ಇಂಡೋಲ್ ಅಸಿಟಿಕ್ ಆಮ್ಲ

ಇಂಡೋಲ್ ಅಸಿಟಿಕ್ ಆಮ್ಲದ ಪೂರ್ಣ ಹೆಸರು 3-ಇಂಡೋಲ್ ಅಸಿಟಿಕ್ ಆಮ್ಲ (ಬೀಟ ಇಂಡೋಲ್ ಅಸಿಟಿಕ್ ಆಮ್ಲ, ಬೀಟ ಇಂಡೋಲೈಲ್ ಅಸಿಟಿಕ್ ಆಮ್ಲ).[೧][೨] ಇದು ಆಕ್ಸಿನ್ ಗುಂಪಿಗೆ ಸೇರಿದ ಒಂದು ಪ್ರಮುಖ ಚೋದಕ ದ್ರವ. ಇದರ ರಾಸಾಯನಿಕಸೂತ್ರ C8H6NCH2COOH.

ರಚನಾ ಸೂತ್ರ

ಗುಣಗಳು ಬದಲಾಯಿಸಿ

ಆಮ್ಲ ಹರಳಿನ ರೂಪದಲ್ಲಿ ದೊರೆಯುತ್ತದೆ. ಹರಳುಗಳು 1680-1700 ಸೆಂ. ಉಷ್ಣತೆಯಲ್ಲಿ ದ್ರವಿಸುತ್ತವೆ. ಇವು ನೀರಿನಲ್ಲಿ ವಿಲೀನವಾಗುವುದಿಲ್ಲ; ಆಲ್ಕೋಹಾಲ್ ಮತ್ತು ಈಥರ್‌ಗಳಲ್ಲಿ ವಿಲೀನವಾಗುತ್ತವೆ.

ಕ್ರಿಯೆ ಬದಲಾಯಿಸಿ

ಈ ಚೋದಕ ದ್ರವಗಳು ಸಸ್ಯಗಳ ಬೆಳವಣಿಗೆಯನ್ನು ಪ್ರೇರೇಪಿಸುತ್ತವೆ. ನೆರಳಿನಲ್ಲಿ ಬೆಳೆಯುವ ಗಿಡಗಳ ಹಸಿರು ಕೊನೆಗಳಲ್ಲಿ ಮತ್ತು ಬೇರಿನ ಕೊನೆಗಳಲ್ಲಿ ಈ ಆಮ್ಲ ಸ್ವಾಭಾವಿಕವಾಗಿ ದೊರೆಯುತ್ತದೆ.

ಉಪಯೋಗಗಳು ಬದಲಾಯಿಸಿ

ಹೆಚ್ಚಿನ ಸಾಂದ್ರಣದಲ್ಲಿ ಸಸ್ಯಗಳ ಬೆಳವಣಿಗೆಯನ್ನು ಇದು ನಿರೋಧಿಸುತ್ತದೆ. ಈ ಕಾರಣದಿಂದಾಗಿ ನಿರ್ಮೂಲ ಮಾಡಲು ಇದರ ಬಳಕೆ ಇದೆ. ತರಕಾರಿಗಳನ್ನು ಶೇಖರಿಸಿಡುವ ಸಮಯದಲ್ಲಿ ಅವು ಮೊಳಕೆಯೊಡೆಯದಂತೆ ಮಾಡಲೂ ಗಿಡದಲ್ಲಿ ಹಣ್ಣಿನ ಬೆಳವಣಿಗೆಯನ್ನು ಪ್ರೇರೇಪಿಸಲೂ ಈ ಆಮ್ಲವನ್ನು ಬಳಸುತ್ತಾರೆ.

ಉಲ್ಲೇಖಗಳು ಬದಲಾಯಿಸಿ

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: