ ಸ್ಟೋನ್‌ ನಲ್ಲಿನ ಅಭಿನಯಕ್ಕಾಗಿ ವ್ಯಾಟ್ಸನ್‌ಳನ್ನು ಐದು ಪ್ರಶಸ್ತಿಗಳಿಗೆ ನಾಮಕರಣ ಮಾಡಲಾಯಿತು. ಪ್ರಧಾನ ಪಾತ್ರದ ಯುವ ನಟಿಗಾಗಿ ಯುವ ಕಲಾವಿದೆ ಪ್ರಶಸ್ತಿಯನ್ನು ಅವಳು ಪಡೆದಳಳು.[೧೮] ಒಂದು ವರ್ಷದ ನಂತರ ವ್ಯಾಟ್ಸನ್ ಸರಣಿಯ ಎರಡನೆ ಕಂತು ಹ್ಯಾರಿ ಪಾಟರ್ ಆಂಡ್ ದಿ ಚೆಂಬರ್ ಅಫ್ ಸಿಕ್ರೆಟ್ಸ್‌ ನಲ್ಲಿ ಪುನಃ ಹರ್ಮಿಯೊನ್‌ ಆಗಿ ನಟಿಸಿದಳು. ಈ ಸಿನಿಮಾ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದರೂ ಸಹ ವಿಮರ್ಶಕರು ಪ್ರಧಾನ ಪಾತ್ರಗಳ ಬಗ್ಗೆ ಸಕಾರಾತ್ಮಕವಾಗಿದ್ದರು. ಲಾಸ್ ಏಂಜಲೀಸ್ ಟೈಮ್ಸ್ "ವ್ಯಾಟ್ಸನ್ ಮತ್ತು ಅವಳ ಸಮಾನ ವಯಸ್ಕರು ಚಿತ್ರಗಳ ನಡುವೆ ಪ್ರಬುದ್ಧರಾಗಿದ್ದಾರೆ" ಎಂದು ಹೇಳಿತು.[೧೯] ಹಾಗೆಯೇ ದಿ ಟೈಮ್ಸ್‌ ಪತ್ರಿಕೆಯು ನಿರ್ದೇಶಕ ಕ್ರಿಸ್ ಕೊಲಂಬಸ್‌ ಅತ್ಯಂತ ಜನಪ್ರಿಯ ಪಾತ್ರ ಹರ್ಮಿಯೊನ್‌ ಅನ್ನು "ಕಡಿಮೆ ಬಳಸಿಕೊಂಡಿದ್ದಾರೆ" ಎಂದು ಟೀಕಿಸಿತು.[೨೦] ವ್ಯಾಟ್ಸನ್ ಅವಳ ನಟನೆಗಾಗಿ ಜರ್ಮನ್ ನಿಯತಕಾಲಿಕ ಬ್ರಾವೊ ದಿಂದ ಒಟ್ಟೊ ಪ್ರಶಸ್ತಿಯನ್ನು ಪಡೆದಳು.[೨೧] 2004ರಲ್ಲಿ, ಹ್ಯಾರಿ ಪಾಟರ್ ಆಂಡ್ ದಿ ಪ್ರಿಸನರ್ ಅಫ್ ಅಜ್ಕಾಬಾನ್‌ ಬಿಡುಗಡೆಯಾಯಿತು. ವ್ಯಾಟ್ಸನ್‌ ತಾನು ನಟಿಸಿದ ’ಹರ್ಮಿಯೊನ್‌’ ಪಾತ್ರವು ಹೆಚ್ಚು ಮಹತ್ವವುಳ್ಳದ್ದು ಮತ್ತು ಅದು ತುಂಬಾ "ವರ್ಚಸ್ಸಿನ", "ಅಭಿನಯಕ್ಕೆ ಹೆಚ್ಚು ಅವಕಾಶವಿರುವ ಅತ್ಯಾಕರ್ಷಕ ಪಾತ್ರವಾಗಿದೆ" ಎಂದು ಹೇಳುತ್ತಾಳೆ.[೨೨] ವಿಮರ್ಶಕರು ರಾಡ್‌ಕ್ಲಿಫ್‌ರ ಅಭಿನಯವನ್ನು ಭಾವಶೂನ್ಯ ಎಂದು ಟೀಕಿಸಿ, ವ್ಯಾಟ್ಸನ್‌ಳ ಅಭಿನಯವನ್ನು ಹೊಗಳಿದ್ದಾರೆ. ದಿ ನ್ಯೂಯಾರ್ಕ್‌ ಟೈಮ್ಸ್‌ ಆಕೆಯ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಾ " ಅದೃಷ್ಟಕ್ಕೆ, ರಾಡ್‌ಕ್ಲಿಫ್‌ರ ಪಾತ್ರದಲ್ಲಿದ್ದ ಭಾವಶೂನ್ಯತೆಯನ್ನು ವ್ಯಾಟ್ಸನ್‌ ಅಭಿನಯಿಸಿದ ಹರ್ಮಿಯೋನ್‌ ಪಾತ್ರದಲ್ಲಿಯ ಮೊನಚು, ಒರಟುತನ ತುಂಬುತ್ತದೆ" ಎಂದು ಹೇಳುತ್ತದೆ. ಹ್ಯಾರಿ ಅವನ ಹೆಚ್ಚಿನ ಜಾದೂ ಕೌಶ್ಯಲ್ಯಗಳನ್ನು ತೋರಿಸಬಹುದು ... ಆದರೆ ಹರ್ಮಿಯೊನ್‌...ಡ್ರಾಕೊ ಮ್ಯಾಲ್ಫೊಯ್‌ನ ಮೂಗಿಗೆ ಮಂತ್ರವಿದ್ಯೆ ಇಲ್ಲದೆ ಮುಷ್ಟಿ ಹೊಡೆತವನ್ನು ನೀಡುತ್ತಾಳೆ. ಹ್ಯಾರಿಗಿಂತ ಹೆಚ್ಚಿನ ಚಪ್ಪಾಳೆಯನ್ನು, ಪ್ರಂಶಸೆಯನ್ನು ಹರ್ಮಿಯೋನ್‌ ಈ ಸಂದರ್ಭದಲ್ಲಿ ಗಳಿಸುತ್ತಾಳೆ."[೨೩] ಏಪ್ರಿಲ್‌ 2009ರಂತೆ ಪ್ರಿಸನರ್ ಅಫ್ ಅಜ್ಕಾಬನ್ ಅತಿ-ಕಡಿಮೆ ಸಂಪಾದಿಸಿದ ಹ್ಯಾರಿ ಪಾಟರ್ ಸಿನೆಮಾ ಆಗಿದೆ. ಏಪ್ರಿಲ್‌ 2009ರವರೆಗೆ ವ್ಯಾಟ್ಸನ್‌ಳ ಅಭಿನಯ ಅವಳಿಗೆ ಎರಡು ಒಟ್ಟೊ ಪ್ರಶಸ್ತಿಗಳು ಮತ್ತು ಟೋಟಲ್ ಫಿಲ್ಮಂ ನಿಂದ ಮಕ್ಕಳ ಅಭಿನಯದ ವರ್ಷದ ಪ್ರಶಸ್ತಿಯನ್ನು ಗಳಿಸಿಕೊಟ್ಟಿದೆ.[೨೪][೨೫][೨೬] ಹ್ಯಾರಿ ಪಾಟರ್ ಆಂಡ್ ಗಾಬ್ಲೆಟ್‌ ಅಫ್ ಫೈರ್ (2005), ಜೊತೆ ವ್ಯಾಟ್ಸನ್ ಮತ್ತು ಹ್ಯಾರಿಪಾಟರ್ ಸಿನಿಮಾ ಸರಣಿ ಎರಡೂ ಹೊಸ ಮೈಲಿಗಲ್ಲನ್ನು ತಲುಪಿತು. ಚಲನಚಿತ್ರವು ಒಂದು ಹ್ಯಾರಿ ಪಾಟರ್ ಆರಂಭದ ವಾರಾಂತ್ಯ, USನಲ್ಲಿ ಮೇ-ಅಲ್ಲದ ಒಂದು ಆರಂಭದ ವಾರಾಂತ್ಯ, ಮತ್ತು UKಯಲ್ಲಿ ಒಂದು ಆರಂಭದ ವಾರಾಂತ್ಯ ದಾಖಲೆಗಳನ್ನು ಸ್ಥಾಪಿಸಿತು. ವ್ಯಾಟ್ಸನ್ ಮತ್ತು ಅವಳ ಹದಿಹರೆಯದ ಸಹ-ತಾರೆಗಳ ಹೆಚ್ಚುತ್ತಿರುವ ಪ್ರಬುದ್ಧತೆಯನ್ನು ವಿಮರ್ಶಕರು ಹೊಗಳಿದರು; ವ್ಯಾಟ್ಸನ್‌ಳ ಅಭಿನಯವನ್ನು ನ್ಯೂ ಯಾರ್ಕ್ ಟೈಮ್ಸ್ "ಮನಕರಗಿಸುವ ಶ್ರದ್ಧೆ" ಎಂದು ಕರೆಯಿತ್ತು.[೨೭] ಈ ಸಿನೆಮಾದಲ್ಲಿ ಹೆಚ್ಚಿನ ವಿಡಂಬನೆಯು ಮೂರು ಮುಖ್ಯ ಪಾತ್ರಗಳು ಪ್ರಬುದ್ಧರಾಗುತ್ತಿದ್ದಂತೆ ಅವರ ಜೊತೆಯಲ್ಲೇ ಬೆಳೆಯುವ ಒತ್ತಡದಲ್ಲಿ ಕಂಡು ಬರುತ್ತದೆ ಎಂದು ವ್ಯಾಟ್ಸನ್‌ ಹೇಳುತ್ತಾಳೆ. ಅವಳು ಹೀಗೆ ಹೇಳುತ್ತಾಳೆ, "ನಾನು ಎಲ್ಲಾ ವಾದವನ್ನು ಇಷ್ಟಪಟ್ಟೆ.... ಅವರು ವಾದ ಮಾಡುವುದು ಮತ್ತು ತೊಂದರೆ ಅನುಭವಿಸುವುದು ಹೆಚ್ಚು ವಾಸ್ತವಿಕವಾದುದು ಎಂದು ನಾನು ಭಾವಿಸುತ್ತೇನೆ."[೨೮] ಗಾಬ್ಲೆಟ್‌ ಅಫ್ ಫೈರ್ ಮೂರು ಪ್ರಶಸ್ತಿಗಳಿಗೆ ನಾಮಕರಣಗೊಂಡಿತು. ಈ ಸಿನೆಮಾಕ್ಕಾಗಿ ವ್ಯಾಟ್ಸನ್ ಒಟ್ಟೊ ಪ್ರಶಸ್ತಿಯಲ್ಲಿ ಒಂದು ಕಂಚಿನ ಪದಕವನ್ನು ಗಳಿಸಿದಳು.[೨೯][೩೦][೩೧] ಆ ವರ್ಷದ ಕೊನೆಯಲ್ಲಿ, ಟೀನ್ ವೇಗ್‌ ರಕ್ಷಾಪುಟದಲ್ಲಿ ಕಾಣಿಸಿಕೊಂಡ ಅತಿ ಚಿಕ್ಕವಯಸ್ಸಿನ ವ್ಯಕ್ತಿ ವ್ಯಾಟ್ಸನ್ ಆದಳು.[೩೨] ಅಲ್ಲದೆ ಆಗಸ್ಟ್ 2009ರ ಆವೃತ್ತಿಯಲ್ಲಿಯೂ ಅವಳು ಕಾಣಿಸಿಕೊಂಡಳು.[೩೩] 2006ರಲ್ಲಿ, ದಿ ಕ್ವೀನ್ಸ್‌ ಹ್ಯಾಂಡ್‌ಬ್ಯಾಗ್‌ ನಲ್ಲಿ ವ್ಯಾಟ್ಸನ್ ಹರ್ಮಿಯೋನ್‌ ಪಾತ್ರವನ್ನು ಅಭಿನಯಿಸಿದಳು, ಇದು ರಾಣಿ ಎಲಿಜೆತ್ IIರ 80ನೇ ಹುಟ್ಟುಹಬ್ಬದ ಆಚರಣೆಗಾಗಿ ನಿರ್ಮಾಣ ಮಾಡಿದ ಹ್ಯಾರಿ ಪಾಟರ್‌ ನ ಒಂದು ವಿಶೇಷ ಮಿನಿ-ಕಂತು ಇದಾಗಿದೆ.[೩೪]

