ಇಲೈ ವಿಟ್ನಿ
ಇಲೈ ವಿಟ್ನಿ, (Eli Whitney Junior) (ಡಿಸೆಂಬರ್,೮, ೧೭೬೫-ಜನವರಿ ೮, ೧೮೨೫) ಒಬ್ಬ ಅಮೇರಿಕದ ಸಂಶೋಧಕ, ಕಾಳು ಹತ್ತಿಬೆಳೆಯ ಬೀಜಗಳನ್ನು ಬೇರ್ಪಡಿಸಲು ೨ ವರ್ಷ ಸತತವಾಗಿ ಶ್ರಮಿಸಿ ಯಂತ್ರವೊಂದನ್ನು ರಚಿಸಿ, ಸಿದ್ಧಿಪಡೆದ ಹರಿಕಾರರೆಂದು ಅಮೆರಿಕದಲ್ಲಿ ಹೆಸರಾದರು.
ವಿಶ್ವದ ಹತ್ತಿ ಉತ್ಪಾದಕರಿಗೆ ನೆರವು ನೀಡಿದ ಈ ಕಾಟನ್ ಜಿನ್ ಯಂತ್ರ ಎಲ್ಲೆಲ್ಲೂ ಜನಪ್ರಿಯತೆಯನ್ನುಗಳಿಸಿತು. ಅದನ್ನು 'ಜಿನ್ನಿಂಗ್ ಯಂತ್ರ|ಇಂಜಿನ್' ಎಂದು ಕರೆದರು. 'ಇಂಜಿನ್' ಪದವನ್ನು ಗ್ರಾಹಕರು ಹೆಚ್ಚಾಗಿ ಬಳಸದೆ, 'ಜಿನ್' ಎನ್ನುವ ಪದ ಹಾಗೆಯೇ ಉಳಿದು ಅತ್ಯಂತ ಪ್ರಸಿದ್ಧಿಯನ್ನು ಗಳಿಸಿತು. 'ಕೈಗಾರಿಕಾ ಕ್ರಾಂತಿ'ಯ ಸಮಯದಲ್ಲಿ ಹಲವಾರು ಹೊಸ ಹೊಸ ಆವಿಷ್ಕಾರಗಳು, ,ಮತ್ತು ಹೊಸ ಹೊಸ ಸಂಶೋಧನೆಗಳು, ಯಂತ್ರನಿರ್ಮಾಣಗಳು, ಪ್ರಮುಖವಾಗಿ ಇಂಗ್ಲೆಂಡ್ ಮತ್ತು ಅಮೇರಿಕಾದಲ್ಲಿ ಜರುಗಿದವು. ಅಮೆರಿಕ ಸಂಯುಕ್ತ ಸಂಸ್ಥಾನದ ದಕ್ಷಿಣದ ರಾಜ್ಯಗಳಲ್ಲಿ ನಡೆದ ಆಂತರಿಕ ಕಲಹದ ಮೊದಲೇ 'ಹತ್ತಿ ಜಿನ್ ಯಂತ್ರ'ದಿಂದಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸಲಾಯಿತು. ಅದೊಂದು ಅತ್ಯಂತ ಮಹತ್ವದ ಬೆಳವಣಿಗೆಯೆಂದು ಇತಿಹಾಸದಲ್ಲಿ ದಾಖಲಾಗಿದೆ. ಅಮೆರಿಕದಲ್ಲಿ ಮೊದಲಿನಿಂದಲೂ ಬೆಳೆಯುತ್ತಿದ್ದ 'ಅಪ್ಲಾಂಡ್ ಹತ್ತಿ'ಯ ಕಾಳುಗಳನ್ನು ಬಿಡಿಸುವುದು ಕಷ್ಟಕರವಾಗಿತ್ತು. ಜಿನ್ನಿಂಗ್ ಯಂತ್ರದಿಂದಾಗಿ ಒಬ್ಬ ಕೆಲಸಗಾರನು ಮಾಡುವ ಕೆಲಸದ ೫೦ ಪಟ್ಟು ಉತ್ಪಾದನೆ ವರ್ಧಿಸಿ ಲಾಭದಾಯಕವಾಯಿತು. ಇದರ ಜೊತೆಗೆ ಹೆಚ್ಛು ಹೆಚ್ಚು 'ಪ್ಲಾಂಟೇಶನ್' ಗಳಲ್ಲಿ ಹತ್ತಿಯನ್ನು ಬೆಳೆಯುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಕೂಲಿಯಾಳುಗಳ ಸಂಖ್ಯೆಯೂ ಹೆಚ್ಚಾಯಿತು. ಈ ಬೆಳವಣಿಗೆಗಳು ಪೇಟೆಂಟ್ ಮೇಲೆ ಪರಿಣಾಮ ಬೀರಿದ್ದಲ್ಲದೆ ಹಲವಾರು ಕಾನೂನು ಕಾರವಾಯಿಗಳಲ್ಲಿ ಮಾರ್ಪಾಡುಗಳನ್ನು ಮಾಡಬೇಕಾದ ಸನ್ನಿವೇಶ ಒದಗಿಬಂತು. ಅದೇ ಸಮಯದಲ್ಲಿ ಯೂರೋಪಿನ ಫ್ರಾನ್ಸ್ ದೇಶ, ಹಾಗೂ ಇಂಗ್ಲೆಂಡ್ ದೇಶಗಳ ನಡುವೆ ಯುದ್ಧವೇರ್ಪಟ್ಟ ಸನ್ನಿವೇಶದಲ್ಲಿ ಅಮೆರಿಕವೂ ಭಾಗವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಹಾಗಾಗಿ ಅಮೆರಿಕದ ಹೊಸ ಸೈನ್ಯಕ್ಕೆ 'ಮಸ್ಕೆಟ್'(ಕೋವಿ,ಬಂದೂಕಗಳು) ಗಳ ನಿರ್ಮಾಣಮಾಡುವ ಕಾರ್ಯ ಭರದಿಂದ ಸಾಗಿತು. [೧]
ಜನನ, ವಿದ್ಯಾಭ್ಯಾಸ ವೃತ್ತಿ
ಬದಲಾಯಿಸಿ'ಇಲೈ ವಿಟ್ನಿ,' ಮೆಸ್ಯಾಚು ಸೆಟ್ಸ್ ನ 'ವೆಸ್ಟ್ ಬಾರೋ' ಎಂಬ ಊರಿನಲ್ಲಿ 'ಇಲೈ ವಿಟ್ನಿ ಸೀನಿಯರ್', ಮತ್ತು ಎಲಿಜಬೆತ್ ಫೆ, ದಂಪತಿಗಳ ಚೊಚ್ಚಲ ಮಗನಾಗಿ ಡಿಸೆಂಬರ್ ೮, ೧೭೬೫ ರಂದು ಜನಿಸಿದರು. ತಂದೆಯವರು ಒಬ್ಬ ಪ್ರಗತಿಶೀಲ ಕೃಷಿಕರಾಗಿದ್ದರು. ಬೇಸಾಯಮಾಡುವಾಗ ತಮಗೆ ಬೇಕಾದ ಪರಿಕರಗಳನ್ನು ತಮ್ಮ 'ವರ್ಕ್ ಶಾಪ್' ನಲ್ಲಿ ತಯಾರು ಮಾಡಿಕೊಳ್ಳುತ್ತಿದ್ದರು. ತಾಯಿ ಎಲಿಜಬೆತ್ ಫೆ ೧೭೭೭ ರಲ್ಲಿ ನಿಧನರಾದರು. ಆಗ ವಿಟ್ನಿಯವರ ವಯಸ್ಸು, ೧೧ ವರ್ಷ. ೧೪ ನೆಯ ವಯಸ್ಸಿನಲ್ಲಿ ಲಾಭದಾಯಕವಾದ ಕಬ್ಬಿಣದ ಮೊಳೆಯನ್ನು ತಯಾರಿಸುವ ಕಸುಬನ್ನು ತಂದೆಯವರ 'ವರ್ಕ್ ಶಾಪ್' ನಲ್ಲಿ ಕಲಿತರು. ಅವರ ಮಲತಾಯಿ ವಿಟ್ನಿಯವರನ್ನು ಕಾಲೇಜ್ ಗೆ ಕಲಿಸಲು ನಿರಾಕರಿಸಿದರು. ಆದ್ದರಿಂದ ವಿಟ್ನಿ, ತಮ್ಮ ಜಮೀನಿನಲ್ಲಿ ಕೆಲಸಗಾರನಾಗಿ,'ಶಾಲಾ ಟೀಚರ್' ಆಗಿ 'ಲೆಸ್ಟರ್ ಅಕಾಡೆಮಿ'ಯಲ್ಲಿ ಸ್ವಲ್ಪ ತರಬೇತಿ ಹೊಂದಿ, 'ಯೇಲ್ ವಿಶ್ವವಿದ್ಯಾಲಯ'ಕ್ಕೆ ವಿದ್ಯಾಭ್ಯಾಸಕ್ಕಾಗಿ ಹೋಗಲು ಸಿಧ್ಹರಾದರು. (now Becker College) 'ಡಂ ಹಮ್' ನ, ಕನೆಕ್ಟಿಕಟ್ ನ 'ರೆವರೆಂಡ್ ಎಲಿಜರ್ ಗುಡ್ ರಿಚ್' ಬಳಿ ಶಿಷ್ಯ ವೃತ್ತಿ ಮಾಡಿದರು. ೧೭೮೯ ರಲ್ಲಿ ಕ್ಲಾಸ್ ಸೇರಿ ಫಿ ಬೇಟ ಕಪ್ಪ ದಲ್ಲಿ ಪದವಿಗಳಿಸಿದರು. ೧೭೯೨ ರಲ್ಲಿ. ಲಾ ಓದುವ ಕಟು ಆಶೆ ಅವರ ಮನಸ್ಸಿನಲ್ಲಿ ಬೇರೊಡೆಯಿತು. ಹಣವಿಲ್ಲದೆ ಖಾಸಗಿ ಉಪಾಧ್ಯಾಯನಾಗಿ ದಕ್ಷಿಣ ಕೆರೋಲಿನಕ್ಕೆ ಹೋಗಲು ಸಿದ್ಧರಾದರು. ೧೮ ನೆಯ ಶತಮಾನದ ಕೊನೆಯಲ್ಲಿ ಜಾರ್ಜಿಯ ಹೊಸ ವಲಸೆಗಾರರನ್ನು ಅಯಸ್ಕಾಂತದಂತೆ ಸೆಳೆದಿತ್ತು. 