ಆರೊಮ್ಯಾಟಿಕ್ ಸಂಯುಕ್ತ

ಆರೊಮ್ಯಾಟಿಕ್ ಸಂಯುಕ್ತಗಳು ಸಾವಯವ ರಸಾಯನ ಶಾಸ್ತ್ರದಲ್ಲಿ ಬರುವ ಸುವಾಸನೆಯುಕ್ತ ಹೈಡ್ರೋಕಾರ್ಬನ್‍ಗಳ ಸಂಯುಕ್ತಗಳು. ಆರೋಮ್ಯಾಟಿಕ್ ಎಂದರೆ 'ಸುವಾಸನೆಯುಳ್ಳ' ಎಂಬ ಅರ್ಥವನ್ನು ಕೊಡುತ್ತದೆ.

ಹಿನ್ನೆಲೆ

ಬದಲಾಯಿಸಿ

ಒಂದೇ ರಾಸಾಯನಿಕ ಧಾತುವಿನ ಪರಮಾಣುಗಳಿರುವ ಆವರ್ತ ಯಾವುದೇ ಸಂಯುಕ್ತದ ಅಣು ರಚನೆಯಲ್ಲಿದ್ದರೆ ಅಂಥ ಸಂಯುಕ್ತವನ್ನು ಸಧಾತು ಚಕ್ರೀಯ ಸಂಯುಕ್ತ ಅಥವಾ ಹೋಮೊಸೈಕ್ಲಿಕ್ ಸಂಯುಕ್ತ ಎನ್ನಬಹುದು. ಆದರೆ ಸಾಮಾನ್ಯವಾಗಿ ಹೋಮೊಸೈಕ್ಲಿಕ್ ಸಂಯುಕ್ತಗಳು ಎನ್ನುವುದು ಕಾರ್ಬನ್ ಪರಮಾಣುಗಳ ಆವರ್ತವಿರುವ ಸಂಯುಕ್ತಗಳಿಗೇ.

ಹೋಮೊಸೈಕ್ಲಿಕ್ ಸಂಯುಕ್ತಗಳನ್ನು ಎರಡು ಗುಂಪುಗಳಾಗಿ ವಿಂಗಡಿಸುತ್ತಾರೆ.

1. ಕೆಲವು ಹೋಮೊಸೈಕ್ಲಿಕ್ ಸಂಯುಕ್ತಗಳು ಆಲಿಫ್ಯಾಟಿಕ್ ಸಂಯುಕ್ತಗಳ ಗುಣ ಧರ್ಮಗಳನ್ನು ಹೊಂದಿರುತ್ತವೆ. ಅವುಗಳಿಗೆ ಆಲಿಸೈಕ್ಲಿಕ್ ಸಂಯುಕ್ತಗಳೆಂದು ಹೆಸರು.

   

2. ಬೆಂಜೀನ್ ಎಂಬ ಹೋಮೊಸೈಕ್ಲಿಕ್ ಹೈಡ್ರೊಕಾರ್ಬನ್ ಮತ್ತು ಅದರಿಂದ ಜನ್ಯವಾದ ಸಂಯುಕ್ತಗಳನ್ನು ಆರೊಮ್ಯಾಟಿಕ್ ಸಂಯುಕ್ತಗಳು ಎಂದು ಕರೆಯುತ್ತಾರೆ.[][]

 
ಆರೋಮ್ಯಾಟಿಕ್ ಸಂಯುಕ್ತಗಳ ರಚನೆ

ಮುಖ್ಯ ಲಕ್ಷಣಗಳು

ಬದಲಾಯಿಸಿ
  • ಎಲ್ಲಾ ಆರೋಮ್ಯಾಟಿಕ್ ಸಂಯುಕ್ತಗಳು ಕೋವಲೆಂಟ್ ಬಂಧವನ್ನು ಹೊಂದಿರುತ್ತವೆ.
  • ರಚನೆಯಲ್ಲಿ ಪರ್ಯಾಯ ಏಕಬಂಧ ಮತ್ತು ದ್ವಿಬಂಧವನ್ನು ಹೊಂದಿರುತ್ತವೆ.
  • ಸಂಯುಕ್ತಗಳಲ್ಲಿರುವ ಎಲ್ಲಾ ಅಣುಗಳು ಒಂದೇ ಸಮತಲದಲ್ಲಿರುತ್ತವೆ.
  • ಈ ಸಂಯುಕ್ತಗಳು ಸ್ವತಂತ್ರ ಎಲೆಕ್ಟ್ರಾನ್‍ಗಳು 4n+2 ಗಳನ್ನು ಹೊಂದಿರುತ್ತವೆ.

