ಉತ್ತರ ಕರ್ನಾಟಕದಲ್ಲಿ ಬೌದ್ಧಧರ್ಮ


ಕೆಲವು ದಶಕಗಳ ಹಿಂದೆ ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿರುವ ಅಶೋಕನ ಶಾಸನದ ಶೋಧನೆ ಮತ್ತು ಸನ್ನತಿಯಲ್ಲಿನ ಪುರಾತತ್ವಶಾಸ್ತ್ರದ ಉತ್ಖನನಗಳ ಮೂಲಕ ಬೌದ್ಧ ವಸಾಹತುಗಳು ಬೌದ್ಧಧರ್ಮದ ಅಭಿವೃದ್ಧಿಯಲ್ಲಿ ಕರ್ನಾಟಕದ ಐತಿಹಾಸಿಕ ಮಹತ್ವವನ್ನು ಬೆಳಗಿಸಿವೆ .

1954-95 ರ ಅವಧಿಯಲ್ಲಿ, 81 ಶಿಲಾಶಾಸನಗಳು, 2 ಸ್ತೂಪಗಳು, 3ದಿಬ್ಬಗಳು ಮತ್ತು ರಕ್ಷಣಾ ಕೋಟೆಯನ್ನು ಸನ್ನತಿ ಯಲ್ಲಿ ಸಂಶೋಧಿಸಲಾಗಿದೆ. . []

ಇತಿಹಾಸ

ಬದಲಾಯಿಸಿ

ಬೌದ್ಧಧರ್ಮವು ವಾಸ್ತವವಾಗಿ ಚಕ್ರವರ್ತಿ ಅಶೋಕನ ಸಮಯದ ಮೊದಲು ಕರ್ನಾಟಕಕ್ಕೆ ಪ್ರವೇಶಿಸಿತು ಮತ್ತು ಇದು 3 ನೇ ಶತಮಾನ ಬಿ.ಸಿ.ಮತ್ತು 3 ನೇ ಶತಮಾನ ಎ.ಡಿ. ನಡುವೆ ತನ್ನ ಉಚ್ಛ್ರಾಯವನ್ನು ಅನುಭವಿಸಿತು.

ಮೌರ್ಯರು

ಬದಲಾಯಿಸಿ

ಬೌದ್ಧಧರ್ಮವು ಮೌರ್ಯರ ಕಾಲದಲ್ಲಿ ಮೊದಲು ಹೊರಹೊಮ್ಮಿತು.ಅಂದಿನ ಕಾಲದಲ್ಲಿ ಮಿಷನರಿಗಳು ಉತ್ಸಾಹದಿಂದ ಇದ್ಧವು. ಕರ್ನಾಟಕದ ವಿವಿಧ ಭಾಗಗಳು ಮೌರ್ಯರ ಆಡಳಿತಕ್ಕೆ ಒಳಪಟ್ಟಿದ್ದವು. ಚಂದ್ರಗುಪ್ತ ಮೌರ್ಯನ ಪುತ್ರ ಬಿಂದುಸಾರ (298-273 ಕ್ರಿ.ಪೂ.) ಮತ್ತು ಬಿಂದಸಾರನ ಮಗ ಅಶೋಕ (269-232 ಕ್ರಿ.ಪೂ.) ಇಲ್ಲಿ ಅವರ ಕೆಲವು ಶಾಸನಗಳನ್ನು ಕೆತ್ತಿಸಿದರು. ಅಶೋಕನ ಮೊಮ್ಮಗ ಸಂಪ್ರತಿ ಚಂದ್ರಗುಪ್ತನು ತನ್ನ ಕೊನೆಯ ದಿನಗಳನ್ನು ಕಳೆಯಲು ಶ್ರವಣಬೆಳಗೋಳಕ್ಕೆ ಬಂದಿದ್ದನೆಂದು ನಂಬಲಾಗಿದೆ.

ಹನ್ನೊಂದು ಅಶೋಕನ ಶಾಸನಗಳು  :

4 ಬಳ್ಳಾರಿ ಜಿಲ್ಲೆಯಲ್ಲಿ ,

3 ರಾಯಚೂರು ಜಿಲ್ಲೆಯಲ್ಲಿ ಮತ್ತು

ಚಿತ್ರದುರ್ಗ ಜಿಲ್ಲೆಯ ಇತರ ಸ್ಥಳಗಳಲ್ಲಿ 3 ಶಾಸನಗಳು

ಕರ್ನಾಟಕದಲ್ಲಿ ಮೌರ್ಯರ ಉಪಸ್ಥಿತಿಗೆ ಇದು ಸಾಕ್ಷಿಯಾಗುತ್ತದೆ.

ಶಾತವಾಹನ

ಬದಲಾಯಿಸಿ

ಶಾತವಾಹನರು ಕರ್ನಾಟಕದ ರಾಜವಂಶದವರಾಗಿದ್ದರು. ಧಾರವಾಡ ಮತ್ತು ಬಳ್ಳಾರಿ ಜಿಲ್ಲೆಗಳನ್ನು ಶಾತವಾಹನರ ಪ್ರದೇಶ ಎಂದು ಕರೆಯುತ್ತಾರೆ. ಅವರ ಕೆಲವು ರಾಜರನ್ನು ಕರ್ನಾಟಕದ ಆಡಳಿತಗಾರರೆಂದು ಕರೆಯಲಾಗುತ್ತಿತ್ತು.ಕರ್ನಾಟಕದ ಹಳೆಯ ಹೆಸರು ಕುಂತಲ

ಶಾತವಾಹನರು ಮೌರ್ಯರ ಉತ್ತರಾಧಿಕಾರಿಗಳಾಗಿದ್ದು, ಬನವಾಸಿಯಲ್ಲಿ ಆಳ್ವಿಕೆ ನಡೆಸುತ್ತಿದ್ದರು. ಗೌತಮಪುತ್ರ ಶಾತಕರ್ಣಿಯ ಕುರಿತು ನಾಸಿಕ್ ಶಾಸನ ಮತ್ತು ಹೀರೆಅಡಗಲಿ ತಾಮ್ರ ಫಲಕಗಳಿಂದ ಸ್ಪಷ್ಟವಾಗಿದೆ.

ಗುಲ್ಬರ್ಗ ಜಿಲ್ಲೆಯ ಸನ್ನತಿ ಮತ್ತು ಬೆಳಗಾವಿಗೆ ಸಮೀಪದಲ್ಲಿರುವ ವದ್ಗೋಹನ್ ಮಾದವಪುರ ಮತ್ತು ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿಯ ಬಳಿ ಅವರ ಕಾಲದ ಉಳಿದ ಸ್ಮಾರಕಗಳಿವೆ. ಉತ್ತರ ಕನ್ನಡದ ಬನವಾಸಿ ಪ್ರದೇಶ ಹಾಗೂ ಧಾರವಾಡ ಜಿಲ್ಲೆಯ ವಾಸನ್ ಎಂಬಲ್ಲಿ ತಮ್ಮ ಶಾಸನಗಳನ್ನು ಹೊಂದಿವೆ ಮತ್ತು ಇಲ್ಲಿ ಇಟ್ಟಿಗೆ ದೇವಸ್ಥಾನವಿದೆ.

ಉಲ್ಲೇಖಗಳು

ಬದಲಾಯಿಸಿ
  1. "Sannati set to regain its past glory". Archived from the original on 2013-01-25. Retrieved 2008-09-12.