'ಲಿಮನ್ ಹಾಲ್' ಎನ್ನುವ ಕನೆಕ್ಟಿಕಟ್ ಗವರ್ನರ್ ಕ್ರಾಂತಿಯ ಸಮಯದಲ್ಲಿದ್ದರು. ದ. ಕೆರೊಲಿನಕ್ಕೆ ತಮ್ಮ ಗೆಳೆಯರ ಸಹಿತ ಹೋದಾಗ ಅಲ್ಲಿ 'ಮಿಸೆಸ್ ಗ್ರೀನ್' ಎಂಬ ಮಹಿಳೆ ಸಿಕ್ಕರು. ಆಕೆ ಕ್ರಾಂತಿಕಾರಿ ಜನರಲ್, 'ನಾಥನೆಲ್ ರ ಪತ್ನಿ'. ರೋಡ್ ಐಲೆಂಡ್ ನಲ್ಲಿದ್ದರು. ಜಾರ್ಜಿಯದಲ್ಲಿದ್ದ ತಮ್ಮ 'ಮಲ್ಬರಿ ಗ್ರುವ್' ಎನ್ನುವ ಪ್ಲಾಂಟೇಶನ್ ಗೆ ಆಹ್ವಾನಿಸಿದರು. ಈಗಿನ ಪ್ಲಾಂಟೇಶನ್ ಮ್ಯಾನೇಜರ್ ೧೭೮೫ ರ ಬ್ಯಾಚಿನ ಎಲ್ ಪದವಿಧರ ಕನೆಕ್ತಿಕತ್ ವಾಸಿ, 'ಫಿನಿಸ್ ಮಿಲ್ಲರ್' ಎನ್ನುವರ ಜೊತೆ ಲಗ್ನವಾಗುವ ಮಾತುಕತೆಇತ್ತು. ವಿಟ್ನಿ ಅವರಜೊತೆ ಸೇರಿ ಹೊಸ ಯಂತ್ರವನ್ನು ಕಂಡುಹಿಡಿಯಲು ಶ್ರಮಿಸಿದರು. ಮಿಸೆಸ್ ಗ್ರೀನ್ ರ ಬಂಗಲೆಯ ಬೇಸ್ಮೆಂಟ್ ನ ಕೊಠಡಿಯೊಂದರಲ್ಲಿ ಸತತವಾಗಿ ೨ ವರ್ಷ ಪರೀಕ್ಷೆಗಳನ್ನು ನಡೆಸಿ ಜಿನ್ನಿಂಗ್ ಯಂತ್ರದ ನೀಲ ನಕ್ಷೆಯನ್ನು ಸ್ಥಾಪಿಸಿದರು. ವಿಟ್ನಿ ಹಲವಾರು ಹೊಸ ಹೊಸ ಯಂತ್ರಗಳನ್ನು ನಿರ್ಮಿಸುವುದರಲ್ಲಿ ಆಸಕ್ತರಾಗಿದ್ದರು. ಅವರ ಎರಡು ಪ್ರಮುಖ ಸಂಶೋಧನೆಗಳಿಗೆ ಪ್ರಚಂಡ ಜನಪ್ರಿಯತೆಯನ್ನು ಗಳಿಸಿದರು.
- ೧೯ ನೆಯ ಶತಮಾನದಮಧ್ಯದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನವನ್ನು ಎರಡು ಭಾಗವಾಗಿ ಮಾಡಿದ ೧೭೯೩ ರಲ್ಲಿ ಕಂಡುಹಿಡಿದ ಕಾಟನ್ ಜಿನ ಯಂತ್ರ,
- ಈಗಾಗಲೇ ಯಂತ್ರಗಳನ್ನು ನಿರ್ಮಿಸುತ್ತಿದ್ದ ವ್ಯವಸ್ಥೆಗೆ ಒಂದು ಹೊಸ ಆಯಾಮ ಕೊಟ್ಟ 'ಇಂಟರ್ ಚೆಂಜಬಲ್ ಪಾರ್ಟ್ಸ್ ಪದ್ಧತಿ' [೨]ಯನ್ನು ಸ್ಥಾಪಿಸಿ ಅದನ್ನು ಜನಪ್ರಿಯಮಾಡಿದ ಹೆಗ್ಗಳಿಕೆ,
ದಕ್ಷಿಣದ ರಾಜ್ಯಗಳು
