ಎಚ್. ಗಿರಿಜಮ್ಮ

ಒಬ್ಬರು ವೈದ್ಯೆ ಹಾಗೂ ಕನ್ನಡ ಸಾಹಿತಿ

ಡಾ. ಎಚ್. ಗಿರಿಜಮ್ಮ ಒಬ್ಬರು ವೈದ್ಯೆ ಹಾಗೂ ಕನ್ನಡ ಸಾಹಿತಿ. ಹಲವು ಕಥಾಸಂಕಲನಗಳನ್ನು, ವೈದ್ಯವಿಜ್ಞಾನ ಕೃತಿಗಳನ್ನು ರಚಿಸಿದವರು. ಸಾಹಿತ್ಯ ಕ್ಷೇತ್ರದಲ್ಲಷ್ಟೇ ಅಲ್ಲದೆ ಚಲನಚಿತ್ರ, ಸಾಕ್ಷ್ಯಚಿತ್ರಗಳ ಬರೆವಣಿಗೆ, ನಿರ್ಮಾಣಗಳಲ್ಲಿ ಕೂಡ ತೊಡಗಿಸಿಕೊಂಡಿದ್ದರು.

ಡಾ. ಎಚ್. ಗಿರಿಜಮ್ಮ
ಡಾ. ಎಚ್. ಗಿರಿಜಮ್ಮ
ಜನನಹರಿಹರ, ಕರ್ನಾಟಕ
ಮರಣಆಗಸ್ಟ್ ೧೭, ೨೦೨೧
ದಾವಣಗೆರೆ, ಕರ್ನಾತಕ
ವೃತ್ತಿವೈದ್ಯೆ, ಲೇಖಕಿ
ರಾಷ್ಟ್ರೀಯತೆಭಾರತೀಯ
ಪ್ರಕಾರ/ಶೈಲಿಕಥೆ, ಕಾದಂಬರಿ, ವೈದ್ಯ ವಿಜ್ಞಾನ

ಪ್ರಭಾವಗಳು

ಇವರು ಹರಿಹರದಲ್ಲಿ ಜನಿಸಿದರು. ಪಿಯುಸಿವರೆಗೆ ದಾವಣಗೆರೆಯಲ್ಲಿ ವಿದ್ಯಾಭ್ಯಾಸ ಮಾಡಿದರು. ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆದು ಹರಿಹರದಲ್ಲಿ ವೈದ್ಯಕೀಯ ವೃತ್ತಿ ಆರಂಭಿಸಿದರು. ಅನಂತರ ಬೆಂಗಳೂರಿನಲ್ಲಿ ವೃತ್ತಿಜೀವನವನ್ನು ಮುಂದುವರೆಸಿದರು. ೨೦ಕ್ಕೂ ಹೆಚ್ಚು ವರ್ಷಗಳ ಕಾಲ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ್ದರು.[]

ವೃತ್ತಿ ಪ್ರವೃತ್ತಿ

ಬದಲಾಯಿಸಿ

ವೃತ್ತಿಯಿಂದ ವೈದ್ಯೆಯಾಗಿದ್ದು ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆಯಾಗಿದ್ದರು. ಪ್ರವೃತ್ತಿಯಿಂದ ಸಾಹಿತ್ಯ, ಚಲನಚಿತ್ರ, ಸಾಕ್ಷ್ಯಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದರು. ೧೫ ಟೆಲಿಫಿಲ್ಮ್‌ಗಳು, ೫ ಟೆಲಿ ಧಾರಾವಾಹಿಗಳು ಮತ್ತು ೧೦ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದ್ದಾರೆ.[] 'ಪಂಚವಟಿ', 'ಗಾಜಿನ ಮನೆ', 'ಮೇಘ ಮಲ್ಹಾರ' ಸಿನೆಮಾಗಳಿಗೆ ಕತೆ ಬರೆದಿದ್ದಾರೆ.[]'ಅಂತರಗಂಗೆ' ಎಂಬ ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ.

ಸಾಹಿತ್ಯ

ಬದಲಾಯಿಸಿ

ಹಲವು ವಾರಪತ್ರಿಕೆ, ಮಾಸಪತ್ರಿಕೆಗಳಲ್ಲಿ ಕತೆಗಳನ್ನು, ನೀಳ್ಗತೆಗಳನ್ನು ಬರೆದಿದ್ದಾರೆ. ಅವರು ಒಟ್ಟು ೫೦ ಕತೆಗಳನ್ನು, ಹದಿನೇಳು ಕಾದಂಬರಿ, ಒಂಭತ್ತು ಕಥಾ ಸಂಕಲನ, ಹತ್ತೊಂಬತ್ತು ವೈದ್ಯ ವಿಜ್ಞಾನದ ಕೃತಿಗಳನ್ನು ಬರೆದು ಪ್ರಕಟಿಸಿದ್ದಾರೆ.[] (ಕೆಳಗಿನದು ಅಪೂರ್ಣ ಪಟ್ಟಿ)

