ಅಲಿಸ್ ಇನ್ ಚೈನ್ಸ್(Alice in Chains )

ಅಲಿಸ್ ಇನ್ ಚೈನ್ಸ್ ಎಂಬುದು ಸಿಯಾಟಲ್, ವಾಶಿಂಗ್ಟನ್ ನಲ್ಲಿ ೧೯೮೭ ರಲ್ಲಿ ಗಿಟಾರ್ ವಾದಕ ಜೆರ್ರಿ ಕ್ಯಾಂಟ್ರೆಲ್ ಹಾಗು ಮೂಲ ಪ್ರಧಾನ ಗಾಯಕ ಲಯ್ನೆ ಸ್ಟಾಲಿ ಸ್ಥಾಪಿಸಿದ ಒಂದು ಅಮೆರಿಕನ್ ರಾಕ್ ವಾದ್ಯವೃಂದ. ಇದು ಗ್ರುಂಜ್ ಸಂಗೀತ(೧೯೯೦ ರ ಮಧ್ಯಭಾಗದಲ್ಲಿ ಹುಟ್ಟಿಕೊಂಡ ಪರ್ಯಾಯ ರಾಕ್‌ನ ಉಪಪ್ರಕಾರ)ಪ್ರಕಾರದೊಂದಿಗೆ ವ್ಯಾಪಕ ಸಂಬಂಧ ಹೊಂದಿದ್ದರೂ, ವಾದ್ಯವೃಂದವು ಹೆವಿ ಮೆಟಲ್ ಹಾಗು ಧ್ವನಿ ತರಂಗದ ಅಂಶಗಳನ್ನು ಒಂದುಗೂಡಿಸಿಕೊಂಡಿದೆ. ತಂಡದ ಸ್ಥಾಪನೆಯಿಂದ ಹಿಡಿದು ಇಲ್ಲಿಯವರೆಗೂ, ಅಲಿಸ್ ಇನ್ ಚೈನ್ಸ್ ನಾಲ್ಕು ಸ್ಟುಡಿಯೋ ಆಲ್ಬಮ್ ಗಳು, ಮೂರು EPಗಳು, ಎರಡು ನೇರ ಪ್ರದರ್ಶನ ಆಲ್ಬಮ್ ಗಳು, ನಾಲ್ಕು ಸಂಕಲನಗಳು, ಹಾಗು ಎರಡು DVDಗಳನ್ನು ಬಿಡುಗಡೆ ಮಾಡಿದೆ. ವಾದ್ಯವೃಂದವು ತನ್ನದೇ ಆದ ವಿಶಿಷ್ಟ ಗಾಯನ ಶೈಲಿಗೆ ಹೆಸರುವಾಸಿಯಾಗಿದೆ. ಇದು ಸಾಮಾನ್ಯವಾಗಿ ಸ್ಟಾಲಿ ಹಾಗು ಕ್ಯಾಂಟ್ರೆಲ್‌ರ ಸಮರಸದ ಹಾಡುಗಾರಿಕೆಯನ್ನು ಒಳಗೊಂಡಿರುತ್ತದೆ. ಅಲಿಸ್ ಇನ್ ಚೈನ್ಸ್, ೧೯೯೦ ರ ದಶಕದ ಆರಂಭದ ಗ್ರುಂಜ್ ಚಳವಳಿಯಲ್ಲಿ ಸಿಯಾಟಲ್ ನ ಇತರ ವಾದ್ಯವೃಂದಗಳಾದ ನಿರ್ವಾಣ, ಪರ್ಲ್ ಜಾಮ್ ಹಾಗು ಸೌಂಡ್ ಗಾರ್ಡನ್ ಜೊತೆಯಲ್ಲಿ ಭಾಗವಹಿಸಿ ಅಂತಾರಾಷ್ಟ್ರೀಯ ಖ್ಯಾತಿಯನ್ನು ಪಡೆಯಿತು. ವಾದ್ಯವೃಂದವು ೧೯೯೦ ರ ಯಶಸ್ವಿ ಸಂಗೀತ ಪ್ರದರ್ಶನ ನೀಡಿದ ತಂಡಗಳಲ್ಲಿ ಒಂದೆನಿಸುವುದರ ಜೊತೆಗೆ ವಿಶ್ವವ್ಯಾಪಿಯಾಗಿ ೪೦ ದಶಲಕ್ಷ[] ಹಾಗು ಕೇವಲ USನಲ್ಲೇ 16 ದಶಲಕ್ಷ ಆಲ್ಬಮ್ ಗಳನ್ನು ಮಾರಾಟ ಮಾಡಿತು.[] ವಾದ್ಯವೃಂದವು ಬಿಲ್ಬೋರ್ಡ್ ೨೦೦ ಆಲ್ಬಮ್ ಗಳಲ್ಲಿ ಎರಡು ವಿಭಾಗದಲ್ಲಿ ಅಗ್ರ ಸ್ಥಾನವನ್ನು ಗಳಿಸಿತು (ಜಾರ್ ಆಫ್ ಫ್ಲೈಸ್ ಹಾಗು ಅಲಿಸ್ ಇನ್ ಚೈನ್ಸ್ ), ಮೇನ್ ಸ್ಟ್ರೀಮ್ ರಾಕ್ ಟ್ರ್ಯಾಕ್ಸ್ ಪಟ್ಟಿಯಲ್ಲಿ ಅಗ್ರ ಹತ್ತು ಹಾಡುಗಳ ಪೈಕಿ ೧೪ ಹಾಡುಗಳನ್ನು ಇರಿಸುವುದರ ಜೊತೆಗೆ, ಏಳು ಬಾರಿ ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತು. ಆದಾಗ್ಯೂ ಅಧಿಕೃತವಾಗಿ ವಾದ್ಯವೃಂದವು ವಿಸರ್ಜನೆಯಾಗದಿದ್ದರೂ, ಮಾದಕದ್ರವ್ಯದ ಬಳಕೆಯಿಂದ ಉಂಟಾದ ವಿಸ್ತರಿತ ನಿಷ್ಕ್ರಿಯತೆಯಿಂದ ವಿಪತ್ತಿಗೆ ಸಿಕ್ಕಿತು. ಇದು ೨೦೦೨ ರಲ್ಲಿ ಲೈನೆ ಸ್ಟಾಲಿ ಸಾವಿನೊಂದಿಗೆ ಅಂತ್ಯಗೊಂಡಿತು. ಅಲಿಸ್ ಇನ್ ಚೈನ್ಸ್ ೨೦೦೫ ರಲ್ಲಿ ತಂಡಕ್ಕೆ ಹೊಸತಾಗಿ ಸೇರ್ಪಡೆಯಾದ ಪ್ರಧಾನ ಗಾಯಕ ವಿಲ್ಲಿಯಮ್ ಡುವಾಲ್ ರೊಂದಿಗೆ ಮತ್ತೆ ಒಂದುಗೂಡಿತು ಹಾಗು ೧೪ ವರ್ಷಗಳಲ್ಲಿ ಮೊದಲ ಬಾರಿಗೆ ತಮ್ಮ ಸ್ಟುಡಿಯೋ ಆಲ್ಬಮ್ ಬ್ಲ್ಯಾಕ್ ಗಿವ್ಸ್ ವೇ ಟು ಬ್ಲೂ ವನ್ನು ಸೆಪ್ಟೆಂಬರ್ ೨೯, ೨೦೦೯ ರಲ್ಲಿ ಬಿಡುಗಡೆ ಮಾಡಿತು.[]

Alice in Chains
Alice in Chains in September 2007. From left to right: William DuVall, Sean Kinney, and Jerry Cantrell.
ಹಿನ್ನೆಲೆ ಮಾಹಿತಿ
ಮೂಲಸ್ಥಳSeattle, Washington, USA
ಸಂಗೀತ ಶೈಲಿAlternative metal, alternative rock, grunge, heavy metal
ಸಕ್ರಿಯ ವರ್ಷಗಳು1987–2002, 2005–present
L‍abelsColumbia, Virgin/EMI
Associated actsClass of '99, Comes with the Fall, Mad Season, Spys4Darwin, Ozzy Osbourne, Heart
ಅಧೀಕೃತ ಜಾಲತಾಣwww.aliceinchains.com
ಸಧ್ಯದ ಸದಸ್ಯರುWilliam DuVall
Jerry Cantrell
Mike Inez
Sean Kinney
ಮಾಜಿ ಸದಸ್ಯರುLayne Staley
Mike Starr

ಇತಿಹಾಸ

ಬದಲಾಯಿಸಿ

ಸ್ಥಾಪನೆ: ೧೯೮೬–೮೯

ಬದಲಾಯಿಸಿ
 
ಗಾಯಕ ಲಯ್ನೆ ಸ್ಟಾಲಿ . ಸ್ಟಾಲಿ ಗಿಟಾರ್ ವಾದಕ ಜೆರ್ರಿ ಕ್ಯಾಂಟ್ರೆಲ್ ರೊಂದಿಗೆ ಅಲಿಸ್ ಇನ್ ಚೈನ್ಸ್ ವಾದ್ಯವೃಂದವನ್ನು ರೂಪಿಸಿದರು.

ಇಸವಿ ೧೯೮೬ ರಲ್ಲಿ ಸ್ಲೀಜ್ ಎಂಬ ತಮ್ಮ ವಾದ್ಯವೃಂದದ ವಿಸರ್ಜನೆಯ ನಂತರ, ಗಾಯಕ ಲಯ್ನೆ ಸ್ಟಾಲಿ ಅಲಿಸ್ N' ಚೈನ್ಸ್ ನ್ನು ರೂಪಿಸಿದರು, ಈ ವಾದ್ಯವೃಂದವನ್ನು ಅವರು "ಹೆಂಗಸರ ದಿರಿಸನ್ನು ತೊಟ್ಟು ಸ್ಪೀಡ್ ಮೆಟಲ್ ನ್ನು ನುಡಿಸುವ ತಂಡ"ವೆಂದು ಹೇಳುತ್ತಾರೆ.[] ಹೊಸ ವಾದ್ಯವೃಂದವು, ಗಿಟಾರ್ ವಾದಕ ನಿಕ್ ಪೊಲಾಕ್, ಮಂದ್ರವಾದ್ಯ ವಾದಕ ಜಾನಿ ಬಕಾಲಾಸ್, ಹಾಗು ಡ್ರಂ ವಾದಕ ಜೇಮ್ಸ್ ಬರ್ಗ್ ಸ್ಟ್ರಾಂ ರನ್ನು ಒಳಗೊಂಡಿತ್ತು. ತಂಡವು ಸಿಯಾಟಲ್ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ಲಯೇರ್ ಹಾಗು ಆರ್ಮರ್ಡ್ ಸೈಂಟ್ ನ ಧ್ವನಿಮುದ್ರಿತ ಹಾಡುಗಳ ಪ್ರದರ್ಶನ ನೀಡುತ್ತಿತ್ತು.[] ಸ್ಟಾಲಿ ಮ್ಯೂಸಿಕ್ ಬ್ಯಾಂಕ್ ಪೂರ್ವಾಭ್ಯಾಸ ಸ್ಟುಡಿಯೋದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಗಿಟಾರ್ ವಾದಕ ಜೆರ್ರಿ ಕ್ಯಾಂಟ್ರೆಲ್ ರನ್ನು ಸಂಧಿಸುತ್ತಾರೆ, ಜೀವನೋಪಾಯಕ್ಕಾಗಿ ಕಷ್ಟಪಡುತ್ತಿದ್ದ ಈ ಇಬ್ಬರು ಸಂಗೀತಗಾರರು ಒಂದೇ ಕೋಣೆಯನ್ನು ಹಂಚಿಕೊಳ್ಳುವುದರ ಜೊತೆಗೆ ಅವರು ಪೂರ್ವಾಭ್ಯಾಸ ಮಾಡುತ್ತಿದ್ದ ಸ್ಥಳದಲ್ಲಿ ವಾಸಿಸುತ್ತಾರೆ. ಅಲಿಸ್ N' ಚೈನ್ಸ್ ಶೀಘ್ರದಲ್ಲಿ ವಿಸರ್ಜನೆಯಾಗುತ್ತದೆ ಹಾಗು ಸ್ಟಾಲಿ ಒಂದು ಸರಳ ಭಾವುಕ ಸಂಗೀತ(ಫಂಕ್) ತಂಡಕ್ಕೆ ಸೇರ್ಪಡೆಯಾಗುತ್ತಾರೆ, ಆ ಸಮಯದಲ್ಲಿ ಆ ತಂಡಕ್ಕೆ ಒಂದು ಗಿಟಾರ್ ವಾದಕನ ಅಗತ್ಯವಿರುತ್ತದೆ. ಸ್ಟಾಲಿ, ಕ್ಯಾಂಟ್ರೆಲ್ ರನ್ನು ಒಬ್ಬ ಸೈಡ್‌ಮೆನ್‌(ಬಾಡಿಗೆ ಸಂಗೀತಗಾರ)ನಾಗಿ ತಂಡಕ್ಕೆ ಸೇರ್ಪಡೆಯಾಗಲು ಕೇಳಿಕೊಳ್ಳುತ್ತಾರೆ. ಸ್ಟಾಲಿ, ಕ್ಯಾಂಟ್ರೆಲ್ ರ ವಾದ್ಯವೃಂದ ಡೈಮಂಡ್ ಲೈಗೆ ಸೇರ್ಪಡೆಯಾಗಬೇಕೆಂಬ ಷರತ್ತಿನ ಮೇಲೆ ಕ್ಯಾಂಟ್ರೆಲ್ ಇವರ ತಂಡಕ್ಕೆ ಸೇರ್ಪಡೆಯಾಗಲು ಒಪ್ಪಿಕೊಳ್ಳುತ್ತಾರೆ. ಆ ಅವಧಿಯಲ್ಲಿದ್ದ ತಂಡದ ಇತರ ಸದಸ್ಯರೆಂದರೆ ಡ್ರಮ್ ವಾದಕ ಸೀನ್ ಕಿನ್ನೆಯ್ ಹಾಗು ಮಂದ್ರ ವಾದ್ಯ ವಾದಕ ಮೈಕ್ ಸ್ಟಾರ್ರ್. ಅಂತಿಮವಾಗಿ ಸರಳ ಭಾವುಕ ಸಂಗೀತ ತಂಡವು ವಿಸರ್ಜನೆಯಾಯಿತು ಹಾಗು 1987ರಲ್ಲಿ ಸ್ಟಾಲಿ ಕ್ಯಾಂಟ್ರೆಲ್ ತಂಡಕ್ಕೆ ಪೂರ್ಣಕಾಲಿಕ ಆಧಾರದ ಮೇಲೆ ಸೇರ್ಪಡೆಯಾಗುತ್ತಾರೆ. ಡೈಮಂಡ್ ಲೈ ತಂಡವು ವಾಯವ್ಯ ಪೆಸಿಫಿಕ್‌ನ ಸುತ್ತಮುತ್ತಲ ಕ್ಲಬ್‌ಗಳಲ್ಲಿ ಪ್ರದರ್ಶನ ನೀಡುತ್ತಿತ್ತು, ಸಾಮಾನ್ಯವಾಗಿ ೧೫ ನಿಮಿಷದ ಹಾಡನ್ನು ೪೫ ನಿಮಿಷಗಳ ಅವಧಿಗೆ ವಿಸ್ತರಿಸಿಕೊಂಡು ಪ್ರದರ್ಶನ ನೀಡುತ್ತಿತ್ತು. ಅಂತಿಮವಾಗಿ ವಾದ್ಯವೃಂದವು ಅಲಿಸ್ ಇನ್ ಚೈನ್ಸ್ ಎಂಬ ಹೆಸರನ್ನು ಇರಿಸಿಕೊಂಡಿತು.[][] ಸ್ಥಳೀಯ ಪ್ರವರ್ತಕ ರಾಂಡಿ ಹೌಸರ್ ಗೆ ಒಂದು ಸಂಗೀತ ಕಚೇರಿಯ ಸಂದರ್ಭದಲ್ಲಿ ತಂಡದ ಬಗ್ಗೆ ಅರಿವಾಗುತ್ತದೆ, ಜೊತೆಗೆ ಇವರು ಡೆಮೊ(ಉಲ್ಲೇಖಕ್ಕಾಗಿ ಧ್ವನಿಮುದ್ರಿತ ಆವೃತ್ತಿ)ದ ಧ್ವನಿಮುದ್ರಣಗಳಿಗೆ ಹಣ ನೀಡುವ ಪ್ರಸ್ತಾಪವನ್ನು ಮುಂದಿಡುತ್ತಾರೆ. ಆದಾಗ್ಯೂ, ವಾಶಿಂಗ್ಟನ್ ನ ಮ್ಯೂಸಿಕ್ ಬ್ಯಾಂಕ್ ಸ್ಟುಡಿಯೋದಲ್ಲಿ ವಾದ್ಯವೃಂದವು ಧ್ವನಿಮುದ್ರಣ ಮಾಡಬೇಕಿದ್ದ ಒಂದು ದಿನ ಮುಂಚಿತವಾಗಿ, ರಾಷ್ಟ್ರದ ಇತಿಹಾಸದಲ್ಲೇ ಅತ್ಯಂತ ದೊಡ್ದದೆನಿಸಿದ್ದ ಮರಿಜುವಾನಾ ಮಾದಕವಸ್ತು ಜಾಲಗಳ ಮೇಲಿನ ಅನಿರೀಕ್ಷಿತ ದಾಳಿಯ ಸಂದರ್ಭದಲ್ಲಿ ಪೊಲೀಸರು ಸ್ಟುಡಿಯೋವನ್ನು ಮುಚ್ಚಿಸುತ್ತಾರೆ.[] ಅಂತಿಮ ಡೆಮೊವನ್ನು ದಿ ಟ್ರೀಹೌಸ್ ಟೇಪ್ಸ್ ಎಂದು ಹೆಸರಿಸಲಾಯಿತು, ಜೊತೆಗೆ ಇದು ಸಂಗೀತ ತಂಡಗಳ ನಿರ್ವಾಹಕರಾದ ಕೆಲ್ಲಿ ಕರ್ಟಿಸ್ ಹಾಗು ಸುಸಾನ್ ಸಿಲ್ವರ್ ರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು, ಇವರಿಬ್ಬರು ಸಿಯಾಟಲ್ ಮೂಲದ ವಾದ್ಯವೃಂದ ಸೌಂಡ್ ಗಾರ್ಡನ್ ತಂಡವನ್ನು ಕೂಡ ನಿರ್ವಹಿಸುತ್ತಿದ್ದರು. ಕರ್ಟಿಸ್ ಹಾಗು ಸಿಲ್ವರ್ ಡೆಮೊವನ್ನು ಕೊಲಂಬಿಯಾ ರೆಕಾರ್ಡ್ಸ್' ನ A&R ಪ್ರತಿನಿಧಿ ನಿಕ್ ಟರ್ಜೊಗೆ ನೀಡಿದರು. ಇವರು ಧ್ವನಿಮುದ್ರಣ ಸಂಸ್ಥೆಯ ಅಧ್ಯಕ್ಷ ಡಾನ್ ಐಯೆನ್ನೆರ್ ರೊಂದಿಗೆ ತಂಡದ ಭೇಟಿಯನ್ನು ಏರ್ಪಡಿಸಿದರು. ದಿ ಟ್ರೀಹೌಸ್ ಟೇಪ್ಸ್ ನ್ನು ಆಧರಿಸಿ (1988ರ ಡೆಮೊ ಧ್ವನಿಮುದ್ರಿಕೆಯನ್ನು ವಾದ್ಯವೃಂದವು ಸಂಗೀತ ಪ್ರದರ್ಶನಗಳಲ್ಲಿ ಮಾರಾಟ ಮಾಡುತ್ತಿತ್ತು), ಐಯೆನ್ನೆರ್ ಕೊಲಂಬಿಯಾ ಪರವಾಗಿ ಅಲಿಸ್ ಇನ್ ಚೈನ್ಸ್ ವಾದ್ಯವೃಂದದೊಂದಿಗೆ ೧೯೮೯ ರಲ್ಲಿ ಒಪ್ಪಂದ ಮಾಡಿಕೊಂಡರು.[] ವಾದ್ಯವೃಂದವು, ೧೯೮೯ ರಲ್ಲಿ ಮೂರು ತಿಂಗಳ ಅವಧಿಯಲ್ಲಿ ಹೆಸರಿಸದ ಮತ್ತೊಂದು ಡೆಮೊವನ್ನು ಕೂಡ ಧ್ವನಿಮುದ್ರಣ ಮಾಡಿತು. ಈ ಧ್ವನಿಮುದ್ರಣವು ನಕಲಿ ಬಿಡುಗಡೆಯಾದ ಸ್ವೀಟ್ ಅಲಿಸ್ ನಲ್ಲಿ ಕೇಳಿಬರುತ್ತದೆ.[]

