ಇಂಡಿಯನ್ ಇನ್ಸ್ಟಿ ಟ್ಯೂಟ್ ಆಫ್ ವರ್ಲ್ಡ್ ಕಲ್ಚರ್

ದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ (IIWC), [೧] ಒಂದು ಸಾರ್ವಜನಿಕ ಸೇವಾ ಸಂಸ್ಥೆ, ದಕ್ಷಿಣ ಬೆಂಗಳೂರಿನ ಬಸವನಗುಡಿಯ ಬಿ.ಪಿ.ವಾಡಿಯ ರಸ್ತೆಯಲ್ಲಿರುವ ಈ ಸಂಸ್ಥೆ ಬಿ. ಪಿ.ವಾಡಿಯ (೮,ಅಕ್ಟೋಬರ್,೧೮೮೧-೨೦,ಆಗಸ್ಟ್, ೧೯೫೮) [] ಹಾಗೂ ಅವರ ಪತ್ನಿ ಸೋಫಿಯಾ ವಾಡಿಯಾರವರಿಂದ ೧೧, ಆಗಸ್ಟ್, ೧೯೪೫ ರಲ್ಲಿ ಸ್ಥಾಪಿಸಲ್ಪಟ್ಟಿತು. ಈ ಸಂಸ್ಥೆಯಲ್ಲಿ ಬಹುದೊಡ್ಡ ಪುಸ್ತಕಾಲಯವಿದೆ. [] ಈ ಪುಸ್ತಕಾಲಯದಲ್ಲಿ ಕೆಲವು ಅಪರೂಪದ ಪುಸ್ತಕಗಳು ಲಭ್ಯವಿದೆ. ತತ್ವಶಾಸ್ತ್ರದಲ್ಲಿ, ಇತಿಹಾಸದಲ್ಲಿ, ಆಸಕ್ತರಿಗೆ ಬಹಳ ದೊಡ್ಡ ಸಂಗ್ರಹವಿದೆ. ಸಾಹಿತ್ಯ, ಸಾಮಾಜಿಕ ಶಾಸ್ತ್ರ, ಪ್ರವಾಸ, ಕಲೆ ಮ್ಯೂಸಿಕ್ ಗೀತೆಗಳು ಕಾವ್ಯ, ಕಥೆ, ಕಾದಂಬರಿಗಳು, ಇಂಗ್ಲಿಷ್ ಭಾಷೆಯ ಪುಸ್ತಕಗಳು ಹೆಚ್ಚಾಗಿವೆ ಕ್ಯಾಟಲಾಗ್ ನಲ್ಲಿ ಹುಡುಕುತ್ತಾ ಹೋದರೆ ಕನ್ನಡ ಪುಸ್ತಕಗಳನ್ನೂ ಕಾಣುತ್ತೇವೆ. ಮಕ್ಕಳ ವಿಭಾಗದಲ್ಲಿ ಸಾವಿರಾರು ವಿಶ್ವದಾದ್ಯಂತ ಕಥೆ, ನಾನ್ ಫಿಕ್ಷನ್, ಸಚಿತ್ರ ಹೊತ್ತಿಗೆಗಳು, ಆಕರ ಗ್ರಂಥಗಳಿವೆ. ಸದಸ್ಯತ್ವ ನೋಂದಣಿ ಮಾಡಿಕೊಳ್ಳುವ ಮೊದಲು ಒಂದು ಹೇಳಿಕೆಗೆ ಸಹಿಹಾಕಬೇಕು. ಸದಸ್ಯತ್ವ ಹೆಚ್ಚು ಕಷ್ಟವಿಲ್ಲ; ಸಾಧಾರಣ. ಮೊದಲು ಕೆಲವು ಫೈಗಳನ್ನು ಓದಿ ಸಹಿಹಾಕಬೇಕು. 'ವಿಶ್ವಭ್ರಾತೃತ್ವದ ತತ್ವಗಳ ಬಗ್ಗೆ ನನಗೆ ಪೂರ್ಣ ಅನುಕಂಪವಿದೆ. ಅದನ್ನು ಪಾಲಿಸುವಲ್ಲಿ ಮತ್ತು ಅವನ್ನು ನಿತ್ಯಜೀವನದ ಅವಿಭಾಜ್ಯ ಅಂಗವಾಗಿ ಆಚರಣೆಗೆ ತರುವಲ್ಲಿ ತತ್ಪರನಾಗುವೆನೆಂದು ಘೋಷಣೆ ಮಾಡುತ್ತೇನೆ'. ("I declare my sympathy with the ideal of Universal Brotherhood and will endeavor to cultivate the attitude of brotherliness in my daily living")

