ಆರಗ ಜ್ಞಾನೇಂದ್ರ
ಜನನ೧೯೫೩ 1953
ಹಿಸಣ, ಆರಗ, ತೀರ್ಥಹಳ್ಳಿ, ಶಿವಮೊಗ್ಗ
ವೃತ್ತಿಕೃಷಿಕ
ರಾಷ್ಟ್ರೀಯತೆಭಾರತೀಯ
ಬಾಳ ಸಂಗಾತಿಪ್ರಫುಲ್ಲ
ಮಕ್ಕಳುಅಭಿನಂದನ, ಅನನ್ಯ

ಆರಗ ಜ್ಞಾನೇಂದ್ರರ ಸಂಕ್ಷಿಪ್ತ ಪರಿಚಯ ಬದಲಾಯಿಸಿ

  • ತಂದೆ - ರಾಮಣ್ಣ ಗೌಡ, ತಾಯಿ - ಚಿನ್ನಮ್ಮ,
  • ಪ್ರಾಥಮಿಕ ಶಿಕ್ಷಣ : ಆರಗದಲ್ಲಿ,
  • ಪ್ರೌಢಶಿಕ್ಷಣ : ಕೋಣಂದೂರು ರಾಷ್ಟ್ರೀಯ ಶಿಕ್ಷಣ ಸಂಸ್ಥೆ,
  • ಶಿವಮೊಗ್ಗ ಆಚಾರ್ಯ ತುಳಿಸಿ ವಾಣಿಜ್ಯ ಕಾಲೇಜಿನಲ್ಲಿ ಬಿ.ಕಾಂ.
  • ವಿದ್ಯಾರ್ಥಿ ದೆಸೆಯಲ್ಲಿಯೇ ಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಗೆಲವು, ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಣೆ.
  • ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಶಿವಮೊಗ್ಗ ಜಿಲ್ಲೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಣೆ.
  • ಕಾಲೇಜು ವ್ಯಾಸಂಗ ಮಾಡುವಾಗಲೇ 1975ರ ದೇಶದ ಮೇಲೆ ವಿಧಿಸಿರುವ ತುರ್ತು ಸ್ಥಿತಿಯ ವಿರುದ್ಧ ಜೆ.ಪಿ.ಆಂದೋಲನದಲ್ಲಿ ದುಮುಕಿದ್ದು, ಸರಕಾರ ಬಂಧಿಸಿ ಸೆರೆಮನೆ ವಾಸ.
  • ವಿದ್ಯಾರ್ಥಿ ಜೀವನದಲ್ಲಿಯೇ ಆರ್.ಎಸ್.ಎಸ್.ಸಂಪರ್ಕ.
  • 1983, 1985 ಮತ್ತು 1989ರ ವಿಧಾನಸಭೆ ಚುನಾವಣೆಗೆ ಬಿ.ಜೆ.ಪಿ.ವತಿಯಿಂದ ಸ್ಪರ್ಧಿಸಿ, ಸತತ ಸೋಲು. 1986ರ ಜಿಲ್ಲಾ ಪರಿಷತ್ತಿಗೆ ಆರಗ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ್ದು, ಶಿವಮೊಗ್ಗ ಜಿಲ್ಲಾ ಪರಿಷತ್ತಿನ ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷನಾಗಿ ಕೆಲಸ.
  • 1991ರಲ್ಲಿ ಶಿವಮೊಗ್ಗ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷರಾಗಿ ಕಾರ್ಯ ನಿರ್ವಹಣೆ.
  • 1994, 1999, 2004ರ ವಿಧಾನ ಸಭೆಯ ಚುನಾವಣೆಯಲ್ಲಿ ಸತತ ಮೂರು ಬಾರಿ ಗೆದ್ದು, ತೀರ್ಥಹಳ್ಳಿ ಕ್ಷೇತ್ರದಲ್ಲಿ ಒಮ್ಮೆ ಗೆದ್ದವರು ಎರಡನೆ ಬಾರಿ ಗೆಲ್ಲದೆ ಇರುವ ದಾಖಲೆಯನ್ನು ಮುರಿದು, ತೀರ್ಥಹಳ್ಳಿ ಕ್ಷೇತ್ರವನ್ನು 3 ಬಾರಿ ನಿರಂತರವಾಗಿ ಪ್ರತಿನಿಧಿಸಿರುವುದು ಮಾತ್ರವಲ್ಲದೆ ಅಭಿವೃದ್ಧಿಯ ದಾಖಲೆ ನಿರ್ಮಾಣ.

