ಬಿ. ಪಿ.ವಾಡಿಯ
ಬಹ್ಮನ್ಜಿ ಪೆಸ್ಟೊನ್ಜಿ ವಾಡಿಯಾ/ಪೆಸ್ಟೊನ್ಜಿ ಕರ್ಸಿಟಿಜಿ ವಾಡಿಯಾ, ಮತ್ತು ಮಿಥಾ ಬಾಯಿ, ಎಂಬ ಪಾರ್ಸಿ ದಂಪತಿಗಳ ಚೊಚ್ಚಲ ಮಗನಾಗಿ ೮ ಆಗಸ್ಟ್, ೧೮೮೧ರಲ್ಲಿ ಬೊಂಬಾಯಿಯಲ್ಲಿ ಜನಿಸಿದರು. ಇವರಿಗೆ ಒಬ್ಬ ತಮ್ಮ, ಜೆಹಾಂಗೀರ್ ಮತ್ತು ಇಬ್ಬರು ಸೋದರಿಯರು. ಮನಿಜೆ ರುಸ್ತುಮ್ (ಮಸಾನಿಯವರನ್ನು ಮದುವೆಯಾದರು) ಜೇರ್ಬಾಯಿ, ಕುಮಾರಿಯಾಗಿಯೇ ಉಳಿದರು.
ವಿದ್ಯಾಭ್ಯಾಸ ಹಾಗು ನೌಕರಿ
ಬದಲಾಯಿಸಿಬಿ.ಪಿ.ವಾಡಿಯ, (BPW), ಬೊಂಬಾಯಿನಲ್ಲಿ ಮೆಟ್ರಿಕ್ ಮುಗಿಸಿ ಕಾಲೇಜಿಗೆ ಸೇರಿಕೊಳ್ಳಲಿಲ್ಲ ೧೯೦೦ ರಲ್ಲಿ ತಂದೆಯವರು ತಮಗೆ ಪರಿಚಿತರಾದ ಬ್ರಿಟಿಷ್ ಬಟ್ಟೆ ಮಿಲ್ ನಲ್ಲಿ ಅವರಿಗೆ ನೌಕರಿ ಕೊಡಿಸಿದರು. ಆದರೆ ಆ ಕೆಲಸ ಬಿ.ಪಿ.ವಾರವರ ಮನೋಭಾವಕ್ಕೆ ಒಗ್ಗಿಬರಲಿಲ್ಲ. ಹೆಚ್ಚುಕಾಲ ಆ ಕಂಪೆನಿಯಲ್ಲಿ ಇರಲಿಲ್ಲ. ಮುಂದೆ ತಮ್ಮ ತಂದೆಯವರ ಖಾಸಗಿ ಬಟ್ಟೆ ಮಾರುವ ವ್ಯಾಪಾರದಲ್ಲಿ ಸೇರಿದರು . ಆದರೆ ತಂದೆಯವರು ತೀರಿಕೊಂಡಾಗ BPW ರಿಗೆ ನಾಲ್ಕು ಜನರ ಜವಾಬ್ದಾರಿಯನ್ನು ನಿಭಾಯಿಸಲು ಕಷ್ಟವಾಯಿತು. ಪರಿವಾರದ ಒಬ್ಬ ಗೆಳೆಯನ ಸಹಾಯದಿಂದ ತಮ್ಮ ಬಿಜಿನೆಸ್ ಮುಂದುವರೆಸಿ ಅದರಲ್ಲೇ ಸಿದ್ಧಿಗಳಿಸಿದರು.
ಥಿಯೊಸೊಫಿ ಅವರಿಗೆ ಬಹಳ ಪ್ರಿಯ
ಬದಲಾಯಿಸಿಬಾಲ್ಯದಿಂದಲೇ ಮೇಡಂ ಎಚ್.ಪಿ.ಬ್ಲಾವ್ ಟ್ಸ್ಕಿಯವರ ಬರಹವನ್ನು ಅವರ ಇನ್ನೊಬ್ಬ ಗೆಳೆಯ ಮಹಾಲಕ್ಷುಮಿವಾಲರ ಒಡನಾಟದಲ್ಲಿದ್ದಾಗ ತಿಳಿದಿದ್ದರೂ, ಮೇಡಂ ಬೋಧಿಸುತ್ತಿದ್ದ ಥಿಯೊಸೊಫಿ ಬಗ್ಗೆ ಹೆಚ್ಚು ಒಲವು ಬಂದು, ತಮ್ಮ ಸ್ವಂತ ಬಟ್ಟೆ ಅಂಗಡಿ ಬಿಸಿನೆಸ್ ನ್ನು ೧೯೦೪ ರಲ್ಲಿ ಮುಚ್ಚಿದರು.
