ಇರೋಮ್ ಚಾನು ಶರ್ಮಿಳಾ

'ಇರೋಮ್ ಶರ್ಮಿಳಾ,[] ೨೦೦೦ ನೆಯ ಇಸವಿಯಲ್ಲಿ ತನ್ನ ೨೮ ನೆಯ ವಯಸ್ಸಿನಲ್ಲಿ ಹೋರಾಟ ಆರಂಭಿಸಿ, ಮಣಿಪುರಕ್ಕೆ ಸಂಬಂಧಿಸಿದ ಸಶಸ್ತ್ರ ದಳದ ವಿಶೇಷಾಧಿಕಾರ ಕಾನೂನನ್ನು ತೆಗೆದುಹಾಕಬೇಕು ಎಂದು ಸರಕಾರದ ವಿರುದ್ಧ ಆಜೀವಪರ್ಯಂತ ಉಪವಾಸ ಸತ್ಯಾಗ್ರಹವನ್ನು ಕೈಗೊಂಡಿದ್ದರು. 'ಮಣಿಪುರದ ಐರನ್ ಲೇಡಿ' ಎಂದು ಹೆಸರುಪಡೆದಿದ್ದಾರೆ.

ಇರೊಮ್ ಚಾನು ಶರ್ಮಿಳಾ
೧೬ ವರ್ಷಗಳ ಕಾಲ ಹೋರಾಟ ನಡೆಸಿದ ಮಾನವ ಹಕ್ಕುಗಳ ಹೋರಾಟಗಾರ್ತಿ
ಜನನ (1972-03-14) ೧೪ ಮಾರ್ಚ್ ೧೯೭೨ (ವಯಸ್ಸು ೫೨)
ರಾಷ್ಟ್ರೀಯತೆಭಾರತೀಯ
ವೃತ್ತಿ(ಗಳು)ಕವಿ, ಮಾನವಹಕ್ಕು ಹೋರಾಟ
ಗಮನಾರ್ಹ ಕೆಲಸಗಳುಸಶಸ್ತ್ರ ದಳದ ವಿಶೇಷಾಧಿಕಾರ ಕಾಯಿದೆಯನ್ನು Armed Forces (Special Powers) Act ರದ್ದುಗೊಳಿಸಲು ೧೬ ವರ್ಷಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದವರು.
ಪೋಷಕ(ರು)Irom c Nanda (father)
Irom Ongbi Sakhi (mother)

ಭಾರತೀಯ ಸೇನಾ ಸಶಸ್ತ್ರ ದಳದ ವಿಶೇಷಾಧಿಕಾರ ವಿರೋಧಿಸಿ ಸತ್ಯಾಗ್ರಹ

ಬದಲಾಯಿಸಿ

ಉಪವಾಸ ಸತ್ಯಾಗ್ರಹಮಾಡುವ ಹೋರಾಟ ಶುರುಮಾಡಿದರು.[] ಸಶಸ್ತ್ರ ದಳದ ವಿಶೇಷಾಧಿಕಾರವು ಅನೇಕ ಮುಗ್ದಜೀವಿಗಳ ಜೀವಹಾನಿಗೆ ಕಾರಣವಾಗುತ್ತಿದೆ ಎಂಬುದು ಶರ್ಮಿಳಾರವರ ವಾದವಾಗಿತ್ತು. ಸರಕಾರ ಅವರನ್ನು ಶಿಕ್ಷೆಗೆ ಒಳಪಡಿಸಿತು. [] ಸರಕಾರದ ಕೆಲವು ನೀತಿಗಳ ವಿರುದ್ಧದ ಮಣಿಪುರದ ಆಸ್ಪತ್ರೆಯ ಚಿಕ್ಕ ೧೫ ಅಡಿ ಅಗಲ ೧೦ ಅಡಿ ಉದ್ದದ ಕೋಣೆಯಲ್ಲೇ ನ್ಯಾಯಾಂಗ ಬಂಧನದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇರೋಮ್ ಶರ್ಮಿಳಾ, ೧೩ ವರ್ಷಗಳ ಕಾಲ ತಮ್ಮ ಹೋರಾಟವನ್ನು ನಡೆಸಿಕೊಂಡು ಬಂದರು.[] ಅವರ ಸತ್ಯಾಗ್ರಹಕ್ಕೆ ಆತ್ಮಹತ್ಯೆಯ ಪ್ರಯತ್ನದ ಆರೋಪ ಹೊರಿಸಿ, ಸರಕಾರ ತಮ್ಮ ವಶಕ್ಕೆ ತೆಗೆದುಕೊಂಡು, ಉಪವಾಸ ನಿಲ್ಲಿಸುವ ತನಕ, ಆಕೆಯ ಮೂಗಿಗೆ ಕೊಳವೆ ಹಾಕಿ ಅದರ ಮೂಲಕ ಆಹಾರ ಹಾಕುವ ವ್ಯವಸ್ಥೆ ಮಾಡಲಾಯಿತು. ವರ್ಷಗಳು ಉರುಳಿದಂತೆ ಆಕೆಯ ಶಿಕ್ಷೆಯ ಅವಧಿಯೂ ಹೆಚ್ಚಾಯಿತು. ಭಾರತದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ವ್ಯಕ್ತಿಗೆ ಓಟುಮಾಡುವ ಅಧಿಕಾರವಿಲ್ಲ. ಹಾಗಾಗಿ, ಇರೋಮ್ ಶರ್ಮಿಳಾ, ೧೩ ವರ್ಷಗಳಿಂದ ಮತದಾನಮಾಡಿಲ್ಲ.[]

