ಅಲಿಸಿಯಾ ಅಮ್ಹೆರ್ಸ್ಟ್
ಅಲಿಸಿಯಾ ಮಾರ್ಗರೆಟ್ ಟೈಸೆನ್ ಅಮ್ಹೆರ್ಸ್ಟ್, ಬ್ಯಾರನೆಸ್ ರಾಕ್ಲೆ (೩೦ ಜುಲೈ ೧೮೬೫ - ೧೪ ಸೆಪ್ಟೆಂಬರ್ ೧೯೪೧) ಒಬ್ಬ ತೋಟಗಾರಿಕಾ ತಜ್ಞೆ, ಸಸ್ಯಶಾಸ್ತ್ರಜ್ಞೆ ಮತ್ತು ಇಂಗ್ಲಿಷ್ ಭಾಷೆಯ ತೋಟಗಾರಿಕಾ ಇತಿಹಾಸದ ಮೊದಲ ಪಾಂಡಿತ್ಯಪೂರ್ಣ ಲೇಖಕಿ.
ಅಲಿಸಿಯಾ ಅಮ್ಹೆರ್ಸ್ಟ್ | |
---|---|
ಜನನ | ಅಲಿಸಿಯಾ ಮಾರ್ಗರೆಟ್ ಟೈಸೆನ್ ಅಮ್ಹೆರ್ಸ್ಟ್ ೩೦ ಜುಲೈ ೧೮೬೫ ಪೂಲ್, ಡಾರ್ಸೆಟ್, ಇಂಗ್ಲೆಂಡ್ |
ಮರಣ | ೧೪ ಸೆಪ್ಟೆಂಬರ್ ೧೯೪೧ (ವಯಸ್ಸು ೭೬) ಪೂಲ್, ಡಾರ್ಸೆಟ್, ಇಂಗ್ಲೆಂಡ್ |
ಕಾವ್ಯನಾಮ | ಶ್ರೀಮತಿ ಎವೆಲಿನ್ ಸೆಸಿಲ್ ಲೇಡಿ ರಾಕ್ಲಿ ಆಫ್ ಲಿಟ್ಚೆಟ್ ಹೀತ್ ಬ್ಯಾರನೆಸ್ ರಾಕ್ಲಿ |
ವೃತ್ತಿ | ತೋಟಗಾರಿಕಾ ತಜ್ಞ, ಸಸ್ಯಶಾಸ್ತ್ರಜ್ಞ, ಬರಹಗಾರ |
ಭಾಷೆ | ಇಂಗ್ಲೀಷ್ |
ವಿಷಯ | ತೋಟಗಾರಿಕೆ, ತೋಟಗಾರಿಕೆ ಇತಿಹಾಸ |
ಪ್ರಮುಖ ಕೆಲಸ(ಗಳು) | ದಿ ಹಿಸ್ಟರಿ ಆಫ್ ಗಾರ್ಡನಿಂಗ್ ಇನ್ ಇಂಗ್ಲೆಂಡ್ (೧೮೯೬) |
ಬಾಳ ಸಂಗಾತಿ | ಎವೆಲಿನ್ ಸೆಸಿಲ್, ೧ ನೇ ಬ್ಯಾರನ್ ರಾಕ್ಲೆ |
ಸಂಬಂಧಿಗಳು | ವಿಲಿಯಂ ಟೈಸೆನ್-ಅಮ್ಹೆರ್ಸ್ಟ್, ಹ್ಯಾಕ್ನಿಯ ೧ ನೇ ಬ್ಯಾರನ್ ಆಮ್ಹೆರ್ಸ್ಟ್ (ತಂದೆ) |
ಕುಟುಂಬ ಹಾಗು ವೈಯಕ್ತಿಕ ಜೀವನ
ಬದಲಾಯಿಸಿಅಲಿಸಿಯಾ ಅಮ್ಹೆರ್ಸ್ಟ್ ಅವರು ೧೮೬೫ ರಂದು ಡಾರ್ಸೆಟ್‍ನ ಪೂಲ್‍ನಲ್ಲಿ ಜನಿಸಿದರು.[೧] ವಿಲಿಯಂ ಟೈಸೆನ್-ಅಮ್ಹೆರ್ಸ್ಟ್ ಅವರ ಏಳು ಹೆಣ್ಣುಮಕ್ಕಳಲ್ಲಿ ಒಬ್ಬರು, ಅವರು ನಂತರ ವೆಸ್ಟ್ ನಾರ್ಫೋಕ್‌ನ ಕನ್ಸರ್ವೇಟಿವ್ ಸಂಸತ್ತಿನ ಸದಸ್ಯರಾಗಿದ್ದರು.[೨] ಅವರ ತಾಯಿ ಮಾರ್ಗರೆಟ್ ಸುಸಾನ್ ಮಿಟ್‌ಫೋರ್ಡ್‍ರವರು ತೋಟಗಾರರಾಗಿದ್ದರು ಮತ್ತು ಅಮ್ಹೆರ್ಸ್ಟ್‌ಗೆ ಹತ್ತನೇ ವಯಸ್ಸಿನಲ್ಲಿ ಕಾಳಜಿ ವಹಿಸಲು ತನ್ನದೇ ಆದ ನೆಲವನ್ನು ನೀಡಿದರು.[೩] ತಂದೆಯ ದೊಡ್ಡ ಗ್ರಂಥಾಲಯದಿಂದ ಆಕೆಗೆ ಇತಿಹಾಸದ ಮೇಲೆ ಆಸಕ್ತಿ ಹೆಚ್ಚಾಯಿತು.
