ಇಂಡೋ-ಯುರೋಪಿಯನ್ ಭಾಷೆಗಳು

(ಇಂಡೊ ಯುರೋಪಿಯನ್ ಭಾಷೆಗಳು ಇಂದ ಪುನರ್ನಿರ್ದೇಶಿತ)

ಇಂಡೋ-ಯುರೋಪಿಯನ್ ಅಥವಾ ಭಾರತಯೂರೋಪಿ ಭಾಷೆಗಳು ನೂರಾರು ಭಾಷೆಗಳನ್ನು ಒಳಗೊಂಡಿರುವ ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಮಾತುಗಾರರನ್ನುಳ್ಳ ಭಾಷಾ ಕುಟುಂಬ. ಈ ಗುಂಪಿಗೆ ಸೇರಿದ ಭಾಷೆಗಳು ಇತರ ಯಾವುದೇ ಮನೆತನಕ್ಕೆ ಸೇರಿದ ಭಾಷೆಗಳಿಗಿಂತಲೂ ಹೆಚ್ಚು ವಿಸ್ತಾರವಾಗಿ ಪ್ರಪಂಚದಲ್ಲಿ ವ್ಯಾಪಿಸಿವೆ. ಅಲ್ಲದೆ ಈ ಭಾಷೆಗಳ ಸಂಖ್ಯೆಯೂ ಅಧಿಕವಿದ್ದು ಮಿಕ್ಕೆಲ್ಲ ಭಾಷೆಗಳಿಗಿಂತ ಹೆಚ್ಚು ವಿಸ್ತಾರವಾಗಿ ಪುನರ್‍ವಿಂಗಡಣೆಗೊಂಡಿದೆ. ಭಾರತದ ಜನಸಂಖ್ಯೆಯಲ್ಲಿನ ಅಧಿಕಪಾಲು ಜನ ಈ ಮೂಲದ ಭಾಷೆಗಳನ್ನೇ ಆಡುತ್ತಾರೆ. ಈ ಭಾಷೆಗಳಲ್ಲಿ ಹಿಂದಿ, ಉರ್ದು, ಬಂಗಾಳಿ, ಅಸಾಮಿ, ಒರಿಯ, ಮರಾಠಿ, ಪಂಜಾಬಿ ಮತ್ತು ಕಾಶ್ಮೀರಿ - ಇವು ಮುಖ್ಯವಾದುವು. ಇವುಗಳಿಗೆ ಸಿಂಹಳದ ಸಿಂಹಳಿ ಭಾಷೆಯನ್ನೂ ಸೇರಿಸಬಹುದು. ಇಂಡೋ-ಆರ್ಯನ್ ಪಂಗಡದ ಪ್ರಾಚೀನ ಸ್ತರಗಳಲ್ಲಿ (i) ವೈದಿಕ ಭಾಷೆ (ii) ಭಾಷೆಯಲ್ಲಿನ ಪ್ರಾಚೀನತಮ ಗ್ರಂಥಗಳ ಕಾಲ ಸು.ಕ್ರಿ.ಪೂ. 2ಂಂಂ ಇರಬಹುದು: (ii) ಅಭಿಜಾತ ಸಂಸ್ಕøತ ಭಾಷೆ; (iii) ಪಾಲಿ, ಪ್ರಾಕೃತ ಮತ್ತು ಅಪಭ್ರಂಶವನ್ನೊಳಗೊಂಡಂತಿರುವ ಮಧ್ಯಯುಗದ ಇಂಡೋ-ಆರ್ಯನ್ ಭಾಷೆ. ಇದರಲ್ಲಿ ಮೂರು ಹಂತಗಳಿವೆ. ಪ್ರಾಚೀನ ಇಂಡೋ-ಆರ್ಯನ್ ಭಾಷೆ (ವೈದಿಕ) ಹಳೆಯ ಇರಾನೀ ಭಾಷೆಗೆ ನಿಕಟವಾಗಿ ಸಂಬಂಧಿಸಿದೆ. ಮಧ್ಯಕಾಲದ ಪರ್ಷಿಯನ್ (ಪಹ್ಲವಿ), ಪಾರ್ಥಿಯನ್, ಸೊಗ್‍ಡಿಯನ್, ಜೋರಾಸ್ಮಿಯನ್ ಮತ್ತು ಶಕ ಭಾಷೆಗಳಿಂದ ಮಧ್ಯಕಾಲದ ಇರಾನಿ ಹಂತ ಪ್ರತಿನಿಧಿತವಾಗಿದೆ. ಆಧುನಿಕ ಇರಾನೀ ಭಾಷೆಗಳಲ್ಲಿ ಪರ್ಷಿಯನ್ ಮತ್ತು ಪಸ್ರುಭಾಷೆಗಳು ಮುಖ್ಯ. ಇವುಗಳಿಗೆ ಕೆಲವಾರು ಸಣ್ಣಪುಟ್ಟ ಪ್ರಾಂತೀಯ ಭಾಷೆಗಳನ್ನು ಸೇರಿಸಬಹುದು. ಇವುಗಳಲ್ಲಿ ಓಸೆಟಿಕ್ ಭಾಷೆ ಅತ್ಯಂತ ಗಮನಾರ್ಹ.

