ಅರ್ಪಿತಾ ಸಿಂಗ್‌

ಅರ್ಪಿತಾ ಸಿಂಗ್‌ರವರು ಭಾರತೀಯ ಚಿತ್ರಕಲಾವಿದರು.

ಅರ್ಪಿತಾ ಸಿಂಗ್‌
The Chairman, Lalit Kala Akademi, Ministry of Culture, Shri K.K. Chakravarty conferring the fellowship on eminent artist Arpita Singh, at a function, in New Delhi on October 10, 2014.jpg
ಅರ್ಪಿತಾ ದತ್ತಾ
ಜನನ೧೯೩೭
ಬರಾನಗರ, ಕೊಲ್ಕತ್ತ
Nationalityಭಾರತೀಯ
Alma materದೆಹಲಿ ಪಾಲಿಟೆಕ್ನಿಕ್‌
ಉದ್ಯೋಗಚಿತ್ರಕಲೆ
Spouse(s)ಪರಮ್ಜಿತ್ ಸಿಂಗ್‌
ಮಕ್ಕಳುಅಂಜುಂ ಸಿಂಗ್

ಜನನಸಂಪಾದಿಸಿ

ಅರ್ಪಿತಾರವರು ೧೯೩೭ ಕೊಲ್ಕತ್ತದ ಬರಾನಗರ ಎಂಬ ನಗರದಲ್ಲಿ ಜನಿಸಿದರು.

ವೈಯಕ್ತಿಕ ಜೀವನಸಂಪಾದಿಸಿ

೧೯೪೬ರಲ್ಲಿ ಅರ್ಪಿತಾರವರು ತನ್ನ ತಾಯಿ ಮತ್ತು ಸಹೋದರನೊಂದಿಗೆ ಕೋಲ್ಕತಾವನ್ನು ತೊರೆದರು. ಇವರ ಸಹ ಕಲಾವಿದರಾಗಿದ್ದ, ಪರಮ್ಜಿತ್ ಸಿಂಗ್‌ರವರನ್ನು ವಿವಾಹವಾದರು. ಈ ದಂಪತಿಗೆ ಅಂಜುಂ ಸಿಂಗ್ ಎಂಬ ಒಬ್ಬ ಪುತ್ರಿ ಇದ್ದಾಳೆ. ಪ್ರಸ್ತುತ ದೆಹಲಿಯಲ್ಲಿ ವಾಸಿಸುತ್ತಿದ್ದಾರೆ.

ವಿದ್ಯಾಭ್ಯಾಸಸಂಪಾದಿಸಿ

ಅರ್ಪಿತಾ ಸಿಂಗ್‌‌ರವರು ೧೯೫೪ ರಿಂದ ೧೯೫೯ರವರೆಗೆ, ದೆಹಲಿ ಪಾಲಿಟೆಕ್ನಿಕ್‌ನಲ್ಲಿ ವಿದ್ಯಾಭ್ಯಾಸ ಮಾಡಿದರು ಮತ್ತು ಲಲಿತಕಲೆ ವಿಷಯದಲ್ಲಿ ಡಿಪ್ಲೊಮೊ ಪದವಿಯನ್ನು ಪಡೆದಿದ್ದಾರೆ.[೧]

ವೃತ್ತಿ ಜೀವನಸಂಪಾದಿಸಿ

ಇವರು ಪದವಿಯನ್ನು ಪಡೆದ ನಂತರ, ಕೇಂದ್ರ ಸರ್ಕಾರದ ಜವಳಿ ಸಚಿವಾಲಯದ, ನೇಕಾರರ ಸೇವಾ ಕೇಂದ್ರದಲ್ಲಿ ಕಾರ್ಯವನ್ನು ನಿರ್ವಹಿಸಿದ್ದರು. ತಲ್ವಾರ್ ಗ್ಯಾಲರಿ ಇವರ ಪ್ರಥಮ ಚಿತ್ರ ಪ್ರದರ್ಶನವಾಗಿದೆ. ಭಾರತ ಸರ್ಕಾರದ ಕಾಟೇಜ್ ಇಂಡಸ್ಟ್ರೀಸ್ ರಿಸ್ಟೋರೇಶನ್ ಪ್ರೋಗ್ರಾಂನಲ್ಲಿ ಕೆಲಸ ಪಡೆದರು. ಅವರು ಕಾರ್ಯಕ್ರಮದಲ್ಲಿ ಕೆಲಸ ಮಾಡುವಾಗ, ಇವರು ಭಾರತದ ಸಾಂಪ್ರದಾಯಿಕ ಕಲಾವಿದರು ಮತ್ತು ನೇಕಾರರನ್ನು ಭೇಟಿಯಾದರು. ಇದು ಅವರ ಕಲಾಕೃತಿಯ ಮೇಲೂ ಪರಿಣಾಮ ಬೀರಿದೆ ಎನ್ನಲಾಗಿದೆ. ಅರ್ಪಿತಾ ಸಿಂಗ್‌ರವರು ವಿಭಿನ್ನ ಸಾಮಾಜಿಕ ಮತ್ತು ರಾಜಕೀಯ ಜಾಗೃತಿಯ ಮೂಲಕ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ. ಇವರು ೧೯೬೦ರ ದಶಕದಲ್ಲಿ ದೆಹಲಿ ಪಾಲಿಟೆಕ್ನಿಕ್‌ನ ಲಲಿತಕಲಾ ವಿಭಾಗದ ಇತರ ಹಳೆಯ ವಿದ್ಯಾರ್ಥಿಗಳೊಂದಿಗೆ, "ದಿ ಅನ್‌ನೌನ್" ಕಲಾವಿದರ ಗುಂಪಿನ ಸ್ಥಾಪಕ ಸದಸ್ಯರಾಗಿದ್ದರು. 'ದಿ ಅನ್‌ನೌನ್'ನ ಮೊದಲ ಗುಂಪು ಪ್ರದರ್ಶನವನ್ನು ೧೯೬೨ರಲ್ಲಿ ನವದೆಹಲಿಯ ರಫಿ ಮಾರ್ಗದಲ್ಲಿರುವ ಐಇಎನ್‌ಎಸ್ ಕಟ್ಟಡದಲ್ಲಿ ನಡೆಸಲಾಯಿತು.

ಶೈಲಿಸಂಪಾದಿಸಿ

ಅರ್ಪಿತಾರವರು ಮೊದಲು ಕಾಗದದ ಜಲವರ್ಣಚಿತ್ರಗಳನ್ನು ಬಿಡಿಸುತ್ತಿದ್ದರು. ಹೆಚ್ಚಾಗಿ ಕಪ್ಪು ಮತ್ತು ಬಿಳಿ ಬಣ್ಣಗಳನ್ನು ಬಳಸುತ್ತಿದ್ದರು. ಇವರು ೮೦ರ ದಶಕದಲ್ಲಿ ಬೆಂಗಾಲಿ ಜನಪದ ಕಲೆಗಳ ಬಗ್ಗೆ ಮಹಿಳೆಯರೊಂದಿಗೆ ಸೇರಿ ಚಿತ್ರ ಬಿಡಿಸಲು ಆರಂಬಿಸಿದ್ದರು. ಇವರು ಬಿದಿಸುತ್ತಿದ್ದ ಚಿತ್ರಗಳ ಪ್ಯಾಲೆಟ್‌ಗಳು ಹೆಚ್ಚಾಗಿ ಗುಲಾಬಿ ಮತ್ತು ನೀಲಿ ಬಣ್ಣಗಳನ್ನು ಹೊಂದಿರುತ್ತಿದ್ದರು. ಇವರ ವರ್ಣಚಿತ್ರಗಳು ಮಹಿಳೆಯರು ದೈನಂದಿನ ಕೆಲಸ ಮಾಡುವುದನ್ನು ಮತ್ತು ಅವರ ಜೀವನದಲ್ಲಿ ಸರಳ ದಿನಚರಿಗಳನ್ನು ಅನುಸರಿಸುವುದನ್ನು ತೋರಿಸುತ್ತದೆ. ಅರ್ಪಿತಾರವರ ಚಿತ್ರಗಳು ದೈನಂದಿನ ಬಳಕೆಯ ವಸ್ತುಗಳು ಮರಗಳು, ಹೂಗಳು, ಹೂ ಹೂದಾನಿಗಳು, ಪ್ರಾಣಿಗಳು, ಟೀ ಪಾಟುಗಳು, ದಿಂಬುಗಳು, ಮತ್ತು ಧ್ವಜಗಳನ್ನು ಸೆಳೆಯುತ್ತದೆ ಮತ್ತು ತಮ್ಮ ಸುತ್ತಲಿನ ಮಹಿಳೆಯರ ಜೀವನ ಶೈಲಿಯನ್ನು ತೆರೆದಿರುತ್ತದೆ.