ಥಿಯೊಸಾಫಿಕಲ್ ಸಮಾಜದ ಸಿದ್ಧಾಂತಗಳು
ಬದಲಾಯಿಸಿಥಿಯೊಸಾಫಿಕಲ್ ಪಂಥವು ಪಂಥೇತರ ಗುಂಪಾಗಿದ್ದು, ಜನಾಂಗ, ಲಿಂಗ ಅಥವಾ ಬಣ್ಣಗಳ ಭೇದವಿಲ್ಲದೆ ಮಾನವೀಯತೆಯ ಸಾರ್ವತ್ರಿಕ ಭ್ರಾತೃತ್ವದ ಕೇಂದ್ರವನ್ನು ರೂಪಿಸುವುದು; ಧರ್ಮಗಳು,ತತ್ವ ಚಿಂತನೆಗಳು ಮತ್ತು ವಿಜ್ಞಾನಗಳ ತುಲನಾತ್ಮಕ ಅಧ್ಯಯನವನ್ನು ಪ್ರೋತ್ಸಾಹಿಸಿ ಪ್ರಕೃತಿಯ ವಿವರಿಸಲಾಗದ ಕಾನೂನುಗಳು ಮತ್ತು ಮನುಷ್ಯನಲ್ಲಿನ ಸುಪ್ತ ಶಕ್ತಿಗಳನ್ನು ಅಧ್ಯಯನವನ್ನು 'ಥಿಯೊಸೊಫಿ' ಎಂದು ಕರೆಯಲಾಗುತ್ತದೆ. ಇದು ಎಲ್ಲಾ ಧರ್ಮಗಳನ್ನು ಅವರ ಸಿದ್ಧಾಂತಗಳು ಮತ್ತು ಮೂಲ ನಂಬಿಕೆಗಳನ್ನು ಮೀರಿ ಆಧಾರವಾಗಿರುವ ಜ್ಞಾನವಾಗಿದೆ. ಈ ಧರ್ಮವನ್ನು ಮೆಚ್ಚಿಕೊಂಡು ಅದನ್ನು ಅನುಷ್ಠಾನಕ್ಕೆ ತಂದ ಪ್ರಥಮ ರಷ್ಯನ್ ಮಹಿಳೆ, ಮೇಡಮ್ ಹೆಲೆನಾ ಪೆಟ್ರೊವ್ನಾ ಬ್ಲಾವಾಟ್ಸ್ಕಿ ಈಕೆ ಅಮೆರಿಕಕ್ಕೆ ಬಂದು ಅಲ್ಲಿ ತಮ್ಮ ಕಾರ್ಯಾಚರಣೆಗಳನ್ನು ಸ್ಥಾಪಿಸಿದರು. ಬಿ.ಪಿ.ವಾಡಿಯರವರು ಥಿಯಾಸಾಫಿಯ ತತ್ವಗಳಿಗೆ ಮಾರಿಹೋಗಿ ತಮ್ಮ ಬಿಜಿನೆಸ್ ನ್ನು ಮಾರಿ ಬಂದ ಹಣವನ್ನು ಅವರ ಪರಿವಾರದವರಿಗೆ ಕೊಟ್ಟು ಪಂಥದ ಕಾರ್ಯಗಳಲ್ಲಿ ಭಾಗಿಯಾದರು.
ಹೆಲೆನಾ ಪೆಟ್ರೋವ್ನ್ ಬ್ಲಾಟ್ಸ್ಕಿರವರ ಜೀವನದ ಘಟನೆಗಳು
ಬದಲಾಯಿಸಿ- ೧೮೩೧ ರಲ್ಲಿ ಹೆಲೆನಾ ಪೆಟ್ರೋವ್ನಾ ಬ್ಲಾಟ್ಸ್ಯ್ ಆಗಸ್ಟ್ ೧೨ ರಂದು ಅಥವಾ ಜುಲೈ ೩೧ ರಂದು ಉಕ್ರೇಟಿನೋಸ್ಲಾವ್ನಲ್ಲಿ ಜನಿಸಿದರು.