೧೮೯೮ ರಂದು ಆಕೆ ಎವಿಲಿನ್ ಸೆಸಿಲ್‍ನವರನ್ನು ವಿವಾಹವಾಗಿ ಶ್ರೀಮತಿ ಎವಿಲಿನ್ ಸೆಸಿಲ್ ಎಂದು ಕರೆಯಲ್ಪಟ್ಟರು. ಅವರಿಗೆ ಮೂರು ಮಕ್ಕಳು ಜನಿಸಿದರು. ಎವೆಲಿನ್ ಸೆಸಿಲ್, ಸಂಸತ್ತಿನ ಸಂಪ್ರದಾಯವಾದಿ ಸದಸ್ಯ ಮತ್ತು ನೈಟ್ ಪದವಿಯನ್ನು ಪಡೆದವರು. ಅಮ್ಹೆರ್ಸ್ಟ್ ಅವರು ೧೯೩೪ ರಲ್ಲಿ, ಬ್ಯಾರನ್ ರಾಕ್ಲಿ ಆಗಿ ಬೆಳೆದರು. ಆದ್ದರಿಂದ ಅವರು ಲಿಟ್ಚೆಟ್ ಹೀತ್‌ನ ಲೇಡಿ ರಾಕ್ಲಿಯಾದರು ಮತ್ತು ನಂತರ ಡೊವೆಜರ್ ಬ್ಯಾರನೆಸ್ ರಾಕ್ಲಿ ಎಂಬ ಎರಡು ಹೆಸರುಗಳನ್ನು ಪ್ರಕಟಿಸಿದರು.[೨][೪][೫]
ಅವರು ೧೯೪೧ ರಲ್ಲಿ ಪೂಲ್‌ನಲ್ಲಿ ನಿಧನರಾದರು.[೧]
ಬರವಣಿಗೆಗಳು
ಬದಲಾಯಿಸಿಅಮ್ಹೆರ್ಸ್ಟ್ರವರು, ಅವರ ಮೊದಲ ಮತ್ತು ಅತ್ಯಂತ ಪ್ರಸಿದ್ಧ ಪುಸ್ತಕವಾದ "ದಿ ಹಿಸ್ಟರಿ ಆಫ್ ಗಾರ್ಡನಿಂಗ್ ಇನ್ ಇಂಗ್ಲೆಂಡ್ (೧೮೯೫)"ಗೆ ಹೆಸರುವಾಸಿಯಾದರು.[೬] ಈ ಪುಸ್ತಕವನ್ನು ಅಲಿಸಿಯಾ ಎಮ್. ಟಿ. ಅಮ್ಹೆರ್ಸ್ಟ್ ಹೆಸರಿನಲ್ಲಿ ಪ್ರಕಟಿಸಲಾಗಿದೆ.[೨] ಲೇಖಕರ ಈ ಪುಸ್ತಕ ಅನಿರೀಕ್ಷಿತವಾಗಿ ಖ್ಯಾತಿಯನ್ನು ಪಡೆಯಿತು.[೪] ಮೊದಲನೆಯ ಒಂದು ತಿಂಗಳೊಳಗೆ ಒಪ್ಪಂದ ಮಾಡಿಕೊಂಡ ಎರಡನೇ ಆವೃತ್ತಿಗೆ, ಆಂಹರ್ಸ್ಟ್ ಅವರು ಮೊದಲನೆ ಪ್ರಕಟಣೆಗೆ ನೀಡಲಾದ ಮೊತ್ತದ ಹತ್ತು ಪಟ್ಟು ಪಡೆದರು.[೪][೭]
ಆ ದಿನಗಳಲ್ಲಿ, ಹೆಚ್ಚು ತೋಟಗಾರಿಕೆಯ ಪುಸ್ತಕಗಳು ಪ್ರಾಯೋಗಿಕ ಕೈಪಿಡಿಯಾಗಿದ್ದವು. ಇಂಗ್ಲೇಂಡ್‍ನಲ್ಲಿ ತೋಟಗಾರಿಕೆಯ ಇತಿಹಾಸದ ಬಗ್ಗೆ ಅವಲೋಕಿಸಿದ ಮೊದಲ ಬರಹಗಾರಾದರು.[೨][೩] ೧೯೦೨ ರಲ್ಲಿ ರೋಸ್ ಸ್ಟ್ಯಾಂಡಿಶ್ ನಿಕೋಲ್ಸ್ ಅವರ "ಇಂಗ್ಲಿಷ್ ಪ್ಲೆಷರ್ ಗಾರ್ಡನ್ಸ್" ಮತ್ತು ೧೯೧೩ ರಲ್ಲಿ ಮೇರಿ-ಲೂಯಿಸ್ ಗೋಥೆನ್ ಅವರ "ಎ ಹಿಸ್ಟರಿ ಆಫ್ ಗಾರ್ಡನ್ ಆರ್ಟ್" ನಂತಹ ಪ್ರಸಿದ್ಧ ಕೃತಿಗಳೊಂದಿಗೆ, ಅಮ್ಹೆರ್ಸ್ಟ್‍ರವರು ಯುರೋ-ಅಮೇರಿಕನ್ ಗಾರ್ಡನ್ ಇತಿಹಾಸದ ಬಗ್ಗೆ ಬರೆಯುವ ಮೊದಲ ಅಲೆಯನ್ನು ಪ್ರಾರಂಬಿಸಿದರು.