Artichoke
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಪಂಗಡ:
ಕುಲ:
ಪ್ರಜಾತಿ:
C. scolymus
Binomial name
Cynara scolymus
ಗ್ಲೋಬ್ ಆರ್ಟಿಚೋಕ್
ಜೆರೂಸಲಂ ಆರ್ಟಿಚೋಕ್

ಖಾದ್ಯಯೋಗ್ಯ ಗಡ್ಡೆಗಳಿರುವ ಬೇರೆ ಬೇರೆ ವಿಧದ ಮೂರು ತರಕಾರಿಗಿಡಗಳ ಹೆಸರು. ಇದನ್ನು ಹೆಚ್ಚು ಶ್ರಮವಿಲ್ಲದೆ ಬೆಳೆಸಬಹುದು.

  • ಗ್ಲೋಬ್ ಆರ್ಟಿಚೋಕ್

ಆಸ್ಟರೇಸೀ (ಕಂಪಾಸಿಟೀ) ಕುಟುಂಬಕ್ಕೆ ಸೇರಿದ ಸೈನಾರ ಸ್ಕಾಲಿಮಸ್ ಎಂಬುದು. ಇದರ ಮೂಲಸ್ಥಳ ಏಷ್ಯಖಂಡ. ಕಾಲ ಕ್ರಮದಲ್ಲಿ ಇದು ಬೇರೆ ಬೇರೆ ದೇಶಗಳಿಗೆ ಹರಡಿದೆ. ಇಟಲಿ, ಫ್ರಾನ್ಸ್, ಇಂಗ್ಲೆಂಡ್ ಮತ್ತು ಅಮೆರಿಕ ದೇಶಗಳಲ್ಲೂ ಇದನ್ನು ಸಾಗುವಳಿ ಮಾಡುವರು. ಇದರ ಗೋಳಾಕಾರದ ಹೂಗೊಂಚಲನ್ನು ತರಕಾರಿಯಾಗಿ ಉಪಯೋಗಿಸುತ್ತಾರೆ. ಎಳಸಾದ ಹೂಗೊಂಚಲನ್ನು ಹಸಿ ತರಕಾರಿಯಾಗಿ, ಇಲ್ಲವೆ ಬೇಯಿಸಿ ಅಥವಾ ಕರಿದು ಆಹಾರವಾಗಿ ಬಳಸುವರು. ಇದರಲ್ಲಿ ಕಬ್ಬಿಣ, ಅಯೋಡೀನ್, ಮತ್ತಿತರ ಖನಿಜ ಪೌಷ್ಟಿಕಾಂಶಗಳು ಹೆಚ್ಚು ಪ್ರಮಾಣದಲ್ಲಿವೆ. ಇದರಂ ತೆಯೇ3 ಇರುವ ಇನ್ನೊಂದು. ಕಾರಡೂನ್ಂ ಎಂಬುದು. ಇದು ಗುಂಡು ಆರ್ಟಿಚೋಕ್ ಗಿಡದ ಸಮೀಪ ಬಂಧು. ಆದರೆ ಇದರ ಬುಡ ಮತ್ತು ಎಲೆತೊಟ್ಟುಗಳನ್ನು ಮಾತ್ರ ತರಕಾರಿಯಾಗಿ ಉಪಯೋಗಿಸು ತ್ತಾರೆ.

  • ಜೆರೂಸಲಂ ಆರ್ಟಿಚೋಕ್

ಇದು ಕೂಡ ಆಸ್ಟರೇಸೀ ಕುಟುಂಬಕ್ಕೆ ಸೇರಿದೆ. ಸೂರ್ಯಕಾಂತಿ ಗಿಡದ ಹತ್ತಿರ ಸಂಬಂಧಿ. ಇದರ ವೈಜ್ಞಾನಿಕ ಹೆಸರು ಹೀಲಿಯಾಂತಸ್ ಟ್ಯೂಬ ರೋಸಸ್. ಜೆರೂಸಲಂ ಪಟ್ಟಣಕ್ಕೂ ಇದರ ಹೆಸರಿಗೂ ಯಾವ ಸಂಬಂ ಧವೂ ಇಲ್ಲ. ಪ್ರಾಯಶಃ ಇಟ್ಯಾಲಿ ಯನ್ ಗೀರಾಸೋಲ್ (ಸೂರ್ಯ ಕಾಂತಿ ಹೂ) ಅಪಭ್ರಂಶವಾಗಿ ಈ ಹೆಸರು ಬಂದಿರಬಹುದು. ಇದರ ಗಡ್ಡೆಗಳಲ್ಲಿ ಇನ್ಯೂಲಿನ್ ಎಂಬ ಪಿಷ್ಟಪದಾರ್ಥ ಇದೆ. ಗಡ್ಡೆಗಳನ್ನು ಬೇಯಿಸಿ ತಿನ್ನುವುದುಂಟು. ಇದು ದನಕರುಗಳಿಗೆ ಒಳ್ಳೆಯ ಮೇವು.

  • ಚೀನಿ ಆರ್ಟಿಚೋಕ್

ಇದು ಲೇಬಿಯೇಟೀ (ಲ್ಯಾಮಿಯೇಸೀ) ಕುಟುಂಬಕ್ಕೆ ಸೇರಿದ ಸ್ಟ್ಯಾಕಿಸ್ ಅಫಿನಿಸ್ ಎಂಬುದು. ಇದರ ತವರು ದೂರ ಪೂರ್ವ ಪ್ರದೇಶ. ಈ ಕಾರಣದಿಂದಲೇ ಇದಕ್ಕೆ ಈ ಹೆಸರು. ಇದರ ಗಡ್ಡೆಗಳು ಮೂಲಂಗಿಯನ್ನು ಹೋಲುವುವು. ಈ ಗಡ್ಡೆಗಳನ್ನು ಹಸಿ ತರಕಾರಿಯಾಗಿಯೂ ಬೇಯಿಸಿ ಅಥವಾ ಖಾದ್ಯ ತಯಾರಿಸಿ ಉಪಯೋಗಿಸಬಹುದು.

ಉಲ್ಲೇಖಗಳು

ಬದಲಾಯಿಸಿ

[]

  1. https://en.wikipedia.org/wiki/Artichoke