ಈಥೇನ್
ಈಥೇನ್ ಪರ್ಯಾಪ್ತ ಆಲಿಫ್ಯಾಟಿಕ್ ಹೈಡ್ರೋಕಾರ್ಬನ್ನುಗಳಾದ ಪ್ಯಾರಾಫಿನ್ ಅಥವಾ ಆಲ್ಕೇನ್ ವರ್ಗಕ್ಕೆ ಸೇರಿದ ಸಂಯುಕ್ತ. ರಚನಾ ಸೂತ್ರ C2H6.[೧]
ಪಡೆಯುವ ವಿಧಾನಗಳು
ಬದಲಾಯಿಸಿವಿಧಾನ-೧
ಬದಲಾಯಿಸಿನೈಸರ್ಗಿಕ ಅನಿಲದಲ್ಲಿ ೫% - ೨೦% ಈಥೇನಿರುತ್ತದೆ. ಮೀಥೇನ್ ತಯಾರಿಸಲು ನಾವು ಬಳಸುವ ಸಾರ್ವತ್ರಿಕ ವಿಧಾನಗಳು ಇದಕ್ಕೂ ಅನ್ವಯಿಸುತ್ತವೆ. ಸೋಡಿಯಂ ಪ್ರೊಪಿಯೊನೇಟನ್ನು ಸೋಡಾ ಸುಣ್ಣದೊಡನೆ ಕಾಯಿಸಿ ಈಥೇನ್ ಪಡೆಯಬಹುದು.
ವಿಧಾನ-೨
ಬದಲಾಯಿಸಿಈಥೈಲ್ ಆಲ್ಕೊಹಾಲಿನ ಸಮ್ಮುಖದಲ್ಲಿ ಸತು-ತಾಮ್ರದ ಜೋಡಿಯಿಂದ ಈಥೈಲ್ ಅಯೋಡೈಡನ್ನು ಅಪಕರ್ಷಿಸಿದಾಗ ಪರಿಶುದ್ಧ ಈಥೇನ್ ದೊರೆಯುವುದು.
CH3.CH2.I + 2[H] → CH3-CH3 + HI
ವಿಧಾನ-೩
ಬದಲಾಯಿಸಿಶುಷ್ಕ ಈಥರ್ ದ್ರಾವಣದಲ್ಲಿ ಮೀಥೈಲ್ ಅಯೋಡೈಡ್ ಮತ್ತು ಶುದ್ಧ ಸೋಡಿಯಂ ಲೋಹ ಪರಸ್ಪರ ವರ್ತಿಸಿದಾಗ ಈಥೇನ್ ಹುಟ್ಟುವುದು.
ವುರ್ಟ್ಸ್ ಎಂಬ ಫ್ರೆಂಚ್ ರಸಾಯನ ವಿಜ್ಞಾನಿ ೧೮೫೫ರಲ್ಲಿ ಈ ಕ್ರಿಯಾ ವಿಧಾನವನ್ನು ಕಂಡುಹಿಡಿದ. ಆದ್ದರಿಂದ ಇದಕ್ಕೆ ವುರ್ಟ್ಸ್ ಸಂಯೋಜನೆ ಎಂದು ಹೆಸರಾಗಿದೆ.
ವಿಧಾನ-೪
ಬದಲಾಯಿಸಿಸೋಡಿಯಂ ಅಸಿಟೇಟಿನ ಪ್ರಬಲ ನೀರಿನ ದ್ರಾವಣವನ್ನು ಪ್ಲ್ಯಾಟಿನಂ ಧನಧ್ರುವದ ನೆರವಿನಿಂದ ವಿದ್ಯುದ್ವಿಭಜನೆ ಮಾಡಿದಾಗ ಈಥೇನ್ ಮತ್ತು ಇಂಗಾಲದ ಡೈಆಕ್ಸೈಡುಗಳು ಧನುಧ್ರುವದಲ್ಲೂ ಸೋಡಿಯಂ ಹೈಡ್ರಾಕ್ಸೈಡ್ ಮತ್ತು ಹೈಡ್ರೊಜನ್ ಋಣ ಧ್ರುವದಲ್ಲೂ ಬಿಡುಗಡೆಯಾಗುವುವು.
2CH3COONa + 2H2O → CH3CH3 + 2NaOH+ 2CO2 + H2
೧೮೪೮ರಲ್ಲಿ ಜರ್ಮನ್ ರಸಾಯನಶಾಸ್ತ್ರ ವಿಜ್ಞಾನಿ ಎ.ಡಬ್ಲು.ಎಚ್.ಕೋಲ್ಬೆ ಈ ಕ್ರಿಯಾ ವಿಧಾನವನ್ನು ಶೋಧಿಸಿದುದರಿಂದ ಇದಕ್ಕೆ ಕೋಲ್ಬೆ ಸಂಯೋಜನೆ ಎಂಬ ಹೆಸರು ಬಂದಿದೆ.