 
ವ್ಯಾಟ್ಸನ್ ಅಭಿಮಾನಿಗಳಿಗೆ ಗ್ರೌಮ್ಯಾನ್‌ ಚೈನೀಸ್ ಥಿಯೇಟರ್ ಹೊರಗೆ ಆಟೋಗ್ರಾಫ್‌ಗೆ ಸಹಿಹಾಕುತ್ತಿರುವುದು,2007

ಹ್ಯಾರಿ ಪಾಟರ್ ಸರಣಿಯಲ್ಲಿನ ಐದನನೇ ಚಲನಚಿತ್ರ ಹ್ಯಾರಿ ಪಾಟರ್ ಆಂಡ್ ದಿ ಆರ್ಡರ್ ಅಫ್ ದಿ ಫಿನಿಕ್ಸ್‌ 2007ರಲ್ಲಿ ಬಿಡುಗಡೆಯಾಯಿತು. ಈ ಚಲನಚಿತ್ರವು ಒಂದು ದೊಡ್ಡ ಆರ್ಥಿಕ ಯಶಸ್ಸು, ಸಿನಿಮಾವು ಪ್ರಪಂಚದಾದ್ಯಂತ ಆರಂಭದ ವಾರಾಂತ್ಯ $332.7 ಮಿಲಿಯನ್ ಹಣ ಸಂಪಾದಿಸಿದ ಒಂದು ದಾಖಲೆಯನ್ನು ಸ್ಥಾಪಿಸಿತು.[೩೫] ವ್ಯಾಟ್ಸನ್ ಉತ್ತಮ ಮಹಿಳಾ ಅಭಿನಯಕ್ಕಾಗಿ ಪ್ರಾರಂಭಿಕ ನ್ಯಾಷನಲ್ ಮೂವಿ ಅವಾರ್ಡ್ ಜಯಿಸಿದಳು.[೩೬] ನಟಿಯ ಮತ್ತು ಸರಣಿಯ ಪ್ರಸಿದ್ಧಿ ಮುಂದುವರೆದ ಹಾಗೆ, ವ್ಯಾಟ್ಸನ್ ಮತ್ತು ಅವಳ ಜೊತೆಗಾರ ಹ್ಯಾರಿ ಪಾಟರ್ ಸಹ-ತಾರೆಗಳಾದ ಡ್ಯಾನಿಯಲ್ ರಾಡ್ಕ್ಲಿಫ್ಫ್ ಮತ್ತು ರೂಪೆರ್ಟ್ ಗ್ರಿಂಟ್ 9 ಜುಲೈ 2007ರಂದು, ಅವರ ಕೈಗಳ, ಪಾದದ ಮತ್ತು ಮಂತ್ರವಾದಿಯ ದಂಡದ ಮುದ್ರೆ/ಗುರುತುಗಳನ್ನು ಹಾಲಿವುಡ್‌ನಲ್ಲಿನ ಗ್ರೌಮನ್’ಸ್ ಚೈನೀಸ್ ಥಿಯೇಟರ್‌ ಮುಂದೆ ಒತ್ತಿದರು.[೩೭] ಅರ್ಡರ್ ಅಫ್ ದಿ ಫಿನಿಕ್ಸ್‌ ನ ಯಶಸ್ಸಿನ ಹೊರತಾಗಿಯೂ ಭವಿಷ್ಯದ ಹ್ಯಾರಿ ಪಾಟರ್ ಸರಣಿ ಸಿನೆಮಾ ನಿರ್ಮಾಣವು ಗೊಂದಲದಲ್ಲಿ ಸುತ್ತುವರೆಯಿತು. ಎಲ್ಲಾ ಮೂರೂ ಪ್ರಧಾನ ನಟರು ಅಂತಿಮ ಎರಡು ಕಂತುಗಳಿಗಾಗಿ ಅವರ ಪಾತ್ರವನ್ನು ಮುಂದುವರೆಸುವ ಸಲುವಾಗಿ ಸಹಿಹಾಕಲು ಹಿಂದೇಟು ಹಾಕಿದರು.[೩೮] ರಾಡ್‌ಕ್ಲಿಫ್‌ ಅಂತಿಮವಾಗಿ ಮಾರ್ಚ್ 2, 2007ರಂದು ಕೊನೆಯ ಚಲವಚಿತ್ರಗಳಿಗೆ ಸಹಿಹಾಕಿದನು.[೩೮] ಆದರೆ ವ್ಯಾಟ್ಸನ್ ಗಮನರ್ಹವಾಗಿ ಹೆಚ್ಚು ಹಿಂಜರಿಯುತ್ತಿದಳು[೩೯]. ಅವಳು ಹೀಗೆ ವಿವರಣೆ ನೀಡಿದಳು ಪಾತ್ರಕ್ಕೆ ಮುಂದಿನ ನಾಲ್ಕು ವರ್ಷಗಳ ಬದ್ಧತೆಯನ್ನು ಸಿನಿಮಾಗಳು ಪ್ರತಿನಿಧಿಸುವುದರಿಂದ ತಿರ್ಮಾನ ಮಹತ್ವದಾಗಿತ್ತು, ಆದರೆ ಕೊನೆಯಲ್ಲಿ ವ್ಯಾಟ್ಸನ್ ಹೀಗೆ ಒಪ್ಪಿಕೊಳ್ಳುತ್ತಾಳೆ ಅವಳು "ಎಂದಿಗೂ (ಪಾತ್ರ) ಹರ್ಮಿಯೊನ್‌ಳನ್ನು ಹೋಗಲು ಬಿಟ್ಟುಕೊಡುವುದಿಲ್ಲ"[೪೦] ಎಂದು 23 ಮಾರ್ಚ್‌ 2007ರಂದು ಪಾತ್ರಕ್ಕೆ ಸಹಿಹಾಕಿದ್ದಳು.[೪೧] ಕೊನೆಯ ಚಲನಚಿತ್ರಗಳಿಗೆ ಒಪ್ಪಿಕೊಂಡ ಪ್ರತಿಯಾಗಿ ವ್ಯಾಟ್ಸನ್‌ಳ ಸಂಭಾವನೆ ದ್ವಿಗುಣವಾಯಿತು. ಪ್ರತಿ ಸಿನಿಮಾಕ್ಕೆ £2 ಮಿಲಿಯನ್ ಹಣವನ್ನು ಆಕೆ ಪಡೆದಳು.[೪೨] "ಕೊನೆಯಲ್ಲಿ, ಅನುಕೂಲಗಳು ಋಣಪರಿಣಾಮಗಳನ್ನು ಮೀರಿಸಿತು" ಎಂದು ಆಕೆ ಮುಕ್ತಾಯ ಮಾಡಿದರು.[೧೨] ಆರನೆಯ ಸಿನಿಮಾಗೆ ಪ್ರಮುಖ ಚಿತ್ರೀಕರಣ 2007ರ ಅಂತ್ಯದಲ್ಲಿ ಆರಂಭವಾಯಿತು. ಜೊತೆಗೆ ವ್ಯಾಟ್ಸನ್‌ಳ ಪಾತ್ರವನ್ನು 18 ಡಿಸೆಂಬರ್‌ನಿಂದ 17 ಮೇ 2008ವರೆಗೆ ಚಿತ್ರೀಕರಿಸಲಾಯಿತು.[೪೩][೪೪] ಹ್ಯಾರಿ ಪಾರ್ ಆಂಡ್ ದಿ ಹಾಫ್ ಬ್ಲಡ್ ಪ್ರಿನ್ಸ್ 15 ಜುಲೈ 2009ರಂದು ಪ್ರದರ್ಶನಗೊಂಡಿತು.[೪೫] ವಿವಾದ ಉಂಟಾದ ಕಾರಣದಿಂದಾಗಿ ನವೆಂಬರ್ 2008ಕ್ಕೆ ಮುಂದೂಡಲಾಯಿತು.[೪೬] ಪ್ರಧಾನ ಪಾತ್ರಗಳು ಈಗ ಅವರ ಹದಿಹರೆಯದ ಕೊನೆಯಲ್ಲಿದ್ದಾರೆ, ವಿಮರ್ಶಕರು ಉಳಿದ ಸಿನಿಮಾದ ಎಲ್ಲಾ ತಾರ ಪಾತ್ರದ ಮಟ್ಟದಲ್ಲಿಯೇ ಅವುಗಳನ್ನು ವಿಮರ್ಶಿಸಲು ಹೆಚ್ಚುಹೆಚ್ಚು ಆಸಕ್ತರಾಗಿದ್ದರು. ಅದನ್ನು ಲಾಸ್ ಎಂಜಲೀಸ್ ಟೈಮ್ಸ್ "ಯುಕೆಯ ಸಮಕಾಲೀನ ನಟನೆಯ ಒಂದು ಸಂಕ್ಷಿಪ್ತ ನಕ್ಷೆಯಂತೆ ಇದು ಇದೆ" ಎಂದು ವಿವರಿಸಿತು.{2/} "ಇವತ್ತಿನವರೆಗೆ ಹೆಚ್ಚು ಅಕರ್ಷಕವಾಗಿರುವ ಆಭಿನಯ"ವನ್ನು ವ್ಯಾಟ್ಸನ್ ನೀಡಿದ್ದಾಳೆ ಎಂದು ದಿ ವಾಷಿಂಗ್ಟನ್ ಪೋಸ್ಟ್ ತನ್ನ ಭಾವನೆಯನ್ನು ವ್ಯಕ್ತಪಡಿಸಿತು. ಹಾಗೆಯೇ ದಿ ಡೈಲಿ ಟೆಲಿಗ್ರಾಫ್ ಪ್ರಧಾನ ಪಾತ್ರಗಳನ್ನು " ಹೊಸದಾಗಿ ಸ್ವತಂತ್ರವಾಗಿರುವಂತಹ ಮತ್ತು ಶಕ್ತಿಯುತವಾಗಿರುವಂತಹ ಮುಖ್ಯ ಪಾತ್ರಗಳು ಹೊಸ ಸರಣಿಯಲ್ಲಿ ತಮ್ಮಿಂದ ಶಕ್ತವಾದ ಎಲ್ಲವನ್ನೂ ಈ ಹೊಸ ಸರಣಿಗೆ ನೀಡಲು ಉತ್ಸುಕರಾಗಿದ್ದಾರೆ" ಎಂದು ವರ್ಣಿಸಿತು.[೪೭] ಹ್ಯಾರಿ ಪಾಟರ್ ಚಲನಚಿತ್ರದ ಅಂತಿಮ ಕಂತು, ಹ್ಯಾರಿ ಪಾಟರ್ ಆಂಡ್ ದಿ ಡೆತ್ಲಿ ಹ್ಯಾಲ್ಲೊಸ್‌ ಗೆ ವ್ಯಾಟ್ಸನ್‌ಳ ಚಿತ್ರೀಕರಣವು 18 ಫೆಬ್ರವರಿ 2009ರಂದು ಆರಂಭವಾಯಿತು.[೪೮] ಸಿನಿಮಾವನ್ನು ಆರ್ಥಿಕ ಮತ್ತು ಸಾಹಿತ್ಯದ ಕಾರಣಗಳಿಂದ ಎರಡು ಭಾಗವಾಗಿ ವಿಂಗಡಿಸಲಾಗಿದೆ.[೪೯][೫೦] ಅವುಗಳನ್ನು ನವೆಂಬರ್ 2010 ಮತ್ತು ಜುಲೈ 2011ರಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.[೫೧]

