ಆನಿಮಲ್ ಫೇಸ್-ಆಫ್ ಡಿಸ್ಕವರಿ ಚಾನೆಲ್ ಮತ್ತು ಆನಿಮಲ್ ಪ್ಲಾನೆಟ್‌ನಲ್ಲಿ ಪ್ರಸಾರವಾದ ಒಂದು ದೂರದರ್ಶನ ಕಾರ್ಯಕ್ರಮವಾಗಿದೆ.[೧] ಈ ಕಾರ್ಯಕ್ರಮವು ಕಾಡಿನಲ್ಲಿ ಭೇಟಿಯಾಗುವ ಅಥವಾ, ಕೆಲವು ಸಂದರ್ಭಗಳಲ್ಲಿ, ವಿಜ್ಞಾನಿಗಳಿಂದ ಪರಸ್ಪರ ಹೋಲಿಸಲ್ಪಡುವ ಎರಡು ಪ್ರಾಣಿಗಳ ನಡುವಿನ ಕಾಲ್ಪನಿಕ ಕಾದಾಟವನ್ನು ಕೇಂದ್ರೀಕರಿಸುತ್ತದೆ. ಪ್ರಾಣಿಗಳ ಬಗ್ಗೆ ಮಾಹಿತಿಯನ್ನು (ಉದಾ, ಶಕ್ತಿ, ಕಚ್ಚುವ ಬಲ ಇತ್ಯಾದಿ) ಸಂಗ್ರಹಿಸಲು CGI ನಕಲು ಮತ್ತು ಮಾದರಿಗಳನ್ನು ಬಳಸಲಾಗಿತ್ತು. ನಂತರ ವಸ್ತುತಃ ಕಣದಲ್ಲಿ ಒಂದು ಸಂಕ್ಷಿಪ್ತ ಕಂಪ್ಯೂಟರ್‌ನಿಂದ ಆನಿಮೇಟ್ ಮಾಡಿದ ಕಾದಾಟದ ದೃಶ್ಯವು ಫಲಿತಾಂಶಗಳನ್ನು ಬಹಿರಂಗಪಡಿಸುತ್ತದೆ. ಇದನ್ನು ಕೃತಕವಾಗಿ ಮಾಡಿದುದರಿಂದ, ಫಲಿತಾಂಶಗಳು ವ್ಯತ್ಯಾಸಗೊಳ್ಳಬಹುದು. ಆನಿಮಲ್ ಫೇಸ್-ಆಫ್ ‌ನ ಪ್ರತಿಯೊಂದು ಎಪಿಸೋಡ್ ೧ ಗಂಟೆ ಉದ್ದವಿದೆ, ಆದರೆ ೧೨ನೇ ಎಪಿಸೋಡ್ ಮಾತ್ರ ಇದಕ್ಕೆ ಹೊರತಾಗಿದ್ದು ೨ ಗಂಟೆಗಳಷ್ಟು ಉದ್ದವಿದೆ (ವಾಣಿಜ್ಯ ಜಾಹೀರಾತುಗಳನ್ನೂ ಒಳಗೊಂಡು).

Animal Face-Off
ಶೈಲಿEdutainment
ದೇಶUnited States
ಒಟ್ಟು ಸರಣಿಗಳು
ಒಟ್ಟು ಸಂಚಿಕೆಗಳು೧೨
ನಿರ್ಮಾಣ
ಸಮಯ60/120 minutes (including commercials)
ಪ್ರಸಾರಣೆ
ಮೂಲ ವಾಹಿನಿDiscovery Channel
ಮೂಲ ಪ್ರಸಾರಣಾ ಸಮಯಮಾರ್ಚ್ 21 – ಸೆಪ್ಟೆಂಬರ್ 12, 2004 (2004-09-12)
ಹೊರ ಕೊಂಡಿಗಳು
ತಾಣ

