ಅರಿವಳಿಕೆ, ಅರಿವಳಿಕಗಳು

ಅರಿವಳಿಕೆ, ಅರಿವಳಿಕಗಳು (ಅನಿಸ್ತೀಸಿಯ,ಅನಿಸ್ತೆಟಿಕ್ಸ್ ). : ತಿಳಿವೂ ಅರಿವೂ ಕಳೆದಿರುವುದೇ ಅರಿವಳಿಕೆ (ಅನಿಸ್ತೀಸಿಯ). ಅರಿವನ್ನು ಅಳಿಸುವ ಕಾರಣಗಳೇ ಅರಿವಳಿಕಗಳು (ಅನಿಸ್ತೆಟಿಕ್ಸ್). ಮುಖ್ಯವಾಗಿ ಶಸ್ತ್ರಕ್ರಿಯೆ ಆಗುವಾಗಿನ ನೋವು ಗೊತ್ತಾUದಂತೆ ಮಾಡುವುದೇ ಅರಿವಳಿಕೆಯ ಉದ್ದೇಶ. ಆದರೂ ಮಿದುಳು, ಬೆನ್ನುಹುರಿಗಳ ಹಲವು ರೋಗಗಳಲ್ಲೂ ಇದೊಂದು ಲಕ್ಷಣವಾಗಿಯೂ ಇರುವುದುಂಟು. ಶಸ್ರ್ತ ಕಿಯೆಯ ಅರಿವಳಿಕೆ ಮೈಯೆಲ್ಲದರ ಇಲ್ಲವೇ ಒಂದು ತಾವಿನದು (ಲೋಕಲ್) ಆಗಿರಬಹುದು. ದೇಹದ ಒಂದು ಭಾಗದಲ್ಲಿ (ತಾವು) ಮಾತ್ರ ಹೀಗೆ ಅರಿವು ಇಲ್ಲದಾಗುವುದು. ಅರಿವಳಿಕೆ ಎಂಬುದರ ಸಮ ಪದವಾಗಿ ಕೆಲವೇಳೆ ಬಳಸುವ ನೋವರಿವಳಿಕೆಯ (ಅನ್ಯಾಲ್ಜಿಸಿಯ) ಅರ್ಥವೇ ಬೇರೆ. ನೋವರಿವಳಿಕೆಯಲ್ಲಿ ರೋಗಿಯ ಮೈಯ ಒಂದು ಭಾಗದಲ್ಲಿ ಇಲ್ಲವೇ ಪೂರ್ತಿಯಾಗಿ ನೋವು ಗೊತ್ತಾಗದಂತೆ ಇದ್ದರೂ ಮುಟ್ಟಿದರೆ ಗೊತ್ತಾಗುತ್ತದೆ. ಒತ್ತಿದರೂ ತಿಳಿಯುತ್ತದೆ. ನೋವಿನ ಅರಿವು ಬಿಟ್ಟು ಇತರೆಲ್ಲ ಅರಿವುಗಳೂ ಚೆನ್ನಾಗಿರುವುವು. ಅದೇ ಅರಿವಳಿಕೆಯಲ್ಲಿ, ಮೈಯೆಲ್ಲ ಆದರೂ ಸರಿಯೆ. ತಾವಿನಲ್ಲಾದರೂ ಸರಿಯೆ, ಅಲ್ಲಿ ನೋವಿನದೂ ಸೇರಿದಂತೆ ಯಾವ ತೆರನ ಅರಿವೂ ತಿಳಿವಿಗೆ ಬರುವುದಿಲ್ಲ.

ಚರಿತ್ರೆ ಬದಲಾಯಿಸಿ

ಅರಿವನ್ನು ಮಂದಗೊಳಿಸಿ, ನೋವು ಕಳೆಯಲು ಮಾನವ ಆದಿಯಿಂದಲೂ ಯತ್ನಿಸಿದ್ದಾನೆ. ಹಿಂದಿನ ಕಾಲದಲ್ಲಿ ಇದಕ್ಕಾಗಿ ಗಾಂಜಾವನ್ನು ಬಳಸುತ್ತಿದ್ದ ರು, ಮದ್ದುಗಳನ್ನು ನುಂಗಿಸಿ ಮೇಲೆ ಬಳಿದುದಲ್ಲದೆ, ಹೊಗೆ ಹಾಕುವುದು, ಮಾಯಮಂತ್ರ, ನರ, ರಕ್ತನಾಳಗಳ ಮೇಲೆ ಒತ್ತುವುದೇ ಇತ್ಯಾದಿ ಮಾಡಿನೋಡಿದ್ದಾಗಿದೆ. ನೋವು ಕಳೆಯಲು ಅಫೀಮನ್ನು ಕೊಡಲು ಮೊದಲು ಮಾಡಿದವ ಫ್ರಾನ್ಸಿನ ಅಂಗಕೆಲಸ ಶಾಸ್ತ್ರಜ್ಞ ಮೆಜೆಂಡಿ. ಆದರೆ ಅಲೆಕ್ಸಾಂಡರ್ ವುಡ್ (1853) ಚರ್ಮದಡಿ ಚುಚ್ಚುವ ಜೀಕಳಿಯನ್ನು (ಸಿರಿಂಜ್) ಕಂಡುಹಿಡಿವ ತನಕ ಇದನ್ನು ನುಂಗಿಸುತ್ತಿದ್ದ ರು. ಅರಿವಳಿಕಗಳು ಇಲ್ಲದಿದ್ದ ಹಿಂದಿನ ಕಾಲದಲ್ಲಿ ಸಕತ್ತು ಖಾಯಿಲೆಯಿಂದ ರೋಗಿಯನ್ನು ಉಳಿಸಲು ಮಾತ್ರ ಶಸ್ತ್ರಕ್ರಿಯೆ ನಿಮಿಷದೊಳಗಾಗಿ ಆಗುತ್ತಿತ್ತು. ಅರಿವಳಿಕಗಳು ಬಂದ ಹೊಸದರಲ್ಲಿ, ಸರಳ ಚಿಕ್ಕ ಶಸ್ತ್ರಕ್ರಿಯೆಗಳು ಆಗುತ್ತಿದ್ದುವು. ಸುಮಾರು ಶತಮಾನದಿಂದಲೂ ಬಳಕೆಯಲ್ಲಿರುವ ನೈಟ್ರಸ್ ಆಕೈಡು, ಕ್ಲೋರೊಫಾರ್ಮ್, ಈಥರುಗಳು ಹೆಚ್ಚುಕಡಿಮೆ ಒಂದೇ ಬಾರಿಗೆ ಗೊತ್ತಾದುವು ಎನ್ನಬಹುದು. ಶಸ್ತ್ರಕ್ರಿಯೆ ಆಗುವಾಗ ನೋವಾಗದಂತೆ ಇರಿಸಲು ಈಥರಿನ ಬಳಕೆಯನ್ನು 1846ರ ಅಕ್ಟೋಬರ್ 16ರಲ್ಲಿ ಚಾಲ್ರ್ಸ್ ಜಾಕನ್, ವಿಲಿಯಂ ಟಿ.ಜಿ. ಮಾರ್ಟನ್ ಜನರೆದುರು ಮಾಡಿತೋರಿದ ಮೇಲೆ, ಆ ಕೆಲಸಕ್ಕಾಗಿ ಬರುವ ಅರಿವಳಿಕೆ, ಅರಿವಳಿಕ ಪದಗಳನ್ನು ಆಲಿವರ್ ವೆಂಡೆಲ್ ಹೋಮ್ಸ್ ಸೂಚಿಸಿದ. ಈಥರನ್ನು ಕಂಡುಹಿಡಿವುದರಲ್ಲಿಕ್ರಾಫರ್ಡ್ ಲಾಂಗ್‍ನ ಪಾತ್ತವೂ ಇದೆ. ಈ ಮೂವರಲ್ಲಿ ಯಾರು ಹೆಸರಿಗೆ ಪಾತ್ರರು ಎನ್ನುವುದು ತಕರಾರಿನ ವಿಚಾರ. ಇದಕ್ಕೂ ಹಿಂದಿನ ಕಾಲದಿಂದ ನೋವು ಕಳೆವ ಯತ್ನಗಳು ಬೇಕಾದಷ್ಟು ಆಗಿದ್ದುವು. ಜೋಸೆಫ್ ಪ್ರೀಸ್ಟ್‍ಲಿ ನೈಟ್ರಸ್ ಆಕ್ಸೈಡನ್ನೂ (1772), ಆಮ್ಲಜನಕವನ್ನೂ (1774) ಕಂಡುಹಿಡಿದಾಗಿನಿಂದ, ಇವುಗಳ ಮತ್ತಿತರ ಕಾರಕಗಳ ಶೋಧನೆಗಳಿಂದ ಶಸ್ತ್ರಕ್ರಿಯೆಯಲ್ಲಿನ ಬಳಕೆಗಾಗಿ ಅರಿವಳಿಕೆ ಕೊನೆಗೆ ಹುಟ್ಟಿಕೊಂಡಿತು. ನೈಟ್ರಸ್ ಆಕ್ಸೈಡನ್ನು ಉಸಿರಲ್ಲಿ ಎಳೆದುಕೊಳಲು ಕೊಟ್ಟು ಹಲ್ಲಿನ ನೋವು ಕಳೆದು, ಹಂಫ್ರಿ ಡೇವಿ (1799) ಶಸ್ತ್ರಕ್ರಿಯೆಗಳಲ್ಲಿ ಇದನ್ನು ಬಳಸಲು ಸೂಚಿಸಿದ್ದ. ಇದನ್ನು ಯಾರೂ ಗಮನಿಸಲಿಲ್ಲ. ಹೀಗೆ ಸ್ವಲ್ಪ ಮಟ್ಟಿಗೆ ಉಸಿರುಕಟ್ಟಿಸಿ, ಇಂಗಾಲದ ಡೈಆಕೈಡನ್ನು ಉಸಿರಲ್ಲೆಳೆಸಿದರೆ ಅರಿವು ತಪ್ಪಿ ನೋವಿಲ್ಲದಾಗುವು ದೆಂದು ತೋರಿಸಿದ. ಇನ್ನೂ ವೈದ್ಯ ಕಲಿಯುತ್ತಿದ್ದ ಹೆನ್ರಿ ಹಿಲ್ ಹಿಕ್ಮನ್, ಇದನ್ನು ಅವನು ಪ್ರಕಟಿಸಿದರೂ (1824), ಯಾರೂ ಆಸಕ್ತಿ ತೋರಲಿಲ್ಲ. ಪ್ರಾಣಿಗಳಲ್ಲಿ ಅವನ ಪ್ರಯೋಗಗಳಿಗೆ ವೈದ್ಯ ಸಂಘಗಳು ಅಡ್ಡಿ ಒಡ್ಡಿದುವು. ಮೈಕೆಲ್‍ಫ್ಯಾgಡೆ ಈಥರನ್ನು ಉಸಿರಲ್ಲೆಲೆದುಕೊಂಡು ನೋಡಿ ಏನಾಯಿತೆಂದು ವgದಿ ಮಾಡಿದ. 1842ನೆಯ ಮಾರ್ಚ್ 30ರಲ್ಲಿ ಕ್ರಾ¥ರ್ಡ್ ವಿಲಿಯಂ ಲಾಂಗ್ ಶಸ್ತ್ರಕ್ರಿಯೆಯಲ್ಲಿ ಅರಿವಳಿಸಲು ಈಥರನ್ನು ಬಳಸಿದ್ದರೂ ಅದನ್ನು ಯಾರಿಗೂ ತಿಳಿಸದೆ ತೆಪ್ಪಗಿದ್ದ. ಡಿಸೆಂಬರ್ 1844ರಲ್ಲಿ ಹಲ್ಲು ವೈದ್ಯ ವೆಲ್ಸ್ ಹಲ್ಲು ಕೀಳಿಸಿಕೊಳಲು ತಾನೇ ನೈಟ್ರಸ್ ಆಕ್ಸೈಡನ್ನು ತೆಗೆದುಕೊಂಡ. ಶಸ್ತ್ರಕ್ರಿಯೆಯಲ್ಲಿ ಇದರ ಬಳಕೆಯನ್ನು ಜನರಿಗೆಲ್ಲ ತೋರುವ ಇವನ ಯತ್ನ ಗಲಾಟೆಯಿಂದ ಕೈಗೂಡಲಿಲ್ಲ. ಇದರಿಂದಾಗಿ ಇವನನ್ನು ಮೋಸಗಾರನೆಂದರು. ಆಮೇಲಿನ ಯತ್ನಗಳು ಕೈಗೂಡಿದುವು. 16ನೆಯ ಶತಮಾನದಲ್ಲಿ ಸ್ಪೇನಿನವರು ಆಕ್ರಮಿಸುವುದಕ್ಕೆ ಮುಂಚೆಯೂ ಪೆರು ನಿವಾಸಿಗಳು ದಣಿವು, ಹಸಿವು ತಡೆಯಲು ಕೋಕ ಎಲೆಗಳನ್ನು ಅಗಿಯುತ್ತಿದ್ದರು. ಅದರ ಕ್ಷಾರರೂಪಿಯಾದ ಕೊಕೇನನ್ನು ಕಣ್ಣಿನ ಶಸ್ತ್ರಕ್ರಿಯೆಯಲ್ಲಿ ಮೊಟ್ಟ ಮೊದಲಾಗಿ 1884ರಲ್ಲಿ ವಿಯನ್ನಾದ ವೈದ್ಯ ಕಾರ್ಲ್ ಕೊಲ್ಲರ್ ಬಳಸಿದಾಗ ತಾವಿನ ಅರಿವಳಿಕೆ ಕಾಲಿಟ್ಟಿತು. ಕೊಕೇನ್ ಅಪಾಯಕರ, ವಿಷಕರವಾದ್ದರಿಂದ ಅಷ್ಟಾಗಿ ಈಗ ಬಳಕೆಯಲ್ಲಿಲ್ಲ.