[೮] ಅಮ್ಹೆರ್ಸ್ಟ್‍ರವರ, ಸಮಕಾಲೀನವರಾದ ಗೆರ್ಟ್ರೂಡ್ ಜೆಕಿಲ್ಲಿನವರಂತೆ ನಿರರ್ಗಳ ಅಲ್ಲದಿದ್ದರೂ ಇವರು ಹೆಚ್ಚು ಪಾಂಡಿತ್ಯಪೂರ್ಣವಾಗಿದ್ದರು.[೨] ಸೂಕ್ಷ್ಮವಾದ ಅಡಿಟಿಪ್ಪಣಿಗಳು ಮತ್ತು ಸಮಗ್ರ ಟಿಪ್ಪಣಿಗಳುಳ್ಳ ಆಂಹರ್ಸ್ಟ್ ಅವರ ಗ್ರಂಥಸೂಚಿ "ದಿ ಹಿಸ್ಟರಿ ಆಫ್ ಗಾರ್ಡನಿಂಗ್ ಇನ್ ಇಂಗ್ಲೆಂಡ್" ತನ್ನ ಕ್ಷೇತ್ರದಲ್ಲಿ ಅಧಿಕೃತ ಕೃತಿಯಾಗಿದೆ ಮತ್ತು ಇಂದು ಇತಿಹಾಸಕಾರರಿಗೆ ಮೌಲ್ಯಯುತವಾಗಿದೆ.[೨]
ಅಮ್ಹೆರ್ಸ್ಟ್ ಅವರು ತಾಯಿಯಾದ ನಂತರ, ಮಕ್ಕಳಿಗಾಗಿ ಚಿಲ್ಡ್ರನ್ಸ್ ಗಾರ್ಡನ್ಸ್ (೧೯೦೨) ಮತ್ತು ಚಿಲ್ಡ್ರನ್ ಅಂಡ್ ಗಾರ್ಡನ್ಸ್ (೧೯೦೮) ಪುಸ್ತಕಗಳನ್ನು ಒಳಗೊಂಡಂತೆ ಇನ್ನೂ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ.[೨] ಆಕೆಯ ಲಂಡನ್ ಪಾರ್ಕ್ಸ್ ಮತ್ತು ಗಾರ್ಡನ್ಸ್ (೧೯೦೭) ಲಂಡನ್‌ನ ತೆರೆದ ಸ್ಥಳಗಳ ಬಗ್ಗೆ ಬರೆದ ಮೊದಲ ಪುಸ್ತಕವಾಗಿದೆ.[೨]
ಅಮ್ಹೆರ್ಸ್ಟ್ ಗಾರ್ಡನ್ ಇತಿಹಾಸದ ಮೇಲೆ ಹಲವಾರು ವಿದ್ವತ್ಪೂರ್ಣ ಪೇಪರ್‌ಗಳನ್ನು ಬರೆದರು, ಜೊತೆಗೆ ತನ್ನ ಸ್ವಂತ ತೋಟದಲ್ಲಿ ವಿವಿಧ ಸಸ್ಯಗಳನ್ನು ಬೆಳೆಸಿದರು ಮತ್ತು ಕ್ಯೂ ಗಾರ್ಡನ್ಸ್‌ಗಾಗಿ ವಿದೇಶ ಪ್ರವಾಸಗಳ ಮಾದರಿಗಳನ್ನು ಸಂಗ್ರಹಿಸಿದರು.[೨][೯]
ಪುಸ್ತಕಗಳು
ಬದಲಾಯಿಸಿ- ದಿ ಹಿಸ್ಟರಿ ಆಫ್ ಗಾರ್ಡನಿಂಗ್ ಇನ್ ಇಂಗ್ಲೆಂಡ್ (೧೮೯೬, ಅಲಿಸಿಯಾ ಎಂ. ಟಿ. ಅಮ್ಹೆರ್ಸ್ಟ್ ಆಗಿ)
- ಚಿಲ್ಡ್ರನ್ಸ್ ಗಾರ್ಡನ್ಸ್ (೧೯೦೨, ಗೌರವಾನ್ವಿತ ಶ್ರೀಮತಿ ಎವೆಲಿನ್ ಸೆಸಿಲ್ ಆಗಿ)
- ಲಂಡನ್ ಪಾರ್ಕ್ಸ್ ಮತ್ತು ಗಾರ್ಡನ್ಸ್ (೧೯೦೭, ಗೌರವಾನ್ವಿತ ಶ್ರೀಮತಿ ಎವೆಲಿನ್ ಸೆಸಿಲ್ ಆಗಿ; ಲೇಡಿ ವಿಕ್ಟೋರಿಯಾ ಮ್ಯಾನರ್ಸ್ ಅವರ ಚಿತ್ರಣಗಳೊಂದಿಗೆ)
- ಮಕ್ಕಳು ಮತ್ತು ಉದ್ಯಾನಗಳು (೧೯೦೮)
