ಉದಯಗಿರಿ ಗುಹೆಗಳು

ದ್ವಂದ್ವ ನಿವಾರಣೆ

ಉದಯಗಿರಿ ಗುಹೆಗಳು ಭಾರತದಲ್ಲಿನ ಅತ್ಯಂತ ಹಳೆಯ ಹಿಂದೂ ವಿಗ್ರಹಗಳು ಮತ್ತು ಗುಹಾದೇಗುಲಗಳಲ್ಲಿ ಕೆಲವನ್ನು ಮುಖ್ಯ ಲಕ್ಷಣವಾಗಿ ಹೊಂದಿವೆ.[][] ಇವು ಮಧ್ಯ ಪ್ರದೇಶ ರಾಜ್ಯದಲ್ಲಿನ ವಿದೀಶಾ ನಗರದ ಹತ್ತಿರ ಸ್ಥಿತವಾಗಿವೆ. ಗುಪ್ತರ ಕಾಲದ ಅತ್ಯಂತ ಪ್ರಮುಖ ಪುರಾತತ್ವ ತಾಣಗಳಲ್ಲಿ ಒಂದಾಗಿರುವ ಉದಯಗಿರಿ ಗುಡ್ಡಗಳು ಮತ್ತು ಅವುಗಳ ಗುಹೆಗಳು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ರಕ್ಷಣೆಯಲ್ಲಿರುವ ಒಂದು ಪುರಾತತ್ವ ತಾಣವಾಗಿವೆ.

ಉದಯಗಿರಿ ಬೇಸ್ ನದಿಗೆ ಅತಿ ಸನಿಹದಲ್ಲಿ ಎರಡು ತಗ್ಗಾದ ಗುಡ್ಡಗಳನ್ನು ಹೊಂದಿದೆ. ಪ್ರಾಚೀನ ನಗರ ತಾಣವಾದ ಬೇಸ್‍ನಗರ್‍ನ ಮಣ್ಣಿನ ಗೋಡೆಗಳಿಂದ ಸ್ವಲ್ಪ ದೂರದಲ್ಲಿ ನೆಲೆಗೊಂಡಿರುವ ಉದಯಗಿರಿ ವಿದಿಶಾ ಪಟ್ಟಣದಿಂದ ೪ ಕಿ.ಮಿ. ದೂರ ಮತ್ತು ಬೌದ್ಧ ತಾಣವಾದ ಸಾಂಚಿಯಿಂದ ೧೩ ಕಿ.ಮಿ. ದೂರವಿದೆ. ಉದಯಗಿರಿಯು ಕ್ರಿ.ಶ. ಐದನೇ ಶತಮಾನದ ಆರಂಭಿಕ ವರ್ಷಗಳಲ್ಲಿ ಗುಡ್ಡದ ಬದಿಯಲ್ಲಿ ಕಲ್ಲಿನಲ್ಲಿ ಕತ್ತರಿಸಿದ ದೇಗುಲಗಳು ಮತ್ತು ವಿಗ್ರಹಗಳ ಸರಣಿಗೆ ಹೆಸರುವಾಸಿಯಾಗಿದೆ. ಈ ತಾಣವು ಹಿಂದೂ ದೇವತೆ ವಿಷ್ಣುವಿನ ಅವತಾರವಾದ ಹಂದಿ ತಲೆಯ ವರಾಹದ ಪ್ರಾಚೀನ ಸ್ಮಾರಕ ಉಬ್ಬು ಶಿಲ್ಪಕ್ಕಾಗಿ ಗಮನಾರ್ಹವಾಗಿದೆ. ಈ ಶಿಲ್ಪದಲ್ಲಿ ಹಿಂದೂ ಪುರಾಣದಲ್ಲಿ ವರ್ಣಿಸಿದಂತೆ ವರಾಹನು ಸಾಂಕೇತಿಕವಾಗಿ ಭೂದೇವಿಯು ಹಂದಿಯ ಕೋರೆಹಲ್ಲಿಗೆ ಅಂಟಿಕೊಂಡಿರುವಂತೆ ಪ್ರತಿನಿಧಿತವಾದ, ಭೂಮಿಯನ್ನು ಕಾಪಾಡುತ್ತಿರುವಂತೆ ತೋರಿಸಲಾಗಿದೆ. ಈ ತಾಣವು ಎರಡನೇ ಚಂದ್ರಗುಪ್ತ (ಸು. ೩೭೫-೪೧೫) ಮತ್ತು ಮೊದಲನೇ ಕುಮಾರಗುಪ್ತನ (ಸು. ೪೧೫-೪೫೫) ಆಳ್ವಿಕೆ ಕಾಲಕ್ಕೆ ಸೇರಿದ ಗುಪ್ತ ರಾಜವಂಶದ ಪ್ರಮುಖ ಶಾಸನಗಳನ್ನು ಹೊಂದಿದೆ. ಈ ಅವಶೇಷಗಳ ಜೊತೆಗೆ, ಉದಯಗಿರಿಯು ಬಂಡೆ ಆಸರೆಗಳು ಹಾಗೂ ಕಲ್ಲುಕೆತ್ತನೆಗಳು, ಪಾಳುಬಿದ್ದ ಕಟ್ಟಡಗಳು, ಶಾಸನಗಳು, ಜಲ ವ್ಯವಸ್ಥೆಗಳು, ದುರ್ಗಗಳು ಮತ್ತು ವಸತಿ ದಿಬ್ಬಗಳ ಸರಣಿಯನ್ನು ಹೊಂದಿದೆ, ಇವೆಲ್ಲವನ್ನು ಕೇವಲ ಭಾಗಶಃ ತನಿಖೆಮಾಡಲಾಗಿದೆ. ಈ ಸಂಕೀರ್ಣ ಇಪ್ಪತ್ತು ಗುಹೆಗಳನ್ನು ಹೊಂದಿದೆ, ಇವುಗಳಲ್ಲಿ ಒಂದು ಜೈನ ಧರ್ಮಕ್ಕೆ ಸಮರ್ಪಿತವಾಗಿದೆ ಮತ್ತು ಉಳಿದವು ಹಿಂದೂ ಧರ್ಮಕ್ಕೆ ಸಮರ್ಪಿತವಾಗಿವೆ.

ಉಲ್ಲೇಖಗಳು

ಬದಲಾಯಿಸಿ
  1. Fred Kleiner (2012), Gardner’s Art through the Ages: A Global History, Cengage, ISBN 978-0495915423, page 434
  2. Margaret Prosser Allen (1992), Ornament in Indian Architecture, University of Delaware Press, ISBN 978-0874133998, pages 128-129