ಕಂತುಗಳ ಪಟ್ಟಿ ಬದಲಾಯಿಸಿ

ಕಂತು ಶೀರ್ಷಿಕೆ ಸ್ಥಾನ ಪುನರವಲೋಕನ ವಿಜೇತ
ಉಪ್ಪುನೀರಿನ ಮೊಸಳೆ ಮತ್ತು ಬಿಳಿ ಶಾರ್ಕ್ ಮೀನು ಉತ್ತರ ಆಸ್ಟ್ರೇಲಿಯಾದ ಕರಾವಳಿ ಶಾರ್ಕ್ ಮೀನು ಆಹಾರ ಹುಡುಕುತ್ತಿರುತ್ತದೆ. ಇದು ನೂಕಿ-ಕಚ್ಚುವ ಪ್ರಯೋಗ ವಿಧಾನದಿಂದ ಮೊಸಳೆಗೆ ತಾಗುತ್ತದೆ. ನಂತರ ಇದು ಅದರ ಮೇಲೆ ಆಕ್ರಮಣ ಮಾಡಲು ಪ್ರಯತ್ನಿಸುತ್ತದೆ. ಮೊಸಳೆಯು ಶಾರ್ಕ್‌ನ ಬಾಲವನ್ನು ಕಚ್ಚುತ್ತದೆ, ಆದರೆ ಅದಕ್ಕೆ ಒಂದು ಉತ್ತಮ ಹಿಡಿತ ಸಿಗುವುದಿಲ್ಲ. ಶಾರ್ಕ್ ದೂರಕ್ಕೆ ಹೋಗಿ, ಮತ್ತೆ ಹಿಂದಿರುಗಿ ಸಂಪೂರ್ಣವಾಗಿ ಬಲಯುತ ದಾಳಿಯನ್ನು ಮಾಡುತ್ತದೆ. ಆದರೆ ಮೊಸಳೆಯು ಮೊದಲು ಆಕ್ರಮಣ ಮಾಡಿ ಶಾರ್ಕ್‌ನ ಎದೆರೆಕ್ಕೆಯನ್ನು ಕಚ್ಚಿ, ಅದು ಕಿತ್ತುಹೋಗುವಂತೆ ಮಾಡುತ್ತದೆ. ಅಷ್ಟೊಂದು ಹಾನಿಕರ ಪೆಟ್ಟಾದರೂ, ಶಾರ್ಕ್ ಇನ್ನಷ್ಟು ವೇಗ ಮತ್ತು ಬಲಯುತವಾಗಿರುತ್ತದೆ. ನಂತರ ಎರಡೂ ಪ್ರಾಣಿಗಳು ತಲೆಯಿಂದ ಢಿಕ್ಕಿಹೊಡೆದುಕೊಳ್ಳುತ್ತವೆ ಮತ್ತು ಮೊಸಳೆಯು ಶಾರ್ಕ್‌ನ ಮೂತಿಯನ್ನು ಬಿಗಿಯಾಗಿ ಕಚ್ಚುತ್ತದೆ. ಇದರಿಂದ ಶಾರ್ಕ್‌ಗೆ ಕಾದಾಡಲು ಸಾಧ್ಯವಾಗುವುದಿಲ್ಲ ಮತ್ತು ಮೊಸಳೆಯು ಇನ್ನೊಮ್ಮೆ ಶಾರ್ಕ್ಅನ್ನು ಕೊಲ್ಲಲು ಪ್ರಯತ್ನಿಸುತ್ತದೆ. ಎರಡೂ ಪ್ರಾಣಿಗಳೂ ನೀರಿನಲ್ಲಿ ಮುಳುಗುತ್ತವೆ. ಅನಿಲದ ಕೊರತೆಯಿಂದ ಮೊಸಳೆಯು ಹಿಡಿತವನ್ನು ಸಡಿಲಗೊಳಿಸಿ, ತಲೆಯನ್ನು ನೀರಿನ ಮೇಲ್ಮೈಗೆ ಸರಿಸುತ್ತದೆ. ಇದರಿಂದ ಶಾರ್ಕ್‌ಗೆ ದಾಳಿ ಮಾಡಲು ಅವಕಾಶ ದೊರಕಿ, ಅದು ಮೊಸಳೆಯ ದೇಹವನ್ನು ಕಚ್ಚುತ್ತದೆ. ಬಿಳಿ ಶಾರ್ಕ್ ಮೀನು
ಆನೆ ಮತ್ತು ಖಡ್ಗಮೃಗ ಸೆರೆಂಗೆಟಿ ಆನೆಯು ಆಹಾರಕ್ಕಾಗಿ ಹುಡುಕುತ್ತಿರುತ್ತದೆ, ಆದರೆ ಕೆರಳಿದ ಖಡ್ಗಮೃಗಕ್ಕೆ ಅದು ಅಪಾಯದ ಸೂಚನೆಯಾಗಿ ಕಾಣಿಸುತ್ತದೆ. ಖಡ್ಗಮೃಗವು ಆನೆಯ ಮೇಲೆ ದಾಳಿ ಮಾಡಿ ತಿವಿಯಲು ಪ್ರಯತ್ನಿಸುತ್ತದೆ. ಆದರೆ ಚತುರ ಆನೆಯೂ ಸಹ ಎರಗಿ ಬೀಳುತ್ತದೆ ಮತ್ತು ಖಡ್ಗಮೃಗದ ದಾಳಿಯಿಂದ ನುಣುಚಿಕೊಳ್ಳುತ್ತದೆ. ನಂತರ ಖಡ್ಗಮೃಗವು ಆನೆಯ ಸೊಂಡಿಲನ್ನು ತಿವಿಯಲು ಪ್ರಯತ್ನಿಸುತ್ತದೆ, ಆದರೆ ಅದು ಖಡ್ಗಮೃಗದ ೪-ಅಡಿಯ ಕೊಂಬಿಗಿಂತ ತುಂಬಾ ಉದ್ದವಿರುತ್ತದೆ. ಖಡ್ಗಮೃಗವು ತನ್ನ ತಲೆಯಿಂದ ಚುರುಕಾದ ಹೊಡೆತವನ್ನು ನೀಡುತ್ತದೆ, ಆದರೆ ಆನೆಯು ತಲೆಯನ್ನು ಹೊಡೆತದಿಂದ ತಪ್ಪಿಸಿಕೊಂಡು, ಸೊಂಡಿಲು