ಇತರೆ ಅಭಿನಯದ ಕೆಲಸಗಳು

ಬದಲಾಯಿಸಿ

ವ್ಯಾಟ್ಸನ್‌ಳ ಪ್ರಥಮ ಪಾಟರ್‌ ರೇತರ ಪಾತ್ರವೆಂದರೆ 2007 BBC ಚಲನಚಿತ್ರ ಬ್ಯಾಲ್ಲೆಟ್ ಶೂಸ್ , ನೊಯೆಲ್ ಸ್ಟ್ರಿಟ್‌ಫಿಲ್ಡ್‌ ಬರೆದ ಅದೇ ಶೀರ್ಷಿಕೆಯ ಕಾದಂಬರಿಯ ರೂಪಾಂತರ.[೫೨][೫೩] ಚಲನಚಿತ್ರದ ನಿರ್ದೇಶಕ ಸಾಂಡ್ರಾ ಗೋಲ್ಡ್‌ಬ್ಯಾಚರ್‌ ವ್ಯಾಟ್ಸನ್‌ಳನ್ನು ಪೌಲೈನ್ ಫೊಸ್ಸಿ ಪಾತ್ರದ ಅಭಿನಯಕ್ಕೆ "ಪರಿಪೂರ್ಣ" ಎಂದು ವಿಮರ್ಶಿದ್ದಾರೆ: "ಅವಳು ಕಣ್‌ಕುಕ್ಕುವ ನಾಜೂಕು ಕಾಂತಿಯನ್ನು ಹೊಂದಿದ್ದಾಳೆ. ಅದು ನೀವು ಅವಳನ್ನು ಎವೆಯಿಕ್ಕದೆ ನೋಡಲು ಬಯಸುವ ಹಾಗೆ ಮಾಡುತ್ತದೆ"[೫೪] ಎಂದು ಅವರು ಹೇಳುತ್ತಾರೆ. ಸಾಮಾನ್ಯವಾಗಿ ಉತ್ತಮವಲ್ಲದ ವಿಮರ್ಶೆಯನ್ನು ಹೊಂದಿದ್ದರೂ ಸಹ ಬ್ಯಾಲ್ಲೆಟ್ ಶೂಸ್ UKಯಲ್ಲಿ ಬಾಕ್ಸಿಂಗ್ ಡೇ 2007ರಂದು 5.7 ಮಿಲಿಯನ್‌ ಪ್ರೇಕ್ಷಕರಿಗೆ ಪ್ರಸಾರಮಾಡಲಾಯಿತು.[೫೫][೫೬][೫೭][೫೮][೫೯] ದಿ ಟೇಲ್ ಅಫ್ ಡೆಸ್ಪೆರಿಕ್ಸ್‌ ಮಕ್ಕಳ ಹಾಸ್ಯ ಆನೀಮೇಶನ್‌ ಚಲನಚಿತ್ರದಲ್ಲಿ ಮ್ಯಾತ್ಥೆವ್ ಬ್ರೊಡೇರಿಕ್‌ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಳು. ಈ ಚಿತ್ರದ ಪ್ರಿನ್ಸೆಸ್ ಪೀ ಪಾತ್ರಕ್ಕೆ ವ್ಯಾಟ್ಸನ್ ಧ್ವನಿಯನ್ನು ನೀಡಿದ್ದಾಳೆ.[] ದಿ ಟೇಲ್ ಅಫ್ ಡೆಸ್ಪೆರಿಕ್ಸ್‌ ಡಿಸೆಂಬರ್ 2008ರಲ್ಲಿ ಬಿಡುಗಡೆಯಾಯಿತು ಮತ್ತು ಪ್ರಪಂಚದಾಂತ್ಯ ಒಟ್ಟು $87 ಮಿಲಿಯನ್ ಹಣ ಗಳಿಸಿತು. ಏಪ್ರಿಲ್ 2008ರಲ್ಲಿ ವ್ಯಾಟ್ಸನ್ ನ್ಯಾಪೊಲಿಯನ್ ಆಂಡ್‌ ಬೆಟ್ಸಿ ಶೀರ್ಷಿಕೆಯ ಮುಂಬರುವ ಚಲನಚಿತ್ರದಲ್ಲಿ "ಬೆಟ್ಸಿ" ಬೊನಾಪಾರ್ಟೇ ಪಾತ್ರವನ್ನು ಅಭಿನಯಿಸುತ್ತಾಳೆ ಎಂಬ ವದಂತಿ ವ್ಯಾಪಕವಾಗಿ ಹರಡಿತ್ತು. ಆದರೆ ಅವಳ ಆಧಿಕೃತ ವೆಬ್‌ಸೈಟ್‍ ಯಾವುದೇ ರೀತಿಯ ಒಪ್ಪಂದ ಮಾಡಿಕೊಂಡಿರುವುದನ್ನು ನಿರಾಕರಿಸಿತು ಮತ್ತು ಆ ಚಲನಚಿತ್ರವು ಕಾರ್ಯರೂಪಕ್ಕೆ ಬರುವಲ್ಲಿ ವಿಫಲವಾಯಿತು.[೬೦][೬೧][೬೨] ವ್ಯಾಟ್ಸನ್ ಬೇರೆ ಚಲನಚಿತ್ರಗಳ ಅಥವಾ ದೂರದರ್ಶನದ ಪಾತ್ರಗಳನ್ನು ಮುಂದುವರೆಸುವ ಬದಲು ಆಕೆಯ ಶಿಕ್ಷಣದ ಮೇಲೆ ಗಮನ ಕೇಂದ್ರಿಕರಿಸಲು ನಿರ್ಧರಿಸಿದಳು.[೬೩]

ಫ್ಯಾಷನ್ ಮತ್ತು ಮಾಡೆಲಿಂಗ್

ಬದಲಾಯಿಸಿ

ವ್ಯಾಟ್ಸನ್ ದೊಡ್ಡವಳಾದಂತೆ ಫ್ಯಾಶನ್ ರಂಗದ ಕಡೆಗೆ ಆಸಕ್ತಳಾದಳು. ಅವಳು ಫ್ಯಾಶನ್‌ ರಂಗವನ್ನೂ ಕೂಡ ತಾನು ಶಾಲೆಯಲ್ಲಿ ಕಲಿತ ಕಲೆಗೆ ಸಮಾನವಾದುದು ಎಂದು ಹೇಳುತ್ತಿದ್ದಳು. ಸೆಪ್ಟೆಂಬರ್ 2008ರಲ್ಲಿ ಅವಳು ಒಬ್ಬ ಬ್ಲಾಗ್‌ಗರ್‌ಗೆ "ನಾನು ಕಲೆಯ ಮೇಲೆ ಗಮನವನ್ನು ಹೆಚ್ಚು ಕೇಂದ್ರಿಕರಿಸುತ್ತಿದ್ದೇನೆ ಮತ್ತು ಫ್ಯಾಶನ್‌ ಅದರ ಉನ್ನತ ವಿಸ್ತರಣೆ" ಎಂದು ಹೇಳಿಕೆ ನೀಡುತ್ತಾಳೆ.[೬೪] 2008ರಲ್ಲಿ ಬ್ರಿಟಿಷ್ ವಾರ್ತಾಪತ್ರಿಕೆಯು ಫ್ಯಾಶನ್ ಹೌಸ್ ಚಾನೆಲ್‌ನ ಕೈರಾ ನೈಟ್ಲಿಯ ಬದಲಾಗಿ ವ್ಯಾಟ್ಸ್‌ನ್‌ಳನ್ನು ಉಪಯೋಗಿಸಿಕೊಳ್ಳುತ್ತಿದೆ ಎಂದು ವರದಿ ಮಾಡಿತು. ಆದರೆ ಇದನ್ನು ಎರಡು ಕಡೆಯವರು ಖಚಿತವಾಗಿ ನಿರಾಕರಿಸಿದರು.[೬೫][೬೬] ಜೂನ್ 2009ರಲ್ಲಿ ಈ ವದಂತಿಯ ನಂತರದ ಕೆಲವು ತಿಂಗಳಲ್ಲಿ ವ್ಯಾಟ್ಸನ್ ಬರ್ಬೆರ್ರಿಯ ಹೊಸ ಪ್ರಚಾರ ಜಾಹಿರಾತಿನ ಮುಖ್ಯಕಲಾವಿದೆಯಾಗಿ ಅದರ ಪಾಲುದಾರಳಾಗುವುದಾಗಿ ಖಚಿತ ಪಡಿಸಿದಳು. ಬರ್ಬೆರ್ರಿಯ ಶರತ್ಕಾಲ/ಚಳಿಗಾಲ 2009ರ ಸಂಗ್ರಹಕ್ಕಾಗಿ ಅವಳು ಆರು-ಅಂಕಿ ಶುಲ್ಕವನ್ನು ಪಡೆದಳು ಎಂದು ಅಂದಾಜು ಮಾಡಲಾಗಿದೆ.[೬೭][೬೮][೬೯] ಅವಳು ನಂತರ ಬರ್ಬೆರ್ರಿಯ 2010 ಚಳಿಗಾಲ/ಬೇಸಿಗೆಯ ಪ್ರಚಾರದಲ್ಲಿ ಅವಳ ತಮ್ಮ ಅಲೆಕ್ಸ್, ಸಂಗೀತಗಾರ ಜಾರ್ಜ್ ಕ್ರೈಗ್, ಮ್ಯಾಟ್ಟ್ ಗಿಲ್ಮೌರ್ ಮತ್ತು ಮ್ಯಾಕ್ಸ್ ಹುರ್ಡ್ ಜೊತೆಯಲ್ಲಿ ಕಾಣಿಸಿಕೊಂಡಳು.[೭೦]

