ಆಕರ ಗ್ರಂಥ
ಆಕರ ಗ್ರಂಥ[೧] ಎಂದರೆ ಯಾವುದರಿಂದ ಮಾಹಿತಿ ಅಥವಾ ವಿಚಾರಗಳನ್ನು ಪಡೆಯಲಾಗುತ್ತದೊ ಆ ಒಂದು ಪಠ್ಯ (ಕೆಲವೊಮ್ಮೆ ವಾಚಿಕ).
ಇತಿಹಾಸ ಲೇಖನದಲ್ಲಿ, ಸಾಮಾನ್ಯವಾಗಿ ಮೂರು ಬಗೆಯ ಆಕರ ಗ್ರಂಥಗಳ ನಡುವೆ ವ್ಯತ್ಯಾಸ ಮಾಡಲಾಗುತ್ತದೆ:
ಪ್ರಾಥಮಿಕ ಮೂಲಗಳು ಘಟನೆಯ ವೇಳೆಯಲ್ಲಿ ಉಪಸ್ಥಿತರಿದ್ದ ಯಾರಿಂದಲೋ ಮಾಡಲ್ಪಟ್ಟ ಇತಿಹಾಸದ ನೇರವಾದ ಬರೆಯಲ್ಪಟ್ಟ ಸಾಕ್ಷ್ಯಾಧಾರಗಳು. ಇವನ್ನು ಅಧ್ಯಯನದಲ್ಲಿರುವ ಮಾಹಿತಿ ಅಥವಾ ವಿಚಾರದ ಮೂಲಕ್ಕೆ ಅತಿ ನಿಕಟವಾಗಿರುವ ಆಕರಗಳು ಎಂದು ವರ್ಣಿಸಲಾಗಿದೆ. ಈ ಬಗೆಯ ಆಕರಗಳು ಅಧ್ಯಯನದ ವಸ್ತುವಿನ ಬಗ್ಗೆ ಸಂಶೋಧಕರಿಗೆ ನೇರ, ಮಧ್ಯಸ್ತಿಕೆಯಿಲ್ಲದ ಮಾಹಿತಿಯನ್ನು ಒದಗಿಸುತ್ತವೆ ಎಂದು ಹೇಳಲಾಗಿದೆ. ಪ್ರಾಥಮಿಕ ಮೂಲಗಳು ಸಾಮಾನ್ಯವಾಗಿ ಘಟನೆಯಲ್ಲಿ ಭಾಗಿಯಾದ, ಅದನ್ನು ನೋಡಿದ ಅಥವಾ ಅದು ನಡೆದಾಗ ಜೀವಿಸಿದ್ದ ಯಾರಿಂದಾದರೂ ದಾಖಲಿಸಲಾದ ಮೂಲಗಳು. ಸಾಮಾನ್ಯವಾಗಿ ಪರಿಗಣನೆಯಲ್ಲಿರುವ ವಸ್ತುವಿಗೆ ಸಂಬಂಧಿಸಿದ ಅಧಿಕೃತ ಮತ್ತು ಮೂಲಭೂತ ದಸ್ತಾವೇಜುಗಳೂ ಇರುತ್ತವೆ. ಇದರಲ್ಲಿ ಪ್ರಕಟಿತ ಮೂಲ ವರದಿಗಳು, ಪ್ರಕಟಿತ ಮೂಲ ಕೃತಿಗಳು, ಅಥವಾ ಪ್ರಕಟಿತ ಮೂಲ ಸಂಶೋಧನೆ ಸೇರಿವೆ. ಅವು ಹಿಂದೆ ಬೇರೆ ಎಲ್ಲೂ ಪ್ರಕಟಿತವಾಗಿರದ ಮೂಲ ಸಂಶೋಧನೆ ಅಥವಾ ಹೊಸ ಮಾಹಿತಿಯನ್ನು ಹೊಂದಿರಬಹುದು. ಇವನ್ನು, ಹಲವುವೇಳೆ ಪ್ರಾಥಮಿಕ ಮೂಲಗಳನ್ನು ಉಲ್ಲೇಖಿಸುವ, ಅವುಗಳ ಮೇಲೆ ಟಿಪ್ಪಣಿ ಬರೆಯುವ, ಅಥವಾ ಅವುಗಳ ಮೇಲೆ ವಿಸ್ತರಿಸುವ ಮಾಧ್ಯಮಿಕ ಮೂಲಗಳಿಂದ ವ್ಯತ್ಯಾಸ ಮಾಡಲಾಗುತ್ತದೆ. ಆದರೆ, ಪ್ರಾಥಮಿಕ ಮತ್ತು ಮಾಧ್ಯಮಿಕ, ಇವು ಸಾಪೇಕ್ಷ ಪದಗಳಾಗಿವೆ, ಮತ್ತು ಯಾವುದೇ ನಿರ್ದಿಷ್ಟ ಮೂಲವನ್ನು, ಅದು ಹೇಗೆ ಬಳಸಲ್ಪಡುತ್ತದೆ ಎಂಬುದನ್ನು ಆಧರಿಸಿ, ಪ್ರಾಥಮಿಕ ಅಥವಾ ಮಾಧ್ಯಮಿಕ ಎಂದು ವರ್ಗೀಕರಿಸಬಹುದು. ಭೌತಿಕ ವಸ್ತುಗಳು ಪ್ರಾಥಮಿಕ ಮೂಲಗಳಾಗಬಲ್ಲವು.
ಮಾಧ್ಯಮಿಕ ಮೂಲಗಳು ಪ್ರಾಥಮಿಕ ಮೂಲಗಳಿಂದ ಪಡೆದ ಸಾಕ್ಷ್ಯಾಧಾರವನ್ನು ಆಧರಿಸಿದ ಇತಿಹಾಸದ ಲಿಖಿತ ವರದಿಗಳಾಗಿರುತ್ತವೆ. ಇವು ಸಾಮಾನ್ಯವಾಗಿ ಪ್ರಾಥಮಿಕ ಮೂಲಗಳನ್ನು ವಿಶ್ಲೇಷಿಸುವ, ಸಮೀಕರಿಸುವ, ಮೌಲ್ಯಮಾಪಿಸುವ, ಅರ್ಥೈಸುವ, ಮತ್ತು/ಅಥವಾ ಸಂಶ್ಲೇಷಿಸುವ ವರದಿಗಳು, ಕೃತಿಗಳು ಅಥವಾ ಸಂಶೋಧನೆಯಾಗಿರುವ ಮೂಲಗಳಾಗಿರುತ್ತವೆ. ಇವು ಅಷ್ಟು ವಿಶ್ವಾಸಾರ್ಹವಾಗಿರುವುದಿಲ್ಲ ಮತ್ತು ಪರಿಗಣನೆಯಲ್ಲಿರುವ ವಿಷಯಕ್ಕೆ ಸಂಬಂಧಿಸಿದ ಪೂರಕ ದಸ್ತಾವೇಜುಗಳಾಗಿರುತ್ತವೆ.
ತೃತೀಯಕ ಮೂಲಗಳು ಪ್ರಾಥಮಿಕ ಮತ್ತು ಮಾಧ್ಯಮಿಕ ಮೂಲಗಳನ್ನು ಆಧರಿಸಿದ ಸಂಕಲನಗಳಾಗಿರುತ್ತವೆ. ಅವು ಪರಿಗಣನೆಯಲ್ಲಿರುವ ಒಂದು ನಿರ್ದಿಷ್ಟ ವಿಷಯದ ಸಾಮಾನ್ಯೀಕೃತ ಸಂಶೋಧನೆಯನ್ನು ಹೊಂದಿರುತ್ತವೆ. ಉದಾ. ವಿಶ್ವಕೋಶಗಳು, ಪಠ್ಯಪುಸ್ತಕಗಳು.
ಉಲ್ಲೇಖಗಳು
ಬದಲಾಯಿಸಿ- ↑ User Education Services. "Primary, Secondary and Tertiary Sources guide". University of Maryland Libraries. Archived from the original on 26 ಜುಲೈ 2013. Retrieved 12 July 2013.
{{cite web}}
:|last=
has generic name (help)