ಬೆಂಜ಼ೀನ್‍ನ ರಚನೆ

ಬದಲಾಯಿಸಿ

ಬೆಂಜ಼ೀನ್ ಹೈಡ್ರೊಕಾರ್ಬನ್ನಿನಲ್ಲಿ ಆರು ಕಾರ್ಬನ್ ಪರಮಾಣುಗಳು ಕ್ರಮ ಷಡ್ಭುಜಾಕಾರದಲ್ಲಿ ಜೋಡಿಸಿಕೊಂಡಿದ್ದು, ಅವುಗಳನ್ನು ಪರಸ್ಪರ ಬಂಧಿಸಿರುವ ಬಂಧಗಳು ಪರ್ಯಾಯವಾಗಿ ಏಕಬಂಧ ಮತ್ತು ದ್ವಿಬಂಧಗಳಾಗಿರುತ್ತವೆ. ಆದ್ದರಿಂದ ಬೆಂಜೀನ್ ಅಣುರಚನೆಯನ್ನು ಕೆಳಗೆ ಕಾಣುವಂತೆ ಬರೆಯುತ್ತಾರೆ.

 ಅಥವಾ  

ಈ ಬೆಂಜೀನ್ ಆವರ್ತದಲ್ಲಿ ಏಕಬಂಧ ಮತ್ತು ದ್ವಿಬಂಧಗಳು ಚಿತ್ರದಲ್ಲಿ ತೋರಿಸಿರುವಂತೆ ಆಯಾ ಸ್ಥಾನದಲ್ಲಿ ಭದ್ರವಾಗಿರುವುದಿಲ್ಲ, ಸದಾ ತಮ್ಮ ಸ್ಥಾನಗಳನ್ನು ಬದಲಾಯಿಸುತ್ತಿರುತ್ತವೆ ಎಂದು ಹಿಂದೆ ನಂಬಲಾಗಿತ್ತು. ಆದರೆ ಪ್ರಚಲಿತವಾದದ ಪ್ರಕಾರ ಚಕ್ರದಲ್ಲಿರುವ ಆರು ಬಂಧಗಳೂ ಸಮಾನ ಗುಣಧರ್ಮಗಳನ್ನು ಹೊಂದಿದ್ದು, ಅವು ತಮ್ಮ ಸ್ವಭಾವದಲ್ಲಿ ಏಕಬಂಧ ಮತ್ತು ದ್ವಿಬಂಧಗಳ ಮಧ್ಯವರ್ತಿ ಗುಣಧರ್ಮವನ್ನು ತೋರಿಸುತ್ತವೆ. ಆದ್ದರಿಂದ ಕೆಲವರು ಬೆಂಜೀನ್ ಆವರ್ತವನ್ನು ಕೆಳಗೆ ಕಾಣುವಂತೆ ಬರೆಯುವುದೂ ಉಂಟು.

 

ಆರೋಮ್ಯಾಟಿಕ್ ಸಂಯುಕ್ತಗಳೆಲ್ಲವೂ ಬೆಂಜೀನಿನಿಂದ ಜನ್ಯವಾದುವಾದ್ದರಿಂದ ಅವುಗಳೆಲ್ಲದರಲ್ಲಿಯೂ ಈ ಬೆಂಜೀನ್ ಆವರ್ತವನ್ನು ಕಾಣಬಹುದು. ರಸಾಯನ ವಿಜ್ಞಾನದ ಚರಿತ್ರೆಯಲ್ಲಿ ಮೊದಲು ನಮ್ಮ ಗಮನಕ್ಕೆ ಬಂದ ಬೆಂಜೀನ್ ಜನ್ಯ ಸಂಯುಕ್ತಗಳೆಲ್ಲದಕ್ಕೂ ತೀಕ್ಷ್ಣವಾದ ಸುವಾಸನೆ (ಅರೋಮ) ಇದ್ದುದರಿಂದ ಇವಕ್ಕೆ ಆರೋಮ್ಯಾಟಿಕ್ ಸಂಯುಕ್ತಗಳೆಂಬ ಹೆಸರು ಬಂತು. ಆದರೆ ಈಗ ಆ ವಾಸನೆಯೇ ವರ್ಗೀಕರಣಕ್ಕೆ ಆಧಾರವಲ್ಲ. ವಾಸನೆ ಇರಲಿ, ಇಲ್ಲದಿರಲಿ, ಬೆಂಜೀನ್ ಆವರ್ತವಿರುವ ಸಂಯುಕ್ತಗಳೆಲ್ಲ ಆರೋಮ್ಯಾಟಿಕ್ ಸಂಯುಕ್ತಗಳೇ.

