ಅಮೆಡೆಯೋ ಮೊಡಿಗ್ಲಿಯನಿ
ಅಮೆಡೆಯೋ ಕ್ಲೆಮೆನ್ಟೆ ಮೊಡಿಗ್ಲಿಯನಿ (ಜುಲೈ ೧೨, ೧೮೮೪ - ಜನವರಿ ೨೪, ೧೯೨೦), ಪ್ರಮುಖವಾಗಿ ಫ್ರಾನ್ಸ್ ದೇಶದಲ್ಲಿ ಕೆಲಸ ಮಾಡಿದ ಇಟಾಲಿಯನ್ ಕಲಾವಿದ. ಪ್ರಾಥಮಿಕವಾಗಿ ಒಬ್ಬ ಮೂರ್ತ ಕಲಾವಿದರಾಗಿದ್ದರೂ, ಮುಖವಾಡ-ಮಾದರಿಯ ಬಹುರೂಪಿ ಚಹರೆಗಳು ಹಾಗು ಕೃತಿ ರೂಪದ ದೀರ್ಘೀಕರಣದಿಂದ ನಿರೂಪಿತವಾದ ಆಧುನಿಕ ಶೈಲಿಯ ವರ್ಣಚಿತ್ರಗಳು ಹಾಗು ಶಿಲ್ಪಕಲಾಕೃತಿಗಳಿಗೆ ಪ್ರಸಿದ್ಧರಾಗಿದ್ದರು. ಇವರು ಟ್ಯೂಬರ್ಕ್ಯುಲರ್ ಮೆನಿಂಜೈಟಿಸ್(ಕ್ಷಯರೋಗದ ಮಿದುಳ್ಪೊರೆಯುರಿತ) ಕಾಯಿಲೆ, ಹೆಚ್ಚಿದ ಬಡತನ, ಅತಿಯಾದ ಕೆಲಸ, ಹಾಗು ಆಲ್ಕೋಹಾಲ್ ಹಾಗು ಮಾದಕದ್ರವ್ಯದ ವ್ಯಸನದಿಂದಾಗಿ ಪ್ಯಾರಿಸ್ ನಲ್ಲಿ ನಿಧನರಾದರು.
Amedeo Modigliani | |
ಹೆಸರು | Amedeo Clemente Modigliani |
ಹುಟ್ಟು | |
ಸಾವು | 24 January 1920 Paris, ಫ್ರಾನ್ಸ್ | (aged 35)
ರಾಷ್ಟ್ರೀಯತೆ | Italian |
ಕ್ಷೇತ್ರ | Painting, Sculpture |
ತರಬೇತಿ | Accademia di Belle Arti, Florence |
ಕೃತಿಗಳು | Madame Pompadour Jeanne Hébuterne in Red Shawl |
ಆರಂಭಿಕ ಜೀವನ
ಬದಲಾಯಿಸಿಮೊಡಿಗ್ಲಿಯನಿ, ಇಟಲಿಯ ಲಿವೊರ್ನೊನಲ್ಲಿ ಒಂದು ಯೆಹೂದಿ ಕುಟುಂಬದಲ್ಲಿ ಜನಿಸಿದರು. ಬಂದರು ನಗರವಾಗಿದ್ದ ಲಿವೊರ್ನೊ, ಧರ್ಮದ ಹೆಸರಿನಲ್ಲಿ ಹಿಂಸೆಗೊಳಪಟ್ಟ ಜನರಿಗೆ ಆಶ್ರಯ ನೀಡಿತ್ತು, ಜೊತೆಗೆ ದೊಡ್ಡ ಸಂಖ್ಯೆಯ ಯೆಹೂದಿ ಸಮುದಾಯಕ್ಕೆ ನೆಲೆಯಾಗಿತ್ತು. ಇವರ ತಾಯಿಯ ಮುತ್ತಾತನ ತಂದೆ, ಸಾಲೊಮನ್ ಗಾರ್ಸಿನ್, ಒಬ್ಬ ನಿರಾಶ್ರಿತನಾಗಿ ೧೮ನೇ ಶತಮಾನದಲ್ಲಿ ಲಿವೊರ್ನೊಗೆ ವಲಸೆ ಬಂದಿದ್ದರು.[೧] ಮೊಡಿಗ್ಲಿಯನಿ, ಫ್ಲಮಿನಿಯೋ ಮೊಡಿಗ್ಲಿಯನಿ ಹಾಗು ಆತನ ಫ್ರೆಂಚ್ ಪತ್ನಿ ಯುಜೆನಿಯಾ ಗಾರ್ಸಿನ್ ರ ನಾಲ್ಕನೇ ಮಗ. ಈತನ ತಂದೆ ಒಬ್ಬ ಲೇವಾದೇವಿದಾರನಾಗಿ, ಹಣ-ವಿನಿಮಯಗಾರನಾಗಿದ್ದರು, ಆದರೆ ಇವರ ವ್ಯಾಪಾರವು ದಿವಾಳಿಯೆದ್ದ ನಂತರ, ಕುಟುಂಬವು ಬಡತನದಲ್ಲಿ ಮುಳುಗಿತು. ಅಮೆಡೆಯೋನ ಜನನವು, ವಿನಾಶದ ಅಂಚಿನಲ್ಲಿದ್ದ ಕುಟುಂಬವನ್ನು ರಕ್ಷಿಸಿತು, ಪ್ರಾಚೀನ ಕಾನೂನಿನ ಪ್ರಕಾರ, ಸಾಲ ನೀಡಿದವರು, ಗರ್ಭಿಣಿ ಹೆಂಗಸಿನ ಅಥವಾ ನವಜಾತ ಶಿಶುವಿನ ತಾಯಿಯ ಮಂಚವನ್ನು ವಶಪಡಿಸಿಕೊಳ್ಳುವಂತಿರಲಿಲ್ಲ. ಯೂಜೆನಿಯಾಗೆ ಹೆರಿಗೆ ನೋವು ಕಾಣಿಸಿಕೊಂಡ ತಕ್ಷಣವೇ ಏಜೆಂಟರುಗಳು ಮನೆಯನ್ನು ಪ್ರವೇಶಿಸಿದರು; ಕುಟುಂಬವು ತಮ್ಮ ಅತ್ಯಂತ ಅಮೂಲ್ಯ ಸೊತ್ತನ್ನು ಆಕೆ ಮೇಲೆ ಹೇರಿ ಅದನ್ನು ರಕ್ಷಿಸಿಕೊಂಡಿತು. ಮೊಡಿಗ್ಲಿಯನಿ ತಮ್ಮ ತಾಯಿಯೊಂದಿಗೆ ನಿಕಟ ಸಂಬಂಧ ಹೊಂದಿದ್ದರು, ಹತ್ತು ವರ್ಷಗಳಾಗುವವರೆಗೂ ಅವರಿಗೆ ಮನೆಯಲ್ಲಿ ಆಕೆ ಪಾಠ ಹೇಳಿಕೊಡುತ್ತಿದ್ದಳು. ತಮ್ಮ ಹನ್ನೊಂದನೇ ವರ್ಷದಲ್ಲಿ ಫ್ಲೂರಿಸಿಗೆ(ಫ್ಲೂರದ ಉರಿಯೂತದಿಂದ ಎದೆ ಅಥವಾ ಪಕ್ಕೆಯಲ್ಲಿ ನೋವು, ಜ್ವರ ಕಾಣಿಸಿಕೊಂಡು, ಕೆಲವು ವೇಳೆ ಫ್ಲೂರದ ಪದರಗಳ ಮಧ್ಯೆ ಚೀಲದಂತಿರುವೆಡೆ ದ್ರವ ತುಂಬಿಕೊಂಡು ಉಸಿರಾಡಲು ಕಷ್ಟ ಕೊಡುವ ಒಂದು ವ್ಯಾಧಿ) ತುತ್ತಾದ ನಂತರ ಆರೋಗ್ಯ ಸಮಸ್ಯೆಗಳು ಆವರಿಸಿದವು, ಇದಾದ ಸ್ವಲ್ಪ ವರ್ಷಗಳ ನಂತರ ಟೈಫಾಯ್ಡ್ ಜ್ವರ ಅವರನ್ನು ಕಾಡಿತು. ಹದಿನಾರನೇ ವಯಸ್ಸಿನಲ್ಲಿ ಮತ್ತೊಮ್ಮೆ ಅವರಿಗೆ ಆರೋಗ್ಯದ ಸಮಸ್ಯೆ ಕಾಡಿತು, ಅದೇ ಆಗ ಇದು ಕ್ಷಯ ರೋಗಕ್ಕೆ ತಿರುಗುತ್ತದೆ, ವ್ಯಾಧಿಯು ನಂತರದಲ್ಲಿ ಅವರ ಜೀವಕ್ಕೆ ಮಾರಕವಾಗಿ ಪರಿಣಮಿಸಿತು. ಎರಡನೇ ಬಾರಿ ಫ್ಲೂರಿಸಿಯಿಂದ ಮೊಡಿಗ್ಲಿಯನಿ ಚೇತರಿಸಿಕೊಂಡ ನಂತರ, ಅವರ ತಾಯಿ ಅವರನ್ನು ದಕ್ಷಿಣ ಇಟಲಿಗೆ ಪ್ರವಾಸಕ್ಕಾಗಿ ಕರೆದೊಯ್ಯುತ್ತಾಳೆ: ನೇಪಲ್ಸ್, ಕಾಪ್ರಿ, ರೋಮ್ ಹಾಗು ಅಮಾಲ್ಫಿ, ಹಾಗು ನಂತರದಲ್ಲಿ ಉತ್ತರದಲ್ಲಿದ್ದ ಫ್ಲಾರೆನ್ಸ್ ಹಾಗು ವೆನಿಸ್ ಗೆ ಅವರು ಪ್ರಯಾಣಿಸುತ್ತಾರೆ.[೨][೩][೪] ಕಲೆಯನ್ನು ಒಂದು ವೃತ್ತಿಯಾಗಿ ಮುಂದುವರಿಸುವ ಅವರ ಸಾಮರ್ಥ್ಯಕ್ಕೆ ಅವರ ತಾಯಿ ಹಲವು ರೀತಿಯಲ್ಲಿ ಕಾರಣರಾಗುತ್ತಾಳೆ. ಅವರ ಹನ್ನೊಂದನೇ ವಯಸ್ಸಿನಲ್ಲಿ, ಆಕೆ ತನ್ನ ದಿನಚರಿಯಲ್ಲಿ ಈ ರೀತಿ ಬರೆಯುತ್ತಾಳೆ:
“ | The child's character is still so unformed that I cannot say what I think of it. He behaves like a spoiled child, but he does not lack intelligence. We shall have to wait and see what is inside this chrysalis. Perhaps an artist?[೫] | ” |
ಕಲಾ ವಿದ್ಯಾರ್ಥಿಯಾಗಿದ್ದಾಗಿನ ವರ್ಷಗಳು
ಬದಲಾಯಿಸಿಮೊಡಿಗ್ಲಿಯನಿ, ಬಹಳ ಚಿಕ್ಕ ವಯಸ್ಸಿನಿಂದಲೇ ರೇಖಾಚಿತ್ರ ಹಾಗು ವರ್ಣಚಿತ್ರ ಬರೆಯುತ್ತಿದ್ದರು, ಹಾಗು ವಿಧ್ಯುಕ್ತವಾಗಿ ಕಲಾಭ್ಯಾಸ ಮಾಡುವ ಮೊದಲೇ "ತಾನೊಬ್ಬ ವರ್ಣಚಿತ್ರಕಾರನೆಂದು" ಭಾವಿಸಿಬಿಟ್ಟಿದ್ದರು,[೬] ಎಂದು ಅವರ ತಾಯಿ ಬರೆಯುತ್ತಾಳೆ. ಕಲಾ ಶಿಕ್ಷಣವು ಅವರ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುತ್ತದೆಂಬ ಆಕೆಯ ಕಳವಳದ ಹೊರತಾಗಿಯೂ, ಬಾಲಕ ಮೊಡಿಗ್ಲಿಯನಿಯನ್ನು ತನ್ನ ಇಷ್ಟದ ವಿಷಯ ಕಲಿಯಲು ಪ್ರೋತ್ಸಾಹ ನೀಡಿದಳು. ತಮ್ಮ ಹದಿನಾಲ್ಕನೇ ವಯಸ್ಸಿನಲ್ಲಿ, ಟೈಫಾಯ್ಡ್ ಜ್ವರದಿಂದ ನರಳುತ್ತಿರುವಾಗ, ಭಾವೋನ್ಮಾದದಲ್ಲಿ, ತಾವು ಎಲ್ಲಕ್ಕಿಂತ ಹೆಚ್ಚಾಗಿ ಫ್ಲಾರೆನ್ಸ್ ನಲ್ಲಿರುವ ಪಲಜ್ಜೊ ಪಿಟ್ಟಿ ಹಾಗು ಉಫ್ಫಿಜಿಯಲ್ಲಿರುವ ವರ್ಣಚಿತ್ರಗಳನ್ನು ನೋಡಬೇಕೆಂದು ಕೂಗಾಡಿದರು. ಲಿವೊರ್ನೊದ ಸ್ಥಳೀಯ ಪ್ರಾಚ್ಯ ವಸ್ತು ಸಂಗ್ರಹಾಲಯವು, ಇಟಾಲಿಯನ್ ನವೋದಯ ಕಲಾವಿದರ ಕೆಲವೇ ಕೆಲವು ವರ್ಣಚಿತ್ರಗಳನ್ನು ಹೊಂದಿತ್ತು, ಫ್ಲಾರೆನ್ಸ್ ನಲ್ಲಿರುವ ಮಹತ್ವದ ಕೃತಿಗಳ ಬಗ್ಗೆ ಕೇಳಲ್ಪಟ್ಟ ಕಥೆಗಳು ಅವರಲ್ಲಿ ಆಸಕ್ತಿಯನ್ನು ಉಂಟುಮಾಡಿದವು. ಆದರೂ ತಾವಿರುವ ಅಸ್ವಸ್ಥ ಸ್ಥಿತಿಯಲ್ಲಿ, ವೈಯಕ್ತಿಕವಾಗಿ ಅವುಗಳನ್ನು ನೋಡುವ ಅವಕಾಶ ದೊರೆಯುವುದಿಲ್ಲವೇನೋ ಎಂಬ ಕಾರಣಕ್ಕೆ ಅವರಿಗೆ ಅತ್ಯಧಿಕ ಆತಂಕದ, ಇದೊಂದು ನಿರಾಶೆಯ ವಿಷಯವಾಗಿತ್ತು. ಚೇತರಿಸಿಕೊಂಡ ತಕ್ಷಣವೇ ಅವರನ್ನು ಫ್ಲಾರೆನ್ಸ್ ಗೆ ಕರೆದೊಯ್ಯುವುದಾಗಿ ಅವನ ತಾಯಿ ಭರವಸೆ ನೀಡಿ ಸಮಾಧಾನ ಮಾಡುತ್ತಾಳೆ. ಈ ಭರವಸೆಯನ್ನು ಈಡೇರಿಸುವುದಷ್ಟೇ ಅಲ್ಲದೆ, ಲಿವೊರ್ನೊನಲ್ಲಿದ್ದ ಪ್ರಸಿದ್ಧ ಕಲಾಶಿಕ್ಷಕ ಗುಗ್ಲಿಯೇಲ್ಮೋ ಮೈಕೇಲಿಯ ಬಳಿ ವಿದ್ಯಾರ್ಥಿಯಾಗಿ ದಾಖಲು ಮಾಡುತ್ತಾಳೆ.
