ಅಸ್ಸೀರಿಯ
ಅಸ್ಸೀರಿಯವಿಶ್ವದ ಪುರಾತನ ನಾಗರಿಕತೆಗಳ ಕೇಂದ್ರಗಳಲ್ಲೊಂದಾಗಿದ್ದ ಸುಮೇರಿಯದ ಒಂದು ಭಾಗ. ಟೈಗ್ರಿಸ್ ನದಿಯ ದಡದ ಮೇಲಿದ್ದ ಅಷೂರ್ ಎಂಬ ನಗರ ಇದರ ಕೇಂದ್ರವಾಗಿತ್ತು. ಅಸ್ಸೀರಿಯನ್ನರು ದಮಾಸ್ಕಸ್, ಪ್ಯಾಲೆಸ್ಟೈನ್ ಮತ್ತು ಕೆಳಗಣ ಈಜಿಪ್ಟ್ ಗಳನ್ನು ವಶಪಡಿಸಿಕೊಂಡು, ತಮ್ಮ ರಾಜ್ಯವನ್ನು ವಿಸ್ತರಿಸಿದರು. ಸೆರಗಾನ್, ಸೆನ್ನಚಿರಬ್ ಮತ್ತು ಅಸುರ್‍ಬನಿಪಾಲ್ ಇಲ್ಲಿಯ ಮುಖ್ಯ ದೊರೆಗಳು. ಇವರು ವ್ಯಾಪಾರ ಮತ್ತು ವಾಣಿಜ್ಯಕ್ಕೆ ಪ್ರಾಧಾನ್ಯ ಕೊಟ್ಟಿದ್ದರು. ವಿಶ್ವದ ನಾನಾ ಭಾಗಗಳಿಂದ ಶಿಲ್ಪಿಗಳನ್ನು ಕರೆಸಿ ನಿನೇವ ಎಂಬಲ್ಲಿ ಸುಂದರವಾದ ಅರಮನೆಗಳನ್ನು ಕಟ್ಟಿಸಿದರು. ಚಾಲ್ಡಿಯನ್ನರು ಅಸ್ಸೀರಿಯನ್ನರನ್ನು ಸೋಲಿಸಿ ತಮ್ಮ ಪ್ರಭುತ್ವವನ್ನು ಪ್ರಾರಂಭಿಸಿದರು.
ಅಸ್ಸೀರಿಯ ಸಾಮ್ರಾಜ್ಯ | |||||
| |||||
ರಾಜಧಾನಿ | Aššur, Nineveh | ||||
ಭಾಷೆಗಳು | |||||
ಧರ್ಮ | Ancient Mesopotamian religion | ||||
ಸರ್ಕಾರ | Monarchy | ||||
King | |||||
- | c. 1975 BC | Puzur-Ashur I (first) | |||
- | 1073–1056 BC | Ashur-bel-kala (last) | |||
ಐತಿಹಾಸಿಕ ಯುಗ | Mesopotamia | ||||
- | Kikkiya overthrown | 2500 BC | |||
- | Decline of Assyria | 612 BC | |||
ಇಂದು ಇವುಗಳ ಭಾಗ | ಸಿರಿಯಾ ಇರಾಕ್ ಟರ್ಕಿ ಇರಾನ್ |
ಅತ್ಯಂತ ಪುರಾತನ ಮಾನವನ ಅವಶೇಷಗಳಾದ ಪೂರ್ವ ಶಿಲಾಯುಗದ ಮಧ್ಯಕಾಲಕ್ಕೆ ಸೇರಿದ ಅಷುಲಿಯನ್ - ಲೆವಲ್ಟಾಷಿಯನ್ ಹಂತದ ಕೈಗೊಡಲಿಗಳೂ ಚಕ್ಕೆ ಕಲ್ಲಿನ ಆಯುಧಗಳೂ ಬಾರ್ದಾಬಲ್ಕ ಎಂಬಲ್ಲಿ ದೊರಕಿವೆ. ಹಜûರ್‍ಮರ್ದ್ ಮತ್ತು ಷನಿದಾರ್ ಗುಹೆಗಳ ತಳಪದರಗಳಲ್ಲಿ ದೊರಕುವ ಚಕ್ಕೆ ಕಲ್ಲಿನ ಆಯುಧಗಳು ಮುಂದಿನ ಹಂತವಾದ ಲೆವಲ್ವಾಷಿಯೊ-ಮೌಸ್ವಿರಿಯನ್ ಕೈಗಾರಿಕೆಗಳನ್ನು ಹೋಲುತ್ತದೆ. ಹಜûರ್‍ಮರ್ದ್ ಅವಶೇಷಗಳು ಷನಿದಾರ್ ಅವಶೇಷಗಳಿಗಿಂತಲೂ ಹಳೆಯವೆಂದು ಅಲ್ಲಿ ದೊರಕಿದ ಕೈಗೊಡಲಿಗಳ ಆಧಾರದ ಮೇಲೆ ಹೇಳಲಾಗಿದೆ. [೧]