ಬದಲಾಯಿಸಿಅಮೆರಿಕ ಸಂಯುಕ್ತ ಸಂಸ್ಥಾನದ ದಕ್ಷಿಣ ರಾಜ್ಯಗಳಲ್ಲಿ ಕರಿಯ ಕೂಲಿಗಾರರ ನೆರವಿನಿಂದ ಬೇಸಾಯಮಾಡುತ್ತಿದ್ದ ರಾಜ್ಯಗಳು, 'ಕಾಟನ್ ಜಿನ್' ಬರುವಿಕೆಯಿಂದ ಒಂದು ಹೊಸ ಕ್ರಾಂತಿಯನ್ನು ಕಂಡುಕೊಂಡವು. ಉತ್ತರದಲ್ಲಿ 'ಇಂಟರ್ ಚೇಂಜಬಲ್ ಪಾರ್ಟ್ಸ್ ಮಾದರಿ'ಯನ್ನು ಅನುಸರಿಸಿ ಕಾರ್ಖಾನೆಗಳಲ್ಲಿ ಉತ್ಪಾದನೆ ಭರದಿಂದ ಮುಂದುವರೆಯಿತು. ಹತ್ತಿ ಜಿನ್ನಿಂಗ್ ಯಂತ್ರ, ಅಮೆರಿಕದ ಆಂತರಿಕ ಯುದ್ಧದ ಸಮಯದಲ್ಲಿ ಬಲುದೊಡ್ಡ ಕೊಡುಗೆಯಾಗಿ ಮಹತ್ವದ ಪಾತ್ರಪಡೆಯಿತೆಂದು ಜನರಿಗೆ ಮನವರಿಕೆಯಾಯಿತು. 'ಇಲೈ ವಿಟ್ನಿ' ಮತ್ತು ಅಮೆರಿಕ ಸರಕಾರದ ಟ್ರೆಷರಿ ಸೆಕ್ರೆಟರಿ, ಆಲಿವರ್ ವಾಲ್ಕಾಟ್ ಜೂನಿಯರ್, ಯುದ್ಧಕ್ಕೆ ಬೇಕಾಗುವ ಶಸ್ತ್ರಾಸ್ತ್ರಗಳನ್ನು ತಯಾರಿಸುವ ಒಪ್ಪಂದಕ್ಕೆ ೧೭೯೮ ರಲ್ಲಿ ಸಹಿಹಾಕಿದರು. ಇಲೈ ವಿಟ್ನಿ, ಮಸ್ಕೆಟ್ಸ್ ತಯಾರಿಕೆಯಲ್ಲಿ ಒಂದು ವಿಕ್ರಮವನ್ನೇ ಸ್ಥಾಪಿಸಿದರು. ಇಷ್ಟೆಲ್ಲಾ ಆವಿಷ್ಕಾರಮಾಡಿದ ವಿಟ್ನಿಯವರ ಸೇವೆಗೆ ಸರಿಯಾದ ಮಾನ-ಸನ್ಮಾನಗಳು ಸಿಗಲಿಲ್ಲ. ಹಿಂದಿನಿಂದ ನಡೆದುಬಂದ ನಿರ್ಮಾಣ ಕಾರ್ಯವನ್ನು ಸುವ್ಯವಸ್ಥಿತ ಗೊಳಿಸುವಲ್ಲಿ ಒಂದು ವಿಕ್ರಮವನ್ನು ಸಾಧಿಸಿತು. ವಿಟ್ನಿಯವರ ಕೊನೆಗಾಲದಲ್ಲಿ ಜನ ಅವರ ಕೊಡುಗೆಗಳ ಪ್ರಾಮುಖ್ಯತೆಗಳನ್ನು ಮನಗಂಡು ಗೌರವಿಸಿದರು. 'ನ್ಯೂ ಇಂಗ್ಲೆಂಡ್' ನ ಕೆಲವು ಉದ್ಯಮಿಗಳು 'ಕ್ಯಾಪ್ಟನ್ ಜಾನ್', 'ಎಚ್ ಹಾಲ್', 'ಸಿಮನ್ ನಾರ್ತ್', ಸೇರಿದಂತೆ ವಿಟ್ನಿಯವರಿಗೆ ಮೊದಲೇ ಇಂಟರ್ ಚೇಂಜಬಲ್ ಪಾರ್ಟ್ಸ್ ನಿರ್ಮಿತಿಯಲ್ಲಿ ಯಶಸ್ಸನ್ನು ಸಾಧಿಸಿದ್ದರು. ೧೮೨೫ ರ ಹೊತ್ತಿಗೆ ಎಲ್ಲರೂ ವಿಟ್ನಿಯವರ ಕಾರ್ಯಗಳನ್ನು ಶ್ಲಾಘಿಸಿದರು. ೧೭೯೮ ರಲ್ಲಿ ಮಸ್ಕೆಟ್ಸ್ ನಿರ್ಮಾಣವನ್ನು ಒಪ್ಪಿದ್ದು ಹಣದ ಅಭಾವದಿಂದ ೧೭೯೦ ರ ನಂತರ ದಿವಾಳಿಯಾಗುವ ಹಂತತಲುಪಿದ್ದರು. 'ಹತ್ತಿ ಜಿನ್' ಪೇಟೆಂಟ್ ವ್ಯಾಜ್ಯದಲ್ಲಿ ಕೋರ್ಟಿಗೆ ಅಲೆದು ಬೇಸತ್ತಿದ್ದರು. ಸಾಲದ ಹೊರೆ ತಲೆಯ ಮೇಲೆ ದೊಡ್ಡದಾಗಿ ಬೆಳೆದಿತ್ತು. 'ನ್ಯೂ ಹೆವೆನ್' ನಲ್ಲಿದ್ದ ಇಲೈ ವಿಟ್ನಿಯವರ 'ಹತ್ತಿ ಜಿನ್ನಿಂಗ್' ಕಾರ್ಖಾನೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ, ನಾಶಮಾಡಿದರು.
