ಇಂಡಸ್ಇಂಡ್ ಬ್ಯಾಂಕ್
![](http://upload.wikimedia.org/wikipedia/commons/thumb/5/5b/Monkeys_in_Shimla_%286609197597%29.jpg/220px-Monkeys_in_Shimla_%286609197597%29.jpg)
![](http://upload.wikimedia.org/wikipedia/commons/thumb/3/34/IndusInd_Bank_Cyber_City_metro_station.jpg/220px-IndusInd_Bank_Cyber_City_metro_station.jpg)
ಇಂಡಸ್ಇಂಡ್ ಬ್ಯಾಂಕ್
ಬದಲಾಯಿಸಿಇಂಡಸ್ಇಂಡ್ಬ್ಯಾಂಕ್ಲಿಮಿಟೆಡ್,ಮುಂಬೈಮೂಲದ ಭಾರತೀಯ ಹೊಸ ಪೀಳಿಗೆಯ ಬ್ಯಾಂಕ್ ಆಗಿದೆ.[೧] ಇಂಡಸ್ಇಂಡ್ ಬ್ಯಾಂಕ್ ಅನ್ನು ಏಪ್ರಿಲ್ 1994ರಲ್ಲಿ, ಅಂದಿನ ಕೇಂದ್ರ ಹಣಕಾಸು ಸಚಿವ ಮನಮೋಹನ್ ಸಿಂಗ್ಉದ್ಘಾಟಿಸಿದರು.[೨] ಚಿಲ್ಲರೆ ಬ್ಯಾಂಕಿಂಗ್ ಸೇವೆಗಳಲ್ಲಿ ಬ್ಯಾಂಕ್ ಪರಿಣತಿ ಹೊಂದಿದೆ ಮತ್ತು ಹೊಸ ತಂತ್ರಜ್ಞಾನಗಳನ್ನು ಪರಿಚಯಿಸುವ ಮೂಲಕ ತನ್ನ ಬೆಂಬಲ ವ್ಯವಸ್ಥೆಗಳನ್ನು ನಿರಂತರವಾಗಿ ನವೀಕರಿಸುತ್ತದೆ. ಜಾಗತಿಕ ಮಾನದಂಡವನ್ನು ಪೂರೈಸುವ ಜೊತೆಗೆ ದೇಶಾದ್ಯಂತ ತನ್ನ ಶಾಖೆಗಳ ಜಾಲವನ್ನು ವಿಸ್ತರಿಸುವ ಕೆಲಸ ಮಾಡುತ್ತಿದೆ. 31 ಡಿಸೆಂಬರ್ ೨೦೧೮ರ ಹೊತ್ತಿಗೆ, ಇಂಡಸ್ಇಂಡ್ ಬ್ಯಾಂಕ್ ೧,೫೫೮ ಶಾಖೆಗಳನ್ನು ಮತ್ತು ೨,೪೫೩ ಎಟಿಎಂಗಳನ್ನು ದೇಶದ ವಿವಿಧ ಭೌಗೋಳಿಕ ಸ್ಥಳಗಳಲ್ಲಿ ಹರಡಿತು. ಇದು ಲಂಡನ್, ದುಬೈ ಮತ್ತು ಅಬುಧಾಬಿಯಲ್ಲಿ ಪ್ರತಿನಿಧಿ ಕಛೇರಿಗಳನ್ನು ಸಹ ಹೊಂದಿದೆ. ಮುಂಬೈ ಗರಿಷ್ಠ ಸಂಖ್ಯೆಯ ಬ್ಯಾಂಕ್ ಶಾಖೆಗಳನ್ನು ಹೊಂದಿದೆ, ನಂತರ ನವದೆಹಲಿ ಮತ್ತು ಚೆನ್ನೈ. ಮಾರ್ಚ್ ೨೦೧೯ರ ವೇಳೆಗೆ ಶಾಖೆಗಳ ಸಂಖ್ಯೆಯನ್ನು ೧೨೦೦ಕ್ಕೆ ದ್ವಿಗುಣಗೊಳಿಸಲು ಬ್ಯಾಂಕ್ ಪ್ರಸ್ತಾಪಿಸಿದೆ.
ಇತಿಹಾಸ
ಬದಲಾಯಿಸಿಎನ್ ಆರ್ ಐ ಸಮುದಾಯಕ್ಕೆ ಸೇವೆ ಸಲ್ಲಿಸುವ ಪ್ರಾಥಮಿಕ ಉದ್ದೇಶದಿಂದ ಎಸ್.ಪಿ. ಹಿಂದೂಜಾ ಅವರ ಅಧ್ಯಕ್ಷತೆಯಲ್ಲಿ ಇಂಡಸ್ಇಂಡ್ ಬ್ಯಾಂಕ್ ೧೭ ಏಪ್ರಿಲ್ ೧೯೯೪ ರಂದು ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.
ನಿರ್ದೇಶಕರ ಮಂಡಳಿ
ಬದಲಾಯಿಸಿರೊಮೇಶ್ ಸೊಬ್ಟಿ ೨೦೦೭-೦೮ರ ಆರ್ಥಿಕ ವರ್ಷದಲ್ಲಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ಸೇರಿಕೊಂಡರು. ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಆರ್.ಶೇಷಾಸಾಯಿ ಅವರು ಮಂಡಳಿಯ ಪ್ರಸ್ತುತ ಅಧ್ಯಕ್ಷರಾಗಿದ್ದಾರೆ. ಮಂಡಳಿಯಲ್ಲಿರುವ ಇತರ ಸದಸ್ಯರು ರಾಜೀವ್ ಅಗರ್ವಾಲ್, ಕಾಂಚನ್ ಚಿಟಾಲೆ, ಶಂಕರ್ ಅನ್ನಸ್ವಾಮಿ, ಟಿ.ಟಿ.ರಾಮ್ ಮೋಹನ್, ಅಕಿಲಾ ಕೃಷ್ಣಕುಮಾರ್, ಅರುಣ್ ತಿವಾರಿ, ಮತ್ತು ಸಿರಾಜ್ ಚೌಧರಿ.[೩]
ಬ್ಯಾಂಕಿಂಗ್ ಸೇವೆಗಳು
ಬದಲಾಯಿಸಿ- ಶಾಖೆ ಬ್ಯಾಂಕಿಂಗ್
- ಗ್ರಾಹಕ ಹಣಕಾಸು
- ಕಾರ್ಪೊರೇಟ್ ಬ್ಯಾಂಕಿಂಗ್ ಮತ್ತು ಹಣಕಾಸು
- ವಾಣಿಜ್ಯ ಮತ್ತು ವಹಿವಾಟು ಬ್ಯಾಂಕಿಂಗ್
- ನಗದು ನಿರ್ವಹಣಾ ಸೇವೆಗಳು (CMS)
- ಟ್ರೇಡ್ ಸರ್ವಿಸ್ ಯುಟಿಲಿಟಿ (ಟಿಎಸ್‌ಯು)
- ಠೇವಣಿ ಕಾರ್ಯಾಚರಣೆಗಳು
- ಖಜಾನೆ ಕಾರ್ಯಾಚರಣೆಗಳು
- ಸಂಪತ್ತು ನಿರ್ವಹಣಾ ಸೇವೆ