ಆಗಸ್ಟ್ ಕ್ರಾಗ್ ೧೮೭೪-೧೯೪೯. ಡೆನ್ಮಾರ್ಕಿನ ಅಂಗಕ್ರಿಯಾ ವಿಜ್ಞಾನಿ. ರಕ್ತಪರಿಚಲನ ಮಂಡಲದಲ್ಲಿ ಅತಿಸೂಕ್ಷ್ಮ ರಕ್ತನಾಳಗಳ ಪಾತ್ರದ ಅರಿವನ್ನು ಪ್ರಯೋಗಗಳ ಮೂಲಕ ತೋರಿಸಿಕೊಟ್ಟವ.

ಆಗಸ್ಟ್ ಕ್ರಾಗ್
ಆಗಸ್ಟ್ ಕ್ರಾಗ್
ಜನನ(೧೮೭೪-೧೧-೧೫)೧೫ ನವೆಂಬರ್ ೧೮೭೪
Grenå
ಮರಣSeptember 13, 1949(1949-09-13) (aged 74)
ಕೋಪನ್ ಹೆಗನ್
ರಾಷ್ಟ್ರೀಯತೆಡ್ಯಾನಿಶ್
ಕಾರ್ಯಕ್ಷೇತ್ರZoophysiology
ಸಂಸ್ಥೆಗಳುಯುನಿವರ್ಸಿಟಿ ಆಫ್ ಕೋಪನ್ಹೇಗನ್
ಪ್ರಸಿದ್ಧಿಗೆ ಕಾರಣರೋಘ್ ಮೂಲತತ್ವ
ಪ್ರಭಾವಗಳುChristian Bohr, A. Bornstein
ಪ್ರಭಾವಿತರುJoseph Barcroft, Torkel Weis-Fogh
ಗಮನಾರ್ಹ ಪ್ರಶಸ್ತಿಗಳುಶರೀರವಿಜ್ಞಾನ ಅಥವಾ ಔಷಧ ವೈದ್ಯಶಾಸ್ತ್ರದಲ್ಲಿ ಗಮನಾರ್ಹ ಪ್ರಶಸ್ತಿಗಳು ನೊಬೆಲ್ ಪ್ರಶಸ್ತಿ

ಬದುಕು ಮತ್ತು ಸಂಶೋಧನೆ

ಬದಲಾಯಿಸಿ

ಗ್ರಿನಾದಲ್ಲಿ ಜನನ. ಕಪ್ಪೆ ಗಳ ಉಸಿರಾಟದ ಮೇಲೆ ಪ್ರೌಢಪ್ರಬಂಧ ಬರೆದು ಡಾಕ್ಟೊರೇಟ್ ಪದವಿ ಪಡೆದ (೧೯೦೩). ಕೋಪೆನ್‍ಹೇಗನ್ ವಿಶ್ವವಿದ್ಯಾಲಯದಲ್ಲಿ ಪ್ರಾಣಿ ಅಂಗಕ್ರಿಯಾಶಾಸ್ತ್ರದ ಪ್ರಾಧ್ಯಾಪಕನಾಗಿದ್ದ. ಉಸಿರಾಡುವಾಗ ಪುಪ್ಪುಸಗಳಲ್ಲಿ ಆಗುವ ಅನಿಲದ ವಿನಿಮಯವನ್ನು ಕುರಿತು ಪ್ರಯೋಗಗಳನ್ನು ನಡೆಸಿ ವಿಯೆನ್ನದ ವಿಜ್ಞಾನ ಅಕೆಡಮಿಯಿಂದ ಬಹುಮಾನ ಪಡೆದ (೧೯೦೬). ಪುಪ್ಪುಸಗಳು ಆಮ್ಲಜನಕವನ್ನು ಹೀರಿ ಇಂಗಾಲದ ಡೈ ಆಕ್ಸೈಡನ್ನು ಬಿಡುವುವೇ ಹೊರತು ಬೇರೆ ಏನನ್ನೂ ಸುರಿಸುವುದಿಲ್ಲವೆಂದೂ, ರಕ್ತ ಕ್ಕೆ ಆಮ್ಲಜನಕ ಸೇರಲು ಕೇವಲ ಭೌತಪಸರಿಕೆ ಮಾತ್ರ ಕಾರಣವೆಂದೂ ತೋರಿಸಿಕೊಟ್ಟ. ಒಬ್ಬನ ದುಡಿತದ ಕೆಲಸವನ್ನು ಅಳೆವ ಬೈಸಿಕಲ್, ಉಸಿರಾಟವನ್ನು ಅಳೆವ ಶ್ವಾಸಮಾಪಿ, ರಕ್ತಪ್ರಮಾಣಮಾಪಿ ಇವನ್ನೆಲ್ಲ ತಯಾರಿಸಿದ. ಪ್ರಪಂಚದ ಎಲ್ಲೆಡೆಗಳಿಂದಲೂ ವಿಜ್ಞಾನಿಗಳು ಬಂದು ಇವನೊಂದಿಗೆ ಕೆಲಸ ಮಾಡಿದರು. ಇದಕ್ಕಾಗಿ ರಾಕ್‍ಫೆಲ್ಲರ್ ಪ್ರತಿಷ್ಠಾನದ ವತಿಯಿಂದ ಇವನಿಗಾಗಿ ಒಂದು ಪ್ರಾಣಿ ಅಂಗಕ್ರಿಯಾಶಾಸ್ತ್ರ ಇಲಾಖೆ ಊರ್ಜಿತವಾಯಿತು. ಸ್ನಾಯುಗಳಿಗೆ ಆಮ್ಲಜನಕ ಒದಗಿಸಲು ರಕ್ತ ಸಾಗುವುದನ್ನು ರಕ್ತಲೋಮನಾಳಗಳು ಹೇಗೆ ಹತೋಟಿಗೊಳಿಸುವುವೆಂದೂ ಸ್ನಾಯು ಚಟುವಟಿಕೆಗೆ ತಕ್ಕಷ್ಟು ಲೋಮನಾಳಗಳೂ ತೆರೆದುಕೊಂಡು ರಕ್ತ ಹರಿಸುತ್ತವೆಂದೂ ತೋರಿಸಿಕೊಟ್ಟುದಕ್ಕಾಗಿ ನೊಬೆಲ್ ಬಹುಮಾನ ದೊರೆಯಿತು (೧೯೨೦).[]

 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

ಉಲ್ಲೇಖ

ಬದಲಾಯಿಸಿ