ಇಂಫಾಲ್ ಯುದ್ಧ ಸಮಾಧಿ ಭೂಮಿ

ಇಂಫಾಲ್ ಯುದ್ಧ ಸಮಾಧಿ ಭೂಮಿಯು ಭಾರತದ ಈಶಾನ್ಯದ ಒಂದು ರಾಜ್ಯವಾದ ಮಣಿಪುರದ ರಾಜಧಾನಿ ಇಂಫಾಲದಲ್ಲಿ ಸ್ಥಿತವಾಗಿದೆ. ಮಣಿಪುರವು ಮೇಲಿನ ಬರ್ಮಾದೊಂದಿಗೆ (ಈಗ ಮ್ಯಾನ್ಮಾರ್) ಅಂತರರಾಷ್ಟ್ರೀಯ ಗಡಿಯನ್ನು ಹೊಂದಿದೆ. ಈ ಸಮಾಧಿ ಭೂಮಿಯು ಎರಡನೇ ಮಹಾಯುದ್ಧದ ೧,೬೦೦ ಕಾಮ್ನ್‍ವೆಲ್ತ್ ಸಮಾಧಿಗಳನ್ನು ಹೊಂದಿದೆ. ಇದನ್ನು ಕಾಮನ್‍ವೆಲ್ತ್ ಯುದ್ಧ ಸಮಾಧಿಗಳ ಆಯೋಗವು ನಿರ್ವಹಿಸುತ್ತದೆ.[]

ಲೂಯಿಸ್‌ ಮೌಂಟ್‌‌ಬ್ಯಾಟನ್‌‌‌‌ ಇಂಫಾಲ್ ಮತ್ತು ಕೋಹಿಮಾದಲ್ಲಿ ಹೋರಾಡಲಾದ ಯುದ್ಧವನ್ನು "ಸಂಭಾವ್ಯವಾಗಿ ಇತಿಹಾಸದಲ್ಲಿನ ಮಹಾನ್ ಯುದ್ಧಗಳಲ್ಲಿ ಒಂದು" ಎಂದು ವರ್ಣಿಸಿದನು. ೨೦೧೩ರಲ್ಲಿ, ರಾಷ್ಟ್ರೀಯ ಭೂಸೇನಾ ಸಂಗ್ರಹಾಲಯವು ನಡೆಸಿದ ರಾಷ್ಟ್ರೀಯ ಸಮೀಕ್ಷೆಯನ್ನು ಆಧರಿಸಿ ಕೋಹಿಮಾ ಮತ್ತು ಇಂಫಾಲದ ಯುದ್ಧವನ್ನು ಇತಿಹಾಸದಲ್ಲಿನ ಅತಿ ಮಹಾನ್ ಯುದ್ಧಗಳಲ್ಲಿ ಒಂದು ಎಂದು ಮತದಾನದ ಮೂಲಕ ನಿರ್ಧರಿಸಲಾಯಿತು.[]

ಉಲ್ಲೇಖಗಳು

ಬದಲಾಯಿಸಿ
  1. "Imphal War Cemetery". Commonwealth War Graves Commission.
  2. "CWGC Remembers 70th Anniversary of Imphal". Commonwealth War Graves Commission. 23 June 2014.

ಗ್ರಂಥಸೂಚಿ

ಬದಲಾಯಿಸಿ