ಅಲೋಹಗಳು

ಅಲೋಹಗಳು ಮೂಲವಸ್ತುಗಳಲ್ಲಿ ಒಂದು ಗುಂಪಿನವು (ನಾನ್ಮೆಟಲ್ಸ್‌).

ಅಲೋಹಗಳು ಮೂಲವಸ್ತುಗಳಲ್ಲಿ ಒಂದು ಗುಂಪಿನವು (ನಾನ್ಮೆಟಲ್ಸ್‌). ಈ ಪದಕ್ಕೆ ಸಮರ್ಪಕವಾಗಿ ಲಕ್ಷಣ ನಿರೂಪಣೆ ಮಾಡುವುದು ಕಷ್ಟ. ಮೂಲವಸ್ತುಗಳನ್ನು ಲೋಹ ಮತ್ತು ಅಲೋಹಗಳೆಂದು ಎರಡು ಸ್ಥೂಲವಾದ ಗುಂಪುಗಳಾಗಿ ವಿಂಗಡಿಸಬಹುದು. ಇಂಥ ವಿಂಗಡಣೆಗೆ ಆಧಾರ ಈ ಮೂಲವಸ್ತುಗಳು ಭೌತ ಮತ್ತು ರಾಸಾಯನಿಕ ಗುಣಗಳಲ್ಲಿರುವ ಹಲವು ವ್ಯತ್ಯಾಸಗಳು.

ಆವರ್ತಕೋಷ್ಟಕದಲ್ಲಿ ಅಲೋಹಗಳ ಗುಂಪು:
ಜಲಜನಕವನ್ನು ಬಿಟ್ಟರೆ, ಅಲೋಹಗಳು ಪಿ-ವಿಭಾಗದಲ್ಲಿ ನೆಲೆಸಿವೆ. ಒಂದು ಎಸ್-ವಿಭಾಗದ ಮೂಲಧಾತುವಾದರೂ, ಹೀಲಿಯಮ್ಅನ್ನು ಸಾಮಾನ್ಯವಾಗಿ ನೀಯಾನ್ ಮೇಲೆ ಇರಿಸಲಾಗುತ್ತದೆ, ಅದರ ಶ್ರೇಷ್ಠಾನಿಲ ಗುಣಲಕ್ಷಣಗಳ ಕಾರಣ.

ವ್ಯಾಖ್ಯಾನ ಮತ್ತು ಲಕ್ಷಣಗಳು

ಬದಲಾಯಿಸಿ

ಅಲೋಹಗಳು ಘನ, ದ್ರವ ಅಥವಾ ಅನಿಲರೂಪದಲ್ಲಿರುವುವು. ಲೋಹಗಳಿಗಿರುವಂತೆ ಇವಕ್ಕೆ ಹೊಳಪಾಗಲಿ, ವಿಶಿಷ್ಟವಾದ ಶಬ್ದದಾಯಕ (ಬಡಿದಾಗ) ಗುಣವಾಗಲಿ ಇಲ್ಲ. ಲೋಹಗಳೊಡನೆ ಹೋಲಿಸಿದಾಗ ಇವುಗಳ ಸಾಂದ್ರತೆ, ಕರಗುವ ಬಿಂದು (ಮೆಲ್ಟಿಂಗ್ ಪಾಯಿಂಟ್) ಮತ್ತು ಕುದಿಯುವ ಬಿಂದು (ಬಾಯಿಲಿಂಗ್ ಪಾಯಿಂಟ್) ಸಾಮಾನ್ಯವಾಗಿ ಕಡಿಮೆ. ಸಾಮಾನ್ಯವಾಗಿ ಅಲೋಹಗಳು ವಿದ್ಯುತ್ ಮತ್ತು ಉಷ್ಣಶಕ್ತಿಗಳಿಗೆ ಒಳ್ಳೆಯ ವಾಹಕಗಳಲ್ಲ. ಅವು ಆ್ಯನಯಾನ್ಗಳಿಗೆ ಎಡೆಕೊಡುತ್ತವೆ. ಅವುಗಳ ಅಯಾನೀಕರಣ ವಿಭವ (ಅಯೊನೈಸೇಷನ್ ಪೊಟೆನ್ಷಿಯಲ್) ಹೆಚ್ಚು ಪ್ರಮಾಣವುಳ್ಳದ್ದು. ಲೋಹಗಳಂತೆ ಈ ಅಲೋಹಗಳನ್ನು ತಂತಿ ಅಥವಾ ಪದರ ರೂಪವಾಗಿ ಪರಿವರ್ತಿಸುವುದು ಸುಲಭವಲ್ಲ. ಅಮ್ಲಜನಕದೊಡನೆ ಮೂಲವಸ್ತುವಿನ ಪರಮಾಣು ಸಂಯೋಜಿಸಿದಾಗ ಆಕ್ಸೈಡ್ ಎಂಬ ಸಂಯುಕ್ತವಸ್ತು ಉತ್ಪನ್ನವಾಗುತ್ತದೆ. ಅಲೋಹಗಳ ಆಕ್ಸೈಡ್‍ಗಳು ಆಮ್ಲೀಯವಾದುವು. ವಿದ್ಯುದ್ವಿಶ್ಲೇಷಣ ಕ್ರಿಯೆಯಲ್ಲಿ (ಎಲೆಕ್ಟ್ರಾಲಿಸಿಸ್) ಅಲೋಹಗಳು ಧನಧ್ರುವದ ಬಳಿ (ಪಾಸಿಟಿವ್ ಕ್ಯಾಥೋಡ್) ಬಿಡುಗಡೆಯಾಗುವುದರಿಂದ ಅಲೋಹಗಳನ್ನು ವಿದ್ಯುದೃಣ (ಎಲೆಕ್ಟ್ರೋ ನೆಗೆಟಿವ್) ಎಂದು ಕರೆಯುವರು. ಅಲೋಹದ ಗುಣದ ಬದಲು ವಿದ್ಯುದೃಣ ಎಂಬುದನ್ನು ಪರ್ಯಾಯವಾಗಿ ಬಳಸುವುದೂ ಉಂಟು.ಕ್ಲೋರೀನ್ ಎಂಬ ಅನಿಲ ಇನ್ನಾವುದಾದರೂ ಮೂಲವಸ್ತುವಿನೊಡನೆ ಸಂಯೋಗವಾದಾಗ ಕ್ಲೋರೈಡ್ ಎಂಬ ಸಂಯುಕ್ತವಸ್ತು ಉತ್ಪನ್ನವಾಗುತ್ತದೆ. ಅಲೋಹಗಳ ಕ್ಲೋರೈಡ್ ಗಳು ಸಾಮಾನ್ಯವಾಗಿ ನೀರಿನಿಂದ ಪುರ್ಣವಾಗಿ ವಿಭಜಿತವಾಗುತ್ತವೆ (ಹೈಡ್ರೊಲೈಸ್ಡ್). ಹಲವಾರು ಭೌತ ಮತ್ತು ರಾಸಾಯನಿಕ ಗುಣಗಳನ್ನು ಪರೀಕ್ಷಿಸಿ, ಒಂದು ಮೂಲವಸ್ತು ಲೋಹವೇ ಅಥವಾ ಅಲೋಹವೇ ಎಂದು ನಿರ್ಣಯಿಸಬೇಕಾಗುತ್ತದೆ. ಆದರೆ ಒಂದೊಂದೇ ಗುಣವನ್ನು ತೆಗೆದುಕೊಂಡರೆ, ಕೆಲವು ವೇಳೆ ಲೋಹವೊ ಅಲೋಹವೊ ಎಂದು ಹೇಳುವುದು ಕಷ್ಟ.[]. ಕೆಲವು ಗುಣಗಳನ್ನು ತೆಗೆದುಕೊಂಡಾಗ ಲೋಹವೆಂದೂ ಮತ್ತೆ ಕೆಲವನ್ನು ಗಮನಿಸಿದಾಗ ಅಲೋಹವೆಂದೂ ಹೇಳಬೇಕಾಗಿ ಬರುವ ಉದಾಹರಣೆಗಳೂ ಉಂಟು.