ಉಪವಾಸ ಸತ್ಯಾಗ್ರಹ ಅಂತ್ಯ

ಬದಲಾಯಿಸಿ

2016 ಆಗಸ್ಟ್ 9 ರಂದು ತನ್ನ ಹದಿನಾರು ವರ್ಷಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸುವ ನಿರ್ಧಾರವನ್ನು ಪ್ರಕಟಿಸಿದರು.[] ಮುಂದೆ ಮಣಿಪುರದ ಮುಖ್ಯಮಂತ್ರಿಯಾಗುವ ಆಶಯ ವ್ಯಕ್ತಪಡಿಸಿದರು.[] ೪೧ ವರ್ಷ ಪ್ರಾಯದ ಶರ್ಮಿಳಾ, ಸತ್ಯಾಗ್ರಹಕ್ಕೆ ನೆರವು ನೀಡುತ್ತಿರುವ 'ಡೆಸ್ಮಂಡ್' ಎಂಬ ಯುವಕನನ್ನು ಅವರು ಪ್ರೀತಿಸುತ್ತಿದ್ದು, ಆತನೊಂದಿಗೆ ಮದುವೆಯಾಗುವ ಇಂಗಿತ ವ್ಯಕ್ತಪಡಿಸಿದ್ದರು. []

ಚುನಾವಣೆಯಲ್ಲಿ ಸ್ಪರ್ಧೆ

ಬದಲಾಯಿಸಿ

ಉಪವಾಸ ಸತ್ಯಾಗ್ರಹ ಮುಗಿಸಿದ ಬಳಿಕ ರಾಜಕೀಯ ಪ್ರವೇಶಿಸಿದರು. ‘ಪೀಪಲ್ ರಿಸರ್ಜೆನ್ಸ್ ಅಂಡ್ ಜಸ್ಟಿಸ್ ಅಲಯನ್ಸ್ (PRJA) ಎಂಬ ಸ್ವತಂತ್ರ ಪಕ್ಷವನ್ನು ಹುಟ್ಟುಹಾಕಿದ ಶರ್ಮಿಳಾ, ೨೦೧೭ರ ಮಣಿಪುರ ವಿಧಾನಸಭಾ ಚುನಾವಣೆಯಲ್ಲಿ ಮಣಿಪುರ ಮುಖ್ಯಮಂತ್ರಿ ಇಬೋಬಿ ಸಿಂಗ್ ಅವರ ವಿರುದ್ಧ 'ತೋಬಲ್‌' ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಅವರು ಕೇವಲ ೯೦ ಮತಗಳನ್ನು ಪಡೆದು ಸೋಲುಂಡರು.[]

ಉಲ್ಲೇಖಗಳು

ಬದಲಾಯಿಸಿ
  1. http://www.thehindu.com/news/national/other-states/irom-sharmila-nsa-detainees-denied-voting-rights-in-manipur/article5921218.ece
  2. "ಆರ್ಕೈವ್ ನಕಲು". Archived from the original on 2014-07-23. Retrieved 2014-04-19.
  3. http://zeenews.india.com/news/nation/irom-sharmila-rejects-congress-for-aap-continues-fast_918043.html
  4. http://www.rediff.com/news/slide-show/slide-show-1-fasting-is-what-irom-sharmila-is-meant-to-do-in-life/20131105.htm
  5. http://www.businessinsider.in/Irom-Chanu-Sharmila-The-Iron-Lady-Of-Manipur-13-Years-On-Her-Activism-Continues-To-Be-A-Legend/articleshow/26403563.cms
  6. ಚುನಾವಣಾ ಅಖಾಡಕ್ಕೆ ಶರ್ಮಿಳಾ: 16 ವರ್ಷಗಳ ಉಪವಾಸಕ್ಕೆ ಅಂತ್ಯ ಹಾಡಿದ ‘ಉಕ್ಕಿನ ಮಹಿಳೆ’! Archived 2017-04-05 ವೇಬ್ಯಾಕ್ ಮೆಷಿನ್ ನಲ್ಲಿ., By samachara, July 27, 2016
  7. 16 ವರ್ಷಗಳ ಉಪವಾಸ ಅಂತ್ಯ; ಮಣಿಪುರ ಸಿಎಂ ಆಗಬೇಕು ಎಂದ ಇರೋಮ್‌ ಶರ್ಮಿಳಾ Archived 2016-08-10 ವೇಬ್ಯಾಕ್ ಮೆಷಿನ್ ನಲ್ಲಿ., ಕನ್ನಡಪ್ರಭ, 09 Aug 2016
  8. bbc.com,09-08-2016, Irom Sharmila: End of world's longest hunger strike
  9. 90 ಮತಗಳಿಗೆ ಧನ್ಯವಾದಗಳು: ಇರೋಮ್ ಶರ್ಮಿಳಾ, ಪ್ರಜಾವಾಣಿ ವಾರ್ತೆ 13 Mar, 2017