ಇಂಡಿಯನ್ ಇನ್ಸ್ಟಿ ಟ್ಯೂಟ್ ಆಫ್ ವರ್ಲ್ಡ್ ಕಲ್ಚರ್
ಪ್ರಕಾರಸಾರ್ವಜನಿಕ ಪುಸ್ತಕ ಭಂಡಾರ,ಸಾಂಸ್ಕ್ರುತಿಕ ಶಾಖೆ. ವಿಶ್ವದಲ್ಲಿ ಸಾಮರಸ್ಯವನ್ನು ಸ್ಥಾಪಿಸುವಲ್ಲಿ ನೆರವಾಗುತ್ತಿರುವ ಕೇಂದ್ರ
ಸ್ಥಾಪನೆಆಗಸ್ಟ್, ೧೯೪೫ ಬಿ.ಪಿ. ವಾಡಿಯ ರವರಿಂದ
ಸ್ಥಳಬೆಂಗಳೂರು, ಕರ್ನಾಟಕ, ಭಾರತ
ಜಾಲತಾಣhttp://www.iiwcindia.org

ಕ್ಯಾಲೆಂಡರ್ ಕಾರ್ಯಕ್ರಮಗಳು

ಬದಲಾಯಿಸಿ

ಬಹಳ ಜನಪ್ರಿಯ ಕಾರ್ಯಕ್ರಮಗಳಲ್ಲಿ ಭಜನ್ ತರಗತಿಗಳು ಪ್ರಥಮ ಸ್ಥಾನ ಗಳಿಸಿವೆ. ಬೇಸಿಗೆ ಏಪ್ರಿಲ್, ಮೇ ಪ್ರತಿವರ್ಷ ಆಸಕ್ತಿಯ ವಿಷಯಗಳು ಸೇರಿವೆ. ಕಲೆ, ಕ್ರಾಫ್ಟ್, ಅಡುಗೆ, ಸಂಗೀತ, ಬೊಂಬೆ ಆಟ, ತೋಟಗಾರಿಕೆ, (IIWC), []

ಸಂಸ್ಥೆಯ ಕಾರ್ಯ ಪ್ರಣಾಳಿಕೆ

ಬದಲಾಯಿಸಿ

ಪ್ರಣಾಳಿಕೆ ತೂಗು ತೇದಿ ಕಾರ್ಯಕ್ರಮಗಳು Archived 2020-07-15 ವೇಬ್ಯಾಕ್ ಮೆಷಿನ್ ನಲ್ಲಿ. ಪ್ರಪಂಚದ ಎಲ್ಲಾ ದೇಶಗಳ ಮಧ್ಯೆ ವಿಶಾಲ ದೃಷ್ಟಿಯ ಯಾವುದೇ ಪ್ರತಿಬಂಧವಿಲ್ಲದ ನೈಜ ಮನೋಭಾವವನ್ನು ಬೆಳೆಸಿ, ಪೋಷಿಸಿ ದಿಶೆಯಲ್ಲಿ ಮುಂಚೂಣಿಯಲ್ಲಿದ್ದು ಶ್ರಮಿಸುತ್ತಿದೆ. [] ಈ ಇನ್ಸ್ಟಿ ಟ್ಯೂಟ್ ನ ಪ್ರಮುಖ ಆಕರ್ಷಣೆಯೆಂದರೆ ಒಂದು ದೊಡ್ಡ ಪುಸ್ತಕ ಭಂಡಾರವಿದೆ. ೪೦,೦೦೦ ಕ್ಕಿಂತ ಹೆಚ್ಚು ಪುಸ್ತಕಗಳಿವೆ.

ಗ್ರಂಥಗಳು

ಬದಲಾಯಿಸಿ

ಇಲ್ಲಿರುವ ವಿಶೇಷ ಹೊತ್ತಿಗೆಗಳು ಆಕರ ಗ್ರಂಥಗಳಾಗಿ ಬಳಸಲ್ಪಡುತ್ತವೆ.

ಮಕ್ಕಳ ಲೈಬ್ರೆರಿ

ಬದಲಾಯಿಸಿ

ಎಲ್ಲಾ ತರಹದ ಚಿತ್ರ ಕಥೆಗಳ ಪತ್ರಿಕೆಗಳು, ಅಮರ ಚಿತ್ರ ಕಥಾ, ಟಿಂಕಲ್, ಹ್ಯಾರಿ ಪಾಟರ್ಸ್, ಪಂಚತಂತ್ರದ ಕಥೆಗಳು, ಇತ್ಯಾದಿ