ಇಂಡೋ-ಯುರೋಪಿಯನ್
[ಇಂಡೋ-ಜರ್ಮನಿಕ್ (ವಿರಳ)]
ಭೌಗೋಳಿಕ
ವ್ಯಾಪಕತೆ:
೧೫ನೇ ಶತಮಾನದ ಮುಂಚೆ: ಯುರೋಪ್, ಮತ್ತು ದಕ್ಷಿಣ, ಮಧ್ಯ ಹಾಗು ಪಶ್ಚಿಮ ಏಷ್ಯಾ;
ಇಂದು ವಿಶ್ವದಾದ್ಯಂತ.
ವಂಶವೃಕ್ಷ ಸ್ಥಾನ: ಪ್ರಪಂಚದ ಪ್ರಮುಖ ಭಾಷಾ ಕುಟುಂಬಗಳಲ್ಲಿ ಒಂದು
ವಿಭಾಗಗಳು:

 


ಕಿತ್ತಾಳೆ ಬಣ್ಣ: ಇಂಡೋ-ಯುರೋಪಿಯನ್ ಭಾಷೆಗಳ ಮಾತುಗಾರರು ಬಹುಮತದಲ್ಲಿರುವ ದೇಶಗಳು.
ಹಳದಿ: ಇಂಡೋ-ಯುರೋಪಿಯನ್ ಭಾಷೆಗಳ ಮಾತುಗಾರರು ಅಲ್ಪಸಂಖ್ಯೆಯಲ್ಲಿದ್ದು ದೇಶದ ಅಧಿಕೃತ ಭಾಷೆಗಳಲ್ಲಿ ಸೇರಿರುವ ದೇಶಗಳು

ಭಾಷಾ ವಿಭಾಗ

ಬದಲಾಯಿಸಿ

ಮೇಲಿನ ಎಲ್ಲ ಭಾಷೆಗಳೂ ಇಂಡೋ-ಯೂರೋಪಿಯನ್ ಭಾಷಾ ಮನೆತನದ ಒಂದು ವಿಭಾಗವಾಗಿದೆ. ಇತರ ಮುಖ್ಯ ವಿಭಾಗಗಳು ಹೀಗಿವೆ;

ಬಾಲ್ಟೋ-ಸ್ಲ್ಯವೋನಿಕ್

ಬದಲಾಯಿಸಿ

ಬಾಲ್ಟಿಕ್ ಗುಂಪಿನಲ್ಲಿ ಲಿಥುಯೇನಿಯನ್, ಲೆಟಿಷ್ ಮತ್ತು ಅಳಿದುಹೋದ ಹಳೆಯ ಪ್ರಷ್ಯನ್ ಭಾಷೆಗಳಿವೆ. ಸ್ಲ್ಯವೋನಿಕ್ ಭಾಷೆ ಮೊದಮೊದಲು ಚರ್ಚುಗಳಲ್ಲಿ ಬಳಸುತ್ತಿದ್ದ ಹಳೆಯ ರೂಪದಲ್ಲಿ ಕಂಡು ಬರುತ್ತದೆ. ಇದರ ಬಗ್ಗೆ ಪ್ರಾಚೀನ ದಾಖಲೆಗಳು 9ನೆಯ ಶತಮಾನದವಾಗಿವೆ. ಇತ್ತೀಚೆಗೆ ಈ ಭಾಷೆ ರಷ್ಯನ್, ಪೋಲಿಷ್, ಜೆಕ್, ಸರ್‍ಬೊ-ಕ್ರೋಟ್ ಮತ್ತು ಬಲ್ಗೇರಿಯನ್ ಭಾಷೆಗಳಿಂದ ಪ್ರತಿನಿಧಿತವಾಗಿದೆ.

