ಎಡ್ಮಂಡ್ ಗಂಟರ್
ಎಡ್ಮಂಡ್ ಗಂಟರ್ (1581-1626) ಇಂಗ್ಲೆಂಡಿನ ಒಬ್ಬ ಗಣಿತಶಾಸ್ತ್ರಜ್ಞ. ಖಗೋಳೀಯ ದೂರಮಾಪನಗಳಿಗೆ ಸಂಬಂಧಿಸಿದಂತೆ ಅನೇಕ ಮಾಪನೋಪಕರಣಗಳನ್ನು ರೂಪಿಸಿದ ಖ್ಯಾತಿ ಇವನದು.
ಜನನ, ವಿದ್ಯಾಭ್ಯಾಸ
ಬದಲಾಯಿಸಿಜನನ ಹಾರ್‌ಫರ್ಡ್‌ಷೀರ್‌ನಲ್ಲಿ. ವೆಸ್ಟ್‌ಮಿನ್‍ಸ್ಟರ್ ಶಾಲೆಯಲ್ಲಿ ಇವನ ಪ್ರಾಥಮಿಕ ವಿದ್ಯಾಭ್ಯಾಸ ನಡೆಯಿತು. ಅನಂತರ ಆಕ್ಸ್‌ಫರ್ಡಿನ ಕ್ರೈಸ್ಟ್‌ಚರ್ಚ್‌ಗೆ ವಿದ್ಯಾರ್ಥಿಯಾಗಿ ಸೇರಿದ (1599).
ವೃತ್ತಿಜೀವನ, ಸಾಧನೆಗಳು
ಬದಲಾಯಿಸಿವಿದ್ಯಾಭ್ಯಾಸ ಮುಗಿದ ಬಳಿಕ ಲಂಡನಿನ ಗ್ರೆಷ್‌ಹ್ಯಾಂ ಕಾಲೇಜಿಗೆ ಸೇರಿ ತನ್ನ ಕಡೆಯ ಕಾಲದವರೆಗೂ ಖಗೋಳಶಾಸ್ತ್ರದ ಪ್ರಾಧ್ಯಾಪಕನಾಗಿ ಅಲ್ಲಿಯೇ ಸೇವೆಗೈದ.[೧] ಸೆಕ್ಟರ್, ಕ್ರಾಸ್‌ಸ್ಟಾಫ್, ಬೌ, ಕ್ವಾಡ್ರೆಂಟ್ ಮುಂತಾದ ಖಗೋಳೀಯ ಉಪಕರಣಗಳನ್ನು ಕುರಿತು ವಿವರಣೆಗಳು ಇವನ ಬರೆಹಗಳಲ್ಲಿ ಕಾಣಬರುತ್ತವೆ. ಕ್ಯಾನನ್ ಟ್ರೈಆಂಗ್ಯುಲೋರಮ್ ಈತ ಪ್ರಕಟಿಸಿದ (1620) ಒಂದು ಗ್ರಂಥ. ಯಾವುದೇ ಒಂದು ಸ್ಥಳದಲ್ಲಿ ಅಲ್ಲಿನ ಕಾಂತದಿಕ್ಪಾತ ವ್ಯಸ್ತಗೊಳ್ಳುತ್ತದೆ ಎಂಬ ಒಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದವರಲ್ಲಿ (1622 ಇಲ್ಲವೆ 1625) ಈತನೇ ಮೊದಲಿಗನೆನ್ನಬಹುದು. ತ್ರಿಕೋಣಮಿತಿಯ ಪದಗಳಾದ ಸೈನ್ ಮತ್ತು ಕೋಸೈನ್ ಎಂಬುವನ್ನು ಈತ ಮೊದಲಿಗೆ ಉಪಯೋಗಿಸಿದವನೆಂದೂ,[೨][೩][೪] ತನ್ನ ಮಿತ್ರ ಹಾಗೂ ಸಹೋದ್ಯೋಗಿಯೂ ಆಗಿದ್ದ ಗಣಿತಜ್ಞ ಹೆನ್ರಿ ಬ್ರಿಗ್ಸ್ (1556-1630) ಎಂಬುವನಿಗೆ ಅಂಕಗಣಿತೀಯ ಪೂರಕದ (arithmetical complement) ಬಳಕೆಯನ್ನು ಸೂಚಿಸಿದವನೆಂದೂ ಹೇಳಲಾಗಿದೆ.
ಇವನ ಆವಿಷ್ಕಾರಗಳಲ್ಲಿ ಮುಖ್ಯವಾಗಿ ಮೋಜಣಿ ಕೆಲಸಗಳಲ್ಲಿ ಬಳಸುವ ಗಂಟರನ ಸರಪಣಿ ಎಂಬುದು ಗಮನಾರ್ಹ. ಇದು 66 ಅಡಿ ಉದ್ದದ, 100 ಕೊಂಡಿಗಳಿರುವ ಸರಪಣಿ. ಲೆಕ್ಕಾಚಾರಗಳನ್ನು ಮಾಡುವ ಉಪಕರಣ ಸ್ಲೈಡ್ ರೂಲ್ ಕಾಣಬರುವುದಕ್ಕೆ ಮುಂಚೆ ಗಂಟರನ ರೇಖೆಯೆಂಬ (Gunter's line) ಉಪಕರಣವಿತ್ತೆನ್ನಲಾಗಿದೆ. ಸಮುದ್ರಯಾನಕ್ಕೆ ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳಿಗೆ ಪರಿಹಾರವನ್ನೀಯುವ ಗಂಟರನ ಮಾನಕವೆಂಬ ಉಪಕರಣವನ್ನೂ ಈತ ಆವಿಷ್ಕರಿಸಿದ್ದ.
ಉಲ್ಲೇಖಗಳು
ಬದಲಾಯಿಸಿ- ↑ One or more of the preceding sentences incorporates text from a publication now in the public domain: Chisholm, Hugh, ed. (1911). . Encyclopædia Britannica. Vol. 12 (11th ed.). Cambridge University Press. pp. 729–730.
{{cite encyclopedia}}
: Cite has empty unknown parameters:|separator=
and|HIDE_PARAMETER=
(help); Invalid|ref=harv
(help) - ↑ Gunter, Edmund (1620). Canon triangulorum.
- ↑ Roegel, Denis, ed. (6 December 2010). "A reconstruction of Gunter's Canon triangulorum (1620)" (Research report). HAL. inria-00543938. Archived from the original on 28 July 2017. Retrieved 28 July 2017.
- ↑ "cosine".
ಹೊರಗಿನ ಕೊಂಡಿಗಳು
ಬದಲಾಯಿಸಿ- O'Connor, John J.; Robertson, Edmund F., "ಎಡ್ಮಂಡ್ ಗಂಟರ್", MacTutor History of Mathematics archive, University of St Andrews
- Galileo Project page
- Gunter's Quadrant applet