ಮೈಯೆಲ್ಲದರ ಅರಿವಳಿಕೆ ಬದಲಾಯಿಸಿ

ಉಸಿರೆಳೆತ ಬದಲಾಯಿಸಿ

ರೋಗಿ ಉಸಿರಲ್ಲಿ ಎಳೆದುಕೊಳ್ಳುವ ಅನಿಲದ ಇಲ್ಲವೆ. ಆರಿಹೋಗುವ ಕಾರಕಗಳಿಂದ ಉಸಿರೆಳೆತದ ಅರಿವಳಿಕೆ ಆಗುವುದು. ಬಾಯಿ, ಮೂಗು ಮೊಗಗಳ ಮೇಲಿನ ಮುಖ್ಯವಾಗಿ ಈಚೆಗೆ ಬಳಕೆ ಇರುವ ಪ್ಲಾಸ್ಟಿಕ್ ಶಸ್ತ್ರಕ್ರಿಯೆ ಆಗುತ್ತಿರುವಾಗ, ಬಾಯಿ ಮೂಗುಗಳ ಮೂಲಕ ಅರಿವಳಿಕ ಅನಿಲಗಳನ್ನು ಒಳಹೊಗಿಸುವಾಗ ಆತಂಕವಾಗುತ್ತಿತ್ತು. ಕೊನೆಗೆ ಉಸಿರ್ನಾಳಾಂತರ ಒಂದು ರಬರ್ ಕೊಳವೆಯನ್ನು ಇರಿಸು ವಂತಾದಾಗ ಅನುವಾಯಿತು. ಬಹಳ ಹೊತ್ತು ನಡೆಸಬೇಕಾದ ಶಸ್ತ್ರಕ್ರಿಯೆಗಳಲ್ಲಿ ತಲೆಯನ್ನು ಹೇಗೆಂದರೆ ಹಾಗೆ ತಿರುಗಿಸಬೇಕಿರುವ ಮಿದುಳಿನ ಶಸ್ತ್ರಕ್ರಿಯೆಗೆ ಇದು ಅನುಕೂಲ. ರೋಗಿಯನ್ನು ದೂರದಿಂದಲೇ ಅರಿವಳಿಕೆಗಾರ ಹತೋಟಿಯಲ್ಲಿ ಇಟ್ಟುಕೊಳ್ಳಬಹುದು. ಭಾಗವಾಗಿಯೋ ಪೂರ್ತಿಯಾಗಿಯೋ ಪುಪ್ಪುಸ ತೆಗೆಯುವಲ್ಲಿ, ವ¥ಯ ಬೂರನ್ಬು (ಹರ್ನಿಯ) ನೇರ್ಪಡಿಸುವಲ್ಲಿ ಶಸ್ತ್ರಕ್ರಿಯೆ ಆಗಬೇಕಾದ ಅಂಗವೇ ಉಸಿರಾಟದಿಂದ ಆಡುತ್ತಿದ್ದುದರಿಂದ ಕಷ್ಟವಾಗುತ್ತಿತ್ತು. ಇದಕ್ಕಾಗಿ ಹಿಡಿತದಲ್ಲಿನ ಉಸಿರಾಟ ಹುಟ್ಟಿಕೊಂಡಿತು. ಅಂದರೆ ಅರಿವಳಿಕೆಗಾರನೇ ತನ್ನ ಕೈಯಲ್ಲಿನ ರಬ್ಬರ್ ಚೀಲದಿಂದ ಬಲವಂತವಾಗಿ ಒತ್ತಿ ಉಸಿರನ್ನು ಒಳತಳ್ಳಿ ಸಡಿಲಿಸುತ್ತಿರುವನು, ಅಲ್ಲಿಗೆ ರೋಗಿಯ ಉಸಿರಾಟ ಪೂರ್ತಿ ಇವನ ಕೈಯಲ್ಲಿರುವುದು. ನಿತ್ಯದ ಉಸಿರಾಟವನ್ನು ಹಲವಾರು ವಿಧಾನಗಳಿಂದ ತುಸು ಹೊತ್ತು ತಡೇದಿಡಲೂಬಹುದು. ಸತತ ಸುಧಾರಣೆ ಮತ್ತು ಬದಲಾವಣೆ ವಿಶೇಷ ಅರಿವಳಿಕ ತಂತ್ರಗಳ ಬಳಕೆಗೆ ಅನುಕೂಲಿಸಿತು. ಅರಿವಳಿಕಗಳ ಮಿಶಣಗಳಿಂದ ಇಂಗಾಲದ ಡೈಯಾಕೈಡನ್ನು ಸೋಡಾ ಲೈಮಿನಿಂದ ಹೀರುತ್ತಿದ್ದರೆ, ಅರಿವಳಿಸುತ್ತಿರಲು ಅರಿವಳಿಕ ಸ್ವಲ್ಪವೇ ಸಾಕು. ನೈಟ್ರಸ್ ಆಕೈಡ್ ಈಗ ಎಲೆಲ್ಲೂ ಬಳಕೆಯಲ್ಲಿದೆ. ಆದರೂ ಸಾಕಷ್ಟು ಆಮಜನಕ ದೊರಕದೆ ಆಮೇಲೆ ಮಿದುಳಿಗೆ ಕೆಡುಕಾಗಿಸುವ ಅಪಾಯವಂತೂ ಅರಿವಳಿಕೆಗಾರನ ಗಮನದಲ್ಲಿ ಇದ್ದೇ ಇರುತ್ತದೆ. ದುರ್ಬಲ ಅರಿವಳಿಕವಾದ್ದರಿಂದ, ಇತರ ಅರಿವಳಿಕಗಳೂಂದಿಗೇ ಇದರ ಬಳಕೆ ಹೆಚ್ಚು.: ಉಸಿರೆಳೆತದ ಅರಿವಳಿಕಗಳಲ್ಲಿ ಡೈಯೆತಿಲ್ ಈಥರಿನ ಪಾತ್ರ ಹೆಚ್ಚಿನದು. ಇದವನ್ನು ಕೊಟ್ಟಾಗ, ಜೊಲ್ಲುಸುರಿಕೆ, ವಾಂತಿ, ಎದೆಗೆಮ್ಮು ಆಗುವುದರಿಂದ ಸೈಕ್ಲೋಪ್ರೋಪೈಲ್, ಸೆಪ್ರೆತಿಲೀನ್ ಇತ್ಯಾದಿ ಬೇರೆ ಈಥರುಗಳನ್ನು ಕೊಟ್ಟು ನೋಡಿದ್ದಾಗಿದೆ. ಡೈವಿನೈಲ್ ಈಥರು ಮಕ್ಕಳಲ್ಲಿನ ತುಸು ಕಾಲದ ಅರಿವಳಿಕೆಗೆ ಚೆನ್ನು. ಇದು ಎಷ್ಟೇ ಬಲವಾಗಿದ್ದರೂ ಹೆಚ್ಚು ಹೊತ್ತು ಕೊಡುತ್ತಿದ್ದರೆ, ಆಗಾಗ್ಗೆ ಇದರಿಂದ ಕೆಡಕಾಗುವುದರಿಂದ ಅಷ್ಟಾಗಿ ಹೆಚಿನ ಬಳಕೆಯಲ್ಲಿಲ್ಲ. ಎಡಿನ್‍ಬರೋದ ಜೇಮ್ಸ್ ಯಂಗ್ ಸಿಂಪ್ಸನ್ ತನ್ನ ಮೇಲೂ ತನ್ನ ಒಂದಿಗರ ಮೇಲೂ ಮೊದಲು ನವೆಂಬರ್ 1847ರಲ್ಲಿ ಬಳಸಿನೋಡಿ ಬಳಕೆಗೆ ತಂದ ಕ್ಲೋರೊಫಾರ್ಮ್, ಈಥರಿಗಿಂತ ಬಲವಾದರೂ ಇನ್ನೂ ವಿಷಕರ. ಮೊದಮೊದಲು ಈಥರಿನ ಬದಲಾಗಿ ಇದೇ ಎಲ್ಲೆಲ್ಲೂ ಬಳಕೆಯಲ್ಲಿತ್ತು. ಇದರ ಅಪಾಯಗಳನ್ನು ಗಮನಿಸಿದಂತೆಲ್ಲ ಅರಿವಳಿಕವಾಗಿ ಇದರ ಬಳಕೆ ತೀರ ಇಳಿದಿದೆ. ಶಸ್ತ್ರಕ್ರಿಯೆಯ ಹರವು ಹರಡಿದಂತೆಲ್ಲ, ನಿತ್ರಾಣಿ ರೋಗಿಗಳಲ್ಲೂ ಅರಿವಳಿಕೆ ಬಳಸುವಂತಾಯಿತು. ಇದಕ್ಕೆ ಈಥರು, ಕೋರೊಫಾರ್ಮ್ ಸಾಕಾಗಲಿಲ್ಲ. ಇವುಗಳಿಂದ ಅರಿವು ತಪ್ಪುವುದು ನಿಧಾನ. ಆಮೇಲೆ ಕೆಮ್ಮು ಹುಟ್ಟಿಸುತ್ತಿದ್ದುವು. ಮೊದಲ ಹಂತದಲ್ಲೇ ಕೋರೋಫಾರ್ಮ್ ಗುಂಡಿಗೆಗೆ ಮಾರಕವಾಗಿ, ಕೆಲವು ತಾಸುಗಳು ಕೊಟ್ಟ ಮೇಲೆ ಈಲಿಗೂ ವಿಷಕರವಾಗುವುದು. ಇದಕ್ಕಾಗಿ ಇವನ್ನು ಕಡಿಮೆ ಮಾಡಿ, ಬಹುವಾಗಿ ನೈಟ್ರಸ್ ಆಕೈಡ್, ಆಮ್ಲಜನಕ ಕೊಡುವುದನ್ನು ಹೆಚ್ಚಿಸಲಾಯಿತು. ಕ್ಲೋರೊಫಾರ್ಮ್‍ಗಿಂತ ಟ್ರೈಕ್ಲೋರೊಯೆತಿಲೀನ್ (ಟ್ರೈಲೀನ್) ಗುಂಡಿಗೆಗೆ ಅಷ್ಟಾಗಿ ಕೆಡುಕಾಗದಂತಿದ್ದರೂ ಯಾವಾಗಲೂ ಸ್ನಾಯುಗಳನ್ನು ಪೂರ್ತಿ ಸಡಿಲಗೊಳಿಸದು. ಹೆರಿಗೆಯಲ್ಲೂ ಹಲ್ಲು ಕೀಳುವಾಗಲೂ ಇದೀಗ ನೋವರಿವಳಿಸಲು ಚೆನ್ನಾಗಿದೆ. ಇದು ಇಂಗ್ಲೆಂಡಿನಲ್ಲಿ ತುಂಬ ಜನಪ್ರಿಯವಾಗಿತ್ತು. ಮೈಯೆಲ್ಲದರ ಅರಿವಳಿಕವಾಗಿ ಇದನ್ನು ನೈಟ್ರಸ್ ಆಕೈಡ್, ಆಮ್ಲಜನಕಗಳೊಂದಿಗೆ ಕೊಡುವುದುಂಟು. ಮುಚ್ಚಿದ ಹರಿಸುತ್ತಿನಲ್ಲಿ (ಕೋಸ್ಡ್ ಸರ್ಕ್ಯೂಟ್) ಟ್ರೈಕ್ಲೋರೊಯೆತಿಲೀನನ್ನು ಸೇವಿಸಲು ಕೊಟ್ಟರೆ. ಹರಿಸುತ್ತಿನಲ್ಲಿರುವ ಸೋಡಾ ಲೈಮ್‍ನೊಂದಿಗೆ ಇದು ಕೂಡಿ ವಿಷಕರ ವಸ್ತುವಾಗುವುದು. ಅಲ್ಲದೆ ವಿದ್ಯುತಿನ ಸುಡಿಕವೇ (ಕಾಟರಿ) ಮುಂತಾದವುಗಳಿಂದ ಬರುವ ಕಾವಿನಲ್ಲಿ ಇದು ಒಡೆದು ವಿಷಕರವಾಗುತ್ತದೆ. ಸಿಡಿವ ಅನಿಲವಾದ ಎತಿಲೀನ್ 1923ರಲ್ಲಿ ಬಳಕೆಗೆ ಬಂದಿತು. ನೈಟ್ರಸ್ ಆಕೈಡಿಗಿಂತ ಇದು ಬಲು ಬಲವಾಗಿದ್ದುದರಿಂದ ಇದರೊಂದಿಗೆ ಒಂದಿಷ್ಟು ಆಮ್ಲಜನಕವನ್ನು ಸೇರಿಸಿಕೊಡಬಹುದು. ತುಸು ಹೊತ್ತಿನ ಉಸಿರೆಳೆತದ ಅರಿವಳಿಕವಾಗಿ, ಹೆಫೆಲ್ಡರ್ (1848) ಮೊದಲು ಬಳಸಿದ ಈತಿಲ್‍ಕೋರೈಡಿನ ಬಳಕೆ ಹೆಚ್ಚಾಗಿಲ್ಲದಿದ್ದರೂ ಇದು ಕೋರೊಫಾರ್ಮಿನಷ್ಟೇ ಗುಂಡಿಗೆಗೆ ವಿಷಕರ. ಸಿಂಚನ ಯಂತ್ರದಿಂದ ಚರ್ರನೆ ಹೊರಬಿಟ್ಟು, ಮೈಮೇಲಿನ ಚರ್ಮ, ಅದರಡಿಯ ಊತಕಗಳನ್ನು (ಟಿಷ್ಯೂಸ್) ನೀರ್ಗಲ್ಲಂತಾಗಿಸಲು ಈತಿಲ್ ಕೋರೈಡವನ್ನು ಬಳಸಬಹುದು. ಬಹುಪಾಲು ಹೈಡೋಕಾರ್ಬನ್ ಅನಿಲಗಳು ಅರಿವಳಿಕಗಳು ಕೆಲಕಾಲ ಜನಪ್ರಿಯ ವಾಗಿದ್ದ, ಅಮೆರಿಕದ ಈತಿಲೀನೂ ಜರ್ಮನಿಯ ಅಸಿಟಿಲೀನೂ ಇಂಥವೇ. ಸೈಕೊಪ್ರೊಪೇನು 1934 ರಲ್ಲಿ ಮೊದಲು ರೋಗಿಗಳಲ್ಲಿ ಬಳಕೆಗೆ ಬಂದು ಈಗಲೂ ಚೆನ್ನಾದ ಅರಿವಳಿಕ ಎನಿಸಿದೆ. ಬಲವಾದ ಮಂಪರಕಾರಿಯಾದ್ದರಿಂದ, ಇದರೂಂದಿಗೆ ಹೆಚ್ಚಾಗಿ ಆಮಜನಕವನ್ನು ಸೇರಿಸುವುದು ಒಂದು ಅನುಕೂಲ. ಉಸಿರಾಟವನ್ನು ಕುಂದಿಸುವುದರಿಂದ ಎದೆಗೂಡಿನ ಶಸ್ತ್ರಕ್ರಿಯೆಗಳಲ್ಲಿ ಕೊಡುವಂಥದು. ಇದು ಹತ್ತಿಕೊಂಡು ಉರಿವುದರಿಂದಲೂ ಬಲೆ ದುಬಾರಿ ಆದ್ದರಿಂದಲೂ ಮುಚ್ಚಿದ ಹರಿಸುತ್ತಿಸಲೇ ಇದನ್ನು ಕೊಡಬೇಕು. ಗುಂಡಿಗೆ ಮೇಲಿನ ಇದರ ಪರಿಣಾಮ ಇನ್ನೂ ನಿರ್ಧಾರವಾಗಿಲ್ಲ. ಕ್ಯುರೇರ್ ರೇ ಬಂದ ಮೇಲೆ ಇದರ ಬಳಕೆ ಹೆಚ್ಚಿತು. 1956ರಲ್ಲಿ ಎಲೆಲ್ಲೂ ಬಳಕೆಗೆ ಬಂದ, ಹ್ಯಾಲೋತೇನ್ (ಪ್ಲೂವೇತೇನ್) ಬಣ್ಣವಿರದ, ಆರಿಹೋಗುವ, ಸುವಾಸನೆಯ, ಎಷ್ಟು ಆಮ್ಲಜನಕ ಸೇರಿಸಿದರೂ ಹೊತ್ತಿ ಉರಿಯದ, ಸಿಡಿಯದ ದ್ರವ. ಇಷ್ಟಾದರೂ ಇದರಿಂದ ರಕ್ತನಾಳ ಹಿಗ್ಗಲಿಕೆ, ರಕ್ತದೊತ್ತಡದ ಇಳಿತ, ನಿಧಾನ ಗುಂಡಿಗೆಬಡಿತ ಇವೆಲ್ಲ ಆಗುವುವಲ್ಲದೆ, ಇದರ ಬಳಕೆಯಿಂದ ಎಷ್ಟೋ ಮಂದಿ ಸತ್ತಿದ್ದಾರೆ. ಈಡಾಗುವವರಲ್ಲಿ ಯಕೃತ್ತಿಗೆ ಅಪಾಯಕಾರಿ (ಲಿವರ್ ).

ಗುದನಾಳಗಳಲ್ಲಿ ಬದಲಾಯಿಸಿ

ಗುದನಾಳದೊಳಕ್ಕೆ (ರೆಕ್ಟಂ) ಸೇರಿಸಿಟ್ಟು ಅರಿವು ತಪ್ಪಿಸುವ ವಿಧಾನವೇ ಗುದನಾಳ (ರೆಕ್ಟಲ್) ಅರಿವಳಿಕೆ. ಇದರಲ್ಲಿಬಹುವಾಗಿ ಬಳಸುವ ಮದ್ದುಗಳು ಈಥರ್, ಬಾರ್ಬಿಟುರೇಟುಗಳು, ಅಮೈಲೀನ್ ಹೈಡ್ರೇಟಿನಲ್ಲಿ ಕರಗಿಸಿದ ಟ್ರೈಬ್ರೋಮೊಯೆತಿಲ್ ಮದ್ಯಸಾರ. ಈ ಕೊನೆಯದು ನೇರವಾಗಿ ಮೂತ್ರನಾಳಕದೊಳಕ್ಕೆ (ಯೂರಿಟರ್) ಚುಚ್ಚಿ ಹೊಗಿಸಿ ಮೂತ್ರಪಿಂಡಗಳಲ್ಲಿನ ಸುತ್ತಲೂ ಹಿಡಿದಿರುವ ತೂತಡಕನ್ನು (ಸ್ಟ್ರಿಕ್ಚರ್) ಬಿಡಿಸಲು ಅನುಕೂಲ. ಎರಡನೆಯ ಮಹಾಯುದ್ಧದಲ್ಲಿ ಅರಿವಳಿಕೆಗಾಗಿ ಇದನ್ನೇ ರಕ್ತನಾಳಾಂತರ ಕೊಡಲಾಗುತ್ತಿತ್ತು. ಶಸ್ತ್ರಕ್ರಿಯೆಯ ಮುನ್ನ ಕೊಡುವ ಮೂಲ ಅರಿವಳಿಕಗಳಾಗಿ ಮಾತ್ರ ಗುದನಾಳ ಅರಿವಳಿಕಗಳು ಈಗ ಬಳಕೆಯಲ್ಲಿವೆ. ತಾಸುಗಳ ಹೊತ್ತು ಅರಿವಳಿಸಲು ಇವು ತಕ್ಕವಲ್ಲ.

ವಶ್ಯ ಸುಫಿ (ಹಿಪ್ನೋಟಿಸಂ) ಬದಲಾಯಿಸಿ

ಯುದ್ಧ ಸೆರೆವಾಸಿಗಳ ಶಿಬಿರದಲ್ಲಿದ್ದಂತೆ ಬೇಕಾದಷ್ಟ್ಟು ಅರಿವಳಿಕೆ ವಸ್ತುಗಳು ಇಲ್ಲದಾಗಲೂ ಹಲ್ಲಿನ ಚಿಕಿತ್ಸೆಗಳಲ್ಲೂ ಸಲಮಟ್ಟಿಗೆ ಹೆರಿಗೆ ಕಾಲದಲ್ಲೂ ಇದನ್ನು ಬಳಸಬಹುದು.