ಅಲೋಹಗಳ ಸಂಖ್ಯೆ

ಬದಲಾಯಿಸಿ

ನೈಸರ್ಗಿಕ ಮೂಲವಸ್ತುಗಳಲ್ಲಿ ಸುಮಾರು 68 ಲೋಹಗಳು, ಉಳಿದವು ಅಲೋಹಗಳು ಪೈಕಿ ಹೈಡ್ರೊಜನ್, ಹೀಲಿಯಂ, ನೈಟ್ರೊಜನ್, ಆಕ್ಸಿಜನ್, ಫ್ಲೋರಿನ್‌, ನಿಯಾನ್, ಕ್ಲೋರೀನ್, ಆರ್ಗಾನ್, ಕ್ರಿಪ್ಟನ್, ಸೆನಾನ್, ಮತ್ತು ರೆಡಾನ್ ಎಂಬ ಹನ್ನೊಂದು ಮೂಲವಸ್ತುಗಳು ಅನಿಲರೂಪದಲ್ಲಿವೆ. ದ್ರವರೂಪದಲ್ಲಿರುವ ಏಕೈಕ ಅಲೋಹ ಬ್ರೋಮೀನ್. ಘನರೂಪದಲ್ಲಿರುವ ಒಂಬತ್ತು ಅಲೋಹಗಳು-ಬೋರಾನ್, ಕಾರ್ಬನ್, ಸಿಲಿಕಾನ್, ಫಾಸ್ಫರಸ್, ಗಂಧಕ, ಆರ್ಸೆನಿಕ್, ಸೆಲಿನಿಯಂ, ಆಂಟಿಮೊನಿ ಮತ್ತು ಅಯೊಡೀನ್. ಮೂಲವಸ್ತುಗಳ ಆವರ್ತಕೋಷ್ಟಕದ (ಪೀರಿಯಾಡಿಕ್ ಟೇಬಲ್) ಮೇಲಿನ ಎಡಮೂಲೆಯಿಂದ ಕೆಳಗಿನ ಬಲಮೂಲೆಗೆ ವಿಕರ್ಣರೇಖೆಯೊಂದನ್ನು ಎಳೆದು ಇಬ್ಭಾಗ ಮಾಡಿದರೆ, ಅಲೋಹ ಮೂಲವಸ್ತುಗಳೆಲ್ಲವೂ ಈ ರೇಖೆಯ ಮೇಲುಭಾಗದಲ್ಲಿರುತ್ತವೆ. ತವರ ಎರಡೂ ರೂಪದಲ್ಲಿದೆ. ಅದರ ಲೋಹರೂಪ ಬೆಳ್ಳಗೆ ಹೊಳೆಯುತ್ತದೆ. ಟೆಲ್ಯೂರಿಯಂ ಎಂಬ ಲೋಹವೂ ಇದೇ ಗುಂಪಿಗೆ ಸೇರುತ್ತದೆ. ಆದ್ದರಿಂದ ಈ ಮೂಲವಸ್ತುಗಳನ್ನು ಉಪಲೋಹಗಳು (ಮೆಟಲಾಡ್ಸ್‌) ಎಂದು ಕರೆಯುತ್ತಾರೆ. ಬೋರಾನ್, ಸಿಲಿಕಾನ್, ಜರ್ಮೇನಿಯಂಗಳನ್ನು ಸಹ ಉಪಲೋಹಗಳ ಶ್ರೇಣಿಗೆ ಸೇರಿಸಬಹುದು.

ಉಲ್ಲೇಖಗಳು

ಬದಲಾಯಿಸಿ


 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಅಲೋಹಗಳು&oldid=750220" ಇಂದ ಪಡೆಯಲ್ಪಟ್ಟಿದೆ