ಅರಕಲಗೂಡು ವಿಧಾನಸಭಾ ಕ್ಷೇತ್ರ

ಅರಕಲಗೂಡು ವಿಧಾನಸಭಾ ಕ್ಷೇತ್ರ (ಕ್ಷೇತ್ರ ಸಂಖ್ಯೆ-೧೯೮) ಹಾಸನ ಜಿಲ್ಲೆಗೆ ಸೇರಿದೆ. ಇದು ಹಾಸನ ಲೋಕಸಭಾ ಕ್ಷೇತ್ರದ ಭಾಗವಾಗಿಯೂ ಗುರುತಿಸಿಕೊಂಡಿದೆ[]. ಸಕಲೇಶಪುರ ಕ್ಷೇತ್ರ ಮತ್ತು ಹೊಳೆನರಸಿಪುರ ಕ್ಷೇತ್ರಗಳು ಈ ಕ್ಷೇತ್ರದ ಮಗ್ಗುಲಲ್ಲಿ ಇವೆ.

ಹಾಸನ ಜಿಲ್ಲೆಯ ನಕ್ಷೆ (ಅರಕಲಗೂಡು ಕ್ಷೇತ್ರ ಕೆಂಪು ಬಣ್ಣದಲ್ಲಿದೆ.)

ಚುನಾವಣಾ ಇತಿಹಾಸ

ಬದಲಾಯಿಸಿ

ಈ ಕ್ಷೇತ್ರ ಅರೆಮಲೆನಾಡು ಪ್ರದೇಶವಾಗಿದ್ದು ಇಲ್ಲಿನ ಜನರಲ್ಲಿ ಹೆಚ್ಚಿನವರು ಕೃಷಿಯಾಧಾರಿತ ಚಟುವಟಿಕೆಗಳನ್ನು ಅವಲಂಬಿಸಿದ್ದಾರೆ. ಕೋಣನೂರು ತೂಗುಸೇತುವೆ, ಗೋರೂರು ಅಣೆಕಟ್ಟು, ಶೆಟ್ಟಿಹಳ್ಳಿ ಚರ್ಚ್ ಇಲ್ಲಿನ ಪ್ರಮುಖ ಪ್ರವಾಸೀ ತಾಣಗಳು. [].

ಅರಕಲಗೂಡು ಕ್ಷೇತ್ರಕ್ಕೆ ಮೊದಲ ಬಾರಿಗೆ ೧೯೫೨ರಲ್ಲಿ ಚುನಾವಣೆ ನಡೆಯಿತು. ಮೊದಲ ಬಾರಿಗೆ ಈ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದವರು ಕಾಂಗ್ರೆಸ್ ಪಕ್ಷದ ಜಿ ಎ ತಿಮ್ಮಪ್ಪಗೌಡ. ಈ ಕ್ಷೇತ್ರ ಕಾಂಗ್ರೆಸ್ ಪಕ್ಷದ ಭದ್ರಕೋಟೆ ಎನ್ನಬಹುದು. ೧೯೫೨ರಿಂದ ೨೦೧೮ರವರೆಗೆ ನಡೆದ ೧೫ ಚುನಾವಣೆಗಳಲ್ಲಿ ಬಹುತೇಕ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳೆ ಜಯಗಳಿಸಿ ಶಾಸಕರಾಗಿರುವುದು ಕಂಡುಬರುತ್ತದೆ. ೭ ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು (೧೯೫೨, ೧೯೬೨, ೧೯೭೨, ೧೯೮೯, ೧೯೯೪, ೨೦೦೮ ಮತ್ತು ೨೦೧೩), ೩ ಬಾರಿ (೧೯೭೮, ೧೯೮೩, ೧೯೮೫) ಜನತಾ ಪಕ್ಷದ ಅಭ್ಯರ್ಥಿಗಳು ಹಾಗೂ ೨ ಬಾರಿ (೨೦೦೪, ೨೦೧೮) ಜನತಾ ದಳದ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಕೇವಲ ೧ ಬಾರಿ (೧೯೯೯) ಮಾತ್ರ ಬಿಜೆಪಿ ಇಲ್ಲಿ ತನ್ನ ಖಾತೆ ತೆರೆದಿತ್ತು.