ಆರಗ ಜ್ಞಾನೇಂದ್ರರ ಸಮಾಜ ಸೇವೆ ಬದಲಾಯಿಸಿ

  • ತೀರ್ಥಹಳ್ಳಿಗೆ ಸರಕಾರಿ ಕಾಲೇಜು, ಮೊರಾರ್ಜಿ ವಸತಿಶಾಲೆ, ಐ.ಟಿ.ಐ. ಕಾಲೇಜು, ಸರಕಾರಿ ಹೆಣ್ಣು ಮಕ್ಕಳ ಜ್ಯೂನಿಯರ್ ಕಾಲೇಜು, ಮಳಲಿಮಕ್ಕಿಯಲ್ಲಿ ಜ್ಯೂನಿಯರ್ ಕಾಲೇಜು ಮತ್ತು ಕೋಣಂದೂರಿಗೆ ವಿದ್ಯಾರ್ಥಿ ಪ್ರೌಢಶಾಲೆ ಜೊತೆಗೆ ತಾಲ್ಲೂಕಿನಲ್ಲಿ ಅನೇಕ ಪ್ರೌಢಶಾಲೆಗಳನ್ನು ತೆರೆದಿರುವುದು.
  • ಕೋಣಂದೂರು ಮತ್ತು ತೀರ್ಥಹಳ್ಳಿಯಲ್ಲಿ ಬಡ ವಿದ್ಯಾರ್ಥಿನಿಯರಿಗೆ ವ್ಯಾಸಂಗಕ್ಕೆ ವಿದ್ಯಾರ್ಥಿನಿ ನಿಲಯ ಮಂಜೂರಾತಿ, ರಸ್ತೆಗಳು, ಸೇತುವೆಗಳು, ತೀರ್ಥಹಳ್ಳಿಗೆ ಸಾರ್ವಜನಿಕ ಕ್ರೀಡಾಗಣ ಮತ್ತು ಗೋಪಾಲಗೌಡ ರಂಗಮಂದಿರದ ನಿರ್ಮಾಣ ಕೆಲಸ ಮಂಜೂರಾತಿ ಹಾಗೂ ಹಳ್ಳಿ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ, ಹೀಗೆ ಅಭಿವೃದ್ಧಿಯ ಮಹಾಪೂರವನ್ನೇ ಮಂಜೂರು ಮಾಡಿಸಿದ್ದು, ಈ ತಾಲ್ಲೂಕಿನ ಜನರ ಪ್ರೀತಿ ವಿಶ್ವಾಸಕ್ಕೆ ಕಾರಣವಾಗಿದೆ.
  • ಅಡಿಕೆ ಬೆಳೆಗಾರರ ಬಗ್ಗೆ ಶಾಸನ ಸಭೆ ಮತ್ತು ದೆಹಲಿ ಮಟ್ಟದಲ್ಲಿಯೂ ಕೂಡ ಹೋರಾಟ ನಡೆಸಿ ಅಡಿಕೆ ಬೆಳೆಗೆ ಬಂದ ಆತಂಕ ದೂರ ಮಾಡಿರುವುದು ಮತ್ತು ಅಡಿಕೆ ಸಂಶೋಧನಾ ಕೇಂದ್ರವೊಂದನ್ನು ತೀರ್ಥಹಳ್ಳಿಗೆ ಮಂಜೂರು ಮಾಡಿಸಿರುವುದು ಬೆಳೆಗಾರರಿಗೆ ಶಕ್ತಿ ತುಂಬುವಲ್ಲಿ ಸಹಕಾರಿ ಯಾಗಿದೆ. ವಿಧಾನ ಮಂಡಳದ, ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷರಾಗಿ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಮಿತಿ ಅಧ್ಯಕ್ಷರಾಗಿ ಮಾಡಿದ ಕೆಲಸ ಮತ್ತು ಕೊಡಮಾಡಿದ ವರದಿಗಳು ಈಗಲೂ ದಾಖಲೆಯಲ್ಲಿವೆ.
  • 2009 ರಿಂದ ಸರಕಾರವು ಭದ್ರಾವತಿಯ ಕಾಗದ ಕಾರ್ಖಾನೆ (ಎಂ.ಪಿ.ಎಂ.) ಅಧ್ಯಕ್ಷರಾಗಿ ನೇಮಕ ಮಾಡಿದೆ.
  • ಸತತ ನಷ್ಟದಲ್ಲಿರುವ ಈ ಕಾರ್ಖಾನೆ 4200ಕ್ಕೂ ಹೆಚ್ಚು ಕಾರ್ಮಿಕರನ್ನು ಮತ್ತು ಸಕ್ಕರೆ ಕಾರ್ಖಾನೆಯಿಂದ ಸಾವಿರಾರು ರೈತ ಕುಟುಂಬದ ನೆರಳಾಗಿರುವ ಈ ಸಂಸ್ಥೆಯ ಅಭಿವೃದ್ಧಿಗೆ ಈಗಾಗಲೇ ಸುಮಾರು 150 ಕೋಟಿ ರೂಗಳ ಸರಕಾರದ ನೆರವು ದೊರಕಿಸಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ.
  • ತೀರ್ಥಹಳ್ಳಿಯಲ್ಲಿ ಅಡಿಕೆ ವ್ಯವಹಾರ ನಡೆಸುತ್ತಿರುವ ತೀರ್ಥಹಳ್ಳಿ ಕೃಷಿಕರ ಸೌಹಾರ್ದ ಸಹಕಾರಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
  • ಸಾಮಾನ್ಯ ಬಡತನದ ಕುಟುಂಬದಿಂದ ಬಂದಿರುವ ತಮ್ಮನ್ನು ಈ ಎತ್ತರಕ್ಕೆ ಬೆಳೆಸಿರುವ ತಾರಗೊಳ್ಳಿ ದಿವಂಗತ ನಾಗರಾಜರಾವ್ ಹಾಗೂ ಕುರುವಳ್ಳಿಯ ದಿವಂಗತ ಪುರುಷೋತ್ತಮರಾಯರ ಬಗ್ಗೆ ಕೃತಜ್ಞತೆಯಿಂದ ಸ್ಮರಿಸುತ್ತಾರೆ.