ಆಂಥ್ರಸೀನ್ ಒಂದು ಸಾವಯವ ಸಂಯುಕ್ತ. ಇದರ ಅಣು ಸೂತ್ರ C14H10. ಇದು ಒಂದು ಆರೋಮ್ಯಾಟಿಕ್ ಹೈಡ್ರೊಕಾರ್ಬನ್ನು. ಇದು ಕಲ್ಲಿದ್ದಲು ಟಾರಿನಲ್ಲಿ ದೊರೆಯುತ್ತದೆ.

ಆಂಥ್ರಸೀನ್‍ನ ರಚನಾಸೂತ್ರ
ಆಂಥ್ರಸೀನ್

ತಯಾರಿಕೆ

ಬದಲಾಯಿಸಿ

ಟಾರನ್ನು ಆಂಶಿಕವಾಗಿ ಬಟ್ಟಿ ಇಳಿಸುವಾಗ ೩೦೦ ಸೆಂ.ಗ್ರೇ.ಯಿಂದ ೪೦೦ ಸೆಂ.ಗ್ರೇ. ವರೆಗಿನ ಅವಧಿಯಲ್ಲಿ ಶೇಖರಿಸುವ ಭಾಗದಿಂದ ಇದನ್ನು ತೆಗೆಯುತ್ತಾರೆ.

ಗುಣಗಳು

ಬದಲಾಯಿಸಿ

ಆಂಥ್ರಸೀನ್ ವರ್ಣರಹಿತ ಘನಪದಾರ್ಥ; ಸಾಮಾನ್ಯ ಬೆಳಕನ್ನು ಹೀರಿ ನೀಲಿ ಬಣ್ಣದ ಪ್ರತಿದೀಪ್ತಿಯನ್ನು ಹೊರಸೂಸುತ್ತದೆ.[] ಅಶುದ್ಧತೆಯ ಕಾರಣ ಸಾಮಾನ್ಯವಾಗಿ ಇದಕ್ಕೆ ನಸು ಹಳದಿ ಬಣ್ಣವಿರುವುದುಂಟು. ಇದರ ದ್ರವಿಸುವ ಬಿಂದು ೨೧೬ ಸೆಂ.ಗ್ರೇ. ನೀರಿನಲ್ಲಿ ಅದ್ರಾವ್ಯ; ಆಲ್ಕೊಹಾಲ್ ಮತ್ತು ಈಥರ್‌ಗಳಲ್ಲಿ ಸ್ವಲ್ಪಮಟ್ಟಿಗೆ ವಿಲೀನವಾಗುತ್ತದೆ; ಬಿಸಿಯಾದ ಬೆಂಜೀನಿನಲ್ಲಿ ದ್ರಾವ್ಯ. ಉತ್ಕರ್ಷಣಕಾರಿಗಳೊಂದಿಗೆ (ಉದಾ: ಸೋಡಿಯಂ ಡೈ ಕ್ರೊಮೇಟ್ ಮತ್ತು ಸಲ್ಫೂರಿಕ್ ಆಮ್ಲಗಳ ಮಿಶ್ರಣ) ವರ್ತಿಸಿದಾಗ ಆಂಥ್ರಕ್ವಿನೋನ್ ಆಗುತ್ತದೆ.

 

ಕ್ಲೋರಿನ್ ಮತ್ತು ಬ್ರೊಮಿನ್‌ಗಳು ಕಡಿಮೆ ಉಷ್ಣತೆಯಲ್ಲಿ (2500 ಸೆಂ.ಗ್ರೇ.ಕೆಳಗೆ) ಉತ್ಕರ್ಷಣಕಾರಿಗಳಾಗಿ ವರ್ತಿಸುತ್ತವೆ; ಹೆಚ್ಚಿನ ಉಷ್ಣತೆಯಲ್ಲಿ 9.10 ಡೈಕ್ಲೋರೊ ಅಥವಾ 9.10  ಡೈ ಬ್ರೋಮೋ ಆಂಥ್ರಸೀನುಗಳನ್ನೂ ಕೊಡುತ್ತದೆ. ಸಲ್ಫ್ಯೂರಿಕ್ ಆಮ್ಲ ವಿವಿಧ ಸಲ್ಫೋನಿಕ್ ಆಮ್ಲಗಳನ್ನೂ ನೈಟ್ರಿಕಾಮ್ಲ ವಿವಿಧ ನೈಟ್ರೋ ಆಂಥ್ರಸೀನುಗಳನ್ನೂ ಕೊಡುತ್ತದೆ. ಪಿಕ್ರಿಕ್ ಆಮ್ಲದೊಡನೆ ವರ್ತಿಸಿದಾಗ ಆಂಥ್ರಸೀನ್ ಪಿಕ್ರೇಟಿನ ಕೆಂಪು ಹರಳುಗಳು ಉತ್ಪತ್ತಿಯಾಗುತ್ತವೆ. ಈ ಕ್ರಿಯೆಯನ್ನು, ಆಂಥ್ರಸೀನನ್ನು ಗುರುತಿಸಲು ಉಪಯೋಗಿಸುವುದುಂಟು. ಆಂಥ್ರಸೀನ್‌ನ ಜನ್ಯಪದಾರ್ಥಗಳಲ್ಲಿ, ಮುಖ್ಯವಾಗಿ ಆಂಥ್ರಕ್ವಿನೋನ್ ವರ್ಣದ್ರವ್ಯಗಳ ತಯಾರಿಕೆಯಲ್ಲಿ ಉಪಯೋಗ ಪಡೆದಿದೆ.[]

ಸಲ್ಫೂರಿಕ್ ಆಮ್ಲ ಮತ್ತು ನೈಟ್ರಿಕ್ ಆಮ್ಲ ಆಂಥ್ರಸೀನ್‌ನೊಂದಿಗೆ ವರ್ತಿಸಿದಂತೆಯೇ ಹ್ಯಾಲೋಜನ್‌ಗಳೂ ವರ್ತಿಸುತ್ತವೆ.

ಉಲ್ಲೇಖಗಳು

ಬದಲಾಯಿಸಿ
  1. Lindsey, Jonathan; et al. "Anthracene". PhotochemCAD. Retrieved 20 February 2014.
  2. Collin, Gerd; Höke, Hartmut and Talbiersky, Jörg (2006) "Anthracene" in Ullmann's Encyclopedia of Industrial Chemistry, Wiley-VCH, Weinheim. doi:10.1002/14356007.a02_343.pub2

ಹೊರಗಿನ ಕೊಂಡಿಗಳು

ಬದಲಾಯಿಸಿ