90 ರ ದಶಕದಲ್ಲಿ, ಅರ್ಪಿತಾರವರ ಚಿತ್ರಕಲೆ ಶೈಲಿಯು ತೈಲವರ್ಣಚಿತ್ರಗಳಿಗೆ ಬದಲಾಗಿತು. ಜೊತೆಗೆ ಮಹಿಳಾ ಕೇಂದ್ರಿತ ಕಲೆಯನ್ನು ಚಿತ್ರಿಸುವುದನ್ನು ಮುಂದುವರೆಸಿದರು.

ಇವರು 20 ನೇ ಶತಮಾನದ ಕೊನೆಯ ದಶಕದಲ್ಲಿ "ವುಮೆನ್ ವಿಥ್ ಎ ಗರ್ಲ್ ಚೈಲ್ಡ್" ಎಂಬ ವಿಷಯದ ಕುರಿತು ಸರಣಿ ವರ್ಣಚಿತ್ರಗಳನ್ನು ಚಿತ್ರಿಸಿದರು. ಸಮಕಾಲೀನ ಮಹಿಳೆ ತನ್ನ ಕಲೆಯಲ್ಲಿ ಎದುರಿಸುತ್ತಿರುವ ದ್ವೇಷ, ಸಾಮಾಜಿಕ ಅನ್ಯಾಯ ಮುಂತಾದ ಸಮಸ್ಯೆಗಳನ್ನು ಇವರು ಬಿಡಿಸುತ್ತಿದ್ದ ಚಿತ್ರಗಳಲ್ಲಿ ಕಾಣಬಹುದಾಗಿತ್ತು. ಇವರು ಭಾರತದಲ್ಲಿ ಹೆಣ್ಣು ಮಗುವಿಗೆ ಸಂಬಂಧಿಸಿದ ತೊಂದರೆಗಳ ಬಗ್ಗೆ ಚಿತ್ರಿಸುತ್ತಿದ್ದರು. ಇವರ ಕೆಲವು ವರ್ಣಚಿತ್ರಗಳಲ್ಲಿ ಮಹಿಳೆಯರು ನಗ್ನವಾಗಿ ಕಾಣಿಸಿಕೊಳ್ಳುತ್ತಾರೆ, ಆದರೆ ಅವರ ವರ್ಣಚಿತ್ರಗಳು ಲೈಂಗಿಕ ಉಚ್ಚಾರಣೆಗಳನ್ನು ಹೊಂದಿಲ್ಲ ಮತ್ತು ಮಹಿಳೆಯ ದುರ್ಬಲತೆಯನ್ನು ಪ್ರತಿಬಿಂಬಿಸುತ್ತವೆ.

ಪ್ರಥಮ ಪ್ರದರ್ಶನಸಂಪಾದಿಸಿ

ಅರ್ಪಿತಾ ಸಿಂಗ್‌ರವರ ಪ್ರಥಮ ಪ್ರದರ್ಶನವನ್ನು ೧೯೭೨ರಲ್ಲಿ ದೆಹಲಿಯ ಕುನಿಕಾ ಚೆಮೋಲ್ಡ್ ಗ್ಯಾಲರಿಯಲ್ಲಿ ರೋಶನ್ ಅಲ್ಕಾಜಿಯವರು ಏರ್ಪಡಿಸಿದ್ದರು.[೨]

ಇತರ ಪ್ರದರ್ಶನಗಳುಸಂಪಾದಿಸಿ

ಅರ್ಪಿತಾ ಸಿಂಗ್‌ರವರು ೨೦ಕ್ಕೂ ಹೆಚ್ಚು ಏಕವ್ಯಕ್ತಿ ಪ್ರದರ್ಶನಗಳನ್ನು ಚಂಡಿಗಡ, ದೆಹಲಿ, ಮುಂಬೈ ಮತ್ತು ಭೂಪಾಲದಲ್ಲಿ ನೀಡಿದ್ದಾರೆ.

