ಎಡಕುಮೇರಿ

ಭಾರತ ದೇಶದ ಗ್ರಾಮಗಳು

ಎಡಕುಮೇರಿ ಭಾರತದ ಕರ್ನಾಟಕ ರಾಜ್ಯದ ಪಶ್ಚಿಮ ಘಟ್ಟಗಳ ಮಧ್ಯದಲ್ಲಿರುವ ಸಕಲೇಶಪುರ ತಾಲ್ಲೂಕಿನಲ್ಲಿರುವ ಸ್ಥಳವಾಗಿದೆ. ಇಲ್ಲಿ ರೈಲು ನಿಲ್ದಾಣವಿದೆ. ಈ ಸ್ಥಳವು ಮಂಗಳೂರಿನಿಂದ ಬೆಂಗಳೂರಿಗೆ ಹೋಗುವ ರೈಲು ಮಾರ್ಗದಲ್ಲಿದೆ ಮತ್ತು ಇದು ರೈಲು ಮಾರ್ಗದ ಅತ್ಯಂತ ಆಕರ್ಷಕವಾದ ಸ್ಥಳವಾಗಿದೆ. ಮೀಟರ್ ಗೇಜ್‌ನಿಂದ ಬ್ರಾಡ್ ಗೇಜ್‌ಗೆ ಹಾಸನ ಮತ್ತು ಮಂಗಳೂರು ನಡುವಿನ ರೈಲ್ವೆ ಹಳಿ (ಲೈನ್) ಪರಿವರ್ತನೆಗೆ ಹಾಸನ ಮಂಗಳೂರು ರೈಲು ಅಭಿವೃದ್ಧಿ ಕಂಪನಿ (ಎಚ್ಎಮ್ಆರ್‌ಡಿಸಿ) ಕರ್ನಾಟಕ ಸರ್ಕಾರ ಮತ್ತು ರೈಲ್ವೆ ಸಚಿವಾಲಯದ ಜಂಟಿ ಉದ್ಯಮದಿಂದ ಹಣಕಾಸು ಒದಗಿಸಿದೆ.[] ಈ ಎರಡು ನಗರಗಳ ನಡುವೆ ಚಲಿಸುವ ರೈಲು ಸಾಮಾನ್ಯವಾಗಿ ತಾಂತ್ರಿಕ ಕಾರಣಗಳಿಗಾಗಿ ಎಡಕುಮೇರಿಯಲ್ಲಿ ನಿಲ್ಲುತ್ತದೆ. ಎಡಕುಮೇರಿ ರೈಲು ನಿಲ್ದಾಣವು ರೈಲ್ವೆ ಹಳಿಗಳನ್ನು ಅನುಸರಿಸಿ, ಪಶ್ಚಿಮ ಘಟ್ಟಗಳಲ್ಲಿ ಚಾರಣ ಮಾಡುವ ಚಾರಣಿಗರಿಗೆ ವಿಶ್ರಾಂತಿ ಸ್ಥಳವಾಗಿದೆ.[] ಈ ರೈಲು ಹಳಿಯಲ್ಲಿ ಕಾಡು ಆನೆಗಳು ಮತ್ತು ಇತರ ಕಾಡು ಪ್ರಾಣಿಗಳ ಸಂಚಾರದ ವರದಿಗಳಿವೆ.[]

ಯಡಕುಮೇರಿಯಲ್ಲಿ ಕೈಬಿಟ್ಟ ರೈಲು ನಿಲ್ದಾಣ

ಸಹ್ಯಾದ್ರಿಯ ಮಡಿಲಲ್ಲಿನ ಚಾರಣತಾಣಗಳಲ್ಲೊಂದಾದ ಎಡಕುಮೇರಿ ಪಶ್ಚಿಮಬೆಟ್ಟಗಳ ನಡುವಿನಲ್ಲಿರುವ ರೈಲ್ವೆ ಹಳಿಗಳು, ಸುರಂಗಗಳು ಮತ್ತು ಕಂದಕಗಳಿಂದ ಕೂಡಿದೆ.[]ಬೆಟ್ಟವನ್ನು ಹತ್ತಿ ರೈಲ್ವೆ ಹಳಿಗಳನ್ನು ತಲುಪುವುದು ಚಾರಣದ ಒಂದು ಭಾಗವಾದರೆ, ಈ ರೈಲ್ವೆ ಹಳಿಗಳಲ್ಲಿ ಮುಂದುವರೆಯುತ್ತಾ ಸುರಂಗಗಳನ್ನು ದಾಟುವುದು ಚಾರಣದ ಇನ್ನೊಂದು ಭಾಗ.[]ಸಾಮಾನ್ಯವಾಗಿ ಚಾರಣವೆಂದರೆ ಕೇವಲ ಬೆಟ್ಟ, ಕಲ್ಲುಬಂಡೆಗಳನ್ನು ಹತ್ತುವುದು ಇತ್ಯಾದಿಯಾಗಿದ್ದರೆ, ಈ ಎಡಕುಮೇರಿ ಚಾರಣ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಇಲ್ಲಿ ಬರೀ ಬೆಟ್ಟ- ಗುಡ್ಡಗಳನ್ನು ಹತ್ತಿ, ನದಿಯನ್ನು ದಾಟುವುದಲ್ಲದೆ, ರೈಲ್ವೇ ಹಳಿಗಳ ಮೇಲೆ, ಸುರಂಗದೊಳಗೆ ನಡೆಯಬೇಕು.

