ಕಿವಿ
North Island brown kiwi (Apteryx mantelli)
Scientific classification
Type species
Apteryx australis
Species

Apteryx haastii Great spotted kiwi
Apteryx owenii Little spotted kiwi
Apteryx rowi Okarito brown kiwi
Apteryx australis Southern brown kiwi
Apteryx mantelli North Island brown kiwi

The distribution of each species of kiwi
Synonyms

Stictapteryx Iredale & Mathews, 1926
Kiwi Verheyen, 1960

ಆಪ್ಟೆರಿಕ್ಸ್ ಕೀವೀ ಎಂಬ ಹಾರಲಾಗದ ಪಕ್ಷಿಯ ವಂಶನಾಮ.ನ್ಯೂಜಿಲೆಂಡಿನ ಮೂಲನಿವಾಸಿ.ನ್ಯೂಜೀಲ್ಯಾಂಡಿನ ರಾಷ್ಟೀಯ ಲಾಂಛನ.ನ್ಯೂಜೀಲ್ಯಾಂಡಿಗರನ್ನು ಕಿವೀಸ್ ಎಂದೇ ಕರೆಯುವುದು ವಾಡಿಕೆಯಾಗಿದೆ.[]

ವೈಜ್ಞಾನಿಕ ಹೆಸರು

ಬದಲಾಯಿಸಿ

ಆಪ್ಟೆರಿಕ್ಸ್ ಆಸ್ಟ್ರಾಲಿಸ್ ಎಂಬುದು ಇದರ ವೈಜ್ಞಾನಿಕ ನಾಮ.ಇದರ ಕೂಗು ಕೀವೀ ಎಂದು ಧ್ವನಿಸುವುದರಿಂದ ಅದೇ ಹೆಸರು ಪಕ್ಷಿ ರೂಢವಾಗಿದೆ.

ಲಕ್ಷಣಗಳು

ಬದಲಾಯಿಸಿ

ಇದರ ರೆಕ್ಕೆ ಬಹಳ ಮೊಟಕು; ಪುಕ್ಕದ ಗರಿಗಳು ಬಿಡಿಬಿಡಿ. ಪೃಷ್ಠಭಾಗ ಬಹಳ ನಶಿಸಿರುವುದರಿಂದ ಮೊಟಕಾಗಿ ಕಾಣುತ್ತದೆ. ಕೀವೀ ಗಾತ್ರದಲ್ಲಿ ದೊಡ್ಡ ಕೋಳಿಯನ್ನು ಹೋಲುವುದು. ಇದರ ಕೊಕ್ಕು ಅತಿ ಉದ್ದವಾಗಿ ಬಾಗಿದೆ. ಕೊಕ್ಕಿನ ತುದಿಯಲ್ಲಿ ನಾಸಿಕ ರಂಧ್ರಗಳು ಇವೆ. ಈ ಪಕ್ಷಿಗಳ ಗ್ರಹಣ ಮತ್ತು ಶ್ರವಣ ಶಕ್ತಿ ಅತಿ ಚುರುಕು; ಆದರೆ ದೃಷ್ಟಿ ಸ್ವಲ್ಪ ಮಂದ. ಕಾಲುಗಳು ಬಹಳ ದಪ್ಪ; ಪ್ರತಿ ಕಾಲಿನಲ್ಲೂ ನಾಲ್ಕು ಬೆರಳುಗಳು, ಪ್ರತಿ ಬೆರಳಿನಲ್ಲಿಯೂ ಮೊನಚಾದ ಒಂದು ಉಗುರು. ನಾಲ್ಕು ಬೆರಳುಗಳಲ್ಲಿ ಒಂದು ಮಾತ್ರ ಹಿಂದಕ್ಕೆ ತಿರುಗಿದೆ. ರೇಗಿಸಿದಾಗ ಇವು ಮೈಮೇಲೆ ಬೀಳಲು ಹಿಂಜರಿಯುವುದಿಲ್ಲ.