- ವೈಲ್ಡ್ ಫ್ಲವರ್ಸ್ ಆಫ್ ದಿ ಗ್ರೇಟ್ ಡೊಮಿನಿಯನ್ಸ್ ಆಫ್ ದಿ ಬ್ರಿಟಿಷ್ ಎಂಪೈರ್ (ಮ್ಯಾಕ್‌ಮಿಲನ್, ೧೯೩೫, ಲೇಡಿ ರಾಕ್ಲಿಯಾಗಿ)
- ಸಮ್ ಕೆನಡಿಯನ್ ವೈಲ್ಡ್‌ಪ್ಲವರ್ಸ್: ಬ್ರಿಟಿಷ್ ಎಂಪೈರ್‌ನ ಗ್ರೇಟ್ ಡೊಮಿನಿಯನ್ಸ್‌ನ ವೈಲ್ಡ್ ಫ್ಲವರ್ಸ್‌ನ ಮೊದಲ ಭಾಗವಾಗಿದೆ (೧೯೩೭, ಲೇಡಿ ರಾಕ್ಲಿಯಾಗಿ)
- ಹಿಸ್ಟಾರಿಕ್ ಗಾರ್ಡನ್ಸ್ ಆಫ್ ಇಂಗ್ಲೆಂಡ್ (೧೯೩೮, ಶ್ರೀಮತಿ ಎವೆಲಿನ್ ಸೆಸಿಲ್ ಆಗಿ)
ಇತರ ಸಸ್ಯಶಾಸ್ತ್ರೀಯ ಮತ್ತು ತೋಟಗಾರಿಕಾ ಚಟುವಟಿಕೆಗಳು
ಬದಲಾಯಿಸಿವಿವಿಧ ಸಸ್ಯಗಳ ಬೆಳೆವಣಿಗೆ ಹಾಗೂ ಮಾದರಿಗಳನ್ನು ಸಂಗ್ರಹಿಸುವ ಹವ್ಯಾಸಗಳು ಅಮ್ಹೆರ್ಸ್ಟ್‌ರವರನ್ನು ಮೊಜಾಂಬಿಕ್ ಮತ್ತು ದಕ್ಷಿಣ ಆಫ್ರಿಕಾ (೧೮೯೯), ರೋಡ್ಸಿಯಾ (೧೯೦೦), ಮತ್ತು ಸಿಲೋನ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಮತ್ತು ಕೆನಡಾ (೧೯೨೭) ಹಾಗೂ ದೇಶ ವಿದೇಶಗಳಿಗೆ ಕರೆದೊಯ್ದವು.[೧]
ಇದು ಇಂಗ್ಲೆಂಡ್‌ನಲ್ಲಿ ತೋಟಗಾರಿಕಾ ಶಾಲೆಗಳನ್ನು ಸ್ಥಾಪಿಸಿದ ಅವಧಿಯಾಗಿದ್ದು, ಕ್ಷೇತ್ರಕ್ಕೆ ಪ್ರವೇಶಿಸುವ ಮಹಿಳೆಯರ ಪರವಾಗಿ ಅಮ್ಹೆರ್ಸ್ಟ್ ಪ್ರತಿಪಾದಿಸಿದರು.[೨] ಅಮ್ಹೆರ್ಸ್ಟ್ ಸಸ್ಯಶಾಸ್ತ್ರದ ಮತ್ತು ಇತರ ವಿಷಯಗಳ ಉತ್ತಮ ಕಲಾವಿದೆ ಎಂದು ಸಹ ಕರೆಯಲ್ಪಟ್ಟರು.[೨]
೧೯೦೦ ರಲ್ಲಿ, ಆಕೆಯ ಪತಿ "ಆನ್ ದಿ ಈವ್ ಆಫ್ ದಿ ವಾರ್: ಎ ನೇರೇಟಿವ್ ಆಫ್ ಇಂಪ್ರೆಶನ್ಸ್ ಡ್ಯೂರ್ ಎ ಜರ್ನಿ ಇನ್ ಕೇಪ್ ಕಾಲೋನಿ, ದಿ ಫ್ರೀ ಸ್ಟೇಟ್, ದ ಟ್ರಾನ್ಸ್‌ವಾಲ್, ನಟಾಲ್ ಮತ್ತು ರೊಡೇಶಿಯಾ" ಅನ್ನು ಪ್ರಕಟಿಸಿದರು ಮತ್ತು ಅದರ ಹಲವಾರು ಚಿತ್ರಣಗಳು ಅಮ್ಹೆರ್ಸ್ಟ್‍ರವರ ರೇಖಾಚಿತ್ರಗಳು ಅಥವಾ ಛಾಯಾಚಿತ್ರಗಳಿಂದ ಕೂಡಿದೆ. ೧೬೭೩ ರ ಹಿಂದಿನ ಲಂಡನ್ ಉದ್ಯಾನ ಚೆಲ್ಸಿಯಾ ಫಿಸಿಕ್ ಗಾರ್ಡನ್ ಅನ್ನು ಉಳಿಸುವ ಅಭಿಯಾನದಲ್ಲಿ ಅವರು ಭಾಗವಹಿಸಿದರು.[೫][೪]
ಗೌರವಗಳು ಮತ್ತು ಪರಂಪರೆ