ಫೇಸ್ ಲಿಫ್ಟ್ ಹಾಗು ಸ್ಯಾಪ್ (೧೯೯೦ – ೯೨)

ಬದಲಾಯಿಸಿ

ಅಲಿಸ್ ಇನ್ ಚೈನ್ಸ್ ವಾದ್ಯವೃಂದವು ಧ್ವನಿಮುದ್ರಣ ಸಂಸ್ಥೆಯ ಮೊದಲ ಆದ್ಯತೆಯಾಯಿತು. ಸಂಸ್ಥೆಯು ವಾದ್ಯವೃಂದದ ಮೊದಲ ಅಧಿಕೃತ ಧ್ವನಿಮುದ್ರಣ ಪ್ರಚಾರದ EP ವೀ ಡೈ ಯಂಗ್ ನ್ನು ಜುಲೈ ೧೯೯೦ ರಲ್ಲಿ ಬಿಡುಗಡೆ ಮಾಡಿತು, EPಯ ಪ್ರಮುಖ ಏಕಗೀತೆ, "ವೀ ಡೈ ಯಂಗ್", ಮೆಟಲ್ ಪ್ರಕಾರದ ಸಂಗೀತದ ರೇಡಿಯೋನಲ್ಲಿ ಜನಪ್ರಿಯವಾಯಿತು. ಇದರ ಯಶಸ್ಸಿನ ನಂತರ, ಧ್ವನಿಮುದ್ರಣ ಸಂಸ್ಥೆಯು ಅಲಿಸ್ ಇನ್ ಚೈನ್ಸ್' ನ ಮೊದಲ ಆಲ್ಬಮ್ ನ್ನು ಡೇವ್ ಜೆರ್ಡನ್ ರ ನಿರ್ಮಾಣದಡಿಯಲ್ಲಿ ಹೊರತಂದಿತು.[] ಆಲ್ಬಮ್ ಒಂದು "ಮಂಕುಕವಿದ ವಾತಾವರಣ" ವನ್ನು ಬಿಂಬಿಸುವ ಉದ್ದೇಶವನ್ನು ಹೊಂದಿತ್ತು. ಇದು "ವ್ಯಾಕುಲಿತ ವಾತಾವರಣ ಹಾಗು ಸಿಯಾಟಲ್ ನ ಪ್ರಭಾವದ ನೇರ ಪರಿಣಾಮವಾಗಿತ್ತು" ಎಂದು ಕ್ಯಾಂಟ್ರಲ್ ಹೇಳಿದರು.[] ಇದರ ಪರಿಣಾಮವಾಗಿ ಹೊರಬಿದ್ದ ಆಲ್ಬಮ್, ಫೇಸ್ ಲಿಫ್ಟ್ , ಆಗಸ್ಟ್ ೨೧, ೧೯೯೦ ರಲ್ಲಿ ಬಿಡುಗಡೆಯಾಗುವುದರ ಜೊತೆಗೆ ೧೯೯೧ ರ ಬೇಸಿಗೆಯಲ್ಲಿ ಬಿಲ್ಬೋರ್ಡ್ ೨೦೦ ರ ಪಟ್ಟಿಯಲ್ಲಿ ೪೨ ನೇ ಸ್ಥಾನವನ್ನು ಗಳಿಸಿತು.[] ಫೇಸ್ ಲಿಫ್ಟ್ ತಕ್ಷಣದ ಯಶಸ್ಸಾಗಿರಲಿಲ್ಲ, MTVಯು "ಮ್ಯಾನ್ ಇನ್ ದಿ ಬಾಕ್ಸ್" ಹಾಡನ್ನು ನಿಯಮಿತ ಹಗಲಿನ ಆವರ್ತನಕ್ಕೆ ಸೇರಿಸುವ ತನಕ ಅದು ಬಿಡುಗಡೆಯಾದ ಮೊದಲ ಆರು ತಿಂಗಳಲ್ಲಿ ೪೦,೦೦೦ ಕ್ಕೂ ಕಡಿಮೆ ಪ್ರತಿಗಳು ಮಾರಾಟವಾಯಿತು.[೧೦] ಈ ಏಕಗೀತೆಯು ಮೇನ್ ಸ್ಟ್ರೀಮ್ ರಾಕ್ ಚಾರ್ಟ್ಸ್ ನಲ್ಲಿ ೧೮ ನೇ ಸ್ಥಾನವನ್ನು ಗಳಿಸಿತು, ಇದರ ನಂತರ ಬಿಡುಗಡೆಯಾದ ಏಕಗೀತೆ ಸೀ ಆಫ್ ಸಾರೋ, ೨೭ ನೇ ಸ್ಥಾನವನ್ನು ತಲುಪಿತು.[೧೧] ಹಾಗು ಆರು ವಾರಗಳಲ್ಲಿ ಫೇಸ್ ಲಿಫ್ಟ್ USನಲ್ಲಿ ೪೦೦,೦೦೦ ಪ್ರತಿಗಳನ್ನು ಮಾರಾಟ ಮಾಡಿತು.[೧೦] ಆಲ್ಬಮ್ ನಿರ್ಣಾಯಕ ಯಶಸ್ಸನ್ನು ಗಳಿಸಿತು, ಜೊತೆಗೆ ಆಲ್ ಮ್ಯೂಸಿಕ್ ನ ಸ್ಟೀವ್ ಹುಯೆ ಫೇಸ್ ಲಿಫ್ಟ್ ನ್ನು "ಗ್ರುಂಜ್ ಹಾಗು ಪರ್ಯಾಯ ರಾಕ್ ಶೈಲಿಗಳೆಡೆಗೆ ಪ್ರೇಕ್ಷಕರ ಗಮನ ಸೆಳೆದ ಅತ್ಯಂತ ಪ್ರಮುಖ ಧ್ವನಿಮುದ್ರಣಗಳಲ್ಲಿ ಒಂದೆಂದು" ಉಲ್ಲೇಖಿಸಿದರು.[೧೨] ೧೯೯೦ ರ ಕೊನೆಯ ಭಾಗದಲ್ಲಿ ರೆಕಾರ್ಡಿಂಗ್ ಇಂಡಸ್ಟ್ರಿ ಅಸೋಸಿಯೇಶನ್ ಆಫ್ ಅಮೆರಿಕ ಫೇಸ್ ಲಿಫ್ಟ್ ಗೆ ಗೋಲ್ಡ್ ಎಂದು ಪ್ರಮಾಣೀಕರಿಸಿತು, ಈ ನಡುವೆ ವಾದ್ಯ ವೃಂದವು ಪ್ರೇಕ್ಷಕರನ್ನು ತನ್ನ ಗಾಯನ ಮೋಡಿಯಿಂದ ಮಂತ್ರಮುಗ್ದಗೊಳಿಸಿತು, ಜೊತೆಗೆ ಇಗ್ಗಿ ಪಾಪ್,[೧೩] ವ್ಯಾನ್ ಹಲೆನ್, ಪಾಯ್ಸನ್,[] ಹಾಗು ಎಕ್ಸ್ಟ್ರೀಮ್ ನಂತಹ ಕಲಾವಿದರನ್ನು ತನ್ನ ತಂಡದ ಮಡಿಲಿಗೆ ಹಾಕಿಕೊಂಡಿತು.[೧೦] ೧೯೯೧ ರ ಆರಂಭದಲ್ಲಿ, ಅಲಿಸ್ ಇನ್ ಚೈನ್ಸ್, ಆಂಥ್ರಾಕ್ಸ್, ಮೆಗಾಡೆಟ್, ಹಾಗು ಸ್ಲಯೇರ್ ವಾದ್ಯವೃಂದಗಳೊಂದಿಗೆ ಕ್ಲಾಶ್ ಆಫ್ ದಿ ಟೈಟನ್ಸ್ ಗೆ ಆರಂಭಿಕ ಸ್ಥಾನವನ್ನು ಒದಗಿಸಿಕೊಡುವುದರ ಜೊತೆಗೆ ವಾದ್ಯವೃಂದವನ್ನು ವ್ಯಾಪಕ ಮೆಟಲ್ ಶೈಲಿಯ ಸಂಗೀತದ ಪ್ರೇಕ್ಷಕರಿಗೆ ಪರಿಚಯಿಸಿತು.[೧೪] "ಮ್ಯಾನ್ ಇನ್ ದಿ ಬಾಕ್ಸ್" ಗಾಗಿ ಅಲಿಸ್ ಇನ್ ಚೈನ್ಸ್ ನ್ನು ಅತ್ಯುತ್ತಮ ಹಾರ್ಡ್ ರಾಕ್ ಪ್ರದರ್ಶನಕ್ಕೆ ನೀಡಲಾಗುವ ಗ್ರ್ಯಾಮಿ ಪ್ರಶಸ್ತಿಗೆ ೧೯೯೨ ರಲ್ಲಿ ನಾಮನಿರ್ದೇಶನ ಮಾಡಲಾಯಿತು, ಆದರೆ ಪ್ರಶಸ್ತಿಯು ೧೯೯೧ ರ ಆಲ್ಬಮ್ ಫಾರ್ ಅನ್ಲಾಫುಲ್ ಕಾರ್ನಲ್ ನಾಲೆಡ್ಜ್ ಗಾಗಿ ವ್ಯಾನ್ ಹಲೆನ್‌ರ ಪಾಲಾಯಿತು.[೧೫]

 
ವಾದ್ಯವೃಂದದ ಸಹ ಸಂಸ್ಥಾಪಕ ಗಿಟಾರ್ ವಾದಕ ಜೆರ್ರಿ ಕ್ಯಾಂಟ್ರೆಲ್.ವಾದ್ಯವೃಂದದ ಗಮನಾರ್ಹ ಧ್ವನಿಮುದ್ರಿಕೆಗಳನ್ನು ಸ್ಟಾಲಿ ಜೊತೆಗೂಡಿ ಹೊರತಂದಿರುವ ಕೀರ್ತಿ ಇವರಿಗೂ ಸಲ್ಲುತ್ತದೆ.

ಪ್ರವಾಸದ ನಂತರ, ಅಲಿಸ್ ಇನ್ ಚೈನ್ಸ್ ವಾದ್ಯವೃಂದವು ತಮ್ಮ ಮುಂದಿನ ಆಲ್ಬಮ್ ಗಾಗಿ ಡೆಮೊಗಳನ್ನು ಧ್ವನಿಮುದ್ರಣ ಮಾಡಲು ಸ್ಟುಡಿಯೋವನ್ನು ಪ್ರವೇಶಿಸಿತು, ಆದರೆ ಬದಲಿಗೆ ಐದು ಧ್ವನಿ ತರಂಗದ ಸಂಗೀತದ(ಅಕೌಸ್ಟಿಕ್) ಹಾಡುಗಳ ಧ್ವನಿಮುದ್ರಣದಲ್ಲಿ ಕೊನೆಗೊಂಡಿತು.[೧೦] ಸ್ಟುಡಿಯೋದಲ್ಲಿರುವ, ಡ್ರಂ ವಾದಕ ಸೀನ್ ಕಿನ್ನೆಯ್ "ಸ್ಯಾಪ್ ಎಂಬ EPಯನ್ನು ಮಾಡುವ" ಕನಸನ್ನು ಹೊತ್ತಿದ್ದರು.[೧೩] ವಾದ್ಯವೃಂದವು "ವಿಧಿಯೊಂದಿಗೆ ಇರುಸುಮುರುಸಿನ ಸ್ಥಿತಿಗೆ" ಒಳಗಾಗದಿರಲು ನಿರ್ಧರಿಸಿತು ಹಾಗು ಮಾರ್ಚ್ ೨೧, ೧೯೯೨ ರಲ್ಲಿ ಅಲಿಸ್ ಇನ್ ಚೈನ್ಸ್ ತಮ್ಮ ಎರಡನೇ EP ಸ್ಯಾಪ್ ನ್ನು ಬಿಡುಗಡೆ ಮಾಡಿತು. EPಯು ನಿರ್ವಾಣದ ನೆವರ್ ಮೈಂಡ್ ಬಿಲ್ಬೋರ್ಡ್ ೨೦೦ ರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾಗ ಬಿಡುಗಡೆಯಾಯಿತು, ಇದರ ಪರಿಣಾಮವಾಗಿ ಸಿಯಾಟಲ್ ಮೂಲದ ವಾದ್ಯವೃಂದಗಳ ಜನಪ್ರಿಯತೆಯು ಹೆಚ್ಚಾಯಿತು, ಹಾಗು ಗ್ರುಂಜ್ ಸಂಗೀತಕ್ಕೂ ಹೆಚ್ಚಿನ ಜನಪ್ರಿಯತೆ ದೊರೆಯಿತು.[೧೦] ಸ್ಯಾಪ್ ಶೀಘ್ರದಲ್ಲೇ ಚಿನ್ನದ ಪ್ರಮಾಣೀಕರಣ ಪಡೆಯಿತು. EPಯು ಹಾರ್ಟ್ ವಾದ್ಯವೃಂದದ ಆನ್ ವಿಲ್ಸನ್ ರ ಅತಿಥಿ ಗಾಯನವನ್ನು ಒಳಗೊಂಡಿದೆ, ಅವರು ಸ್ಟಾಲಿ ಹಾಗು ಕ್ಯಾಂಟ್ರೆಲ್ ಗೆ "ಬ್ರದರ್", ಆಮ್ ಐ ಇನ್ಸೈಡ್" ಹಾಗು "ಲವ್ ಸಾಂಗ್" ನ ಸಂಗೀತಮೇಳಗಳಲ್ಲಿ ಜತೆಗೂಡಿದರು. EPಯು ಮುಧೋನೆಯ್ ವಾದ್ಯವೃಂದದ ಮಾರ್ಕ್ ಆರ್ಮ್ ಹಾಗು ಸೌಂಡ್ ಗಾರ್ಡನ್ ನ ಕ್ರಿಸ್ ಕಾರ್ನೆಲ್ ರ ಗಾಯನಗಳನ್ನು ಒಳಗೊಂಡಿತ್ತು, ಇವರಿಬ್ಬರು ಅಲಿಸ್ ಮಡ್ ಗಾರ್ಡನ್ ಗೆ ಸಮರ್ಪಿತವಾದ ಮಾಹಿತಿ ಒಳಗೊಂಡ "ರೈಟ್ ಟರ್ನ್" ಹಾಡಿನ ಸಾಲುಗಳನ್ನು ಒಟ್ಟಾಗಿ ಹಾಡಿದ್ದಾರೆ.[೧೬] ೧೯೯೨ ರಲ್ಲಿ, ಅಲಿಸ್ ಇನ್ ಚೈನ್ಸ್ ಕ್ಯಾಮೆರೋನ್ ಕ್ರೊವೆಯ ಚಿತ್ರ ಸಿಂಗಲ್ಸ್ ನಲ್ಲಿ ಕಾಣಿಸಿಕೊಂಡು, "ಬಾರ್ ಬ್ಯಾಂಡ್" ಪ್ರದರ್ಶನ ನೀಡಿತು.[೧೭] ವಾದ್ಯವೃಂದವು "ವುಡ್?" ಎಂಬ ಹಾಡನ್ನೂ ಚಿತ್ರದ ಧ್ವನಿಪಥಕ್ಕೆ ಕೊಡುಗೆಯಾಗಿ ನೀಡಿತು. ಅದರ ವಿಡಿಯೋ ೧೯೯೩ ರ MTV ವಿಡಿಯೋ ಮ್ಯೂಸಿಕ್ ಅವಾರ್ಡ್ಸ್ ನಲ್ಲಿ ಚಿತ್ರವೊಂದರ ಅತ್ಯುತ್ತಮ ವಿಡಿಯೊಎಂಬ ಪ್ರಶಸ್ತಿಯನ್ನು ಗಳಿಸಿತು.[೧೮]

ಡರ್ಟ್ (1992–93)