ಅಮೆರಿಕನ್ ಭಾಷೆ

ಬದಲಾಯಿಸಿ

ಇದನ್ನು ಕ್ರಿ.ಶ. 5ನೆಯ ಶತಮಾನದಿಂದಲೂ ಗುರುತಿಸಲಾಗಿದೆ.[]

ಅಲ್ಬೇನಿಯ ಭಾಷೆ

ಬದಲಾಯಿಸಿ

ಈಚೆಗೆ ಇದನ್ನು ಗುರುತಿಸಲಾಗಿದೆ.ಈ ನಾಲ್ಕು ಗುಂಪುಗಳನ್ನು ಒಟ್ಟಾಗಿ ಶತಮ್ ಭಾಷೆಯೆನ್ನುತ್ತಾರೆ. ಇದಕ್ಕೆ ತದ್ವಿರುದ್ಧವಾಗಿರುವ ಇಂಡೋ-ಯೂರೋಪಿಯನ್ ಭಾಷೆಯ ಇತರ ಶಾಖೆಗಳನ್ನು ಕೆಂಟುಮ್ ಭಾಷೆಯೆಂದು ಕರೆಯುತ್ತಾರೆ. ಹನ್ಡ್ರಡ್ ಎಂಬ ಅರ್ಥಬರುವ ಪದದಲ್ಲಿನ ಐಇ ಕೆ ಎಂಬುದನ್ನು ಅವರು ಉಚ್ಚರಿಸುವ ರೀತಿಯಿಂದಾಗಿ ಈ ಎರಡು ಗುಂಪುಗಳಿಗೆ ಈ ಹೆಸರು ಬಂದಿದೆ. ಕೆಂಟುಮ್ ಭಾಷೆಗಳು ಇವನ್ನು ಯಥಾವತ್ತಾಗಿ ಉಳಿಸಿಕೊಳ್ಳುತ್ತವೆ. ಆದರೆ ಶತಮ್ ಭಾಷೆಗಳಲ್ಲಿ ಇದು ಒಂದು ರೀತಿಯ ಊಷ್ಮ ವರ್ಣಾಕ್ಷರವಾಗಿ ಮಾರ್ಪಡುತ್ತದೆ. ಇದೇ ಬಗೆಯ ವ್ಯತ್ಯಾಸ ಐಇ ಜಿ ,ಘ್ ಗಳಲ್ಲೂ ಕಂಡುಬರುತ್ತದೆ. ಕಂಠ್ಯೋಷ್ಠ್ಯಗಳ ವಿಚಾರಗಳಲ್ಲೂ ಈ ಶತಮ್ ಭಾಷೆಗಳು ಓಷ್ಠ್ಯಾಂಶವನ್ನು ಕಳೆದುಕೊಂಡು ಸಾಮ್ಯವನ್ನು ಹೊಂದುತ್ತವೆ. ಕೆಂಟುಮ್ ಭಾಷೆಗಳ ಉಪಭಾಗಗಳು ಹೀಗಿವೆ:[]

ಕೆಂಟುಮ್ ಭಾಷೆ

ಬದಲಾಯಿಸಿ

ಅನೇಕ ಉಪಭಾಷೆಗಳನ್ನುಳ್ಳ ಗ್ರೀಕ್ ಭಾಷೆ: ಕ್ರಿ.ಪೂ.8ನೆಯ ಶತಮಾನದ ಹೋಮರನ ಕಾವ್ಯಗಳಿಂದ ಇದರ ಸಾಹಿತ್ಯ ಪ್ರಾರಂಭವಾಗುತ್ತದೆ. ಆದರೆ ದೊರೆತಿರುವ ಮ್ಯೆಸೀನಿಯನ್ ದಾಖಲೆಗಳಿಂದಾಗಿ, ಈ ಭಾಷೆಯ ಸಾಹಿತ್ಯ ಚರಿತ್ರೆ ಕ್ರಿ.ಪೂ. 1200ರಷ್ಟು ಹಳೆಯದೆಂದು ಗೊತ್ತಾಗಿದೆ.