ಬದಲಾಯಿಸಿಅಮ್ಹೆರ್ಸ್ಟ್ ಅವರನ್ನು ೧೯೧೮ ರಲ್ಲಿ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್‌ನ ಸದಸ್ಯರನ್ನಾಗಿ ಮಾಡಲಾಯಿತು.[೧] ೧೬೦೫ ರಲ್ಲಿ ಚಾರ್ಟರ್ಡ್ ಮಾಡಲಾದ ಲಂಡನ್ ಲಿವರಿ ಕಂಪನಿಯ (ಒಂದು ರೀತಿಯ ಟ್ರೇಡ್ ಅಸೋಸಿಯೇಷನ್ ಅಥವಾ ಗಿಲ್ಡ್) ಸ್ವಾತಂತ್ರ್ಯವನ್ನು ಪಡೆದ ಏಕೈಕ ಮಹಿಳೆ ಅವಳು.[೪] ನೇರಳೆ ಬಣ್ಣದ ಹೆಬೆ ಸಸ್ಯಕ್ಕೆ 'ಅಲಿಸಿಯಾ ಅಂಹೆರ್ಸ್ಟ್'ರವರ ಹೆಸರನ್ನಿಡಲಾಗಿದೆ.[೫][೧೦][೧೧] ಅವರದಿ ವೆಲ್-ಕನೆಕ್ಟೆಡ್ ಗಾರ್ಡನರ್: ಎ ಬಯೋಗ್ರಫಿ ಆಫ್ ಅಲಿಸಿಯಾ ಅಮ್ಹೆರ್ಸ್ಟ್, ಗಾರ್ಡನ್ ಹಿಸ್ಟರಿ ಸಂಸ್ಥಾಪಕ, ಎಂಬ ಮೊದಲನೆ ಜೀವನಚರಿತ್ರೆಯನ್ನು ೨೦೧೦ ರಲ್ಲಿ ಪ್ರಕಟಿಸಲಾಗಿದೆ.[೧೨]
ಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ ೧.೨ ೧.೩ Ogilvie, Marilyn, and Joy Harvey. "Rockley, Lady Alicia Margaret (Amherst) (1865-1941)". In The biographical dictionary of women in science: pioneering lives from ancient times to the mid-20th century. Routledge, 2003, p. 1116.
- ↑ ೨.೦೦ ೨.೦೧ ೨.೦೨ ೨.೦೩ ೨.೦೪ ೨.೦೫ ೨.೦೬ ೨.೦೭ ೨.೦೮ ೨.೦೯ ೨.೧೦ Tankard, Judith B. "Reviews: Sue Minter, The Well-Connected Gardener". Garden History, vol. 39, no. 2, 2011, pp. 284–85.
- ↑ ೩.೦ ೩.೧ Horwood, Catherine. Women and Their Gardens: A History from the Elizabethan Era to Today. Chicago: Ball Publishing, pp. 258-59, 310.
- ↑ ೪.೦ ೪.೧ ೪.೨ ೪.೩ ೪.೪ "The Garden History Writer Who Published Under Four Names". Gardening Women, 3 March 2011.
