ಆಂಡಲೂಸೈಟ್ ಒಂದು ಖನಿಜ. ಇದರ ಹರಳುಗಳನ್ನು ಮೊಟ್ಟಮೊದಲಿಗೆ ಸ್ಪೇನ್ ದೇಶದ ಆಂಡಲೂಸಿಯ ಎಂಬಲ್ಲಿ ಗುರುತಿಸಿದ ಕಾರಣ ಖನಿಜಕ್ಕೆ ಆಂಡಲೂಸೈಟ್ ಎಂದು ಹೆಸರಿಸಲಾಯಿತು.[][]

ಆಂಡಲೂಸೈಟ್
Andalusite
General
ವರ್ಗNesosilicates
ರಾಸಾಯನಿಕ ಸೂತ್ರAl2SiO5
ಸ್ಟ್ರೋಂಝ್ ವರ್ಗೀಕರಣ09.AF.10
ಸ್ಫಟಿಕ ಸಮರೂಪತೆ2/m 2/m 2/m - Dipyramidal
ಏಕಕೋಶa = 7.7980 Å b = 7.9031 Å c = 5.5566 Å; Z = 4
Identification
ಬಣ್ಣPink, violet, yellow, green, white, gray; in thin section, colorless to pink or green
ಸ್ಫಟಿಕ ಗುಣಲಕ್ಷಣAs euhedral crystals or columnar aggregates having nearly square cross sections; fibrous compact to massive
ಸ್ಫಟಿಕ ಪದ್ಧತಿorthorhombic
ಅವಳಿ ಸಂಯೋಜನೆOn {101}, rare
ಸೀಳುGood on {110}, poor on {100}
ಬಿರಿತuneven to subconchoidal
ಮೋಸ್ ಮಾಪಕ ಗಡಸುತನ6.5 - 7.5
ಹೊಳಪುVitreous
ಪುಡಿಗೆರೆಬಿಳಿ
ಪಾರದರ್ಶಕತೆTransparent to nearly opaque with inclusions
ವಿಶಿಷ್ಟ ಗುರುತ್ವ3.17 (+/- .04)
ದ್ಯುತಿ ಗುಣಗಳುdouble refractive, biaxial negative; chiastolite has anomalous aggregate reaction.[]
ವಕ್ರೀಕರಣ ಸೂಚಿnα = 1.629 - 1.640 nβ = 1.633 - 1.644 nγ = 1.638 - 1.650
ದ್ವಿವಕ್ರೀಭವನδ = 0.009 - 0.010
ಬಹುವರ್ಣಕತೆstrongly trichroic
ಶಂಕುದರ್ಶಕ ವ್ಯತಿಕರಣ ವಿನ್ಯಾಸ71 - 86°
ಚದರಿಕೆr < v strong
ನೇರಳಾತೀತ ಪ್ರತಿದೀಪ್ತಿnon-fluorescent
ಉಲ್ಲೇಖಗಳು[][][][]

ರಾಸಾಯನಿಕ ಲಕ್ಷಣಗಳು

ಬದಲಾಯಿಸಿ

ಇದು ಅರ್ಥೊರಾಂಬಿಕ್ ವರ್ಗದ ಹರಳುಗಳಾಗಿ ದೊರೆಯುತ್ತವೆ. ಬಹುಮಟ್ಟಿಗೆ ನೀಳಫಲಕಗಳಂತೆ ಅಥವಾ ಚಚ್ಚೌಕಾಕಾರದ ಹರಳುಗಳಾಗಿ ಶಿಲೆಗಳಲ್ಲಿ ಹುದುಗಿರುತ್ತದೆ. ಹಲವು ವೇಳೆ ಅಸ್ಪಷ್ಟಾಕೃತಿಯ ಕಣಗಳ ಮುದ್ದೆ ಇಲ್ಲವೆ ಸ್ತಂಭಾಕೃತಿಯನ್ನು ತೋರ್ಪಡಿಸುವುದುಂಟು. ಇದರ ರಾಸಾಯನಿಕ ಸಂಕೇತ Al2SiO5 ಹೆಸರು ಅಲ್ಯುಮಿನಿಯಂ ನೆಸೋಸಿಲಿಕೇಟ್, ಬಣ್ಣದಲ್ಲಿ ಬಿಳುಪು, ಗುಲಾಬಿ ಕೆಂಪು, ಬಾಡುಕೆಂಪು (ಫ್ಲೆಶ್‍ರೆಡ್) ಊದಾ, ಬೂದು, ಕೆಂಗಂದು ಮತ್ತು ಹಿಪ್ಪೆ ಹಸಿರು ಬಣ್ಣವಿಲ್ಲದ ಒರೆಗಾಜಿನ ಹೊಳಪು, ಪಾರದರ್ಶಕದಿಂದ ಅಪಾರದರ್ಶಕ; ಬಹುಮಟ್ಟಿಗೆ ಮಿತಪಾರದರ್ಶಕ. ಉತ್ತಮ ದರ್ಜೆಯ ಸೀಳುಗಳು, ಅಸಮ ಅಥವಾ ಅಸ್ಪಷ್ಟ ಬಿರಿತ. ಸುಲಭವಾಗಿ ಪುಡಿಪುಡಿಯಾಗುವ ಸ್ವಭಾವ. ಕಾಠಿಣ್ಯ 7.5. ಹೀಗಾಗಿ ಚಾಕುವಿನ ಅಲುಗಿನಿಂದಲೂ ಗೀರಲು ಸಾಧ್ಯವಿಲ್ಲ.14000, ಸೆಂ.ಗ್ರೇ. ಉಷ್ಣತೆಯಲ್ಲಿ ಈ ಖನಿಜ ಮಲ್ಲೈಟ್ ಮತ್ತು ಸಿಲಿಕ ಆಗಿ ಮಾರ್ಪಡುತ್ತದೆ.