ಕಾದಂಬರಿಗಳು

ಬದಲಾಯಿಸಿ
  • ಮೇಘ ಮಂದಾರ (ಈ ಕಾದಂಬರಿಯು ಚಲನಚಿತ್ರವಾಗಿದೆ. ೧೯೯೨)
  • ಚಂದಮಾಮ
  • ತಮಸೋಮ ಜ್ಯೋತಿರ್ಗಮಯ
  • ಅಂಬರತಾರೆ
  • ಬೆಂಕಿಹೂ

ಕಥಾಸಂಕಲನಗಳು

ಬದಲಾಯಿಸಿ

ವೈದ್ಯ ವಿಜ್ಞಾನ ಕೃತಿಗಳು

ಬದಲಾಯಿಸಿ
  • ನಿಮ್ಮ ಮಗು
  • ಸ್ತ್ರೀ ದೇಹ
  • ಬಸಿರು
  • ಬಂಜೆತನ ಮತ್ತು ಪರಿಹಾರೋಪಾಯಗಳು
  • ಬಂಜೆತನದ ಬವಣೆಗಳು
  • ಮಕ್ಕಳು ಮನಸ್ಸು ಮತ್ತು ಬೆಳವಣಿಗೆ
  • ಮಕ್ಕಳು-ಮನಸು
  • ಸಂತಾನಹೀನತೆ
  • ಗರ್ಭಕೋಶದ ಖಾಯಿಲೆಗಳಿಗೆ ಚಿಕಿತ್ಸೆ[]
  • ಮನುಷ್ಯ ದೇಹ ಮತ್ತು ಆರೋಗ್ಯ (ಡಾ. ಪೂರ್ಣಿಮಾ ಭಟ್ ಸಹಲೇಖಕಿ)
  • ರಕ್ತದ ಕಾಯಿಲೆಗಳು

ಆತ್ಮಕಥನ

ಬದಲಾಯಿಸಿ
  • ಕಾಡತಾವ ನೆನಪುಗಳು

ಪ್ರಶಸ್ತಿ ಗೌರವಗಳು[]

ಬದಲಾಯಿಸಿ

೧೭ಆಗಸ್ಟ್ ೨೦೨೧ ರಂದು ದಾವಣಗೆರೆಯಲ್ಲಿ ನಿಧನರಾದರು.[] ಅವರಿಗೆ ೭೦ ವರ್ಷ ವಯಸ್ಸಾಗಿತ್ತು.

ಉಲ್ಲೇಖಗಳು

ಬದಲಾಯಿಸಿ
  1. ಸಂಜೆವಾಣಿ ವರದಿ, ೧೭ ಆಗಸ್ಟ್ ೨೦೨೧
  2. http://www.viggy.com/english/current_ananya.asp
  3. "Dr H Girijamma: Filmography". Chiloka.com. Retrieved 28 September 2021.
  4. ಡಾ ಹೆಚ್ ಗಿರಿಜಮ್ಮ ಅವರೊಂದಿಗೆ ಬಿ ಎನ್ ಮಲ್ಲೇಶ್ ಸಂದರ್ಶನ, ಅವಧಿ ಮ್ಯಾಗಜೀನ್
  5. https://kanaja.karnataka.gov.in/ebook/wp-content/uploads/2020/PDF/667.pdf
  6. ಡಾ. ಎಚ್. ಗಿರಿಜಮ್ಮ, ೧೭ ಆಗಸ್ಟ್ ೨೦೨೧, ಕನ್ನಡಪ್ರಭ
  7. "Five writers selected for Kannada Sahitya Academy awards". The Hindu. Bangalore. 25 February 2006. Retrieved 1 November 2014.
  8. ‘ಶ್ರೇಷ್ಠ ವೈದ್ಯ’ರಾಗಿ ಡಾ.ಸಿ.ಆರ್‌.ಚಂದ್ರಶೇಖರ್‌ ಹಾಗೂಡಾ.ಗಿರಿಜಮ್ಮ, ೦೭ ಡಿಸೆಂಬರ್ ೨೦೦೧, ಕನ್ನಡ ಒನ್ ಇಂಡಿಯಾ
  9. ಗಿರಿಜಮ್ಮ ನಿಧನ, ೧೭ ಆಗಸ್ಟ್ ೨೦೨೧, ವಿಜಯವಾಣಿ


ಹೊರಕೊಂಡಿಗಳು

ಬದಲಾಯಿಸಿ