ಮೈಕೇಲಿ ಹಾಗು ಮಚ್ಚಿಯಾಯಿಯೋಲಿ
ಬದಲಾಯಿಸಿಮೈಕೇಲಿಯವರ ಕಲಾ ಶಾಲೆಯಲ್ಲಿ ೧೮೯೮ರಿಂದ ೧೯೦೦ರವರೆಗೆ ಮೊಡಿಗ್ಲಿಯನಿ ಕೆಲಸ ಮಾಡುತ್ತಾರೆ. ಶೈಲಿಗಳ ಅಧ್ಯಯನ ಹಾಗು ೧೯ನೇ ಶತಮಾನದ ಇಟಾಲಿಯನ್ ಕಲಾ ಶೈಲಿಯನ್ನು ವಿಷಯವಸ್ತುವಾಗಿ ಬೋಧಿಸುತ್ತಿದ್ದ ಇಲ್ಲಿ ಅವರಿಗೆ ಆರಂಭಿಕ ಕಲಾತ್ಮಕ ಮಾಹಿತಿಯು ವಿಧ್ಯುಕ್ತವಾಗಿ ದೊರೆಯಿತು. ಅವರ ಆರಂಭಿಕ ಪ್ಯಾರಿಸಿನ ಕೃತಿಗಳಲ್ಲಿ, ಇದರ ಪ್ರಭಾವಗಳು ಎದ್ದು ಕಾಣುತ್ತವೆ, ಹಾಗು ನವೋದಯ ಕಲೆಯ ಬಗ್ಗೆ ಅವರ ಅಧ್ಯಯನಗಳ ಛಾಪು ಸಹ ಕಂಡುಬರುತ್ತವೆ: ಅವರ ಚಿಗುರುತ್ತಿರುವ ಪ್ರತಿಭೆಗೆ ಗಿಯೋವಾನ್ನಿ ಬೋಲ್ಡಿನಿ ಹಾಗು ಟೌಲೌಸೆ-ಲೌಟ್ರೆಕ್ ನಂತಹ ಕಲಾವಿದರು ನೀರೆರೆದರು. ಮೈಕೇಲಿಯವರಲ್ಲಿ ಅಧ್ಯಯನ ಮಾಡುತ್ತಿದ್ದಾಗ ಮೊಡಿಗ್ಲಿಯನಿ ಅದ್ಭುತವೆನಿಸುವ ಭರವಸೆ ಮೂಡಿಸಿದ್ದರು, ಹಾಗು ಅವರ ಅಧ್ಯಯನಕ್ಕೆ ಅಡಚಣೆ ಉಂಟುಮಾಡಿದ ಏಕೈಕ ಕಾರಣವೆಂದರೆ ಕ್ಷಯ ರೋಗದ ಪ್ರಾರಂಭ. ರೋಮ್ ನಲ್ಲಿರುವಾಗ, ೧೯೦೧ರಲ್ಲಿ ಮೊಡಿಗ್ಲಿಯನಿ ಡೊಮೆನಿಕೋ ಮೊರೆಲ್ಲಿಯವರ ಕೃತಿಗಳನ್ನು ಬಹುವಾಗಿ ಮೆಚ್ಚುತ್ತಿದ್ದರು, ಈತ ಒಬ್ಬ ಭಾವಾತಿರೇಕವುಳ್ಳ ಬೈಬಲಿನ ಅಧ್ಯಯನಗಳು ಹಾಗು ಮಹತ್ವದ ಕೃತಿಗಳಿಂದ ಆಯ್ದುಕೊಂಡಂತಹ ದೃಶ್ಯಗಳನ್ನು ಚಿತ್ರಿಸುತ್ತಿದ್ದ ಒಬ್ಬ ವರ್ಣಚಿತ್ರಕಾರರಾಗಿದ್ದರು. ಇವರು ಮೊರೆಲ್ಲಿಯವರ ಕೃತಿಗಳಿಗೆ ಮಾರು ಹೋಗಿದ್ದು ಬಹಳ ಆಭಾಸವೆನಿಸಿದೆ, ಈ ವರ್ಣಚಿತ್ರಕಾರನು ಮಚ್ಚಿಯಾಯಿಯೋಲಿ("ದಿ ಮಚ್ಚಿಯಾಯಿಯೋಲಿ"(ಎಂಬ ಪದವನ್ನು "ಬಣ್ಣದ ಕಲೆ" ಎಂಬ ಅರ್ಥ ನೀಡುವ ಮಚ್ಚಿಯ , ಅಥವಾ ಹೆಚ್ಚು ಅಯುಕ್ತವಾಗಿ, "ಕಲೆ" ಎಂಬ ಪದಗಳಿಂದ ತೆಗೆದುಕೊಳ್ಳಲಾಗಿದೆ)ಎಂಬ ಮೂರ್ತಿಪೂಜೆಯನ್ನು ಖಂಡಿಸುವ ಒಂದು ಗುಂಪಿನ ಕಲಾವಿದರಿಗೆ ಪ್ರೇರೇಪಣೆ ನೀಡಿದ್ದರು, ಹಾಗು ಮೊಡಿಗ್ಲಿಯನಿ, ಇಷ್ಟೊತ್ತಿಗಾಗಲೇ ಮಚ್ಚಿಯಾಯಿಯೋಲಿಯ ಪ್ರಭಾವಕ್ಕೆ ಒಳಪಟ್ಟಿದ್ದರು. ಈ ಕಿರಿ ವಯಸ್ಸಿನ ಬಾಲಕನು, ಭೂದೃಶ್ಯಾವಳಿಯ ನಿರ್ದಿಷ್ಟ ಪ್ರವೃತ್ತಿಯನ್ನು ಸ್ಥಳೀಕರಿಸುವ ಸಾಮರ್ಥ್ಯ ಹೊಂದಿದ್ದಾನೆ. ಇದು ಶೈಕ್ಷಣಿಕ ಕಲಿಕೆ ಪ್ರಕಾರದ ವರ್ಣಚಿತ್ರಕಾರರ ಸಾಂಪ್ರದಾಯಿಕ ಶೈಲಿಗಳ ವಿರುದ್ಧ ಪ್ರತಿಕ್ರಿಯಿಸುವ ಅಗತ್ಯ ಹೊಂದಿರುತ್ತದೆ. ಫ್ರೆಂಚ್ ಚಿತ್ತಪ್ರಭಾವ ನಿರೂಪಣಾವಾದಿಗಳೊಂದಿಗೆ ಸಹಾನುಭೂತಿಯಿಂದ ಸಂಪರ್ಕ ಪಡೆದಿದ್ದ ಮಚ್ಚಿಯಾಯಿಯೋಲಿಗಳು(ಹಾಗು ವಾಸ್ತವವಾಗಿ ಅದಕ್ಕೂ ಹಿಂದೆ), ಮೊನೆಟ್ ನ ಅನುಯಾಯಿಗಳು ಹಾಗು ಅವರ ಸಮಕಾಲೀನರು ಬೀರಿದ ಪ್ರಭಾವದ ಮಾದರಿ ಅಂತರರಾಷ್ಟ್ರೀಯ ಕಲಾ ಸಂಸ್ಕೃತಿಯ ಮೇಲೆ ಪ್ರಭಾವ ಬೀರಲಿಲ್ಲ, ಹಾಗು ಇವರನ್ನು ಇಂದು ಇಟಲಿಯ ಆಚೆಗೆ ಯಾರೂ ಸ್ಮರಿಸುವುದಿಲ್ಲ. ಈ ಪ್ರವೃತ್ತಿಯ ಆಂದೋಲನದೊಂದಿಗೆ ಮೊಡಿಗ್ಲಿಯನಿಯ ಸಂಪರ್ಕವು, ಅವರ ಮೊದಲ ಕಲಾ ಗುರುಗಳಾದ ಗುಗ್ಲಿಯೇಲ್ಮೋ ಮೈಕೇಲಿಯವರ ಮೂಲಕ ಉಂಟಾಯಿತು. ಮೈಕೇಲಿ ಸ್ವತಃ ಒಬ್ಬ ಮಚ್ಚಿಯಾಯಿಯೋಲಿ ಅಷ್ಟೇ ಅಲ್ಲದೇ, ಈ ಕಲಾ ಪ್ರವೃತ್ತಿಯ ಆಂದೋಲನದ ಸ್ಥಾಪಕ ಪ್ರಸಿದ್ಧ ಜಿಯೋವಾನ್ನಿ ಫ್ಯಾಟ್ಟೋರಿಯ ಶಿಷ್ಯರೂ ಸಹ ಆಗಿದ್ದರು. ಆದಾಗ್ಯೂ, ಮೈಕೇಲಿಯವರ ಕೃತಿಗಳು ಬಹಳ ಸೊಗಸಾಗಿರುತ್ತಿದ್ದವು, ಹಾಗು ಈ ಪ್ರಕಾರವು ಎಷ್ಟು ಸರ್ವೇಸಾಮಾನ್ಯವಾಗಿರುತ್ತಿದ್ದೆಂದರೆ, ಯುವ ಮೊಡಿಗ್ಲಿಯನಿ ಇದರ ವಿರುದ್ದ ಪ್ರತಿಕ್ರಿಯಿಸಿದರು, ಫ್ರೆಂಚ್ ಚಿತ್ತಪ್ರಭಾವ ನಿರೂಪಣಾ ಶೈಲಿಯ ಲಕ್ಷಣವಾಗಿದ್ದ ಭೂದೃಶ್ಯಗಳೆಡೆಗಿನ ಗ್ರಸ್ತತೆಯನ್ನು ಪರಿಗಣಿಸದಿರಲು ಅವರು ಆಯ್ಕೆ ಮಾಡಿಕೊಂಡರು. ಮೈಕೇಲಿ ತಮ್ಮ ಶಿಷ್ಯರಿಗೆ ಏನ್ ಪ್ಲೆಯಿನ್ ಏರ್ ನ್ನು(ಬಾಹ್ಯ ಲೋಕದ ವರ್ಣಚಿತ್ರರಚನೆ) ಚಿತ್ರಿಸಲೂ ಸಹ ಉತ್ತೇಜಿಸಿದರು, ಆದರೆ ಮೊಡಿಗ್ಲಿಯನಿ, ಕೆಫೆಗಳಲ್ಲಿ ಕುಳಿತು ಚಿತ್ರಿಸುವ ಅಭಿರುಚಿಯ ಈ ಶೈಲಿಯ ಬಗ್ಗೆ ಎಂದಿಗೂ ಪ್ರವೃತ್ತಿ ಬೆಳೆಸಿಕೊಳ್ಳಲಿಲ್ಲ, ಆದರೆ ಇದಕ್ಕೆ ಬದಲಿಯಾಗಿ ಒಳಾಂಗಣದಲ್ಲಿ, ಹಾಗು ಅದರಲ್ಲೂ ವಿಶೇಷವಾಗಿ ತಮ್ಮ ಸ್ಟುಡಿಯೋದಲ್ಲಿ ಕುಳಿತು ಚಿತ್ರಿಸಲು ಇಚ್ಛಿಸುತ್ತಿದ್ದರು. ಭೂದೃಶ್ಯಗಳನ್ನು ಚಿತ್ರಿಸಲು ಅವರಿಗೆ ಒತ್ತಾಯಪಡಿಸಿದಾಗ(ಇದರಲ್ಲಿ ಮೂರು ವರ್ಣಚಿತ್ರಗಳು ಅಸ್ತಿತ್ವದಲ್ಲಿವೆ),[೭] ಮೊಡಿಗ್ಲಿಯನಿ, ಮಚ್ಚಿಯಾಯಿಯೋಲಿಗಿಂತ ಹೆಚ್ಚಾಗಿ ಸೆಜೇನ್ ಗೆ(ಪಿಕಾಸೊ ಮಾದರಿ) ಹೆಚ್ಚು ಸದೃಶವಾಗಿದ್ದ ಪ್ರಾಚೀನ-ಕ್ಯೂಬಿಸ್ಟ್ ವರ್ಣಫಲಕವನ್ನು(ಪಾಬ್ಲೊ ಪಿಕಾಸೊ ಅವರ ಕಲೆ) ಆಯ್ಕೆ ಮಾಡಿಕೊಂಡರು. ಮೈಕೇಲಿಯವರಲ್ಲಿ ಕಲಿಯುವಾಗ, ಮೊಡಿಗ್ಲಿಯನಿ ಭೂದೃಶ್ಯಗಳನ್ನು ಚಿತ್ರಿಸುವುದನ್ನು ಮಾತ್ರವಲ್ಲದೇ, ಭಾವಚಿತ್ರ ರಚನೆ, ಸ್ತಬ್ಧ ಚಿತ್ರಣ, ಹಾಗು ನಗ್ನ ಚಿತ್ರಗಳನ್ನು ರಚಿಸುವುದನ್ನೂ ಸಹ ಕಲಿತರು. ಅವರ ಸಹಪಾಠಿಗಳ ಪ್ರಕಾರ, ನಂತರದ ಶೈಲಿಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರೆಂದು ಸ್ಮರಿಸುತ್ತಾರೆ, ಹಾಗು ಸ್ಪಷ್ಟವಾಗಿ ಇದು ಒಬ್ಬ ಹದಿಹರೆಯದ ಹುಡುಗನಿಗೆ ಒಂದು ಸಂಪೂರ್ಣವಾದ ಶೈಕ್ಷಣಿಕ ಮುಂದುವರಿಕೆಯಾಗಿರಲಿಲ್ಲ: ನಗ್ನ ಚಿತ್ರಗಳನ್ನು ಬರೆಯದಿರುವಾಗ, ಆತ ಮನೆಯ ಕೆಲಸದವಳನ್ನು ಆಕರ್ಷಿಸುವಲ್ಲಿ ನಿರತರಾಗಿರುತ್ತಿದ್ದರು.[೬] ಮಚ್ಚಿಯಾಯಿಯೋಲಿ ಎಡೆಗೆ ಅವರ ತಿರಸ್ಕಾರದ ಹೊರತಾಗಿಯೂ, ಮೊಡಿಗ್ಲಿಯನಿ ಅದೇನೇ ಇದ್ದರೂ ತಮ್ಮ ಗುರುಗಳ ಮೆಚ್ಚಿನ ಶಿಷ್ಯರೆನಿಸಿಕೊಂಡರು.ಅವರ ಗುರುಗಳು ಅವರನ್ನು "ಸೂಪರ್ ಮ್ಯಾನ್" ಎಂದು ಕರೆಯುತ್ತಿದ್ದರು, ಈ ಅಡ್ಡಹೆಸರು, ಮೊಡಿಗ್ಲಿಯನಿ ಕೇವಲ ತಮ್ಮ ಕಲೆಯಲ್ಲಷ್ಟೇ ಮಾತ್ರವಲ್ಲದೆ, ಸಾಧಾರಣವಾಗಿ ನಿಯೆಟ್ಸ್ಚೆಯವರ ದಸ್ ಸ್ಪೋಕ್ ಜರಾಥುಸ್ಟ್ರ ದಿಂದ ಉಲ್ಲೇಖಗಳನ್ನು ಬಳಸುತ್ತಿದ್ದ ವಾಸ್ತವವನ್ನು ಪ್ರತಿಬಿಂಬಿಸುತ್ತದೆ. ಸಾಮಾನ್ಯವಾಗಿ ಫ್ಯಾಟ್ಟೋರಿ ಸ್ವತಃ ಸ್ಟುಡಿಯೋಕ್ಕೆ ಆಗಾಗ ಭೇಟಿ ನೀಡಿ, ಯುವ ಕಲಾವಿದನ ಹೊಸ ಕಲ್ಪನೆಗಳನ್ನು ಶ್ಲಾಘಿಸುತ್ತಿದ್ದರು.[೮] ಆಗ ೧೯೦೨ರಲ್ಲಿ, ಮೊಡಿಗ್ಲಿಯನಿ, ಫ್ಲಾರೆನ್ಸ್ ನಲ್ಲಿರುವ ಅಕಾಡೆಮಿಯ ಡಿ ಬೆಲ್ಲೆ ಆರ್ಟಿ(ಸ್ಕುವೋಲ ಲಿಬೇರಾ ಡಿ ನ್ಯುಡೋ, ಅಥವಾ "ಫ್ರೀ ಸ್ಕೂಲ್ ಆಫ್ ನ್ಯೂಡ್ ಸ್ಟಡೀಸ್") ನಲ್ಲಿ ದಾಖಲಾಗುವುದರ ಜೊತೆಗೆ ಲೈಫ್ ಡ್ರಾಯಿಂಗ್ ನೊಂದಿಗೆ(ಮಾನವ ದೇಹವನ್ನು ವಿವಿಧ ಆಕಾರಗಳು ಹಾಗು ಭಂಗಿಗಳಲ್ಲಿ ಚಿತ್ರಿಸುವ ವಿಧಾನ) ಆಜೀವ ಪರ್ಯಂತ ವ್ಯಾಮೋಹ ಬೆಳೆಸಿಕೊಂಡರು. ಒಂದು ವರ್ಷದ ನಂತರ ಕ್ಷಯದಿಂದ ನರಳುತ್ತಿದ್ದರೂ ಸಹ, ಅವರು ವೆನಿಸ್ ಗೆ ಸ್ಥಳಾಂತರಗೊಂಡರು, ಅಲ್ಲಿ ಅವರು ಇನ್ಸ್ಟಿಟ್ಯೂಟೋ ಡಿ ಬೆಲ್ಲೆ ಆರ್ಟಿಯಲ್ಲಿ ಅಧ್ಯಯನ ಮಾಡಲು ದಾಖಲಾದರು. ವೆನಿಸ್ ನಲ್ಲಿ ಅವರು ಮೊದಲ ಬಾರಿ ಹಶಿಶ್ ನ್ನು ಸೇದಿದರು, ಹಾಗು ಓದುವುದಕ್ಕೆ ಬದಲಾಗಿ, ನಗರದಲ್ಲಿ ಅಪಖ್ಯಾತಿ ಹೊಂದಿದ್ದ ಭಾಗಗಳಲ್ಲಿ ಸಮಯ ಕಳೆಯಲು ಆರಂಭಿಸಿದರು. ಬೆಳವಣಿಗೆಯಾಗುತ್ತಿರುವ ಅವರ ಕಲಾತ್ಮಕ ಶೈಲಿಯ ಮೇಲೆ ಈ ಜೀವನಶೈಲಿಯ ಆಯ್ಕೆಗಳ ಪರಿಣಾಮವು ಊಹೆಗೆ ಎಡೆ ಮಾಡಿಕೊಟ್ಟಿತು. ಆದಾಗ್ಯೂ ಈ ಆಯ್ಕೆಗಳು ಸರಳವಾದ ಹದಿಹರೆಯದ ಬಂಡಾಯಗಿಂತ ಹೆಚ್ಚಾಗಿ, ಅಥವಾ ಆ ಅವಧಿಯಲ್ಲಿ ಕಲಾವಿದರಿಂದ ಬಹುತೇಕವಾಗಿ ನಿರೀಕ್ಷಿಸಲಾಗುತ್ತಿದ್ದ ಸವಕಲಾದ(ಐಹಿಕ ಭೋಗ) ಸುಖೈಕ ವಾದ ಹಾಗು ಸ್ವೈರಾಚಾರಕ್ಕಿಂತ ಹೆಚ್ಚಾಗಿತ್ತು; ಜೀವನದ ಜರ್ಜರಿತ ಸ್ಥಿತಿಯ ಬಗೆಗಿನ ಅವರ ಅನ್ವೇಷಣೆಯು, ನಿಯೆಟ್ಜ್ಸ್ಚೆಯವರ ತತ್ತ್ವಗಳನ್ನು ಒಳಗೊಂಡಂತೆ ಮೂಲಭೂತ ತತ್ತ್ವಗಳ ಬಗ್ಗೆ ಅವರ ಮೆಚ್ಚಿಕೆಯಲ್ಲಿ ದೃಢವಾಗಿ ಸ್ಥಾಪನೆಯಾಗಿರಬಹುದೆಂದು ಕಂಡುಬರುತ್ತದೆ.
ಆರಂಭಿಕ ಸಾಹಿತ್ಯದ ಪ್ರಭಾವಗಳು
ಬದಲಾಯಿಸಿಚಿಕ್ಕ ಹುಡುಗನಾಗಿದ್ದಾಗಿ, ತಮ್ಮ ತಾಯಿಯ ತಂದೆ ಇಸಾಕೋ ಗಾರ್ಸಿನ್ ರ ಮಾರ್ಗದರ್ಶನದಲ್ಲಿ ಪ್ರೌಢಪಾಂಡಿತ್ಯವುಳ್ಳ ತಾತ್ತ್ವಿಕ ಸಾಹಿತ್ಯಕ್ಕೆ ತೆರೆದುಕೊಂಡರು. ಅವರು ಗ್ರಂಥಗಳನ್ನು ಓದುವುದನ್ನು ಮುಂದುವರೆಸುವುದರ ಜೊತೆಗೆ ತಮ್ಮ ಕಲಾಧ್ಯಾಯನದ ಮೂಲಕ ನಿಯೆಟ್ಜ್ಸ್ಚೆ, ಬಾಡೆಲೈರ್, ಕಾರ್ಡುಚ್ಚಿ, ಕಾಮ್ಟೆ ಡೆ ಲೌಟ್ರೆಯಮೊಂಟ್, ಹಾಗು ಇತರರ ಬರವಣಿಗೆಗಳಿಂದ ಪ್ರಭಾವಿತರಾದರು, ಹಾಗು ನಿಜವಾದ ಕಲಾತ್ಮಕತೆಗಿರುವ ಏಕೈಕ ಮಾರ್ಗವೆಂದರೆ ಪ್ರತಿರೋಧ ಹಾಗು ಅವ್ಯವಸ್ಥೆಯ ವ್ಯಾಖ್ಯಾನಿಕರಣವಾಗಿದೆ. ಆಗ ೧೯೦೧ರಲ್ಲಿ ಕಾಪ್ರಿಯಿಂದ ತಮ್ಮ 'ಸಬ್ಬತು ರಜೆಯ ಅವಧಿಯಲ್ಲಿ' ಬರೆದ ಪತ್ರಗಳಲ್ಲಿ, ನಿಯೆಟ್ಜ್ಸ್ಚೆಯವರ ಚಿಂತನೆಗಳಿಂದ ಹೆಚ್ಚು ಹೆಚ್ಚು ಪ್ರಭಾವಿತವಾಗಿರುವುದು ಕಂಡುಬರುತ್ತದೆ. ಈ ಪತ್ರಗಳಲ್ಲಿ, ಅವರು ತಮ್ಮ ಮಿತ್ರ ಆಸ್ಕರ್ ಗಿಗ್ಲಿಯಾಗೆ ಸಲಹೆ ನೀಡುತ್ತಾರೆ;
“ | (hold sacred all) which can exalt and excite your intelligence... (and) ... seek to provoke ... and to perpetuate ... these fertile stimuli, because they can push the intelligence to its maximum creative power.[೯] | ” |
ಆ ಅವಧಿಯಲ್ಲಿ ಲೌಟ್ರೆಯಮೊಂಟ್ ರ ಕೃತಿಗಳೂ ಸಹ ಸಮಾನವಾಗಿ ಪ್ರಭಾವ ಬೀರುತ್ತಿದ್ದವು. ದಂಡನೆ ವಿಧಿಸಲಾದ ಈ ಕವಿಯ ಲೆಸ್ ಚಾಂಟ್ಸ್ ಡೆ ಮಾಲ್ಡೋರೋರ್ ಕೃತಿಯು ಮೊಡಿಗ್ಲಿಯನಿ ಪೀಳಿಗೆಯ ಪ್ಯಾರಿಸ್ಸಿನ ಅತಿ ವಾಸ್ತವಿಕಾವಾದಿಗಳಿಗೆ ಮೂಲ ಗ್ರಂಥವಾಯಿತು, ಹಾಗು ಈ ಪುಸ್ತಕವು ಮೊಡಿಗ್ಲಿಯನಿಗೆ ಎಷ್ಟು ಪ್ರಿಯವಾಯಿತೆಂದರೆ ಇದನ್ನು ಅವರು ಬಾಯಿಪಾಠ ಮಾಡುವ ಮಟ್ಟಕ್ಕೆ ಹೋದರು.