ಹಜûರ್‍ಮರ್ದ್ ಮತ್ತು ಷನಿದಾರ್ ನೆಲೆಗಳ ಮೇಲ್ಪದರಗಳಲ್ಲಿ ದೊರಕಿದ ಕಲ್ಲು ಚಕ್ಕೆಗಳ ಆಯುಧಗಳೂ ಸೂಕ್ಷ್ಮ ಶಿಲಾಯುಧಗಳೂ ಜûಜಿರ್ó ಮತ್ತು ಪಲೆಗಾವ್ರಾ ಎಂಬಲ್ಲೂ ದೊರಕುತ್ತವೆ. ಇವುಗಳ ಆಧಾರದ ಮೇಲೆ ಈ ಜನರು ಸಮಕಾಲೀನ ಯೂರೋಪಿನ ಜನರಿಗಿಂತಲೂ ಹೆಚ್ಚು ಮುಂದುವರೆದಿದ್ದರೆಂದು ಹೇಳಲಾಗಿದೆ. ಪ್ಯಾಲೆಸ್ಟೈನಿನ ಶಿಲಾಯುಗದ ಷನಿದಾರ್ ಗುಹೆಯ ಮೇಲ್ಪದರಗಳ ಸಂಸ್ಕøತಿ ಈ ಪ್ರದೇಶದ ಚಕ್ಕೆ ಕಲ್ಲಿನ ಆಯುಧಗಳ ಸಂಸ್ಕøತಿಗಳಲ್ಲಿ ಹಳೆಯದೆಂದು ಹೇಳಬಹುದು.
ಅವಶೇಷಗಳು
ಬದಲಾಯಿಸಿಮಧ್ಯಶಿಲಾಯುಗದ ಅವಶೇಷಗಳು ಷನಿದಾರ್ ಗುಹೆಯ ಮತ್ತು ಜûಜಿರ್óಯದ ಮೇಲ್ಪದರಗಳಲ್ಲಿ ದೊರಕಿವೆ. ಇವುಗಳಿಗೂ ಪ್ಯಾಲೆಸ್ಟೈನಿನ ನಟೂಫಿಯನ್ ಸಂಸ್ಕøತಿಗೂ ಹೋಲಿಕೆಗಳಿದ್ದು, ಈ ಹಂತ ಆಹಾರೋತ್ಪೊದನೆಯ ಕಡೆಗೆ ಒಯ್ಯುವ ಮೊದಲ ಹೆಜ್ಜೆಯಾಗಿತ್ತು.
ನವಶಿಲಾಯುಗದಲ್ಲಿ ಇಲ್ಲಿನ ಮತ್ತು ಸುತ್ತಲಿನ ನೆಲೆಗಳಲ್ಲಿ ಆದಿಮಾನವ ಆಹಾರೋತ್ಪಾದನೆಯ ದಿಕ್ಕಿನಲ್ಲಿ ಹೆಚ್ಚು ಪ್ರಗತಿ ಸಾಧಿಸಿದ. ಕರೀಂಷಾಹಿರ್, ಜಾವಿಷೆಮಿ, ಷನಿದಾರ್ ಮ್ಲಾಫಾತ್_ ಮುಂತಾದೆಡೆಗಳಲ್ಲಿ ಈ ಸಂಸ್ಕøತಿಯ ಅತ್ಯಂತ ಪ್ರಾಚೀನ ಅವಶೇಷಗಳು ದೊರಕಿವೆ. ಕÀರೀಂಷಾಹಿರ್‍ನ ಆಹಾರೋತ್ಪತ್ತಿಯ ಹಲವು ಮಾಹಿತಿಗಳೂ ಕಲ್ಲುಕಟ್ಟಡದ ಅವಶೇಷಗಳೂ ಕ್ರಿ. ಶ. 6000ಕ್ಕೂ ಮೊದಲಿನವು. ಜಾರ್ಮೋ ನೆಲೆಯಲ್ಲಿ ಪ್ರಗತಿದಾಯಕ ಸಂಸ್ಕøತಿಯ ಅವಶೇಷಗಳಾದ ಕಲ್ಲಿನ ಪಾತ್ರೆಗಳು, ಕಲ್ಲಿನ ಕುಡುಗೋಲು, ಸೂಕ್ಷ್ಮ ಶಿಲಾಯುಧಗಳು, ನಯಮಾಡಿದ ಕಲ್ಲಿನ ಆಯುಧಗಳು, ಕಟ್ಟಡಗಳ ಅವಶೇಷಗಳು, ಪಳಗಿಸಲ್ಪಟ್ಟ ಕುರಿ ಮೇಕೆ ಹಂದಿಗಳ ಮೂಳೆಗಳು ದೊರೆಯುತ್ತವೆ. ಈ ಸಂಸ್ಕøತಿಯ ಅಂತ್ಯಕಾಲದಲ್ಲಿ ಮಣ್ಣಿನ ಪಾತ್ರೆಗಳು ಬಳಕೆಗೆ ಬಂದವು. ಗೋದಿ ಮತ್ತು ಭಾರ್ಲಿಗಳನ್ನು ಬೆಳೆಸುತ್ತಿದ್ದರು.