 1. ೧೯೮೪ರಲ್ಲಿ ನಡೆದ ಇಂಡೋ-ಗ್ರೀಕ್ ಸಾಂಸ್ಕೃತಿಕ ಪ್ರದರ್ಶನದಲ್ಲಿ ಭಾಗವಹಿಸಿದ್ದಾರೆ.
 2. ೧೯೮೬ರಲ್ಲಿ ಯಾರಿಸ್ನಲ್ಲಿ ನೆಡೆದ ಸೆಂಟರ್ ಜಾರ್ಜಸ್ ಪೊಂಪಿಡು ಭಾಗವಹಿಸಿದ್ದರು.
 3. ೧೯೮೭ರಲ್ಲಿ ಜಿನೀವಾದ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು.
 4. ೧೯೮೭ರಲ್ಲಿ ಹವಾನಾ ದ್ವೈವಾರ್ಷಿಕದಲ್ಲಿ ಭಾಗವಹಿಸಿದ್ದರು.
 5. ೧೯೯೩ರಲ್ಲಿ ನ್ಯೂ ಸೌತ್ ವೇಲ್ಸ್‌ನ ಆರ್ಟ್ ಗ್ಯಾಲರಿಯ ಪ್ರದರ್ಶನದಲ್ಲಿ ಭಾಗವಹಿಸಿದ್ದರು.
 6. ೧೯೯೪ರಲ್ಲಿ ದೆಹಲಿಯಲ್ಲಿ ಡ್ರಾಯಿಂಗ್ ೯೪, ಗ್ಯಾಲರಿ ಎಸ್ಪೇಸ್‌ನಲ್ಲಿ ಪ್ರದರ್ಶನ ನೀಡಿದ್ದಾರೆ.
 7. ನದೆಹಲಿಯಲ್ಲಿ ನೆಡೆದ ೩ ಮತ್ತು ೪ನೇ ತ್ರೈಮಾಸಿಕ ಕಾರ್ಯಕ್ರಮದಲ್ಲಿ ಪ್ರದರ್ಶನವನ್ನು ನೀಡಿದ್ದರು.
 8. ೨೦೦೩ರಲ್ಲಿ ನ್ಯೂಯಾರ್ಕ್‌ನಲ್ಲಿ ನೆಡೆದ ಮೆಮೊರಿ ಜಾರ್ಸ್,ಬೋಸ್ ಪ್ಯಾಸಿಯಾ ಮಾಡರ್ನ್ ಎಂಬ ಪ್ರದರ್ಶನದಲ್ಲಿ ಭಾಗವಹಿಸಿದ್ದರು.
 9. ೨೦೦೬ರಲ್ಲಿ ನವದೆಹಲಿಯ ವಾಡೆಹ್ರಾ ಆರ್ಟ್ ಗ್ಯಾಲರಿಯಲ್ಲಿನ 'ಮಾಡರ್ನ್ ಅಂಡ್ ಕಾಂಟೆಂಪರರಿ ಇಂಡಿಯನ್ ಆರ್ಟ್' ನಲ್ಲಿ ಇವರ ಕೃತಿಗಳನ್ನು ಪ್ರದರ್ಶಿಸಲಾಗಿದೆ.
 10. ೨೦೦೬ರಲ್ಲಿ ಲಂಡನ್‌ನ ಗ್ರೊಸ್ವೆನರ್ ಗ್ಯಾಲರಿಯಲ್ಲಿ ನೆಡೆದ 'ಪ್ರೋಗ್ರೆಸ್ಸಿವ್ ಟು ಆಲ್ಟರ್‌ಮಾಡರ್ನ್: 62 ಇಯರ್ಸ್ ಆಫ್ ಇಂಡಿಯನ್ ಮಾಡರ್ನ್ ಆರ್ಟ್'ನಲ್ಲಿ ಭಾಗವಹಿಸಿದ್ದರು.
 11. ೨೦೦೯ರಲ್ಲಿ ಬೆಂಗಳೂರಿನ ಗ್ಯಾಲರಿ ಮೆಮೆಂಟೋಸ್‌ನಲ್ಲಿ ನೆಡೆದ ದಿ ರೂಟ್ ಆಫ್ ಎವೆರಿಥಿಂಗ್ ಎಂಬ ಪ್ರದರ್ಶನದಲ್ಲಿ ಭಾಗವಹಿಸಿದ್ದರು.
 12. ೨೦೧೬ರಲ್ಲಿ ವರ್ಕ್ ಆನ್ ಪೇಪರ್ ಎಂಬ ಪ್ರದರ್ಶನವನ್ನು ವಡೇಹ್ರಾ ಆರ್ಟ್ ಗ್ಯಾಲರಿಯಲ್ಲಿ ನೆಡೆಸಿದ್ದರು.
 13. ೨೦೧೭ರಲ್ಲಿ ನ್ಯೂಯಾರ್ಕ್‌ನ ತಲ್ವಾರ್ ಗ್ಯಾಲರಿಯಲ್ಲಿ ನೆಡೆದ ಟೈಯಿಂಗ್ ಡೌನ್ ಟೈಮ್‌ನಲ್ಲಿ ಭಾಗವಹಿಸಿದ್ದಾರೆ.
 14. ೨೦೧೮ರಲ್ಲಿ ನ್ಯೂಯಾರ್ಕ್‌ನ ತಲ್ವಾರ್ ಗ್ಯಾಲರಿಯಲ್ಲಿ ನೆಡೆದ ಟೈಯಿಂಗ್ ಡೌನ್ ಟೈಮ್‌- ೨ರಲ್ಲಿ ಭಾಗವಹಿಸಿದ್ದಾರೆ.
 15. ೨೦೧೯ರಲ್ಲಿ ದೆಹಲಿಯ ಸಾಕೆತ್‌ನ ಕೆಎನ್‌ಎಂಎದಲ್ಲಿ ನೆಡೆದ ಪ್ರದರ್ಶನದಲ್ಲಿ ಭಾಗವಗಿಸಿದ್ದರು.