ಕಾವೇರಿ ಜಲವಿವಾದದ ಸಂದರ್ಭದಲ್ಲಿ ರಾಜ್ಯದ ಪರವಾಗಿ ವಾದಿಸಿ ನ್ಯಾಯ ದೊರಕಿಸಿಕೊಡುತ್ತಿದ್ದ ಎಚ್ ಎನ್ ನಂಜೇಗೌಡರು ಅರಕಲಗೂಡು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಅವರು ೧೯೬೭ರಲ್ಲಿ ಸ್ವತಂತ್ರ ಪಕ್ಷದಿಂದ ಮತ್ತು ೧೯೭೨ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಜಯಗಳಿಸಿದ್ದರು. ಹಾಗೂ ಸತತವಾಗಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು[].

ಮತದಾರರು

ಬದಲಾಯಿಸಿ

ಅಂಕಿ ಅಂಶಗಳು

ಬದಲಾಯಿಸಿ

ಅರಕಲಗೂಡು ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ ೨,೨೭,೬೬೩[]

  • ಪುರುಷ ಮತದಾರರು ೧,೧೬,೪೦೫
  • ಮಹಿಳಾ ಮತದಾರರು ೧,೧೧,೨೫೪
  • ತೃತೀಯ ಲಿಂಗಿ ಮತದಾರರು ೪

ಜಾತಿವಾರು

ಬದಲಾಯಿಸಿ

ಅರಕಲಗೂಡು ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಒಕ್ಕಲಿಗರು ಇದ್ದಾರೆ. ಜೊತೆಗೆ ಕುರುಬರು, ಲಿಂಗಾಯಿತರು, ಮುಸ್ಲಿಮ್ ಮತದಾರರೂ ಸಹ ನಿರ್ಣಾಯಕ ಸಂಖ್ಯೆಯಲ್ಲಿ ಇರುವುದನ್ನು ಕಾಣಬಹುದು. ಆದರೆ, ಚುನಾವಣೆಗೆ ಸ್ಪರ್ಧಿಸುವ ಮತ್ತು ಗೆಲ್ಲುವ ಅಭ್ಯರ್ಥಿಗಳೂ ಸಹ ಒಕ್ಕಲಿಗರೇ ಆಗಿರುವುದು ಸಹಜವಾಗಿಬಿಟ್ಟಿದೆ[].

ಇವನ್ನೂ ಓದಿ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "ಅರಕಲಗೂಡು ಚುನಾವಣಾ ಫಲಿತಾಂಶ". vijaykarnataka.com. ವಿಜಯ ಕರ್ನಾಟಕ. Archived from the original on 11 ಮೇ 2023. Retrieved 11 May 2023.
  2. "ಅರಕಲಗೂಡು ವಿಧಾನಸಭಾ ಕ್ಷೇತ್ರ". eedina.com. ಈ ದಿನ. Retrieved 11 May 2023.
  3. "ಅರಕಲಗೂಡು ವಿಧಾನಸಭಾ ಕ್ಷೇತ್ರ". eedina.com. ಈ ದಿನ. Retrieved 11 May 2023.
  4. "ಆನೇಕಲ್". kgis.ksrsac.in. ಕರ್ನಾಟಕ ಚುನಾವಣಾ ಮಾಹಿತಿ ವ್ಯವಸ್ಥೆ (ಮುಖ್ಯ ಚುನಾವಣಾಧಿಕಾರಿ, ಕರ್ನಾಟಕ ಸರ್ಕಾರ ). Archived from the original on 2 ಜೂನ್ 2023. Retrieved 11 May 2023.
  5. "ಅರಕಲಗೂಡು ವಿಧಾನಸಭಾ ಕ್ಷೇತ್ರ". eedina.com. ಈ ದಿನ. Retrieved 11 May 2023.