ಆಳಂದ ವಿಧಾನಸಭಾ ಕ್ಷೇತ್ರ
ಆಳಂದ ವಿಧಾನಸಭಾ ಕ್ಷೇತ್ರವು (ಕ್ಷೇತ್ರ ಸಂಖ್ಯೆ-೪೬) ಭಾರತದ ಕರ್ನಾಟಕ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. ಇದು ಕಲಬುರಗಿ ಜಿಲ್ಲೆಯಲ್ಲಿದ್ದು ಬೀದರ್ ಲೋಕಸಭಾ ಕ್ಷೇತ್ರದ ಒಂದು ಭಾಗವಾಗಿದೆ[೧].
ರಾಜಕೀಯ ಇತಿಹಾಸ
ಬದಲಾಯಿಸಿಆಳಂದ ವಿಧಾನಸಭಾ ಕ್ಷೇತ್ರವನ್ನು ಇದುವರೆಗೆ ೧೫ ಮಂದಿ ಶಾಸಕರು ಪ್ರತಿನಿಧಿಸಿದ್ದಾರೆ. ಇವರಲ್ಲಿ ಅತೀ ಹೆಚ್ಚು ಬಾರಿ ಅಂದರೆ ೭ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಉಳಿದಂತೆ ೩ ಬಾರಿ ಜನತಾದಳ, ೨ ಬಾರಿ ಜನತಾ ಪಕ್ಷ, ಮತ್ತು ಪಿ ಎಸ್ ಪಿ, ಕೆಜೆಪಿ ಮತ್ತು ಕರ್ನಾಟಕ ಕಾಂಗ್ರೆಸ್ ಪಕ್ಷಗಳ ಅಭ್ಯರ್ಥಿಗಳು ೧ ಬಾರಿ ಗೆಲುವು ಸಾಧಿಸಿದ್ದಾರೆ. ಕರ್ನಾಟಕದ ಏಕೀಕರಣವಾಗುವ ಮುನ್ನ ನಡೆದ ಚುನಾವಣೆ ಸಂದರ್ಭದಲ್ಲಿ(೧೯೫೭ ಮತ್ತು ೧೯೬೨) ಆಳಂದ ಎಸ್ ಸಿ ಮೀಸಲು ಕ್ಷೇತ್ರವಾಗಿತ್ತು. ೧೯೭೮ರಲ್ಲಿ ಕ್ಷೇತ್ರದ ಮರುವಿಂಗಡಣೆ ಆದ ನಂತರ ಸಾಮಾನ್ಯ ಕ್ಷೇತ್ರವಾಗಿ ಬದಲಾಯಿತು[೨].
ಮತದಾರರು
ಬದಲಾಯಿಸಿಚುನಾವಣಾ ಇತಿಹಾಸ
ಬದಲಾಯಿಸಿಹೈದರಾಬಾದ್ ರಾಜ್ಯ
ಬದಲಾಯಿಸಿ- 1951: ವೀರೇಂದ್ರ ಪಾಟೀಲ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಮೈಸೂರು ರಾಜ್ಯ
ಬದಲಾಯಿಸಿ1957 (ಸೀಟು-1): ಚಂದ್ರಶೇಖರ ಎಸ್ ಪಾಟೀಲ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1957 (ಸೀಟು-2): ರಾಮಚಂದ್ರ ವೀರಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1962: ದೇವಪ್ಪ ಶಾಮಣ್ಣ ಹೊದಲ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1967: ದೇವಪ್ಪ ಶಾಮಣ್ಣ ಹೊಡಲ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1972: DRB ರಾವ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಚುನಾವಣಾ ಫಲಿತಾಂಶಗಳು
ಬದಲಾಯಿಸಿಮೂಲ:[೩]
ವರ್ಷ೨೦೧೮ | ಮೀಸಲಾತಿ | ಅಭ್ಯರ್ಥಿ ಸುಭಾಷ್ ಗುತ್ತೇದಾರ್ | ಪಕ್ಷ ಬಿಜೆಪಿ | ಮತಗಳು ೭೬,೮೧೫...೬೯೭ ಮುನ್ನಡೆ | ದ್ವಿತೀಯ ಸ್ಥಾನ | ಪಕ್ಷ | ಮತಗಳು | ವ್ಯತ್ಯಾಸ |
---|---|---|---|---|---|---|---|---|
೨೦೧೩ | ಸಾಮಾನ್ಯ | ಬಿ ಆರ್ ಪಾಟೀಲ್ | ಕರ್ನಾಟಕ ಜನತಾ ಪಕ್ಷ | 67085 | ಸುಭಾಷ್ ಗುತ್ತೇದಾರ್ | ಜನತಾ ದಳ (ಜಾತ್ಯಾತೀತ) | 49971 | 17114 |
೨೦೦೮ | ಸಾಮಾನ್ಯ | ಸುಭಾಷ್ ಗುತ್ತೇದಾರ್ | ಜನತಾ ದಳ (ಜಾತ್ಯಾತೀತ) | 42473 | ಬಿ ಆರ್ ಪಾಟೀಲ್ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 36689 | 5784 |
೨೦೦೪ | ಸಾಮಾನ್ಯ | ಬಿ ಆರ್ ಪಾಟೀಲ್ | ಜನತಾ ದಳ (ಜಾತ್ಯಾತೀತ) | 50818 | ಸುಭಾಷ್ ಗುತ್ತೇದಾರ್ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 35989 | 14829 |
೧೯೯೯ | ಸಾಮಾನ್ಯ | ಸುಭಾಷ್ ಗುತ್ತೇದಾರ್ | ಜನತಾ ದಳ (ಜಾತ್ಯಾತೀತ) | 29762 | ಬಿ ಆರ್ ಪಾಟೀಲ್ | ಜನತಾ ದಳ (ಸಂಯುಕ್ತ) | 27451 | 2311 |