ಸೆಪ್ಟೆಂಬರ್ 2009ರಲ್ಲಿ, ವ್ಯಾಟ್ಸನ್ ಪೀಪಲ್ ಟ್ರೀ ಎಂಬ, ಒಂದು ಫೆರ್ ಟ್ರೇಡ್ ಫ್ಯಾಶನ್‌ ಕಂಪೆನಿಯ ಜೊತೆ ತನ್ನ ಪಾಲುಗೊಳ್ಳುವಿಕೆಯನ್ನು ಘೋಷಿಸಿದಳು.[೭೦] ಫೆಬ್ರವರಿ 2010ರ ಕೊನೆಯಲ್ಲಿ ಬಿಡುಗಡೆಯಾಗುವ ಒಂದು ವಸಂತ ಶ್ರೇಣಿಯ/ಸಾಲಿನ ಉಡುಗೆಯನ್ನು ಸೃಷ್ಟಿಸಲು ಆಕೆ ಪೀಪಲ್ ಟ್ರೀಯ ಜೊತೆ ನಿಕಟವಾಗಿ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದಾಳೆ. ದಕ್ಷಿಣ ಪ್ರಾನ್ಸ್ ಮತ್ತು ಲಂಡನ್‌ ನಗರದ ಶೈಲಿಗಳಿಂದ ಪ್ರೇರೇಪಿತವಾದ ಶೈಲಿಗಳು ಶ್ರೇಣಿಯ ವಿನ್ಯಾಸವಾಗಿರುತ್ತದೆ.[೭೧] ನಂತರ ದಿ ಟೈಮ್ಸ್ ಈ ಸಂಗ್ರಹದಲ್ಲಿ ವ್ಯಾಟ್ಸನ್‌ಳ ಪ್ರಗತಿಯ ಬಗ್ಗೆ ಒಂದು ಕಿರು ಲೇಖನವನ್ನು ಬಿಡುಗಡೆ ಮಾಡಿತು. ಆಕೆಯ ಪಾಲ್ಗೊಳ್ಳುವಿಕೆಯು ಇದರಲ್ಲಿ ಅತಿ ಸಣ್ಣದು ಎಂದು ವ್ಯಾಟ್ಸನ್ ಒಪ್ಪಿಕೊಳ್ಳುತ್ತಾಳೆ. "ನನ್ನ ಹಾಗಿನ ಯುವ ಜನರು ಶೀಘ್ರ ಫ್ಯಾಶನ್‌ನ ಸುತ್ತಮುತ್ತಲಿನ ಮಾನವಹಿತಕಾರಿ/ಲೋಕೋಪಕಾರಿ ವಿಷಯಗಳ ಬಗ್ಗೆ ಹೆಚ್ಚು ಹೆಚ್ಚಾಗಿ ಜಾಗೃತರಾಗುತ್ತಿದ್ದೇವೆ ಎಂದು ಅನಿಸುತ್ತದೆ ಮತ್ತು ಒಳ್ಳೆಯ ಆಯ್ಕೆಯನ್ನು ಮಾಡಿಕೊಳ್ಳಲು ಬಯಸುತ್ತೇವೆ. ಆದರೆ ಇಲ್ಲಿ ಹೆಚ್ಚಿನ ಆಯ್ಕೆಗಳಿಲ್ಲ." ಎಂದು ಸಹ ವ್ಯಾಟ್ಸನ್ ಹೇಳಿದ್ದಾರೆ.[೭೨]