- ↑ ೫.೦ ೫.೧ ೫.೨ Brittain, Julia. "Amherst, Alicia". The Plant Lover's Companion: Plants, People, and Places. Cincinnati: Horticulture Books, 2006, p. 17
- ↑ "Review of A History of Gardening in England by Alicia Amherst, 1895". The Quarterly Journal. 184: 54–75. July 1896.
- ↑ Later editions were published under the names Alicia M. Cecil or Mrs. Evelyn Cecil. See Tankard (2011).
- ↑ Way, Twigs. Virgins, Weeders and Queens: A History of Women in the Garden. Stroud: The History Press, 2006.
- ↑ Dorset Natural History and Archaeological Society. "The Gardens of Lytchett Heath." Proceedings of the Dorset Natural History and Antiquarian Field Club, vol. 28, pp. lxxiii–lxxv.
- ↑ "Hebe 'Alicia Amherst'". Missouri Botanical Garden website.
- ↑ Glen, H.F.; Glen, H. F. (2010). Botanical Exploration of Southern Africa : :An illustrated history of early botanical literature on the Cape Flora, Biographical accounts of the leading plant collectors and their activities in southern Africa form the days of the East India Company until the modern times. Vol. 26 (2nd. ed.). Pretoria: SANBI. ISBN 978-1-919976-54-9.
- ↑ Minter, Sue. The Well-Connected Gardener: A Biography of Alicia Amherst, Founder of Garden History. Brighton: Bookd Guild, 2010.