ಆರೋಮ್ಯಾಟಿಕ್ ಸಂಯುಕ್ತದ ಉದಾಹರಣೆ

ಬದಲಾಯಿಸಿ

ಬೆಂಜ಼ೀನ್ ಅಣುವಿನಲ್ಲಿಯ ಹೈಡ್ರೊಜನ್ ಪರಮಾಣುಗಳನ್ನು ಬೇರೆ ಬೇರೆ ಪರಮಾಣುಗಳಿಂದ ಅಥವಾ ಪರಮಾಣು ಪುಂಜಗಳಿಂದ ಬದಲಿಸಿದರೆ ಉಂಟಾಗುವ ಸಂಯುಕ್ತಗಳು ಆರೋಮ್ಯಾಟಿಕ್ ಸಂಯುಕ್ತಗಳಲ್ಲಿ ಅತ್ಯಂತ ಸರಳವಾದುವು. ಉದಾಹರಣೆಗೆ, ಒಂದು ಹೈಡ್ರೊಜನ್ ಪರಮಾಣುವನ್ನು ಕ್ಲೋರಿನ್ ಪರಮಾಣುವಿನಿಂದ ಬದಲಿಸಿದರೆ ಕ್ಲೋರೊಬೆಂಜೀನ್ ಉಂಟಾಗುತ್ತದೆ. ಅದರ ಅಣು ರಚನೆಯನ್ನು ಹೀಗೆ ಬರೆಯುತ್ತಾರೆ.

 

ಬೆಂಜ಼ೀನ್ ಅಣುರಚನೆಯಲ್ಲಿ ಕಂಡುಬರುವ ಆರು ಹೈಡ್ರೊಜನ್ ಪರಮಾಣುಗಳೂ ಸಮಾನ ಸ್ಥಾನಗಳಲ್ಲಿರುವುದರಿಂದ ಸಮಮಿತಿಯ ಕಾರಣಗಳಿಂದ ಅವುಗಳಲ್ಲಿ ಯಾವುದನ್ನು ಕ್ಲೋರಿನ್ ಪರಮಾಣುವಿನಿಂದ ಬದಲಿಸಿದರೂ ಬರುವುದು ಒಂದೇ ಕ್ಲೋರೊ ಬೆಂಜೀನ್.

ಆರೋಮ್ಯಾಟಿಕ್ ಸಂಯುಕ್ತಗಳ ನಾಮಕರಣ

ಬದಲಾಯಿಸಿ

ಎರಡು ಅಥವಾ ಹೆಚ್ಚು ಹೈಡ್ರೊಜನ್ ಪರಮಾಣುಗಳನ್ನು ಇತರ ಪರಮಾಣುಗಳಿಂದ ಅಥವಾ ಪರಮಾಣು ಪುಂಜಗಳಿಂದ ಬದಲಿಸಿದರೆ ಬರುವ ಜನ್ಯ ಸಂಯುಕ್ತಗಳನ್ನು ಹೆಸರಿಸುವಾಗ ಬದಲಿ ಪುಂಜಗಳ ಸ್ಥಾನಗಳನ್ನು ಸೂಚಿಸಬೇಕಾಗುತ್ತದೆ. ಅದಕ್ಕಾಗಿ ಬೆಂಜೀನ್ ಅಣುವಿನಲ್ಲಿ ಯಾವುದಾದರೊಂದು ಸ್ಥಾನವನ್ನು 1 ಎಂದು ಕರೆದು ಅಲ್ಲಿಂದ ಗಡಿಯಾರ ಕ್ರಮದಲ್ಲಿ ಬರುವ ಸ್ಥಾನಗಳಿಗೆ ಕ್ರಮವಾಗಿ 2,3,4,5 ಮತ್ತು 6 ಎಂದು ಕರೆಯುತ್ತಾರೆ.

 

ಎರಡು ಕ್ಲೋರಿನ್ ಪರಮಾಣುಗಳಿರುವ ಮತ್ತು ಮೂರು ಕ್ಲೋರಿನ್ ಪರಮಾಣುಗಳಿರುವ ಬೆಂಜೀನ್‌ಜನ್ಯ ಸಂಯುಕ್ತಗಳ ರಚನೆಗಳನ್ನು ಮತ್ತು ಹೆಸರುಗಳನ್ನು ಈ ಕೆಳಗೆ ಕೊಟ್ಟಿದೆ.