ವೈಯಕ್ತಿಕ ಜೀವನ

ಬದಲಾಯಿಸಿ
 
ವ್ಯಾಟ್ಸನ್ ಹ್ಯಾರಿ ಪಾಟರ್ ಆಂಡ್ ದಿ ಹಾಲ್ಫ್-ಬ್ಲಡ್ ಪ್ರಿನ್ಸ್‌ನ ಪ್ರಥಮ ಪ್ರದರ್ಶನದಲ್ಲಿ

ವ್ಯಾಟ್ಸನ್‌ಳ ಮೂಲ ತಂದೆತಾಯಿ ವಿಚ್ಚೇದನ ಹೊಂದಿದ್ದು ಇಬ್ಬರೂ ಕೂಡ ಹೊಸ ಸಂಗಾತಿಗಳನ್ನು ಹೊಂದಿದೆ. ಇದರಿಂದ ವ್ಯಾಟ್ಸನ್‌ ಕುಟುಂಬವು ಬೆಳೆದಿದೆ. ಅವಳ ತಂದೆ ಒಬ್ಬ ಮಗ, ಟೊಡಿ, ಮತ್ತು ಸ್ವದ್ರೂಪಿ ಅವಳಿ ಹೆಣ್ಣುಮಕ್ಕಳು, ನೀನಾ ಮತ್ತು ಲ್ಯೂಸಿಯನ್ನು ಹೊಂದಿದ್ದಾರೆ.[೭೩] ಅವಳ ತಾಯಿಯ ಸಂಗಾತಿ ಇಬ್ಬರು ಮಗನನ್ನು ಹೊಂದಿದ್ದಾರೆ (ವ್ಯಾಟ್ಸನ್‌ಳ ಮಲ-ಸಹೋದರರು). ಅವರು "ಸಾಮಾನ್ಯವಾಗಿ ಅವಳ ಜೊತೆ ವಾಸಿಸುತ್ತಾರೆ".[೭೪] ವ್ಯಾಟ್ಸನ್‌ಳ ನೇರ ಸಹೋದರ ಅಲೆಕ್ಸಾಂಡರ್ ಎರಡು ಹ್ಯಾರಿ ಪಾಟರ್ ಸಿನಿಮಾಗಳಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾನೆ[೭೩] ಮತ್ತು ಅವಳ ಮಲಸಹೋದರಿಯರು BBCಯ ಬ್ಯಾಲೆಟ್ ಶೂಸ್‌ ‍ ರೂಪಾಂತರದಲ್ಲಿ ಯುವ ಪೌಲಿನ್ ಫೊಸ್ಸಿಲ್ ಆಗಿ ನಟಿಸಿದ್ದಾರೆ.[೭೩] ತಾಯಿ ಮತ್ತು ತಮ್ಮನ ಜೊತೆ ಆಕ್ಸ್‌ಫರ್ಡ್‌ಗೆ ಸ್ಥಳಾಂತರವಾದ ನಂತರ ವ್ಯಾಟ್ಸನ್‌ಳು ಜೂನ್ 2003ರವರೆಗೆ ಒಂದು ಸ್ವಾತಂತ್ರ ಪೂರ್ವಭಾವಿಯಾದ ಶಾಲೆ ದಿ ಡ್ರಾಗನ್ ಸ್ಕೂಲ್‌ಗೆ ಹೋಗುತ್ತಿದ್ದಳು. ನಂತರ ಹೆಡಿಂಗ್ಟನ್ ಶಾಲೆಗೆ ಹೋಗಲಾರಂಭಿಸಿದಳು. ಅದು ಸಹ ಆಕ್ಸ್‌ಫರ್ಡ್‌ನಲ್ಲೇ ಇರುವ ಬಾಲಕಿಯರ ಶಾಲೆಯಾಗಿದೆ.[] ಹಾಗೆ ಸಿನಿಮಾದ ಸೆಟ್ಟಿನಲ್ಲಿ ವ್ಯಾಟ್ಸನ್ ಮತ್ತು ಅವಳ ಜೊತೆಗಾರರಿಗೆ ಪ್ರತಿದಿನ ಸುಮಾರು ಐದು ತಾಸುಗಳ ಕಾಲ ಖಾಸಗಿ ಪಾಠ ಮಾಡಲಾಗುತ್ತಿತ್ತು. ಚಲನಚಿತ್ರದ ಕಡೆಗೆ ಗಮನ ಹರಿಸುವ ಜೊತೆಗೆ ಅವಳು ಉನ್ನತ ಶೈಕ್ಷಣಿಕ ಮಟ್ಟವನ್ನು ಕಾಯ್ದಿರಿಸಿಕೊಂಡಳು.[೭೫] ಜೂನ್ 2006ರಲ್ಲಿ ವ್ಯಾಟ್ಸನ್‌ 10 ವಿಷಯಗಳಲ್ಲಿ GCSE ಪರೀಕ್ಷೆಗಳನ್ನು ತೆಗೆದುಕೊಂಡಳು. ಎಂಟರಲ್ಲಿ A* ಮತ್ತು ಎರಡು ವಿಷಯಗಳಲ್ಲಿ A ದರ್ಜೆಯನ್ನು ಪಡೆದಳು.[೭೬] ಅವಳ ನೇರ-A ಪರೀಕ್ಷೆಯ ಫಲಿತಾಂಶದ ಕಾರಣದಿಂದ ಹ್ಯಾರಿ ಪಾಟರ್‌ ಸೆಟ್ಟಿನಲ್ಲಿ ಆಕೆ ಸ್ನೇಹಮಯ ಕುಚೋದ್ಯಕ್ಕೆ ಗುರಿಯಾದಳು.[೩೨] 2008ರಲ್ಲಿ A ಶ್ರೇಣಿಯ ಪರೀಕ್ಷೆಗಳಲ್ಲಿನ ಇಂಗ್ಲೀಷ್ ಸಾಹಿತ್ಯ, ಭೂಗೋಳ ಮತ್ತು ಕಲೆಗಳಲ್ಲಿ ಅವಳು A ಶ್ರೇಣಿಗಳನ್ನು ಪಡೆದಳು [೭೭] ಮತ್ತು ಅವಳ ಕಲಾ ಇತಿಹಾಸ 2007ರಲ್ಲಿ AS (advanced subsidiary)ದರ್ಜೆಯನ್ನು ಪಡೆದಳು.[೭೮] ನಂತರ ಶಾಲೆ ತೊರೆದು, ವ್ಯಾಟ್ಸನ್ ಫೆಬ್ರವರಿ 2009ರಲ್ಲಿ ಶುರುವಾಗುವ ಹ್ಯಾರಿ ಪಾಟರ್ ಆಂಡ್ ದಿ ಡೆಥ್ಲಿ ಹ್ಯಾಲ್ಲೊಸ್‌ ಸಿನಿಮಾಕ್ಕಾಗಿ ಒಂದು ವರ್ಷ ಅಂತರ[೭೭] ವನ್ನು ತೆಗೆದುಕೊಂಡಳು[೫೦]. ಆದರೆ ತಾನು "ಖಂಡಿತವಾಗಿ ವಿಶ್ವವಿದ್ಯಾನಿಲಯಕ್ಕೆ ಹೋಗಲು ಬಯಸುತ್ತೆನೆ" ಎಂದು ಹೇಳಿದಳು.[೬೩] ಹಲವು ವ್ಯತಿರಿಕ್ತ ವಾರ್ತೆಗಳ ಕಥೆಗಳ ಹೊರತಾಗಿಯೂ, ಕೆಲವು ತುಂಬ ಹೆಸರುವಾಸಿಯಾದ ಮೂಲಗಳು ಅವಳು "ಖಂಡಿತವಾಗಿಯೂ" ಕೆಂಬ್ರಿಡ್ಜ್‌ನ ಟ್ರಿನಿಟಿ ಕಾಲೇಜ್,[೭೯] ಕೋಲಂಬಿಯಾ ವಿಶ್ವವಿದ್ಯಾಲಯ[೮೦][೮೧][೮೨], ಬ್ರೌನ್ ವಿಶ್ವವಿದ್ಯಾಲಯ ಅಥವಾ ಯೆಲ್ ವಿಶ್ವವಿದ್ಯಾಲಯ[೮೩] ಕ್ಕೆ ಹಾಜರಾಗುವಳು ಹೀಗೆ ಹೇಳಿಕೆ ನೀಡಿದ್ದವು. ವ್ಯಾಟ್ಸನ್‌ಗೆ ಸಾರ್ವಜನಿಕವಾಗಿ ಹೇಳಿಕೆ ನೀಡುವ ಮೂಲಕ ಯಾವುದೇ ಒಂದು ಸಂಸ್ಥೆಗೆ ಬದ್ಧಳಾಗುವುದು ಇಷ್ಟವಿರಲಿಲ್ಲ. ತನ್ನ ನಿರ್ಧಾರವನ್ನು ಅವಳ ಅಧಿಕೃತ ವೆಬ್‌ಸೈಟ್‌ನಲ್ಲಿ ಮೊದಲು ಘೊಷಿಸುವುದಾಗಿ ಹೇಳಿದಳು.[೮೪] ಜುಲೈ 2009ರಲ್ಲಿ ಜೊನಾಥನ್ ರೊಸ್ಸ್ ಮತ್ತು ಡೇವಿಡ್ ಲೆಟ್ಟರ್‌ಮ್ಯಾನ್‌ರ ಜೊತೆ ಸಂದರ್ಶನದಲ್ಲಿ ವ್ಯಾಟ್ಸನ್‌ ಸಂಯುಕ್ತ ಸಂಸ್ಥಾನದಲ್ಲಿ ಮಾನವಿಕ ಶಾಸ್ತ್ರಗಳು/ಉದಾರ ಶಾಸ್ತ್ರಗಳು ಓದಲು ಯೋಜಿಸಿರುವುದಾಗಿ ಸ್ಪಷ್ಟಪಡಿಸಿದಳು. ಚಿಕ್ಕವಳಿರುವಾಗಿನಿಂದಲೂ ಸಿನೆಮಾಕ್ಕಾಗಿ ಸಾಕಷ್ಟು ಸಮಯ ಶಿಕ್ಷಣವನ್ನು ಕಳೆದುಕೊಂಡಿದ್ದೆನೆ. ಬ್ರಿಟಿಷ್ ವಿಶ್ವವಿದ್ಯಾಲಯಗಳಿಗಿಂತ ಹೆಚ್ಚು ಅವಳಿಗೆ ಅಮೆರಿಕದ ಉನ್ನತ್ತ ಶಿಕ್ಷಣದ "ವಿಶಾಲವಾದ ಅಧ್ಯಯನ ವಿಷಯ"ವು ಪ್ರಿಯವಾಗುತ್ತದೆ. ಅಲ್ಲಿ ನೀವು ಮೂರು ವರ್ಷಗಳ ಓದಿಗೆ ಕೇವಲ ಒಂದು ವಿಷಯವನ್ನು ಆಯ್ಕೆಮಾಡಿಕೊಳ್ಳಬೇಕು ಆದರೆ ಅಮೇರಿಕಾ ಶಿಕ್ಷಣದಲ್ಲಿ ಆ ರೀತಿಯಿಲ್ಲ" ಎಂದು ಹೇಳಿಕೆ ನೀಡಿದಳು.[೧೩] ಜುಲೈ 2009ರಲ್ಲಿ ಈ ಎರಡನೆಯ ವದಂತಿಯ ನಂತರ [೮೫] ದಿ ಪ್ರೊವಿಡೆನ್ಸ್ ಜರ್ನಲ್ "ವ್ಯಾಟ್ಸನ್ ಪ್ರೋವಿಡೆನ್ಸ್ ರೋಡ್ ಐಲ್ಯಾಂಡ್‌ನಲ್ಲಿ ಸ್ಥಾಪಿತವಾಗಿರುವ ಬ್ರೌನ್ ವಿಶ್ವವಿದ್ಯಾನಿಲಯವನ್ನು ಆಯ್ಕೆ ಮಾಡಿಕೊಂಡಿದ್ದಾಳೆ. ಇದನ್ನು ಆಕೆ ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡಿದ್ದಾಳೆ" ಎಂದು ವರದಿ ಮಾಡಿತು.[೮೬][೮೭] ವ್ಯಾಟ್ಸನ್ ಮುಂದಿನ ಶಿಕ್ಷಣಕ್ಕಾಗಿ ಆಯ್ದುಕೊಂಡ ವಿಶ್ವವಿದ್ಯಾನಿಲಯದ ಕುರಿತಾಗಿ ಹೇಳಿಕೆ ನೀಡುವುದನ್ನು ಪ್ರಯತ್ನಪೂರ್ವಕವಾಗಿ ತಪ್ಪಿಸುಕೊಂಡದ್ದನ್ನು ಸಮರ್ಥಿಸಿಕೊಂಡಳು. ಆದರೆ ಹ್ಯಾರಿ ಪಾಟರ್ ಆಂಡ್ ದಿ ಹಾಫ್‌-ಬ್ಲಡ್ ಪ್ರಿನ್ಸ್‌ ಬಿಡುಗಡೆ ಪ್ರಚಾರದ ಸಂದರ್ಶನದ ಸಮಯದಲ್ಲಿ ಡ್ಯಾನಿಯಲ್ ರಾಡ್‌ಕ್ಲಿಫ್‌ ಮತ್ತು ನಿರ್ಮಾಪಕ ಡೆವಿಡ್ ಹೆಮ್ಯಾನ್‌ ಮೂಲಕ ಆಕಸ್ಮಿಕವಾಗಿ ಈ ವಿಷಯ ಹೊರಬಿದ್ದಿತ್ತು[೮೮][೮೯]. ಅಂತಿಮವಾಗಿ 2009ರ ಸೆಪ್ಟೆಂಬರ್‌ನಲ್ಲಿ ವಿಶ್ವವಿದ್ಯಾನಿಲಯದ ಶೈಕ್ಷಣಿಕ ವರ್ಷ ಆರಂಭವಾದ ನಂತರ ಈ ವಿಷಯವು ಸ್ಪಷ್ಟವಾಗಿತ್ತು[೯೦]. ನಂತರ ಅವಳು " ನಾನು ಸಾಮಾನ್ಯವಾಗಿರಲು ಬಯಸುತ್ತೆನೆ..... ಉಳಿದವರು ಹೇಗೆ ಕಲಿಯುತ್ತಾರೋ ಹಾಗೆಯೇ ನಾನು ಕ್ರಮವಾಗಿ ಕಲಿಯಲು ಬಯಸಿದೆ. ಎಲ್ಲಿಯವರೆಗೆ ನಾನು ಅಲ್ಲಿ ಸೇರುವುದಿಲ್ಲವೋ ಅಲ್ಲದೆ ... ಎಲ್ಲಾ ಕಡೆ ಹ್ಯಾರಿ ಪಾಟರ್ ಭಿತ್ತಿಚಿತ್ರಗಳು ಕಂಡುಬರುವುದಿಲ್ಲವೋ ಅಲ್ಲಿಯವರೆಗೆ ನಾನು ಚೆನ್ನಾಗಿರುತ್ತೇನೆ."[೮೭] ವ್ಯಾಟ್ಸನ್‌ಳು ಹ್ಯಾರಿ ಪಾಟರ್ ಸರಣಿಯಲ್ಲಿಯ ತನ್ನ ಕೆಲಸಕ್ಕಾಗಿ £10 ಮಿಲಿಯನ್‌ಗಿಂತ ಹೆಚ್ಚು ಸಂಪಾದಿಸಿದ್ದಾಸಿದ್ದಳು.[] ಮತ್ತು ಅವಳು ಹಣಕ್ಕಾಗಿ ಯಾವತ್ತೂ ದುಡಿಯಬೇಕಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಳು. ಮಾರ್ಚ್ 2009ರ ಫೊರ್ಬ್ಸ್ ನಿಯತಕಾಲಿಕದ "ಹೆಚ್ಚು ಬೆಲೆಬಾಳುವ ಯುವ ತಾರೆ"ಯರ ಪಟ್ಟಿಯಲ್ಲಿ 6ನೇ ಸ್ಥಾನವನ್ನು ಗಳಿಸಿದ್ದಳು. 2009ರಲ್ಲಿ ವ್ಯಾಟ್ಸನ್‌ £೧೯ ಮಿಲಿಯನ್ ಗಳಿಸಿದ್ದಾಳೆ ಎಂದು ಅಂದಾಜು ಮಾಡಲಾಗಿದೆ. ಅಲ್ಲದೆ ಇವಳನ್ನು ಫೆಬ್ರುವರಿ 2010ರಲ್ಲಿ ಹಾಲಿವುಡ್‌ನ ಅತಿ ಹೆಚ್ಚು ಸಂಭಾವನೆ ಪಡೆಯುವ ಮಹಿಳಾ ತಾರೆ ಎಂದು ಹೆಸರಿಸಲಾಯಿತು.[೯೧] ಅದೇನೆ ಇದ್ದರೂಅವಳು ಶಾಲೆಯನ್ನು ತೊರೆದು ಪೂರ್ಣಾವಧಿಯ ನಟಿಯಾಗುವುದನ್ನು ನಿರಾಕರಿಸಿದಳು. "ನಾನು ಇದನ್ನು ಏಕೆ ಇಷ್ಟಪಡುವುದಿಲ್ಲ ಎಂಬುದನ್ನು ಜನರು ಆರ್ಥ ಮಾಡಿಕೊಳ್ಳುವುದಿಲ್ಲ..... ಆದರೆ ಶಾಲೆ ನನ್ನನ್ನು ನನ್ನ ಸ್ನೇಹಿತರ ಜೊತೆ ಸಂಪರ್ಕದಲ್ಲಿಡುತ್ತದೆ. ಅದು ನನ್ನನ್ನು ವಾಸ್ತವದ ಜೊತೆ ಸಂಪರ್ಕದಲ್ಲಿರಿಸುತ್ತದೆ." ಎಂದು ಹೇಳುತ್ತಾಳೆ[೧೨] ಅವಳು ಬಾಲನಟಿಯಾಗಿ ಕೆಲಸ ಮಾಡುವ ಬಗ್ಗೆ ಸಕಾರಾತ್ಮಕವಾಗಿದ್ದಳು. ಅವಳ ಅನುಭವವನ್ನು ಒಂದು ಸಕಾರಾತ್ಮಕ/ಪ್ರಶಂಸನೀಯವಾಗಿ ಮಾಡಲು ಅವಳ ಹೆತ್ತವರು ಮತ್ತು ಸಹೋದ್ಯೋಗಿಗಳು ಸಹಾಯಮಾಡಿದ್ದಾರೆ ಎಂದು ಹೇಳುತ್ತಾಳೆ.[೩೨][೭೪][೯೨] ವ್ಯಾಟ್ಸನ್ ಅವಳ ಜೊತೆಗಾರ ಹ್ಯಾರಿ ಪಾಟರ್ ತಾರೆಗಳಾದ ಡ್ಯಾನಿಯಲ್‌ ರಾಡ್‌ಕ್ಲಿಫ್‌ ಮತ್ತು ರುಪರ್ಟ್‌ ಗ್ರಿಂಟ್ ಜೊತೆ ನಿಕಟವಾದ ಸ್ನೇಹವನ್ನು ಆನಂದಪಡುತ್ತಾಳೆ. ನನ್ನ ಸಿನಿಮಾದ ಕೆಲಸಕ್ಕೆ ಅವರು ಒಂದು "ವಿಶಿಷ್ಟ ಬೆಂಬಲ ವ್ಯವಸ್ಥೆ" ಎಂದು ಅವರನ್ನು ವರ್ಣಿಸುತ್ತಾಳೆ. ಅವರ ಜೊತೆ ಸಿನಿಮಾ ಸರಣಿಗಾಗಿ ಹತ್ತು ವರ್ಷಗಳ ಕೆಲಸ ಮಾಡಿದ ನಂತರ "ಅವರು ನಿಜವಾಗಲೂ ನನ್ನ ಒಡಹುಟ್ಟಿದವರ ಹಾಗೆ" ಎಂದು ಹೇಳುತ್ತಾಳೆ.[೧೩] ವ್ಯಾಟ್ಸನ್‌ಳು ನೃತ್ಯ, ಹಾಡುಗಾರಿಕೆ, ಹಾಕಿ, ಟೆನಿಸ್, ಕಲೆ[] ಮತ್ತು ಪ್ಲೈ ಫಿಶಿಂಗ್ ಅನ್ನು ಇಷ್ಟಪಡುವುದಾಗಿ ಹೇಳುತ್ತಾಳೆ[೯೩]. ಅವಳು ಯಾವಾಗಲೂ WTTಗೆ (Wild Trout Trust) ಸಹಾಯ ಧನವನ್ನು ನೀಡುತ್ತಾಳೆ.[೯೪][೯೫][೯೬] ತನ್ನನ್ನು ವ್ಯಾಟ್ಸನ್‌ "ಸ್ವಲ್ಪ ಮಟ್ಟಿಗಿನ ಸ್ತ್ರೀವಾದಿ" [೩೨] ಎಂದು ವರ್ಣಿಸಿಕೊಳ್ಳುತ್ತಾಳೆ. ವ್ಯಾಟ್ಸನ್‌ ತನ್ನ ಜೊತೆಗಾರ ನಟರಾದ ಜಾನಿ ಡೆಪ್ಪ್ ಮತ್ತು ಜೂಲಿಯಾ ರಾಬರ್ಟ್ಸ್ರನ್ನು ಮೆಚ್ಚುತ್ತಾಳೆ.[೯೭]

