ಅರ್ಚಕ ವೆಂಕಟೇಶ' - ಇವರು ಪತ್ರಿಕಾವ್ಯವಸಾಯನಿರತರು ಮತ್ತು ಕನ್ನಡ ಸಾಹಿತಿಗಳು.

೧೯೧೬ರಲ್ಲಿ ಧಾರವಾಡದಲ್ಲಿ ಜನಿಸಿದರು. ಇವರ ತಾಯಿ ರಾಧಾಬಾಯಿ ; ತಂದೆ ಗೋಪಾಲಕೃಷ್ಣಾಚಾರ್ಯ.  ಕೆಲಕಾಲ ಎಚ್.ಎ.ಎಲ್.ದಲ್ಲಿ ಉದ್ಯೋಗ ಕೈಕೊಂಡ ವೆಂಕಟೇಶರವರು, ಆ ಬಳಿಕ  ಸಿದ್ಧವ್ವನಹಳ್ಳಿ ಕೃಷ್ಣಶರ್ಮರ ‘ವಿಶ್ವ ಕರ್ನಾಟಕ’ ಪತ್ರಿಕೆಯ ಸಂಪಾದಕ ಮಂಡಲಿಯಲ್ಲಿ ಸೇರಿದರು. ಕೊನೆಯ ಎರಡು ವರ್ಷ ಆ ಪತ್ರಿಕೆಯ ಸಂಪಾದಕರೂ ಆಗಿದ್ದರು. ‘ವಿಶ್ವ ಕರ್ನಾಟಕ’ ಮುಚ್ಚಿದ ಬಳಿಕ ಸಂಯುಕ್ತ ಕರ್ನಾಟಕ ಪತ್ರಿಕೆಯ ಬೆಂಗಳೂರು ಆವೃತ್ತಿಯಲ್ಲಿ ಸೇವೆಗೈದು ನಿವೃತ್ತಿ ಹೊಂದಿದರು.

ಸಾಹಿತ್ಯ

ಬದಲಾಯಿಸಿ

ಅರ್ಚಕ ವೆಂಕಟೇಶ ಇವರು ಬಹುಮುಖ ಪ್ರತಿಭೆಯ ಸಾಹಿತಿಗಳೂ ಆಗಿದ್ದರು. ಇವರ ಕೆಲವು ಕೃತಿಗಳು ಇಂತಿವೆ:

ಕವನ ಸಂಕಲನ

ಬದಲಾಯಿಸಿ
  • ಪೂರ್ಣಚಂದ್ರ
  • ಶಬ್ದ ಶಿಲ್ಪ
  • ಶಿಲಾಪಕ್ಷ

ಕಥಾಸಂಕಲನ

ಬದಲಾಯಿಸಿ
  • ಧ್ರುವ ನಕ್ಷತ್ರ
  • ಜೀವನ ಸಂಗ್ರಾಮ
  • ಪಂಗನಾಮ
  • ಬ್ಲ್ಯಾಕ್ ಮಾರ್ಕೆಟ್
  • ವೀರ ಸಾದಿಕ್

ಕಾದಂಬರಿ

ಬದಲಾಯಿಸಿ
  • ಅಸ್ಥಿಪಂಜರ
  • ಚಲೋ ದಿಲ್ಲಿ
  • ರವಿಶಂಕರ

ಬಾಲ ಸಾಹಿತ್ಯ

ಬದಲಾಯಿಸಿ
  • ಜಯವಿಜಯ
  • ಪಾನಕ ಕೋಸಂಬರಿ
  • ಪ್ರಹ್ಲಾದನ ಪಾಣಿಪತ್ತು
  • ಭ್ರಾತೃ ಪ್ರೇಮ
  • ಸಾವನದುರ್ಗ
  • ಹರಿದ ಚಂದ್ರ

ಜೀವನ ಚರಿತ್ರೆ

ಬದಲಾಯಿಸಿ
  • ಸ್ವಾಮಿ ವಿವೇಕಾನಂದ
  • ಸುಭಾಷಚಂದ್ರ ಬೋಸ್
  • ಮದನಮೋಹನ ಮಾಳವೀಯ
  • ರಮಣ ಮಹರ್ಷಿ
  • ರಾಮನ ಕತೆ

ಆಂಗ್ಲ ಕೃತಿಗಳು

ಬದಲಾಯಿಸಿ
  • Bhakti Geetamruta
  • Random Thoughts

ಅರ್ಚಕ ವೆಂಕಟೇಶರವರು ೧೯೭೭ರಲ್ಲಿ ನಿಧನರಾದರು.

ಇವುಗಳನ್ನೂ ನೋಡಿ

ಬದಲಾಯಿಸಿ