ಆರ್. ಚಲಪತಿ
ಕನ್ನಡದ ಸೃಜನಶೀಲ ಬರಹಗಾರರು, ಸಂಶೋಧಕರಾಗಿ ಗುರುತಿಸಿಕೊಂಡಿರುವ, ಚಲಪತಿಯವರು [೧]ಸೀನಿಯರ್ ಫೆಲೊ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ, ಮೈಸೂರು
ವೃತ್ತಿ
ಬದಲಾಯಿಸಿಈಗ ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ `ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ’ದಲ್ಲಿ ಸೀನಿಯರ್ ರೀಸರ್ಚ್ ಫೆಲೋ ಆಗಿ ಕೆಲಸ. ಈ ಮೊದಲು ಬೆಂಗಳೂರು ವಿಶ್ವವಿದ್ಯಾಲಯದ ಪದವಿ ತರಗತಿಗಳು ಮತ್ತು ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ತರಗತಿಗಳಿಗೂ ಸೇರಿದಂತೆ 22 ವರುಷಗಳ ಕಾಲ ಕನ್ನಡ ಭಾಷೆ ಮತ್ತು ಸಾಹಿತ್ಯಗಳ ಸಂಬಂಧದಲ್ಲಿ ಪಾಠ ಹೇಳಿದ ಅನುಭವ.
ಬಾಲ್ಯ ಮತ್ತು ಶಿಕ್ಷಣ
ಬದಲಾಯಿಸಿಹುಟ್ಟಿದ್ದು 1965ರಲ್ಲಿ, ಬೆಂಗಳೂರು ಜಿಲ್ಲೆಯ ಯಲಹಂಕದ ಬಳಿಯ ಹಾರೋಹಳ್ಳಿಯಲ್ಲಿ. ಅಮ್ಮ-ಪಾರ್ವತಮ್ಮ. ಅಪ್ಪ-ರಾಮಯ್ಯ. ಅಲ್ಲಿನ ಸ್ಥಳೀಯ ಶಾಲೆ-ಕಾಲೇಜುಗಳಲ್ಲಿಯೇ ಪಿಯುಸಿವರೆಗಿನ ಕಲಿಕೆ. ಬೆಂಗಳೂರು ವಿಶ್ವವಿದ್ಯಾಲಯದಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ. ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ.
ಕೃತಿಗಳು
ಬದಲಾಯಿಸಿಕನ್ನಡ ನುಡಿ ಮತ್ತು ಸಾಹಿತ್ಯದ ನಂಟಿನ ಸಾಂಸ್ಕೃತಿಕ ಓದು-ಅಧ್ಯಯನಗಳಲ್ಲಿ `
- ಸಾಹಿತ್ಯ ಮತ್ತು ಸಾಹಿತ್ಯದಾಚೆಗೆ-ಅಧಿಕಾರ ಚಲನೆಯ ಅನಧಿಕೃತ ವರಸೆಗಳು
- ಪಠ್ಯಪುಸ್ತಕಗಳು ಮತ್ತು ಸಾಂಸ್ಕೃತಿಕ ರಾಜಕಾರಣ
- ತಂತಿ ಮೇಲಿನ ನಡಿಗೆ-ಕಲಿಕೆಯ ಕನ್ನಡದ ಬಗೆಗೆ ಬಲ್ಲವರೊಂದಿಗೆ ಮಾತುಕತೆ
- ನುಡಿಯೊಡನೆ
- ನಮ್ಮದೇ ತಿಳಿವಿನ ದಾರಿಗಳಲ್ಲಿ-ಕನ್ನಡ ಬರವಣಿಗೆಯ ಚಹರೆಗಳಲ್ಲಿ ಬದುಕಿನ ಓದು
- ಕನಕದಾಸರ ಕೃತಿಗಳ ಸಂಪಾದನೆಯ ಸಾಂಸ್ಕೃತಿಕ ರಾಜಕಾರಣ `
- ಕುವೆಂಪು ಬರಹಗಳ ಓದಿನ ರಾಜಕಾರಣ `
- ಕನ್ನಡ ನುಡಿಯ ಆಕರಕೋಶ[೨]
- ರೈತ-ಕಾರ್ಮಿಕ ಓದು
- ಪ್ರಾಚೀನ ಕನ್ನಡ ಸಾಹಿತ್ಯ ಸಮಗ್ರ ಸೂಚಿ-1
- ತೊಡಕುಗಳು ಮತ್ತು ತೋರುದಾರಿ
- ಕನ್ನಡ ಸಂಸ್ಕೃತಿಯ ಓದಿನ ಬಗೆಗಳು
- ಸಾಹಿತ್ಯ ಚರಿತ್ರೆಗಳ ಮೂಲಕ ಪ್ರಾಚೀನ ಕನ್ನಡ ಸಾಹಿತ್ಯದ ಓದು.
ಉಲ್ಲೇಖ
ಬದಲಾಯಿಸಿ