ಚಲನಚಿತ್ರಗಳ ಪಟ್ಟಿ

ಬದಲಾಯಿಸಿ
Year Film Role Notes
2001 Harry Potter and the Philosopher's Stone ಹರ್ಮೋಯಿನಿ ಗ್ರೇಂಜರ್ US ಮತ್ತು ಭಾರತದಲ್ಲಿ ಹ್ಯಾರಿ ಪಾಟರ್ ಆಂಡ್‌ ದಿ ಸೊರ್ಕೆರೆರ್ ಸ್ಟೋನ್ ಎಂದು ಬಿಡುಗಡೆಯಾಯಿತು

ಯುವ ನಟಿಯಿಂದ ಉತ್ತಮ ಅಭಿನಯ ಸ್ಯಾಟುರ್ನ್ ಆವಾರ್ಡ್‌ಗೆ ನಾಮಕಾರಣ ಮಾಡಲಾಯಿತು ಎಪೈರ್ ಆವಾರ್ಡ್ಸ್‌‌ನಲ್ಲಿ ಉತ್ತಮ ಪ್ರಥಮ ಪ್ರವೇಶ/ಪ್ರಥಮ ಪರಿಚಯಕ್ಕೆ ನಾಮಕರಣ ಮಾಡಲಾಯಿತು ಉತ್ತಮ ಯುವ ಅಭಿನಯ PFCS ಪ್ರಶಸ್ತಿಗೆ ನಾಮಕರಣ ಮಾಡಲಾಯಿತು ಒಂದು ಸಿನಿಮಾದಲ್ಲಿ ಉತ್ತಮ ಪ್ರದರ್ಶನ ಜಯ ಗಳಿಸಿದಳು – ಪ್ರಧಾನ ಯುವ ನಟಿ ಯುವ ಕಲಾವಿದೆ ಪ್ರಶಸ್ತಿ

2002 ಹ್ಯಾರಿ ಪಾಟರ್ ಅಂಡ್ ದಿ ಛೆಂಬರ್ ಅಫ್ ಸೀಕ್ರೆಟ್ಸ್ ಉತ್ತಮ ಯುವ ಅಭಿನಯ PFCS ಪ್ರಶಸ್ತಿಗೆ ನಾಮಕರಣ ಮಾಡಲಾಯಿತು
2004 ಹ್ಯಾರಿ ಪಾಟರ್ ಅಂಡ್ ದಿ ಪ್ರಿಸನರ್ ಆಫ್ ಅಜ್ಕಾಬಾನ್ ಉತ್ತಮ ಯುವ ನಟಿ ವಿಮರ್ಶಕರ ಆಯ್ಕೆ ಪ್ರಶಸ್ತಿಗೆ ನಾಮಕರಣ ಮಾಡಲಾಯಿತು
2005 ಹ್ಯಾರಿ ಪಾಟರ್ ಅಂಡ್ ದಿ ಗೋಬ್ಲೆಟ್ ಆಫ್ ಫೈರ್ ಉತ್ತಮ ಯುವ ನಟಿ ವಿಮರ್ಶಕರ ಆಯ್ಕೆ ಪ್ರಶಸ್ತಿಗೆ ನಾಮಕರಣ ಮಾಡಲಾಯಿ

ಉತ್ತಮ ಪರದೆ-ಮೇಲೆ ನಟಿ MTV ಸಿನಿಮಾ ಪ್ರಶಸ್ತಿಗೆ ನಾಮಕರಣ ಮಾಡಲಾಯಿತು

2007 ಹ್ಯಾರಿ ಪಾಟರ್ ಅಂಡ್ ದಿ ಆರ್ಡರ್ ಆಫ್ ದಿ ಫೀನಿಕ್ಸ್ ಎಪೈರ್ ಆವಾರ್ಡ್ಸ್‌‌ನಲ್ಲಿ ಉತ್ತಮ ಉತ್ತಮ ನಟಿಗೆ ನಾಮಕರಣ ಮಾಡಲಾಯಿತು

ಮಹಿಳೆಯಿಂದ ಉತ್ತಮ ಅಭಿನಯ ನ್ಯಾಷನಲ್ ಮೂವಿ ಆವಾರ್ಡ್‌ ಜಯ ಸಿದಳು

' ಬ್ಯಾಲೆಟ್ ಶೂಸ್/0} ಪೌಲೈನ್ ಫೊಸ್ಸಿಲ್ Television film shown on BBC One
2009 ದಿ ಟೆಲ್ ಅಫ್ ಡೆಸ್ಪೆರೆಯಕ್ಸ್ ಪ್ರಿನ್ಸೆಸ್ ಪೀ Voice part
ಹ್ಯಾರಿ ಪಾಟರ್ ಅಂಡ್ ದ ಹಾಫ್-ಬ್ಲಡ್ ಪ್ರಿನ್ಸ್ ಹರ್ಮೋಯಿನಿ ಗ್ರೇಂಜರ್ 15 July 2009 (UK, US, AUS)

ಸ್ಕ್ರಿಮ್ ಪ್ರಶಸ್ತಿಯ ಉತ್ತಮ ನಟಿಗೆ ನಾಮಕರಣ

2010 Harry Potter and the Deathly Hallows: Part 1

(ಚಿತ್ರೀಕರಣ)

2011 Harry Potter and the Deathly Hallows: Part 2

ನಿರ್ಮಾಣದ-ಮುಂಚಿನ ಹಂತ

ಪ್ರಶಸ್ತಿಗಳು

ಬದಲಾಯಿಸಿ
ಎಂ ಟಿ ವಿ ಮೂವೀ ಪ್ರಶಸ್ತಿಗಳು
ವರ್ಷ ಸಂಸ್ಥೆ ಪ್ರಶಸ್ತಿ ಚಲನಚಿತ್ರ ಫಲಿತಾಂಶ
1987 ಯುವ ಕಲಾವಿದ ಪ್ರಶಸ್ತಿಗಳು ಒಂದು ಸಿನಿಮಾದಲ್ಲಿ ಉತ್ತಮ ಪ್ರದರ್ಶನ  – ಪ್ರಧಾನ ಯುವ ನಟಿ ಹ್ಯಾರಿ ಪಾಟರ್ ಆಂಡ್ ದಿ ಫಿಲೊಸೊಫೆರ್ ಸ್ಟೋನ್ ಗೆಲುವು[೧೮]
ವಿಜ್ಞಾನ ಕಾದಂಬರಿ, ಕಲ್ಪನಾತ್ಮಕ ಮತ್ತು ಭಯಹುಟ್ಟಿಸುವ ಸಿನಿಮಾಗಳ ಆಕಾಡೆಮಿ ಸಟುರ್ನ್ ಅವಾರ್ಡ್ಸ್ ನಾಮನಿರ್ದೇಶನ[೯೮]
ಎಂಪೈರ್. ಎಂಪೈರ್ ಪ್ರಶಸ್ತಿ ನಾಮನಿರ್ದೇಶನ[೯೯]
ಅಮೆರಿಕನ್ ಮೂವಿಗೊಯರ್ ಆವಾರ್ಡ್ಸ್ ಉತ್ತಮ ಪೋಷಕ ನಟಿ ನಾಮನಿರ್ದೇಶನ[೧೦೦]
ಯುವ ಕಲಾವಿದ ಪ್ರಶಸ್ತಿಗಳು ಚಲನಚಿತ್ರದಲ್ಲಿ ಉತ್ತಮ ಮೇಳ/ನಟರತಂಡ ನಾಮನಿರ್ದೇಶನ[೧೮]
2003 ಒಟ್ಟೊ ಪ್ರಶಸ್ತಿಗಳು ಉತ್ತಮ ಮಹಿಳಾ ಸಿನಿಮಾ ನಟಿ (ಬೆಳ್ಳಿ) ಹ್ಯಾರಿ ಪಾಟರ್ ಅಂಡ್ ದಿ ಛೆಂಬರ್ ಅಫ್ ಸೀಕ್ರೆಟ್ಸ್ ಗೆಲುವು[೨೧]
1986 ಒಟ್ಟೊ ಪ್ರಶಸ್ತಿ ಉತ್ತಮ ಮಹಿಳಾ ಸಿನಿಮಾ ನಟಿ (ಬೆಳ್ಳಿ) ಹ್ಯಾರಿ ಪಾಟರ್ ಆಂಡ್ ದಿ ಪ್ರಿಸನರ್ ಅಫ್ ಅಜ್ಕಾಬಾನ್ ಗೆಲುವು[೨೪]
ಪೂರ್ಣ ಚಲನಚಿತ್ರ. ವರ್ಷದ ಬಾಲ ನಟನೆ ಪ್ರಶಸ್ತಿ ಗೆಲುವು[೨೬]
ಬ್ರಾಡ್‌ಕ್ಯಾಸ್ಟ್ ಫಿಲ್ಮಂ ಕ್ರಿಟಿಕ್ಸ್ ಅಸೋಸಿಯೆಷನ್/0} ಉತ್ತಮ ಯುವ ನಟಿ ನಾಮನಿರ್ದೇಶನ[೧೦೧]
2005 ಒಟ್ಟೊ ಪ್ರಶಸ್ತಿಗಳು ಉತ್ತಮ ಮಹಿಳಾ ಸಿನಿಮಾ ನಟಿ (ಚಿನ್ನ) ಗೆಲುವು[೨೫]
ಬ್ರಾಡ್‌ಕ್ಯಾಸ್ಟ್ ಫಿಲ್ಮಂ ಕ್ರಿಟಿಕ್ಸ್ ಅಸೋಸಿಯೆಷನ್ ಉತ್ತಮ ಯುವ ನಟಿ ಹ್ಯಾರಿ ಪಾಟರ್ ಆಂಡ್ ದಿ ಗೊಬ್ಲೆಟ್ ಅಫ್ ಫೈರ್ ನಾಮನಿರ್ದೇಶನ[೩೦]
2006 ಒಟ್ಟೊ ಪ್ರಶಸ್ತಿಗಳು ಉತ್ತಮ ಮಹಿಳಾ ಸಿನಿಮಾ ತಾರೆ(ಕಂಚು) ಗೆಲುವು[೨೯]
ಉತ್ತಮ ಪರದೆ-ಮೇಲೆ ತಂಡ ನಾಮನಿರ್ದೇಶನ[೩೧]
2007 ITV ನ್ಯಾಶನಲ್ ಫಿಲ್ಮಂ ಆವಾರ್ಡ್ಸ್ ಉತ್ತಮ ಮಹಿಳಾ ಪ್ರದರ್ಶನ/ಅಭಿನಯ ಹ್ಯಾರಿ ಪಾಟರ್ ಆಂಡ್ ದಿ ಫೊನಿಕ್ಸ್ ಗೆಲುವು[೩೬]
UK ನಿಕ್‌ಲೊಡೇನ್ ಮಕ್ಕಳ ಆಯ್ಕೆ ಪ್ರಶಸ್ತಿಗಳು ಉತ್ತಮ ಸಿನಿಮಾ ನಟಿ ಗೆಲುವು[೧೦೨]
1987 UK ಸೋನಿ ಎರಿಕ್ಸನ್ ಎಂಪೈರ್ ಆವಾರ್ಡ್ಸ್ ಉತ್ತಮ ನಟಿ ನಾಮನಿರ್ದೇಶನ[೧೦೩]
ಕಾನ್ಸ್ಟೆಲ್ಲೆಶನ್ ಪ್ರಶಸ್ತಿ ಉತ್ತಮ ಮಹಿಳಾ ಪ್ರದರ್ಶನ/ಅಭಿನಯ ಗೆಲುವು[೧೦೪]
ಒಟ್ಟೊ ಪ್ರಶಸ್ತಿಗಳು ಉತ್ತಮ ಮಹಿಳಾ ಸಿನಿಮಾ ನಟಿ (ಚಿನ್ನ) ಗೆಲುವು[೧೦೫]
SyFy ಜೆನ್ರ್ ಪ್ರಶಸ್ತಿಗಳು ಉತ್ತಮ ನಟಿ ಗೆಲುವು[೧೦೬]
ಗ್ಲಾಮರ್ ಆವಾರ್ಡ್ಸ್ ಉತ್ತಮ UK TV ನಟಿ ಬ್ಯಾಲೆಟ್‌ ಶೂಸ್ ನಾಮನಿರ್ದೇಶನ[೧೦೭]