ಉಪಭಾಷೆಗಳು

ಬದಲಾಯಿಸಿ

ಕ್ರಿ.ಪೂ. 200 ರಿಂದೀಚೆಗೆ ಗುರುತಿಸಲಾಗಿರುವ ಲ್ಯಾಟಿನ್ ಭಾಷೆಯನ್ನೊಳಗೊಂಡಿರುವ ಇಟ್ಯಾಲಿಕ್ ಭಾಷೆ ಮತ್ತು ಓಸಿ-ಅಂಬ್ರಿಯನ್ ಉಪಭಾಷೆಗಳು: ಫ್ರೆಂಚ್, ಇಟಾಲಿಯನ್, ಸ್ಟ್ಯಾನಿಷ್, ಪೋರ್ಚುಗೀಸ್, ರುಮೇನಿಯನ್ ಮುಂತಾದ ಆಧುನಿಕ ರೋಮಾನ್ಸ್ ಭಾಷೆಗಳಾಗಿ ಲ್ಯಾಟಿನ್ ಅಭಿವೃದ್ಧಿ ಹೊಂದಿದೆ. ಇಟಾಲಿಯನ್ ಪ್ರಾಂತೀಯ ಭಾಷೆಗಳ ಪರಿಚಯ ಶಾಸನ ಬರಹಗಳಿಂದ ಸ್ವಲ್ಪ ಮಾತ್ರ ಆಯಿತಾದರೂ ಅವು ರೋಮನ್ನರ ಇಟಲಿ ವಿಜಯದ ಪರಿಣಾಮದಿಂದಾಗಿ ನಶಿಸಿಹೋದವು.

ಕೆಲ್ಟಿಕ್ ಭಾಷೆ

ಬದಲಾಯಿಸಿ

ಒಂದಾನೊಂದು ಕಾಲದಲ್ಲಿ ಬಹು ವ್ಯಾಪಕವಾಗಿದ್ದ ಈ ಭಾಷೆ ಈಗ ಬ್ರಿಟಿಷ್ ದ್ವೀಪಗಳು ಮತ್ತು ಬ್ರಿಟನ್ನಿನ ಕೆಲವು ಭಾಗಗಳಿಗೆ ಮಾತ್ರ ಸೀಮಿತವಾಗಿದೆ. ಇದರ ಎರಡು ಮುಖ್ಯವಾದ ಶಾಖೆಗಳೆಂದರೆ ಗ್ಯಾಲಿಕ್ (ಐರಿಷ್) ಮತ್ತು ವೆಲ್ಷ್. ಲುಪ್ತ ಕಾರ್ನಿಷ್ ಮತ್ತು ಬ್ರಿಟನ್‍ಗಳನ್ನೊಳಗೊಂಡ ಬ್ರಿಟ್ಯಾನಿಕ್ ಭಾಷೆಗಳು.

ಜಮ್ರ್ಯಾನಿಕ್ ಭಾಷೆ

ಬದಲಾಯಿಸಿ

ಇದನ್ನು ಪೂರ್ವ ಜಮ್ರ್ಯಾನಿಕ್ ಅಥವಾ ಲುಪ್ತಗಾಥಿಕ್ ಭಾಷೆ, ಉತ್ತರ ಜಮ್ರ್ಯಾನಿಕ್ ಸ್ಕಾಂಡಿನೇವಿಯನ್ ಮತ್ತು ಇಂಗ್ಲಿಷ್, ಜರ್ಮನ್ ಸೇರಿದಂತೆ ಪಶ್ಚಿಮ ಜಮ್ರ್ಯಾನಿಕ್ ಭಾಷೆ - ಎಂಬುದಾಗಿ ವಿಂಗಡಿಸಬಹುದು. ಬೈಬಲಿನ ಗಾಥಿಕ್ ಭಾಷಾಂತರವೇ (ಕ್ರಿ.ಶ. 4ನೆಯ ಶತಮಾನ) ಜಮ್ರ್ಯಾನಿಕ್ ಭಾಷೆಯ ಪ್ರಾಚೀನತಮ ಸಾಹಿತ್ಯಸ್ಮಾರಕವಾಗಿದೆ.

