ಇಂತಿ ನಿನ್ನ ಪ್ರೀತಿಯ
ಇದೊಂದು ದುರಂತ ಕಥೆಯುಳ್ಳ ಚಲನಚಿತ್ರ. ನಾಯಕ ಹಾಗೂ ನಾಯಕಿಯ ಪ್ರೇಮ ಸಲ್ಲಾಪದಿಂದಲೇ ಆರಂಭಗೊಳ್ಳುವ ಚಿತ್ರವಿದು. ನಾಯಕ ಹಾಗೂ ನಾಯಕಿಯ ಅಣ್ಣನ ಜಗಳ, ನಾಯಕಿಯ ಮೇಲಿರುವ ತನ್ನ ಸೋದರ ಮಾವನ ಋಣ- ಇವುಗಳಿಂದ ಇವರಿಬ್ಬರ ಮದುವೆ ಮುರಿದು ಬೀಳುತ್ತದೆ. ನಂತರ ಆರಂಭವಾಗುವುದೇ ನಾಯಕನ "ಪಾನ ಮಹೊತ್ಸವ".ಇವುಗಳ ನಡುವೆ ಮದುವೆಯಾದ ಹಳೆಯ ಪ್ರೇಯಸಿಯೊಡನೆ ಎರಡು ಪುಟ್ಟ ಭೇಟಿ! ನಾಯಕ ಅವನತಿಯತ್ತ ಸಾಗಿರುವಾಗ ಮನೆಯವರಿಂದ ಆತನ ಬದಲಾವಣೆಗಾಗಿ ಪ್ರಯತ್ನ. ಇದಕ್ಕೆ ಉತ್ತರ ಆತನ ಮದುವೆ. ಮದುವೆಯಾಗಲಿರುವ ಹುಡುಗಿಗೆ ಸಾವಿರ ಕನಸುಗಳು - ಅದನ್ನು ಹೇಳುವ ಒಂದು ಇಂಪಾದ ಹಾಡು. ಮೊದಲ ರಾತ್ರಿಯಲ್ಲೆ ಆಕೆಯ ಕನಸು ಭಗ್ನ! ಸರಸ ಸಲಾಪಗಳಿಲ್ಲದ ಅವರ ದಾಂಪತ್ಯದಲ್ಲಿ ಒಂದು ಹೊಸ ಜೀವ ಅವರ ಬದುಕಿಗೆ ಸೇರ್ಪಡೆ - ಅದರಿಂದ ನಾಯಕನ ಚಟದ ತಾತ್ಕಾಲಿಕ ಅಂತ್ಯ. ಇನ್ನೇನು ಕಥೆ ಸರಾಗವಾಗಿ ಸಾಗುತ್ತದೆ ಅನ್ನುವಷ್ಟರಲ್ಲಿ ಆತನ ಹೆಂಡತಿಯ ದುರ್ಮರಣ, ಪರಿಣಾಮ??? ಅದೇ ಚಟದ ಪುನರಾರಂಭ. ಸಂಗೀತ ಕಲಿತಿದ್ದ ಆ ಪುಟ್ಟ ಮಗು "ಎದೆ ತುಂಬಿ ಹಾಡುವೆನು" ಕಾರ್ಯಕ್ರಮದಲ್ಲಿ ಹಾಡುವ ಹಾಡು, ಆಡುವ ಮಾತು, ಎಸ್.ಪಿ.ಬಿ. ಅವರ ಬುದ್ದಿಮಾತು - ಇವುಗಳಿಂದ ನಾಯಕನ ಬದಲಾವಣೆ! ಇದು ಈ ಚಿತ್ರದ ಒಟ್ಟಾರೆ ಕಥಾವಸ್ತು. ಇದರ ಮಧ್ಯೆ ನಾಯಕನ ಮಾವನ ಪ್ರೇಮ ಭಗ್ನಗೊಳ್ಳುವುದು, ಆತನ ಪ್ರೇಯಸಿ ಸತ್ತು ರಸ್ತೆಯಲ್ಲಿ ಅನಾಥ ಶವವಾಗಿ ಬಿದ್ದಿರುವುದು, ಸ್ನೇಹಿತರೊಡನೆ ಪಾನಗೋಷ್ಟಿ - ಸಂಭಾಷಣೆಗಳು, ನಾಯಕ ಹಾಗೂ ನಾಯಕಿಯ ಸರಸ ಸಲ್ಲಾಪಗಳು, ತುಂಬಾ ಇಂಪಾದ ಹಾಡುಗಳು - ಇವು 'ಇಂತಿ ನಿನ್ನ ಪ್ರೀತಿಯ' ಚಿತ್ರಕ್ಕೆ ಜೀವ ತುಂಬುತ್ತವೆ.
ಇಂತಿ ನಿನ್ನ ಪ್ರೀತಿಯ | |
---|---|
ಚಿತ್ರ:ಇಂತಿ | |
ಇಂತಿ ನಿನ್ನ ಪ್ರೀತಿಯ | |
ನಿರ್ದೇಶನ | ಸೂರಿ |
ನಿರ್ಮಾಪಕ | ಸೂರಿ, ಯೋಗರಾಜ್ ಭಟ್ |
ಪಾತ್ರವರ್ಗ | ಶ್ರೀನಗರ್ ಕಿಟ್ಟಿ ಭಾವನ ಸೋನು, ರಂಗಾಯಣ ರಘು, ಕಿಶೋರ್ |
ಸಂಗೀತ | ಸಾಧು ಕೋಕಿಲ |
ಛಾಯಾಗ್ರಹಣ | ಸತ್ಯ ಹೆಗಡೆ |
ಬಿಡುಗಡೆಯಾಗಿದ್ದು | ೨೯.೦೨.೨೦೦೮ |
ಸಾಹಿತ್ಯ | ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್ |