ಪ್ರಗತಿಪರ ನವಶಿಲಾಯುಗದ ಅವಶೇಷಗಳು ಹಸ್ಸುನಾ, ನಿನೆವ್ಹೆ, ಅರ್ಪಾಚಿಯ, ಗಾವ್ರಾ ಎಂಬೆಡೆಗಳಲ್ಲಿ ದೊರಕುತ್ತವೆ. ವರ್ಣರಂಜಿತ ಮಣ್ಣಿನ ಪಾತ್ರೆಗಳು, ಕಲ್ಲಿನ ಕುಡುಗೋಲು ಮತ್ತಿತರ ವ್ಯವಸಾಯೋಪಕರಣಗಳು, ಹಸಿ ಇಟ್ಟಿಗೆ ಗೋಡೆಗಳ ಮನೆಗಳೂ, ಧಾನ್ಯ ಶೇಖರಣೆಗೆ ಭೂಮಿಯೊಳಗಿನ ಗುಂಡುಗಳು - ಈ ಸಂಸ್ಕøತಿಯ ಮುಖ್ಯ ಸಾಧನೆಗಳು. ಮಕ್ಕಳ ಶವಗಳನ್ನು ಮಣ್ಣಿನ ಜಾಡಿಗಳಲ್ಲೂ ವಯಸ್ಕರ ಶವಗಳನ್ನು ಗುಂಡಿಗಳಲ್ಲೂ ಹೂಳುತ್ತಿದ್ದರು. ಬೇಟೆಗಾರಿಕೆಯಿಂದ ಸುಧಾರಿತ ವ್ಯವಸಾಯ ಪದ್ಧತಿಗಳ ಕಡೆಗೆ ಪ್ರಗತಿ ಕಂಡುಬರುತ್ತದೆ. ನೇಯ್ಗೆ ಕೆಲಸದ ಪರಿಚಯವಿತ್ತು. ಮಡಿಕೆ ಕುಡಿಕೆಗಳು ಕೆಂಪು, ಕಂದು ಮತ್ತು ಕಪ್ಪು ಬಣ್ಣಗಳಿಂದ ಚಿತ್ರಿತವಾಗಿರುತ್ತಿದ್ದವು. ಈ ಸಂಸ್ಕøತಿಯ ಅವಶೇಷಗಳು ಅಸ್ಸೀರಿಯದ ಹಲವೆಡೆಗಳಲ್ಲಿ ಕಂಡುಬಂದಿದೆ. ಮುಂದಿನ ಹಂತವಾದ ತಾಮ್ರ ಶಿಲಾಯುಗದ ಹಲಾಫ್ ಸಂಸ್ಕøತಿಯಲ್ಲಿ ವರ್ಣಚಿತ್ರಿತವಾದ ವಿವಿಧಾಕೃತಿಗಳ ಮಡಕೆಗಳು ಉಪಯೋಗದಲ್ಲಿದ್ದವು. ಕಲ್ಲಿನ ಗುಂಡಿ ಮುದ್ರೆಗಳೂ ಮಣಿಗಳೂ ಸಣ್ಣ ಪಾತ್ರೆಗಳೂ ಬಳಕೆಗೆ ಬಂದವು. ಜನನೇಂದ್ರಿಯಗಳ ನಿರೂಪಣೆಗೆ ಪ್ರಧಾನವಾಗಿದ್ದ ಮಣ್ಣಿನ ಸ್ತ್ರೀಗೊಂಬೆಗಳು ಪ್ರಾಚೀನ ಕಾಲದಲ್ಲಿ ಮಾತೃದೇವತಾ ಪ್ರಧಾನವಾಗಿದ್ದ ಮತೀಯ ಆಚರಣೆಗಳ ಸಂಕೇತಗಳಾಗಿದೆ.
ಅನಂತರ ಈ ಪ್ರದೇಶ ದಕ್ಷಿಣ ಇರಾಕಿನ ಸಂಸ್ಕøತಿಯ ಪ್ರಭಾವಕ್ಕೆ ಒಳಗಾಯಿತು. ಎರಡನೆಯ ಸಹಸ್ರಮಾನದ ಆರಂಭದಲ್ಲಿ ದಕ್ಷಿಣ ಇರಾಕಿನ ಪ್ರಭಾವದಿಂದ ಅಸ್ಸೀರಿಯದ ಜನ ಚಾರಿತ್ರಿಕ ಘಟ್ಟವನ್ನು ತಲುಪಿದರು. ಆ ವೇಳೆಗೆ ಸಿಮಿಟಿಕ್ ಪಂಗಡ ಜನ ಇದನ್ನು ಆಕ್ರಮಿಸಿದರು.