ರಕ್ತನಾಳಾಂತರ ಬದಲಾಯಿಸಿ

ಮೊಟ್ಟಮೊದಲು ರಕ್ತನಾಳಾಂತರ ಕೋರಾಲ್ ಹೈಡ್ರೇಟನ್ನು ಚುಚ್ಚಿ ನೋಡಿದವ ಲಯನ್ಸಿನ ಓರೆ(1872). ಸಿರ ರಕ್ತನಾಳದಲ್ಲಿನ ಹರಿವಿನೊಳಕ್ಕೆ ನೇರವಾಗಿ ಅರಿವಳಿಕವನ್ನು ಚುಚ್ಚಿಬಿಡುವ ರಕ್ತನಾಳಾಂತರ ಅರಿವಳಿಕೆ 1932ರಿಂದ ಬಳಕೆಯಲ್ಲಿದೆ. ಯುದ್ಧಕಾಲದಲ್ಲಂತೂ ವಿಶೇಷ ಪರಿಕರಗಳಿಲ್ಲದೆ ಕೊಡುವುದರಿಂದ ಹೆಚ್ಚಿನ ಬಳಕೆಯಲ್ಲಿತ್ತು. ಕೊಟ್ಟಕೂಡಲೇ ವರ್ತಿಸುವ ಬಾರ್ಬಿಟುರೇಟುಗಳೇ ಈ ಕೆಲಸಕ್ಕೆ ಚೆನ್ನು. ಈ ತೆರನ ಅರಿವಳಿಕೆಯಲ್ಲಿ, ರೋಗಿಗೆ ಮೊಗದ ಮುಸುಕಿನ ಮೇಲೆ ಅಹಿತವಾದ ಮದ್ದು ಸುರಿಸಿಕೊಳುವ ತೊಡಕಿರದು; ಆದರೆ ಇದರಿಂದ ರಕ್ತ ಒತ್ತಡವಿಳಿದು, ಉಸಿರಾಟ ಕುಂದುವುದಲ್ಲದೆ, ಕೊಟ್ಟು ಬಿಟ್ಟ ಮೇಲೆ ಇದರ ಪ್ರಮಾಣವನ್ನು ಹೆಚ್ಚು ಕಡಿಮೆ ಮಾಡಲು ಬರದು. ಅಲ್ಲದೆ, ದನಿತಂತು (ರಾರಿಂಕ್ಸ್) ಸೆಡೆತುಕೊಂಡರೆ ಉಸಿರುಕಟ್ಟುವ ಅಪಾಯವಿದೆ. ಅನುಭವಿ ಮಾತ್ರ ಕೈಗೊಳ್ಳಬೇಕಾದ ವಿಧಾನವಿದು. ಕರಗುವ ಹೆಕ್ಸೊಬಾರ್ಬಟೋನ್ (ಇವಿಪಾನ್ ಸೋಡಿಯಂ) ಹಿಂದೆ ಬಳಕೆಯಲ್ಲಿತ್ತು. ಈಗ ಕರಗುವ ತಯೋಷೆಂಟೋನ್ ಸೋಡಿಯಂ (ಪೆಂಟೋತಾಲ್ ಸೋಡಿಯಂ) ಎಲ್ಲರ ಮೆಚ್ಚುಗೆ ಗಳಿಸಿದೆಯಲ್ಲದೆ, ಇನ್ನಾವ ಬಾರ್ಬಿಟು ರೇಟೂ ಇದರಷ್ಟು ಬಳಕೆಯಲ್ಲಿಲ್ಲ. ತಯೊಪೆಂಟಾಲ್ ಸೋಡಿಯಂನಷ್ಟೇ ಪ್ರಭಾವ ಸುರಿಟಾಲ್‍ಗೂ ಇದೆ. ಈ ಮದ್ದುಗಳನ್ನು ಒಂದೇ ಬಾರಿಯೋ ಭಾಗವಾಗಿಯೋ ಕೊಡಬಹುದು. ಬೇರೆ ತೆರನ ಅರಿವಳಕೆಯೊಂದಿಗೂ ಕೊಡಬಹುದು. ಶಸ್ತ್ರಕ್ರಿಯೆ ಆದಮೇಲಿನ ನೋವಿಗಾಗಿ ಮದ್ಯಸಾರವನ್ನು ರಕ್ತನಾಳಾಂತರ ಚುಚ್ಚಿಹೋಗಿಸುವ ವಾಡಿಕೆಯಿತ್ತು. ಅನೇಕ ತೆರನ ನೋವುಗಳಿಗೂ ಕೆಲವೇಳೆ ಶಸ್ತ್ರಕ್ರಿಯೆಗೋಸ್ಕರವಾದ ಅರಿವಳಿಕೆಗಾಗಿಯೂ ರಕ್ತನಾಳಾಂತರ ಪ್ರೊಕೆಯ್ನ್ ಹೈಡ್ರೊಕ್ಲೋರೈಡನ್ನು ಚುಚ್ಚಿಹೊಗಿಸಲಾ ಗಿದೆ. ಇದನ್ನು ಹೀಗೆ ಕೊಟ್ಟಾಗ, ರಕ್ತನಾಳದ ಸೆಡೆತವನ್ನೂ ಕೆರೆತವನ್ನೂ ಕಳೆಯುತ್ತದೆ. ಕೆಲವೇಳೆ ಉಸಿರುಕಟ್ಟುವ ಸಂಭವ ಇರುವುದರಿಂದ, ರಕ್ತನಾಳಾಂತರದ ಅರಿವಳಿಕೆ ಯನ್ನು ಸುಲಭ, ಹಗುರ ಎನ್ನುವಂತಿಲ್ಲ. ರಕ್ತನಾಳಾಂತರ ಕೊಡಲು ತಯೊಪೆಂಟೋನ್ ಸೋಡಿಯಂಗಿಂತಲೂ ಒಳೆಯ ಅರಿವಳಿಕ ವಸ್ತುವನ್ನು ತರುವ ಯತ್ನಗಳು ಕೈಗೂಡಿಲ್ಲ. ಹೆಚ್ಚು ಬಳಕೆಯಲ್ಲಿರುವ ವಿಧಾನ ಒಂದಿದೆ. ಶಸ್ತ್ರಕ್ರಿಯೆಯ ಹಿಂದಿನ ರಾತ್ರಿ, ಮಾರನೆಯ ಬೆಳಿಗ್ಗೆ ಶಾಮಕ ಮದ್ದುಗಳನ್ನು ಕೊಟ್ಟು, ಶಸ್ತ್ರಕ್ರಿಯೆಯ ಸದ್ಯ ಮುಂಚೆ ರಕ್ತನಾಳಾಂತರವಾಗಿ ಸ್ನಾಯು ಸಡಿಲಕವಾದ (ಮಸಲ್ ರಿಲ್ಯಾಕ್ಸೆಂಟ್) ಸಕ್ಸಿನೈಲ್ ಕೋಲೀನೊಂದಿಗೆ ತಯೊಪೆಂಟೋನ್ ಸೋಡಿಯಮ್ಮನ್ನೂ ಉಸಿರಲ್ಲಿ ನೈಟ್ರಸ್ ಆಕೈಡೊಂದಿಗೆ ಆಮ್ಲಜನಕವನ್ನೂ ಕೊಡುವುದು 1945ರಿಂದ ಬಳಕೆಯಲ್ಲಿದೆ. ಈ ವಿಧಾನದಲ್ಲಿ ಅರಿವಳಿಕ ಅನಿಲವನ್ನು ರೋಗಿಗೆ ಕೊಡಲು ಒಂದು ಪ್ಲಾಸ್ಟಿಕ್ ಕೊಳವೆಯನ್ನು ಉಸಿರ್ನಾಳದಲ್ಲಿ ತೂರಿಸಬೇಕು. ಕೊಳವೆ ಸರಿಯಾದ ಜಾಗದಲ್ಲಿದ್ದು ಉಸಿರು ಆಡುತ್ತಿರುವುದನ್ನು ಗಮನಿಸಿ, ಟ್ಯೂಬೊಕ್ಯುರಾ ರೀನ್ ಕೊಡಬೇಕು. ಈ ಜೋಡಿ ಬಳಕೆಯಿಂದ ಅನಿಲದಂಥ ವಸ್ತುಗಳನ್ನು ಕೊಡಲು ತೆರೆದಿರುವ (ಓಪನ್) ವಿಧಾನಗಳಿಂದ ಆಗಬಹುದಾದ ಬೆಂಕಿ, ಸಿಡಿತಗಳ ಅಪಾಯಗಳೇ ಇಲ್ಲದೆ, ಅರಿವಳಿಕೆ ಸರಾಗವಾಗಿ, ಸ್ನಾಯು ಸಡಿಲತೆ ಚೆನ್ನಾಗುವುದು. ಅರಿವಳಿಕಗಳು ಮತ್ತಿತರ ಮದ್ದುಗಳನ್ನು ಹೀಗೆ ಜೊತೆಗೂಡಿಸಿ ಕೊಡುವುದರಿಂದ ಯಾವುದನ್ನೂ ಹೆಚ್ಚಿಗೆ ಕೊಡಬೇಕಿಲ್ಲ. ಇದರಿಂದ ಅಪಾಯ ತಗ್ಗುತ್ತದೆ ಈ ವಿಧಾನಕ್ಕೆ ಸಮತೋಲದ ಅರಿವಳಿಕೆ ಎಂದು ಹೆಸರು.

ಎಲುಬಾಂತರ ಬದಲಾಯಿಸಿ

ಚುಚ್ಚಲು ರಕ್ತನಾಳ ಸಿಗದಾಗ ಎಲುಬಿನ ಒಳಗಿರುವ ಮಜ್ಜೆಯೊಳಕ್ಕೆ ದ್ರಾವಣವನ್ನು ಚುಚ್ಚಿ ಹೊಗಿಸುವುದರಿಂದಲೂ ತಯೋಪೆಂಟಾಲ್ ಸೋಡಿಯಂನಂಥ ಅರಿವಳಿಕಗಳನ್ನು ರೋಗಿಗೆ ಕೊಡಲು ಅವಕಾಶವಿದೆ. ಈ ವಿಧಾನಕ್ಕೆ ಎಲುಬಾಂತರ ಅರಿವಳಿಕೆ ಎಂದು ಹೆಸರು.

ತಾವಿನ ಅರಿವಳಿಕೆ ಬದಲಾಯಿಸಿ

ಮೈಯಲ್ಲಿ ಒಂದೆಡೆಯಲ್ಲಿ ಅರಿವಿಲ್ಲದಂತೆ ಮಾಡುವ ವಿಧಾನವೇ ತಾವಿನ ಅರಿವಳಿಕೆ. ನೆಪೋಲಿಯನ್ನನ ಸೇನೆಯ ಶಸ್ತ್ರವೈದ್ಯನಾಗಿದ್ದ ಬ್ಯಾರನ್ ಲ್ಯಾರಿ (1812) ಮೊದಲು ಈ ವಿಧಾನ ಬಳಸಿದ. ಮಾಸ್ಕೋದಿಂದ ಹಿಂದಿರುಗುತ್ತಿದ್ದ ಊನಗೊಂಡ ಸೈನಿಕರನ್ನು ಮೊದಲು ಹಿಮಗಟ್ಟಿಸಿ ನೋವಿಲ್ಲದಂತೆ ಮಾಡಿ ಕೈಕಾಲುಗಳನ್ನು ಕತ್ತರಿಸುತ್ತಿದ್ದ . ಅನೇಕ ರಾಸಾಯನಿಕಗಳನ್ನು ತಾವಿನ ಅರಿವಳಿಕಗಳಾಗಿ ಬಳಸಿದ್ದರೂ ಪ್ರೊಕೆಯ್ನ್ ಹೈಡ್ರೋಕ್ಲೋರೈಡಿನಿಂದ ಅಪಾಯ ತೀರ ಕಡಿಮೆ, ಸಿಂಕೊಕೆಯ್ನ್, ಪೈಪರೊಕೆಯ್ನ್, ಡೈಬುಕೆಯ್ನ್, ಟೆಟ್ರಕೆಯ್ನ್‍ಗಳ ಹೈಡೋಕ್ಲೋರೈಡುಗಳೂ ಬಳಕೆಯಲ್ಲಿವೆ.