ಬದಲಾಯಿಸಿ

ಫೆಬ್ರವರಿ 1992ರಲ್ಲಿ, ವಾದ್ಯವೃಂದವು ಸ್ಟುಡಿಯೋಕ್ಕೆ ಮರಳಿತು. ಹೊಸ ಹಾಡುಗಳನ್ನು ಮೂಲವಾಗಿ ರಸ್ತೆಯ ಜೀವನದ ಬಗ್ಗೆ ಬರೆಯಲಾಯಿತಾದರೂ, ಹಾಡಿನ ವಸ್ತುವು ಫೇಸ್ ಲಿಫ್ಟ್ ಗಿಂತ ಅಧಿಕ ವಿಷಾದ ಭಾವನೆಯನ್ನು ಹೊಂದಿತ್ತು, ಆಲ್ಬಮಿನ ಹನ್ನೆರಡು ಹಾಡುಗಳಲ್ಲಿ ಆರು ಹಾಡುಗಳು ಮಾದಕದ್ರವ್ಯದ ವ್ಯಸನಕ್ಕೆ ಸಂಬಂಧಿಸಿದ್ದವು.[೧೯] ಈ ಆಲ್ಬಮಿಗಾಗಿ ನಾವು ಸಾಕಷ್ಟು ಆತ್ಮ ಶೋಧನೆ ಮಾಡಿಕೊಂಡೆವು. ಇದು ಸಾಕಷ್ಟು ತೀವ್ರತರವಾದ ಭಾವನೆಗಳನ್ನು ಒಳಗೊಂಡಿದೆ."[೧೯] "ನಾವು ನಮ್ಮೊಳಗಿನ ನಿತ್ಯದ ಕ್ರೂರತೆಗಳನ್ನು ಸಂಗೀತ ಮೂಲಕ ಎದುರುಗೊಳ್ಳುತ್ತಿದ್ದೇವೆ ಎಂದು ಕ್ಯಾಂಟ್ರೆಲ್ ಹೇಳುತ್ತಾರೆ. ಹಗಲಿನಲ್ಲಿ ನಿರ್ಮಾಣಗೊಳ್ಳುವ ಎಲ್ಲ ವಿಷಕಾರಿ ಪರಿಸ್ಥಿತಿಗಳನ್ನು ಸಂಗೀತ ನುಡಿಸುವುದರ ಮೂಲಕ ಸ್ವಚ್ಛಮಾಡುತ್ತೇವೆ".[] ಸೆಪ್ಟೆಂಬರ್ ೨೯, ೧೯೯೨ ರಲ್ಲಿ, ಅಲಿಸ್ ಇನ್ ಚೈನ್ಸ್ ತಮ್ಮ ಎರಡನೇ ಆಲ್ಬಮ್, ಡರ್ಟ್ ನ್ನು ಬಿಡುಗಡೆ ಮಾಡಿತು. ಆಲ್ಬಮ್ ಬಿಲ್ಬೋರ್ಡ್ ೨೦೦ ರಲ್ಲಿ ಆರನೇ ಸ್ಥಾನಕ್ಕೆ ಏರಿತು. ಅದರ ಬಿಡುಗಡೆಯ ನಂತರ ನಾಲ್ಕು ಬಾರಿ ಪ್ಲ್ಯಾಟಿನಮ್ ದರ್ಜೆ ನೀಡಿ RIAA ಪ್ರಮಾಣೀಕರಿಸಿತು, ಇದು ಡರ್ಟ್ ನ್ನು ವಾದ್ಯವೃಂದದ ಅತ್ಯಧಿಕ ಮಾರಾಟಗೊಂಡ ಆಲ್ಬಮ್ ಆಗಿ ಪರಿವರ್ತಿಸಿತು.[][] ಆಲ್ಬಮ್ ನಿರ್ಣಾಯಕ ಯಶಸ್ಸನ್ನು ಗಳಿಸಿತು, ಜೊತೆಗೆ ಆಲ್ ಮ್ಯೂಸಿಕ್ ನ ಸ್ಟೀವ್ ಹುಯೆ ಆಲ್ಬಮ್ ನ್ನು ಒಂದು "ಪ್ರಮುಖ ಕಲಾತ್ಮಕ ಅಭಿವ್ಯಕ್ತಿ ಎಂದೂ ಹಾಗು ಮಾಸ್ಟರ್‌ಪೀಸ್(ಅತ್ಯುತ್ತಮ ಹಾಡು)ಧ್ವನಿಮುದ್ರಣಕ್ಕೆ ತೀರಾ ಸಮೀಪದಲ್ಲಿದ್ದೆವು ಎಂದು ಪ್ರಶಂಸಿಸಿದರು.[೨೦] ಗಿಟಾರ್ ವರ್ಲ್ಡ್ ನ ಕ್ರಿಸ್ ಗಿಲ್ ಡರ್ಟ್ ನ್ನು "ಅಗಾಧ ಮತ್ತು ಅಶುಭಸೂಚಕವಾದರೂ ವಿಲಕ್ಷಣ ಮತ್ತು ಆತ್ಮೀಯತೆ ಹಾಗೂ ಸಂಪೂರ್ಣ ಕರಾಳ ಮತ್ತು ಪಾಶವೀಯ ಪ್ರಾಮಾಣಿಕತೆ " ಎಂದು ಕರೆದರು.[೧೦] ಡರ್ಟ್ "ರೂಸ್ಟರ್", "ದೆಮ್ ಬೋನ್ಸ್", ಹಾಗು "ಡೌನ್ ಇನ್ ಏ ಹೋಲ್" ಗಳು ಸೇರಿದಂತೆ ಅಗ್ರ ೩೦ ಏಕಗೀತೆಗಳಲ್ಲಿ ಐದನೇ ಸ್ಥಾನಕ್ಕೆ ಏರುವುದರ ಜೊತೆಗೆ ಪಟ್ಟಿಯಲ್ಲಿ ಸ್ಥಾನವನ್ನು ಸುಮಾರು ಒಂದು ವರ್ಷಗಳ ಕಾಲ ಹಾಗೆ ಉಳಿಸಿಕೊಂಡಿತ್ತು.[][೨೧] ಅಲಿಸ್ ಇನ್ ಚೈನ್ಸ್, ಒಜ್ಜಿ ಆಸ್ಬಾರ್ನ್ ರ ನೋ ಮೋರ್ ಟಿಯರ್ಸ್ ನ ಪ್ರವಾಸದಲ್ಲಿ ಆರಂಭಿಕ ಪ್ರದರ್ಶನ ನೀಡಲು ಸೇರ್ಪಡೆಗೊಳಿಸಲಾಯಿತು, ಆದರೆ ಪ್ರವಾಸದ ಕೆಲ ದಿನಗಳ ಮುಂಚೆ, ಲಯ್ನೆ ಸ್ಟಾಲಿ ಒಂದು ATV ಅಪಘಾತದಲ್ಲಿ ತಮ್ಮ ಕಾಲನ್ನು ಮುರಿದುಕೊಂಡರು, ಇದರಿಂದಾಗಿ ಅವರು ಊರುಗೋಲಿನ ಸಹಾಯದಿಂದ ವೇದಿಕೆಯ ಮೇಲೆ ಪ್ರದರ್ಶನ ನೀಡುವಂತಾಯಿತು.[೧೦] ಪ್ರವಾಸದ ಸಂದರ್ಭದಲ್ಲಿ, ಸ್ಟಾರ್ ವಾದ್ಯವೃಂದದಿಂದ ಹೊರಬೀಳುತ್ತಾರೆ, ಹಾಗು ಇವರ ಬದಲಿಗೆ ಒಜ್ಜಿ ಆಸ್ಬಾರ್ನ್ ರ ವಾದ್ಯವೃಂದದಲ್ಲಿದ್ದ ಮಾಜಿ ಮಂದ್ರವಾದ್ಯ ವಾದಕ ಮೈಕ್ ಐನೆಜ್ ಪ್ರದರ್ಶನ ನೀಡುತ್ತಾರೆ.[೨೨] ೧೯೯೩ ರಲ್ಲಿ, ವಾದ್ಯವೃಂದವು ಐನೆಜ್ ರೊಂದಿಗೆ ಲಾಸ್ಟ್ ಆಕ್ಷನ್ ಹೀರೊ ಧ್ವನಿಮುದ್ರಿಕೆಗಾಗಿ "ವಾಟ್ ದಿ ಹೆಲ್ ಹ್ಯಾವ್ ಐ" ಹಾಗು "ಏ ಲಿಟಲ್ ಬಿಟರ್" ಎಂಬ ಎರಡು ಹಾಡುಗಳ ಧ್ವನಿ ಮುದ್ರಣ ಮಾಡುತ್ತದೆ.[೨೩] ೧೯೯೩ ರ ಬೇಸಿಗೆಯಲ್ಲಿ, ಅಲಿಸ್ ಇನ್ ಚೈನ್ಸ್ ವಾದ್ಯವೃಂದವು ಪರ್ಯಾಯ ಸಂಗೀತ ಉತ್ಸವ ಲೊಲ್ಲಪಲೋಜ ದೊಂದಿಗೆ ಪ್ರವಾಸ ಮಾಡುತ್ತದೆ, ಇದು ಸ್ಟಾಲಿ ರೊಂದಿಗಿನ ಕಡೆಯ ಪ್ರಮುಖ ಪ್ರವಾಸ.[೨೪]

ಜಾರ್ ಆಫ್ ಫ್ಲೈಸ್ (೧೯೯೩–೯೪)

ಬದಲಾಯಿಸಿ

೧೯೯೩ ರಲ್ಲಿ ಅಲಿಸ್ ಇನ್ ಚೈನ್ಸ್'ನ ವ್ಯಾಪಕ ವಿಶ್ವ ಪ್ರವಾಸದ ನಂತರ, ಸ್ಟಾಲಿ, ವಾದ್ಯವೃಂದವು "ಸ್ಟುಡಿಯೋಕ್ಕೆ ತಮ್ಮ ಅಕೌಸ್ಟಿಕ್(ಧ್ವನಿ ತರಂಗದ ಸಂಗೀತ) ಗಿಟಾರ್‌‌ಗಳೊಂದಿಗೆ ಹೋಗಿ ಅಲ್ಲಿ ಏನು ನಡೆದಿದೆ ಎಂಬುದನ್ನು ನೋಡಬೇಕು" ಎಂದು ಹೇಳುತ್ತಾರೆ.[೨೫] "ಆ ಸಮಯದಲ್ಲಿ ಬಿಡುಗಡೆಯಾಗಬೇಕಿದ್ದ ಧ್ವನಿಮುದ್ರಣದ ಬಗ್ಗೆ ನಾವು ವಾಸ್ತವವಾಗಿ ಯೋಜಿಸಿರಲಿಲ್ಲ. ಆದರೆ ಧ್ವನಿಮುದ್ರಣ ಸಂಸ್ಥೆಯು ಇದನ್ನು ಕೇಳಿ ಬಹಳ ಇಷ್ಟ ಪಟ್ಟಿತು. ನಮಗೆ, ಇದು ನಾಲ್ಕು ಮಂದಿ ಒಟ್ಟಾಗಿ ಸ್ಟುಡಿಯೋನಲ್ಲಿ ಕಲೆತು ಸಂಗೀತವನ್ನು ಸಂಯೋಜಿಸುವ ಅನುಭವ ಮಾತ್ರ ಆಗಿತ್ತು."[೨೫] ನಾವು ಮೂಲತಃ ಸಾರ್ವಜನಿಕವಾಗಿ ಬಿಡುಗಡೆಗೆ ಎಂದೂ ಉದ್ದೇಶಿಸಿರಲಿಲ್ಲ, ಕೊಲಂಬಿಯಾ ರೆಕಾರ್ಡ್ಸ್, ಅಲಿಸ್ ಇನ್ ಚೈನ್ಸ್'ನ ಎರಡನೇ ಧ್ವನಿತರಂಗ ಆಧಾರಿತ EP ಜಾರ್ ಆಫ್ ಫ್ಲೈಸ್ ನ್ನು ಜನವರಿ ೨೫, ೧೯೯೪ ರಲ್ಲಿ ಬಿಡುಗಡೆ ಮಾಡಿತು. ಒಂದು ವಾರದಲ್ಲಿ ಬರೆದು ಧ್ವನಿಮುದ್ರಣ ಮಾಡಲಾದ,[೨೬] ಜಾರ್ ಆಫ್ ಫ್ಲೈಸ್ ಮೊದಲ ಬಾರಿಗೆ ಬಿಲ್ಬೋರ್ಡ್ ೨೦೦ ರಲ್ಲಿ ಅಗ್ರ ಸ್ಥಾನವನ್ನು ಗಳಿಸಿತು. ಇದು ಪ್ರಪ್ರಥಮ EP ಹಾಗು ಬಿಡುಗಡೆಯ ನಂತರ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಗಳಿಸಿದ ಮೊದಲ ಅಲಿಸ್ ಇನ್ ಚೈನ್ಸ್ ಬಿಡುಗಡೆ ಎನಿಸಿತು.[] ರೋಲಿಂಗ್ ಸ್ಟೋನ್ ನ ಪಾಲ್ ಇವಾನ್ಸ್ EPಯನ್ನು "ಅಸ್ಪಷ್ಟ ಸೌಂದರ್ಯ"ದಿಂದ ಕೂಡಿದೆ ಎಂದು ಹೇಳುತ್ತಾರೆ[೨೭] ಹಾಗು ಸ್ಟೀವ್ ಹುಯೆ "ಜಾರ್ ಆಫ್ ಫ್ಲೈಸ್ ಕಡಿಮೆ ತೀವ್ರತೆಯ ಬೆರಗನ್ನು, ಯಾತನಾಪೂರ್ವಕ ವೈಭವತೆಯನ್ನು ಹಾಗು ಘಾಸಿಗೊಳಿಸುವ ವಿಷಾದವನ್ನು ಏಕಕಾಲದಲ್ಲಿ ಉಂಟುಮಾಡುತ್ತದೆಂದು" ಹೇಳುತ್ತಾರೆ.[೨೮] ಜಾರ್ ಆಫ್ ಫ್ಲೈಸ್ ಮೇನ್ ಸ್ಟ್ರೀಮ್ ರಾಕ್ ಚಾರ್ಟ್ಸ್ ನಲ್ಲಿ ಅಲಿಸ್ ಇನ್ ಚೈನ್ಸ್‌ನ ಮೊದಲ ಅಗ್ರಸ್ಥಾನದ ಏಕಗೀತೆ "ನೋ ಎಕ್ಸ್‌ಕ್ಯೂಸಸ್" ಒಳಗೊಂಡಿದೆ. ಎರಡನೇ ಏಕಗೀತೆ, "ಐ ಸ್ಟೇ ಅವೇ" ಮೇನ್ ಸ್ಟ್ರೀಮ್ ರಾಕ್ ಚಾರ್ಟ್ಸ್ ನಲ್ಲಿ ಹತ್ತನೇ ಸ್ಥಾನವನ್ನು ಗಳಿಸಿತು, ಜೊತೆಗೆ ಆಲ್ಬಮ್ ನ ಕಡೆ ಏಕಗೀತೆ "ಡೋಂಟ್ ಫಾಲೋ" ೨೫ ನೇ ಸ್ಥಾನವನ್ನು ಗಳಿಸಿತು.[] ಜಾರ್ ಆಫ್ ಫ್ಲೈಸ್ ನ ಬಿಡುಗಡೆಯ ನಂತರ, ಲಯ್ನೆ ಸ್ಟಾಲಿ, ಹೆರೊಯಿನ್ ಮಾದಕ ವ್ಯಸನದ ಚಟದಿಂದಾಗಿ ಪುನಶ್ಚೈತನ್ಯ ಕೇಂದ್ರಕ್ಕೆ ದಾಖಲಾದರು.[೨೯] ವಾದ್ಯವೃಂದವು 1994ರ ಬೇಸಿಗೆಯಲ್ಲಿ ಮೆಟಾಲಿಕ ಹಾಗು ಸ್ಯೂಯಿಸೈಡಲ್ ಟೆನ್ಡೆನ್ಸೀಸ್ ಜೊತೆ ಪ್ರವಾಸದ ಯೋಜನೆಯನ್ನು ಹಮ್ಮಿಕೊಂಡಿತ್ತು. ಆದರೆ ಪ್ರವಾಸಕ್ಕಾಗಿ ಪೂರ್ವಾಭ್ಯಾಸ ತಯಾರಿ ನಡೆಸುವ ಸಂದರ್ಭದಲ್ಲಿ, ಸ್ಟಾಲಿ ಮತ್ತೆ ಹೆರೊಯಿನ್ ಬಳಸಲು ಆರಂಭಿಸಿದರು.[೨೯] ಸ್ಟಾಲಿ ಪರಿಸ್ಥಿತಿಯಿಂದಾಗಿ ವಾದ್ಯವೃಂದದ ಇತರ ಸದಸ್ಯರು ಪ್ರವಾಸ ಹೊರಡುವ ಒಂದು ದಿನಕ್ಕೆ ಮುಂಚಿತವಾಗಿ ತಮ್ಮ ಎಲ್ಲ ಕಾರ್ಯಕ್ರಮಗಳನ್ನು ರದ್ದುಪಡಿಸಿದರು, ಇದು ವಾದ್ಯವೃಂದದ ವಿರಾಮಕ್ಕೆ ಕಾರಣವಾಯಿತು.[೩೦]

ಅಲಿಸ್ ಇನ್ ಚೈನ್ಸ್ (೧೯೯೫–೯೬)

ಬದಲಾಯಿಸಿ

ಅಲಿಸ್ ಇನ್ ಚೈನ್ಸ್, ೧೯೯೫ ರ ಅವಧಿಯಲ್ಲಿ ನಿಷ್ಕ್ರಿಯವಾಯಿತು, ಸ್ಟಾಲಿ "ಗ್ರುಂಜ್ ಸೂಪರ್ ಗ್ರೂಪ್" ಮ್ಯಾಡ್ ಸೀಸನ್ ಗೆ ಸೇರ್ಪಡೆಯಾದರು. ತಂಡದಲ್ಲಿ ಪರ್ಲ್ ಜಾಮ್ ನ ಗಿಟಾರ್ ವಾದಕ ಮೈಕ್ ಮ್ಯಾಕ್ ಕ್ರೆಡಿ, ದಿ ವಾಕ್ ಅಬೌಟ್ಸ್ ನ ಜಾನ್ ಬೇಕರ್ ಸಾಂಡರ್ಸ್ ಹಾಗು ಸ್ಕ್ರೀಮಿಂಗ್ ಟ್ರೀಸ್ ನ ಡ್ರಂ ವಾದಕ ಬಾರೆಟ್ ಮಾರ್ಟಿನ್ ಇದ್ದರು. ಮ್ಯಾಡ್ ಸೀಸನ್ ಅಬೋವ್ ಎಂಬ ಆಲ್ಬಮ್ ನ್ನು ಬಿಡುಗಡೆ ಮಾಡಿತು. ಇದರಲ್ಲಿ ಸ್ಟಾಲಿ ಪ್ರಧಾನ ಗಾಯನ ಹಾಗು ಆಲ್ಬಮ್ ನಲ್ಲಿ ಅವರ ಕಲಾತ್ಮಕ ಚಿತ್ರಗೆಲಸವನ್ನು ಒದಗಿಸಿದರು. ಆಲ್ಬಮ್ "ರಿವರ್ ಆಫ್ ಡಿಸೀಟ್ಎಂಬ ಎರಡನೇ ಸ್ಥಾನದ(ನಂಬರ್ ಟು) ಏಕಗೀತೆಯನ್ನು ಕೊಟ್ಟಿತು ಹಾಗು ಲೈವ್ ಅಟ್ ದಿ ಮೂರ್ ನ ಹೋಮ್ ವಿಡಿಯೊ(ಮನೆಗಳ ಮನರಂಜನೆ ವಿಡಿಯೊ) ಬಿಡುಗಡೆ ಮಾಡಿತು.[೨೧] ಏಪ್ರಿಲ್ ೧೯೯೫ ರಲ್ಲಿ, ಅಲಿಸ್ ಇನ್ ಚೈನ್ಸ್ ನಿರ್ಮಾಪಕ ಟೋಬಿ ರೈಟ್ ರೊಂದಿಗೆ ಸಿಯಾಟಲ್ ನ ಬ್ಯಾಡ್ ಅನಿಮಲ್ಸ್ ಸ್ಟುಡಿಯೋ ವನ್ನು ಪ್ರವೇಶಿಸಿತು, ಇವರು ಈ ಮೊದಲು ಕೊರ್ರೋಷನ್ ಆಫ್ ಕಂಫರ್ಮಿಟಿ ಹಾಗು ಸ್ಲೇಯರ್ ವಾದ್ಯವೃಂದಗಳ ಜೊತೆಗೆ ಕೆಲಸ ಮಾಡಿದ್ದರು.[೩೧] ಸ್ಟುಡಿಯೋದಲ್ಲಿ, "ಗ್ರೈಂಡ್" ಹಾಡಿನ ಕೆಳಮಟ್ಟದ ಆವೃತ್ತಿಯು ರೇಡಿಯೋಕ್ಕೆ ಸೋರಿಹೋಯಿತು, ಜೊತೆಗೆ ಹಲವು ಬಾರಿ ಪ್ರಸಾರವಾಯಿತು.[೩೨] ಅಕ್ಟೋಬರ್ ೬, ೧೯೯೫ ರಲ್ಲಿ, ವಾದ್ಯವೃಂದವು ಉಪಗ್ರಹದ ಅಪ್ ಲಿಂಕ್ ಮೂಲಕ ರೇಡಿಯೋಗೆ ಹಾಡಿನ ಸ್ಟುಡಿಯೋ ರೂಪಾಂತರವನ್ನು ಬಿಡುಗಡೆ ಮಾಡಿತು.

