ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ
ಕನ್ನಡ ಸಾಹಿತ್ಯ ಲೋಕದಲ್ಲಿ, ಎನ್ನೆಸ್ಸೆಲ್ ಎಂದೇ ಮನೆಮಾತಾಗಿರುವ ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು [೨೯ ಅಕ್ಟೋಬರ್ ೧೯೩೬ - ೦೬ ಮಾರ್ಚ್ ೨೦೨೧], ಭಾವಗೀತೆ ಸಾಹಿತ್ಯ, ವಿಮರ್ಶೆ, ಅನುವಾದ, ನವ್ಯಕವಿತೆ, ಮಕ್ಕಳಿಗಾಗಿ ಗೀತೆಗಳ ರಚನೆ, ಮುಂತಾದ ಹಲವರು ಪ್ರಕಾರಗಳಲ್ಲಿ ವ್ಯವಸಾಯ ಮಾಡಿದ್ದಾರೆ. ಅವರು ಕನ್ನಡ-ಸಂಸ್ಕೃತ-ಇಂಗ್ಲೀಷ್ ಭಾಷೆಗಳಲ್ಲಿ ಕೃತಿರಚನೆ ಮಾಡಿದ್ದಾರೆ[೧]
ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ | |
---|---|
ಜನನ | ಶಿವಮೊಗ್ಗ, ಭಾರತ |
ಮರಣ | 6 March 2021 ಬೆಂಗಳೂರು | (aged 84)
ವೃತ್ತಿ | ಕವಿ, ಭಾಷಾಂತರಕಾರ |
ಭಾಷೆ | ಕನ್ನಡ |
ಪರಿಚಯ ಸಂಪಾದಿಸಿ
ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು ೧೯೩೬ಅಕ್ಟೋಬರ ೨೯ ರಂದು ಶಿವಮೊಗ್ಗೆಯಲ್ಲಿ ಹುಟ್ಟಿದರು. ತಂದೆ ಶಿವರಾಮ ಭಟ್ಟ, ತಾಯಿ ಮೂಕಾಂಬಿಕೆ. ಎಂ.ಎ ಪದವಿ ಪಡೆದ ಬಳಿಕ ಭಟ್ಟರು ಭಾಷಾಶಾಸ್ತ್ರ ಸಂಶೋಧಕರಾಗಿ ಎರಡು ವರ್ಷ ಕೆಲಸ ಮಾಡಿ, ತನ್ನಂತರ ಕಾಲೇಜಿನಲ್ಲಿ ಅಧ್ಯಾಪಕರಾದರು.[೨]
ವಿದ್ಯಾಭ್ಯಾಸ ಸಂಪಾದಿಸಿ
ಶಿವಮೊಗ್ಗದಲ್ಲಿ 'ಇಂಟರ್ ಮೀಡಿಯೆಟ್ ಮುಗಿಸಿ', ಕನ್ನಡ ’ಎಂ.ಎ. ಆನರ್ಸ್ ಪದವಿ’ ಮೈಸೂರಿನ ಮಹಾರಾಜ ಕಾಲೇಜ್ ನಲ್ಲಿ ಗಳಿಸಿದರು. ಅಧ್ಯಯನದುದ್ದಕ್ಕೂ ಮೊದಲ ದರ್ಜೆಯಲ್ಲೇ ಉತ್ತೀರ್ಣರಾದರು. ತುಂಬಾ ಹರಟುವ ಸ್ವಭಾವ, ಸರಳ ಸಜ್ಜನಿಕೆ, ಅತ್ಯುತ್ತಮ ಸ್ಮರಣ ಶಕ್ತಿ, ಯನಂತರ, ’ತೀನಂಶ್ರೀ’ ಮಾರ್ಗದರ್ಶನದಲ್ಲಿ ಸಂಶೋಧನ ವೃತ್ತಿಯನ್ನು ಕೈಗೊಂಡರು. ೧೯೬೫ ರಲ್ಲಿ ಬೆಂಗಳೂರು ವಿಶ್ವವಿಧ್ಯಾಲಯವನ್ನು ಸೇರಿ, ’ಅಧ್ಯಾಪಕ’, ’ರೀಡರ್’, ’ಪ್ರಾಧ್ಯಾಪಕ’, ’ನಿರ್ದೇಶಕ’೧೯೯೦ ರಲ್ಲಿ ಆರ್ಟ ಫ್ಯಾಕಲ್ಟಿ ಡೀನ್ ಆದರು. ಈ ಎಲ್ಲಾ ಸ್ಥಾನಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ’ಪಿ ಎಚ್ ಡಿ’ ಪದವಿಗೆ ’ಆಧುನಿಕ ಕನ್ನಡ ಕಾವ್ಯ’ ಕುರಿತು ಪ್ರಬಂಧ ಸಾದರಪಡಿಸಿದರು. 'ತೀನಂಶ್ರೀ', 'ಸಿಡಿಎನ್', 'ಡಿಎಲ್ಎನ್', 'ಶ್ರೀಕಂಠ ಶಾಸ್ತ್ರಿ' ಮೊದಲಾದ ಶ್ರೇಷ್ಟ ಮಟ್ಟದ ಆಚಾರ್ಯರ ಚಿಂತನ ಧಾರೆಯಿಂದ ಪ್ರಭಾವಿತರಾಗಿದ್ದರು. 'ಹಳೆಗನ್ನಡ ಕಾವ್ಯ'ಗಳನ್ನು 'ನವೀನ ಸಾಹಿತ್ಯ'ದೊಂದಿಗೆ ಸಮನಾಗಿ ಜೀರ್ಣಿಸಿಕೊಂಡರು. ಇಂಗ್ಲೀಷ್ ಮತ್ತು ಸಂಸ್ಕೃತಸಾಹಿತ್ಯದಲ್ಲೂ ಅವರ ಅಧ್ಯಯನ ಪುಟಗೊಂಡಿದೆ.ಬಹುಮುಖ ಸಾಹಿತ್ಯಸೇವೆ.
ಶಿಶುಸಾಹಿತ್ಯ ಸಂಪಾದಿಸಿ
ಎನ್.ಎಸ್.ಎಲ್.ಅವರಿಗೆ ಬಹು-ಪ್ರಿಯವಾದ ಪ್ರಕಾರಗಳಲ್ಲಿ ಒಂದು. ಜಗನ್ನಾಥ ವಿಜಯ, ಮುದ್ರಾಮಂಜೂಷ ಕಾವ್ಯಗಳನ್ನು ರಚಿಸಿದ್ದಾರೆ. ಭಟ್ಟರ ಕಾರ್ಯವನ್ನು ಗುರುತಿಸಿ, ’ಎನ್.ಸಿ.ಇ.ಆರ್.ಟಿ’ ಸಂಸ್ಥೆಯಿಂದ ಶಿಶು ಸಾಹಿತ್ಯಕ್ಕಾಗಿ ’ಬಾಲಸಾಹಿತ್ಯ ಪುರಸ್ಕಾರ’ ಲಭಿಸಿದೆ. ಅನುವಾದಗಳಲ್ಲಿ ಮುಖ್ಯವಾದವುಗಳು, ’ಮೃಚ್ಛಕಟಿಕ’, ’ಇಸ್ಪೀಟ್ ರಾಜ್ಯ’, ’ಟ್ವೆಲ್ಫ್ತ್ ನೈಟ್’, ಮತ್ತು ’ಭಾರತೀಯ ’ಗ್ರಂಥ ಸಂಪಾದನಾ ಪರಿಚಯ’, ’ಕನ್ನಡ ಮಾತು’ ಎನ್ನುವ ಪುಟ್ಟ-ಗ್ರಂಥ, ಕನ್ನಡ ಭಾಷೆಯನ್ನು ಬೆಳವಣಿಗೆಯನ್ನು ಸೂಕ್ತ ದರ್ಶನಗಳೊಂದಿಗೆ ಸಾರ್ವಜನಿಕರಿಗೆ ತಲುಪುವ ಆಶಯದಲ್ಲಿ ಯಶಸ್ವಿಯಾಗಿವೆ.