ಮತ್ತು ದಂತದಿಂದ ಖಡ್ಗಮೃಗವನ್ನು ಎದುರಿಸುತ್ತದೆ. ನಂತರ ಆನೆಯು ತನ್ನ ದಂತಗಳಿಂದ ಖಡ್ಗಮೃಗವನ್ನು ಎರಡು ಬಾರಿ ತಿವಿಯುತ್ತದೆ (ಈ ಕ್ರಿಯೆಯಲ್ಲಿ ಅದರ ಒಂದು ದಂತವು ಮುರಿದುಹೋಗುತ್ತದೆ), ಉಳಿದ ಒಂದು ದಂತದಿಂದ ಅದನ್ನು ಕೆಳಕ್ಕೆ ಉರುಳಿಸುತ್ತದೆ ಮತ್ತು ನಜ್ಜುಗುಜ್ಜಾಗಿಸುತ್ತದೆ. ಆಫ್ರಿಕಾದ ಪೊದೆಗಾಡಿನ ಆನೆ
ಸಿಂಹ ಮತ್ತು ಹು ಗಿರ್ ಅರಣ್ಯ ರಾಷ್ಟ್ರೀಯ ಉದ್ಯಾನ ಹುಲಿಯು ಅದು ಬೇಟೆಯಾಡಿ ಕೊಂದ ಪ್ರಾಣಿಯನ್ನು ತಿನ್ನುತ್ತಿರುತ್ತದೆ. ಹುಲಿಯಿಂದ ಕೆಲವು ಮೀಟರ್‌ಗಳಷ್ಟು ದೂರದಲ್ಲಿ ಒಂದು ಸಿಂಹವು ಬಂದು ಗಟ್ಟಿಯಾಗಿ ಘರ್ಜಿಸುತ್ತದೆ. ಸಿಂಹವು ಓಡಿಬಂದು ಹುಲಿಯ ಮೇಲೆ ದಾಳಿ ಮಾಡುತ್ತದೆ. ಆದರೆ ಅದು ಹುಲಿಯನ್ನು ಎಡವಿ ಬೀಳುತ್ತದೆ. ಇದರಿಂದ ಅದಕ್ಕೇ ಪೆಟ್ಟಾಗುತ್ತದೆ. ಕುಶಾಗ್ರ ಹುಲಿಯು ಶೀಘ್ರವಾಗಿ ಎದ್ದು, ನಿರಂತರವಾಗಿ ಸಿಂಹದ ಕತ್ತನ್ನು ಕ್ರೂರವಾಗಿ ಕಚ್ಚಲು ಪ್ರಯತ್ನಿಸುತ್ತದೆ. ಆದರೆ ಸಿಂಹವು ಆ ದಾಳಿಯಿಂದ ತಪ್ಪಿಸಿಕೊಳ್ಳುತ್ತದೆ. ಸಿಂಹವು ಬಿದ್ದಲ್ಲಿಂದ ಎದ್ದೇಳುತ್ತದೆ ಮತ್ತು ಎರಡೂ ಪ್ರಾಣಿಗಳು ಪರಸ್ಪರ ದೂರ ಸರಿದು ಘರ್ಜಿಸುತ್ತವೆ. ಅವು ತೀಕ್ಷ್ಣವಾಗಿ ಪರಸ್ಪರ ಮುಖಗಳನ್ನು ಪರಚಿಕೊಳ್ಳುತ್ತವೆ. ಹುಲಿಯು ಸಿಂಹದ ಮೇಲೆ ಹಠಾತ್ ದಾಳಿ ಮಾಡಿ ಅದರ ಕತ್ತನ್ನು ಕಚ್ಚಲು ಪ್ರಯತ್ನಿಸುತ್ತದೆ. ಆದರೆ ಸಿಂಹದ ಕೇಸರವು ಅದನ್ನು ತಡೆಯುತ್ತದೆ. ಹುಲಿಯು ಹಿಂದಕ್ಕೆ ಸರಿದು ಸಿಂಹವನ್ನು ಎದುರಿಸುತ್ತದೆ. ಆದರೆ ಸಿಂಹವು ಹುಲಿಯ ಕತ್ತಿನ ಹಿಂಭಾಗವನ್ನು ಕಚ್ಚುವ ಮೂಲಕ ಕಾದಾಟವನ್ನು ಕೊನೆಗೊಳಿಸುತ್ತದೆ. ಏಷ್ಯಾದ ಸಿಂಹ
ನಿರ್ಗುದುರೆ ಮತ್ತು ಬುಲ್ ಶಾರ್ಕ್ ಜಾಂಬೆಜಿ ನದಿ ನೀರ್ಗುದುರೆಗೆ ಗಾಯವಾಗಿರುತ್ತದೆ, ಆ ರಕ್ತದ ವಾಸನೆಯು ಬುಲ್ ಶಾರ್ಕ್ಅನ್ನು ಆಕರ್ಷಿಸುತ್ತದೆ. ಬುಲ್ ಶಾರ್ಕ್ ಕೆಡವಿ ಕಚ್ಚುವ ಪ್ರಯೋಗ ವಿಧಾನದಿಂದ ನೀರ್ಗುದುರೆಯ ಮೇಲೆ ದಾಳಿ ಮಾಡುತ್ತದೆ. ನೀರ್ಗುದುರೆ ಆಹಾರವೆಂದು ತಿಳಿದ ನಂತರ ಶಾರ್ಕ್ ಸಾಧ್ಯವಾದಷ್ಟು ಗಟ್ಟಿಯಾಗಿ ಅದರ ದೇಹವನ್ನು ಕಚ್ಚಲು ಪ್ರಯತ್ನಿಸುತ್ತದೆ. ನೀರ್ಗುದುರೆಯ ಹಲವಾರು ಪದರಗಳಿರುವ ದಪ್ಪವಾದ ಚರ್ಮವನ್ನು ಕಚ್ಚಲು ಸಣ್ಣ ಶಾರ್ಕ್‌ಗೆ ತುಂಬಾ ಕಷ್ಟವಾಗುತ್ತದೆ. ಅದರ ಹಿಂದಿನ ಕಾಲಿನ ತೆಳ್ಳಗಿನ ಚರ್ಮವೂ ಸಹ ಶಾರ್ಕ್‌ಗೆ ಕ್ಲಿಷ್ಟವಾಗುತ್ತದೆ. ಆದರೂ ಬುಲ್ ಶಾರ್ಕ್ ನೀರ್ಗುದುರೆಯ ಬಾಲವನ್ನು ಕಚ್ಚುವಲ್ಲಿ ಯಶಸ್ವಿಯಾಗುತ್ತದೆ. ಅಷ್ಟೆಲ್ಲಾ ಆದರೂ ತೀವ್ರವಾಗಿ ಗಾಯಗೊಂಡ ನೀರ್ಗುದುರೆಗೆ ತನ್ನ ಮೇಲೆ ದಾಳಿ ಮಾಡಿದುದೇನು ಎಂಬುದು ತಿಳಿಯುವುದಿಲ್ಲ. ಆದರೆ ತುಂಬಾ ನೋವನ್ನು ನೀಡಿದ ದಾಳಿಯು ಅದರ ಕೋಪವನ್ನು ಹೆಚ್ಚಿಸುತ್ತದೆ. ನೀರ್ಗುದುರೆಯು ಪ್ರತಿದಾಳಿ ಮಾಡಿ, ಅದರ ದೊಡ್ಡ ತಲೆಯನ್ನು ನೀರಿನೊಳಗೆ ತೂರಿಸಿ, ಘೋರ ಹಲ್ಲುಗಳಿಂದ ಶಾರ್ಕ್ಅನ್ನು ಆವರಿಸುತ್ತದೆ. ನೀರ್ಗುದುರೆಯು ಅದರ ದೊಡ್ಡ ಬಾಯಿಯನ್ನು ತೆರೆದಂತೆ ಶಾರ್ಕ್ ಮೀನು ಅದರ ಬಾಯಿಯನ್ನು ತೆರೆದುಕೊಂಡು ಮುನ್ನುಗ್ಗುತ್ತದೆ, ಆದರೆ ನೀರ್ಗುದುರೆಯು ಅದರ ತಲೆಯನ್ನು ಕಚ್ಚಿ ಅದನ್ನು ಸಾಯಿಸುತ್ತದೆ, ಆ ಮೂಲಕ ಕಾದಾಟವು ಕೊನೆಗೊಳ್ಳುತ್ತದೆ. ನೀರ್ಗುದುರೆ
ತೋಳ ಮತ್ತು ಕ್ಯೂಗರ್ ಶಿಲಾ ಪರ್ವತಗಳು ತೋಳವು ರಾತ್ರಿಯ ಹೊತ್ತು ಅದರ ಆಹಾರವನ್ನು ತಿನ್ನುವುದರಲ್ಲಿ ನಿರತವಾಗಿರುತ್ತದೆ. ಒಂದು ಕೂಗರ್‌ಗೆ ದೂರದಿಂದ ಮಾಂಸದ ವಾಸನೆ ಬರುತ್ತದೆ. ಅದು ಆ ವಾಸನೆಯ ಜಾಡು ಹಿಡಿದು ಹುಡುಕಲು ಆರಂಭಿಸುತ್ತದೆ. ತನ್ನ ಆಹಾರವನ್ನು ಕಸಿದುಕೊಳ್ಳಲು ಬರುತ್ತಿದೆಯೆಂದು ತಿಳಿದ ತೋಳವು ಮುನ್ನುಗ್ಗಿ ಆ ಕೂಗರ್‌ನ ಮೇಲೆ ದಾಳಿ ಮಾಡಿ, ಅದರ ಹಿಂದಿನ ಕಾಲನ್ನು ಭೀಕರವಾಗಿ ಕಚ್ಚುತ್ತದೆ. ಆದರೆ ಕೂಗರ್ ಅದರ ಮುಂದಿನ ಕಾಲುಗಳಿಂದ ಮತ್ತು ಮಾರಣಾಂತಿಕ ಉಗುರುಗಳಿಂದ ಆಕ್ರಮಣ ಮಾಡುವುದರಿಂದ ತೋಳವು ಹಿಂದಕ್ಕೆ ಸರಿಯುತ್ತದೆ. ಬಲವನ್ನು ಕಳೆದುಕೊಂಡ ಕೂಗರ್ ಹಿಂದಕ್ಕೆ ಸರಿಯಲು ಪ್ರಯತ್ನಿಸುತ್ತದೆ, ಆದರೆ ತೋಳವು ಕಾದಾಟವನ್ನು ಮುಂದುವರಿಸುತ್ತದೆ. ತೋಳವು ಕೂಗರ್‌ನ ಪಂಜವನ್ನು ಕಚ್ಚಿ, ಅದನ್ನು ಚುಚ್ಚುತ್ತದೆ. ಆದರೆ ಕೂಗರ್ ಆ ದಾಳಿಯಿಂದ ತಪ್ಪಿಸಿಕೊಳ್ಳುತ್ತದೆ. ಕೂಗರ್ ಅದರ ಮುಂದಿನ ಮತ್ತು ಹಿಂದಿನ ಪಂಜಗಳಿಂದ ತೋಳವನ್ನು ಬಲವಾಗಿ ನೂಕಿ, ಅದರ ಕತ್ತಿನ ಹಿಂಭಾಗವನ್ನು ಕಚ್ಚಲು ಪ್ರಯತ್ನಿಸುತ್ತದೆ. ಆದರೆ ತೋಳಗಳ ಹಿಂಡಿನ ಊಳಿಡುವಿಕೆಯು ಅದು ಹಿಮ್ಮೆಟ್ಟುವಂತೆ ಮಾಡುತ್ತದೆ. ತೋಳಗಳ ಹಿಂಡು