ಚಿತ್ರ:Laynemtv.JPG
ಅಲಿಸ್ ಇನ್ ಚೈನ್ಸ್' ವಾದ್ಯವೃಂದವು ೧೯೯೬ ರಲ್ಲಿ ನಡೆಸಿಕೊಟ್ಟ MTV ಅನ್ ಪ್ಲಗ್ಡ್ ಸಂಗೀತ ಕಚೇರಿಯು ಲಯ್ನೆ ಸ್ಟಾಲಿ ರೊಂದಿಗಿನ ವಾದ್ಯವೃಂದದ ಕಡೆಯ ಪ್ರದರ್ಶನವಾಗಿತ್ತು (ಚಿತ್ರೀಕರಿಸಲಾಗಿದೆ).

ನವೆಂಬರ್ ೭, ೧೯೯೫ ರಲ್ಲಿ, ಕೊಲಂಬಿಯಾ ರೆಕಾರ್ಡ್ಸ್ ಅಲಿಸ್ ಇನ್ ಚೈನ್ಸ್ ನ ,[೩೧] ನಾಮಸೂಚಕ ಧ್ವನಿಮುದ್ರಿಕೆಯನ್ನು ಬಿಡುಗಡೆ ಮಾಡಿತು, ಇದು ಬಿಲ್ಬೋರ್ಡ್ ೨೦೦ ರಲ್ಲಿ ಮೊದಲ ಸ್ಥಾನವನ್ನು ಗಳಿಸಿತು. ಹಾಗು ಅಲ್ಲಿಂದೀಚೆಗೆ ಎರಡು ಬಾರಿ ಪ್ಲ್ಯಾಟಿನಮ್ ದರ್ಜೆಗೆ ಪ್ರಮಾಣೀಕರಿಸಲಾಯಿತು.[] ಆಲ್ಬಮ್ ನ ನಾಲ್ಕು ಏಕಗೀತೆಗಳಾದ, "ಗ್ರೈಂಡ್", "ಅಗೈನ್", "ಓವರ್ ನೌ", ಹಾಗು "ಹೆವೆನ್ ಬಿಸೈಡ್ ಯು" ನಲ್ಲಿ ಮೂರು ಏಕಗೀತೆಗಳಿಗೆ ಕ್ಯಾಂಟ್ರೆಲ್ ಪ್ರಮುಖ ಗಾಯಕರಾಗಿದ್ದರು. ರೋಲಿಂಗ್ ಸ್ಟೋನ್ ನ ಜೋನ್ ವಿಯೆಡರ್ಹಾರ್ನ್ ಆಲ್ಬಮ್ ನ್ನು "ವಿಮೋಚನೆ ಹಾಗು ಜ್ಞಾನ ವೃದ್ದಿಗೊಳಿಸುತ್ತದೆ ಹಾಗೂ ಹಾಡುಗಳು ಚಕಿತಗೊಳಿಸುವ, ದಿಗ್ಭ್ರಮೆಗೊಳಿಸುವ ಹಾಗು ಸ್ಪಷ್ಟ ಪರಿಣಾಮವನ್ನು ಉಂಟುಮಾಡುತ್ತವೆ ಎಂದು ಹೇಳಿದರು"[೩೩] "ಗಾಟ್ ಮೀ ರಾಂಗ್" ಹಾಡು ಸ್ಯಾಪ್ EP ಬಿಡುಗಡೆಯಾದ ನಂತರ ಮೂರು ವರ್ಷ ಅನಿರೀಕ್ಷಿತವಾಗಿ ಪಟ್ಟಿಯಲ್ಲಿ ಸ್ಥಾನ ಪಡೆಯಿತು. ಹಾಡನ್ನು ೧೯೯೫ ರಲ್ಲಿ ಸ್ವತಂತ್ರ ಚಲನಚಿತ್ರ ಕ್ಲರ್ಕ್ಸ್ ಗಾಗಿ ಧ್ವನಿಪಥದಲ್ಲಿ ಏಕಗೀತೆಯಾಗಿ ಮರುಬಿಡುಗಡೆ ಮಾಡಲಾಯಿತು. ಇದು ಮೇನ್ ಸ್ಟ್ರೀಮ್ ರಾಕ್ ಟ್ರ್ಯಾಕ್ಸ್ ಪಟ್ಟಿಯಲ್ಲಿ ಏಳನೇ ಸ್ಥಾನವನ್ನು ಗಳಿಸಿತು.[೩೪] ಮಾದಕದ್ರವ್ಯದ ಸೇವನೆಯ ವದಂತಿಗಳ ಹಿನ್ನೆಲೆಯಲ್ಲಿ ವಾದ್ಯವೃಂದವು ಅಲಿಸ್ ಇನ್ ಚೈನ್ಸ್ ಗೆ ಬೆಂಬಲವಾಗಿ ಪ್ರವಾಸ ಮಾಡದಿರಲು ನಿರ್ಧರಿಸಿತು.[೩೫][೩೬] ಅಲಿಸ್ ಇನ್ ಚೈನ್ಸ್ ಏಪ್ರಿಲ್ ೧೦,೧೯೯೬ ರಲ್ಲಿ MTV ಅನ್ ಪ್ಲಗ್ಡ್ ಗಾಗಿ ಮೂರು ವರ್ಷದ ಅಂತರದಲ್ಲಿ ತನ್ನ ಮೊದಲ ಸಂಗೀತ ಕಛೇರಿಯನ್ನು ನೀಡಲು ಪುನರುದಯಿಸಿತು, ಈ ಕಾರ್ಯಕ್ರಮವು ಎಲ್ಲ ಧ್ವನಿ ತರಂಗ ವಾದನಗಳ ಪಟ್ಟಿಯನ್ನು ಒಳಗೊಂಡಿತ್ತು.[೩೭][೩೮] ಪ್ರದರ್ಶನದಲ್ಲಿ ವಾದ್ಯವೃಂದವು ಪಟ್ಟಿಯಲ್ಲಿ ಅಗ್ರ ಸ್ಥಾನ ಗಳಿಸಿದ್ದ ಏಕಗೀತೆಗಳನ್ನು ಒಳಗೊಂಡಿತ್ತು, ಇದರಲ್ಲಿ "ಡೌನ್ ಇನ್ ಏ ಹೋಲ್", "ಹೆವೆನ್ ಬಿಸೈಡ್ ಯು", ಹಾಗು ವುಡ್?, ಹಾಗು ಒಂದು ಹೊಸ ಹಾಡು "ದಿ ಕಿಲ್ಲರ್ ಇಸ್ ಮೀ"ಯನ್ನು ಪರಿಚಯಿಸಿತು.[೧೧] ಈ ಪ್ರದರ್ಶನದಲ್ಲಿ ಎರಡನೇ ಗಿಟಾರ್ ವಾದಕ ಸ್ಕಾಟ್ ಆಲ್ಸನ್ ರ ಸೇರ್ಪಡೆಯೊಂದಿಗೆ, ಅಲಿಸ್ ಇನ್ ಚೈನ್ಸ್'ನ ಐದು ವಿಧದ ಬ್ಯಾಂಡ್ ಎಂದು ಗುರುತಿಸಲಾಯಿತು.[೩೭] ಪ್ರದರ್ಶನದ ನೇರ ಆಲ್ಬಮ್ ನ್ನು ಜುಲೈ ೧೯೯೬ ರಲ್ಲಿ ಬಿಡುಗಡೆ ಮಾಡಲಾಯಿತು, ಇದು ಬಿಲ್ಬೋರ್ಡ್ ೨೦೦ ರಲ್ಲಿ ಮೂರನೇ ಸ್ಥಾನವನ್ನು ಗಳಿಸಿತು ಜೊತೆಗೆ ಹೋಮ್ ವಿಡಿಯೊ(ಮನೆಗಳ ಮನರಂಜನೆಯ ವಿಡಿಯೊ)ಬಿಡುಗಡೆಯನ್ನು ಒಳಗೊಂಡಿತ್ತು, ಈ ಎರಡಕ್ಕೂ RIAA ಪ್ಲ್ಯಾಟಿನಮ್ ದರ್ಜೆ ಪ್ರಮಾಣೀಕರಣ ನೀಡಿತು.[] ಪುನರ್ಮಿಲನಗೊಂಡ ಮೂಲಕಿಸ್ ತಂಡದ ಬೆಂಬಲಾರ್ಥ ೧೯೯೬ ರ ಲೊಲ್ಲಪಲೋಜ ಪ್ರವಾಸದ ನಂತರ ಅಲಿಸ್ ಇನ್ ಚೈನ್ಸ್ ನಾಲ್ಕು ಪ್ರದರ್ಶನಗಳನ್ನು ನೀಡಿತು, ಜೊತೆಗೆ ಲಯ್ನೆ ಸ್ಟಾಲಿ ಜುಲೈ ೩, ೧೯೯೬ ರಲ್ಲಿ ಮಿಸ್ಸೌರಿಯ ಕಾನ್ಸಾಸ್ ನಗರದಲ್ಲಿ ಅಂತಿಮ ನೇರ ಪ್ರದರ್ಶನವನ್ನು ನೀಡಿದರು.[೩೯]

ವಾದ್ಯವೃಂದದ ವಿರಾಮ ಹಾಗು ಲಯ್ನೆ ಸ್ಟಾಲಿ ಮರಣ (೧೯೯೬-೨೦೦೨)

ಬದಲಾಯಿಸಿ

ಆದಾಗ್ಯೂ ಅಲಿಸ್ ಇನ್ ಚೈನ್ಸ್ ಅಧಿಕೃತವಾಗಿ ಎಂದಿಗೂ ವಿಸರ್ಜನೆಯಾಗಿರದಿದ್ದರೂ, ಸ್ಟಾಲಿ ಬಹಳ ಏಕಾಂಗಿಯಾದರು. ೧೯೯೬ ರಲ್ಲಿ ಅವರ ಮಾಜಿ-ನಿಶ್ಚಿತ ವಧು ಡೆಂರೀ ಪಾರೋಟ್ ರ ನಿಧನದಿಂದಾಗಿ ತಮ್ಮ ಸಿಯಾಟಲ್ ನ ವಾಸದ ಕೋಣೆಯಿಂದ ಅಪರೂಪವಾಗಿ ಹೊರಬರುತ್ತಿದ್ದರು, ಈಕೆ ಬ್ಯಾಕ್ಟಿರಿಯಲ್ ಎಂಡೋಕಾರ್ಡೈಟಿಸ್(ಹೃದಯದ ಒಳಪೊರೆಯ ಊತ)ದಿಂದ ಮರಣ ಹೊಂದಿದ್ದಳು.[೨೧] "ಮಾದಕವಸ್ತುಗಳು ವರ್ಷಾನುಗಟ್ಟಲೆ ನನಗೆ ಸಹಾಯ ಮಾಡಿದವು" ಎಂದು ಸ್ಟಾಲಿ ೧೯೯೬ ರಲ್ಲಿ ರೋಲಿಂಗ್ ಸ್ಟೋನ್ ಗೆ ಹೇಳುತ್ತಾರೆ, "ಹಾಗು ಈಗ ಅದು ನನ್ನ ವಿರುದ್ಧ ತಿರುಗಿಬಿದ್ದಿವೆ. ಈಗ ನಾನು ನರಕಯಾತನೆ ಅನುಭವಿಸುತ್ತಿದ್ದೇನೆ".[೩೬] ಹೊಸ ಅಲಿಸ್ ಇನ್ ಚೈನ್ಸ್ ವಿಷಯವಸ್ತುಗಳೊಂದಿಗೆ ಮುಂದುವರೆಯಲು ಸಾಧ್ಯವಾಗದ ಕಾರಣ, ಕ್ಯಾಂಟ್ರೆಲ್ ತಮ್ಮ ಮೊದಲ ಒಂಟಿ ಆಲ್ಬಮ್ ನ್ನು ೧೯೯೮ ರಲ್ಲಿ ಬಿಡುಗಡೆ ಮಾಡಿದರು, ಬೊಗ್ಗಿ ಡಿಪೋ ಎಂಬ ಹೆಸರಿನ ಈ ಆಲ್ಬಮ್ ಸೀನ್ ಕಿನ್ನೆಯ್ ಹಾಗು ಮೈಕ್ ಐನೆಜ್ ರನ್ನು ಒಳಗೊಂಡಿತ್ತು.[೪೦] ೧೯೯೮ ರಲ್ಲಿ, ಸ್ಟಾಲಿ ಅಲಿಸ್ ಇನ್ ಚೈನ್ಸ್ ವಾದ್ಯವೃಂದದೊಂದಿಗೆ ಮರು ಸೇರ್ಪಡೆಗೊಂಡು ಎರಡು ಹೊಸ ಹಾಡುಗಳ ಧ್ವನಿಮುದ್ರಣ ಮಾಡುತ್ತಾರೆ, "ಗೆಟ್ ಬಾರ್ನ್ ಅಗೈನ್" ಹಾಗು "ಡೈಡ್" ಮೂಲತಃ ಕ್ಯಾಂಟ್ರೆಲ್ ರ ಒಂಟಿ ಆಲ್ಬಮ್ ಗಾಗಿ ಬರೆದ ಹಾಡನ್ನು ೧೯೯೯ ರ ಶರತ್ಕಾಲದಲ್ಲಿ ಮ್ಯೂಸಿಕ್ ಬ್ಯಾಂಕ್ ನ ಬಾಕ್ಸ್ ಸೆಟ್ ನಲ್ಲಿ ಬಿಡುಗಡೆ ಮಾಡಲಾಯಿತು. ಈ ಸಂಕಲನವು ೪೮ ಹಾಡುಗಳನ್ನು ಒಳಗೊಂಡಿದೆ, ಇದರಲ್ಲಿ ಅಪೂರ್ವ ಹಾಡುಗಳು, ಡೆಮೊಗಳು, ಹಾಗು ಹಿಂದಿನ ಆಲ್ಬಮ್ ಹಾಡುಗಳನ್ನು ಒಳಗೊಂಡಿದೆ.[] ವಾದ್ಯವೃಂದವು Nothing Safe: Best of the Box ಹೆಸರಿನ ೧೫ ಹಾಡುಗಳ ಸಂಕಲನವನ್ನೂ ಸಹ ಬಿಡುಗಡೆ ಮಾಡಿತು, ಇದು ಮ್ಯೂಸಿಕ್ ಬ್ಯಾಂಕ್ ಗೆ ಮಾದರಿ ಯಾಗುವುದರ ಜೊತೆಗೆ ವಾದ್ಯವೃಂದದ ಮೊದಲ ಅತ್ಯುತ್ತಮ ಜನಪ್ರಿಯ ಗೀತೆಗಳ ಸಂಕಲನವಾಗಿತ್ತು. ವಾದ್ಯವೃಂದದ ಕಡೆ ಅಧಿಕೃತ ಬಿಡುಗಡೆಗಳಲ್ಲಿ ಲೈವ್ ಎಂಬ ಒಂದು ನೇರ ಪ್ರದರ್ಶನದ ಆಲ್ಬಮ್ ನ್ನು ಡಿಸೆಂಬರ್ ೫, ೨೦೦೦ ದಲ್ಲಿ ಹಾಗು ಎರಡನೇ ಅತ್ಯುತ್ತಮ ಜನಪ್ರಿಯ ಗೀತೆಗಳ ಸಂಕಲನ ಗ್ರೇಟೆಸ್ಟ್ ಹಿಟ್ಸ್ ನ್ನು ೨೦೦೧ ರಲ್ಲಿ ಬಿಡುಗಡೆ ಮಾಡಿತು.[೪೧] ೨೦೦೨ ರ ಸುಮಾರಿಗೆ, ಕ್ಯಾಂಟ್ರೆಲ್ ತಮ್ಮ ಎರಡನೇ ಒಂಟಿ ಆಲ್ಬಮ್ ಡಿಗ್ರೆಡೆಶನ್ ಟ್ರಿಪ್ ನ ಧ್ವನಿಮುದ್ರಣಾ ಕಾರ್ಯವನ್ನು ಪೂರ್ಣಗೊಳಿಸಿದರು. ೧೯೯೮ ರಲ್ಲಿ ಬರೆಯಲಾದ ಆಲ್ಬಮ್ ನ ಗೀತೆಗಳ ವಿಷಯವು ಕ್ಯಾಂಟ್ರೆಲ್ ಪರಿಗಣಿಸಿದ ಅಲಿಸ್ ಇನ್ ಚೈನ್ಸ್‌ನ ಅವಸಾನದ ಬಗ್ಗೆ ಬಹಳವಾಗಿ ಗಮನ ಹರಿಸಿತು. ಆಲ್ಬಮ್‌ನ ೨೦೦೨ ಜೂನ್ ಬಿಡುಗಡೆ ಸಮೀಪಿಸುತ್ತಿದ್ದಂತೆ ಅದು ಇನ್ನೂ ಸ್ಫುಟವಾಗಿ ಉಳಿಯಿತು. ಆದಾಗ್ಯೂ, ಅದೇ ವರ್ಷ ಮಾರ್ಚ್‌ನಲ್ಲಿ, ಕ್ಯಾಂಟ್ರೆಲ್ "ನಾವು ಈಗಲೂ ಸಮೀಪದಲ್ಲಿದ್ದೇವೆ, ಹೀಗಾಗಿ ಒಂದು ದಿನ ಏನನ್ನಾದರೂ ಸಾಧಿಸುವ ಸಾಧ್ಯತೆಯಿದೆ [ಅಲಿಸ್ ಇನ್ ಚೈನ್ಸ್], ಹಾಗು ಒಂದು ದಿನ ನಾವು ಸಾಧಿಸುತ್ತೇವೆಂಬ ಸಂಪೂರ್ಣ ಆಶಾವಾದ ಹೊಂದಿರುವುದಾಗಿ ಕ್ಯಾಂಟ್ರೆಲ್ ಪ್ರತಿಕ್ರಿಯಿಸಿದರು.[೪೨] ಮಾದಕದ್ರವ್ಯದ ವ್ಯಸನದ ಜತೆ ದಶಕದ ಕಾಲ ಹೋರಾಡಿದ ನಂತರ, ಲಯ್ನೆ ಸ್ಟಾಲಿ ೨೦೦೨ ರ ಏಪ್ರಿಲ್ ೨೦ರಂದು ತಮ್ಮ ಕೋಣೆಯಲ್ಲಿ ಸಾವನ್ನಪ್ಪಿರುವುದು ಕಂಡುಬಂತು [೪೩]. ಅವರ ಖಾತೆಯಿಂದ ಹಣವನ್ನು ಹಿಂತೆಗೆದುಕೊಳ್ಳದ ಬಗ್ಗೆ ಲೆಕ್ಕಿಗರು ಗಮನ ಹರಿಸಿದ್ದರಿಂದ ಅವರ ತಾಯಿ ಹಾಗು ಮಲತಂದೆ ಜಾಗೃತರಾದರು. ಪೋಲೀಸರ ಸಹಾಯದಿಂದ, ಅವರ ಕೋಣೆಯ ಬಾಗಿಲನ್ನು ಮುರಿದಾಗ ಅವನು ಸತ್ತುಬಿದ್ದಿರುವುದು ಗೋಚರಿಸಿತು. ಹೆರೊಯಿನ್ ಹಾಗು ಕೊಕೇನ್ ನ ಮಿಶ್ರಣದಿಂದ ಸ್ಟಾಲಿ ಮರಣ ಹೊಂದಿದ್ದಾರೆಂದು ಶವಪರೀಕ್ಷೆಯು ಬಹಿರಂಗಪಡಿಸಿತು. ಮಾದಕ ದ್ರವ್ಯದ ವ್ಯಸನದ ಜೊತೆಗೆ ಪ್ರತಿರಕ್ಷಿತ ವ್ಯವಸ್ಥೆಯ ರಾಜಿಯಿಂದ ಅವರ ದೇಹವು ಹೋರಾಟ ಮಾಡಲು ಅಶಕ್ತವಾದ ಕಾಯಿಲೆಗೆ ಗುರಿಯಾಗಿರಬಹುದೆಂದು ಅವನ ಸ್ನೇಹಿತರು ಊಹಿಸುತ್ತಾರೆ. ಅವರ ಸಾವಿನ ಎರಡು ವಾರಗಳ ನಂತರ ದೇಹವನ್ನು ಪತ್ತೆ ಹಚ್ಚಲಾಯಿತು.[೪೩] ಅವರ ಸಾವಿನ ಕೆಲವು ತಿಂಗಳ ಹಿಂದೆ ನೀಡಿದ ಕಡೆಯ ಸಂದರ್ಶನದಲ್ಲಿ, ಸ್ಟಾಲಿ "ನನಗೆ ಗೊತ್ತು ನಾನು ಸಾವಿನ ಅಂಚಿನಲ್ಲಿದ್ದೇನೆ, ನಾನು ಕ್ರಾಕ್ ಹಾಗು ಹೆರೊಯಿನ್ ನನ್ನು ವರ್ಷಗಳ ಕಾಲ ಸೇವಿಸಿದ್ದೇನೆ" ಎಂದು ಒಪ್ಪಿಕೊಳ್ಳುತ್ತಾರೆ. ನನಗೆ ಈ ರೀತಿಯಾಗಿ ನನ್ನ ಜೀವನವನ್ನು ಕೊನೆಗೊಳಿಸಿಕೊಳ್ಳಲು ಇಷ್ಟವಿರಲಿಲ್ಲ."[೪೪] ಕ್ಯಾಂಟ್ರೆಲ್, ಸ್ಟಾಲಿ ರ ಮರಣದ ಎರಡು ತಿಂಗಳ ನಂತರ ಬಿಡುಗಡೆ ಮಾಡಿದ ತಮ್ಮ 2002ರ ಒಂಟಿ ಆಲ್ಬಮ್ ಅವರ ಸ್ಮರಣಾರ್ಥ ಅರ್ಪಿಸಿದರು.[೪೫]

ಪುನರ್ಮಿಲನ (2005–08)

ಬದಲಾಯಿಸಿ
 
2006ರಲ್ಲಿ ಸೀನ್ ಕಿನ್ನೆಯ್ ಅಲಿಸ್ ಇನ್ ಚೈನ್ಸ್'ನ ಆರಂಭದಿಂದಲೂ ತಂಡದಲ್ಲಿ ಡ್ರಂ ವಾದಕರಾಗಿರುವ ಕಿನ್ನೆಯ್.
 
2009ರಲ್ಲಿ ಮೈಕ್ ಐನೆಜ್

2005ರಲ್ಲಿ, ಜೆರ್ರಿ ಕ್ಯಾಂಟ್ರೆಲ್, ಮೈಕ್ ಐನೆಜ್, ಹಾಗು ಸೀನ್ ಕಿನ್ನೆಯ್ ಮತ್ತೆ ಒಂದಾಗಿ ಸಿಯಾಟಲ್ ನಲ್ಲಿ ಒಂದು ಸಹಾಯಾರ್ಥ ಪ್ರದರ್ಶನವನ್ನು ನೀಡುತ್ತಾರೆ. ಇವರು ದಕ್ಷಿಣ ಏಷಿಯಾದಲ್ಲಿ ಸಂಭವಿಸಿದ ಸುನಾಮಿ ದುರ್ಘಟನೆಯ ಸಂತ್ರಸ್ತರಿಗೆ ಸಹಾಯಾರ್ಥ ಪ್ರದರ್ಶನ ನೀಡುತ್ತಾರೆ.[೪೬] ವಾದ್ಯವೃಂದವು ಡ್ಯಾಮೇಜ್ ಪ್ಲಾನ್ ನ ಗಾಯಕ ಪ್ಯಾಟ್ ಲಾಚ್ಮನ್ ಜೊತೆಗೆ ಇತರ ಗೌರವ ಅತಿಥಿಗಳಲ್ಲಿ ಟೂಲ್ ನ ಮೇನರ್ಡ್ ಜೇಮ್ಸ್ ಕೀನನ್, ಹಾಗು ಹಾರ್ಟ್ ನ ಆನ್ ವಿಲ್ಸನ್ ರನ್ನು ಒಳಗೊಂಡಿತ್ತು.[೪೬][೪೭] ಮಾರ್ಚ್ 10, 2006ರಲ್ಲಿ ಉಳಿದ ಸದಸ್ಯರು VH1ನ ಡಿಕೇಡ್ಸ್ ರಾಕ್ ಲೈವ್ ಕಾನ್ಸರ್ಟ್ ನಲ್ಲಿ ಪ್ರದರ್ಶನ ನೀಡುವುದರ ಜೊತೆಗೆ ಸಿಯಾಟಲ್ ನ ತಮ್ಮ ಒಡನಾಡಿ ಸಂಗೀತಗಾರರಾದ ಆನ್ ಹಾಗು ಹಾರ್ಟ್ ನ ನ್ಯಾನ್ಸಿ ವಿಲ್ಸನ್ ರಿಗೆ ಗೌರವವನ್ನು ಅರ್ಪಿಸಿದರು. ಅವರು "ವುಡ್?" ಹಾಡನ್ನು ಪಂತೇರ ಮತ್ತು ಡೌನ್ನ ಗಾಯಕ ಫಿಲ್ ಅನ್ಸೆಲ್ಮೋ ಹಾಗು ಗನ್ಸ್ N' ರೋಸಸ್ ಹಾಗೂ ವೆಲ್ವೆಟ್ ರಿವಾಲ್ವರ್ನ ಡಫ್ಫ್ ಮ್ಯಾಕ್ಕಗನ್ ರೊಂದಿಗೆ ಹಾಡಿದರು. ನಂತರ ರೂಸ್ಟರ್ನ್ನು ಕಮ್ಸ್ ವಿಥ್ ದಿ ಫಾಲ್ ನ ಗಾಯಕ ವಿಲ್ಲಿಯಮ್ ಡುವಾಲ್ ನೊಂದಿಗೆ ಹಾಗು ಆನ್ ವಿಲ್ಸನ್ ರೊಂದಿಗೆ ಪ್ರದರ್ಶನ ನೀಡಿದರು.[೪೭] ವಾದ್ಯವೃಂದವು ಸಂಗೀತ ಕಚೇರಿಯ ನಂತರ ಅಮೆರಿಕ ಸಂಯುಕ್ತ ಸಂಸ್ಥಾನದ ಕ್ಲಬ್ ಕಿರು ಪ್ರವಾಸವನ್ನು ಕೈಗೊಂಡಿತು, ಯುರೋಪ್ ನಲ್ಲಿ ಹಲವರು ಉತ್ಸವಗಳಲ್ಲಿ ಭಾಗವಹಿಸುವುದರ ಜೊತೆಗೆ, ಜಪಾನ್ ಗೆ ಒಂದು ಕಿರು ಪ್ರವಾಸವನ್ನು ಕೈಗೊಂಡಿತು. ವಾದ್ಯವೃಂದದ ಪುನರ್ಮಿಲನಕ್ಕೆ ತಾಳೆಯಾಗುವಂತೆ ಸೋನಿ ಮ್ಯೂಸಿಕ್ ಬಹಳ ದಿನಗಳಿಂದ ಮುಂದೂಡಲಾಗಿದ್ದ ಅಲಿಸ್ ಇನ್ ಚೈನ್ಸ್ ನ ಮೂರನೇ ಸಂಕಲನ, ದಿ ಎಸೆನ್ಶಿಯಲ್ ಅಲಿಸ್ ಇನ್ ಚೈನ್ಸ್ ನ್ನು ಬಿಡುಗಡೆ ಮಾಡಿತು, ಜೋಡಿ ಆಲ್ಬಮ್ನ ಈ ಸಂಕಲನವು 28 ಹಾಡುಗಳನ್ನು ಒಳಗೊಂಡಿತ್ತು.[೪೮] ವಾದ್ಯವೃಂದದ ಪುರ್ನರ್ಮಿಲನದ ಸಂಗೀತ ಕಛೇರಿಗಳಲ್ಲಿ ಡುವಾಲ್ ಅಲಿಸ್ ಇನ್ ಚೈನ್ಸ್ ನ ಪ್ರಮುಖ ಗಾಯಕರಾಗಿ ತಂಡಕ್ಕೆ ಸೇರ್ಪಡೆಯಾದರು. ವೆಲ್ವೆಟ್ ರಿವಾಲ್ವರ್ ಹಾಗು ಮಾಜಿ-ಗನ್ಸ್ N' ರೋಸಸ್ ನ ಮಂದ್ರವಾದ್ಯ ವಾದಕ ಡಫ್ಫ್ ಮ್ಯಾಕ್ಕಗನ್ ಸಹ ವಾದ್ಯವೃಂದದ ಪುನರ್ಮಿಲನದ ಪ್ರವಾಸದಲ್ಲಿ ತಂಡಕ್ಕೆ ಸೇರ್ಪಡೆಗೊಂಡು ಆಯ್ದ ಹಾಡುಗಳಿಗೆ ರಿದಂ ಗಿಟಾರ್ ನ್ನು ನುಡಿಸಿದರು.[೪೭] ಪ್ರವಾಸಕ್ಕೆ ಮುಂಚೆ, ಕಿನ್ನೆಯ್ ಒಂದು ಸಂದರ್ಶನದಲ್ಲಿ ಹೊಸ ಹಾಡುಗಳನ್ನು ಬರೆಯುವ ಆಸಕ್ತಿಯನ್ನು ಹೊಂದಿರುವುದಾಗಿ ತಿಳಿಸಿದರು. ಆದರೆ ಅಲಿಸ್ ಇನ್ ಚೈನ್ಸ್ ತಂಡದ ಸದಸ್ಯನಾಗಿ ಅಲ್ಲವೆಂದು ಹೇಳಿದರು.[೪೯] ಆದಾಗ್ಯೂ, AliceinChains.com ಡುವಾಲ್ ರ ಪ್ರಧಾನ ಗಾಯನದಲ್ಲಿ ವಾದ್ಯವೃಂದವು ಹೊಸ ಹಾಡುಗಳನ್ನು ಬರೆಯಲು ಆರಂಭಿಸಿದೆಯೆಂದು ವರದಿ ಮಾಡಿತು.

ಬ್ಲ್ಯಾಕ್ ಗಿವ್ಸ್ ವೇ ಟು ಬ್ಲೂ (2008–ಇಂದಿನವರೆಗೆ)

ಬದಲಾಯಿಸಿ

Blabbermouth.net ಸೆಪ್ಟೆಂಬರ್ 2008ರಲ್ಲಿ ಅಲಿಸ್ ಇನ್ ಚೈನ್ಸ್ ಅದೇ ವರ್ಷದ ಅಕ್ಟೋಬರ್ ನಲ್ಲಿ ಸ್ಟುಡಿಯೋಗೆ ಪ್ರವೇಶಿಸಿ, 2009ರ ಬೇಸಿಗೆಯಲ್ಲಿ ಬಿಡುಗಡೆಮಾಡಲು ತಮ್ಮ ಹೊಸ ಆಲ್ಬಮ್ ನ ಧ್ವನಿ ಮುದ್ರಣದಲ್ಲಿ ತೊಡಗುತ್ತದೆಂದು ಹೇಳಿತು.[೫೦] ಅಕ್ಟೋಬರ್ 2008ರಲ್ಲಿ, ಅಲಿಸ್ ಇನ್ ಚೈನ್ಸ್ ಲಾಸ್ ಏಂಜಲಿಸ್ ನಲ್ಲಿನ ಫೂ ಫೈಟರ್ಸ್ ಸ್ಟುಡಿಯೋ 606ನಲ್ಲಿ ನಿರ್ಮಾಪಕ ನಿಕ್ ರಸ್ಕುಲಿನೆಕ್ಕ್ಸ್ ಜೊತೆಗೆ ತಮ್ಮ ನಾಲ್ಕನೇ ಸ್ಟುಡಿಯೋ ಆಲ್ಬಮ್ ನ ಧ್ವನಿ ಮುದ್ರಣವನ್ನು ಆರಂಭಿಸಿತು.[೫೧] ರಿವಾಲ್ವರ್ ಗೋಲ್ಡನ್ ಗಾಡ್ ಅವಾರ್ಡ್ಸ್ ನಲ್ಲಿ, ವಾದ್ಯವೃಂದವು ಮಾರ್ಚ್ 2009ರಲ್ಲಿ ಧ್ವನಿಮುದ್ರಣವನ್ನು ಪೂರ್ಣಗೊಳಿಸಿದೆ, ಹಾಗು ಸೆಪ್ಟೆಂಬರ್ ನಲ್ಲಿ ಬಿಡುಗಡೆ ಮಾಡಲು ಸಂಕಲನ ಮಾಡುತ್ತಿರುವುದಾಗಿ ಜೆರಿ ಕ್ಯಾಂಟ್ರಲ್ ತಿಳಿಸಿದರು.[೫೨] ಏಪ್ರಿಲ್ 2009ರಲ್ಲಿ, ಅಲಿಸ್ ಇನ್ ಚೈನ್ಸ್ ನ ಹೊಸ ಆಲ್ಬಮ್ ನ್ನು ವರ್ಜಿನ್ EMI ಬಿಡುಗಡೆ ಮಾಡುತ್ತದೆಂದು ವರದಿ ಮಾಡಲಾಯಿತು,[೫೩] ಇದು ವಾದ್ಯವೃಂದದ 20 ವರ್ಷದ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಬೇರೆ ಧ್ವನಿ ಮುದ್ರಿಕಾ ಸಂಸ್ಥೆಯೊಂದು ಹೊಸ ಆಲ್ಬಮ್ ಬಿಡುಗಡೆ ಮಾಡಿದ್ದಾಗಿತ್ತು. ಜೂನ್ 11, 2009ರಲ್ಲಿ, Blabbermouth.net ಹೊಸ ಆಲ್ಬಮ್‌ನ ಶೀರ್ಷಿಕೆಯ ಹೆಸರು ಬ್ಲ್ಯಾಕ್ ಗಿವ್ಸ್ ವೇ ಟು ಬ್ಲೂ ಎಂದು ವರದಿ ಮಾಡಿತು ಹಾಗೂ ಇದನ್ನು ಅಧಿಕೃತವಾಗಿ ಸೆಪ್ಟೆಂಬರ್ 29, 2009ರಲ್ಲಿ ಬಿಡುಗಡೆ ಮಾಡಲು ಯೋಜಿಸಲಾಯಿತು.[] ಜೂನ್ 30, 2009ರಲ್ಲಿ ಆಲ್ಬಮ್ ನ ಹಾಡಾದ "ಏ ಲುಕಿಂಗ್ ಇನ್ ವ್ಯೂ" ನ್ನು ಆಲ್ಬಮ್ ನ ಮೊದಲ ಏಕಗೀತೆಯಾಗಿ ಬಿಡುಗಡೆ ಮಾಡಲಾಯಿತು. ಜುಲೈ ಆರಂಭದವರೆಗೂ ಅಲಿಸ್ ಇನ್ ಚೈನ್ಸ್ ನ ಅಧಿಕೃತ ಅಂತರಜಾಲದ ಮೂಲಕ ಒಂದು ಸೀಮಿತ ಅವಧಿಗೆ ಯಾವುದೇ ಶುಲ್ಕವಿಲ್ಲದೆ ಡೌನ್ ಲೋಡ್ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಯಿತು. ಸಂಗೀತ ವಿಡಿಯೋ "ಏ ಲುಕಿಂಗ್ ಇನ್ ವ್ಯೂ" ಅಲಿಸ್ ಇನ್ ಚೈನ್ಸ್ ನ ಅಧಿಕೃತ ಅಂತರಜಾಲದ ಮೂಲಕ ಜುಲೈ 7, 2009ರಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡಿತು.[೫೪] ಎರಡನೇ ಏಕಗೀತೆ "ಚೆಕ್ ಮೈ ಬ್ರೈನ್" ಬಾನುಲಿ ಕೇಂದ್ರಗಳಿಗೆ ಆಗಸ್ಟ್ 14, 2009ರಲ್ಲಿ ಬಿಡುಗಡೆಯಾಯಿತು ಹಾಗು ಆಗಸ್ಟ್ 17, 2009ರಲ್ಲಿ ಖರೀದಿಗಾಗಿ ಲಭ್ಯವಾಯಿತು.[೫೫] ಇದರ ಜೊತೆಯಲ್ಲಿ, ಆಲ್ಬಮ್ ನ ಶೀರ್ಷಿಕೆ ಗೀತೆಯಲ್ಲಿ ಎಲ್ಟನ್ ಜಾನ್ ಕಾಣಿಸಿಕೊಳ್ಳುವರೆಂದು ಪ್ರಕಟಿಸಲಾಯಿತು.[೫೬] ಸೆಪ್ಟೆಂಬರ್ 2008ರಲ್ಲಿ, ಅಲಿಸ್ ಇನ್ ಚೈನ್ಸ್ 2009ರ ಸೌಂಡ್ ವೇವ್ ಫೆಸ್ಟಿವಲ್ ನಲ್ಲಿ ನೈನ್ ಇಂಚ್ ನೈಲ್ಸ್ ಹಾಗು ಲ್ಯಾಂಬ್ ಆಫ್ ಗಾಡ್ ನ ಜೊತೆಯಲ್ಲಿ ಪ್ರಮುಖವಾಗಿ ಭಾಗವಹಿಸುವುದೆಂದು ಪ್ರಕಟಿಸಲಾಯಿತು.[೫೭] ಫೆಬ್ರವರಿ 2009ರಲ್ಲಿ, ಅಲಿಸ್ ಇನ್ ಚೈನ್ಸ್ ರಾಕ್ ಆನ್ ದಿ ರೇಂಜ್ ನ ಮೂರನೇ ವಾರ್ಷಿಕ ಉತ್ಸವದಲ್ಲಿ ಪ್ರದರ್ಶನ ನೀಡುತ್ತದೆಂದು ಪ್ರಕಟಿಸಲಾಯಿತು.[೫೮] ಆಗಸ್ಟ್ 1, 2009ರಲ್ಲಿ, ಮಸ್ಟೋಡಾನ್, ಅವೆಂಜ್ಡ್ ಸೆವೆನ್ ಫೋಲ್ಡ್, ಹಾಗು ಗ್ಲೈಡರ್ ನ ಜೊತೆಯಲ್ಲಿ ಅಲಿಸ್ ಇನ್ ಚೈನ್ಸ್ ಡಬ್ಲಿನ್ ನ ಮರ್ಲಿ ಪಾರ್ಕ್ ನಲ್ಲಿ ಮೆಟಾಲಿಕಗೆ ನೇರ ಬೆಂಬಲ ನೀಡುವ ಸಲುವಾಗಿ ಪ್ರದರ್ಶನ ನೀಡಿತು. ವಾದ್ಯವೃಂದವು ಲೇಟರ್ ಲೈವ್ ನಲ್ಲಿ ಪ್ರದರ್ಶನವನ್ನು ನೀಡಿತು... ಜೊತೆಗೆ ಜೂಲ್ಸ್ ಹಾಲಂಡ್ 10 ನವೆಂಬರ್ 2009ರಲ್ಲಿ 'ಲೆಸನ್ ಲರ್ನ್ಡ್', 'ಬ್ಲ್ಯಾಕ್ ಗಿವ್ಸ್ ವೇ ಟು ಬ್ಲೂ', ಹಾಗು 'ಚೆಕ್ ಮೈ ಬ್ರೈನ್' ಹಾಡುಗಳನ್ನು ಸಂಚಿಕೆಯ ಅಂತಿಮ ಪ್ರದರ್ಶನವಾಗಿ ಹಾಡಿದರು. ವಾದ್ಯವೃಂದದ ಯುರೋಪಿಯನ್ ಪ್ರವಾಸಕ್ಕೆ ತಾಳೆಯಾಗುವಂತೆ, ಅಲಿಸ್ ಇನ್ ಚೈನ್ಸ್ ತಮ್ಮ ಮುಂದಿನ ಏಕಗೀತೆ "ಯುವರ್ ಡಿಸಿಶನ್" ನನ್ನು ನವೆಂಬರ್ 16 UKಯಲ್ಲಿ ಹಾಗು ಡಿಸೆಂಬರ್ 1 USನಲ್ಲಿ ಬಿಡುಗಡೆಗೊಳಿಸಿತು.[೫೯][೬೦] ಆಲ್ಬಮ್ ನ ನಾಲ್ಕನೇ ಏಕಗೀತೆ "ಲೆಸನ್ ಲರ್ನ್ಡ್" ನ್ನು ರಾಕ್ ರೇಡಿಯೋಗೆ ಜೂನ್ ಮಧ್ಯಭಾಗದಲ್ಲಿ ಬಿಡುಗಡೆ ಮಾಡಲಾಯಿತು.[೬೧] ಮೇ 26, 2010ರಲ್ಲಿ ಬ್ಲ್ಯಾಕ್ ಗಿವ್ಸ್ ವೇ ಟು ಬ್ಲೂ ಗೆ RIAA ಚಿನ್ನದ ದರ್ಜೆ ನೀಡಿ ಪ್ರಮಾಣೀಕರಿಸಿತು. ಜೊತೆಗೆ 500,000ಕ್ಕೂ ಅಧಿಕ ಪ್ರತಿಗಳನ್ನು ಸಾಗಿಸಲಾಯಿತು. ಮಸ್ಟೋಡಾನ್ ಹಾಗು ಡೆಫ್ಟೋನ್ಸ್ ನ ಜೊತೆಯಲ್ಲಿ, ಅಲಿಸ್ ಇನ್ ಚೈನ್ಸ್ ಅಮೆರಿಕ ಸಂಯುಕ್ತ ಸಂಸ್ಥಾನ ಹಾಗು ಕೆನಡಾಕ್ಕೆ 2010ರ ಕೊನೆ ಭಾಗದಲ್ಲಿ ಬ್ಲ್ಯಾಕ್ ಡೈಮಂಡ್ ಸ್ಕೈ ಪ್ರವಾಸ ಕೈಗೊಳ್ಳಲಿದೆ. ಇದು ಮೂರು ವಾದ್ಯವೃಂದಗಳ ಇತ್ತೀಚಿನ ಆಲ್ಬಮ್ ಗಳ ಶೀರ್ಷಿಕೆಗಳ (ಬ್ಲ್ಯಾಕ್ ಗಿವ್ಸ್ ವೇ ಟು ಬ್ಲೂ , ಡೈಮಂಡ್ ಐಸ್ , ಹಾಗು ಕ್ರ್ಯಾಕ್ ದಿ ಸ್ಕೈ ಗಳಿಗೆ) ಮಿಶ್ರಪದ ವಾಗಿದೆ.