ವಿದೇಶಗಳಲ್ಲಿ ಸಂಪಾದಿಸಿ
- ನಾಲ್ಕುಬಾರಿ ಅಮೆರಿಕದಲ್ಲಿ ಆಹ್ವಾನಿತರಾಗಿ ಸಂದರ್ಶಿಸಿದ್ದಾರೆ. ಕೊಟ್ಟ ಉಪನ್ಯಾಸಗಳ ಸಂಖ್ಯೆ ೮೦. ’ನ್ಯೂಯಾರ್ಕ್’, ’ನ್ಯೂಜರ್ಸಿ’, ’ಶಿಕಾಗೊ’, ’ಲಾಸ್ ಎಂಜಲೀಸ್’, ’ಸ್ಯಾನ್ ಫ್ರಾನ್ಸಿಸ್ಕೋ’, ಮುಂತಾದ ನಗರಗಳಲ್ಲಿ ಮನೆಮಾತಾಗಿದ್ದಾರೆ.[೩]
ಸಮರ್ಥ ಕಾವ್ಯ ರಚನೆ ಸಂಪಾದಿಸಿ
’ಭಟ್ಟರ ಪ್ರತಿಮಾನಿರ್ಮಾಣ ಸಾಮರ್ಥ್ಯ’ ’ತಮಗೆ ಅನ್ನಿಸಿದ್ದನ್ನು ನೇರವಾಗಿ ಹೇಳುವ ಪ್ರಾಮಾಣಿಕ ಪ್ರಯತ್ನ’, ’ಸಾಕಷ್ಟು ಸಾಧನೆ ಮತ್ತು ಎಚ್ಚರದಿಂದ ಮೈಗೂಡಿಸಿಕೊಂಡ ಭಾಷಾ ಪ್ರಯೋಗದ ಹದ’ ಹಾಗೂ ಬಿಗಿ’ ಅವರ ಕಾವ್ಯ ಶಕ್ತಿಯ ಬಗೆಗೆ ಭರವಸೆಯನ್ನು ಹುಟ್ಟಿಸುತ್ತವೆ. ’ಪುತಿನ ರವರ ಗೋಕುಲ ನಿರ್ಗಮನ’, ’ಅಹಲ್ಯೆ’, ’ಹಂಸ ದಮಯಂತಿ’ಮೊದಲಾದ ’ಗೀತನಾಟಕ’ಗಳ ಪರಂಪರೆಯನ್ನು ಮುಂದುವರೆಸುವ ಪ್ರಾಮಾಣಿಕ ಪ್ರಯತ್ನ, ’ಊರ್ವಶಿ ಎಂಬ ಗೀತ ನಾಟಕ’ದಲ್ಲಿ ಕಾಣಬಹುದು. ಊರ್ವಶಿ ಪುರೂರವರ ಪ್ರೇಮಮಯ ದಾಂಪತ್ಯ ಜೀವನವನ್ನು ಹಿನ್ನೆಲೆಯಾಗಿಟ್ಟುಕೊಂಡು ನಾಟದ ಘಟನೆ ವಿಘಟನೆಗಳ ಒಡಲಲ್ಲಿ ಮರ್ತ್ಯ-ದಿವ್ಯ ಭಾವಗಳ ನಡುವಣ ಸಂಘರ್ಷವನ್ನು ಚರ್ಚಿಸುತ್ತಾರೆ.[೩]
ಅನುವಾದ ಗ್ರಂಥಗಳು ಸಂಪಾದಿಸಿ
- 'ಸುನೀತ' (ಶೇಕ್ಸಪಿಯರನ ಐವತ್ತು ಸಾನೆಟ್ಟುಗಳು)
- 'ಚಿನ್ನದ ಹಕ್ಕಿ' ( ಯೇಟ್ಸ ಕವಿಯ ಐವತ್ತು ಕವನಗಳು)