ವಾಸ ದಟ್ಟವಾದ ಕಾಡುಗಳಲ್ಲಿ. ಇದು ನಿಶಾಚರಿ.

ಈ ಹಕ್ಕಿ ತನ್ನ ಉದ್ದವಾದ ಕೊಕ್ಕಿನಿಂದ ಇರುವೆ, ಗೆದ್ದಲುಹುಳು ಮತ್ತು ಎರೆಹುಳುಗಳನ್ನು ಗೂಡುಗಳಿಂದ ಎಳೆದು ತಿನ್ನುತ್ತದೆ. ಬೆಳದಿಂಗಳ ರಾತ್ರಿಯಲ್ಲಿ ಇವುಗಳ ಗರಿಗಳು ಥಳಥಳ ಹೊಳೆಯುತ್ತವೆ. ಆದ್ದರಿಂದ ಒಂದು ಕಂಪನಿಯವರು ತಾವು ತಯಾರಿಸುವ ಬೂಟ್‍ಪಾಲಿಷ್‍ಗೆ ಕೀವೀ ಪಾಲಿಷ್ ಎಂದೇ ಹೆಸರಿತ್ತಿದ್ದಾರೆ. ಈ ಜಾತಿಯ ಪಕ್ಷಿಗಳಲ್ಲಿ ಗಂಡಿಗೆ ಶಿಶ್ನವಿದೆ; ಕೀವೀ ಪಕ್ಷಿಯ ತತ್ತಿ ಬಹು ದೊಡ್ಡದು[]. ತಂದೆ ತಾಯಿ ಪಕ್ಷಿಗಳು ಮೊಟ್ಟೆಗಳನ್ನು ಜೋಪಾನವಾಗಿ ಕಾಪಾಡಿ, ಮರಿಗಳಾದ ಮೇಲೆ ಆನಂದದಿಂದ ಅವುಗಳ ಸಂಗಡ ನಲಿಯುತ್ತವೆ.

ಪ್ರಬೇಧಗಳು

ಬದಲಾಯಿಸಿ

ಈ ಪಕ್ಷಿಜಾತಿಯಲ್ಲಿ ಮೂರು ವಂಶಗಳು ಮಾತ್ರ ಉಳಿದಿವೆ. ಅವೆಲ್ಲ ಬಹುಮಟ್ಟಿಗೆ ಒಂದನ್ನೊಂದು ಹೋಲುತ್ತವೆ. ಅವುಗಳಲ್ಲಿ ಕೀವೀ ಎಂದು ಕರೆಯುವ ಆಪ್ಟೆರಿಕ್ಸ್ ಆಸ್ಟ್ರೀಲಿಕ್ಸ್ ಎಂಬುದೇ ದೊಡ್ಡ ಪಕ್ಷಿ.

ಮಾಂಸಕ್ಕೆಂದು ಇವನ್ನು ಜನರು ಕೊಲ್ಲುವರು.

ಉಲ್ಲೇಖಗಳು

ಬದಲಾಯಿಸಿ
  1. Davies, S.J.J.F. (2003). "8 Birds I Tinamous and Ratites to Hoatzins". In Hutchins, Michael (ed.). Grzimek's Animal Life Encyclopedia (2 ed.). Farmington Hills, MI: Gale Group. pp. 89–90. ISBN 0-7876-5784-0.
  2. "Kiwis/Kiwi - New Zealand Immigration Service (Summary of Terms)". Glossary.immigration.govt.nz. Archived from the original on 2009-04-26. Retrieved 2012-09-13.
  3. "Birds: Kiwi". San Diego Zoo. Retrieved 2008-09-19.


ಬಾಹ್ಯ ಸಂಪರ್ಕಗಳು

ಬದಲಾಯಿಸಿ

ಟೆಂಪ್ಲೇಟು:Americana Poster

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: