ಅಲ್ ಫಲಕ್
ಈ ಪುಟವನ್ನು ಅಳಿಸುವಿಕೆಗಾಗಿ ಗುರುತುಮಾಡಲ್ಪಟ್ಟಿದೆ. ನಿಮಗೆ ಈ ಲೇಖನವನ್ನು ಅಳಿಸುವುದರ ಬಗ್ಗೆ ವಿರೋಧವಿದ್ದಲ್ಲಿ ವಿಕಿಪೀಡಿಯ:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು ಪುಟದಲ್ಲಿ ತಿಳಿಸಿ. ಅಳಿಸುವಿಕೆಗೆ ಗುರುತು ಮಾಡಲು ಕಾರಣ: ವಿಶ್ವಕೋಶಕ್ಕೆ ಸೂಕ್ತವಾಘಿಲ್ಲ. ವಿಕಿಸೋರ್ಸ್‍ಗೆ ಸೇರಿಸಬಹುದು |
ಅಲ್ ಫಲಕ್ ಅಥವಾ ಪ್ರಭಾತ (ಅರಾಬಿಕ್ಃ الفك) ಕುರಾನ್ನ 113 ನೇ ಮತ್ತು
ಉಪಾಂತ್ಯ ಅಧ್ಯಾಯವಾಗಿದೆ. ಇದು ಮತ್ತು ಇದರ ಮುಂದಿನ ಅಧ್ಯಾಯವಾದ [[ಅನ್ನಾಸ್]] ಅನ್ನು ಅಲ್-ಮು'ಅವಿದಾತಾಯನ್ ಎಂದು ಕರೆಯಲಾಗುತ್ತದೆ. ಅಲ್ ಫಲಕ್ ದುಷ್ಟರಿಂದ ರಕ್ಷಣೆಗಾಗಿ ದೇವರೊಂದಿಗೆ ರಕ್ಷಣೆ ಕೇಳುವ ಒಂದು ಸಂಕ್ಷಿಪ್ತ ಐದು ಶ್ಲೋಕಗಳಿರುವ ಅಧ್ಯಾಯವಾಗಿದೆ
ಈ ಸೂರಾಹ್(ಅಧ್ಯಾಯ) ಮತ್ತು 114ನೇ ಮತ್ತು ಕುರಾನ್ನ ಕೊನೆಯ ಅಧ್ಯಾಯ, ಅನ್-ನಾಸ್, ಒಟ್ಟಾಗಿ ಅಲ್-ಮು 'ಅವಿದಾತೈನ್ ಎಂದು ಉಲ್ಲೇಖಿಸಲ್ಪಡುತ್ತವೆ, ಏಕೆಂದರೆ ಎರಡರಲ್ಲು "ನಾನು ರಕ್ಷಣೆ ಕೋರುತ್ತೇನೆ" ಎಂದು ಪ್ರಾರಂಭವಾಗುತ್ತವೆ. ಅನ್-ನಾಸ್ ಮನಸಿನ ಒಳಗಿನ ದುಷ್ಟತನದಿಂದ ಆಶ್ರಯಕ್ಕಾಗಿ ಅಲ್ಲಾಹನನ್ನು ಬೇಡಲಾಗುತದೆ, ಆದರೆ ಅಲ್ ಫಲಕ್ ಹೊರಗಿನ ದುಷ್ಟತೆಯಿಂದ ಆಶ್ರಯಕ್ಕಾಗಿ ಅಲ್ಲಾಹನೊಂದಿಗೆ ಕೋರಲಾಗುತ್ತದೆ.
ಶ್ಲೋಕಗಳ ಅರ್ಥ
ಬದಲಾಯಿಸಿಅಲ್ಲಾಹನ ಹೆಸರಿಂದ - ಅವನು ಅಪಾರ ದಯಾಳು, ಕರುಣಾಮಯಿ.
1 ಹೇಳಿರಿ; ನಾನು, ಪ್ರಭಾತದ ಒಡೆಯ (ಅಲ್ಲಾಹ)ನಲ್ಲಿ ರಕ್ಷಣೆ ಕೋರುತ್ತೇನೆ -
2 ಅವನು ಸೃಷ್ಟಿಸಿರುವ ಎಲ್ಲವುಗಳ ಕೆಡುಕಿನಿಂದ (ಸುರಕ್ಷಿತನಾಗಿರಲು)
3 ಮತ್ತು ಕತ್ತಲೆಯು ಆವರಿಸುವಾಗ, ಅದರ ಕೆಡುಕಿನಿಂದ (ರಕ್ಷಣೆ ಕೋರುತ್ತೇನೆ)
4 ಮತ್ತು ಗಂಟುಗಳಲ್ಲಿ ಊದುವ (ಮಂತ್ರವಾದಿ) ಮಹಿಳೆಯರ ಕೆಡುಕಿನಿಂದ
5 ಮತ್ತು ಅಸೂಯೆ ಪಡುವವನು ಅಸೂಯೆ ಪಡುವಾಗ, ಅವನ ಕೆಡುಕಿನಿಂದ (ರಕ್ಷಣೆ ಕೋರುತ್ತೇನೆ).