ಅಶೋಕ್ ಎಮ್.ರಾಯಚೂರು
ಅಶೋಕ್ ಎಮ್.ರಾಯಚೂರು (೮ ಏಪ್ರಿಲ್ ೧೯೬೬) ರವರು ಇಂಡಿಯನ್ ಮೆಟೀರಿಯಲ್ಸ್ ವಿಜ್ಞಾನಿ , ನ್ಯಾನೊಟೆಕ್ನಾಲಜಿಸ್ಟ್ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನ ಮೆಟೀರಿಯಲ್ಸ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರಾಗಿದ್ದಾರೆ . [೧] [೨] ಬಯೋಮೆಡಿಕಲ್ ಮತ್ತು ಪರಿಸರ ಅನ್ವಯಿಕೆ ಗಳಿಗಾಗಿ ನ್ಯಾನೋತಂತ್ರಜ್ಞಾನದ ಬಳಕೆಗೆ ಸಂಬಂಧಿಸಿದ ಅಧ್ಯಯನಗಳಿಗೆ ಇವರು ಹೆಸರುವಾಸಿಯಾಗಿದ್ದಾರೆ. ರಾಯಚೂರು ರವರು ಅಲೆಕ್ಸಾಂಡರ್ ವಾನ್ ಹಂಬೊಲ್ಟ್ ಫೆಲೋ ಮತ್ತು ಭಾರತದ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ ನ ಜೀವಮಾನದ ಸದಸ್ಯರಾಗಿದ್ದಾರೆ. ಭಾರತ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆಯು ಅವರಿಗೆ ಅವರ ವೃತ್ತಿಜೀವನದ ಅಭಿವೃದ್ಧಿಗೋಸ್ಕರ , ಭಾರತೀಯ ವಿಜ್ಞಾನ ಪುರಸ್ಕಾರಗಳಲ್ಲಿ ಅತ್ಯುನ್ನತ ಪುರಸ್ಕಾರವಾದ ನ್ಯಾಷನಲ್ ಬಯೋಸೈನ್ಸ್ ಅವಾರ್ಡ್ ಅನ್ನು ನೀಡಿ ಗೌರವಿಸಲಾಯಿತು.
ಅಶೋಕ್ ಎಮ್.ರಾಯಚೂರು | |
---|---|
ಜನನ | ೮ ಏಪ್ರಿಲ್ ೧೯೬೬ ಭಾರತ |
ವಾಸಸ್ಥಳ | ಬೆಂಗಳೂರು , ಕರ್ನಾಟಕ , ಭಾರತ |
ರಾಷ್ಟ್ರೀಯತೆ | ಭಾರತೀಯ |
ಕಾರ್ಯಕ್ಷೇತ್ರ | |
ಸಂಸ್ಥೆಗಳು |
|
ಅಭ್ಯಸಿಸಿದ ವಿದ್ಯಾಪೀಠ | |
ಪ್ರಸಿದ್ಧಿಗೆ ಕಾರಣ | ನ್ಯಾನೊಸ್ಟ್ರಕ್ಚರ್ಡ್ ಕ್ಯಾಪ್ಸುಲ್ಸ್ ಮೇಲಿನ ಅಧ್ಯಯನಕ್ಕೆ. |
ಗಮನಾರ್ಹ ಪ್ರಶಸ್ತಿಗಳು |
|
ಜನನ , ಶಿಕ್ಷಣ ಮತ್ತು ವೃತ್ತಿಜೀವನ
ಬದಲಾಯಿಸಿಅಶೋಕ್ ರವರು ೮ ಏಪ್ರಿಲ್ ೧೯೬೬ ರಂದು ಬೆಂಗಳೂರಿನಲ್ಲಿ ಜನಿಸಿದರು.[೩]
ಅಶೋಕ್ ರಾಯಚೂರ್ ರವರು,
- ಮಾಳವಿಯಾ ರೀಜನಲ್ ಇಂಜಿನಿಯರಿಂಗ್ ಕಾಲೇಜಿನಿಂದ ಎಂಜಿನಿಯರಿಂಗ್ ನಲ್ಲಿ ಪದವಿಯನ್ನು ಪಡೆದರು ಮತ್ತು ಕೆಂಟುಕಿ ವಿಶ್ವವಿದ್ಯಾಲಯದಲ್ಲಿ ತಮ್ಮ ಸ್ನಾತಕೋತ್ತರ ಅಧ್ಯಯನಕ್ಕಾಗಿ ಯುಎಸ್‌ಎ ಗೆ ತೆರಳಿದರು - ೧೯೯೦.