ಅಮೆರಿಕದ ಆಂತರಿಕ ಯುದ್ಧ
ಬದಲಾಯಿಸಿಫ್ರಾನ್ಸ್, ಮತ್ತು ಬ್ರಿಟನ್, ಮತ್ತು ಅಮೆರಿಕಗಳ ಮಧ್ಯೆ ಭಿನ್ನಾಭಿಪ್ರಾಯದಿಂದ ಯುದ್ಧದ ವಾತಾವರಣ ಎಲ್ಲೆ ಮೀರಿ ಬೆಳೆದಿತ್ತು. ಅಮೇರಿಕಾದಲ್ಲಿ ಹೊಸದಾಗಿ ಬಂದ ಸರಕಾರ, ಪರಿಸ್ಥಿತಿಯನ್ನು ಮನಗಂಡು ಯುದ್ಧಕ್ಕೆ ಸನ್ನದ್ಧವಾಗತೊಡಗಿತು. ಸಮರ ಸಮಿತಿಯು ೧೦ ಸಾವಿರ ಮಸ್ಕೆಟ್ಸ್ ತಯಾರಿಸಿ ಸರಬರಾಜುಮಾಡಲು ವಿಟ್ನಿಯವರ ಜೊತೆ ಒಪ್ಪಂದಮಾಡಿಕೊಂಡಿತು. 'ವಿಟ್ನಿ' ಹಿಂದೆಂದೂ ತನ್ನ ಜೀವನದಲ್ಲಿ ಗನ್ ತಯಾರಿಸದ ವ್ಯಕ್ತಿ; ೧೭೯೮ ರ ಜನವರಿ ಯಲ್ಲಿ ೧೦-೧೫ ಸಾವಿರ ಮಸ್ಕೆಟ್ಸ್ ಗಳನ್ನು ೧೮೦೦ ರ ಒಳಗೆ ಮಾಡಿಕೊಡುವುದಾಗಿ ಒಪ್ಪಿಗೆ ಮಾಡಿಕೊಂಡರು. ಆಗಿನ್ನೂ ತಮ್ಮ 'ಇಂಟರ್ ಚೆಂಜಬಲ್ ಪಾರ್ಟ್ಸ್' ಬಗ್ಗೆ ಒಪ್ಪಂದದಲ್ಲಿ ತಿಳಿಸಿರಲಿಲ್ಲ. ತಿಂಗಳ ನಂತರ ಆಲಿವರ್ ವಾಲ್ಕಾಟ್ ಜೂ. ವಿಟ್ನಿಗೆ ಒಂದು ಕಾರ್ಯ ಸೂಚಿ ಪತ್ರವನ್ನು ಕಳಿಸಿಕೊಟ್ಟಿತು. ("foreign pamphlet on arms manufacturing techniques,") ಇದನ್ನು ಸಿದ್ಧಪಡಿಸಿದವರು, ಇದರ ಬಳಿಕ ವಿಟ್ನಿ ತಮ್ಮ ಪದ್ಧತಿಯನ್ನು ವಿಧ್ಯುಕ್ತವಾಗಿ ಎಲ್ಲರ ಮುಂದೆ ಪ್ರಸ್ತುತಪಡಿಸಿದರು. ೧೭೯೮ ರ ಮೇ ತಿಂಗಳಲ್ಲಿ ಕಾಂಗ್ರೆಸ್ ಪಕ್ಷ, ಒಂದು ಮಸೂದೆಯನ್ನು ಅಂಗೀಕರಿಸಿ ೮ ಲಕ್ಷ ಡಾಲರ್ ಹಣವನ್ನು ಚಿಕ್ಕ-ಪುಟ್ಟ ಯುದ್ಧ ಆಯುಧಗಳ ಉತ್ಪಾದನೆಗಾಗಿ ಮತ್ತು ತುಪಾಕಿಗಳ ಉತ್ಪಾದನೆಗಾಗಿ ಹಣವನ್ನು ಮುಡಿಪಾಗಿಟ್ಟರು. ಯುದ್ಧದ ಕಾರ್ಯಕ್ಕಾಗಿ ಮೊದಲು ೫ ಸಾವಿರ ಡಾಲರ್ ಮುಂಗಡ ಹಣ ಕೊಡುವುದರ ಜೊತೆಗೆ, ೫ ಸಾವಿರ ಡಾಲರ್ ಹೆಚ್ಚುವರಿ ಹಣ ಕೊಡುವುದಾಗಿ ಘೋಷಿಸಿದರು. ವಿಟ್ನಿಯವರಿಗೆ 'ಮಸ್ಕೆಟ್ಸ್' ತಯಾರಿಸಿ ಒದಗಿಸಲು ಸಧ್ಯವಾಗದೆ ಹೋಯಿತು. ೮ ವರ್ಷದ ತರುವಾಯ ವಿಳಂಬವಾದದ್ದಕ್ಕೆ ಹಲವಾರು ಸಬುಬುಗಳನ್ನು ಕೊಟ್ಟು, ೧೮೦೯ ರಲ್ಲಿ ಸರಬರಾಜು ಮಾಡಿದರು.