ಮುಂಬರುವ ಸಂಭಾವ್ಯ ಆಲ್ಬಮ್

ಬದಲಾಯಿಸಿ

ಏಪ್ರಿಲ್ 2010ರಲ್ಲಿ, ಗಿಟಾರ್ ವಾದಕ ಜೆರ್ರಿ ಕ್ಯಾಂಟ್ರೆಲ್ MTV ನ್ಯೂಸ್ ಗೆ ನೀಡಿದ ಸಂದರ್ಶನದಲ್ಲಿ ಅಲಿಸ್ ಇನ್ ಚೈನ್ಸ್ ಮುಂಬರುವ ದಿನಗಳಲ್ಲಿ ತನ್ನ ಐದನೇ ಸ್ಟುಡಿಯೋ ಆಲ್ಬಮ್ ನ್ನು ಹೊರತರಲು ಪರಿಶೀಲನೆ ಮಾಡುತ್ತಿದೆ ಎಂದು ತಿಳಿಸಿದರು. ಅವರು "ಅದರ ಬಗ್ಗೆ ಚಿಂತನೆಗಳಿವೆ. ನೋಡೋಣ ಎಲ್ಲಿಯವರೆಗೆ ನಾವು ಇದನ್ನು ಸಾಧಿಸಬಲ್ಲೆವು. ಈ ಕ್ಷಣದಲ್ಲಿ ಉಳಿಯುವುದು ಬದುಕುವ ಒಳ್ಳೆಯ ಮಾರ್ಗವಾಗಿದ್ದು, ಇದು ಖಂಡಿತವಾಗಿ ಸಂಭವಿಸುತ್ತದೆಂದು ನಾವು ಆಶಿಸುತ್ತೇವೆ. ಇದು ನಡೆಯದಿರಲು ಯಾವುದೇ ಕಾರಣವು ನನಗೆ ಕಾಣಿಸುತ್ತಿಲ್ಲ."[೬೨] ಪ್ರಧಾನ ಗಾಯಕ ವಿಲ್ಲಿಯಮ್ ಡುವಾಲ್ ಸಹ ತಮ್ಮ ಮುಂದಿನ ಆಲ್ಬಮ್ ಬಗ್ಗೆ ಹಾಗು ಅಲಿಸ್ ಇನ್ ಚೈನ್ಸ್ ನ ಭವಿಷ್ಯದ ಬಗ್ಗೆ ಹೇಳಿಕೆ ನೀಡುತ್ತಾರೆ, "ನಾವು ಇದನ್ನು ಸಾಧಿಸುವ ಮುಂಚೆ ನಾವು ಮಾಡಬೇಕಾದ ಕೆಲಸಗಳು ಸಾಕಷ್ಟಿವೆ. ನಾವು ಬಹಳಷ್ಟು ಪ್ರದರ್ಶನಗಳನ್ನು ನೀಡಬೇಕಿದೆ. ಆದರೆ ಸಾಮಾನ್ಯವಾಗಿ ಹೇಳುವುದಾದರೆ, ನಾವು ನಮ್ಮ ಭವಿಷ್ಯದ ಬಗ್ಗೆ ಉತ್ಸುಕರಾಗಿದ್ದೇವೆ. ದೀರ್ಘಕಾಲಿಕ ವಿರಾಮವನ್ನು ನಾನು ನಿರೀಕ್ಷಿಸುವುದಿಲ್ಲ."[೬೩]

ಸಂಗೀತ ಶೈಲಿ

ಬದಲಾಯಿಸಿ

ಆದಾಗ್ಯೂ ಅಲಿಸ್ ಇನ್ ಚೈನ್ಸ್ ಗ್ರುಂಜ್ ಸಂಗೀತ, ಪರ್ಯಾಯ ರಾಕ್, ಹಾಗು ಹಾರ್ಡ್ ರಾಕ್ ಎಂಬ ಹೆಸರನ್ನು ಗಳಿಸಿದ್ದರೂ, ಜೆರ್ರಿ ಕ್ಯಾಂಟ್ರೆಲ್ ವಾದ್ಯವೃಂದವನ್ನು ಪ್ರಾಥಮಿಕವಾಗಿ ಹೆವಿ ಮೆಟಲ್ ಎಂದು ಗುರುತಿಸುತ್ತಾರೆ.

ಅವರು 1996ರಲ್ಲಿ ಗಿಟಾರ್ ವರ್ಲ್ಡ್ ಗೆ; "ನಾವು ಸಾಕಷ್ಟು ವಿಭಿನ್ನವಾದ ಶೈಲಿಯನ್ನು ಹೊಂದಿದ್ದೇವೆ... ನನಗೆ ಯಾವ ಸಂಗೀತ ಶೈಲಿಯ ಮಿಶ್ರಣವೆಂಬುದು ತಿಳಿದಿಲ್ಲ, ಆದರೆ ಇದು ಖಂಡಿತವಾಗಿ ಮೆಟಲ್ ಸಂಗೀತ ಶೈಲಿಯಾಗಿದೆ, ಬ್ಲೂಸ್, ರಾಕ್ ಅಂಡ್ ರೋಲ್, ಬಹುಶಃ ಪಂಕ್ ನ ಸ್ಪರ್ಶವೂ ಸಹ ಸೇರಿರಬಹುದು. ಮೆಟಲ್ ಶೈಲಿಯನ್ನು ನಾವು ತೆಗೆದುಹಾಕುವುದಿಲ್ಲ, ಹಾಗು ಹಾಗಾಗಲು ನಾನು ಎಂದಿಗೂ ಬಯಸುವುದಿಲ್ಲ".[೬೪] 

ಜೆರ್ರಿ ಕ್ಯಾಂಟ್ರೆಲ್ ರ ಗಿಟಾರ್ ಶೈಲಿಯು , ನಿಧಾನವಾಗಿ ಆವರಿಸಿದ ಮಂದ್ರಸ್ಥಾಯಿ ಧ್ವನಿಯನ್ನು ಸೃಷ್ಟಿಸಲು ಪುನರಾವರ್ತಿತ ಗೀತಭಾಗಗಳನ್ನು ಹಾಗೂ ವಿಸ್ತರಿತ ಗಿಟಾರ್ ನಾದಗುಣಗಳನ್ನು ಸಂಯೋಜಿಸುತ್ತದೆ ಎಂದು ಆಲ್ ಮ್ಯೂಸಿಕ್‌ನ ಸ್ಟೀಫನ್ ಎರ್ಲೆವೈನ್ ಕರೆದಿದ್ದಾರೆ.[೬೫] ಕೆಳಶ್ರುತಿಯ ವಿಕೃತ ಗಿಟಾರ್‌ ಗಳು ಸ್ಟಾಲಿಯವರ ವಿಶಿಷ್ಟ "ಗುರುಗುಟ್ಟುವ, ಕಿರಿಚುವ [೧೦] ಹಾಡಿನೊಂದಿಗೆ ಬೆರೆತು,ಹೆವಿ ಮೆಟಲ್ ಸಂಗೀತ ಶೈಲಿಯ ಅಭಿಮಾನಿಗಳಿಗೆ ಬಹಳ ಮೆಚ್ಚುಗೆಯಾಯಿತು. ವಾದ್ಯವೃಂದವು "ಅತ್ಯುತ್ತಮವಾದ ರಾಗ ವಿನ್ಯಾಸ ಪ್ರಜ್ಞೆಯನ್ನು ಹೊಂದಿತ್ತು" ಇದು ಹೆವಿ ಮೆಟಲ್ ಸಂಗೀತ ಶೈಲಿಯ ಹೊರಗೆ ಅತಿ ವ್ಯಾಪಕ ಪಾಪ್ ಪ್ರೇಕ್ಷಕರನ್ನು ಅಲಿಸ್ ಇನ್ ಚೈನ್ಸ್‌ಗೆ ಪರಿಚಯಿಸಿತು.[೧೨][೨೪] ವಾದ್ಯವೃಂದವನ್ನು ವಿಮರ್ಶಕರು "ಮೆಟಲ್ ಅಭಿಮಾನಿಗಳಿಗೆ ಅಸಹನೀಯವೆನಿಸಿದರೂ, ಅವರ ಹಾಡಿನ ವಿಶಾದಕರ ವಸ್ತು ವಿಷಯ ಹಾಗು ಒರಟು ಆಕ್ರಮಣವು ಅವರನ್ನು ಸಿಯಾಟಲ್ ಆಧಾರಿತ ಗ್ರುಂಜ್ ವಾದ್ಯವೃಂದಗಳಲ್ಲಿ ಅಗ್ರ ಸ್ಥಾನದಲ್ಲಿ ಇರಿಸಿದೆ".[೪೦] ವಾದ್ಯವೃಂದದ ಎಲ್ಲ ಮೂರು ಬಿಡುಗಡೆಗಳು ಧ್ವನಿ ತರಂಗಗಳ ಸಂಗೀತವನ್ನು ಹೊಂದಿತ್ತು, ಹಾಗು ವಾದ್ಯವೃಂದವು ಆರಂಭದಲ್ಲಿ ಈ ಬಿಡುಗಡೆಗಳನ್ನು ಪ್ರತ್ಯೇಕವಾಗಿ ಮಾಡಬೇಕೆಂದು ಯೋಜಿಸಿತ್ತು, ಅಲಿಸ್ ಇನ್ ಚೈನ್ಸ್ ನ ಸ್ವಶೀರ್ಷಿಕೆಯ ಆಲ್ಬಮ್ ಶೈಲಿಗಳನ್ನು ಒಂದುಗೂಡಿಸಿ "ಒಂದು ನಿರಾಶಾದಾಯಕ, ಶೂನ್ಯವಾದದ ಶಬ್ದವನ್ನು ಸೃಷ್ಟಿಸಿತು. ಇದು ಕರ್ಕಶ ರಾಕ್ ಸಂಗೀತದ ಜತೆ ಸೂಕ್ಷ್ಮವಾಗಿ ಸಂಯೋಜಿಸಿದ ಧ್ವನಿ ತರಂಗಗಳ ಸಂಖ್ಯೆಗಳೊಂದಿಗೆ ಸಮತೋಲನ ಹೊಂದಿತ್ತು".[೪೦] ಅಲಿಸ್ ಇನ್ ಚೈನ್ಸ್ ಸ್ಟಾಲಿ ಹಾಗು ಕ್ಯಾಂಟ್ರೆಲ್ ರ ವಿಶಿಷ್ಟವಾದ ಹಾಡುಗಾರಿಕೆ ಸಾಮರಸ್ಯಕ್ಕೂ ಸಹ ಹೆಸರಾಗಿದೆ. ಇದು ಒಂದರ ಮೇಲೊಂದು ವ್ಯಾಪಿಸಿದ ಸಾಲುಗಳು ಮತ್ತು ಇಬ್ಬರ ಮುಖ್ಯ ಹಾಡುಗಳನ್ನು ಒಳಗೊಂಡಿದೆ.[೪೦] ವಾದ್ಯವೃಂದದ ವಿಶಿಷ್ಟ ಸಂಗೀತ ಶೈಲಿಯು "ಸ್ಟಾಲಿಯ ಗಾಯನ ಶೈಲಿ ಹಾಗು ವೈಯಕ್ತಿಕ ಹೋರಾಟಗಳು ಹಾಗು ಮಾದಕದ್ರವ್ಯದ ವ್ಯಸನವನ್ನು ನಿಭಾಯಿಸಿದ ಅವರ ಗೀತೆಗಳಿಂದ ಬಂದಿದೆ" ಎಂದು ಹೇಳುತ್ತಾರೆ.[೬೬] ಸ್ಟಾಲಿ ರ ಹಾಡುಗಳನ್ನು ಸಾಮಾನ್ಯವಾಗಿ "ವಿಷಾದಕರ"ವೆಂದು ಗುರುತಿಸಲಾಗುತ್ತದೆ,[೪೦] ಜೊತೆಗೆ ಹಾಡಿನ ವಸ್ತುಗಳು ಮಾದಕದ್ರವ್ಯದ ಸೇವನೆ, ಖಿನ್ನತೆ, ಹಾಗು ಆತ್ಮಹತ್ಯೆಯನ್ನು ಕುರಿತದ್ದಾಗಿರುತ್ತದೆ,[೨೧] ಆದರೆ ಕ್ಯಾಂಟ್ರೆಲ್ ರ ಹಾಡುಗಳು ವೈಯಕ್ತಿಕ ಸಂಬಂಧಗಳ ಬಗ್ಗೆ ಗಮನ ಹರಿಸುತ್ತದೆ.

ಪರಂಪರೆ

ಬದಲಾಯಿಸಿ
 
ಅಲಿಸ್ ಇನ್ ಚೈನ್ಸ್'ನ ಪ್ರಸಕ್ತ ಗಾಯಕ, ವಿಲ್ಲಿಯಮ್ ಡುವಾಲ್ ವಾದ್ಯವೃಂದದೊಂದಿಗಿನ ಪ್ರದರ್ಶನದಲ್ಲಿ.ಸ್ಟಾಲಿ ರ ಮರಣಾನಂತರ ಅಲಿಸ್ ಇನ್ ಚೈನ್ಸ್ ವಾದ್ಯವೃಂದವು ಮರುರೂಪುಗೊಂಡಾಗ ಲಯ್ನೆ ಸ್ಟಾಲಿ ಬದಲಿಗೆ ವಾದ್ಯವೃಂದದ ಗಾಯಕರಾಗಿ ಡುವಾಲ್ ತಮ್ಮ ಪ್ರದರ್ಶನವನ್ನು ಆರಂಭಿಸಿದರು.