ಧ್ರುವಪ್ರದೇಶದ ಕರಡಿ ಮತ್ತು ವಾಲ್ರಸ್(ಕಡಲ ಸಿಂಹ) ಆರ್ಕ್ಟಿಕ್ ವೃತ್ತ ಧ್ರುವಪ್ರದೇಶದ ಕರಡಿಯು ವಾಲ್ರಸ್ಅನ್ನು ಕಚ್ಚಲು ಪ್ರಯತ್ನಿಸುತ್ತಿರುತ್ತದೆ, ಆದರೆ ವಾಲ್ರಸ್‌ನ ಚರ್ಮವು ತುಂಬಾ ದಪ್ಪವಾಗಿರುತ್ತದೆ. ತನ್ನ ಹಲ್ಲುಗಳನ್ನು ಸ್ವಲ್ಪ ಮಟ್ಟಿಗೆ ತಾಗಿಸುವಲ್ಲಿ ಯಶಸ್ವಿಯಾದರೂ, ಕರಡಿಗೆ ಅದನ್ನು ಗಂಭೀರವಾಗಿ ಗಾಯಗೊಳಿಸಲು ಸಾಧ್ಯವಾಗುವುದಿಲ್ಲ. ವಾಲ್ರಸ್ ಅದರಿಂದ ತಪ್ಪಿಸಿಕೊಂಡು ದೂರಸರಿಯುವುದರಿಂದ, ಕರಡಿಯು ನೀರಿಗೆ ಬೀಳುತ್ತದೆ. ವಾಲ್ರಸ್ ಅದರ ದಾಡೆಗಳಿಂದ ಕರಡಿಯನ್ನು ತಿವಿಯುತ್ತದೆ. ಕರಡಿಯು ತಪ್ಪಿಸಿಕೊಂಡು ಓಡಲು ಪ್ರಯತ್ನಿಸುತ್ತದೆ, ಆದರೆ ವಾಲ್ರಸ್ ತನ್ನ ದಾಡೆಗಳನ್ನು ಕರಡಿಯ ಹಿಂಭಾಗದಿಂದ ತೂರಿಸಿ ಅದನ್ನು ಕೊಲ್ಲುತ್ತದೆ. ವಾಲ್ರಸ್
ಸೈಬೀರಿಯನ್ ಹುಲಿ ಮತ್ತು ಕಂದು ಕರಡಿ ರಷ್ಯಾ‌ ಕಂದು ಕರಡಿಯು ಹುಲಿಯು ಬೇಟಿಯಾಡಿದುದನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತದೆ. ಇದರಿಂದ ಕೋಪಗೊಂಡ ಹುಲಿಯು ಕರಡಿಯ ಮೇಲೆ ದಾಳಿ ಮಾಡುತ್ತದೆ. ಆದರೆ ಕರಡಿಯು ಹುಲಿಯ ಪ್ರತಿಯೊಂದು ಹೊಡೆತವನ್ನು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ. ಹುಲಿಯು ಕರಡಿಯ ಕುತ್ತಿಗೆಯನ್ನು ಹಿಡಿಯಲು ಪ್ರಯತ್ನಿಸುತ್ತದೆ, ಆದರೆ ವಿಫಲಗೊಳ್ಳುತ್ತದೆ. ಅನಂತರ ಹುಲಿಯು ಕರಡಿಯ ಹಿಂದಿನಿಂದ ಅದರ ಮೇಲೆ ಹಾರುತ್ತದೆ ಮತ್ತು ತನ್ನ ಪಂಜಗಳಿಂದ ಅದನ್ನು ಗಾಯಗೊಳಿಸುತ್ತದೆ. ಹುಲಿಯು ನಿರಂತರವಾಗಿ ದಾಳಿಗಳನ್ನು ಮಾಡಿದರೂ, ಕರಡಿಯ ಹಲವಾರು ಪದರಗಳಿರುವ ದಪ್ಪಗಿನ ತುಪ್ಪುಳು ಮತ್ತು ಕೊಬ್ಬಿನಿಂದ ಹುಲಿಗೆ ಕಷ್ಟವಾಗುತ್ತದೆ. ಕರಡಿಯು ಹುಲಿಯನ್ನು ದೂರಕ್ಕೆ ಎಸೆದುಬಿಡುತ್ತದೆ, ಅದರ ಹಿಂಭಾಗವನ್ನು ಮುರಿದು, ಕತ್ತನ್ನು ಕಚ್ಚುತ್ತದೆ, ಇದರಿಂದ ಕಾದಾಟವು ಕೊನೆಗೊಳ್ಳುತ್ತದೆ. ಸೈಬೀರಿಯನ್ ಕಂದು ಕರಡಿ
ಸಿಂಹ ಮತ್ತು ನೈಲ್ ಮೊಸಳೆ ನೈಲ್ ಸಿಂಹವು ಹರಿತವಾದ ಹಲ್ಲುಗಳು ಮತ್ತು ಪಂಜಗಳನ್ನು ಹೊಂದಿರುತ್ತದೆ, ಆದರೂ ಅದಕ್ಕೆ ಮೊಸಳೆಯ ದಪ್ಪಗಿನ ರಕ್ಷಕ ಚರ್ಮವನ್ನು ಛೇದಿಸಲು ಸಾಧ್ಯವಾಗುವುದಿಲ್ಲ. ಸಿಂಹವು ಒಂದಾದ ನಂತರ ಮತ್ತೊಂದರಂತೆ ದಾಳಿಗಳನ್ನು ಮಾಡುತ್ತಲೇ ಇರುತ್ತದೆ. ಆದರೆ ಮೊಸಳೆಯ ಭಯಂಕರ ಪಂಜಗಳು ಅದರ ಪ್ರತಿ ಪ್ರಯತ್ನದ ನಂತರ ದೂರಕ್ಕೆ ಸರಿಯುವಂತೆ ಮಾಡುತ್ತವೆ. ನಂತರ ಮೊಸಳೆಯು ನೀರಿಗೆ ಹಿಂದಿರುಗುತ್ತದೆ. ಮೊಸಳೆಯು ಹಿಂದಿರುಗಿದೆಯೆಂದು ಆಶ್ಚರ್ಯಪಡುತ್ತಾ ಸಿಂಹವು ನೀರಿನ ಬದಿಯಲ್ಲಿ ನಿಂತಿರುತ್ತದೆ. ಆಗ ಮೊಸಳೆಯು ನೀರಿನಿಂದ ಮೇಲೆ ಬಂದು, ಸಿಂಹದ ತಲೆ ಮತ್ತು ಕತ್ತಿನಲ್ಲಿ ಹಿಡಿದುಕೊಂಡು ನೀರಿನೊಳಕ್ಕೆ ಎಳೆದುಕೊಂಡು ಹೋಗುತ್ತದೆ. ನೈಲ್ ಮೊಸಳೆ