- ’ಭಾರತೀಯ ಗ್ರಂಥ ಸಂಪಾದನಾ ಪರಿಚಯ’,’ವೆಂಬ ಅನುವಾದ ಗ್ರಂಥ ಇಂದಿಗೂ ಗ್ರಂಥ ಪಾಠ ಶೋಧನೆಯಲ್ಲಿ ನಿರತರಾದ ಸಂಶೋಧಕರಿಗೆ ಅತ್ಯಂತ ಉಪಯುಕ್ತವಾದ ಹೊತ್ತಿಗೆಯಾಗಿದೆ. ಭಟ್ಟರ ಅತ್ಯಂತ ಸಮರ್ಥ ಅನುವಾದಗಳಲ್ಲಿ, ’ಯೇಟ್ಸ್’, ’ಶೇಕ್ಸ್ ಪಿಯರ್’, ’ಎಲಿಯಟ್’ ಕವಿಗಳ ತಮ್ಮ ಕೃತಿಗಳಿಗಾಗಿ ಮೂರುಬಾರಿ ಕರ್ನಾಟಕ ’ಸಾಹಿತ್ಯ ಅಕಾಡೆಮಿಯ ಬಹುಮಾನ’ಗಳನ್ನು ಗಳಿಸಿವೆ. ೧೯೯೦ ರಲ್ಲಿ ತಮ್ಮ ಸಮಗ್ರ ವ್ಯವಸಾಯಕ್ಕೆ ’ಶಿವರಾಮಕಾರಂತ ಪ್ರಶಸ್ತಿ’ಯನ್ನು ಪಡೆದಿದ್ದಾರೆ. ’ರಾಜ್ಯೋತ್ಸವ ಪ್ರಶಸ್ತಿ’, ’ಮಾಸ್ತಿಪ್ರಶಸ್ತಿ’, ವರ್ಧಮಾನ ಪ್ರಶಸ್ತಿ’ಗಳಂತ ಹತ್ತು ಹನ್ನೆರಡು ಪ್ರಶಸ್ತಿಗಳು ಒಂದೊಂದಾಗಿ ಅವರ ಮಡಿಲು ಸೇರಿವೆ.
ಸುಗಮ-ಸಂಗೀತ ಕ್ಷೇತ್ರ ಸಂಪಾದಿಸಿ
ನವ್ಯ ಸಂಪ್ರದಾಯದ ಕವಿತೆಗಳನ್ನು ಬರೆಯುವುದರಲ್ಲಿ ಆಸಕ್ತರಾಗಿದ್ದ, ಭಟ್ಟರು ರಚಿಸಿದ ಗೀತಕಾವ್ಯಗಳ ಸಂಖ್ಯೆ ಅಪಾರ. ಶಿವಮೊಗ್ಗ ಸುಬ್ಬಣ್ಣ, ಸಿ.ಅಶ್ವಥ್, ಮೈಸೂರು ಅನಂತಸ್ವಾಮಿ, ’ಎಚ್.ಕೆ.ನಾರಾಯಣ’ ಮೊದಲಾದವರು, ಅನೇಕ ಸುಗಮ ಸಂಗೀತ ಗಾಯಕರು ಭಟ್ಟರ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದ್ದಾರೆ. ಕೆಲವು ಇಲ್ಲಿವೆ ’ದೀಪಿಕಾ’ ’ಭಾವಸಂಗಮ’ ’ನೀಲಾಂಜನ’ ’ಬಾರೋ ವಸಂತ’ ’ಕವಿತಾ’ ’ಮಾಧುರಿ’ ’ಮಂದಾರ’ ’ಬಂದೆ ಬರತಾವ ಕಾಲ’ ’ಅರುಣ ಗೀತೆ, ’ಊರ ಹೊರಗೆ, ’ಕವನ’ ’ಬಿಡುಗಡೆ’ ’ಇದಲ್ಲ ತಕ್ಕ ಗಳಿಗೆ’ ’ಅವತಾರ’ ’ಹಿರಿಯರು’ ’ಕೃತಜ್ಞತೆ’ ’ಪ್ರೀತಿ’ ’ಸವಾರಿ’ ’ಸೀಮಂತಿನಿ’ ’ಮಗನಿಗೊಂದು ಪತ್ರ’ ’ಮೊದಲಾದ ಸಮರ್ಥ ಕವನಗಳು.
ಕನ್ನಡ ಕಾವ್ಯ ಮೀಮಾಂಸೆ ಸಂಪಾದಿಸಿ
- ೧೯೬೮ ಪ್ರಥಮ ’ವೃತ್ತ ಕವನ ಸಂಕಲನ’,
- 'ಕಾವ್ಯಪ್ರತಿಮೆ’(ಅಂಕಿತ ಪ್ರಕಾಶನ) ಬಿಡುಗಡೆಯಾಗಲಿದೆ.