- ೧೮೩೨ ರ ಆಗಷ್ಟ್ ೨, ಹೆನ್ರಿ ಸ್ಟೀಲ್ ಓಲ್ಕಾಟ್ ಅಮೇರಿಕಾದ ಸಂಯುಕ್ತ ಸಂಸ್ಥಾನ ನ್ಯೂಜೆರ್ಸಿಯ ಆರೆಂಜ್ ನಲ್ಲಿ ಜನಿಸಿದರು.
- ೧೮೪೯ ಜುಲೈ ೭ ಬ್ಲಾವಟ್ಸ್ಕಿ ನಿಕೋಫರ್ ಬ್ಲಾವಾಟ್ಸ್ಕಿಯನ್ನು (೧೮೦೯-೧೮೮೭) ರಲ್ಲಿ ಮದುವೆಯಾದರು.
- (೧೮೪೯-೧೮೭೩) ಬ್ಲಾವಟ್ಸ್ಕಿ ಗಂಡನನ್ನು ತ್ಯಜಿಸಿ ಯೂರೋಪ್, ಏಶ್ಯಾ ಉ. ಮತ್ತು ದ. ಅಮೆರಿಕಾ ಮತ್ತು ೨೪ ವರ್ಷಗಳಲ್ಲಿ ಈಜಿಪ್ಟ್ ನಲ್ಲಿ ೧೮೭೩ ರಲ್ಲಿ ಆಗಮಿಸುವ ವರೆಗೂ ಪ್ರವಾಸ ಮಾಡಿದರು.
- ೧೮೫೪ ಚಾರ್ಲ್ಸ್ ವೆಬ್ಸ್ಟರ್ ಲೀಡ್ ಬೀಟರ್ ಜನಿಸಿದನು.
- ೧೮೭೩ ಜುಲೈ ೭ ಬ್ಲಾವಟ್ಸ್ಕಿ ನ್ಯ್ಯ್ಯಾರ್ಕ್
- ೧೮೭೪ ಅಕ್ಟೋಬರ್ ೧೪ ಬ್ಲಾವಾಟ್ಸ್ಕಿ ಮೊದಲ ಬಾರಿಗೆ ಓಲ್ಕಾರ್ಟ್ನ್ನು ಚಿಟ್ಡ್ಟೇಮ್ ವೆರ್ಮಾಂಟ್ ನಲ್ಲಿ ಎಡ್ಡಿ ತೋಟದಲ್ಲಿ ಸ್ಪಿರಿಚುಯಲ್ ವಿದ್ಯಮಾನಗಳನ್ನು ತನಿಖೆ ಮಾಡಲು ಭೇಟಿಮಾಡುತ್ತಾರೆ.
- ೧೮೭೫ ರಲ್ಲಿ ಧಿಯೊಸೋಫಿಕಲ್ ಸೊಸೈಟಿಯನ್ನು ಒಮ್ಮತದಿಂದ ಸಂಘಟಿಸಲಾಯಿತು.
ಬಿ.ಪಿ.ವಾಡಿಯರವರು,ಅಧ್ಯಕ್ಷ ಕರ್ನಲ್ ಓಲ್ಕಾಟ್ ರಿಗೆ ತಮ್ಮನ್ನು ಸಮರ್ಪಿಸಿಕೊಂಡರು. ಅವರ ಮರಣದ ಬಳಿಕ, ಶ್ರೀಮತಿ ಅನಿಬೆಸೆಂಟ್ ಪದಾಧಿಕಾರಿಯಾದರು. ಬಿ.ಪಿ.ವಾ.ಬೊಂಬಾಯಿ ಬಿಟ್ಟು ಮದ್ರಾಸ್ ನ ಅಡ್ಯಾರ್ ಶಾಖೆಗೆ ೧೯೦೮ ರಲ್ಲಿ ಹೋಗಿ, ಅಲ್ಲಿನ ಶಾಖೆಯ ಮ್ಯಾನೇಜರ್ ಆದರು. ಪುಸ್ತಕ ಪ್ರಕಟಣಾಲಯ ಸಹಾಯಕ ಸಂಪಾದಕರಾಗಿ ಅನಿಬೆಸೆಂಟ್ ರವರ ಜೊತೆಯಲ್ಲಿ ಸೇರಿ, ೧೯೨೨ ರವರೆಗೆ ದುಡಿದರು.