ಅನಕೊಂಡ ಮತ್ತು ಜಾಗ್ವರ್ ಅಮೆಜಾನ್ ನದಿ ಹಸಿರು ಅನಕೊಂಡ ನೀರಿನ ಅಡಿಯಿಂದ ಜಾಗ್ವರ್‌ನ ಸುತ್ತಲೂ ಆವರಿಸಿಕೊಂಡು, ಅದರ ತಲೆಯನ್ನು ತನ್ನ ಹಲ್ಲುಗಳಿಂದ ಕಚ್ಚಿ ಹಿಡಿದುಕೊಂಡು ಹೊಡೆತಗಳನ್ನು ನೀಡುತ್ತಿರುತ್ತದೆ. ಸಸ್ತನಿ ಮತ್ತು ಸರೀಸೃಪಗಳೆರಡೂ ನೀರಿನೊಳಕ್ಕೆ ಮುಳುಗುತ್ತವೆ. ಜಾಗ್ವರ್ ಅನಕೊಂಡದ ಬಾಲವನ್ನು ಕಚ್ಚುವ ಮೂಲಕ ಅದರ ಹಿಡಿತದಿಂದ ಬಿಡಿಸಿಕೊಳ್ಳುತ್ತದೆ. ಅನಕೊಂಡವು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತದೆ, ಆದರೆ ಜಾಗ್ವರ್ ಅದನ್ನು ನೀರಿನಿಂದ ಹೊರಕ್ಕೆ ಎಸೆದುಬಿಡುತ್ತದೆ. ನಂತರ ಅನಕೊಂಡವು ಹಠಾತ್ ಪ್ರತಿದಾಳಿ ಮಾಡುತ್ತದೆ, ಜಾಗ್ವರ್‌ನ ಸುತ್ತಲೂ ಆವರಿಸಿಕೊಂಡು ಮತ್ತೊಮ್ಮೆ ತನ್ನ ತಲೆಯಿಂದ ಅದನ್ನು ಬಂಧಿಸುತ್ತದೆ. ಈ ಬಾರಿ ಅನಕೊಂಡವು ಜಾಗ್ವರ್ಅನ್ನು ನೆಲದ ಮೇಲೆಯೇ ಸಾಯುವಂತೆ ಮಾಡುತ್ತದೆ. ಹಸಿರು ಅನಕೊಂಡ
೧೦ ಗೋರಿಲ್ಲಾ ಮತ್ತು ಚಿರತೆ ಕೋಂಗೊ ನದಿ ಗೋರಿಲ್ಲಾ ಕಾದಾಟದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತದೆ, ಆದರೆ ಚಿರತೆಯು ಹಿಂದಕ್ಕೆ ಸರಿಯುವುದಿಲ್ಲ. ಚಿರತೆಗೆ ರಾತ್ರಿ ಹೊತ್ತೂ ಚೆನ್ನಾಗಿ ಕಣ್ಣು ಕಾಣಿಸುವುದರಿಂದ ಮತ್ತು ಅದರ ಗುಪ್ತ ವಿಧಾನದಿಂದ ಅದು ಬಲಶಾಲಿಯಾಗಿರುತ್ತದೆ. ಆದರೆ ಗೋರಿಲ್ಲಾ ಬಿಡದೆ ಪ್ರಯತ್ನ ಮಾಡಿ ಚಿರತೆಯ ಭುಜವನ್ನು ಕಚ್ಚುತ್ತದೆ. ಅಂತಿಮ ತಿವಿತದ ಸಂದರ್ಭದಲ್ಲಿ ಗೋರಿಲ್ಲಾವು ಅದರ ಕೈಗಳಿಂದ ಮಾರಣಾಂತಿಕ ಹೊಡೆತವನ್ನು ನೀಡಿ ಚಿರತೆಯ ಬೆನ್ನೆಲುಬನ್ನು ಮುರಿಯುತ್ತದೆ. ಪರ್ವತದ ಗೋರಿಲ್ಲಾ
೧೧ ಆಲಿಗೇಟರ್ ಮತ್ತು ಕಪ್ಪು ಕರಡಿ ಎವರ್‌ಗ್ಲೇಡ್ಸ್ ರಾಷ್ಟ್ರೀಯ ಉದ್ಯಾನ ಆಲಿಗೇಟರ್ ಕರಡಿಯ ಕಾಲನ್ನು ಕಚ್ಚಿ ಗಾಯಗೊಳಿಸುತ್ತದೆ. ಆದರೂ ಅದಕ್ಕೆ ಕರಡಿಯ ತುಪ್ಪುಳು, ಕೊಬ್ಬು ಮತ್ತು ಮಾಂಸವನ್ನು ಮಾತ್ರ ಕಚ್ಚಲು ಸಾಧ್ಯವಾಗುತ್ತದೆ. ಕರಡಿಯು ಪ್ರತಿದಾಳಿ ಮಾಡುತ್ತದೆ. ಆಲಿಗೇಟರ್ ತನ್ನ ಬಾಲದಿಂದ ಬಲವಾಗಿ ಹೊಡೆಯಲು ಪ್ರಯತ್ನಿಸುತ್ತದೆ, ಆದರೆ ಕರಡಿಯು ಇದರಿಂದ ತಪ್ಪಿಸಿಕೊಳ್ಳುತ್ತದೆ. ಶಕ್ತಿಯನ್ನು