ಹಾರ್ಪರ್ಸ್ ವೀಕ್ಲಿ ಪ್ರತ್ರಿಕೆ
ಬದಲಾಯಿಸಿಮೊದಲ ಕಾಟನ್ ಜಿನ್ ಯಂತ್ರದ ಮಾದರಿ ೧೮೬೯ ರ, 'ಹಾರ್ಪರ್ಸ್ ವೀಕ್ಲಿ ಪತ್ರಿಕೆ'ಯಲ್ಲಿ (೭೦ ವರ್ಷಗಳ ಹಿಂದಿನ ಪತ್ರಿಕೆಯಲಿ) ಜಿನ್ ಮೆಷಿನ್ ಪೇಟೆಂಟ್ ನಲ್ಲಿ ಗರಗಸದ ಹಲ್ಲಿನ ಚಕ್ರದ ವಿಚಾರವಿತ್ತು. ಇವು ಇಲೈ ವಿ ಟ್ನಿಯ ಮೊದಲ ಪೇಟೆಂಟ್ ನಲ್ಲಿರಲಿಲ್ಲ. [೩]
ಜಿನ್ನಿಂಗ್ ವಿಧಿ
ಬದಲಾಯಿಸಿಇದು, 'ಜಿನ್ನಿಂಗ್ ಯಂತ್ರ'ದ ಮುಖಾಂತರ ಕಾಳುಹತ್ತಿಯಿಂದ ಬೀಜವನ್ನು ಬೇರ್ಪಡಿಸುವ ಪ್ರಕ್ರಿಯೆ. 'ಕಾಟನ್ ಜಿನ್' ಯಂತ್ರದಲ್ಲಿ 'ಹುಕ್ಸ್' ಇರುವ 'ಮರದ ರೋಲರ್' ಮಧ್ಯೆ ಕಾಳುಹತ್ತಿ ಸಾಗಿ, 'ಮೆಶ್' ಮುಖಾಂತರ ಎಳೆದಾಗ, ಬೀಜಗಳು ಬೇರ್ಪಟ್ಟು ಕೆಳಗೆ ಬೀಳುತ್ತಿದ್ದವು. ಒಳ್ಳೆಯ ವಾಗ್ಮಿ, ವ್ಯಾಖ್ಯಾನಕಾರರಾದ ವಿಟ್ನಿ, ತಮ್ಮ 'ಕಾಟನ್ ಜಿನ್' ಬಗ್ಗೆ ವಿವರಿಸುತ್ತಿದ್ದರು. ಫೆನ್ಸ್ ನ ಆ ಕಡೆಯಿದ್ದ ಕೋಳಿಮರಿಯೊಂದನ್ನು ಈ ಕಡೆಯಿಂದ ಒಂದು ಬೆಕ್ಕು ಕಚ್ಚಿ ಹಿಡಿದು ಎಳೆದಾಗ, ಅದಕ್ಕೆ ಸಿಕ್ಕಿದ್ದು ರೆಕ್ಕೆ-ಪುಕ್ಕದ ಭಾಗಗಳು ಮಾತ್ರ. ಈ ಸಂಗತಿ, ಜಿನ್ನಿಂಗ್ ಪ್ರಕ್ರಿಯೆಯನ್ನು ಯಂತ್ರದ ಮುಖಾಂತರ ಸ್ಥಾಪಿಸಲು ವಿಟ್ನಿಯವರಿಗೆ ಪ್ರೇರಣೆ ನೀಡಿತು. ಒಂದು ಯಂತ್ರ ೫೫ ಪೌಂಡ್ (೨೫ ಕೆ.ಜಿ.) ದಿನವೊಂದಕ್ಕೆ ಉತ್ಪಾದಿಸಬಲ್ಲದು. ದಕ್ಷಿಣದ ರಾಜ್ಯಗಳ ಹತ್ತಿ ಉತ್ಪಾದಕರ ವರಮಾನ ವೃದ್ಧಿಸಿತು. ಡಚ್ ಜನಗಳು ಆಫ್ರಿಕದ ಕಪ್ಪು ಕೂಲಿಗಾರರನ್ನು ಹಡಗುಗಳಲ್ಲಿ ತಂದು ಪೂರ್ವ ಅಮೆರಿಕದ ಜೇಮ್ಸ್ ಟೌನ್ ನಲ್ಲಿ ಮಾರಲು ಪ್ರಾರಂಭಿಸಿದರು. ಹೀಗೆ ಅವರ ಹೆಚ್ಚಿನ ಸಂಖ್ಯೆ ಹೆಚ್ಚುತ್ತಾ ಹೋಯಿತು. ವಿಟ್ನಿಗೆ ಪೇಟೆಂಟ್ [X72] ಮಾರ್ಚ್, ೧೪, ೧೭೯೪ ರಲ್ಲಿ ಸಿಕ್ಕಿತು. ಆದರೆ ಯಂತ್ರತಯಾರಿಕೆಯ ಪರವಾನಗಿ ೧೮೦೭ ರಲ್ಲಿ ದೊರೆಯಿತು. ಹತ್ತಿ ಉತ್ಪಾದಕರ ಬಳಿ ಐದನೆಯ ಎರಡು ಭಾಗ 'ಫೀ' ವಸೂಲು ಮಾಡುವ ಯೋಚನೆ ಜಿತ್ತು. ಆದರೆ ಅಷ್ಟು ಸುಲಭವಾಗಿ ಕೆಲಸ ಮತ್ತು ಹಳೆಯ ಪೆಟೆಂಟ್ ಕಾನೂನುಗಳು ಕೆಲಸಮಾಡಲಿಲ. ಇನ್ನು ಹೆಚ್ಚು ಜಿನ್ ಗಳ ಅಗತ್ಯವಿತ್ತು. ಮಾರುಕಟ್ಟೆಯಲ್ಲಿ ಬೇರೆ ತಯಾರಕರು ಹೆಚ್ಚಿಕೊಂಡರು. ೧೭೯೭ ರಲ್ಲಿ ದಿವಾಳಿಯಾಗಿ ಕಂಪೆನಿ ಮುಚ್ಚಿದರು. ಒಟ್ಟಿನಲ್ಲಿ ಜಿನ್ ಅಮೇರಿಕಾದ ಆಂತರಿಕ ಯುದ್ಧಕ್ಕೆ ಒತ್ತು ನೀಡಿತು. ಕೂಲಿಲಿಗಾರರನ್ನು ಕಡಿಮೆ ಮಾಡುವ ಯೋಜನೆ ಅಸಫಲವಾಯಿತು. ಅಮೆರಿಕದ 'ಟಕ್ಸ್ ಟೈಲ್ ಮಿಲ್' ಗಳಿಗೆ ಮತ್ತು ಯೂರೋಪಿನ ಮಾರುಕಟ್ಟೆಗೆ ಹತ್ತಿ ರಫ್ತಾಗಲು ಆರಂಭವಾಯಿತು. 1820 to 1860. ರಲ್ಲಿ ಅಮೇರಿಕಾ ರಾಷ್ಟ್ರದ ರಫ್ತಿನ ಅರ್ಧದಷ್ಟು ಹತ್ತಿಯಬೆಳೆಯದಾಗಿತ್ತು.[೪]
ಹತ್ತಿ ಬೆಳೆಯಲ್ಲಿ ವೃದ್ಧಿ
ಬದಲಾಯಿಸಿ- 1790, ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನ 1,500 ಪೌಂಡ್ ಕಾಳುಹತ್ತಿ ಬೆಳೆಯಿತು.
- 1800, ರಲ್ಲಿ ಉತ್ಪಾದನೆ 35,000 ಪೌಂಡ್ ಹೆಚ್ಚಿತು.
- 1815, ರಲ್ಲಿ ಉತ್ಪಾದನೆ 100,000 ಪೌಂಡಿನಷ್ಟು ಆಯಿತು.
- 1848, ರಲ್ಲಿ ಉತ್ಪಾದನೆ, 1,000,000 ಪೌಂಡಿಗಿಂತ ಹೆಚ್ಚಾಯಿತು.
ಮಿಲ್ಲಿಂಗ್ ಮೆಶಿನ್
ಬದಲಾಯಿಸಿ'ಮೆಶಿನ್ ಟೂಲ್' ಇತಿಹಾಸಕಾರ 'ಜೋಸೆಫ್ ಡಬ್ಲ್ಯು ರೋ' ಪ್ರಕಾರ, ೧೮೧೮ ರಲ್ಲಿ ವಿಟ್ನಿ ಮೊಟ್ಟ ಮೊದಲ 'ಮಿಲ್ಲಿಂಗ್ ಮೆಶಿನ್' ತಯಾರಿಸಿದರು. ಇತರೆ ಇತಿಹಾಸಕಾರು (Woodbury; Smith; Muir; Battison) ಇದನ್ನು ಒಪ್ಪದೆ, ೧೮೧೪-೧೮೧೮ ರ ಮಧ್ಯೆ ಹಲವಾರು ಯಂತ್ರ ನಿರ್ಮಾಪಕರು ಈ ಕೆಲಸದಲ್ಲಿ ತೊಡಗಿದ್ದರು. ಯಾರು ನಿಜವಾಗಿ ಮೊದಲು ನಿರ್ಮಿಸಿದರು ಎನ್ನುವುದು, ಇನ್ನೂ ವಿವಾದಾಸ್ಪದವಾಗಿದೆಯೆಂದು ಹೇಳುತ್ತಾರೆ.
ಮದುವೆ
ಬದಲಾಯಿಸಿಇಲೈ ವಿಟ್ನಿಯವರು, 1817 ರಲ್ಲಿ, 'ಹೆನ್ ರಿಟ ಎಡ್ವರ್ಡ್ಸ್' ಜೊತೆ ಮದುವೆಯಾದರು. ಹೆನ್ ರಿಟ ಎಡ್ವರ್ಡ್ ರವರು, ಜೊನಾಥನ್ ಎಡ್ವರ್ಡ್ಸ್ ರ, ಮೊಮ್ಮಗಳು, ಕನೆಕ್ಟಿಕಟ್ ನ ಡೆಮೊಕ್ರಾಟಿಕ್ ಪಕ್ಷದ 'ಪೀರ್ ಪಂಟ್ ಎಡ್ವರ್ಡ್ಸ್' ರ ಮಗಳು. ಇಷ್ಟು ದೊಡ್ಡ ಮನುಷ್ಯರ ಜೊತೆ ಒಡನಾಟವಿದ್ದರೂ ಆ ಸಂಬಂಧಗಳನ್ನು ತಮ್ಮ ಪ್ರಗತಿಗೆ ಬಳಸಿಕೊಳ್ಳುವ ಮನೋಭಾವ ಇಲೈ ವಿಟ್ನಿಯವರಿಗೆ ಇರಲಿಲ್ಲ. ಯುದ್ಧ ಸಾಮಗ್ರಿಗಳನ್ನು ನಿರ್ಮಿಸುವ ತನ್ನ 'ಯೇಲ್' ಗೆಳೆಯರ ಸಹಾನುಭೂತಿ, ಸಹಾಯ, ಆಲಿವರ್ ವಾಲ್ಕಾಟ್ ಜೂ. ಜೇಮ್ಸ್ ಹಿಲ್ ಹೌಸ್, ನ್ಯೂ ಹೆವೆನ್ ಬಡಾವಣೆಯ ಸ್ಥಾಪಕ, ಹಾಗು ರಾಜಕಾರಿಣಿಯಂಥವಾರ ಜೊತೆ ಸಹವಾಸವಿತ್ತು. ಆದರೂ ವಿಟ್ನಿಯವರ ಆರ್ಥಿಕ ಪರಿಸ್ಥಿತಿ ಸುಧಾರಿಸಲೇ ಇಲ್ಲ.