- ಯುಎಸ್‌ಎ , ಕೆಂಟುಕಿ ವಿಶ್ವವಿದ್ಯಾಲಯದಲ್ಲಿ ಅವರು ಎಮ್ಎಸ್ ಅನ್ನು ಗಳಿಸಿದರು - ೧೯೯೨.
- ತಮ್ಮ ಡಾಕ್ಟರೇಟ್ ಅಧ್ಯಯನವನ್ನು ನೆವಾಡಾದ ರೇನೋ ವಿಶ್ವವಿದ್ಯಾಲಯದಲ್ಲಿ ಪೂರ್ಣಗೊಳಿಸಿದರು ಮತ್ತು ಪಿಎಚ್ಡಿ ಪದವಿಯನ್ನು ಪಡೆದರು - ೧೯೯೬.[೪]
- ಭಾರತಕ್ಕೆ ಹಿಂದಿರುಗಿದ ನಂತರ ಅವರು ಇಂಜಿನಿಯರಿಂಗ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ) ನಲ್ಲಿ ಕಾರ್ಯನಿರ್ವಹಿಸಿದರು - ೧೯೯೭.
- ಅವರು ೨೦೦೭ ರಿಂದ ೨೦೦೯ ರವರೆಗೆ ಮೆಟೀರಿಯಲ್ಸ್ ಸಂಶೋಧನಾ ಕೇಂದ್ರದ ಸಹಾಯಕ ಸಿಬ್ಬಂದಿಯಾಗಿ ಮತ್ತು ೨೦೦೬ ರಿಂದ ೨೦೧೧ ರವರೆಗೆ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ಕನ್ಸಲ್ಟೆನ್ಸಿ ಕೇಂದ್ರದ ಸಹಾಯಕ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು.
ಲೀಗಸಿ
ಬದಲಾಯಿಸಿಅಶೋಕ್ ರವರು ನ್ಯಾನೊತಂತ್ರಜ್ಞಾನದ ವಿವಿಧ ಬಯೋಮೆಡಿಕಲ್ ಮತ್ತು ಪರಿಸರೀಯ ಅನ್ವಯಿಕೆಗಳ ವಿಷಯದ ಮೇಲೆ ಸಂಶೋಧನಾ ಕಾರ್ಯವನ್ನು ಆರಂಭಿಸಿದರು.[೫] ಹಾಗೂ ಅವರು II ಎಸ್ಸಿ ವಿಜ್ಞಾನಿಗಳ ಗುಂಪನ್ನು ತಯಾರಿಸಿ ಜೀನ್ ಮತ್ತು ಡ್ರಗ್ ವಿತರಣೆಗಾಗಿ ಪಾಲಿಎಲೆಕ್ಟ್ರೊಲೈಟ್ ಕ್ಯಾಪ್ಸುಲ್ಗಳ ಅಭಿವೃದ್ಧಿಯಲ್ಲಿ ಅವರನ್ನು ತೊಡಗಿಸಿಕೊಂಡಿದ್ದಾರೆ.[೬] ಅವರು ನ್ಯಾನೊಪಾರ್ಟಿಕಲ್ಸ್ ಅನ್ನು ಬಳಸಿಕೊಂಡು ನೀರನ್ನು ಸ್ವಚ್ಛಗೊಳಿಸುವ ಒಂದು ವೇಗವರ್ಧಕ ವಿಧಾನವನ್ನು ಅವರು ಅಭಿವೃದ್ಧಿಪಡಿಸಿದ್ದಾರೆ, ಇದು ಜೈವಿಕ ಮಾಲಿನ್ಯಕಾರಕಗಳನ್ನು ನೀರಿನಲ್ಲಿ ನಾಶಮಾಡುತ್ತದೆ. ಅವರ ಅಧ್ಯಯನಗಳು ಹಲವಾರು ಲೇಖನಗಳ ಮೂಲಕ ದಾಖಲಿಸಲ್ಪಟ್ಟವು ಮತ್ತು ವೈಜ್ಞಾನಿಕ ಲೇಖನಗಳ ಆನ್ಲೈನ್ ರೆಪೊಸಿಟರಿಯು ಸಂಶೋಧನಾ ಗೇಟ್ ಅನ್ನು ೧೫೮ ರ ಪಟ್ಟಿಯಲ್ಲಿ ಪಟ್ಟಿಮಾಡಿದೆ.[೭] [೮]
ಪ್ರಶಸ್ತಿಗಳು