ಪತ್ರಿಕೆಗಳ ವಿಭಾಗ

ಬದಲಾಯಿಸಿ

ದೈನಿಕ ಹಾಗೂ ವಾರ ಪತ್ರಿಕೆಗಳು, ಮಾಸ ಪತ್ರಿಕೆಗಳು, ವಿಶ್ವದಾದ್ಯಂತ ತರಿಸಲ್ಪಟ್ಟ ೪೦೦ ಪತ್ರಿಕೆಗಳಿವೆ ಈ ಗ್ರಂಥಾಲಯದ ಇನ್ನೊಂದು ವಿಶೇಷವೆಂದರೆ ಕನ್ನಡ, ಇಂಗ್ಲಿಷ್‌ ಗ್ರಂಥಗಳಲ್ಲದೆ ಪರ್ಶಿಯನ್‌, ಅರೇಬಿಕ್‌ ಗ್ರಂಥಗಳೂ ಇವೆ. ಬೆಹನಾನ್‌ರ ವಿಶೇಷ ಸಂಗ್ರಹದಲ್ಲಿ ಅತ್ಯಂತ ಪ್ರಾಚೀನ ಲೇಖಕರ ಪುರಾಣ, ತಂತ್ರಜ್ಞಾನ, ಇತಿಹಾಸ, ಭಾಷೆಗೆ ಸಂಬಂಧಿಸಿದ ಅಪರೂಪದ ಗ್ರಂಥಗಳೂ ಇವೆ. ನಿಯತಕಾಲಿಕೆಗಳಿವೆ. IIWC ನೂರಾರು, ಕಮ್ಮಟಗಳು, ಭಾಷಣಗಳು, ಕಾರ್ಯಾಗಾರಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಉಚಿತವಾಗಿ ಸಾರ್ವಜನಿಕರಿಗೆ ಲಭ್ಯವಿದೆ. 'ಆನ್ ಲೈನ್' ನ 'ವೆಬ್ ಸೈಟ್' ನಲ್ಲಿ ಸಾರ್ವಜನಿಕ ಉಪನ್ಯಾಸಗಳು ಕಾರ್ಯಕ್ರಮಗಳನ್ನು ವೀಕ್ಷಿಸಬಹುದು. [] ಈ ಸಂಸ್ಥೆಯ ಲೈಬ್ರರಿಯಲ್ಲಿ ಹೆಚ್ಚಾಗಿ ಇಂಗ್ಲಿಷ್ ಪುಸ್ತಕಗಳಿವೆ. ನಾವು 'ಕೆಟಲಾಗ್' ನಲ್ಲಿ ಹುಡುಕುತ್ತಾ ಹೋದರೆ, ಕನ್ನಡದ ಶೀರ್ಷಿಕೆಯ ಪುಸ್ತಕಗಳನ್ನೂ ಕಾಣುತ್ತೇವೆ. ಮಕ್ಕಳ ವಿಭಾಗದಲ್ಲಿ ಸಾವಿರಾರು ವಿಶ್ವದ ಪ್ರಮುಖ ಸ್ಥಳಗಳಿಂದ ತರಿಸಿರುವ ಕಥೆ, ನಾನ್ ಫಿಕ್ಷನ್, ಸಚಿತ್ರ ಹೊತ್ತಿಗೆಗಳು, ಆಕರ ಗ್ರಂಥಗಳು ಮೊದಲಾದವುಗಳು ಸಿಗುತ್ತವೆ.

ಕಾರ್ಯಕ್ರಮಗಳು

ಬದಲಾಯಿಸಿ
  • ಹೊಸ ಪುಸ್ತಕಗಳನ್ನು ಲೋಕಾರ್ಪಣೆ ಮಾಡಲು,
  • ಹೊಸ ಹಾಡಿನ ಸಿ.ಡಿ.ಗಳನ್ನು ಲೋಕಾರ್ಪಣೆ ಮಾಡಲು,
  • ಸಂಗೀತ ಅಥವಾ ನೃತ್ಯ ಕಾರ್ಯಕ್ರಮಗಳು,
  • ಕಾರ್ಯಾಗಾರಗಳ ಆಯೋಜನೆ,

IIWC ತಲುಪಲು

ಬದಲಾಯಿಸಿ

IIWC ಬಸವನಗುಡಿಯ ಎಮ್.ಎನ್.ಕೃಷ್ಣರಾವ್ ಪಾರ್ಕ್ ಎದುರಿಗೇ ಇದೆ. ಗಾಂಧಿಬಝಾರ್ ನಡೆದುಹೋಗುವಷ್ಟು ಹತ್ತಿರ. ಹತ್ತಿರದಲ್ಲಿಯೇ ಬಸವನಗುಡಿ ಪೋಲೀಸ್ ಸ್ಟೇಷನ್ ಇದೆ.

ಉಲ್ಲೇಖಗಳು

ಬದಲಾಯಿಸಿ
  1. chronology
  2. 'ಇಂಡಿಯನ್ ಇನ್ಸ್ಟಿ ಟ್ಯೂಟ್ ಆಫ್ ವರ್ಲ್ಡ್ ಲಲ್ಚರ್ ವಿಜಯ ಕರ್ನಾಟಕ, ೧೨,ಏಪ್ರಿಲ್, ೨೦೧೭]
  3. "BPWadiaBiografy". Archived from the original on 2020-08-09. Retrieved 2020-08-04.
  4. ದಿಯಾಸೊಫಿ ಧರ್ಮವನ್ನು ಮೆಚ್ಚಿ ಅದನ್ನು ಅನುಷ್ಠಾನಕ್ಕೆ ತಂದ ರಷ್ಯನ್ ಮಹಿಳೆ, helena-petrovna-blavatsky
  5. "Transactions". Archived from the original on 2020-07-16. Retrieved 2020-08-04.

ಬಾಹ್ಯ ಸಂಪರ್ಕಗಳು

ಬದಲಾಯಿಸಿ