ಮೇಲಿನಂತೆ ಹೈಡ್ರೊಜನ್ ಪರಮಾಣುವನ್ನು ಒಂದೇ ಒಂದು ಪರಮಾಣುವಿನಿಂದ ಬದಲಿಸದೆ, ಪರಮಾಣುಪುಂಜಗಳಿಂದ ಬದಲಿಸಬಹುದು. ಹಾಗೆ ಮಾಡಿದಾಗ ಪುಂಜಗಳಲ್ಲಿರಬಹುದಾದ ರಾಸಾಯನಿಕ ಗುಂಪುಗಳನ್ನು ಅವಲಂಬಿಸಿ ಎಸ್ಟರುಗಳು, ಈಥರುಗಳು, ಆಲ್ಡಿಹೈಡುಗಳು, ಅಮೀನುಗಳು ಉತ್ಪತ್ತಿಯಾಗುತ್ತವೆ. ಅನೇಕವೇಳೆ ಈ ಪುಂಜಗಳ ಸ್ವಭಾವಗುಣ ಆಲಿಫ್ಯಾಟಿಕ್ ಸಂಯುಕ್ತಗಳಲ್ಲಿರುವುದಕ್ಕಿಂತ ಭಿನ್ನವಾಗಿರುತ್ತದೆ. ಉದಾಹರಣೆಗೆ, ಆಲ್ಕೋಹಾಲ್‌ಗಳಲ್ಲಿರುವ -OH ಪುಂಜ ಆಲಿಫ್ಯಾಟಿಕ್ ಸಂಯುಕ್ತಗಳಲ್ಲಿದ್ದಾಗ ತೋರುವ ಗುಣಧರ್ಮಕ್ಕೂ ಅದೇ ಪುಂಜ ಬೆಂಜೀನ್ ಚಕ್ರಕ್ಕೆ ನೇರವಾಗಿ ಅಂಟಿಕೊಂಡಿದ್ದಾಗ ತೋರುವ ಗುಣಧರ್ಮಕ್ಕೂ ಬಹಳ ವ್ಯತ್ಯಾಸವಿರುತ್ತವೆ. ಆದುದರಿಂದಲೇ -OH ನೇರವಾಗಿ ಬೆಂಜೀನ್ ಚಕ್ರಕ್ಕೆ ಅಂಟಿಕೊಂಡಿರುವ ಸಂಯುಕ್ತಗಳನ್ನು ಆಲ್ಕೊಹಾಲ್‌ಗಳು ಎನ್ನುವುದಿಲ್ಲ; ಫಿನಾಲ್‌ಗಳು ಎಂದು ಕರೆಯುತ್ತಾರೆ.

ಪ್ರಾಮುಖ್ಯಗಳು

ಬದಲಾಯಿಸಿ
  • ಎಲ್ಲಾ ಜೀವಿಗಳಲ್ಲಿ ನಡೆಯುವ ಜೀವ ರಸಾಯನ ಕ್ರಿಯೆಯಲ್ಲಿ ಈ ಸಂಯುಕ್ತಗಳು ಮುಖ್ಯ ಪಾತ್ರವನ್ನು ವಹಿಸುತ್ತವೆ.

ಉದಾ: ಕ್ಲೋರೋಫಿಲ್,ಆಮೈನೊ ಆಮ್ಲಗಳು, ನ್ಯೂಕ್ಲಿಯೋಟೈಡ್‍ಗಳು.

  • ಕೈಗಾರಿಕೆಗಳಲ್ಲಿ ಅತಿಹೆಚ್ಚು ಬಳಕೆಯಾಗುತ್ತಿವೆ.

ಅತ್ಯಂತ ಹೆಚ್ಚು ಬಳಸಲ್ಪಡುವ ಆರೋಮ್ಯಾಟಿಕ್ ಸಂಯುಕ್ತಗಳು ಎಂದರೆ ಬೆಂಜೀನ್, ಟಾಲಿನ್, ಆರ್ತೋಟಾಲಿನ್, ಪ್ಯಾರಾಟಾಲಿನ್‍ಗಳು

ಉಲ್ಲೇಖಗಳು

ಬದಲಾಯಿಸಿ
  1. Carey, Francis A.. "aromatic compound". Encyclopedia Britannica, 24 Jun. 2008, https://www.britannica.com/science/aromatic-compound. Accessed 26 February 2023.
  2. https://www.sciencedirect.com/topics/chemistry/aromatic-compound


ಬಾಹ್ಯ ಸಂಪರ್ಕಗಳು

ಬದಲಾಯಿಸಿ