ಬದಲಾಯಿಸಿ- ಬಯೊಟೆಕ್ನಾಲಜಿ ಇಲಾಖೆಯ ಬಯೋಟೆಕ್ ಪ್ರೊಸೆಸ್ ಡೆವಲಪ್ಮೆಂಟ್ ಅಂಡ್ ಕಮರ್ಷಿಯಲೈಸೇಷನ್ ಅವಾರ್ಡ್ - ೨೦೦೩.
- ಭಾರತ ಸರಕಾರದ ಉಕ್ಕು ಮತ್ತು ಗಣಿಗಳ , ರಾಷ್ಟ್ರೀಯ ಮೆಟೀರಿಯಲಿಸ್ಟ್ ದಿನ ಪ್ರಶಸ್ತಿ - ೨೦೦೩.
- ಭಾರತ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆಯು ಅವರಿಗೆ ಅವರ ವೃತ್ತಿಜೀವನದ ಅಭಿವೃದ್ಧಿಗೋಸ್ಕರ , ಭಾರತೀಯ ವಿಜ್ಞಾನ ಪುರಸ್ಕಾರಗಳಲ್ಲಿ ಅತ್ಯುನ್ನತ ಪುರಸ್ಕಾರವಾದ ನ್ಯಾಷನಲ್ ಬಯೋಸೈನ್ಸ್ ಅವಾರ್ಡ್ ಅನ್ನು ನೀಡಿ ಗೌರವಿಸಲಾಯಿತು - ೨೦೦೯.
- ಎಮ್.ಆರ್.ಎಸ್.ಐ. ಪದಕ - ೨೦೦೭.[೯]
- ಎಮ್.ಆರ್.ಎಸ್.ಐ. ಮತ್ತು ಐಸಿಎಸ್ಸಿ ಪ್ರಶಸ್ತಿ - ೨೦೧೮.[೧೦]
ಉಲ್ಲೇಖಗಳು
ಬದಲಾಯಿಸಿ- ↑ Revolvy
- ↑ Professor of Materials Engineering
- ↑ "Ashok M Raichur's personal information". Archived from the original on 2019-06-05. Retrieved 2019-05-15.
- ↑ https://in.linkedin.com/in/ashok-raichur-7191064[ಶಾಶ್ವತವಾಗಿ ಮಡಿದ ಕೊಂಡಿ]
- ↑ "Research group". Archived from the original on 2019-05-15. Retrieved 2019-05-15.
- ↑ "ಆರ್ಕೈವ್ ನಕಲು". Archived from the original on 2019-05-15. Retrieved 2019-05-15.
- ↑ https://publons.com/researcher/2690887/ashok-m-raichur/
- ↑ Research Gate
- ↑ "ಎಮ್.ಆರ್.ಎಸ್.ಐ. ಪದಕ". Archived from the original on 2019-05-15. Retrieved 2019-05-15.
- ↑ "ಐಸಿಎಸ್ಸಿ ಪ್ರಶಸ್ತಿ". Archived from the original on 2018-02-26. Retrieved 2019-05-14.