ನರತಡೆ ಬದಲಾಯಿಸಿ

ಒಂದೆಡೆಯ ನರ ಪೂರೈಕೆಯನ್ನು ತಡೆಗಟ್ಟುವಂತೆ ಒಂದು ತಾವಿನ ಅರಿವಳಿಕವನ್ನು ಒಂದೆಡೆ ಚುಚ್ಚಿಹೊಗಿಸುವ ವಿಧಾನ. ನರತಡೆಯ (ನರ್ವ್ ಬ್ಲಾಕ್ ) ಇಲ್ಲವೆ ವಹನ (ಕಂಡಕ್ಷನ್) ಅರಿವಳಿಕೆ. ಬೆನ್ನುಹುರಿಯಲ್ಲಿ ಚುಚ್ಚಿ ಹೊಗಿಸಿದ ಭಾಗಕ್ಕೆ ತಕ್ಕಂತೆ ಹೆಸರು ಪಡೇವ ಬಾಲದ (ಕಾಡಲ್), ಪಾವನಿಯ(ಸೇಕ್ರಲ್), ತೋಳಿನ ಹೆಣಿಲಿನ (ಬ್ರೇಕಿಯಲ್ ಪ್ಲೆಕ್ಸಸ್), ಬೆನ್ನು ಹುರಿಯಂಥ (ಸ್ಪೈನಲ್) ವಿಶೇಷ ಮಾದರಿಯ ನರತಡೆಗಳಿವೆ. ಬಾಲದ ಅರಿವಳಿಕೆಯ ಮಾರ್ಪಾಟಾದದ್ದು ಎಡೆಬಿಡದ ವಿಧಾನ. ಅರಿವಳಿಕೆಯನ್ನು ಒಂದೇ ಸಮನಾಗಿ ಇರಿಸಿರಲು, ಬಾಲದ ಸಾಗುನಾಳದಲ್ಲಿ ಒಂದು ದಪ್ಪ ನಾಳಸೂಜಿಯನ್ನೋ ತೂರ್ನಳಿಕೆಯನ್ನೋ (ಕೆತೀಟರ್) ಚುಚ್ಚಿ ಇರಿಸಿ, ತಾವಿನ ಅರಿವಳಿಕವನ್ನು ಮತ್ತೆ ಮತ್ತೆ ಚುಚ್ಚಿಹೊಗಿಸುತ್ತಿರುವುದುಂಟು. ಮುಖ್ಯವಾಗಿ ಈ ವಿಧಾನ ಹೆರಿಗೆಯಲ್ಲಿ ಅನುಕೂಲ ಎನ್ನಬಹುದು. ಬೆನ್ನುಹುರಿಯ ದ್ರವದೊಳಗೆ (ಸ್ಪೈ ನಲ್ ಫೂಯಿಡ್) ತಾವಿನ ಅರಿವಳಿಕದ ದ್ರಾವಣವನ್ನು ಚುಚ್ಚುವುದರಿಂದ ನರತಡೆಯ ಅರಿವಳಿಕೆಯ ಇನ್ನೊಂದು ಬಗೆಯಾದ ಬೆನ್ನುಹುರಿಯ ಅರಿವಳಿಕೆ ಆಗುತ್ತದೆ. ಚುಚ್ಚಿಬಿಡುವ ಮದ್ದಿನ ದ್ರಾವಣದ ಪ್ರಮಾಣ, ಸಾಂದ್ರತೆಗಳು, ರೋಗಿ ಇರುವ ಭಂಗಿಗಳಂತೆ ಯಾವ ಭಾಗದಲ್ಲಿ ನೋವರಿಳಿವುದೆಂದು ಖಚಿತವಾಗಿ ಹೇಳಬಹುದು. ಒಂದೇ ಬಾರಿ ಚುಚ್ಚಿ ಹೊಗಿಸುವ ವಿಧಾನದ ಮಾರ್ಪಾಟಾಗಿ ಎಡೆಬಿಡದಿರು ವುದು ಬಂದಿದೆ. ಇದರಲ್ಲಿ ಅರಿವು ತಪ್ಪಿ ಹಾಗೇ ಇರುವಂತೆ ಆಗಾಗ್ಗೆ ಚುಚ್ಚುತ್ತಿರಲು, ನಾಳಸೂಜಿಯನ್ನೋ ತೂರ್ನಳಿಕೆಯನ್ನೋ ಬೆನ್ನ ಲ್ಲಿ ಚುಚ್ಚಿ ಅಲ್ಲೇ ಬಿಟ್ಟಿರುವುದುಂಟು. ಈ ವಿಧಾನದಲ್ಲಿ ಒಂದೊಂದು ಸಾರಿಗೂ ಸ್ವಲ್ಪವೇ ಮದ್ದನ್ನು ಕೊಡುವುದರಿಂದ ಕೆಡುಕಿಲ್ಲ. ಮದ್ದನ್ನು ಒಂದೇ ಬಾರಿಗೆ ಕೊಟ್ಟುಬಿಟ್ಟು ಬೇಗ ಅರಿವಳಿಕೆ ಕಳೆವ ಅನಾನುಕೂಲ ಇದರಲ್ಲಿಲ್ಲ. ಅದರಲ್ಲಿಯೂ ಸೋಂಕು ಹತ್ತಿರುವ ಜಾಗಗಳಲ್ಲಿ ಸೊಂಕು ಹರಡದಂತೆ ಇರಿಸಲು, ತಾವಿನ ಅರಿವಳಿಕ ದ್ರಾವಣಗಳೂಂದಿಗೆ ಪೆನಿಸಿಲಿನ್ನನ್ನು ಸೇರಿಸುವುದುಂಟು. ಪೆನಿಸಿಲಿನ್ನಿನ ಪ್ರಭಾವಕ್ಕೆ ಪ್ರೋಕೆಯ್ನ್ ಹೈಡೋಕ್ಲೋರೈಡ್ ಅಡ್ಡಿಯಾಗದು. ಹಲ್ಲಿನ ಚಿಕಿತೆಯಲ್ಲಿ ತಾವಿನ ಅರಿವಳಿಕೆಯ ಬಳಕೆ ಅಪಾರ. ಹಲ್ಲುಗಳನ್ನು ಕೀಳಲೂ ಹಲ್ಲು ನೋಯಿಸುವ ಚಿಕಿತ್ಸೆಯ ಅನೇಕ ವಿಧಾನಗಳಲ್ಲೂ ತಾವಿನ ಅರಿವಳಿಕದಿಂದ ಹಲ್ಲಿನ ನರಗಳ ಅರಿವಳಿಸುವುದುಂಟು. ಹಲ್ಲಿನ ಚಿಕಿತ್ಸೆಗಳಲ್ಲಿ ಮೈಯೆಲ್ಲದರ ಅರಿವಳಿಕೆ ಸುಮಾರು ಅರೆಶತಮಾನಗಳ ಕಾಲದಿಂದಲೂ ಬಳಕೆಯಲ್ಲಿದೆ. ತಾವಿನ ಅರಿವಳಿಕವನ್ನು ಕೊಟ್ಟೋ ಕೊಡದೆಯೋ ಆಮ್ಲಜನಕದೊಂದಿಗಿನ ನೈಟ್ರಸ್ ಆಕ್ಸೈಡನ್ನು ಬಳಸುವುದೇ ಸಾಮಾನ್ಯ. ಇಷ್ಟಾದರೂ ಹಲ್ಲಿನ ಚಿಕಿತ್ಸಾಲಯದಲ್ಲೂ ರಕ್ತನಾಳಾಂತರದ ಅರಿವಳಿಕೆ ಕೂಡ ಬಳಕೆಗೆ ಬರುತ್ತಿದೆ. ಅರಿವಳಿಸುವುದಕ್ಕಿಂತಲೂ ನೋವರಿವಳಿಸಲು ಆಮ್ಲಜನಕದೊಂದಿಗಿನ ನೈಟ್ರಸ್ ಆಕೈಡ್ ಜೊತೆಯಲ್ಲಿ ಕೆಲವೇಳೆ ಟ್ರೈಕ್ಲೋರೊಯೆತಿಲೀನನ್ನೋ ವೈನಿತೀನನ್ನೋ ತುಸು ಸೇರಿಸುವುದುಂಟು. ತಾವಿನ ಅರಿವಳಿಸಿ ಹಲ್ಲುಗಳನ್ನು ಕಿತ್ತರೆ, ಇದಕ್ಕಾಗಿ ಮೈಯೆಲ್ಲದರ ಅರಿವಳಿಸಿದುದಕ್ಕಿಂತಲೂ ಹೆಚ್ಚು ನೋವಿಡುವುದೆಂದು ಇಂದಿನ ತಿಳಿವಳಿಕೆ.

ನೀರ್ಗಲ್ಲಾಗಿಸಿಕೆ ಬದಲಾಯಿಸಿ

ಮೈಯಲ್ಲಿ ಒಂದು ಭಾಗದಲ್ಲಿ ತಣ್ಣಗೆ ನೀರ್ಗಲ್ಲಾಗಿಸುವುದೂ ಒಂದು ತೆರನ ಅರಿವಳಿಕೆ. ಇದನ್ನು ನೀರ್ಗಲ್ಲಾಗಿಸುವ (ರೆಫ್ರಿಜರೇಷನ್) ಅರಿವಳಿಕೆ ಎನ್ನುವುದುಂಟು. ನೀರ್ಗಲ್ಲಿನ ತಂಪಿನಲ್ಲಿ ನೋವಿನ ಅರಿವು ನರಗಳಲ್ಲಿ ಸಾಗದು. ಕೈ ಚರ್ಮ ಇಲ್ಲವೆ. ಕಾಲಿನ ಮೇಲೆ ಮಂಜುಗಡ್ಡೆ ಇರಿಸಿ ಸುಮಾರು 50 ಸೆಂ.ಗೇ.ಗೆ ತಂಪುಗೊಳಿಸಿ ಆ ಭಾಗವನ್ನು ಕತ್ತರಿಸಿ ಹಾಕಿದರೂ ನೋವು ತಿಳಿಯದಂತೆ ಮಾಡಬಹುದು. ಹೀಗೆ ಚರ್ಮದ ನಾಡಿಗಳನ್ನು (ಗ್ರಾಪ್ಟ್) ನೋವಿಲ್ಲದೆ ತೆಗೆದಿದ್ದಾರೆ; ಅದರಲ್ಲೂ ಸಿಹಿಮೂತ್ರ ರೋಗಿಗಳಲ್ಲಿ ಒಂದು ಅವಯವವನ್ನೇ ಶಸ್ತ್ರಕ್ರಿಯೆಯಿಂದ ಅಷ್ಟಾಗಿ ಅಪಾಯವಿಲ್ಲದಂತೆ ಕತ್ತರಿಸಿಹಾಕಲು ಸಾಧ್ಯ .