ಮಂಗಳೂರು - ಬೆಂಗಳೂರು ರೈಲ್ವೇ ಮಾರ್ಗದಲ್ಲಿ ಸಕಲೇಶಪುರ, ಶಿರಾಡಿ ಆಸುಪಾಸಿನ ತಾಣವಾಗಿದ್ದು ಮಂಗಳೂರಿನಿಂದ ಸುಮಾರು ೧೦೦ ಕಿ.ಮೀ, ಸುಬ್ರಹ್ಮಣ್ಯದಿಂದ ಸುಮಾರು ೩೦ ಕಿ.ಮೀ, ಹಾಸನದಿಂದ ೬೫ ಕಿ.ಮೀ ಹಾಗೂ ಚಿಕ್ಕಮಗಳೂರಿನಿಂದ ಸುಮಾರು ೮೦ ಕಿ.ಮೀ ದೂರದಲ್ಲಿದೆ. ಎಡಕುಮೇರಿಗೆ ಚಾರಣವನ್ನು ಎರಡು ತಾಣಗಳಿಂದ ಆರಂಭಿಸಬಹುದು, ಒಂದು ಸಕಲೇಶಪುರದ ಸನಿಹದ ದೋಣಿಗಲ್ ನಿಂದ ಹಾಗೂ ಶಿರಾಡಿಘಾಟ್ ಸನಿಹದ ಗುಂಡ್ಯದಿಂದ.[]ದೋಣಿಗಲ್‍ನಿಂದ ಚಾರಣವನ್ನಾರಂಭಿಸಿಸದರೆ ಎಡಕುಮೇರಿಗೆ ಸರಿಸುಮಾರು ೧೭ ಕಿ.ಮೀ ಆಗುತ್ತದೆ. ಎಡಕುಮೇರಿ ರೈಲ್ವೇ ಟ್ರೆಕ್ ಅಥವಾ ಗ್ರೀನ್ ರೂಟ್ ಟ್ರೆಕ್ ಎಂದೇ ಈ ಚಾರಣ ಹೆಸರುವಾಸಿಯಾಗಿದೆ. ಬೆಟ್ಟವನ್ನು ಹತ್ತಿದ ಬಳಿಕ ರೈಲ್ವೇ ಹಳಿಗಳು ಸಿಗುವವು. ಅನೇಕ ಸುರಂಗಗಳಿಂದ ಕೂಡಿದ ಹಳಿಯಲ್ಲಿ ಚಾರಣ ಮುಂದೆಸಾಗುತ್ತದೆ. ಒಂದೆಡೆ ಬೆಟ್ಟವಾದರೆ ಇನ್ನೊಂದೆಡೆ ಕಂದಕಗಳು. ಕತ್ತಲೆಯಲ್ಲಿ ಬೆಳಕಿನ ಸಹಾಯವಿಲ್ಲದೇ ಈ ಸುರಂಗಗಳನ್ನು ದಾಟಲಾಗದು. ಸುಬ್ರಹ್ಮಣ್ಯದಿಂದ ಸಕಲೇಶಪುರವನ್ನು ಈ ಎಡಕುಮೇರಿಯ ಮೂಲಕ ತಲುಪಲು ಸರಿಸುಮಾರು ೨-೩ ಗಂಟೆಗಳು ಬೇಕಾಗುತ್ತದೆ. ಈ ಪ್ರಯಾಣವು ಒಟ್ಟಾಗಿ ೫೭ ಸುರಂಗಗಳು, ೧೧೦ ತಿರುವುಗಳು, ೨೫ ಸಣ್ಣಸಣ್ಣ ಝರಿಗಳು ಹಾಗೂ ೨೪೧ ಸೇತುವೆಗಳಿಂದ ಕೂಡಿದೆ.[] ಇದರೊಂದಿಗೆ ರೈಲುಗಳ ಸಂಚಾರ ಎಂದಿನಂತೆ ಇರುತ್ತವೆ. ಗೂಡ್ಸ್ ರೈಲುಗಳು ಕೂಡ ಹೋಗುತ್ತಿರುತ್ತವೆ.[]

ಸಹ ನೋಡಿ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "Key features of the framework are:". HMRDC. Retrieved 27 February 2024.
  2. "K'taka rains: Marooned for 4 days, 12 railway employees in Hassan finally rescued". News Karnataka. 16 August 2018. Retrieved 6 February 2024.
  3. "Two elephant calves run over by train deep inside Sakleshpura". Times of India. Retrieved 24 February 2024.
  4. http://paachuprapancha.blogspot.com/2009/03/blog-post_09.html
  5. https://www.trawell.in/karnataka/mangalore/yedakumeri-green-route-trek
  6. https://books.google.co.in/books?id=mCcMCAAAQBAJ&pg=PA9&lpg=PA9&dq=%E0%B2%8E%E0%B2%A1%E0%B2%95%E0%B3%81%E0%B2%AE%E0%B3%87%E0%B2%B0%E0%B2%BF+%E0%B2%9A%E0%B2%BE%E0%B2%B0%E0%B2%A3&source=bl&ots=WDWD_jcIVV&sig=cLcOiYycNvyIv9cwe3WG8gYIDVU&hl=en&sa=X&ved=2ahUKEwj1udm_56PfAhUIv48KHc30AGwQ6AEwCnoECAkQAQ#v=onepage&q=%E0%B2%8E%E0%B2%A1%E0%B2%95%E0%B3%81%E0%B2%AE%E0%B3%87%E0%B2%B0%E0%B2%BF%20%E0%B2%9A%E0%B2%BE%E0%B2%B0%E0%B2%A3&f=false
  7. http://newsullia.blogspot.com/2009/09/blog-post.html
  8. https://vijaykarnataka.indiatimes.com/lavalavk/tourism/-/articleshow/14339943.cms