ಕಳೆದುಕೊಂಡ ಆಲಿಗೇಟರ್ ನೀರಿಗೆ ಹಿಂದಿರುಗಲು ಪ್ರಯತ್ನಿಸುತ್ತದೆ, ಆದರೆ ಕರಡಿಯು ಅದನ್ನು ತಡೆಯುತ್ತದೆ. ಮೊಸಳೆಯು ನೆಲದ ಮೇಲೆ ಅಂಗಾತ ಬೀಳುತ್ತದೆ ಮತ್ತು ಕರಡಿಯು ಅದರ ಮೃದುವಾದ ಕೆಳಹೊಟ್ಟೆಯನ್ನು ತೀವ್ರವಾಗಿ ಗೊಯಗೊಳಿಸುತ್ತದೆ. ಅಮೇರಿಕನ್ ಕಪ್ಪು ಕರಡಿ
೧೨ ದೈತ್ಯಾಕಾರದ ಸ್ಕ್ವಿಡ್ ಮತ್ತು ಸ್ಪರ್ಮ್ ತಿಮಿಂಗಿಲ ದಕ್ಷಿಣ ಸಾಗರ ಎರಡೂ ಪ್ರಾಣಿಗಳು ಪರಸ್ಪರ ವಾಸನೆಯನ್ನು ಗ್ರಹಿಸುತ್ತವೆ, ಸ್ಕ್ವಿಡ್ ತಿಮಿಂಗಿಲವನ್ನು ನೋಡುತ್ತದೆ. ತಿಮಿಂಗಿಲದ ಪ್ರತಿಧ್ವನಿ ಸ್ಥಾನ ನಿರ್ದೇಶನವು ಸ್ಕ್ವಿಡ್ ಬಗ್ಗೆ ತಿಳಿಸುತ್ತದೆ. ತಿಮಿಂಗಿಲವು ಸ್ಕ್ವಿಡ್ಅನ್ನು ತಿನ್ನಲು ಪ್ರಯತ್ನಿಸುತ್ತದೆ. ಆದರೆ ಅದರ ಬಾಯಿಯ ಹತ್ತಿರಕ್ಕೆ ಬರುವುದಕ್ಕಿಂತ ಸ್ವಲ್ಪ ಮೊದಲು ಸ್ಕ್ವಿಡ್ ದಾಳಿ ಮಾಡುತ್ತದೆ. ನೀರಿನ ಮೇಲ್ಮೈಗೆ ಬಂದು ಸ್ಕ್ವಿಡ್ ಕೊಡವಿಕೊಳ್ಳುತ್ತದೆ, ಅದಕ್ಕಿಂತ ಮೊದಲು ಅದು ತಿಮಿಂಗಿಲವನ್ನು ಗಾಯಗೊಳಿಸುತ್ತದೆ. ಈ ಬಾರಿ ಯಾವುದೇ ಕಾದಾಟ ನಡೆಯುವುದಿಲ್ಲ: ಸ್ಕ್ವಿಡ್ ಜೀವಂತವಾಗಿ ತಿನ್ನಲ್ಪಡುತ್ತದೆ. ಸ್ಪರ್ಮ್ ತಿಮಿಂಗಿಲ
೧೩ ಬೂದು ಬಣ್ಣದ ತೋಳ ಮತ್ತು ಹೆಬ್ಬೆಕ್ಕು ಉತ್ತರ ಅಮೇರಿಕಾ ಬೂದು ಬಣ್ಣದ ತೋಳವು ಆಹಾರಕ್ಕಾಗಿ ಹುಡುಕುತ್ತಿರುತ್ತದೆ. ಆಗ ಅದು ಬೇಟೆಯಾಡಿದ ಪ್ರಾಣಿಯನ್ನು ಹಿಡಿದುಕೊಂಡಿರುವ ಹೆಬ್ಬೆಕ್ಕನ್ನು ನೋಡುತ್ತದೆ. ಹೆಬ್ಬೆಕ್ಕು ತೋಳಕ್ಕೆ ದೂರ ಉಳಿಯುವಂತೆ ಎಚ್ಚರಿಸಲು ಪ್ರಯತ್ನಿಸಿ, ಅದರ ಮೇಲೆ ದಾಳಿ ಮಾಡುತ್ತದೆ. ಆದರೆ ತೋಳವು ಅದರ ಪಕ್ಕೆಯನ್ನು ಕಚ್ಚುತ್ತದೆ. ಹೆಬ್ಬೆಕ್ಕು ತೋಳವನ್ನು ಗಾಯಗೊಳಿಸುತ್ತದೆ, ಆದರೆ ತೋಳವು ಅದರ ಪಕ್ಕೆಯನ್ನು ಹರಿದುಹಾಕುತ್ತದೆ. ಎರಡೂ ಪ್ರಾಣಿಗಳು ಹಿಂದಕ್ಕೆ ಸರಿಯುತ್ತವೆ. ಹೆಬ್ಬೆಕ್ಕು ಮತ್ತೊಮ್ಮೆ ತೋಳದ ಮೇಲೆ ದಾಳಿ ಮಾಡುತ್ತದೆ ಮತ್ತು ಅದರ ಮುಖವನ್ನು ಪರಚುತ್ತದೆ. ಆದರೆ ತೋಳವು ಹೆಬ್ಬೆಕ್ಕಿನ ಪಂಜನ್ನು ಛಿದ್ರಗೊಳಿಸುತ್ತದೆ. ನಂತರ ತೋಳವು ಹೆಬ್ಬೆಕ್ಕಿನೆಡೆಗೆ ಮುನ್ನುಗ್ಗುತ್ತದೆ ಮತ್ತು ಅದನ್ನು ಓಡಿಸಿಕೊಂಡು ಹೋಗುತ್ತದೆ. ನಂತರ ತೋಳವು ಹೆಬ್ಬೆಕ್ಕಿನ ಕತ್ತನ್ನು ಕಚ್ಚಿ, ಕೊಲ್ಲುತ್ತದೆ. ಅನಂತರ ಅದು ಹೆಬ್ಬೆಕ್ಕು ಬೇಟೆಯಾಡಿ ಕೊಂದ ಪ್ರಾಣಿಯನ್ನು ತಿನ್ನುತ್ತದೆ. ಬೂದು ಬಣ್ಣದ ತೋಳ