ವಿಧಾನ-೫
ಬದಲಾಯಿಸಿಎಥಿಲೀನ್ ಮತ್ತು ಹೈಡ್ರೋಜನ್ನುಗಳ ಮಿಶ್ರಣವನ್ನು ಉನ್ನತ ಉಷ್ಣತೆಯಲ್ಲಿ ಸೂಕ್ಷ್ಮಕಣಗಳ ರೂಪದಲ್ಲಿರುವ ನಿಕ್ಕಲ್ ವೇಗವರ್ಧಕದ ಮೇಲೆ ಹಾಯಿಸಿಯೂ ಈಥೇನ್ ತಯಾರಿಸಬಹುದು.
CH2=CH2 + H2 → CH3-CH3
ಈಥೇನ್‍ನ ಗುಣಗಳು
ಬದಲಾಯಿಸಿಭೌತ ಮತ್ತು ರಾಸಾಯನಿಕ ಗುಣಗಳಲ್ಲಿ ಈಥೇನ್ ಮೀಥೇನನ್ನು ಹೋಲುವುದು. ಇದು ಬಣ್ಣ ವಾಸನೆಗಳಿಲ್ಲದ ಅನಿಲ. ೪೦ ಸೆಂ.ಗ್ರೇ. ಉಷ್ಣತೆ ಮತ್ತು ೪೬ ವಾಯುಭಾರ ಒತ್ತಡದಲ್ಲಿ ದ್ರವರೂಪ ತಳೆಯುವುದು (ಕುದಿಯುವ ಬಿಂದು -೮೮.೬ ಸೆಂ.ಗ್ರೇ.) ನೀರಿನಲ್ಲಿ ಅದ್ರಾವ್ಯವಾದರೂ ಆಲ್ಕೊಹಾಲಿನಲ್ಲಿ ಲೀನವಾಗುವುದು. ರಾಸಾಯನಿಕವಾಗಿ ಮೀಥೇನಿನಂತೆಯೇ ಜಡವಾದ ಅನಿಲ. ಕ್ಲೋರಿನ್ನಿನೊಡನೆ ವರ್ತಿಸಿದಾಗ ಈಥೇನಿನ ಅಣುವಿನಲ್ಲಿರುವ ಹೈಡ್ರೊಜನ್ ಪರಮಾಣುಗಳು ಕ್ರಮೇಣ ಪಲ್ಲಟಿತವಾಗುವುವು.
C2H6 + Cl2 → C2H5Cl + HCl (ethane) (chloroethane) C2H5Cl + Cl2 → C2H4Cl2 + HCl (chloroethane) (dichloroethane) C2H4Cl2 + Cl2 → C2H3Cl3 + HCl (dichloroethane) (trichloroethane) C2H3Cl3 + Cl2 → C2H2Cl4 + HCl (trichloroethane) (tetrachloroethane) C2H2Cl4 + Cl2 → C2HCl5 + HCl (tetrachloroethane) (pentachloroethane) C2HCl5 + Cl2 → C2Cl6 + HCl (pentachloroethane) (hexachloroethane)
ಸುಮಾರು ೮೦೦o ಸೆಂ.ಗ್ರೇ. ಉಷ್ಣತೆಯಲ್ಲಿ ಹೈಡ್ರೊಜನನ್ನು ಕಳೆದುಕೊಂಡು ಎಥಿಲೀನ್ ಆಗುವುದು. ನೈಸರ್ಗಿಕ ಅನಿಲದಲ್ಲಿರುವ ಈಥೇನ್ ಮತ್ತು ಪ್ರೋಪೇನ್ ಭಾಗವನ್ನು ಹೀಗೆ ಲಾಭದಾಯಕವಾಗಿ ಎಥಿಲೀನಿಗೆ ಪರಿವರ್ತಿಸುವರು. ಶೈತ್ಯಕಾರಕ ಯಂತ್ರಗಳಲ್ಲಿ ಈಥೇನನ್ನು ಸಹ ಉಪಯೋಗಿಸುತ್ತಾರೆ.
ಉಲ್ಲೇಖಗಳು
ಬದಲಾಯಿಸಿಹೊರಗಿನ ಕೊಂಡಿಗಳು
ಬದಲಾಯಿಸಿ- International Chemical Safety Card 0266
- Market-Driven Evolution of Gas Processing Technologies for NGLs
- Staggered and eclipsed ethane