ಅಲ್ಯೂಷಿಯನ್ ದ್ವೀಪಗಳು
ಅಲ್ಯೂಷಿಯನ್ ದ್ವೀಪಗಳು ಉತ್ತರ ಪೆಸಿಫಿಕ್ ಸಾಗರದಲ್ಲಿರುವ ದ್ವೀಪಸ್ತೋಮ. (ಯು.ಎಸ್.ಎ.) ಸುಮಾರು 150 ದ್ವೀಪಗಳಿವೆ. ಇವು ಅಲಾಸ್ಕ ಪರ್ಯಾಯದ್ವೀಪದಿಂದ ಪಶ್ಚಿಮಕ್ಕೆ ಕಮ್ಚಟ್ಕಾ ಪರ್ಯಾಯದ್ವೀಪದ ಅಟ್ಟು ದ್ವೀಪದವರೆಗೆ ಸು. 1932 ಕಿಮೀ ಉದ್ದ ಹಬ್ಬಿವೆ. 52-50 ಉತ್ತರ ರೇಖಾಂಶ, 163-170 ಪಶ್ಚಿಮ ರೇಖಾಂಶ. ಜನಸಂಖ್ಯೆ ಸು. 5,600.
![]() | |
Geography | |
---|---|
Location | ಪೆಸಿಫಿಕ್ ಸಾಗರ, ಬೇರಿಂಗ್ ಸಮುದ್ರ |
Total islands | >300 |
Major islands | ಉನಲಾಸ್ಕ ದ್ವೀಪ |
ವಿಸ್ತೀರ್ಣ | ೬,೮೨೧[೧] sq mi (ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"". km೨) |
ಉದ್ದ | ೧,೨೦೦ mi (೧,೯೦೦ km) |
ಸಮುದ್ರ ಮಟ್ಟದಿಂದ ಎತ್ತರದ ಸ್ಥಳ | 10,000 |
Country | |
State | ಅಲಾಸ್ಕ |
Largest city | ಉನಲಾಸ್ಕ (pop. 4,283) |
Demographics | |
Population | 8,163 (as of 2000) |
Ethnic groups | Aleut |
ಭೌಗೋಳಿಕಸಂಪಾದಿಸಿ
ಪ್ರಮುಖ ದ್ವೀಪ ಸಮೂಹಗಳೆಂದರೆ; ಪಾಕ್ಸ್ ದ್ವೀಪಗಳು, ಫೋರ್ ಮೌಂಟೇನ್ಸ್ ದ್ವೀಪಗಳು, ಆಂಡ್ರಿಯನ್ ಆಫ್ ದ್ವೀಪಗಳು ಮತ್ತು ಅಟ್ಟುದ್ವೀಪವನ್ನೊಳ ಗೊಂಡ ನಿಯರ್ ದ್ವೀಪಗಳು - ಇವು ಜ್ವಾಲಾಮುಖಿ ಕಾರ್ಯದಿಂದ ಆದುವು. ಅನೇಕ ಲುಪ್ತ ಹಾಗೂ ಜ್ವಲಂತ ಜ್ವಾಲಾಮುಖಿಗಳಿವೆ.
ಹವಾಮಾನಸಂಪಾದಿಸಿ
ಸಾಗರಿಕ ವಾಯುಗುಣವಿದ್ದು ವರ್ಷವೆಲ್ಲ ಮಳೆ ಬೀಳುತ್ತದೆ. ವರ್ಷದ ಬಹುಕಾಲ ವಾತಾವರಣ ದಟ್ಟ ಮಂಜಿನಿಂದ ಕೂಡಿದ್ದು, ಸರಾಸರಿ 380 ಸೆಂ. ಉಷ್ಣತೆಯಿರುತ್ತದೆ. ಪೈರು ಬೆಳೆಯುವ ಅವಧಿ ಸುಮಾರು 135 ದಿವಸಗಳು.
ವಾಣಿಜ್ಯಸಂಪಾದಿಸಿ
ಇಲ್ಲಿಯ ನಿತ್ಯಹರಿದ್ವರ್ಣದ ಕೋನಿಫರಸ್ ಕಾಡುಗಳಲ್ಲಿ ಮೃದು ಮರ ದೊರೆತರೂ ಆ ಬಗ್ಗೆ ಕೈಗಾರಿಕೆ ಬೆಳೆದಿಲ್ಲ. ಮೀನುಗಾರಿಕೆ, ಬೇಟೆ ಜನರ ಮುಖ್ಯ ಉದ್ಯೋಗಗಳು. ಪ್ರಮುಖ ರೇವು ಹಾಗೂ ವ್ಯಾಪಾರ ಕೇಂದ್ರವಾದ ಯುನಲಾಸ್ಕ ಅತಿ ದೊಡ್ಡ ಪಟ್ಟಣ. ಇಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದ ನೌಕಾ ನೆಲೆ ಇದೆ.
ರಾಜಕೀಯಸಂಪಾದಿಸಿ
ಈ ದ್ವೀಪ ಸ್ತೋಮಗಳನ್ನು ಮೊದಲಿಗೆ ಕಂಡು ಹಿಡಿದವರು. ರಷ್ಯನ್ನರು (1741) ಆ ಮುಂಚೆ ಅಲ್ಲಿ ಮೂಲ ನಿವಾಸಿಗಳಿದ್ದರು. ಈಗ ಅವರ ಸಂತತಿ ನಶಿಸಿದೆ. 1867 ರಲ್ಲಿ ರಷ್ಯ ಈ ದ್ವೀಪಗಳನ್ನು ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಬಿಟ್ಟುಕೊಟ್ಟಿತು.