ಸಂಪೂರ್ಣ ದಾಖಲೆ ಬದಲಾಯಿಸಿ

ಜೀವಿಗಳ ಆಧಾರದಲ್ಲಿ ಬದಲಾಯಿಸಿ

  • ಮೊಸಳೆಗಳು : ೧ ಗೆಲುವು (ನೈಲ್ ಮೊಸಳೆ) / ೨ ಸೋಲುಗಳು (ಉಪ್ಪುನೀರಿನ ಮೊಸಳೆ ಮತ್ತು ಅಮೇರಿಕನ್ ಆಲಿಗೇಟರ್)
  • ದೊಡ್ಡ ಬೆಕ್ಕುಗಳು : ೧ ಗೆಲುವು (ಏಷ್ಯಾದ ಸಿಂಹ) / ೭ ಸೋಲುಗಳು (ಸೈಬೀರಿಯನ್ ಹುಲಿ, ಆಫ್ರಿಕನ್ ಸಿಂಹ, ಜಾಗ್ವರ್, ಚಿರತೆ, ಬೆಂಗಾಳಿ ಹುಲಿ, ಹೆಬ್ಬೆಕ್ಕು, ಕೂಗರ್)
  • ಶಾರ್ಕ್‌ಗಳು : ೧ ಗೆಲುವು (ಬಿಳಿ ಶಾರ್ಕ್) / ೧ ಸೋಲು (ಬುಲ್ ಶಾರ್ಕ್)
  • ಕರಡಿಗಳು : ೨ ಗೆಲುವುಗಳು (ಕಪ್ಪು ಕರಡಿ ಮತ್ತು '

ಕಂದು ಕರಡಿ) / ೧ ಸೋಲು (ದ್ರುವ ಪ್ರದೇಶದ ಕರಡಿ)'

  • ಕ್ಯಾನೈನ್‌ಗಳು : ೨ ಗೆಲುವುಗಳು (ಬೂದು ಬಣ್ಣದ ತೋಳ, ತೋಳಗಳ ಹಿಂಡು) / ೦ ಸೋಲು

ಗಾತ್ರದ ಆಧಾರದಲ್ಲಿ ಬದಲಾಯಿಸಿ

  • ಸಣ್ಣ ಪ್ರಾಣಿಗಳು ಎರಡು ಬಾರಿ ಗೆಲ್ಲುತ್ತವೆ: ಕಪ್ಪು ಕರಡಿಯು ಆಲಿಗೇಟರ್ಅನ್ನು ಸೋಲಿಸುತ್ತದೆ, ಸಿಂಹವು ಹುಲಿಯನ್ನು ಸೋಲಿಸುತ್ತದೆ.

DVDಗಳು ಬದಲಾಯಿಸಿ

ಆನಿಮಲ್ ಫೇಸ್-ಆಫ್‌ನ ಪ್ರತಿಯೊಂದು ಎಪಿಸೋಡ್ ಈಗ DVD ಯಲ್ಲಿ ಲಭ್ಯವಾಗುತ್ತವೆ.

ಇವನ್ನೂ ಗಮನಿಸಿ‌ ಬದಲಾಯಿಸಿ

  • ಜುರಾಸಿಕ್ ಫೈಟ್ ಕ್ಲಬ್
  • ಟೈಗರ್ ವರ್ಸರ್ ಲಯನ್
  • ಡೆಡ್ಲೀಸ್ಟ್ ವಾರಿಯರ್

ಉಲ್ಲೇಖಗಳು‌ ಬದಲಾಯಿಸಿ

  1. John F. Bonfatti (March 27, 2004), "Survival of the Fittest", The Buffalo News