೧೯೯೪ | ಸಾಮಾನ್ಯ | ಸುಭಾಷ್ ಗುತ್ತೇದಾರ್ | ಕರ್ನಾಟಕ ಕಾಂಗ್ರೆಸ್ ಪಕ್ಷ | 35549 | ಬಿ ಆರ್ ಪಾಟೀಲ್ | ಜನತಾ ದಳ | 17225 | 18324 |
೧೯೮೯ | ಸಾಮಾನ್ಯ | ಶರಣಬಸಪ್ಪ ಮಾಲಿ ಪಾಟೀಲ್ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 28375 | ಬಸವರಾಜ ಮಲ್ಕಾಜಪ್ಪ | ಜನತಾ ದಳ | 18596 | 9779 |
೧೯೮೫ | ಸಾಮಾನ್ಯ | ಶರಣಬಸಪ್ಪ ಮಾಲಿ ಪಾಟೀಲ್ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 28085 | ಬಿ ಆರ್ ಪಾಟೀಲ್ | ಜನತಾ ಪಕ್ಷ | 27423 | 662 |
೧೯೮೩ | ಸಾಮಾನ್ಯ | ಬಿ ಆರ್ ಪಾಟೀಲ್ | ಜನತಾ ಪಕ್ಷ | 19507 | ಬಿ ಬಿ ಪಾಟೀಲ್ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 16163 | 3344 |
೧೯೭೮ | ಸಾಮಾನ್ಯ | ಅಣ್ಣಾ ರಾವ್ ಭೀಮ್ ರಾವ್ ಪಾಟೀಲ್ | ಜನತಾ ಪಕ್ಷ | 26232 | ದಿಗಂಬರ ರಾವ್ ಬಲವಂತ್ ರಾವ್ ಕಲ್ಮಣ್‌ಕರ್ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಇಂದಿರಾ) | 16956 | 9276 |
೧೯೭೨ | ಸಾಮಾನ್ಯ | ಅಣ್ಣಾರಾವ್ ವೀರಭದ್ರಪ್ಪ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 32181 | ಅಣ್ಣಾರಾವ್ ಭೀಮ ರಾವ್ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಸಂಘಟನೆ) | 10721 | 21460 |
೧೯೬೭ | ಸಾಮಾನ್ಯ | ಡಿ ಆರ್ ಬಿ ರಾವ್ | ಪ್ರಜಾ ಸೋಷ್ಯಲಿಸ್ಟ್ ಪಾರ್ಟಿ | 15916 | ಎ ಆರ್ ಬಿ ರಾವ್ | ಸ್ವತಂತ್ರ ಅಭ್ಯರ್ಥಿ | 15536 | 380 |
೧೯೬೨ | (ಎಸ್ ಸಿ) | ದೇವಪ್ಪ ಶಾಮಣ್ಣ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 11631 | ಬಿ ಶಾಮಸುಂದರ್ | ಪ್ರಜಾ ಸೋಷ್ಯಲಿಸ್ಟ್ ಪಾರ್ಟಿ | 4141 | 7490 |
೧೯೫೭ | ಸಾಮಾನ್ಯ (೧ ಸೀಟು) | ಚಂದ್ರಶೇಖರ್ ಸಂಘಟನೆಪ್ಪ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 16393 | ಹನ್ಮತ್ ರಾವ್ ಶರಣಪ್ಪ | ಪ್ರಜಾ ಸೋಷ್ಯಲಿಸ್ಟ್ ಪಾರ್ಟಿ | 8872 | 7521 |
೧೯೫೭ | (ಎಸ್ ಸಿ) (೨ ಸೀಟು) | ರಾಮಚಂದ್ರ ವೀರಪ್ಪ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 18920 | ಶಿವರಾಮ್ ಸಂಭು | ಸ್ವತಂತ್ರ | 11911 | 7009 |
೧೯೫೨ | ಸಾಮಾನ್ಯ | ವೀರೇಂದ್ರ ಪಾಟೀಲ್ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 7417 | ಅಣ್ಣಾರಾವ್ ವೀರಭದ್ರಪ್ಪ | ಸ್ವತಂತ್ರ | 5536 | 1881 |
ಇವನ್ನೂ ಓದಿ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ "ಆಳಂದ ವಿಧಾನಸಭಾ ಚುನಾವಣೆ 2023". kannada.oneindia.com. OneIndia. Retrieved 9 May 2023.
- ↑ "ಆಳಂದ ವಿಧಾನಸಭಾ ಕ್ಷೇತ್ರ". eedina.com. ಈ ದಿನ. Retrieved 9 May 2023.
- ↑ "Aland Election and Results 2018, Candidate list, Winner, Runner-up, Current MLA and Previous MLAs". Elections in India. Retrieved 2022-01-28.