ಪ್ರಶಸ್ತಿಗಳುಸಂಪಾದಿಸಿ

ಇವರ ತಮ್ಮ ಕೆಲಸಕ್ಕಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.

 • ೨೦೧೪ರಲ್ಲಿ ಲಲಿತ ಕಲಾ ಅಕಾಡೆಮಿಯಿಂದ ಫೆಲೋಶಿಪ್‌ ಪಡೆದಿದ್ದಾರೆ.
 • ೨೦೧೧ರಲ್ಲಿ ಪದ್ಮ ಭೂಷಣ ಪ್ರಶಸ್ತಿಯನ್ನು ಪಡೆದಿದ್ದರೆ.
 • ೧೯೯೮ ಮತ್ತು ೧೯೯೯ನೇ ಸಾಲಿನ ಭೂಪಾಲ್‌‌ನ ಕಾಳಿದಾಸ ಸನ್ಮಾನ ಪುರಸ್ಕೃತರಾಗಿದ್ದಾರೆ.[೩]
 • ೧೯೯೧ರಲ್ಲಿ ದೆಹಲಿಯ ಸಾಹಿತ್ಯ ಕಲಾ ಪರಿಷತ್ತಿನಿಂದ ಪರಿಷತ್ ಸನ್ಮಾನವನ್ನು ಪಡೆದಿದ್ದಾರೆ.

ಪ್ರಕಟಣೆಗಳುಸಂಪಾದಿಸಿ

೨೦೧೮ರಲ್ಲಿ ಅರ್ಪಿತಾ ಸಿಂಗ್‌ರವರ ಟೈಯಿಂಗ್ ಡೌನ್ ಟೈಮ್, ತಲ್ವಾರ್ ಗ್ಯಾಲರಿ ಪ್ರಕಟಣೆ ಗೊಂಡಿದೆ.[೪]

ಬಾಹ್ಯ ಕೊಂಡಿಗಳುಸಂಪಾದಿಸಿ

ಉಲ್ಲೇಖಗಳುಸಂಪಾದಿಸಿ

 1. https://www.mojarto.com/blogs/mojarto-profiles-artist-arpita-singh
 2. https://shodhganga.inflibnet.ac.in/bitstream/10603/39877/9/09_chapter%203.pdf
 3. https://talwargallery.com/arpita-bio/
 4. https://talwargallery.com/tying/