ಟೊಕೇರಿಯನ್ ಭಾಷೆ

ಬದಲಾಯಿಸಿ

ಟೊಕೇರಿಯನ್ ಭಾಷೆಯ ಉಪಭಾಷೆಗಳಾಗಿದ್ದು ಸಂಪ್ರದಾಯದ ರೀತಿಯಲ್ಲಿ ಎ ಮತ್ತು ಬಿ ಗಳೆಂದು ಕರೆಯಲಾಗಿರುವ ಉಪಭಾಷೆಗಳು ಕ್ರಿ.ಶ. 6-10ನೆಯ ಶತಮಾನದವರೆಗಿನ ಮಧ್ಯ ಏಷ್ಯದ ಬೌದ್ಧರ ಹಸ್ತಪ್ರತಿಗಳಲ್ಲಿ ಕಾಣಸಿಕ್ಕಿವೆ. ಈ ಭಾಷೆಗಳನ್ನು 20ನೆಯ ಶತಮಾನದ ಆದಿಯಲ್ಲಿ ಗುರುತಿಸಲಾಯಿತು.

ಹಿಟ್ಟೈಟ್ ಮತ್ತು ಅನಟೋಲಿಯನ್ ಭಾಷೆ

ಬದಲಾಯಿಸಿ

ಹಿಟ್ಟೈಟ್ ಮತ್ತು ಅನಟೋಲಿಯನ್ ಭಾಷೆಗಳನ್ನು ಮುಖ್ಯವಾಗಿ 20ನೆಯ ಶತಮಾನದ ಆದಿಯಲ್ಲೇ ಗುರುತಿಸಿದ್ದಾರೆ. ಇವುಗಳಲ್ಲಿ ಅತಿ ಪ್ರಮುಖವಾದದ್ದು ಕ್ಯೂನಿಫಾರಮ್ ಲಿಪಿಯುಳ್ಳ ಹಿಟ್ಟೈಟ್ ಭಾಷೆ. ಇದರ ಕ್ರಿ.ಪೂ. 1400-1200 ಅವಧಿಯ ದಾಖಲೆಗಳು ಜೇಡಿಮಣ್ಣಿನ ಫಲಕಗಳ ಮೇಲೆ ಕಂಡುಬಂದಿದ್ದು ಅವನ್ನು ಸಂರಕ್ಷಿಸಿಡಲಾಗಿದೆ. ಈ ಪಂಗಡಕ್ಕೆ ಸೇರಿದ್ದು, ಇದರಷ್ಟು ಬೆಳಕಿಗೆ ಬಾರದಿರುವ ಇತರ ಭಾಷೆಗಳೆಂದರೆ ಲೂವಿಯನ್, ಪಾಲಿಯನ್ ಮತ್ತು ಹೈರೋಗ್ಲಿಫಿಕ್ ಹಿಟ್ಟೈಟ್.ಮೇಲೆ ತಿಳಿಸಿರುವ ಭಾಷೆಗಳ ಜೊತೆಗೆ ಬಹಳ ಹಿಂದೆ ಇದ್ದು ಈಗ ಲುಪ್ತವಾದ ಭಾಷೆಗಳು ಗಣನೀಯ ಸಂಖ್ಯೆಯಲ್ಲಿವೆ. ಇಲ್ಲೀರಿಯನ್, ಥ್ರೇಸಿಯನ್, ಫ್ರಿಜಿಯನ್ ಇತ್ಯಾದಿಗಳು ಈ ವರ್ಗದವಾಗಿವೆ.

