ಊರ್ಧ್ವ ಪುಂಡ್ರವು ವೈಷ್ಣವರು ತಾವು ವಿಷ್ಣುವಿನ ಭಕ್ತರು ಎಂದು ತೋರಿಸಿಕೊಳ್ಳಲು ಧರಿಸುವ ತಿಲಕ. ಇದನ್ನು ಸಾಮಾನ್ಯವಾಗಿ ಹಣೆಯ ಮೇಲೆ ಹಚ್ಚಿಕೊಳ್ಳಲಾಗುತ್ತದೆ, ಆದರೆ ದೇಹದ ಇತರ ಭಾಗಗಳ ಮೇಲೂ ಹಚ್ಚಿಕೊಳ್ಳಬಹುದು. ಗುರುತುಗಳನ್ನು ದೈನಂದಿನ ಆಚರಣೆಯಾಗಿ ಅಥವಾ ವಿಶೇಷ ಸಂದರ್ಭಗಳಲ್ಲಿ ಮಾಡಿಕೊಳ್ಳಬಹುದು, ಮತ್ತು ಭಕ್ತನು ತಾನು ಯಾವ ನಿರ್ದಿಷ್ಟ ವಂಶಾವಳಿ ಅಥವಾ ಸಂಪ್ರದಾಯಕ್ಕೆ ಸೇರಿರುವನು ಎಂಬುದನ್ನು ಸೂಚಿಸುತ್ತವೆ. ಭಿನ್ನ ವೈಷ್ಣವ ಸಂಪ್ರದಾಯಗಳು ತಮ್ಮ ನಿರ್ದಿಷ್ಟ ವಂಶಾವಳಿಯ ಸಿದ್ಧಾಂತವನ್ನು ಆಧರಿಸಿದ ತಮ್ಮದೇ ಸ್ವಂತದ ವಿಶಿಷ್ಟ ಶೈಲಿಯ ತಿಲಕವನ್ನು ಹೊಂದಿವೆ. ಸಾಮಾನ್ಯ ತಿಲಕ ಮಾದರಿಯಲ್ಲಿ ಎರಡು ಅಥವಾ ಹೆಚ್ಚು ಉದ್ದನೆಯ/ಲಂಬವಾದ ರೇಖೆಗಳಿರುತ್ತವೆ. ಇದು ಇಂಗ್ಲಿಷ್‍ನ U ಅಕ್ಷರವನ್ನು ಹೋಲುತ್ತದೆ. ಇದು ಸಾಮಾನ್ಯವಾಗಿ ವಿಷ್ಣುವಿನ ಪಾದಗಳನ್ನು ಪ್ರತಿನಿಧಿಸುತ್ತದೆ.

ಎಡಕ್ಕೆ: ವೈಷ್ಣವ ಹಿಂದು ತಿಲಕವನ್ನು ಧರಿಸಿದ್ದಾನೆ (ಊರ್ಧ್ವ ಪುಂಡ್ರ).[]
ಬಲಕ್ಕೆ: ತಿಲಕವನ್ನು ಹಚ್ಚಿಕೊಂಡಿರುವ ಒಬ್ಬ ಶೈವ ಹಿಂದು (ತ್ರಿಪುಂಡ್ರ)[][]

ಉಲ್ಲೇಖಗಳು

ಬದಲಾಯಿಸಿ
  1. James Lochtefeld (2002), "Urdhvapundra", The Illustrated Encyclopedia of Hinduism, Vol. 2: N–Z, Rosen Publishing, ISBN 978-0823931798, page 724
  2. Deussen, Paul (1997). Sixty Upanishads of the Veda. Motilal Banarsidass. pp. 789–790. ISBN 978-81-208-1467-7.
  3. Gautam Chatterjee (2003), Sacred Hindu Symbols, Abhinav Publications, ISBN 978-8170173977, pages 11, 42, 57-58