ವಿಧಗಳು

ಬದಲಾಯಿಸಿ

ಆಂಡಲೂಸೈಟ್‍ನಲ್ಲಿ ಚಯಾಸ್ಟೊಲೈಟ್ ಅಥವಾ ಮ್ಯಾಕ್ಲ್ ಮತ್ತು ವಿರಿಡೈನ್ ಎಂಬ ವಿಧಗಳಿವೆ. ಚಯಾಸ್ಟೊಲೈಟ್ ಹರಳುಗಳು ಗಾತ್ರದಲ್ಲಿ ದೊಡ್ಡದಾಗಿದ್ದು ತಮ್ಮ ಒಳರಚನೆಯಲ್ಲಿ ಅಸಂಖ್ಯಾತ ಸೂಕ್ಷ್ಮ ಇಂಗಾಲದ ಕಣಗಳನ್ನು ಹೊಂದಿರುತ್ತವೆ. ಈ ಕಣಗಳು ವಿಶಿಷ್ಟವಾದ ರೀತಿಯಲ್ಲಿ ಹುದುಗಿರುವ ಕಾರಣ ಹರಳುಗಳನ್ನು ಅಡ್ಡ ಕತ್ತರಿಸಿದಾಗ ಮನೋಹರವಾದ ಆಕೃತಿಗಳನ್ನು ನೋಡಬಹುದು. ಈ ಖನಿಜ ಬಹುಮಟ್ಟಿಗೆ ಸಂಪರ್ಕ ರೂಪಾಂತರಕ್ಕೊಳಗಾದ ಜೇಡುಶಿಲೆಗಳಲ್ಲೂ ಅಲ್ಲದೆ ಬೃಹತ್ ರೂಪಾಂತರಕ್ಕೊಳಗಾದ ನೈಸ್ ಮತ್ತು ಮೈಕಾಪದರು ಶಿಲೆಗಳಲ್ಲೂ ಮತ್ತು ಅಗ್ನಿಶಿಲೆಯಾದ ಪೆಗ್ಮಟೈಟ್‍ನಲ್ಲೂ ದೊರೆಯುತ್ತದೆ.

ಉಪಯೋಗಗಳು

ಬದಲಾಯಿಸಿ

ಉತ್ತಮದರ್ಜೆಯ ಪಾರದರ್ಶಕ ಹರಳುಗಳನ್ನು ರತ್ನಾಭರಣಗಳ ತಯಾರಿಕೆಯಲ್ಲೂ[] ಮತ್ತು ಸಾಮಾನ್ಯ ಖನಿಜವನ್ನು ಸ್ಪಾರ್ಕ್‍ಪ್ಲಗ್‍ಗಳ ತಯಾರಿಕೆಯಲ್ಲೂ ಉಪಯೋಗಿಸುತ್ತಾರೆ.

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ Gemological Institute of America, GIA Gem Reference Guide 1995, ISBN 0-87311-019-6
  2. http://rruff.geo.arizona.edu/doclib/hom/andalusite.pdf Handbook of Mineralogy
  3. ೩.೦ ೩.೧ http://www.mindat.org/show.php?id=217&ld=1&pho= Mindat.org
  4. ೪.೦ ೪.೧ http://webmineral.com/data/Andalusite.shtml Webmineral data
  5. "International Colored Gem Association: Anadalusite". Archived from the original on 2006-07-17. Retrieved 2016-04-14.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: