ಉಷಾ ಮಂಗೇಶ್ಕರ್

ಉಷಾ ಮಂಗೇಶ್ಕರ್ ಅವರು ಹಿಂದಿ, ಬಂಗಾಳಿ, ಮರಾಠಿ, ಕನ್ನಡ, ನೇಪಾಳಿ, ಗುಜರಾತಿ ಮತ್ತು ಅಸ್ಸಾಮಿ ಹಾಡುಗಳಿಗೆ ಧ್ವನಿಮುದ್ರಿಸಿದ ಭಾರತೀಯ ಹಿನ್ನೆಲೆ ಗಾಯಕಿ.[೧]

ಉಷಾ ಮಂಗೇಶ್ಕರ್
Usha Mangeshkar 2007 - still 19426 crop.jpg
ಹಿನ್ನೆಲೆ ಮಾಹಿತಿ
ಜನನ (1935-12-15) ೧೫ ಡಿಸೆಂಬರ್ ೧೯೩೫ (ವಯಸ್ಸು ೮೭)
ಬಾಂಬೆ, ಬಾಂಬೆ ಪ್ರೆಸಿಡಿನ್ಸಿ, ಬ್ರಿಟೀಷ್ ಭಾರತ
ಸಂಗೀತ ಶೈಲಿಭಾರತೀಯ ಶಾಸ್ತ್ರೀಯ ಸಂಗೀತ, ಹಿನ್ನೆಲೆ ಗಾಯಕಿ
ವೃತ್ತಿಹಾಡುಗಾರ್ತಿ
ವಾದ್ಯಗಳುಗಾಯನ
ಸಕ್ರಿಯ ವರ್ಷಗಳು1954–

ವೈಯಕ್ತಿಕ ಜೀವನಸಂಪಾದಿಸಿ

ಉಷಾ ಮಂಗೇಶ್ಕರ್ ಅವರು ಪಂಡಿತ್ ದೀನನಾಥ್ ಮಂಗೇಶ್ಕರ್ ಮತ್ತು ಸೇವಂತಿ (ಶೂಧಮತಿ) ಅವರ ಎರಡನೇ ಕಿರಿಯ ಮಗಳು. ಆಶಾ ಭೋಂಸ್ಲೆ ಮತ್ತು ಮೀನಾ ಖಡಿಕಾರ್ ಇವರ ಕಿರಿಯ ಹಾಗೂ ಹಿರಿಯ ಸಹೋದರಿಯರು, ಹಿರಿಯಣ್ಣ ಹೃದಯನಾಥ್ ಮಂಗೇಶ್ಕರ್[೨]. ೧೯೭೫ ರಲ್ಲಿ ಜೈ ಸಂತೋಷಿ ಮಾ ಚಿತ್ರದ ಕೆಲವು ಭಕ್ತಿಗೀತೆಗಳನ್ನು ಹಾಡಿದ ನಂತರ ಅವರು ಹಿನ್ನೆಲೆ ಗಾಯಕಿಯಾಗಿ ಬೆಳಕಿಗೆ ಬಂದರು. ಆ ಚಿತ್ರದಲ್ಲಿನ "ಮೈನ್ ಟು ಆರ್ಟಿ" ಎಂಬ ಹಾಡಿಗಾಗಿ ಫಿಲ್ಮ್ಫೇರ್ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡರು.

ವೃತ್ತಿಜೀವನಸಂಪಾದಿಸಿ

ಉಷಾ ಚಿತ್ರಕಲೆಯಲ್ಲೂ ಸಹ ಬಲವಾದ ಆಸಕ್ತಿ ಹೊಂದಿದ್ದರು. ಅವಳ ಪ್ರಸಿದ್ಧ ಹಾಡು "ಮುಂಗ್ಲಾ",ಅವರ ಮರಾಠಿ ಚಿತ್ರ ಪಿಂಜಾರ ಗೀತೆಗಳಿಗೆ ಹೆಸರುವಾಸಿಯಾಗಿದೆ. ಅವರು ದೂರದರ್ಶನಕ್ಕಾಗಿ ಫೂಲ್ವಂತಿ ಎಂಬ ಸಂಗೀತ ನಾಟಕವನ್ನು ಸಹ ನಿರ್ಮಿಸಿದ್ದರು.

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳಸಂಪಾದಿಸಿ

  • ೧೯೭೫ ರಲ್ಲಿ ಜೈ ಸಂತೋಶಿ ಮಾ ಚಿತ್ರಕ್ಕೆ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ಬಿಎಫ್ಜೆಎ ಪ್ರಶಸ್ತಿ ನೀಡಾಲಾಯಿತು. ಅದೇ ಚಿತ್ರದ "ಮೇನ್ ಟು ಆರ್ಟಿ" ಎಂಬ ಹಾಡು ಫಿಲ್ಮ್ಫೇರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ.
  • ೧೯೭೭ ರ ಇನ್ಕಾರ್ ಚಿತ್ರದ "ಮಂಗ್ತಾ ಹೈ ತು ಆಜಾ" ಹಾಡಿಗಾಗಿ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ಫಿಲ್ಮ್ಫೇರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ.
  • ೧೯೮೦ ರಲ್ಲಿ ಇನ್ಕಾರ್ ಚಿತ್ರದ "ಹಮ್ಸೆ ನಾಜರ್ ತೊ ಮಿಲಾವೊ" ಗಾಗಿ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ಫಿಲ್ಮ್ಫೇರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ.

ಜನಪ್ರಿಯ ಗೀತೆಗಳುಸಂಪಾದಿಸಿ

  • ೧೯೫೨ ರ ಸುಭಾ ಕಾ ತಾರಾ ಚಿತ್ರದ "ಭಭಿ ಆಯಿ ಬಡಿ ಧೂಮ್ ಧಮ್ ಸೆ ಮೇರಿ ಭಭಿ ಆಯಿ"
  • ೧೯೫೨ ರ ಜೈ ಸಂತೋಶಿ ಚಿತ್ರದ "ಮೇರ್ ತು ಆರ್ತಿ ಉತಾರೂನ್"
  • ೧೯೬೭ ರ ಕನ್ನಡದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದ "ಯಾರಿವ ನನ್ ಮನ ಮರುಳಾಗಿಸಿದವ"
  • ೧೯೭೮ ರ ಖಟ್ಟ ಮೀಠಾ ಚಿತ್ರದ "ಖಟ್ಟ ಮೆಟೆಟಾ"
  • ೧೯೭೯ ರ ತರಾನಾದಿಂದ "ಸುಲ್ತಾನ ಸುಲ್ತಾನ"
  • ೧೯೭೯ ರ ಕಾಲಾ ಪತ್ತರ್ ಚಿತ್ರದ "ಮುಜೆ ಪ್ಯಾರ್ ಕಾ ತೋಫಾ ದೇಕೆ"[೩]

ಉಲ್ಲೇಖಗಳುಸಂಪಾದಿಸಿ

  1. https://www.bollywoodlife.com/celeb/usha-mangeshkar/
  2. https://www.thehindu.com/features/friday-review/music/When-Lata-Mangeshkar-took-a-break-from-singing/article16816177.ece
  3. https://gaana.com/artist/usha-mangeshkar-2