ಇದನ್ನೂ ನೋಡಿ

ಬದಲಾಯಿಸಿ

ಜೆನ್ನಿಫರ್ ಲಾರೆನ್ಸ್

ಆಕರಗಳು

ಬದಲಾಯಿಸಿ
  1. ಉಲ್ಲೇಖ ದೋಷ: Invalid <ref> tag; no text was provided for refs named letterman
  2. "Emma Watson". ದ ನ್ಯೂ ಯಾರ್ಕ್ ಟೈಮ್ಸ್. Retrieved 12 January 2008. {{cite news}}: Italic or bold markup not allowed in: |publisher= (help)
  3. "Daniel Radcliffe, Rupert Grint and Emma Watson to Reprise Roles in the Final Two Installments of Warner Bros. Pictures' Harry Potter Film Franchise" (Press release). Warner Bros. 23 March 2007. Archived from the original on 5 ಆಗಸ್ಟ್ 2012. Retrieved 23 March 2007.
  4. ೪.೦ ೪.೧ Stenzhorn, Stefan (27 July 2007). "Potter star Watson "rich enough to retire"". RTÉ.ie Entertainment. Archived from the original on 15 ಜನವರಿ 2010. Retrieved 27 July 2007.
  5. ೫.೦ ೫.೧ Watson, Emma. "Emma Watson official website news". Archived from the original on 2 ಆಗಸ್ಟ್ 2007. Retrieved 27 August 2007.
  6. Gould, Lara (5 August 2007). "Hermione Set for BBC Role". The Sunday Mirror. Archived from the original on 18 ಫೆಬ್ರವರಿ 2009. Retrieved 6 August 2007. {{cite news}}: Italic or bold markup not allowed in: |publisher= (help)
  7. ೭.೦ ೭.೧ ೭.೨ ೭.೩ ೭.೪ Watson, Emma. "Biography". Emma Watson's Official Website. Archived from the original on 2 ಆಗಸ್ಟ್ 2007. Retrieved 3 August 2007.
  8. "Warner Bros. Official site". (Flash: click appropriate actor's image, click "Actor Bio"). harrypotter.warnerbros.co.uk. Retrieved 28 March 2006. {{cite web}}: Unknown parameter |dateformat= ignored (help)
  9. Barlow, Helen. "A life after Harry Potter". The Sydney Morning Herald. Retrieved 16 March 2006. {{cite web}}: Italic or bold markup not allowed in: |publisher= (help)
  10. ೧೦.೦ ೧೦.೧ ೧೦.೨ ೧೦.೩ Watson, Emma. "Emma". Emma Watson's Official Website. Archived from the original on 2 ಆಗಸ್ಟ್ 2007. Retrieved 3 August 2007.
  11. Harry Potter drama school to float - Telegraph
  12. ೧೨.೦ ೧೨.೧ ೧೨.೨ Listfield, Emily (8 July 2007). "We're all so grown up!". Parade. Retrieved 3 August 2007. {{cite web}}: Italic or bold markup not allowed in: |publisher= (help)
  13. ೧೩.೦ ೧೩.೧ ೧೩.೨ "Emma Watson". Friday Night with Jonathan Ross. Series 16. Episode 22. 5 July 2009. 7:40–19:40 minutes in. BBC One. http://www.bbc.co.uk/iplayer/episode/b00ldxcl/Friday_Night_with_Jonathan_Ross_Series_16_Episode_22/. 
  14. ""Harry Potter" magically shatters records". Hollywood.com. 18 November 2001. Archived from the original on 30 ಮೇ 2012. Retrieved 21 September 2007.
  15. "2001 Worldwide Grosses". Box Office Mojo. Retrieved 29 May 2007.
  16. "Magic is the only word for it". The Daily Telegraph. 4 November 2007. Retrieved 23 September 2007.
  17. Linder, Brian (17 November 2001). "Review of Harry Potter and the Sorcerer's Stone". IGN. Archived from the original on 29 ಡಿಸೆಂಬರ್ 2007. Retrieved 23 September 2007.
  18. ೧೮.೦ ೧೮.೧ ೧೮.೨ "2002 nominations and winners". Young Artist's Awards. Retrieved 13 September 2007.
  19. Kenneth Turan (15 November 2002). "Harry Potter and the Chamber of Secrets". Los Angeles Times. Archived from the original on 28 December 2005. Retrieved 22 September 2007.
  20. Ellen, Barbara (14 November 2002). "Film of the week". The Times. London. Archived from the original on 17 ಮೇ 2011. Retrieved 23 September 2007.
  21. ೨೧.೦ ೨೧.೧ "Bravo Otto – Sieger 2003" (in German). Bravo magazine. Retrieved 22 September 2007. {{cite web}}: Italic or bold markup not allowed in: |publisher= (help)CS1 maint: unrecognized language (link)
  22. Trout, Jonathon (1 June 2004). "Daniel Radcliffe, Rupert Grint, Emma Watson". BBC. Retrieved 3 August 2007.
  23. A. O. Scott (3 June 2004). "Harry Potter and the Prisoner of Azkaban: Film review". ದ ನ್ಯೂ ಯಾರ್ಕ್ ಟೈಮ್ಸ್. Retrieved 23 September 2007.
  24. ೨೪.೦ ೨೪.೧ "Dan Wins Another Otto Award". DanRadcliffe.com. Retrieved 13 September 2007.
  25. ೨೫.೦ ೨೫.೧ "Bravo Otto Awards 2005" (Press release) (in German). Presseportal.com. Retrieved 13 September 2007. {{cite press release}}: Italic or bold markup not allowed in: |publisher= (help)CS1 maint: unrecognized language (link)
  26. ೨೬.೦ ೨೬.೧ "Emma Watson wins award". HPANA. 4 November 2004. Retrieved 22 September 2007.
  27. Dargis, Manohla (17 November 2005). "The Young Wizard puts away childish things". ದ ನ್ಯೂ ಯಾರ್ಕ್ ಟೈಮ್ಸ್. Retrieved 24 September 2007.
  28. "Daniel Radcliffe, Emma Watson and Rupert Grint". IGN. 15 November 2005. Retrieved 3 August 2007.
  29. ೨೯.೦ ೨೯.೧ "Dan & Emma win Bravo Otto awards". HPANA. 8 May 2006. Retrieved 22 September 2007.
  30. ೩೦.೦ ೩೦.೧ "Goblet of Fire awards". Broadcast Film Critics Association. Archived from the original on 29 December 2007. Retrieved 13 September 2007.
  31. ೩೧.೦ ೩೧.೧ Carroll, Larry (24 April 2006). "Alba, Carell, 'Crashers,' 'Virgin' Big Nominees For MTV Movie Awards". MTV. Archived from the original on 19 ಡಿಸೆಂಬರ್ 2007. Retrieved 22 September 2007.
  32. ೩೨.೦ ೩೨.೧ ೩೨.೨ ೩೨.೩ Horn, Steven (26 June 2007). "Interview with Emma Watson". IGN. Retrieved 30 September 2007.
  33. Waterman, Lauren. "emma enchanted". Teen Vogue. Archived from the original on 5 ಜನವರಿ 2010. Retrieved 12 October 2009.
  34. "New Harry Potter scene for queen". BBC News. 12 June 2006. Retrieved 6 August 2007.
  35. "All Time worldwide opening records". Box Office Mojo. Retrieved 25 September 2007.
  36. ೩೬.೦ ೩೬.೧ Pryor, Fiona (28 September 2007). "Potter wins film awards hat-trick". BBC News. Retrieved 29 September 2007.
  37. "Stardom fades, but cement lives on". The Toronto Star. 11 January 2008. Retrieved 22 January 2008.
  38. ೩೮.೦ ೩೮.೧ "Harry Potter Will Be Played By Daniel Radcliffe In Final Two Flicks". MTV.com. 2 March 2007. Archived from the original on 2009-05-10. Retrieved 2009-04-18.
  39. "Will Harry Potter lose one of its stars?". Newsweek. 2 October 2006. Archived from the original on 5 October 2006. Retrieved 25 September 2007.
  40. "Hermione is back". news.com.au. 25 March 2007. Archived from the original on 30 ಮೇ 2012. Retrieved 12 April 2009.
  41. Edidin, Peter (24 March 2007). "Gang's all here". New York Times. Retrieved 12 April 2009.
  42. Boshoff, Alison (12 July 2007). "Worth £8m and preparing to be the face of Chanel, Emma Watson is a girl with a magic touch". The Daily Mail. Retrieved 2009-04-18.
  43. Watson, Emma (28 November 2007). "Ballet Shoes interviews". Emma Watson's official website news. Archived from the original on 2 ಆಗಸ್ಟ್ 2007. Retrieved 12 April 2009.
  44. Watson, Emma (22 May 2008). "Ballet Shoes interviews". Emma Watson's official website news. Archived from the original on 2 ಆಗಸ್ಟ್ 2007. Retrieved 12 April 2009.
  45. "'Harry Potter' sweeps into theaters 2 days early". Yahoo!. Archived from the original on 19 ಏಪ್ರಿಲ್ 2009. Retrieved 14 April 2009.
  46. "Potter film release date delayed". BBC News. 15 August 2008. Retrieved 28 July 2009.
  47. Sandhu, Sukhdev (16 July 2009). [newly-liberated and energized, eager to give all they have to what’s left of the series "Harry Potter and the Half-Blood Prince, review"]. The Daily Telegraph. {{cite news}}: Check |url= value (help)
  48. Watson, Emma (17 February 2009). "Filming begins". Emma Watson's official website news. Archived from the original on 2 ಆಗಸ್ಟ್ 2007. Retrieved 12 April 2009.
  49. Jack Malvern (14 March 2008). "Longer spell at box office for Harry Potter". The Times. {{cite news}}: |access-date= requires |url= (help)
  50. ೫೦.೦ ೫೦.೧ Olly Richards (14 March 2008). "Potter Producer Talks Deathly Hallows". Empire. Retrieved 14 March 2008.
  51. "Final 'Harry Potter' book will be split into two movies". The Los Angeles Times. 12 March 2008. Retrieved 12 March 2008.
  52. Warman, Matt (21 December 2007). "Dancing towards their dreams". The Daily Telegraph. Archived from the original on 24 ಜೂನ್ 2008. Retrieved 12 January 2008. {{cite news}}: Italic or bold markup not allowed in: |publisher= (help)
  53. Pielou, Adriaane (26 December 2007). "Ballet Shoes saw me through". The Daily Telegraph. Archived from the original on 23 ಮೇ 2008. Retrieved 1 January 2008. {{cite news}}: Italic or bold markup not allowed in: |publisher= (help)
  54. "A Christmas treat for all the family" (Press release). BBC. Archived from the original on 30 ನವೆಂಬರ್ 2007. Retrieved 1 January 2008.{{cite press release}}: CS1 maint: bot: original URL status unknown (link)
  55. "BBC One Transmission Details, weeks 52/1" (Press release). BBC. Archived from the original on 9 ಡಿಸೆಂಬರ್ 2007. Retrieved 1 January 2008.{{cite press release}}: CS1 maint: bot: original URL status unknown (link)
  56. Tryhorn, Chris (27 December 2007). "Viewers sold on Old Curiosity Shop". The Guardian. Retrieved 1 January 2008. {{cite news}}: Italic or bold markup not allowed in: |publisher= (help)