ಇಂಡೋ-ಯೂರೋಪಿಯನ್ ಭಾಷೆಗಳು

ಬದಲಾಯಿಸಿ

ಮೊದಲು ತಿಳಿಸಿರುವಂತೆ ಅತಿ ಹಿಂದೆಯೇ ಇಂಡೋ-ಯೂರೋಪಿಯನ್ ಭಾಷೆಗಳು ಬಹಳವಾಗಿದ್ದು ವಿಸ್ತಾರವಾಗಿ ವ್ಯಾಪಿಸಿದ್ದುವು. ಇತಿಹಾಸಪೂರ್ವ ಯುಗದಲ್ಲಿ ಜನರ ವಲಸೆ ಮತ್ತು ಚಲನವಲನಗಳು ಬಹು ವ್ಯಾಪಕವಾಗಿ ಇದ್ದವೆನ್ನಲು ಇದೂ ಒಂದು ಆಧಾರವಾಗುತ್ತದೆ. ಇಂಡೋ-ಯೂರೋಪಿಯನ್ ಭಾಷಾವರ್ಗದ ಮೂಲಸ್ಥಾನವಾವುದೆಂಬುದರ ಬಗ್ಗೆ ವಿಪುಲವಾಗಿ ಚರ್ಚೆ ನಡೆದಿದೆ. ಮೂಲಸ್ಥಾನ ಯೂರೋಪ್ ಎಂಬ ಭಾವನೆ ಖಚಿತವಾಗಿ ಅದು ಮಧ್ಯ ಏಷ್ಯ ಎಂಬ ಹಳೆಯ ಕಲ್ಪನೆಯನ್ನು ಈಗ ಕೈಬಿಡಲಾಗಿದೆ. ಮಧ್ಯ ಯೂರೋಪ್ ಮತ್ತು ಡ್ಯಾನ್ಯೂಬ್ ಕಣಿವೆಗಳು ಈ ಭಾಷೆಗಳ ಮೂಲಸ್ಥಾನವಾಗಿರಬೇಕೆಂದು ಕಾಣುತ್ತದೆ. ಪ್ರತ್ಯೇಕಗೊಂಡ ಭಾಷೆಗಳಲ್ಲಿ ಬಹುಶಃ ಹಿಟ್ಟೈಟ್ ಮತ್ತು ಅನುಟೋಲಿಯನ್ ಭಾಷೆಗಳು ಬಹಳ ಮೊದಲೇ ಮೂಲದಿಂದ ಕವಲೊಡೆದಿರಬಹುದು. ಇಂಡೋ-ಯೂರೋಪಿಯನ್ ಭಾಷೆಗಳನ್ನು ಭಾರತಕ್ಕೆ ತಂದ ಇಂಡೋ-ಆರ್ಯನ್ನರ ವಲಸೆಯ ಕೊನೆಯ ಹಂತ ಕ್ರಿ. ಪೂ. 1500ರ ಸುಮಾರಿನಲ್ಲಿ ಆಗಿದ್ದಿರಬೇಕು. ಇದೇ ಕಾಲದಲ್ಲೇ ಗ್ರೀಕ್ ಭಾಷೆಯನ್ನಾಡುತ್ತಿದ್ದ ಜನಾಂಗಗಳು ಗ್ರೀಸನ್ನು ಆವರಿಸಿಕೊಂಡವೆಂದು ಕಾಣುತ್ತದೆ. ಅನಂತರದ ಕೆಲ್ಟ್, ಜರ್ಮನ್ ಮತ್ತು ಸ್ಲ್ಯಾವ್ ಜನರ ವಲಸೆಗಳು ಚಾರಿತ್ರಿಕ ಸಂಗತಿಗಳಾಗಿದ್ದು, ಅವರ ವಿಷಯದಲ್ಲಿ ಗಮನಿಸಬೇಕಾದ ಘಟನೆಗಳ ಉಲ್ಲೇಖ ಬಹುಶಃ ಇತಿಹಾಸಪೂರ್ವಕಾಲದಲ್ಲಿ ನಡೆದುದರ ಪುನರಾವರ್ತನೆಯಾಗುತ್ತದೆ.

ಬಾಹ್ಯ ಸಂಪರ್ಕಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