ಹೋಂರೂಲ್ ಆಂದೋಳನದಲ್ಲಿ ಸಕ್ರಿಯ ಪಾತ್ರ
ಬದಲಾಯಿಸಿ೧೯೧೮ ರಲ್ಲಿ ಮದ್ರಾಸ್ ನ ಅಡಿಯಾರ್ ಗೆ ಬ್ಲವಿಟ್ಸ್ಕಿ ಬಗ್ಗೆ ಆದರೆ ದಿನದಲ್ಲೂ ಅದರ ಪ್ರೇರಣೆ ಬಂದಾಗ ಬಿ.ಪಿ.ವಾಡಿಯ, ಹೋಮ್ ರೂಲ್ ಆಂದೋಳನಕ್ಕೆ ಸೇರಿ ರಾಜಕೀಯ ವಲಯದಲ್ಲಿ ಒಳ್ಳೆಯ ಹೆಸರು ಗಳಿಸಿದರು. ಸಾರ್ವಜನಿಕ ವಲಯದಲ್ಲಿ ಕಾರ್ಯಕರ್ತರಾಗಿ ಚಟುವಟಿಕೆಯಿಂದ ಓಡಾಡುತ್ತಿದ್ದರು. ಈ ಸಂಧರ್ಭದಲ್ಲೇ ಡಾ.ಎಸ್.ರಾಧಾಕೃಷ್ಣನ್,ಸರೋಜಿನಿ ನಾಯಿಡು, ಡಾ.ಭಗವಾನ್ ದಾಸ್, ಪಂಡಿತ್ ಭವಾನಿ ಶಂಕರ್ ಮೊದಲಾದ ಮುಂದಾಳುಗಳ ಪರಿಚಯವಾಯಿತು. ಎಲ್ಲರೂ ಅವರನ್ನು ಪ್ರೀತಿ ಗೌರವಗಳಿಂದ ಕಾಣುತ್ತಿದ್ದರು. ಬಿ.ಪಿ.ವಾ ಅವರ ಗೆಳೆಯರು ರಾಜಕೀಯಕ್ಕೆ ಸೇರಲು ಒತ್ತಾಯ ಮಾಡಿದರೂ, ಅವರು ರಾಜಕೀಯಕ್ಕೆ ಇಳಿಯಲಿಲ್ಲ. ಊಟಿಯಲ್ಲಿ ಅವರು ಕೈಗೊಂಡ ರಾಜಕೀಯ ವಿದ್ಯಮಾನಗಳು ಎಲ್ಲರಿಗೂ ಪರಿಚಯವಾಗಿದ್ದವು.
ಮದ್ರಾಸ್ ನಲ್ಲಿ ಬಟ್ಟ ಗಿರಣಿ ಕಾರ್ಮಿಕರ ಸಂಘಟೆನೆಯ ನಾಯಕನಾಗಿ
ಬದಲಾಯಿಸಿ೧೯೧೭ ರ ೧೬ ಜೂನ್ ನಿಂದ ೭ ಸೆಪ್ಟೆಂಬರ್ ವರೆಗೆ ಬಂಡಿತೊಡ ಎಂಬ ಹಿಂದುಳಿದ ಜನಾಂಗವನ್ನು ಅರಿಯಲು ಪ್ರಯತ್ನಿಸಿ ಅವರಿಗೆ ಸಹಾಯ ಮಾಡಿದರು. ಮದ್ರಾಸಿನ ಬಟ್ಟೆ ಗಿರಣಿ ಕೆಲಸಗಾರರ ಜೊತೆ ರಾಷ್ಟ್ರದಲ್ಲಿ ಮೊಟ್ಟಮೊದಲ ಬಟ್ಟೆ ಗಿರಣಿ ಕೆಲಸಗಾರರ ಸಂಘಟನೆ ಸ್ಥಾಪಿಸಿದರು.[೧] ಇವತ್ತಿಗೂ 'ವಾಡಿಯಾ ಹೌಸ್' ಎಂದು ಪ್ರಸಿದ್ಧಿಯಾದ ಕಟ್ಟಡ, 'ವಾಡಿಯಾ ಪಾರ್ಕ್' ಎದುರಿಗೆ ಇದೆ. ಇಂಗ್ಲೆಂಡ್ ನ ಪಾರ್ಲಿಮೆಂಟ್ ಕಮಿಟಿಗೆ ವರದಿಗಾರರ ಸಂಘದಿಂದ ಅಮೇರಿಕಾದ ವಾಷಿಂಗ್ಟನ್ ನಲ್ಲಿ ಪ್ರತಿನಿಧಿ.
ಲೇಬರ್ ಕಾನ್ಫರೆನ್ಸ್ ಗೆ ಪ್ರತಿನಿಧಿಯಾಗಿ
ಬದಲಾಯಿಸಿ೧೯೧೯ ರಲ್ಲಿ ಲೀಗ್ ಆಫ್ ನೇಶನ್ಸ್ ನ ಅಡಿಯಲ್ಲಿ ಲೇಬರ್ ಕಾನ್ಫ಼ರೆನ್ಸ್ ಗೆ ಪ್ರತಿನಿಧಿಯಾಗಿ ಹೋಗಿದ್ದರು. ಟೆಕ್ನಿಕಲ್ ಸಲಹೆಗಾರ ಭಾರತೀಯ ಡೆಲಿಗೇಷನ್ ಗೆ ಥಿಯೊಸಾಫ್ ಶಾಖೆಗಳನ್ನು ಭೇಟಿ ಯುರೋಪ್, ಇಂಗ್ಲೆಂಡ್ ಅಮೇರಿಕ, ಕೆನಡಾ ೧೯೧೯ ರಲ್ಲಿ ಹಾಲಿವುಡ್ ನ ಥಿಯೊಸೊಫಿ ಕ್ರೋಟೋನ ಲಾಡ್ಜ್ ಭೇಟಿ ಯುನೈಟೆ ಲಾಡ್ಜ್ ಆಫ್ ಥಿಯೋಸೋಫಿಸ್ಟ್ಸ್ ಭೇಟಿ ಪ್ರಥಮ ಬರಿ ಡಿಕ್ಲರೇಶನ್ ಘೋಷಣೆ ಮಾಡಲು ಮುದವಾಯಿತು. ಹಿಂದೆ ಸಂಘಟನೆಯಲ್ಲಿ ಮುಂದಾಳಾಗಿದ್ದರು "Back to Blavatsky" ಮೂಲ ತತ್ವದಿಂದ ಸರಿಯುತ್ತಿದೆಯೆಂಬ ಭಾವನೆ ವಿಲಿಯಮ್ ಕ್ವಾನ್ ಜಡ್ಜ್ ಹೊಸ ವಿಧಾನವನ್ನು ಪರಿಚಯಿಸಿದರು. ಇದರಲ್ಲಿ ಜಯ ಲಭಿಸದೆ ರಾಜೀನಾಮೆ ಕೊಟ್ಟರು. ಥಿಯೋಸಾಫಿಕಲ್ ಜರ್ನಲ್ ೧೮ ಜುಲೈ ೧೯೨೨ ರಲ್ಲಿ ಅಸೋಸಿಯೇಟ್ ಆಗಿ ಕೆಲಸಮಾಡುತ್ತಿದ್ದರು ೧೯೨೩-೨೮ ಬಹಳ ಸಕ್ರಿಯವಾಗಿ ಕೆಲಸ. ಯು.ಎಲ್.ಟಿ. ಯನ್ನು ಬಲಪಡಿಸುವ ಲಾಸ್ ಎಂಜಲಿಸ್ ಮತ್ತು ನ್ಯೂಯಾರ್ಕ್ ೧೯೨೮ ರಕೊನೆಯಲ್ಲಿ ಯುಎಲ್ಟಿ ಮತ್ತು ಅದರ ತತ್ವಗಳನ್ನು ಭಾರತಕ್ಕೆ ತರಲು ನಿರ್ಧರಿಸಿದರು. ಈ ಸಮಯದಲ್ಲಿ ಮಿಸ್ ಸೋಫಿಯಾ ಕ್ಯಮೆಚೊ ಕೊಲಂಬಿಯಾ ಸಂಜಾತೆಯ ಪರಿಚಯವಾಯಿತು. ನ್ಯೂಯಾರ್ಕ್ ನಿಂದ ಭಾರತಕ್ಕೆ ಜೊತೆಗೆ ಬರಲು ಒಪ್ಪಿ ಅವರ ಕೆಲಸದಲ್ಲಿ ನೆರವಾದರು. ೧೯೨೮ ರಲ್ಲಿ ಲಂಡನ್ ನಲ್ಲಿ ಸೋಫಿಯ ಕ್ಯಾಮೆಚೊ ರ [೨] ಜೊತೆ ವಿವಾಹವಾಯಿತು. ಇವರ ಜೊತೆಯಲ್ಲಿ ಹಲವಾರು ಗೆಳೆಯರು ಭಾರತಕ್ಕೆ ಬಂದರು.
