ಆಲ್ಫ್ರೆಡ್ ಚಾರಲ್ಸ್ ಕಿನ್ಸೆ
ಆಲ್ಫ್ರೆಡ್ ಚಾರಲ್ಸ್ ಕಿನ್ಸೆ(ಜೂನ್ 23, 1894 – ಆಗಸ್ಟ್ 25, 1956) ಅಮೆರಿಕದ ಜೀವಶಾಸ್ತ್ರಜ್ಞ,ಪ್ರಾಣಿಶಾಸ್ತ್ರ ಮತ್ತು ಕೀಟಶಾಸ್ತ್ರದ ಪ್ರಾಧ್ಯಾಪಕ ಮತ್ತು ಇಂಡಿಯಾನ ವಿಶ್ವವಿದ್ಯಾಲಯದಲ್ಲಿ ಲೈಂಗಿಕಶಾಸ್ತ್ರದ ಅಧ್ಯಯನ ಪೀಠವನ್ನು ಸ್ಥಾಪನೆಮಾಡಿದ ಲೈಂಗಿಕ ವಿಜ್ಞಾನಿ.[೧]
ಆಲ್ಫ್ರೆಡ್ ಚಾರಲ್ಸ್ ಕಿನ್ಸೆ | |
---|---|
ಜನನ | Alfred Charles Kinsey June 23, 1894 Hoboken, New Jersey, United States |
ಮರಣ | August 25, 1956 Bloomington, Indiana, United States | (aged 62)
ವಾಸಸ್ಥಳ | United States |
ರಾಷ್ಟ್ರೀಯತೆ | American |
ಕಾರ್ಯಕ್ಷೇತ್ರ | Biology |
ಸಂಸ್ಥೆಗಳು | Indiana University |
ಅಭ್ಯಸಿಸಿದ ವಿದ್ಯಾಪೀಠ | Bowdoin College Harvard University |
ಪ್ರಸಿದ್ಧಿಗೆ ಕಾರಣ | Sexology and human sexuality: Kinsey Reports, Kinsey scale, Kinsey Institute for Research in Sex, Gender, and Reproduction |
ಬಾಲ್ಯ ಮತ್ತು ಜೀವನ
ಬದಲಾಯಿಸಿಅಮೆರಿಕದ ನ್ಯೂಜರ್ಸಿಯಲ್ಲಿ ಹುಟ್ಟಿದ. ಬ್ರನ್ಸ್‍ವಿಕ್, ಹಾರ್ವರ್ಡ್‍ಗಳಲ್ಲಿ ಕಲಿಕೆ ಮುಂದುವರಿಸಿ ಕೊನೆಗೆ 1920 ರಿಂದ 27 ವರ್ಷಗಳ ಕಾಲ ಪ್ರಾಣಿಶಾಸ್ತ್ರ ಪ್ರಾಧ್ಯಾಪಕನಾಗಿದ್ದು, ಆಮೇಲೆ ಕೊನೆಯ ತನಕ ಇಂಡಿಯಾನಾ ವಿಶ್ವವಿದ್ಯಾಲಯದ ಲೈಂಗಿಕ ಸಂಶೋಧನ ಸಂಸ್ಥೆಯ ನಿರ್ದೇಶಕನಾಗಿದ್ದ.
ಅಧ್ಯಯನ
ಬದಲಾಯಿಸಿಲೈಂಗಿಕ ಜೀವನದ ಪದ್ಧತಿ, ರೂಢಿ, ಸಂಪ್ರದಾಯ, ಒಳಗುಟ್ಟುಗಳನ್ನು ಹೊರಗೆಡಹುವುದರಲ್ಲಿ ಇವನಿಗಿದ್ದ ಕಟ್ಟಾಸಕ್ತಿಯಿಂದ ಆ ಸಂಸ್ಥೆ ಹುಟ್ಟಿತು. ಇವನೂ ಇವನ ಸಹೋದ್ಯೋಗಿಗಳು ಸೇರಿ ನಡೆಸಿದ ಶೋಧನೆಗಳ ಫಲವಾಗಿ ಪ್ರಪಂಚದಲ್ಲಿ ಎಲ್ಲೆಲ್ಲೂ ಗಂಡಸರಲ್ಲಿನ ಲೈಂಗಿಕ ವರ್ತನೆ (1948), ಹೆಂಗಸರಲ್ಲಿನ ಲೈಂಗಿಕ ವರ್ತನೆ(1953) ಎಂಬ ಹೆಸರಾದ ಎರಡು ಪುಸ್ತಕಗಳು ಹೊರಬಂದವು. 18,500 ಜನರನ್ನು ಕಂಡು ಗೋಪ್ಯವಾಗಿ ಸಂಗ್ರಹಿಸಿದ ವಿವರಗಳು ಈ ಪುಸ್ತಕಗಳಲ್ಲಿವೆ. ಗಂಡು ಹೆಣ್ಣುಗಳ ಲೈಂಗಿಕ ವರ್ತನೆಗಳಲ್ಲಿ ಎಷ್ಟೊಂದು ಅಭಾಸ, ಏರುಪೇರು, ವಿಚಿತ್ರಗಳಿವೆ ಎನ್ನುವುದನ್ನು ಈತ ವರದಿಮಾಡಿದ್ದಾನೆ. ಇವನ ಇವೆರಡು ವರದಿಗಳ ಆಧಾರದ ಮೇಲೆ ನೂರಾರು ಪುಸ್ತಕಗಳು ಪ್ರಕಟವಾಗಿವೆ. ಇವುಗಳಲ್ಲಿನ ತರ್ಕ, ವಾದ, ರೀತಿ ನೀತಿಗಳನ್ನು ಕಟುವಾಗಿ ಟೀಕಿಸಿದವರೂ ಇದ್ದಾರೆ.
ಉಲ್ಲೇಖಗಳು
ಬದಲಾಯಿಸಿ- ↑ "Origin of the Institute". The Kinsey Institute. Archived from the original on ಆಗಸ್ಟ್ 19, 2010. Retrieved March 30, 2010.
ಬಾಹ್ಯ ಸಂಪರ್ಕಗಳು
ಬದಲಾಯಿಸಿ- Kinsey Institute website
- American Experience – Kinsey
- Obituary
- Alfred Kinsey ಐ ಎಮ್ ಡಿ ಬಿನಲ್ಲಿ
- Kinsey at IMDb
- Gay Great Fyne Times Magazine
- FBI file on Alfred Kinsey