ಇಲಾಹಾಬಾದ್ ಕೋಟೆ
ಇಲಾಹಾಬಾದ್ ಕೋಟೆಯು ಮುಘಲ್ ಸಾಮ್ರಾಟ ಅಕ್ಬರ್ ಭಾರತದ ಉತ್ತರ ಪ್ರದೇಶ ರಾಜ್ಯದ ಅಲಾಹಾಬಾದ್‍ನಲ್ಲಿ ೧೫೮೩ರಲ್ಲಿ ನಿರ್ಮಿಸಿದ ಒಂದು ಕೋಟೆ. ಈ ಕೋಟೆಯು ಯಮುನಾ ನದಿಯ ದಡದ ಮೇಲೆ, ಗಂಗಾ ನದಿಯೊಂದಿಗಿನ ಅದರ ಸಂಗಮದ ಹತ್ತಿರ ನಿಂತಿದೆ. ಭಾರತದ ಪುರಾತತ್ವ ಸರ್ವೇಕ್ಷಣೆಯು ಇದನ್ನು ರಾಷ್ಟ್ರೀಯ ಮಹತ್ವದ ಸ್ಮಾರಕವೆಂದು ಗುರುತಿಸಿದೆ.[೧]
ಅಕ್ಬರನು ಕೋಟೆಯನ್ನು ಇಲಾಹಾಬಸ್ ("ದೇವರಿಂದ ಅನುಗ್ರಹಿತವಾದ") ಎಂದು ಹೆಸರಿಸಿದನು. ನಂತರ ಇದು "ಇಲಾಹಾಬಾದ್" ಎಂದು ಆಯಿತು.[೨] ಇಲಾಹಾಬಾದ್‍ನ ಆಯಕಟ್ಟಿನ ಸ್ಥಳವಲ್ಲದೆ, ಅಕ್ಬರ್ ತ್ರಿವೇಣಿ ಸಂಗಮಕ್ಕೆ ಭೇಟಿನೀಡುವ ಭಾರೀ ಸಂಖ್ಯೆಯ ತೀರ್ಥಯಾತ್ರಿಗಳಿಂದ ತೆರಿಗೆಯನ್ನು ಸಂಗ್ರಹಿಸುವ ಸಾಮರ್ಥ್ಯದಿಂದ ಪ್ರೇರಿತನಾಗಿದ್ದನೆಂದು ಕೂಡ ಭಾವಿಸಲಾಗಿದೆ. ಆದರೆ, ಅಕ್ಬರ್ ಅಸ್ತಿತ್ವದಲ್ಲಿದ್ದ ತೀರ್ಥಯಾತ್ರಿ ತೆರಿಗೆಯನ್ನು ೧೫೬೩ರಲ್ಲಿ ತೆಗೆದುಹಾಕಿದ್ದನು ಎಂಬ ವಾಸ್ತವಾಂಶವನ್ನು ಪರಿಗಣಿಸಿ ಇದು ಅಸಂಭವವೆಂದು ತೋರುತ್ತದೆ.[೩]
ಉಲ್ಲೇಖಗಳು
ಬದಲಾಯಿಸಿ- ↑ "Alphabetical List of Monuments - Uttar Pradesh". Archaeological Survey of India, Government of India. Retrieved 13 November 2014.
- ↑ William R. Pinch (17 March 2006). Warrior Ascetics and Indian Empires. Cambridge University Press. p. 46. ISBN 978-0-521-85168-8.
- ↑ Kama Maclean (28 August 2008). Pilgrimage and Power: The Kumbh Mela in Allahabad, 1765-1954. OUP USA. pp. 62–69. ISBN 978-0-19-533894-2.