- ’ನಂದನ ಕಿಶೋರಿ’, ಈ ಜನಪ್ರಿಯ ಹೊತ್ತಿಗೆ, ಮಾರಾಟದಲ್ಲಿ ದಾಖಲೆ ಸೃಷ್ಟಿಸಿದೆ.
- 'ನಿನ್ನೆಗೆ ನನ್ನ ಮಾತು,
- 'ಸುಳಿ'
- 'ದೀಪಿಕಾ'
- 'ಬಾರೋ ವಸಂತ
- 'ಚಿತ್ರಕೂಟ',
- ’ಹೊಳೆ ಸಾಲಿನ ಮರ’
- ’ಅರುಣ ಗೀತೆ’
- ’ಊರ್ವಶಿ ಗೀತ ನಾಟಕ’,
ವಿಮರ್ಶೆ ಸಂಪಾದಿಸಿ
- ಹೊರಳು ದಾರಿಯಲ್ಲಿ ಕಾವ್ಯ
- ವಿವೇಚನ
- ಕಾವ್ಯಶೋಧನ(ವಿಭಿನ್ನ ಲೇಖಕರ ವಿಮರ್ಶಾ ಲೇಖನಗಳು)
ಸಂಪಾದನೆ ಸಂಪಾದಿಸಿ
- 'ಶಿಶುನಾಳ ಶರೀಫರ ಗೀತೆಗಳು -'ಶಿಶುನಾಳ ಶರೀಫ್ ಸಾಹೇಬ’ರ ತತ್ವಪದಗಳನ್ನು ಕಲೆಹಾಕಿ ಸಮರ್ಥ ಟೀಕೆ-ಟಿಪ್ಪಣಿ ಪ್ರಸ್ತಾವನೆಗಳೊಂದಿಗೆ ಪ್ರಕಟಿಸಿದ್ದಾರೆ. ಇದು ಕರ್ನಾಟಕದಲ್ಲಿ ಅತಿ ಜನಪ್ರಿಯತೆಯನ್ನು ಗಳಿಸಿದೆ.
ಪುರಸ್ಕಾರ ಸಂಪಾದಿಸಿ
- ೧೯೭೪ - 'ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ'- "ಹೊರಳು ದಾರಿಯಲ್ಲಿ ಕಾವ್ಯ" ವಿಮರ್ಶಾಕೃತಿಗೆ
- ೨೦೧೨ - 'ಅನಕೃ ಪ್ರಶಸ್ತಿ'
ನಿಧನ ಸಂಪಾದಿಸಿ
ಭಟ್ಟರು ೨೦೨೧ರ ಮಾರ್ಚ್ ೬ ಶನಿವಾರ ಬೆಳಿಗ್ಗೆ ಬೆಂಗಳೂರಿನಲ್ಲಿ ನಿಧನರಾದರು. ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದ ಅವರಿಗೆ ೮೪ ವರ್ಷ ವಯಸ್ಸಾಗಿತ್ತು.[೪]
ಉಲ್ಲೇಖಗಳು ಸಂಪಾದಿಸಿ
- ↑ "Masti Award". Archived from the original on 2012-11-07. Retrieved 2018-11-07.
- ↑ ಎನ್ನೆಸ್ಸೆಲ್ ಭಟ್ಟರ ಜೊತೆ ಕಾವ್ಯಾಂತರಂಗ Read more at: https://kannada.oneindia.com/news/2010/04/19/chat-with-poet-ns-lakshmi-narayana-bhat-samvedana.html
- ↑ ೩.೦ ೩.೧ ನುಡಿ ನಮನ: ಎನ್.ಎಸ್.ಎಲ್. ಎಂಬ ಶರೀಫ್ ಭಟ್ಟರು- ಬಿ.ಆರ್.ಲಕ್ಷ್ಮಣರಾವ್;Updated: 07 ಮಾರ್ಚ್ 2021,
- ↑ "Kannada poet Lakshminarayana Bhatta passes away". The Hindu. 6 March 2021.