ನಿಧನ
ಬದಲಾಯಿಸಿ'ಇಲೈ ವಿಟ್ನಿ', ಪ್ರಾಸ್ಟೇಟ್ ಕ್ಯಾನ್ಸರ್ ನಿಂದ ಕನೆಕ್ಟಿಕ್ಟ್ ನ 'ನ್ಯೂಹೆವೆನ್ಸ್' ನ ತಮ್ಮ ಸ್ವಂತ ಗೃಹದಲ್ಲಿ ಜನವರಿ ೮, ೧೮೨೫ ರಲ್ಲಿ ನಿಧನರಾದರು. ೫೯ ನೆಯ ಹುಟ್ಟು ಹಬ್ಬವನ್ನು ವರ್ಷದ ಹಿಂದೆ ನೆರವೇರಿಸಿಕೊಂಡಿದ್ದರು. ಹೆಂಡತಿ ಮತ್ತು ೪ ಮಕ್ಕಳನ್ನು ಅಗಲಿ ಹೋಗಿದ್ದರು. ತಮ್ಮ ಅಸ್ವಸ್ಥ ಸ್ಥಿತಿಯಲ್ಲೂ ಹಲವಾರು ಆವಿಷ್ಕಾರಗಳನ್ನು ಮಾಡುತ್ತಿದ್ದರು. ಅವನ್ನೆಲ್ಲಾ ತಮ್ಮ ಪ್ರಕಟಿಸಿದ ಸಂಶೋದನ ಪತ್ರಗಳಲ್ಲಿ ದಾಖಲಿಸಿದ್ದಾರೆ. ಅವುಗಳ 'ನೀಲ ನಕ್ಷೆ'ಗಳನ್ನು ಅವರ ಮಕ್ಕಳು 'ಪೇಟೆಂಟ್ ಆಫೀಸಿ'ಗೆ ಪ್ರಸ್ತುತಪಡಿಸಲಿಲ್ಲ.
ಇಲೈ ವಿಟ್ನಿಯವರ, ಸ್ಮಾರಕ
ಬದಲಾಯಿಸಿ'ಕನೆಕ್ಟಿಕಟ್' ನಗರದ, 'ನ್ಯೂ ಹೆವೆನ್' ನ, 'ಗ್ರೂವ್ ಸ್ಟ್ರೀಟ್ ಸ್ಮಶಾನ' ದ ಸೌತ್ ಕಡೆಯಲ್ಲಿರುವ 'ಇಲೈ ವಿಟ್ನಿ ಸ್ಮಾರಕ'[೫]ವನ್ನು ಅಮೆರಿಕಕ್ಕೆ ಭೇಟಿಕೊಡುವ ಪರ್ಯಟಕರಿಗೆ ವೀಕ್ಷಿಸಲು ಅವಕಾಶವಿದೆ. ವಿಟ್ನಿಯವರ ಗೌರವಾರ್ಥವಾಗಿ, ಅಮೆರಿಕ ಸರಕಾರ, 'ಒಂದು ಸೆಂಟ್ ಅಂಚೆ ಚೀಟಿ' ಯನ್ನು ಹೊರಡಿಸಿತು.
ವಿದ್ಯಾರ್ಥಿಗಳ ಕಾರ್ಯಕ್ರಮ
ಬದಲಾಯಿಸಿ'ಯೇಲ್ ವಿಶ್ವವಿದ್ಯಾಲಯ'ದಲ್ಲಿ ಹೊಸಪೀಳಿಗೆಯ ಯುವ ವಿಧ್ಯಾರ್ಥಿಗಳನ್ನು ನೋಂದಣಿ ಮಾಡಿಕೊಳ್ಳುವ ಸಮಯದಲ್ಲಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು. ಹಿಂದೆ, ೨೩ ವರ್ಷದ ಇಲೈ ವಿಟ್ನಿ ಯೇಲ್ ಮೆಟ್ರಿಕ್ಯುಲೇಶನ್ ಕಕ್ಷಕ್ಕೆ ಪಾದಾರ್ಪಣೆ ಮಾಡಿದ್ದರು. ಅದರ ನೆನೆಪಿಗಾಗಿ, ಇಂದಿಗೂ ಈ ತರಹದ 'ಕೋರ್ಸ್' ಚಾಲ್ತಿಯಲ್ಲಿದೆ.
ಉಲ್ಲೇಖಗಳು
ಬದಲಾಯಿಸಿ- ↑ Whitney Factory
- ↑ Weapons man, Eli Whitney and Interchangeable Parts
- ↑ 'about-eli-whitney/inventor'
- ↑ "Teaching American History in South Carolina, The Impact of the Cotton Gin". Archived from the original on 2015-03-13. Retrieved 2015-03-08.
- ↑ The Armory