  57. Wollaston, Sam (27 December 2007). "Last Night's TV". The Guardian. Retrieved 1 January 2008. {{cite news}}: Italic or bold markup not allowed in: |publisher= (help)
  58. Teeman, Tim (27 December 2007). "Last Night's TV". London: The Times. Archived from the original on 17 ಮೇ 2011. Retrieved 1 January 2008. {{cite news}}: Italic or bold markup not allowed in: |publisher= (help)
  59. Walton, James (27 December 2007). "Ballet Shoes". The Daily Telegraph. Archived from the original on 10 ಜನವರಿ 2021. Retrieved 1 January 2008. {{cite news}}: Italic or bold markup not allowed in: |publisher= (help)
  60. "Emma Watson in Napoleon and Betsy". Empire Movies. 18 April 2008. Retrieved 12 April 2009.
  61. "Harry Potter's Emma Watson to play Napoleon's lover". The Daily Mirror. 19 April 2008. Retrieved 12 April 2009. {{cite news}}: Italic or bold markup not allowed in: |publisher= (help)
  62. Watson, Emma. "Emma Watson official website news". Archived from the original on 2 ಆಗಸ್ಟ್ 2007. Retrieved 30 April 2008.
  63. ೬೩.೦ ೬೩.೧ Long, Camilla (7 December 2008). "What next in life for Emma Watson". London: Times Online. Archived from the original on 15 ಜೂನ್ 2011. Retrieved 10 December 2008. {{cite news}}: Italic or bold markup not allowed in: |publisher= (help)
  64. "Emma Watson's Other Options". Teen Vogue. 18 September 2008. Archived from the original on 2 ಫೆಬ್ರವರಿ 2009. Retrieved 12 April 2009. {{cite web}}: Italic or bold markup not allowed in: |publisher= (help)
  65. Neate, Rupert (19 June 2008). "Chanel: 'No contract' for Harry Potter's Emma Watson". The Daily Telegraph. Archived from the original on 2009-05-11. Retrieved 2009-04-18. {{cite news}}: Italic or bold markup not allowed in: |publisher= (help)
  66. Kay, Nathan (15 June 2008). "Chanel casts a £3million spell on Mademoiselle Hermione". The Daily Mail. Retrieved 2009-04-18. {{cite news}}: Italic or bold markup not allowed in: |publisher= (help)
  67. Nicholl, Kate (12 April 2009). "That's magic – Potter star Emma Watson makes her competition vanish". Retrieved 12 April 2009.
  68. "Burberry's new girl!". Emma Watson official website news. 9 June 2009. Archived from the original on 2 ಆಗಸ್ಟ್ 2007. Retrieved 28 June 2009.
  69. Craik, Laura (9 June 2009). "Harry Potter star Emma Watson charms Burberry". The Evening Standard. Archived from the original on 12 ಜೂನ್ 2009. Retrieved 28 June 2009. {{cite news}}: Italic or bold markup not allowed in: |publisher= (help)
  70. ೭೦.೦ ೭೦.೧ "ಆರ್ಕೈವ್ ನಕಲು". Archived from the original on 2007-08-02. Retrieved 2010-02-23.
  71. "ಆರ್ಕೈವ್ ನಕಲು". Archived from the original on 2010-02-08. Retrieved 2010-02-23.
  72. "ಆರ್ಕೈವ್ ನಕಲು". Archived from the original on 2011-06-15. Retrieved 2010-02-23.
  73. ೭೩.೦ ೭೩.೧ ೭೩.೨ Watson, Emma (24 September 2007). "Emma's sisters in Ballet Shoes". Emma Watson's official website. Archived from the original on 2 ಆಗಸ್ಟ್ 2007. Retrieved 30 September 2007.
  74. ೭೪.೦ ೭೪.೧ Gordon, Jane (13 August 2007). "Touched by magic: Harry Potter's Hermione". Retrieved 2009-04-18.
  75. Muir, Kate (15 May 2004). "Cast Interviews". London: The Times. Archived from the original on 11 ಫೆಬ್ರವರಿ 2007. Retrieved 12 January 2008. {{cite news}}: Italic or bold markup not allowed in: |publisher= (help)
  76. "Pupils "sitting too many GCSEs"". BBC News. 24 August 2006. Retrieved 27 May 2007.
  77. ೭೭.೦ ೭೭.೧ Tibbetts, Graham (14 August 2008). "A-levels: Harry Potter actress Emma Watson gets straight As". The Daily Telegraph. Archived from the original on 5 ಡಿಸೆಂಬರ್ 2012. Retrieved 10 December 2008. {{cite news}}: Italic or bold markup not allowed in: |publisher= (help)
  78. "Emma's A/S Results". Emma Watson's Official Website. 17 August 2007. Archived from the original on 2 ಆಗಸ್ಟ್ 2007. Retrieved 18 August 2007.
  79. Walker, Tim (22 January 2009). "Emma Watson chooses Cambridge rather than America". The Daily Telegraph. Retrieved 30 January 2009. {{cite news}}: Italic or bold markup not allowed in: |publisher= (help)
  80. Nocera, Kate (29 June 2009). "Life after 'Harry Potter': Emma Watson is heading to Columbia University in the fall". NYDailyNews. Archived from the original on 2 ಜುಲೈ 2009. Retrieved 3 July 2009.
  81. Smith, Lizzie (29 June 2009). "'I'm hoping to fade into the background,' says cover girl Emma Watson on life after Harry Potter". Daily Mail UK. Retrieved 3 July 2009.
  82. "ಆರ್ಕೈವ್ ನಕಲು". Archived from the original on 2010-06-02. Retrieved 2010-02-23.
  83. "University 'nerd' Emma Watson". The Boston Globe. 25 April 2009. Retrieved 2 May 2009. {{cite web}}: Italic or bold markup not allowed in: |publisher= (help)
  84. Watson, Emma (15 April 2009). "19th Birthday!". Emma Watson's official website. Archived from the original on 2 ಆಗಸ್ಟ್ 2007. Retrieved 15 April 2009.
  85. Wootten, Dan (11 April 2009). "Potter's girl leaves Hogwarts: Brainy Harry Potter star Emma Watson is flying off-to uni". News of the World. Archived from the original on 3 ಜುಲೈ 2009. Retrieved 23 ಫೆಬ್ರವರಿ 2010. {{cite news}}: Italic or bold markup not allowed in: |publisher= (help)
  86. Ford, James (14 July 2009). "Catching up with Emma Watson". Paste. Archived from the original on 16 ಜುಲೈ 2009. Retrieved 15 July 2009. {{cite news}}: Italic or bold markup not allowed in: |publisher= (help)
  87. ೮೭.೦ ೮೭.೧ "Emma Watson, of Potter fame, heading for Brown". The Providence Journal. 7 July 2009. {{cite news}}: Italic or bold markup not allowed in: |publisher= (help)
  88. Coyle, Jake (12 July 2009). "Harry Potter cast reflects on childhood at Hogwarts". Chicago Sun-Times. Archived from the original on 28 ಸೆಪ್ಟೆಂಬರ್ 2009. Retrieved 23 ಫೆಬ್ರವರಿ 2010. {{cite news}}: Italic or bold markup not allowed in: |publisher= (help)
  89. McLean, Craig (4 July 2009). "Dan the man". The Guardian. {{cite news}}: Italic or bold markup not allowed in: |publisher= (help)
  90. Watson, Emma (8 September 2009). "Hi everyone". Emma Watson's official website. Archived from the original on 2 ಆಗಸ್ಟ್ 2007. Retrieved 13 September 2009.
  91. "Harry Potter star Emma Watson is top-earning actress". BBC News. BBC. 5 February 2010. Retrieved 5 February 2010.
  92. Cawthorne, Alec (7 November 2007). "Rupert Grint and Emma Watson". BBC. Retrieved 3 August 2007. {{cite news}}: Text "/rupert_grint_emma_watson_2001_interview.shtml" ignored (help)
  93. "Emma Watson loves to go fishing for a spell". The Daily Telegraph. Retrieved 19 May 2008.
  94. "Emma Watson donates items for WTT auction". Harry Potter Automatic News Aggregator. Retrieved 19 May 2008.
  95. "Emma Watson donates items for WTT auction again". Harry Potter Automatic News Aggregator. Retrieved 19 May 2008.
  96. "The Wild Trout Trust – Internet & Postal Auction 2008" (PDF). Wild Trout Trust. Archived from the original (PDF) on 11 ಏಪ್ರಿಲ್ 2020. Retrieved 19 May 2008.
  97. Watson, Emma. "emma-faq". Emma Watson's Official Website. Archived from the original on 2 ಆಗಸ್ಟ್ 2007. Retrieved 3 August 2007.
  98. "2002 Saturn Awards". IMDB. Archived from the original on 16 ಸೆಪ್ಟೆಂಬರ್ 2007. Retrieved 13 September 2007.
  99. "2002 Empire Awards". IMDB. Archived from the original on 22 ಡಿಸೆಂಬರ್ 2006. Retrieved 13 September 2007.
  100. "American Moviegoer Award nominations". Time Warner. Archived from the original on 15 ಮೇ 2013. Retrieved 13 September 2007.
  101. "Prisoner of Azkaban awards". Broadcast Film Critics Association. Archived from the original on 2007-12-29. Retrieved 13 September 2007.
  102. Akers, Shelley (20 October 2007). "Emma Watson Is Named Nickelodeon's Best Actress". People. Retrieved 24 October 2007. {{cite news}}: Italic or bold markup not allowed in: |publisher= (help)
  103. "Six Nominations for "Order of the Phoenix" at Empire Awards". The Leaky Cauldron. 3 February 2008. Retrieved 3 February 2008. {{cite news}}: |first= missing |last= (help); Italic or bold markup not allowed in: |publisher= (help)
  104. "Will Smith, Emma Watson & "Transformers" Win Canadian Film/TV Awards". marketwire. 2008. Archived from the original on 20 ಜುಲೈ 2008. Retrieved 15 July 2008. {{cite web}}: Unknown parameter |month= ignored (help)
  105. "Dan and Emma won Otto Awards". Bravo Germany. 2008. Retrieved 6 May 2008. {{cite web}}: Unknown parameter |month= ignored (help)
  106. "'Battlestar Galactica' Leads Way With 11 SyFy Genre Awards Nods". SyFy Portal. 2008. Retrieved 15 April 2009. {{cite web}}: Unknown parameter |month= ignored (help)
  107. "Emma Watson Nominated for Glamour Awards". The Leaky Cauldron. 11 February 2008. Retrieved 2009-04-18.


ಹೊರಗಿನ ಕೊಂಡಿಗಳು

ಬದಲಾಯಿಸಿ