- Mr. and Mrs. Wm. D. TenBroeck of Los Angeles,
- Mr. and Mrs. T.L. Crombie of London,
- Mr. and Mrs. Donald Townsend
- Miss. Eleanor Hough, came to India to work for Theosophy.
United lodge of theosophists (ULT)ಯ ಶಾಖೆಗಳು
ಬದಲಾಯಿಸಿ- U.L.T.ಯ ಬಾಂಬೆಯ ಮಾಟುಂಗ ಶಾಖೆ ೧೭, ನವೆಂಬರ್ ೧೯೨೯ ರಲ್ಲಿ ಸ್ಥಾಪನೆಯಾಯಿತು.
- U.L.T.ಯ ನವ ದೆಹಲಿ ಶಾಖೆ
- U.L.T.ಯ ಮದ್ರಾಸ್ ಶಾಖೆ
ಹಾಗೆಯೆ ಇದರ ತತ್ವಗಳನ್ನು ಜನಪ್ರಿಯ ಗೊಳಿಸಲು ಶ್ರಮಿಸಿದರು.ಥಿಯೊಸೊಫಿ ಪಂಥದ ಪ್ರಚಾರ ವಿಸ್ತಾರಕ್ಕೆ ಒಂದು ವೇದಿಕೆಯ ನಿರ್ಮಾಣ ಮಾಡುವ ಆಸೆಯಿಂದ ಥಿಯೊಸೊಫಿ, ವಿಜ್ಞಾನ ಮತ್ತು ಅದರ ಪ್ರಾಮುಖ್ಯತೆಗಳನ್ನೆಲ್ಲ ತತ್ವದಲ್ಲಿ ಅಳವಡಿಸಿ ೧೯೫೭ ರಲ್ಲಿ, ಸಂಸ್ಥೆಯ ಹೆಸರನ್ನು ಮರು ನಾಮಕರಣಮಾಡಿ The Indian Institute of World culture' ಎಂದು ಹೆಸರಿಡಲಾಯಿತು. ಬಿ.ಪಿ.ವಾ.ರವರು [೩] ೧೧ ಆಗಸ್ಟ್,ಸಂಸ್ಥೆಯ ದಿನಾಚರಣೆಯ ದಿನ "Our Souls' Need" ಎಂಬ ಒಂದು ಭಾಷಣ ಮಾಡಿದರು. ಪೂರ್ತಿಭಾಷಣ ವನ್ನು ನಿಂತು ಮಾಡಲಾಗಲಿಲ್ಲ. ನಿಶ್ಶಕ್ತಿಯಿಂದಾಗಿ ಕುಸಿದರು. ಅವರ ಪತ್ನಿ ಸೋಫಿಯಾ ಭಾಷಣವನ್ನು ಮುಂದುವರೆಸಿದರು. ೨೦,ಆಗಸ್ಟ್ ೧೯೫೮ ನಲ್ಲಿ ಬೆಂಗಳೂರಿಗೆ ಸ್ನೇಹಿತರನ್ನು ಆಹ್ವಾನಿಸಲಾಯಿತು. ಸಂಸ್ಥೆಯನ್ನು ಅಪಾರ ಪ್ರೀತಿಯಿಂದ ಕಟ್ಟಿ ಬೆಳಸಿದ್ದರು.
ನಿಧನ
ಬದಲಾಯಿಸಿಬಿ.ಪಿ.ವಾಡಿಯರವರಿಗೆ ತಮ್ಮ ಮರಣ ಸನ್ನಿಹಿತವಾಗುತ್ತಿರುವುದರ ಅರಿವಾಯಿತು. ಆಪ್ತ ಗೆಳೆಯರನ್ನು ಕರೆಸಿ ಸಂಸ್ಥೆಯ ಕಾರ್ಯಾಚರಣೆಗಳು ತಪ್ಪದೆ ಮುಂದುವರೆಸಿಕೊಂಡು ಹೋಗಬೇಕೆಂದು ಅವರಲ್ಲಿ ನಿವೇದಿಸಿಕೊಂಡರು.[೪]
ಉಲ್ಲೇಖಗಳು
ಬದಲಾಯಿಸಿ- ↑ labourinmadras
- ↑ religions/Teeosophy and brotherhood of Religions By : Sophia wadia
- ↑ b-p-wadia-life-of-service-to-mankind/
- ↑ "Theosophy online of BPW". Archived from the original on 2020-08-09. Retrieved 2020-08-02.