ಅರಿವಳಿಕೆಯ ಅಪಾಯಗಳು ಬದಲಾಯಿಸಿ

ಉಸಿರೆಳೆತದ ಮೈಯೆಲ್ಲದರ ಅರಿವಳಿಕೆಗಾಗಿ ಅನೇಕ ವೇಳೆ ಹೊತ್ತಿ ಉರಿಯುವ, ಸಿಡಿವ ಅರಿವಳಿಕಗಳನ್ನು ಬಳಸಬೇಕಾಗುವುದು. ಇದು ಬಲು ಅಪಾಯಕರ. ಏಕೆಂದರೆ, ರೋಗಿಯ ಪುಪ್ಪುಸಗಳೊಳಗೆ ಸಿಡಿಯಬಹುದು. ಈಥರ್, ಎತಿಲೀನ್, ಸೈಕೊಪ್ರೊಪೇನುಗಳಿಂದ ಹೀಗಾಗಬಹುದು. ಅರಿವಳಿಕ ಅನಿಲಗಳನ್ನು ಬಳಸಲು ಅನಿಲದ ಉರುಳೆಯಿಂದ (ಸಿಲಿಂಡರ್) ಉಸಿರಾಟಿಕ ಚೀಲಕ್ಕೆ ಅನಿಲ ಹರಿಯುವು ದನ್ನು ನಿಯಂತ್ರಿಸಲು ಯಂತ್ರವೊಂದನ್ನು ಬಳಸಲೇಬೇಕು. ಕೂಡಲೇ ಗಮನಕ್ಕೆ ಬರದೆ ಆಮ್ಲಜನಕ ತುಂಬಿದ್ದ ಉರುಳೆ ಬರಿದಾಗಿ ಬಿಡುವ ಅಪಾಯ ಯಾವಾಗಲೂ ಇರುವುದು. ಹೀಗೇನಾದರೂ ಆದರೆ, ರೋಗಿಗೆ ಉಸಿರು ಕಟ್ಟಿದಂತಾಗಿ ಸದ್ದಿಲ್ಲದೆ ಸಾಯಲೂ ಬಹುದು. ಅನಿಲದ ಉರುಳೆಯನ್ನು ಅದರ ಜಾಗದಲ್ಲಿ ಸರಿಯಾಗಿ ಇರಿಸದೆ, ರೋಗಿಗೆ ಬೇಕಾಗುವಷ್ಟು ಆಮ್ಲಜನಕ ಸಿಗದಂತೆ ಆಗಿರುವುದೂ ಉಂಟು. ಒಂದು ಅನಿಲದ ಉರುಳೆ ಬರಿದಾದಾಗ ಬೇರೊಂದು ಅನಿಲದ ಉರುಳೆಯನ್ನು ಅಲ್ಲಿ ಜೋಡಿಸಿದ್ದರಿಂದ ರೋಗಿಗಳು ಸತ್ತಿದ್ದಾರೆ. ಉರುಳೆಗಳಲ್ಲಿ ಅರಿವಳಿಕ ಅನಿಲಗಳು, ಆಮ್ಲಜನಕ ಇತ್ಯಾದಿ ಬಹಳಷ್ಟು ಒತ್ತಡದಲ್ಲಿ ಇರುತ್ತವೆ. ಇದರಿಂದ ಎಷ್ಟೋ ವೇಳೆ ಇವುಗಳಲ್ಲಿ ಕೈ ಹಾಕಿ ಬಳಸಲೂ ಕಷ್ಟವಾಗಬಹುದು. ಉರುಳೆಯ ಕವಾಟಗಳು ಮುರಿದುಬಿದ್ದರೆ ಉರುಳೆ ಬಿರುಸಿನ ಆಕಾಶಬಾಣದಂತೆ ಕೋಣೆಯಲೆಲ್ಲ ಉರುಳಾಡುತ್ತದೆ. ಟ್ರೈಕ್ಲೋರೊಯೆತಿಲೀನಿನಂಥ ಹಲವಾರು ಅರಿವಳಿಕಗಳನ್ನು ಪೂರ್ತಿ ಅರಿವಳಿಸುವ ಪ್ರಮಾಣಗಳಲ್ಲಿ ಕೊಟ್ಟರೆ ಗುಂಡಿಗೆಯ ಬಡಿತವೇ ನಿಲ್ಲಬಹುದು. ಹೀಗೆ ತಾವಿನ ಅರಿವಳಿಕೆಗಳ ವಿಚಾರದಲ್ಲಾದರೋ ರಕ್ತದ ಹರಿವನ್ನು ಸೇರುವ ತಾವಿನ ಅರಿವಳಿಕಗಳ ಪ್ರಮಾಣ ಸೆಳವು ಬರಿಸಲೂ ಕೊನೆಗೆ ಗುಂಡಿಗೆ ಬಡಿವುದದನ್ನೇ ನಿಲ್ಲಿಸಲೂ ಸಾಕಾಗಬಹುದು. ತಯೊಪೆಂಟೋನ್ ಸೋಡಿಯಂನಂಥ ಒಂದು ಬಾರ್ಬಿಟುರೇಟನ್ನು ರಕ್ತನಾಳಾಂತರ ಕೂಡಲೇ ಕೊಡುವುದ ರಿಂದ ಸೆಳವುಗಳನ್ನು ತಡೆಯಬಹುದು. ಸೆಳವಿನಲ್ಲಿ ಉಸಿರಾಡದಂತಾಗುವುದೇ ರೋಗಿ ಸಾಯಲು ಮುಖ್ಯ ಕಾರಣವೆಂಬ ನಂಬಿಕೆಯಿಂದ ಆಮ್ಲಜನಕವನ್ನೂ ಕೊಡಬಹುದು. ರಕ್ತದ ಒತ್ತಡವೂ ತೀರ ಅಪಾಯಕರವಾಗಿ ಕುಸಿಯಬಹುದು. ತರಬೇತು, ಕೈಚಳಕ ಇಲ್ಲದವರು ಅರಿವಳಿಸಿದರೆ ಈ ಅನಾಹುತಗಳು ಆಗುತ್ತವೆ. ಅನುಭವೀ ಅರಿವಳಿಕಗಾರನಿಂದ ಹೀಗೆಂದೂ ಆಗದು. ತಾವಿನ ಅರಿವಳಿಕ ದ್ರಾವಣವನ್ನು ರೋಗಿ ಎಂಜಲೊಂದಿಗೆ ನುಂಗಿದರೂ ಗಂಟಲಲ್ಲಿ ಮೇಲ್ಮೈ (ಸರ್ಫೇಸ್) ಅರಿವಳಿಕವನ್ನು ಸಿಂಪಡಿಸುವುದರಿಂದ ಕೂಡ ಅಪಾಯ ಆಗಬಹುದು. ಏಕೆಂದರೆ ಹಾಗೆ ಸಿಂಪಡಿಸಲು ಬಳಸುವ ದ್ರಾವಣದ ಸಾಂದ್ರತೆ ತುಸು ಹೆಚ್ಚಾಗಿಯೇ ಇರುತ್ತದೆ. ಅಂದರೆ ಸ್ವಲ್ಪವೇ ದ್ರಾವಣದಲ್ಲಿ ಅರಿವಳಿಕ ವಸ್ತು ಹೊಲಿಕೆಯಲ್ಲಿ ಹೆಚ್ಚಾಗಿರುವುದು. ಗೊತ್ತಾದ ಕೆಲವು ತಾವಿನ ಅರಿವಳಿಕಗಳಿಗೆ ಎಲ್ಲೋ ಕೆಲವರು ಬಲು ಸುಲಭವಾಗಿ ಈಡಾಗುವರು. ಅಂಥವರನ್ನು ಅಪಾಯದಿಂದ ದೂರವಿರಿಸಲು ಹೆಚ್ಚು ಎಚ್ಚರದಿಂದಿರಬೇಕು. ಅರಿವಳಿಕದೊಂದಿಗೆ ಎಪಿನೆಪೀನನ್ನು (ಅಡ್ರಿನಲೀನ್) ಸೇರಿಸಿದರೆ ಅನೇಕ ವೇಳೆ, ಅದನ್ನು ಸೇರಿಸದಿದ್ದರೆ ಆಗುವುದಕ್ಕಿಂತಲೂ ಹೆಚ್ಚು ಹೊತ್ತು ಒಂದೇ ತಾವಿನಲ್ಲಿ ಅರಿವಳಿಕ ಉಳಿವುದು. ಅಂದರೆ ಬೇಕಿರುವ ಒಂದೇ ಕಡೆ ಅರಿವಳಿಕದ ಪ್ರಭಾವ ಚನ್ನಾಗಿರುತ್ತ್ತದೆ. ಎಪಿನೆಪೀನ್ ರಕ್ತನಾಳವನ್ನು ಕುಗ್ಗಿಸುವುದರಿಂದ ಆ ಜಾಗಕ್ಕೆ ರಕ್ತದ ಹರಿವು ತಗ್ಗಿ, ತಾವಿನ ಅರಿವಳಿಕವನ್ನು ರಕ್ತ ಅಲ್ಲಿಂದ ಹೊರಸಾಗಿಸುವುದು ನಿಧಾನವಾಗುತ್ತದೆ. ಅದೇ ಹೊತ್ತಿನಲ್ಲಿ ಆ ಜಾಗದಿಂದ ರಕ್ತಸುರಿವುದೂ ತಗ್ಗುತ್ತದೆ. ಇದರಿಂದ ಶಸ್ತ್ರವೈದ್ಯನಿಗೆ ಎಷ್ಟೋ ಅನುಕೂಲ. ಆದರೂ ಶಸ್ತ್ರಕ್ರಿಯೆ ಆಗುವುದೆಂಬ ಅಂಜಿಕೆಯಿಂದ ಪುಕ್ಕಲು ರೋಗಿಗಳಲ್ಲೆ ಎಪಿನೆಫ್ರೀನ್ ಒಂದಿಷ್ಟು ಮೈಯಲ್ಲೇ ತಯಾರಾಗುವುದು. ಅಂಥವರಿಗೆ ತಾವಿನ ಅರಿವಳಿಕದೊಂದಿಗೆ ಮತ್ತಷ್ಟು ಎಪಿನೆಫ್ರೀನನ್ನು ಸೇರಿಸಿದರೆ ತಡೆಯದೆ ಕುಸಿದು ಬೀಳುವರು.

ಅರಿವಳಿಕದ ಆಯ್ಕೆ ಬದಲಾಯಿಸಿ

ಅರಿವಳಿಕವನ್ನು ಆಯುವುದರಲ್ಲಿ ಅನೇಕ ಅಂಶಗಳಿವೆ. ಒಂದು ಗೊತ್ತಾದ ವಸ್ತುವನ್ನೋ ವಿಧಾನವನ್ನೋ ಬಳಸುವುದನ್ನು ತಿಳಿದವರು ಆಸ್ಪತ್ರೆಯಲ್ಲಿ ಯಾರೂ ಇಲ್ಲದಿದ್ದಲ್ಲಿ ಅಂಥ ವಸ್ತುವನ್ನೂ ವಿಧಾನವನ್ನೂ ಬಳಸುವುದು ಸುಲಭವಲ್ಲ. ಶಸ್ತ್ರಕ್ರಿಯೆ ಆಗುವಾಗ ರೋಗಿಯ ಸ್ನಾಯುಗಳು ತೀರ ಸಡಿಲವಾಗಿರಬೇಕು. ಅದಕ್ಕಾಗಿ ಬಲವಾದ ಅರಿವಳಿಕವನ್ನೋ ಜೊತೆಗೆ ಸ್ನಾಯು ಸಡಿಲಕವನ್ನೋ ಕೊಡಬೇಕಾಗಬಹುದು. ಇಂದಿನ ಅರಿವಳಿಕೆಯಲ್ಲಿ ಸ್ನಾಯು ಸಡಿಲಕಗಳ ಪಾತ್ರ ಹಿರಿದು. ತಯೋಪೆಂಟೋನ್ ಸೋಡಿಯಂನಿಂದ ಸ್ನಾಯುಗಳು ಸಡಿಲಗೊಳವು. ನೈಟ್ರಸ್ ಆಕೈಡು, ಆಮ್ಲಜನಕಗಳಿಂದ ಇನ್ನೂ ಸರಿಯೆ. ಸಡಿಲತೆಗಾಗಿ ಸಕ್ಸಿನೈ ಲ್‍ಕೋಲಿನ್, ಟ್ಯೂಬೊಕ್ಯುರೇರಂಥ ಮದ್ದುUಳ ಬಳಕೆಯಿಂದ ತೊಡಕಿಲ್ಲ. ಇವೆರಡು ಮದ್ದುಗಳಿಂದ ಅರಿವಳಿಕಗಳ ಬಳಕೆಯೇ ಬದಲಾಯಿಸಿದೆ. ರಕ್ತನಾಳಾಂತರವಾಗಿ ಅರಿವಳಿಸುವುದು ಬಲು ಸುಲಭ. ಸಿರದೊಳಕ್ಕೆ ಸೂಜಿ ಹೊಕ್ಕಿತೆಂದರೆ ತೀರಿತು. ದ್ರಾವಣವನ್ನು ಒಳಹೊಗಿಸಲು ಎಂಥ ಚಾಲಾಕುತನವೂ ಬೇಕಿಲ್ಲ; ಆದರೆ ಎಷ್ಟು ಮದ್ದನ್ನು ಎಷ್ಟುಬೇಗನೆ ಕೊಡಬೇಕೆಂದು ಸ್ವಲ್ಪವಾದರೂ ಅಂದಾಜು ಮಾಡುವಂತಿರಬೇಕು. ಶಸ್ತ್ರಕ್ರಿಯೆ ಮಾಡಿಸಿಕೊಳ್ಳುವ ಹಸುಗೂಸುಗಳಿಗೆ ಗುದನಾಳ ಅರಿವಳಿಕೆಯೇ ಸರಿ. ಮೆಂಡಿಕೆಗಳು (ಟಾನ್ಸಿಲ್ಸ್), ಮೂಗಳೆಗಳನ್ನು (ಅಡೆನಾಯ್ಡ್ಸ್) ತೆಗೆಸಬೇಕಿದ್ದರಂತೂ ಇನ್ನೂ ಅನುಕೂಲ. ಏಕೆಂದರೆ ಆಗ ಮಗು ಹಾಸಿಗೆಯಲ್ಲೋ ತೊಟ್ಟಿಲಲ್ಲೋ ಮದ್ದಿನಿಂದ ಮಲಗಿದ್ದಂತೆಯೇ ಶಸ್ತ್ರಕ್ರಿಯೆ ಕೋಣೆಗೆ ಸಾಗಿಸಿ, ಅಲ್ಲಿ ಉಸಿರೆಳೆತದ ಅರಿವಳಿಕವನ್ನು ಕೊಡಬಹುದು. ಉಸಿರಾಟ ಸಲೀಸಾಗಲೆಂದು ಉಸಿರ್ನಾಳ ದೊಳಗೆ ಒಂದು ರಬ್ಬರ್ ಕೊಳವೆಯನ್ನು ತೂರಿಸಿಡುವುದು ಸಾಮಾನ್ಯ. ಮಗು ತನ್ನ ಕೋಣೆಗೆ ಹಿಂದಿರುಗಿದಾಗ, ಅಲ್ಲಿಂದ ಹೊರಟದ್ದೇ ಅದಕ್ಕೆ ತಿಳಿಯದು. ಇದರಿಂದ ಶಸ್ತ್ರಕ್ರಿಯೆ ಆಗುವುದರ ಅಂಜಿಕೆಯೇ ಹುಟ್ಟದು. ಇಷ್ಟಾದರೂ, ಮೈಯೆಲ್ಲದರ ಅರಿವಳಿಕವನ್ನು ಕೊಡಲು ಅರಿವಳಿಕೆಗಾರ ಹಿಂದೆಗೆವ ಸಂದರ್ಭಗಳೂ ಇವೆ. ಉದಾಹರಣೆಗೆ, ಒಬ್ಬ ರೋಗಿಯ ಗುಂಡಿಗೆ ತೀರ ಕ್ರಮಗೆಟ್ಟಿರುವಾಗ, ಆಮ್ಲಜನಕದ ಕೊರತೆಯಾದರೆ ಇಲ್ಲವೇ ಅವನ ರಕ್ತದಲ್ಲಿ ಸಾಕಷ್ಟು ಆಮಜನಕ ಇರದಿದ್ದರೆ ಗುಂಡಿಗೆಯೇ ನಿಂತುಬಿಡಬಹುದು. ಅದೇ ಬೆನ್ನು ಹುರಿಯ ಅರಿವಳಿಕೆಯಾಗಿದ್ದರೆ, ರಕ್ತದ ಒತ್ತಡ ತೀರ ಇಳಿಯದ ತನಕ ಯಾವ ತೊಂದರೆಯೂ ಕಾಣದು. ಆದರೆ ಇಂಥ ಅರಿವಳಿಕೆಯಲ್ಲಿ ಎದೆ ಗೂಡಿನ ಶಸ್ತ್ರಕ್ರಿಯೆ ಸಾಧ್ಯ ವಿಲ್ಲ. ಏಕೆಂದರೆ ಎದೆ ಮಟ್ಟಕ್ಕೇರಿಸಿದರೆ, ವಪೆಯೂ ಎದೆಗೂಡಿನ ಸ್ನಾಯುಗಳೂ ಕುಸಿದುಬಿಟ್ಟು ಉಸಿರು ನಿಂತು ಹೋಗುತ್ತದೆ.

ಬಳಕೆಯ ವಿಧಾನಗಳು ಬದಲಾಯಿಸಿ

ಅರಿವಳಿಕೆಯೊಂದಿಗೆ ಬಹುವಾಗಿ ಬಳಸುವ ಕ್ರಮವೆಂದರೆ, ರೋಗಿಗೆ ಚೆನ್ನಾಗಿ ವಿಶ್ರಾಂತಿ ಸಿಗುವಂತೆ ಶಸ್ತ್ರಕ್ರಿಯೆಯ ಹಿಂದಿನ ರಾತ್ರಿ ಹೊತ್ತಿನ ಮದ್ದು ಕೊಡುಗೆ, ಕೆಮ್ಮನ್ನು ತಪ್ಪಿಸಲು, ಹಿಂದಿನ ಸಂಜೆಯಿಂದ ಮಾರನೆಯ ದಿನ ಶಸ್ತ್ರಕ್ರಿಯೆ ಆಗುವ ತನಕ ಹೊಗೆ ಬತ್ತಿ ಸೇದಕೂಡದೆಂದು ರೋಗಿಗೆ ಹೇಳಲಾಗುತ್ತದೆ. ಆಮೇಲೆ ಶಸ್ತ್ರಕ್ರಿಯೆಯ ಮುನ್ನ ಸಾಕಾದಷ್ಟು ಮದ್ದು ಕೊಡುವುದರಿಂದ ರೋಗಿ ಸಲವೂ ಉದ್ರೇಕಗೊಳ್ಳದೆ ತುಸು ಮಂಪರ ಬಂದ ಹಾಗಿರಬಹದು. ಹೀಗೆ ಮೊದಲೇ ಕೊಟ್ಟ ಮದ್ದುಗಳಿಂದ ನೋವಿನ ಭಾರ ಆಗಲೇ ಎಷ್ಟೋ ಇಳಿದಿರುವುದು. ಶಸ್ತ್ರಕ್ರಿಯೆ ಕೋಣೆಯಲ್ಲಿ ರಕ್ತನಾಳಾಂತರ ತಯೋಪೆಂಟೋನ್ ಸೋಡಿಯಂ ಕೊಟ್ಟು, ಸಕ್ಸಿನೈ ಲ್ ಕೋಲೀನನ್ನೂ (ಸ್ಕೋಲೀನ್) ಕೊಡುತ್ತಾರೆ. ಹಲವೇಳೆ ಉಸಿರ್ನಾಳದೂಳಗೆ ರಬ್ಬರ್ ಕೊಳವೆಯನ್ನು ಇರಿಸುವರು. ಈ ಕೊಳವೆಯ ಮೂಲಕ ನೈಟ್ರಸ್ ಆಕೈಡ್, ಆಮ್ಲಜನಕಗಳು ಸಾಗುತ್ತಿರುತ್ತವೆ. ತಯೊಪೆಂಟೋನ್ ಸೋಡಿಯಮ್ಮನ್ನೂ ಟ್ಯೂಬೊಕ್ಯುರಾರೆನ್ನೂ ಆಗಾಗ್ಗೆ ತುಸು ಕೊಡುತ್ತಿರಬಹುದು. ಉಸಿರಾಟ ತೀರ ಇಳಿವುದನ್ನು ಬೇರೆ ಮದ್ದುಗಳಿಂದ ತಡೆಯಬಹುದು. ಇಂಗ್ಲೆಂಡಿನಲ್ಲಿ, ಜೆ.ಟಿ. ಕೋವರ್ (1825-82) ಬೇಗನೆ ಅರಿವಳಿಸುವ, ಬಿಟ್ಟ ಉಸಿರನ್ನೆ ಮತ್ತೆ ಸೇದಿಸುವ ಸಲಕರಣೆಯನ್ನು ತಯಾರಿಸಿದ, ನೈಟ್ರಸ್ ಆಕೈಡು ಆಮ್ಲಜನಕಗಳನ್ನು ಬೇರೆ ಬೇರೆ ಪ್ರಮಾಣಗಳಲ್ಲಿ ಬೆರೆಸಿಡುವ ಸಲಕರಣೆಯನ್ನು ಕೊಟ್ಟವನು ಸರ್ ಫ್ರೆಡರಿಕ್ ಹೆವಿಟ್ (1892). ಅರಿವಳಿಕೆ ಮೊದಲು ಬಳಕೆಗೆ ಬಂದಾಗ, ರೋಗಿಯ ಮೊಗದ ಮೇಲಿರಿಸಿದ ತಂತಿಕಟ್ಟಿಗೆ ಹೊದಿಸಿದ ಜಾಳರಿವೆಯ (ಗಾಸ್) ಮುಸುಕಿನ ಮೇಲೆ ಕ್ಲೋರೋಫಾರ್ಮ್, ಈಥರನ್ನು ಸುರಿವುದು ವಾಡಿಕೆಯಲ್ಲಿತ್ತು. ಈಚೆಗೆ ಹೊಸ ಕಾರಕಗಳು ಬಂದ ಮೇಲೆ ಮೈಯೆಲ್ಲದರ ಅರಿವಳಿಕೆಯನ್ನು ತೋರಬಲ್ಲ ಸುಧಾರಿಸಿದ ಯಂತ್ರಗಳು ಬಳಕೆಗೆ ಬಂದಿವೆ.

