ಉಮಿಯಾಮ್ ಸರೋವರ (ಸ್ಥಳೀಯವಾಗಿ ಡಾಮ್ ಸೇಟ್ ಎಂದು ಪರಿಚಿತವಾಗಿದೆ) ಭಾರತದ ಮೇಘಾಲಯ ರಾಜ್ಯದ ಶಿಲ್ಲಾಂಗ್ ನಗರದ ೧೫ ಕಿ.ಮಿ. ಉತ್ತರಕ್ಕಿರುವ ಗುಡ್ಡಗಳಲ್ಲಿರುವ ಒಂದು ಜಲಾಶಯವಾಗಿದೆ. ೧೯೬೦ರ ದಶಕದ ಆರಂಭದ ವರ್ಷಗಳಲ್ಲಿ ಉಮಿಯಾಮ್ ನದಿಗೆ ಅಣೆಕಟ್ಟು ಕಟ್ಟಿ ಇದನ್ನು ಸೃಷ್ಟಿಸಲಾಯಿತು. ಸರೋವರ ಮತ್ತು ಅಣೆಕಟ್ಟಿನ ಪ್ರಧಾನ ಜಲಾನಯನ ಪ್ರದೇಶವು ೨೨೦ ಚದರ ಕಿ.ಮಿ. ಗಿಂತ ಹೆಚ್ಚು ಪ್ರದೇಶದಲ್ಲಿ ಹರಡಿದೆ.

ಪ್ರವಾಸಿ ತಾಣ ಬದಲಾಯಿಸಿ

ಈ ಸರೋವರವು ಮೇಘಾಲಯ ರಾಜ್ಯದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಜಲಕ್ರೀಡೆ ಹಾಗೂ ಸಾಹಸ ಸೌಕರ್ಯಗಳಿಗೆ ಜನಪ್ರಿಯ ಗಮ್ಯಸ್ಥಾನವೂ ಆಗಿದೆ. ತೊಗಲ ದೋಣಿವಿಹಾರ, ವಾಟರ್ ಸೈಕ್ಲಿಂಗ್, ಸ್ಕೂಟಿಂಗ್ ಮತ್ತು ದೋಣಿವಿಹಾರಕ್ಕಾಗಿ ಪ್ರವಾಸಿಗಳು ಈ ತಾಣಕ್ಕೆ ಭೇಟಿನೀಡುತ್ತಾರೆ.

ವಿದ್ಯುತ್ ಉತ್ಪಾದನೆಗೆ ನೀರನ್ನು ಸಂಗ್ರಹಿಸುವುದರ ಜೊತೆಗೆ, ಈ ಸರೋವರವು ಸೂಕ್ಷ್ಮ, ಮಧ್ಯಮ ಹಾಗೂ ಸ್ಥೂಲ ಮಟ್ಟಗಳಲ್ಲಿ ಅಸಂಖ್ಯಾತ ಪರಿಸರ ವ್ಯವಸ್ಥಾ ಸೇವೆಗಳನ್ನೂ ಒದಗಿಸುತ್ತದೆ. ನದಿಯ ದಿಕ್ಕಿನಲ್ಲಿ ನೀರಾವರಿ, ಮೀನುಗಾರಿಕೆ ಮತ್ತು ಕುಡಿಯುವ ನೀರು ಸ್ಥಳೀಯ ಮಾನವಜನ್ಯ ಅಗತ್ಯಗಳಿಗೆ ಒದಗಿಸುತ್ತದೆ.

ಛಾಯಾಂಕಣ ಬದಲಾಯಿಸಿ

ಹೊರಗಿನ ಕೊಂಡಿಗಳು ಬದಲಾಯಿಸಿ