ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಫಾರಿನ್ ಟ್ರೇಡ್

ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಫಾರಿನ್ ಟ್ರೇಡ್[] ಭಾರತದ ವಿದೇಶೀ ವ್ಯಾಪಾರಾಭಿವೃದ್ಧಿಗಾಗಿ ಸ್ಥಾಪಿತವಾಗಿರುವ ಒಂದು ಸ್ವಯಾಡಳಿತ ಸಂಸ್ಥೆ. ೧೯೬೩ರಲ್ಲಿ ಇದು ಆರಂಭವಾಯಿತು. ಭಾರತದ ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ಆಧುನಿಕ ವಿಧಾನಗಳನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಗುವಂತೆ ವಿದೇಶೀ ವ್ಯಾಪಾರನಿರತ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡುವುದು ಇದರ ಉದ್ದೇಶಗಳಲ್ಲೊಂದು. ವಿದೇಶೀ ವ್ಯಾಪಾರಕ್ಕೆ ಸಂಬಂಧಿಸಿದ ನಾನಾ ಸಮಸ್ಯೆಗಳ ಬಗ್ಗೆ ಸಂಶೋಧನೆಗಳಿಗೆ ಯಥೋಚಿತ ಸಲಹೆ ಸೌಲಭ್ಯ ನೀಡುವ ಕಾರ್ಯವನ್ನೂ ಇದು ಕೈಗೊಂಡಿದೆ. ಭಾರತದ ಸರಕುಗಳಿಗೆ ಅನ್ಯದೇಶಗಳ ಮಾರುಕಟ್ಟೆಗಳಲ್ಲಿ ಗಿರಾಕಿ ಹೆಚ್ಚಿಸಲು ಅಗತ್ಯವಾದ ಸಂಶೋಧನೆ, ಪದಾರ್ಥ ಪರಿಶೀಲನೆ, ಮಾರಾಟ ಪರಿಶೋಧನೆ ಮುಂತಾದುವನ್ನು ಸಂಘಟಿಸಿ, ಸಾರ್ವಜನಿಕರ ತಿಳಿವಳಿಕೆಗಾಗಿ ಈ ಬಗ್ಗೆ ಆಗಿಂದ್ದಾಗ್ಗೆ ಪ್ರಕಟನೆ ಹೊರಡಿಸುವುದು ಈ ಸಂಸ್ಥೆಯ ಕಾರ್ಯಭಾರ.

೧೫೦೮ ಅಭ್ಯರ್ಥಿಗಳಲ್ಲಿ, ಭಾರತದಲ್ಲಿ ಕಷ್ಟವಾದ ಬಿ-ಕಾಲೇಜಿನ ಪ್ರವೇಶ ಪ್ರಕ್ರಿಯೆಗಳಲ್ಲಿ ಇದು ಒಂದೆನಿಸಿದೆ. ಪ್ರಬಂಧ, ಗುಂಪು ಚರ್ಚೆಯಿಂದ ಮತ್ತು ಸಂದರ್ಶನದಿಂದ ಅಂತಿಮ ಪ್ರವೇಶದ ಸುತ್ತಿಗೆ ಆರಿಸಿಕೊಳ್ಳಲಾಯಿತು.

ಆಂತರ್ಜಾಲ

ಬದಲಾಯಿಸಿ

ಉಲ್ಲೇಖನಗಳು

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2016-12-20. Retrieved 2016-10-20.