ಅಲಿಸ್ ಇನ್ ಚೈನ್ಸ್, ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ 14 ದಶಲಕ್ಷಕ್ಕೂ ಅಧಿಕ ಆಲ್ಬಮ್ ಗಳನ್ನು, ಹಾಗು ವಿಶ್ವವ್ಯಾಪಿಯಾಗಿ 35 ದಶಲಕ್ಷ ಆಲ್ಬಮ್ ಗಳನ್ನು ಬಿಡುಗಡೆ ಮಾಡಿತು, ಎರಡು ಅಗ್ರ ಸ್ಥಾನದ ಆಲ್ಬಮ್ ಗಳು ಹಾಗು ಅಗ್ರ 40ರ ಸ್ಥಾನದಲ್ಲಿರುವ 21 ಏಕಗೀತೆಗಳನ್ನು ಬಿಡುಗಡೆ ಮಾಡಿತು ಹಾಗು ಏಳು ಬಾರಿ ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತು. VH1ನ ಹಾರ್ಡ್ ರಾಕ್ ನ 100 ಅತ್ಯುತ್ತಮ ಕಲಾವಿದರು ಗಳ ಪಟ್ಟಿಯಲ್ಲಿ 34ನೇ ಸ್ಥಾನವನ್ನು ಗಳಿಸಿತು.[೬೭] ಅಲಿಸ್ ಇನ್ ಚೈನ್ಸ್ ನ್ನು ಹಿಟ್ ಪೆರೇಡರ್ 15ನೇ ಅತ್ಯುತ್ತಮ ನೇರ ಪ್ರದರ್ಶನದ ವಾದ್ಯವೃಂದವೆಂದು ಹೆಸರಿಸಿತು,[೬೮] ಜೊತೆಗೆ ಲಯ್ನೆ ಸ್ಟಾಲಿರನ್ನು ಸಾರ್ವಕಾಲಿಕ 27ನೇ ಅತ್ಯುತ್ತಮ ಗಾಯಕನೆಂಬ ಶ್ರೇಣಿಯನ್ನು ನೀಡಿತು.[೬೯] ವಾದ್ಯವೃಂದದ ಎರಡನೇ ಆಲ್ಬಮ್, ಡರ್ಟ್ ನ್ನು ಕ್ಲೋಸ್-ಅಪ್ ನಿಯತಕಾಲಿಕವು ಎರಡು ದಶಕಗಳಲ್ಲೇ 5ನೇ ಅತ್ಯುತ್ತಮ ಆಲ್ಬಮ್ ಎಂದು ಹೆಸರಿಸಿತು.[೭೦] ಆಗಸ್ಟ್ 2009ರಲ್ಲಿ, ಅಲಿಸ್ ಇನ್ ಚೈನ್ಸ್ ಕೆರ್ರಾಂಗ್! ಐಕಾನ್ ಪ್ರಶಸ್ತಿಯನ್ನು ಗಳಿಸಿತು.[೭೧] ಅಲಿಸ್ ಇನ್ ಚೈನ್ಸ್ ಹಲವು ವಾದ್ಯವೃಂದಗಳ ಮೇಲೆ ತನ್ನ ಪ್ರಭಾವವನ್ನು ಬೀರಿದೆ, ಉದಾಹರಣೆಗೆ ಗಾಡ್‌ಸ್ಮ್ಯಾಕ್, MTVಯ ಜೋನ್ ವಿಯೇಡರ್‌ಹಾರ್ನ್ ಅವರ ಪ್ರಕಾರ, "ಈ ವಾದ್ಯವೃಂದವು ಅಲಿಸ್ ಇನ್ ಚೈನ್ಸ್ ನ್ನು ತನ್ನದೇ ಆದ ವಿಶಿಷ್ಟ ಶೈಲಿ ಸೇರಿಸಿಕೊಂಡು ಶಬ್ದಸಮಾನ ವೇಗದಲ್ಲಿ ಅನುಸರಿಸಿದೆ."

ಗಾಡ್ಸ್ಮ್ಯಾಕ್ ನ ಗಾಯಕ ಹಾಗು ಅದರ ಸ್ಥಾಪಕ ಸುಲ್ಲಿ ಎರ್ನ ಸಹ ಲಯ್ನೆ ಸ್ಟಾಲಿ ತಮ್ಮ ಮೇಲೆ ಮೊದಲ ಪ್ರಭಾವ ಬೀರಿದ್ದಾಗಿ ಉದಾಹರಿಸುತ್ತಾರೆ.[೭೨] 

ಸ್ಟೈಂಡ್ ಅಲಿಸ್ ಇನ್ ಚೈನ್ಸ್ ನ "ನಟ್ ಶೆಲ್" ಹಾಡಿನ ನೇರ ಪ್ರಸಾರವನ್ನು ಚಿತ್ರೀಕರಿಸಿದ್ದಾರೆ, ಇದು ಅವರ ಸಂಕಲನ The Singles: 1996-2006 ದಲ್ಲಿ ಕೇಳಿಬರುತ್ತದೆThe Singles: 1996-2006 , ಜೊತೆಗೆ "ಲಯ್ನೆ" ಎಂಬ ಶೀರ್ಷಿಕೆಯ ಹಾಡನ್ನು 14 ಶೆಡ್ಸ್ ಆಫ್ ಗ್ರೇ ಹೆಸರಿನ ಆಲ್ಬಮ್ ನಲ್ಲಿ ಸ್ಟಾಲಿ ಸ್ಮರಣಾರ್ಥವಾಗಿ ಬರೆಯುತ್ತಾರೆ.[೭೩] ತ್ರೀ ಡೇಸ್ ಗ್ರೇಸ್ ರೂಸ್ಟರ್ ರ ಪ್ರಥಮ ಧ್ವನಿ ಮುದ್ರಣವನ್ನೂ ಸಹ ಪ್ರದರ್ಶಿಸುತ್ತದೆ, ಇದನ್ನು ಲೈವ್ ಅಟ್ ದಿ ಪ್ಯಾಲೇಸ್ DVD ಯಲ್ಲಿ ಕಾಣಬಹುದು. ಅಲಿಸ್ ಇನ್ ಚೈನ್ಸ್ ನಿಂದ ಪ್ರಭಾವಿತವಾದ ಇತರ ವಾದ್ಯವೃಂದಗಳಲ್ಲಿ ಕ್ರೀಡ್[೭೪], ನಿಕಲ್ ಬ್ಯಾಕ್[೭೪], ಟ್ಯಾಪ್ ರೂಟ್, ಪಡಲ್ ಆಫ್ ಮಡ್[೭೪], ಗಾಡ್ಸ್ಮ್ಯಾಕ್[೭೪], ಸ್ಮೈಲ್ ಎಂಪ್ಟಿ ಸೋಲ್, ಕೋಲ್ಡ್, ಡೇಸ್ ಆಫ್ ದಿ ನ್ಯೂ[೭೪] ಹಾಗು ತಾಂತ್ರಿಕ್ ಗಳು ಸೇರಿವೆ.[೨೧] ಮೆಟಾಲಿಕ ತಾವು ಯಾವಾಗಲೂ ವಾದ್ಯವೃಂದದೊಂದಿಗೆ ಪ್ರವಾಸ ಮಾಡಲು ಇಚ್ಛಿಸಿದ್ದಾಗಿ ಹೇಳುತ್ತದೆ, ಜೊತೆಗೆ ತಮ್ಮ 2008ರ ಬಿಡುಗಡೆ ಡೆತ್ ಮ್ಯಾಗ್ನೆಟಿಕ್ ಗೆ ಅಲಿಸ್ ಇನ್ ಚೈನ್ಸ್ ಒಂದು ಪ್ರಮುಖ ಸ್ಫೂರ್ತಿಯೆಂದು ಹೇಳುತ್ತದೆ.[೭೫] ಮೆಟಾಲಿಕ ಲಯ್ನೆ ಸ್ಟಾಲಿ ಗೌರವಾರ್ಥ "ಶೈನ್" ಹಾಡನ್ನೂ ಸಹ ಧ್ವನಿಮುದ್ರಣ ಮಾಡಿತು, ಆದರೆ ತಯಾರಿಕೆ ನಿರ್ಬಂಧಗಳ ಕಾರಣದಿಂದಾಗಿ ಡೆತ್ ಮ್ಯಾಗ್ನೆಟಿಕ್ ನಿಂದ ಹಾಡನ್ನು ಕೈಬಿಡಲಾಯಿತು.

ವಾದ್ಯ-ವೃಂದದ ಸದಸ್ಯರು

ಬದಲಾಯಿಸಿ
  • ವಿಲ್ಲಿಯಮ್ ಡುವಾಲ್ - ಪ್ರಧಾನ ಹಾಗು ಹಿನ್ನೆಲೆ ಗಾಯನ, ರಿದಂ ಗಿಟಾರ್ (2006ರಿಂದ- ಇಂದಿನವರೆಗೂ)
  • ಜೆರ್ರಿ ಕ್ಯಾಂಟ್ರೆಲ್ – ಪ್ರಧಾನ ಹಾಗು ಹಿನ್ನೆಲೆ ಗಾಯನ, ಪ್ರಮುಖ ಗಿಟಾರ್ ವಾದಕ (1987–2002, 2005ರಿಂದ-ಇಂದಿನವರೆಗೂ)
  • ಮೈಕ್ ಐನೆಜ್ - ಮಂದ್ರವಾದ್ಯ ವಾದನ, ಹಿನ್ನೆಲೆ ಗಾಯನ (1993–2002, 2005ರಿಂದ-ಇಂದಿನವರೆಗೂ)
  • ಸೀನ್ ಕಿನ್ನೆಯ್ – ಡ್ರಮ್ಸ್, ಪರ್ಕಷನ್(1987–2002, 2005ರಿಂದ-ಇಂದಿನವರೆಗೂ)

ಮಾಜಿ ಸದಸ್ಯರು

ಬದಲಾಯಿಸಿ
  • ಲಯ್ನೆ ಸ್ಟಾಲಿ - ಪ್ರಧಾನ ಗಾಯನ, ಸಾಂಧರ್ಬಿಕ ರಿದಂ ಗಿಟಾರ್ ವಾದನ (1987–2002)
  • ಮೈಕ್ ಸ್ಟಾರ್ರ್ – ಮಂದ್ರವಾದ್ಯ ವಾದನ, ಹಿನ್ನೆಲೆಗಾಯನ (1987–1993)
ಪ್ರವಾಸಿ ಸಂಗೀತಗಾರರು
  • ಸ್ಕಾಟ್ ಆಲ್ಸನ್ – ಅಕೌಸ್ಟಿಕ್(ಧ್ವನಿತರಂಗದ ಸಂಗೀತದ ಗಿಟಾರ್ (1996, ಕೇವಲ ಅನ್ ಪ್ಲಗ್ಡ್ ಪ್ರದರ್ಶನ)
  • ಪ್ಯಾಟ್ರಿಕ್ ಲಾಚ್ಮನ್ – ಪ್ರಧಾನ ಗಾಯನ (2005–2006)
  • ಡಫ್ಫ್ ಮ್ಯಾಕ್ಕಗನ್ – ರಿದಂ ಗಿಟಾರ್ (2005–2006)

ಕಾಲಾನುಕ್ರಮ

ಬದಲಾಯಿಸಿ

ಕಾಲಾನುಕ್ರಮ ImageSize = width:800 height:auto barincrement:30 ಪ್ಲಾಟ್‌ಏರಿಯಾ = ಎಡಕ್ಕೆ:100 ಕೆಳಕ್ಕೆ:60 ಮೇಲಕ್ಕೆ:0 ಬಲಕ್ಕೆ:50 Alignbars = justify DateFormat = mm/dd/yyyy Period = from:01/01/1987 till:01/01/2010

TimeAxis = orientation:horizontal format:yyyy

Colors =

id:Vocals value:orange legend:Vocals
id:Bass value:red legend:Bass
id:Guitar value:green legend:Guitars 
id:Drums value:gray(0.45) legend:Drums
id:lines value:black legend:Studio albums

Legend = orientation:horizontal position:bottom ScaleMajor = increment:3 start:1987 ScaleMinor = unit:year increment:1 start:1987 LineData =

at:05/03/2001 color:black layer:back
at:05/03/2001 color:black layer:back
at:05/03/2001 color:black layer:back
at:05/03/2001 color:black layer:back

BarData =

bar:Staley text:"ಲಯ್ನೆಸ್ಟಾಲಿ "
bar:DuVall text:"ವಿಲಿಯಂ ಡುವಾಲ್"
bar:Cantrell text:"ಜೆರ್ರಿ ಕ್ಯಾಂಟ್ರೆಲ್"
bar:Starr text:"ಮೈಕ್ ಸ್ಟಾರ್ರ್"
bar:Inez text:"ಮೈಕ್ ಐನೆಜ್"
bar:Kinney text:"ಸೀನ್ ಕಿನ್ನೆಯ್"

PlotData=

width:10 textcolor:black align:left anchor:from shift:(10,-4)
bar:staley from:01/01/1987 till:04/19/2002 color:ಗಾಯನ 
bar:DuVall from:01/01/2006 till:end color:ಗಾಯನ 
bar:Cantrell from:01/01/1987 till:04/19/2002 color:ಗಿಟಾರ್ ವಾದನ 
bar:Cantrellfrom:01/01/2005 till:end color:ಗಿಟಾರ್ ವಾದನ 
bar:Starr from:01/01/1987 till:01/01/1993 color:ಮಂದ್ರವಾದ್ಯ ವಾದನ 
bar:Inez from:01/01/1993 till:04/19/2002 color:ಮಂದ್ರವಾದ್ಯ ವಾದನ 
bar:Inez from:01/01/2005 till:end color:ಮಂದ್ರವಾದ್ಯ ವಾದನ 
bar:Kinney from:01/01/1987 till:04/19/2002 color:ಡ್ರಂ ವಾದನ 
bar:Kinney from:01/01/2005 till:end color:ಡ್ರಂ ವಾದನ 

ಕಾಲನುಕ್ರಮ

  • ಗಮನಿಸಿ: ಅಲಿಸ್ ಇನ್ ಚೈನ್ಸ್ ವಾದ್ಯವೃಂದವು 2002ರಿಂದ 2005ರವರೆಗೂ ನಿಷ್ಕ್ರಿಯವಾಗಿತ್ತು.

ಸಂಗೀತ ಧ್ವನಿಮುದ್ರಿಕೆಗಳ ಅನುಕ್ರಮಣಿಕೆ

ಬದಲಾಯಿಸಿ
  • ಫೇಸ್ ಲಿಫ್ಟ್ (1990)
  • ಡರ್ಟ್ (1992)
  • ಅಲಿಸ್ ಇನ್ ಚೈನ್ಸ್ (1995)
  • ಬ್ಲ್ಯಾಕ್ ಗಿವೆಸ್ ವೇ ಟು ಬ್ಲೂ (2009)

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು

ಬದಲಾಯಿಸಿ

ಟೆಂಪ್ಲೇಟು:Infobox Musician Awards ಅಲಿಸ್ ಇನ್ ಚೈನ್ಸ್ ಏಳು ಬಾರಿ ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ. ವಾದ್ಯವೃಂದದ ಮೊದಲ ಗ್ರ್ಯಾಮಿ ನಾಮನಿರ್ದೇಶನವು 1992ರಲ್ಲಿ "ಮ್ಯಾನ್ ಇನ್ ದಿ ಬಾಕ್ಸ್" ಹಾಡು ಅತ್ಯುತ್ತಮ ಹಾರ್ಡ್ ರಾಕ್ ಪ್ರದರ್ಶನಕ್ಕೆ ನಾಮಾಂಕಿತಗೊಂಡಾಗ ಸಂಭವಿಸಿತು. ಅಲಿಸ್ ಇನ್ ಚೈನ್ಸ್, ವಾದ್ಯವೃಂದದ 1992ರ ಆಲ್ಬಮ್ ಡರ್ಟ್ ಗಾಗಿ ಅತ್ಯುತ್ತಮ ಹಾರ್ಡ್ ರಾಕ್ ಪ್ರದರ್ಶನವೆಂದು ಗ್ರ್ಯಾಮಿ ಪ್ರಶಸ್ತಿಗೆ ನಾಮಾಂಕಿತವಾಯಿತು, 1994ರ ಜಾರ್ ಆಫ್ ಫ್ಲೈಸ್ ನ "ಐ ಸ್ಟೇ ಅವೇ", ವಾದ್ಯವೃಂದದ 1995ರ ಸ್ವ-ಶೀರ್ಷಿಕೆಯ ಆಲ್ಬಮ್ನ "ಗ್ರೈಂಡ್" ಹಾಗು "ಅಗೈನ್" ಹಾಗು 1999ರ ಧ್ವನಿ ಮುದ್ರಣ "ಗೆಟ್ ಬಾರ್ನ್ ಅಗೈನ್".

1992ರ ಚಿತ್ರ ಸಿಂಗಲ್ಸ್ ಗಾಗಿ ಅಲಿಸ್ ಇನ್ ಚೈನ್ಸ್' ವಾದ್ಯವೃಂದದ ಕೊಡುಗೆ"ವುಡ್?" ಎಂಬ ಹಾಡಿನ ಸಂಗೀತ ವಿಡಿಯೊ 1993 MTV ವಿಡಿಯೋ ಮ್ಯೂಸಿಕ್ ಅವಾರ್ಡ್ಸ್ ನಲ್ಲಿ ಚಲನಚಿತ್ರದ ಅತ್ಯುತ್ತಮ ವಿಡಿಯೋ ಎಂಬ ಪ್ರಶಸ್ತಿ ಗಳಿಸಿತು. 
ಅಮೆರಿಕನ್‌ ಸಂಗೀತ ಪ್ರಶಸ್ತಿಗಳು

ದಿ ಅಮೆರಿಕನ್ ಮ್ಯೂಸಿಕ್ ಅವಾರ್ಡ್ ಎಂಬುದು 1973ರಲ್ಲಿ ಡಿಕ್ ಕ್ಲಾರ್ಕ್ ರೂಪಿಸಿದ ವಾರ್ಷಿಕ ಪ್ರಶಸ್ತಿ ಸಮಾರಂಭವಾಗಿದೆ.[೭೬]

Year Recipient Award Result
1992 ಅಲಿಸ್ ಇನ್ ಚೈನ್ಸ್ ಅಚ್ಚುಮೆಚ್ಚಿನ ನ್ಯೂ ಹೆವಿ ಮೆಟಲ್/ಹಾರ್ಡ್ ರಾಕ್ ಕಲಾವಿದ ನಾಮನಿರ್ದೇಶನ
ಗ್ರ್ಯಾಮಿ ಪ್ರಶಸ್ತಿಗಳು

ಗ್ರ್ಯಾಮಿ ಪ್ರಶಸ್ತಿಗಳನ್ನು ವಾರ್ಷಿಕವಾಗಿ ನ್ಯಾಷನಲ್ ಅಕ್ಯಾಡೆಮಿ ಆಫ್ ರೆಕಾರ್ಡಿಂಗ್ ಆರ್ಟ್ಸ್ ಅಂಡ್ ಸೈನ್ಸಸ್ ನೀಡುತ್ತದೆ.[೧೫][೭೭][೭೮][೭೯][೮೦][೮೧]

Year Recipient Award Result
1992 "ಮ್ಯಾನ್ ಇನ್ ದಿ ಬಾಕ್ಸ್" ಅತ್ಯುತ್ತಮ ಹಾರ್ಡ್ ರಾಕ್ ಪ್ರದರ್ಶನ ನಾಮನಿರ್ದೇಶನ
1993 ಡರ್ಟ್ ಅತ್ಯುತ್ತಮ ಹಾರ್ಡ್ ರಾಕ್ ಪ್ರದರ್ಶನ ನಾಮನಿರ್ದೇಶನ
1995 "ಐ ಸ್ಟೇ ಅವೇ" ಅತ್ಯುತ್ತಮ ಹಾರ್ಡ್ ರಾಕ್ ಪ್ರದರ್ಶನ ನಾಮನಿರ್ದೇಶನ
1996 "ಗ್ರೈಂಡ್" ಅತ್ಯುತ್ತಮ ಹಾರ್ಡ್ ರಾಕ್ ಪ್ರದರ್ಶನ ನಾಮನಿರ್ದೇಶನ
1997 "ಅಗೈನ್" ಅತ್ಯುತ್ತಮ ಹಾರ್ಡ್ ರಾಕ್ ಪ್ರದರ್ಶನ ನಾಮನಿರ್ದೇಶನ
2000 "ಗೆಟ್ ಬಾರ್ನ್ ಅಗೈನ್" ಬೆಸ್ಟ್ ಹಾರ್ಡ್ ರಾಕ್ ಪ್ರದರ್ಶನ ನಾಮನಿರ್ದೇಶನ
2010 "ಚೆಕ್ ಮೈ ಬ್ರೈನ್" ಅತ್ಯುತ್ತಮ ಹಾರ್ಡ್ ರಾಕ್ ಪ್ರದರ್ಶನ ನಾಮನಿರ್ದೇಶನ
MTV ವಿಡಿಯೋ ಸಂಗೀತ ಪ್ರಶಸ್ತಿಗಳು

MTV ವಿಡಿಯೋ ಮ್ಯೂಸಿಕ್ ಅವಾರ್ಡ್ಸ್ ಎಂಬುದು 1984ರಲ್ಲಿ MTV ಸ್ಥಾಪಿಸಿದ ವಾರ್ಷಿಕ ಪ್ರಶಸ್ತಿ ಸಮಾರಂಭ.[೧೮][೮೨][೮೩]

Year Recipient Award Result
1991 "ಮ್ಯಾನ್ ಇನ್ ದಿ ಬಾಕ್ಸ್" ಅತ್ಯುತ್ತಮ ಹೆವಿ ಮೆಟಲ್/ಹಾರ್ಡ್ ರಾಕ್ ವಿಡಿಯೋ ನಾಮನಿರ್ದೇಶನ
1993 "ವುಡ್?"

