ಅರ೦ತೊಡು ಗ್ರಾಮ ಮ೦ಗಳೂರು-ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಸುಳ್ಯದಿ೦ದ ೧೦ ಕೀ.ಮೀ ದೂರದಲ್ಲಿ ಈ ಗ್ರಾಮವಿದೆ ಪೂ‌ರ್ವ ಪಶ್ಚಿಮವಾಗಿ ಹರಿಯುತ್ತಿರುವ ಪಯಸ್ವಿನಿ ನದಿಯ ಉತ್ತರ ದಡೆಯಿ೦ದ ಉದ್ದಕ್ಕೆ ಪೂಮಲೆಯಿ೦ದ ಕಿಲಾರು ಮಲೆಯವರೆಗೆ ಹರಡಿಕೊ೦ಡಿದ್ದು ಗ್ರಾಮದ ಬಹುಭಾಗ ಅರಣ‍್ಯವಾಗೀದೆ ,ಗ್ರಾಮದೊಳಗೆ ಅಡ್ದವಾಗಿ ಉತ್ತರ ದಕ್ಷಿಣವಾಗಿ ಹರಿಯುವ ಬಲ್ನಾಡು ಹೋಳೆಯ ಇಕ್ಕೆಲಗಳಲ್ಲಿ ಕೃಷಿ ಪ್ರದೇಶ , ವಾಸ ಕ್ಷೇತ್ರಗಳೀವೆ.ಗುಡ್ಲ,ದೇರಾಜೆ,ಬನ,ಪೂಮಲೆಯ,ಇಳಿಜಾರುಗಳಲ್ಲೂ ಅಡ್ತಲೆ,ಕಿರ್ಲಾಯ,ಜೋಡಿಪಣೆ,ಕಿಲಾರ್ಮಲೆ ರಕ್ಷಿತರಾಣ್ಯದೊಳಗೂ ಹುದುಗಿಕೊಂಡತಿವೆ.ಈ ಸ್ಥಳಕ್ಕೆ ಅರಂತೋಡು ಎಂದು ಸ್ಥಳಬರಲು ಕಾರಣ,ಈ ಸ್ಥಳವು ಆರುತೋಡುಗಳಿಂದ ಆವೃತವಾಗಿದ್ದು ಆದ್ದರಿಂದ ಈ ಸ್ಥಳಕ್ಕೆ ಅರಂತೋಡು ಎಂದು ಹೆಸರು ಬಂತು. ಅರಂತೋಡು ಗ್ರಾಮಕೇಂದ್ರವೂ ಹೌದು,ಹೆದ್ದಾರಿಯಲ್ಲಿ ಇರುವಕಾರಣ ಇಲ್ಲಿಂದ ವಾಹನ ಸೌಕರ್ಯ ಸಾಕಷ್ಟಿದೆ,ಗ್ರಾಮದೊಳಗೆ ಎಲ್ಲಾ ಕಡೆ ಬಸ್ ಮಾರ್ಗಗಳಿಲ್ಲ, ಮುಖ್ಯಪೇಟೆಯ ಹೊರತಾಗಿ ಎಲ್ಲಾ ಹಳ್ಳಿಗಳು ಗುಡ್ಡಗಾಡು ಪ್ರದೇಶದಲ್ಲಿವೆ,ಮರ್ಕಂಜ,ಎಲಿಮಲೆ ಮತ್ತು ತೊಡಿಕಾನ ಮಾರ್ಗಗಳನ್ನು ಹೊರತುಪಡಿಸಿ ಉಳಿದವು ಮಣ್ಣಿನರಸ್ತೆಗಳು. ಪದವಿಶಿಕ್ಷಣ ಮತ್ತು ಹೆಚ್ಚಿನ ವ್ಯಾಸಂಗಕ್ಕಾಗಿ,ಕೋರ್ಟು,ಕಚೇರಿ,ವ್ಯಾಪಾರ ವಹಿವಾಟುಗಳಿಗಾಗಿ ಸುಳ್ಯ ನಗರವನ್ನೇ ಅವಲಂಬಿಸಿಕೊಡಿದ್ದಾರೆ, ಕೃಷಿಕರು ತಮ್ಮ ಉತ್ಪನ್ನಗಳನ್ನು ಮಾರಾಟಮಾಡಲು, ಔಷಧಿ ಆಸ್ಪತ್ರೆಗಳಿಗಾಗಿ ಸುಳ್ಯಕ್ಕೆ ಹೋಗಿಬರುತ್ತಾರೆ.ಎಕ್ಸ್ ಪ್ರೆಸ್ ಬಸ್ಸುಗಳು ಅರಂತೋಡಿನಲ್ಲಿ ನಿಲ್ಲಿಸುವುದಿಲ್ಲ.ಅರಂತೋಡು ಇಂದು ಬಹಳ ಬೆಳೆದು ನಿಂತಿದೆ.[೧] ಕಳೆದೆರಡು ದಶಕಗಳಲ್ಲಿ ಅನೇಕ ರೀತಿಯ ನಾಗರಿಕ ಸೌಲಭ್ಯಗಳನ್ನು ಇಲ್ಲಿ ವ್ಯವಸ್ಥೆಗೊಳಿಸಲಾಗಿರುವುದು. ಅರಂತೋಡಿನ ಬಹಳಷ‍್ಟು ಮಂದಿ ಹೊರಗಡೆ ನೌಕರಿಯಲ್ಲಿದ್ದಾರೆ. ಹೆದ್ದಾರಿಯಲ್ಲಿರುವ ಕಾರಣ ನಗರ ಕೇಂದ್ರಗಳಿಗೆ ತೆರೆದುಕೊಳ್ಲುವುದು ಸುಲಭವಾಗಿದೆ. ಅರಂತೋಡು ಶೈಕ್ಷಣಿಕವಾಗ ಮುಂದಿದೆ.[೨]

ಗ್ರಾಮಗಳುಸಂಪಾದಿಸಿ

 • ಬಿಳಿಯಾರು,
 • ಪೂಜರಿಮನೆ
 • ಉಳುವಾರು

ನದಿಗಳುಸಂಪಾದಿಸಿ

 • ಪಯಸ್ವಿನಿ
 • ಬಲ್ನಾಡು

ಜನಜಾತಿಸಂಪಾದಿಸಿ

 • ಗೌಡರು
 • ನಾಯ್ಕ
 • ಬಂಟ
 • ಬ್ರಾಹ್ಮಣ
 • ಮುಸಲ್ಮಾನ

ಬೆಳೆಗಳುಸಂಪಾದಿಸಿ

 • ಅಡೀಕೆ
 • ತೆಂಗು
 • ರಬ್ಬರ್[೩]

ಉಲ್ಲೇಖಗಳುಸಂಪಾದಿಸಿ

 1. ಅರಂತೋಡು ಗ್ರಾಮಪಂಚಾಯತ್
 2. https://kn.wikipedia.org/wiki/%E0%B2%85%E0%B2%B2%E0%B3%86%E0%B2%9F%E0%B3%8D%E0%B2%9F%E0%B2%BF
 3. ಸುದ್ದಿ ಮಾಹಿತಿ ಡಾ.ಯು.ಪಿ ಶಿವಾನಂದ ಸಂಪಾದಕ ವರ್ಷ ೨೦೦೩ ಪ್ರಕಾಶಕರು ಸುದ್ದೀ ಬಿಡುಗಡೆ ಸುಳ್ಯ