ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯ
ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಇಂಜಿನಿಯರಿಂಗ್ ಕಾಲೇಜು . ಇದನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠವು 1980 ರಲ್ಲಿ ಸ್ಥಾಪಿಸಿತು. ಆರಂಭದಲ್ಲಿ ಈ ಕಾಲೇಜು ಮೈಸೂರು ವಿಶ್ವವಿದ್ಯಾಲಯದ ಅಡಿಯಲ್ಲಿತ್ತು . ನ೦ತರ ೧೯೯೧ರಲ್ಲಿ ಕುವೆಂಪು ವಿಶ್ವವಿದ್ಯಾಲಯ ಅಡಿಯಲ್ಲಿತ್ತು. ಪ್ರಸ್ತುತ ಇದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುತ್ತದೆ . ಡಾ .ಸಿ ಕೆ ಸುಬ್ಬರಾಯ ಈಗಿನ ಪ್ರಾಂಶುಪಾಲರು .
ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯ | |
---|---|
ಧ್ಯೇಯ | ಜ್ಞಾನವೇ ಶಕ್ತಿ |
ಸ್ಥಾಪನೆ | 1980 |
ಪ್ರಕಾರ | ಖಾಸಗಿ |
ಸ್ಥಳ | ಚಿಕ್ಕಮಗಳೂರು, ಕರ್ನಾಟಕ, ಭಾರತ 13°20′28.9″N 75°47′48.4″E / 13.341361°N 75.796778°E |
ಆವರಣ | 57 acres (0.2 km2) |
ಅಂತರಜಾಲ ತಾಣ | aitckm.in |
ದ್ಯೇಯ
ಬದಲಾಯಿಸಿತಂತ್ರಜ್ಞಾನದ ಮೂಲಕ ಸಮೃದ್ಧಿ
ಪ್ರಖ್ಯಾತ ಹಳೆಯ ವಿದ್ಯಾರ್ಥಿಗಳು
ಬದಲಾಯಿಸಿಇದು ಎಂಜಿನಿಯರಿಂಗ್ ಮತ್ತು ಇತರ ಕ್ಷೇತ್ರಗಳಲ್ಲಿ ಹೆಸರು ಮಾಡಿದಂತಹ ಹಳೆಯ ವಿದ್ಯಾರ್ಥಿಗಳ ಪಟ್ಟಿಯಾಗಿದೆ:
- ಅಶ್ವಿನ್ ಕಾರ್ತಿಕ್ [೧] Archived 2018-02-27 ವೇಬ್ಯಾಕ್ ಮೆಷಿನ್ ನಲ್ಲಿ. [೨] Archived 2016-08-14 ವೇಬ್ಯಾಕ್ ಮೆಷಿನ್ ನಲ್ಲಿ. , ಹುಟ್ಟಿನಿಂದಲೇ ಸೆರೆಬ್ರಲ್ ಪಾಲ್ಸಿ ಇಂದ ಬಳಲುತ್ತಿದ್ದ ಇವರು , ಪಾರ್ಶ್ವವಾಯುವಿನಿ೦ದ ಅಂಗಾಂಗಗಳ ಸ್ವಾಧೀನ ಕಳೆದುಕೊಂಡ ಇವರು , ಕಂಪ್ಯೂಟರ್ ಸೈನ್ಸ್ ನಲ್ಲಿಎಂಜಿನಿಯರಿಂಗ್ ಪದವಿ ಪಡೆದ ಭಾರತದ ಮೊದಲ ವಿದ್ಯಾರ್ಥಿ. ಅವರ ಸ್ನೇಹಿತ, ಭರತ್, ಅಶ್ವಿನ್ ಅವರ ವೃತ್ತಿಜೀವನವನ್ನು ರೂಪಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸಿದ್ದರು.