ಸಿಂಗಲ್ಸ್ ನಿಂದ || ಚಲನಚಿತ್ರದಿಂದ ಅತ್ಯುತ್ತಮ ವಿಡಿಯೋ || style="background: #9EFF9E; color: #000; vertical-align: middle; text-align: center; " class="yes table-yes2 notheme"|ಗೆಲುವು

1996 "ಅಗೈನ್" ಅತ್ಯುತ್ತಮ ಹಾರ್ಡ್ ರಾಕ್ ವಿಡಿಯೋ ನಾಮನಿರ್ದೇಶನ

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ ೧.೨ "ALICE IN CHAINS Interviewed By VOICE OF AMERICA". Blabbermouth.net. 2010-05-28. Archived from the original on 2010-05-30. Retrieved 2010-06-15.
  2. "ಆರ್ಕೈವ್ ನಕಲು". Archived from the original on 2013-06-25. Retrieved 2021-08-24.
  3. ೩.೦ ೩.೧ ೩.೨ ೩.೩ ೩.೪ ೩.೫ Music Bank (Media notes). Columbia Records. 1996. {{cite AV media notes}}: Unknown parameter |bandname= ignored (help); Unknown parameter |publisherid= ignored (help)
  4. "ಲಿಪ್ ಲಾಕ್ ರಾಕ್: ದಿ ಅಲಿಸ್ 'N ಚೈನ್ಸ್ ಸ್ಟೋರಿ". Archived from the original on 2011-07-08. Retrieved 2010-09-09.
  5. "ಸ್ವೀಟ್ ಅಲಿಸ್". Archived from the original on 2012-01-18. Retrieved 2010-09-09.
  6. ೭.೦ ೭.೧ "Discography – Dirt". Aliceinchains.com. Archived from the original on 2006-07-03. Retrieved 2008-02-09.
  7. ೮.೦ ೮.೧ Moses, Michael (1991). "Alice in Chains: Who is Alice and Why is She in Chains?". Rockbeat magazine. {{cite journal}}: Cite journal requires |journal= (help); Italic or bold markup not allowed in: |publisher= (help); Unknown parameter |month= ignored (help)
  8. ೯.೦ ೯.೧ ೯.೨ ೯.೩ ೯.೪ ೯.೫ "Alice in Chains – Artist chart History". Billboard.com. Archived from the original on 2007-12-03. Retrieved 2007-11-09.
  9. ೧೦.೦ ೧೦.೧ ೧೦.೨ ೧೦.೩ ೧೦.೪ ೧೦.೫ ೧೦.೬ ೧೦.೭ ಗಿಲ್, ಕ್ರಿಸ್ (ಸೆಪ್ಟೆಂಬರ್ ೧೯೯೯). "ಡರ್ಟ್". ಗಿಟಾರ್ ವಲ್ಡ್.
  10. ೧೧.೦ ೧೧.೧ "Singles". Billboard.com. Archived from the original on 2007-12-24. Retrieved 2007-12-20.
  11. ೧೨.೦ ೧೨.೧ Huey, Steve. "Facelift". Allmusic. Retrieved 2008-01-01.
  12. ೧೩.೦ ೧೩.೧ Glickman, Simon. "Enotes – Alice in Chains". Enotes.com. Archived from the original on 2009-01-03. Retrieved 2007-12-28.
  13. "Alice in Chains Guitarist Discusses 1990 Clash of the Titans tour, Touring With Ozzy". Blabbermouth.net. 2007-10-07. Archived from the original on 2009-01-08. Retrieved 2008-02-09.
  14. ೧೫.೦ ೧೫.೧ "34th Grammy Awards – 1992". Rockonthenet.com. Retrieved 2007-12-08.
  15. Right Turn (Media notes). Columbia Records. 1992. {{cite AV media notes}}: Unknown parameter |bandname= ignored (help); Unknown parameter |publisherid= ignored (help)
  16. "Singles – Soundtracks and music scores". Aliceinchains.com. Archived from the original on 2006-11-25. Retrieved 2007-12-28.
  17. ೧೮.೦ ೧೮.೧ "1993 MTV Video Music Awards". Rockonthenet.com. Retrieved 2007-12-08.
  18. ೧೯.೦ ೧೯.೧ Turman, Katherine (1993). "Digging Dirt". RIP magazine. {{cite journal}}: Cite journal requires |journal= (help); Italic or bold markup not allowed in: |publisher= (help); Unknown parameter |month= ignored (help)
  19. Huey, Steve. "Dirt". Allmusic. Retrieved 2008-01-01.
  20. ೨೧.೦ ೨೧.೧ ೨೧.೨ ೨೧.೩ ೨೧.೪ Wiederhorn, Jon (2004-04-06). "Remembering Layne Staley: The Other Great Seattle Musician To Die On April 5". VH1. Archived from the original on 2008-06-26. Retrieved 2007-12-22.
  21. "2006 band bio – Aliceinchains.com". Aliceinchains.com. Archived from the original on 2006-07-19. Retrieved 2007-12-14.
  22. "Last Action Hero – Soundtracks and music scores". Aliceinchains.com. Archived from the original on 2007-03-08. Retrieved 2007-11-24.
  23. ೨೪.೦ ೨೪.೧ D'Angelo, Joe (2002-04-20). "Layne Staley, Alice In Chains Singer, Dead At 34". VH1. Archived from the original on 2007-12-06. Retrieved 2007-11-25.
  24. ೨೫.೦ ೨೫.೧ Andrews, Rob (1994). "A Step Beyond Layne's World". Hit Parader. {{cite journal}}: Cite journal requires |journal= (help); Italic or bold markup not allowed in: |publisher= (help); Unknown parameter |month= ignored (help)
  25. "Jar of Flies – Discography". Aliceinchains.com. Archived from the original on 2006-12-08. Retrieved 2007-12-28.
  26. Evans, Paul. "Jar of Flies". Rolling Stone. Archived from the original on 2007-02-02. Retrieved 2008-01-29. {{cite web}}: Italic or bold markup not allowed in: |publisher= (help)
  27. Huey, Steve. "Jar of Flies". Allmusic. Retrieved 2008-01-01.
  28. ೨೯.೦ ೨೯.೧ Wiederhorn, Jon (1996-02-08). "To Hell and Back". Rolling Stone. Archived from the original on 2007-11-13. Retrieved 2008-01-30. {{cite web}}: Italic or bold markup not allowed in: |publisher= (help)
  29. Rothman, Robin (2002-04-22). "Layne Staley Found Dead". Rolling Stone. Archived from the original on 2007-11-14. Retrieved 2007-11-24. {{cite web}}: Italic or bold markup not allowed in: |publisher= (help)
  30. ೩೧.೦ ೩೧.೧ "Meldrum Working With Producer Toby Wright". Blabbermouth.net. 2006-04-26. Archived from the original on 2008-01-23. Retrieved 2007-12-20.
  31. "Alice in Chains timeline". Sonymusic.com. Archived from the original on 2008-02-22. Retrieved 2008-02-01.
  32. Wiederhorn, Jon (1995-11-30). "Alice in Chains: Alice in Chains review". Rolling Stone. Archived from the original on 2009-04-12. Retrieved 2008-01-01. {{cite web}}: Italic or bold markup not allowed in: |publisher= (help)
  33. "Clerks – Soundtracks and movie scores". Aliceinchains.com. Archived from the original on 2006-11-16. Retrieved 2007-12-28.
  34. Rothman, Robin A. "Layne Staley Found Dead". Rolling Stone. Archived from the original on 2007-11-14. Retrieved 2008-01-30. {{cite web}}: Italic or bold markup not allowed in: |publisher= (help)
  35. ೩೬.೦ ೩೬.೧ Fischer, Blair R. "Malice in Chains". Rolling Stone. Archived from the original on 2007-11-14. Retrieved 2008-01-30. {{cite web}}: Italic or bold markup not allowed in: |publisher= (help)
  36. ೩೭.೦ ೩೭.೧ Perota, Joe (Director) (1996-04-15). Unplugged – Alice in Chains (Television production). New York City: MTV. Archived from the original on 2007-02-17. Retrieved 2021-07-17.{{cite AV media}}: CS1 maint: bot: original URL status unknown (link)
  37. "Alice in Chains Concert Chronology: MTV Unplugged Session". John Bacus. Retrieved 2007-12-12.
  38. "Alice in Chains – Sold Out". Hampton Beach Casino Ballroom. Retrieved 2007-11-25.
  39. ೪೦.೦ ೪೦.೧ ೪೦.೨ ೪೦.೩ ೪೦.೪ Erlewine, Thomas; Prato, Greg. "Alice in Chains Biography". Allmusic. Retrieved 2007-11-28.{{cite web}}: CS1 maint: multiple names: authors list (link)
  40. "Alice in Chains.com – Discography". Aliceinchains.com. Archived from the original on 2006-06-28. Retrieved 2007-12-28.
  41. ವಿಯೆಡೆಹಾರ್ನ್, ಜಾನ್ ಜೆರ್ರಿ ಕ್ಯಾಂಟ್ರೆಲ್ ಕಂಜ್ಯೂರ್ಸ್ ಘೋಸ್ಟ್ ಆಫ್ ಅಲಿಸ್ ಇನ್ ಚೈನ್ಸ್ ಆನ್ ನ್ಯೂ LP Archived 2010-08-31 ವೇಬ್ಯಾಕ್ ಮೆಷಿನ್ ನಲ್ಲಿ. MTV.com (ಮಾರ್ಚ್ 20, 2002). 6–20–09ರಲ್ಲಿ ಮರು ಸಂಪಾದಿಸಲಾಗಿದೆ.
  42. ೪೩.೦ ೪೩.೧ Cross, Charles R (June 6, 2002). ""The last days of Layne Staley; Alice in Chains singer dies at thirty-four after long battle with heroin."". ROLLING STONE no. 897. {{cite news}}: |access-date= requires |url= (help)
  43. Wiederhorn, Jon (2003-02-25). "Late Alice In Chains Singer Layne Staley's Last Interview Revealed In New Book". MTV. Archived from the original on 2007-12-17. Retrieved 2007-12-22.
  44. "Well Worth The Trip". Roadrunner Records UK. 2002-12-24. Archived from the original on 2008-01-19. Retrieved 2007-12-07.
  45. ೪೬.೦ ೪೬.೧ Hay, Travis (2005-02-21). "Alice in Chains owns stage in tsunami-relief show full of surprises". Seattlepi.nwsource.com. Retrieved 2007-11-25.
  46. ೪೭.೦ ೪೭.೧ ೪೭.೨ "Metallica man joins Alice in Chains". Rolling Stone. 2006-06-09. Archived from the original on 2007-11-20. Retrieved 2007-11-25. {{cite web}}: Italic or bold markup not allowed in: |publisher= (help)
  47. "The Essential Alice in Chains". Aliceinchains.com. Archived from the original on 2007-10-11. Retrieved 2007-12-28.
  48. Harris, Chris (2006-02-23). "Remaining Alice In Chains Members Reuniting For Summer Gigs". MTV.com. Archived from the original on 2007-12-18. Retrieved 2007-11-24.
  49. "Alice in Chains To Enter Studio In October". Blabbermouth.net. 2008-09-05. Archived from the original on 2008-09-08. Retrieved 2008-09-05.
  50. "Alice in Chains Working With Rush/Foo Fighters Producer". Blabbermouth.net. 2008-10-23. Archived from the original on 2009-05-25. Retrieved 2008-10-23.
  51. "Alice In Chains Set To Release First Album In 14 Years". Ultimate-Guitar.com. 2009-04-09. Retrieved 2009-04-09.
  52. "Alice In Chains Signs With Virgin/EMI". Blabbermouth.net. 2009-04-25. Archived from the original on 2009-04-27. Retrieved 2009-04-25.
  53. "Alice In Chains: 'A Looking In View' video available". idiomag. 2009-07-08. Retrieved 2009-07-27.
  54. "Alice In Chains: New Single, Video On The Way". Blabbermouth.net. 2009-06-26. Archived from the original on 2009-06-28. Retrieved 2009-06-26.
  55. ಮೂಡಿ, ನೆಕೆಸ ಮುಂಬಿ. "ಅಲಿಸ್ ಇನ್ ಚೈನ್ಸ್ ಸ್ಕೋರ್ಸ್ ಎಲ್ಟನ್ ಜಾನ್ ಫಾರ್ ಟ್ರಿಬ್ಯೂಟ್ ಟ್ರ್ಯಾಕ್". ಬಿಲ್ಬೋರ್ಡ್ ಆಗಸ್ಟ್ 11, 2009
  56. "NIN, Alice in Chains, Scars on Broadway, Lamb of God Confirmed For Australia's Soundwave". Blabbermouth.net. 2008-09-23. Archived from the original on 2008-09-30. Retrieved 2008-10-23.
  57. "Rock on the Range". AliceInChains.com. 2009-02-13. Retrieved 2009-02-16.
  58. "Alice In Chains To Release 'Your Decision' Single". Blabbermouth.net. 2009-10-12. Archived from the original on 2009-10-15. Retrieved 2009-10-16.
  59. http://www.allaccess.com/alternative/future-releases
  60. "ಆರ್ಕೈವ್ ನಕಲು". Archived from the original on 2011-07-11. Retrieved 2010-09-09.
  61. "Alice in Chains Guitarist Says 'There Are Thoughts' Of A New Album". Blabbermouth.net. 2010-04-13. Archived from the original on 2010-04-19. Retrieved 2010-04-13.
  62. "Alice In Chains finds its voice". Theweekender.com. 2010-04-13. Archived from the original on 2010-04-17. Retrieved 2010-04-17.
  63. ಗಿಲ್ಬರ್ಟ್, ಜೆಫ್ಫ್ (ಜನವರಿ 1996). "ಗೋ ಆಸ್ಕ್ ಅಲಿಸ್ ". ಗಿಟಾರ್ ವಲ್ಡ್ .
  64. Erlewine, Stephen Thomas. "Degradation Trip Review". Allmusic. Retrieved 2007-12-08.[ಶಾಶ್ವತವಾಗಿ ಮಡಿದ ಕೊಂಡಿ]
  65. Burrows, Alyssa (2002-05-17). "Alice in Chains singer Layne Staley dies on April 5, 2002". Historylink.com. Retrieved 2007-12-08.
  66. "VH1: 100 Greatest Hard Rock Artists". Rockonthenet.com. 2000. Retrieved 2008-01-08.
  67. "ಹಾರ್ಡ್ ರಾಕ್'ಸ್ ಆಲ್ ಟೈಮ್ ಟಾಪ್ 100 ಲೈವ್ ಬ್ಯಾಂಡ್ಸ್". ಹಿಟ್ ಪೆರೇಡರ್ . ಫೆಬ್ರವರಿ 2008.
  68. "ಹೆವಿ ಮೆಟಲ್'ಸ್ ಆಲ್-ಟೈಮ್ ಟಾಪ್ ೧೦೦ ವೋಕಲಿಸ್ಟ್ಸ್". ಹಿಟ್ ಪೆರೇಡರ್ . ನವೆಂಬರ್ 2006.
  69. "ಮೆಟಾಲಿಕ, ಪಂತೇರ: ಟಾಪ್ ಆಲ್ಬಮ್ಸ್ ಆಫ್ ಲಾಸ್ಟ್ 17 ಇಯರ್ಸ್". ultimate-guitar.com. ಏಪ್ರಿಲ್ 30, 2008
  70. "ನ್ಯೂಸ್ – ದಿ 2009 ಕೆರ್ರಾಂಗ್! ಅವಾರ್ಡ್ ವಿನ್ನರ್ಸ್". ಕೆರ್ರಾಂಗ್! ಆಗಸ್ಟ್ 3, 2009.
  71. D'Angelo, Joe; Vineyard, Jennifer; Wiederhorn, Jon (2002-04-22). "MTV.com – "'He Got Me To Start Singing': Artists Remember Layne Staley"". MTV.com. Archived from the original on 2007-10-01. Retrieved 2007-11-08.{{cite web}}: CS1 maint: multiple names: authors list (link)
  72. Snierson, Dan (2004-05-07). "Layne Staley gets Born Again". Entertainment Weekly. Archived from the original on 2008-01-25. Retrieved 2007-01-06. {{cite web}}: Italic or bold markup not allowed in: |publisher= (help)
  73. ೭೪.೦ ೭೪.೧ ೭೪.೨ ೭೪.೩ ೭೪.೪ http://www.billboard.com/#/artist/alice-in-chains/bio/3943
  74. Metallica: Metal Machines (Louder Faster Stronger). Rolling Stone. October 2008. pp. 58–67. {{cite book}}: Italic or bold markup not allowed in: |publisher= (help)
  75. "19th American Music Awards". Rockonthenet.com. Retrieved 2007-12-08.
  76. "35th Grammy Awards – 1993". Rockonthenet.com. Retrieved 2007-12-08.
  77. "37th Grammy Awards – 1995". Rockonthenet.com. Retrieved 2007-12-08.
  78. "38th Grammy Awards – 1996". Rockonthenet.com. Retrieved 2007-12-08.
  79. "39th Grammy Awards – 1997". Rockonthenet.com. Retrieved 2007-12-08.
  80. "42nd Grammy Awards – 2000". Rockonthenet.com. Retrieved 2007-12-08.
  81. "1991 MTV Video Music awards". Rockonthenet.com. Retrieved 2007-12-08.
  82. "1996 MTV Video Music Awards". Rockonthenet.com. Retrieved 2007-12-08.

ಬಾಹ್ಯ ಕೊಂಡಿಗಳು

ಬದಲಾಯಿಸಿ