ಸಂಬಂಧಿತ ಕಾರಕಗಳು ಬದಲಾಯಿಸಿ

ಬಾರ್ಬಿಟುರೇಟಿಂದ ವಿಷವೇರಿದ್ದಾಗ, ಅದರ ಒಂದು ವಿಷಮುರಿಯಾಗಿ ಗ್ಲುಟೇರಿಮೈಡಿನ (ಮೆಗಿಮೈಡ್) ಬಳಕೆಯನ್ನು ಷಾ (1854) ಜಾರಿಗೆ ತಂದ. ಶಸ್ತ್ರಕಿಯೆಯ ಅರಿವಳಿಕೆಯನ್ನು ಕೊನೆಗೊಳಿಸುವಾಗ, ಇದು ಉಸಿರಾಟವನ್ನು ಚೋದಿಸುವುದರಿಂದ ಅರಿವಳಿಕೆಯಲ್ಲೂ ಈಚೆಗೆ ಬಳಕೆಗೆ ಬಂದಿದೆ. ಬಾರ್ಬಿಟುರೇಟುಗ ಳಿಂದ ಅರಿವಳಿಸುವುದು ಗೊತ್ತಿರುವುದರೊಂದಿಗೆ ರಕ್ತನಾಳಾಂತರ ಅರಿವಳಿಕೆಯನ್ನು ಇಂಥ ಇನ್ನೊಂದು ಬಾರ್ಬಿಟುರೇಟಿಂದಲೇ ಕೊಡುವುದು ಸಾಧ್ಯ ಎನ್ನುವುದು ಒಂದು ಹೊಸ ಕಲ್ಪನೆಗೆ ಎಡೆಗೊಟ್ಟಿತು. ಇಂಥ ಕಟ್ಟು ಮದ್ದುಗಳು (ಆಂಟಿಡೋಟ್ಸ್) ಇನ್ನೂ ಇವೆ. ಇವುಗಳ ಬಳಕೆಯಿಂದ ಹಿಂದೆ ಕೊಡುತ್ತಿದ್ದ ಪ್ರಮಾಣಗಳಿಗಿಂತಲೂ ಇನ್ನೂ ಹೆಚ್ಚಿನ ಪ್ರಮಾಣಗಳಲ್ಲಿ ಅಪಾಯ ತೊಡಕುಗಳಿರದೆ ಅನೇಕ ಗೊತ್ತಾದ ಅರಿವಳಿಕ ಮದ್ದುಗಳ ಕೊಡುಗೆ ಸಾಧ್ಯ ವಾಯಿತು. ಉಸಿರಾಟದ ತುಸು ಚೋದಕವಾದ ಅಮಿಫಿನಜೋಲಿಂದ ತೀವವಾದ (ಅಕ್ಯೂಟ್) ನೋವನ್ನು ತಡೆಯಲು, ನೋವರಿವಳಿಕ ಮದ್ದುಗಳನ್ನು ಇನ್ನೂ ಬೇಕಾದಷ್ಟು ಕೊಡಲೂ ಸಾಧ್ಯ . ಕೆಲವು ತಾಂತ್ರಿಕ ಉಪಾಯಗಳಿಂದ ಹೆಚಿನ ಅನುಕೂಲವಿದೆ. ಉಸಿರ್ನಾಳದೂಳಕ್ಕೆ ತೂರಿಸುವ ಕೊಳವೆ ಇಳಿದಿರುವ ಮಟ್ಟವನ್ನು ಸೂಚಿಸುವ ಗೆರೆಗಳನ್ನು ಹೊರಗೆ ಗುರುತಿಸಿರುವುದುಂಟು. ದನಿತಂತುಗಳ ನಡುವೆ ಇದು ಇದ್ದರೆ ಕೊಳವೆ ಮೇಲಿನ ಗುರುತು ಹೊರಗಾಣುತ್ತಿರುವುದು. ಹಿಂದಿನ ಕಾಲದಲ್ಲಿ ಈ ಗುರುತಿಲ್ಲದೆ ಕೊಳವೆಯನ್ನು ತೀರ ಆಳಕ್ಕೆ ತಳ್ಳುತ್ತಿದ್ದರು. ಅನ್ನನಾಳದ ಮೂಲಕ ಸ್ಟೆತಸ್ಕೋಪನ್ನೂ (ಎದೆದರ್ಶಕ) ತೂರಿಸಿಡುವುದರಿಂದ ಗುಂಡಿಗೆ, ಪುಪ್ಪುಸಗಳು ಇಲ್ಲವೇ ಇವೆಲ್ಲವಲ್ಲೂ ಆಗುವ ತೊಡುಕುಗಳನ್ನು ಕೂಡಲೇ ಕಂಡುಕೊಳ್ಳುವುದು ಬಲು ಅನುಕೂಲ. ಅರಿವಳಿಕಗಳಿಗೆ ಸಂಬಂಧಿಸಿದ ಇತರ ಮದ್ದುಗಳೂ ಇವೆ. ಪ್ರೊಕೇನ್ ಹೈಡ್ರೋಕ್ಲೋರೈಡಿಗೆ ಸಲ್ಫೋನಮೈಡ್ ರೋಧಕ ಪ್ರಭಾವವಿದೆ. ಅಲ್ಲದೆ ಸಲ್ಫೋರಮೈಡ್ ರೋಗಚಿಕಿತ್ಸೆ ಪಡೆವವರಲ್ಲಿ ಉಸಿರೆಳೆತದ ಅರಿವಳಿಕಗಳನ್ನು ಚೆನ್ನಾಗಿ ಕೊಡಬಹುದು. ಅರಿವಳಿಕಗಳೂಂದಿಗೆ 1942ರಲ್ಲಿ ಮೊದಲು ಬಳಸಿದ ಕ್ಯುರಾರಿ (ಡಿ-ಟ್ಯೂಬೊಕ್ಯುರ ರೀನ್, ಇಂಟೊಕಾಸ್ಟ್ರಿನ್) ಅರಿವಳಿಕವಲ್ಲ, ಇದು ಸ್ನಾಯುಗಳನ್ನು ಮಾತ್ರ ಇನ್ನೂ ಚೆನ್ನಾಗಿ ಸಡಿಲಗೊಳಿಸುವುದು. ಇದನ್ನು ರಕ್ತನಾಳಾಂತರವಾಗಿಯೂ ಸ್ನಾಯುವಿನಲ್ಲೂ ಕೊಡಬಹುದು. ಬಾಯಲ್ಲಿ ನುಂಗಿದರೆ ಫಲವಿಲ್ಲ. ಪ್ರಮಾಣ ಮೀರಿದರೆ, ಇಲ್ಲವೆ. ಬೇಗನೆ ಚುಚ್ಚಿಬಿಟ್ಟರೆ ಉಸಿರಾಟ ಕುಂದುತ್ತದೆ. ಇಲ್ಲವೇ ನಿಂತೇ ಹೋಗುವುದು, ಕೃತಕ ಉಸಿರಾಟವೂ ನಿಯೋಸ್ಟಿಗ್ಮಿನೂ, ಕೂಡಲೇ ವರ್ತಿಸುವ ಟೆನಿಲಾನೂ ಟ್ಯೂಬೊಕ್ಯುರಾರೀನಿಗೆ ಕಟ್ಟುಮದ್ದುಗಳು (ಆಂಟಿಡೊಟ್ಸ್), (ನೋಡಿ- ಕ್ಯುರೇರ್) ಅರಿವಳಿಕೆಗೂ ಜೀವಾತುಗಳಿಗೂ ಇರುವ ಸಂಬಂಧದ ವಿಷಯ ಶೋಧನೆಯಾಗಿದೆ. ಅರಿವಳಿಸಲು ಬೇಕಾಗುವ ಹೊತ್ತು ತೇರಿಕೊಳ್ಳುವ ಹೊತ್ತೂ ಸಿ ಜೀವಾತುಕೊರೆಯಲ್ಲಿ ಹೆಚ್ಚುತ್ತವೆ. ಜೀವಕಣದ ಉಸಿರಾಟದ ತಂತ್ರ ಚೆನ್ನಾಗಿ ಕೆಲಸಮಾಡುತ್ತಿರಲು ರಿಬೋಫ್ಲೇವಿನ್ ಜೀವಾತು ಬೇಕು. ಶಸ್ತ್ರಕ್ರಿಯೆ ಆಗುವಾಗ ಆಗಬಹುದಾದ, ಅದರ ಮುಂಚೆಯೂ ಇರುವ ಸುಸ್ತು ಬೀಳಿಸುವ ಆಘಾತವನ್ನೂ (ಷಾಕ್) ಆಳವಾಗಿ ಪರಿಶೀಲಿಸಲಾಗಿದೆ. ಅದನ್ನು ತಪ್ಪಿಸಲು ಚಿಕಿತ್ಸೆ ಮಾಡಲೂ ರೋಗಿಯನ್ನು ಚೆನ್ನಾಗಿ ಚೇತರಿಸುವ ಸಾಧನಗಳಿವೆ. ರಕ್ತತುಂಬಿಕೆ ರಕ್ತ ರಸದ (ಪ್ಲಾಸ್ಮ ) ತುಂಬಿಕೆ, ರಕ್ತರಸದ ಬದಲಿ ಇಲ್ಲವೆ. ರಕ್ತರಸವನ್ನು ಹಿಗ್ಗಿಸುವುವು. ಇವೆಲ್ಲ ಶಸ್ತ್ರಕ್ರಿಯೆಯಿಂದೇಳುವ ಆಘಾತವನ್ನು ತೀರ ತಗ್ಗಿಸಿವೆ. ಹಲವೇಳೆ ಅನಿಲರೋಗಚಿಕಿತ್ಸೆ ಅರಿವಳಿಕೆಗಾರನ ಉಸ್ತುವಾರಿಯಲ್ಲಿ ಆಗುತ್ತದೆ. ಅರಿವಳಿಕೆ ಮುಗಿದಮೀಲೆ ಆಮ್ಲಜನಕ, ಇಂಗಾಲದ ಡೈಯಾಕೈಡೊಂದಿಗೆ ಆಮ್ಲಜನಕ ಇಲ್ಲವೇ ಹೀಲಿಯಂ ಕೊಡುವುದರಿಂದ ತಾಕುತೊಡಕುಗಳನ್ನು ತಪ್ಪಿಸುವುದರಲ್ಲಿಅನುಕೂಲ, ಹೀಲಿಯಂ, ಆಮ್ಲಜನಕ, ಇಂಗಾಲದ ಡೈಯಾಕ್ಸೈಡುಗಳು ಅನಿಲರೋಗ ಚಿಕಿತ್ಸೆಯಲ್ಲೇ ಅಲ್ಲದೆ ಅರಿವಳಿಕಗಳೊಂದಿಗೂ ಬಳಕೆಗೆ ಬರುತ್ತ್ತವೆ. ನಿದಾನದಲ್ಲಿ, ಶಸ್ತ್ರಕ್ರಿಯೆ ಮುಂಚೆಯೂ ಆಮೇಲೂ ಉಸಿರ್ನಾಳ ಪಂಗುಸಿರ್ನಾಳಗ ಳಿಂದ (ಬ್ರಾಂಕಸ್) ಲೋಳೆ ದವವನ್ನು ಹೀರಿ ತೆಗೆವುದರಿಂದ ಪುಪ್ಪುಸದ ಕಟ್ಟುನಿಟ್ಟಿನ ತಾಕುತೊಡಕುಗಳನ್ನು ತಗ್ಗಿಸಬಹುದು. ಶಸ್ತ್ರಕ್ರಿಯೆ ಆದ ಕೂಡಲೇ ರೋಗಿಯನ್ನು ಗಮನಿಸುತ್ತಿರಲು, ಕಣ್ಣರಿಕೆಗಾಗಿರುವ ಬೇರೆ ಕೋಣೆಗಳು ಕೆಲವು ಆಸ್ಪತ್ರೆಗಳಲ್ಲಿವೆ. ರೋಗಿಯ ರಕ್ತ ಸುತ್ತಾಟ ಉಸಿರಾಟಗಳನ್ನು ಚೆನ್ನಾಗಿ ಬಲ್ಲವನಾದ್ದರಿಂದ ಅರಿವಳಿಕೆಗಾರನೇ ಹಲವೇಳೆ ಮರುಚೇತರಿಸುವನು. ಅರಿವಳಿಕೆಶಾಸ್ರ್ತಕ್ಕೆ ಸಂಬಂಧಿಸಿದ ಅಂಗಕೆಲಸಶಾಸ್ರ್ತ್ದಲ್ಲಿನ ಶೋಧನೆಗ ಳಿಂದ ಎಷ್ಟೋ ವಿಷಯಗಳು ಗೊತ್ತಾಗುತ್ತಿವೆ. ಇಂದಿನ ಅರಿವಳಿಕೆ ಶಾಸ್ರದ ಮುನ್ನಡೆಗಳಿಂದಾಗಿ ಈಗ ಯಾವ ಚಿಂತೆ, ಕಳವಳ, ಅಂಜಿಕೆ, ನೋವು ಆಮೇಲಿನ ತೊಡಕುಗಳು ಇವೇನನ್ನೂ ಅನುಭವಿಸದೆ ರೋಗಿ ಶಸ್ತ್ರಕ್ರಿಯೆ ಮಾಡಿಸಿಕೊಳ್ಳಬಹುದು. (ಡಿ.ಎಸ್.ಎಸ್.)