[೮] ಲೌಟ್ರೆಯಮೊಂಟ್ ರ ಕವಿತೆಯು ವಿಲಕ್ಷಣವಾದ ಅಂಶಗಳ ಪಾರ್ಶ್ವ ಬದಿಯಿಂದ, ಹಾಗು ಹಿಂಸಾಸಕ್ತಿಯ ಕಲ್ಪನೆಗಳಿಂದ ಕೂಡಿದೆ; ತಮ್ಮ ಹರೆಯದ ಆರಂಭಿಕ ದಿನಗಳಲ್ಲಿ ಈ ಗ್ರಂಥದ ಬಗ್ಗೆ ಮೊಡಿಗ್ಲಿಯನಿ ಆಕರ್ಷಿತರಾದ ವಾಸ್ತವವು ಅವರ ಬೆಳವಣಿಗೆಯಾಗುತ್ತಿರುವ ಉತ್ತಮ ಅಭಿರುಚಿಗಳ ಬಗ್ಗೆ ಸೂಚನೆ ನೀಡುತ್ತದೆ. ಬೋದಿಲೈರ್ ಹಾಗು ಡಿ'ಅನ್ನುಂಜಿಯೋ, ಇದೇ ಮಾದರಿ ಯುವ ಕಲಾವಿದನನ್ನು, ಅಶುದ್ಧವಾದ ಸೌಂದರ್ಯದ ಬಗೆಗಿನ ತಮ್ಮ ಆಸಕ್ತಿ, ಹಾಗು ಸಾಂಕೇತಿಕ ಕಲ್ಪನೆಯ ಮೂಲಕ ಒಳನೋಟವನ್ನು ಅಭಿವ್ಯಕ್ತಿಸುವ ಮೂಲಕ ಗಮನ ಸೆಳೆಯುತ್ತಾರೆ. ಮೊಡಿಗ್ಲಿಯನಿ, ಕಾಪ್ರಿಯಿಂದ ಗಿಗ್ಲಿಯಾಗೆ ವ್ಯಾಪಕವಾಗಿ ಬರೆಯುತ್ತಾರೆ, ಅಲ್ಲಿ ಕ್ಷಯ ರೋಗದಿಂದ ಚೇತರಿಸಿಕೊಳ್ಳಲು ಅವರಿಗೆ ಅವರ ತಾಯಿ ನೆರವು ನೀಡಿದರು. ಈ ಪತ್ರಗಳು, ಮೊಡಿಗ್ಲಿಯನಿಯವರ ಮನಸ್ಸಿನಲ್ಲಿ ಹುಟ್ಟುತ್ತಿದ್ದ ಕಲ್ಪನೆಗಳಿಗೆ ಒಂದು ಪ್ರಸಾರ ಸಾಧನವಾದವು. ಗಿಗ್ಲಿಯಾ, ಮೊಡಿಗ್ಲಿಯನಿಗಿಂತ ಏಳು ವರ್ಷಗಳಷ್ಟು ಹಿರಿಯರಾಗಿದ್ದರು, ಹಾಗು ಪ್ರಾಯಶಃ ಇವರು ಲಿವೊರ್ನೋನಲ್ಲಿ ಯುವಕ ಮೊಡಿಗ್ಲಿಯನಿಗೆ ಅವರ ವ್ಯಾಪ್ತಿಯನ್ನು ತೋರಿಸಿಕೊಟ್ಟಿರಬಹುದು. ಎಲ್ಲ ಬಾಲಪ್ರೌಢರ ಮಾದರಿ, ಮೊಡಿಗ್ಲಿಯನಿ ತಮಗಿಂತ ಹಿರಿಯ ವಯಸ್ಸಿನ ಸಹಚರರ ಸಹವಾಸ ಬಯಸುತ್ತಿದ್ದರು, ಹಾಗು ಅವರ ಹರೆಯದಲ್ಲಿ ಗಿಗ್ಲಿಯಾರ ಮಾತಿಗೆ ಕೇವಲ ಸಹಾನುಭೂತಿಯಿಂದ ಕಿವಿಗೊಡುತ್ತಿದ್ದರು. ಅದರಲ್ಲೂ ಪ್ರಮುಖವಾಗಿ ಅವರು ನಿಯಮಿತವಾಗಿ ಕಳುಹಿಸುತ್ತಿದ್ದ ಸಂಕೀರ್ಣ ವಿಷಯದ ಪತ್ರಗಳು, ಹಾಗು ಈ ಪತ್ರಗಳು ಇಂದಿಗೂ ಕಂಡುಬರುತ್ತವೆ.[೧೦]
“ | Dear friend
I write to pour myself out to you and to affirm myself to myself. I am the prey of great powers that surge forth and then disintegrate... A bourgeois told me today–insulted me–that I or at least my brain was lazy. It did me good. I should like such a warning every morning upon awakening: but they cannot understand us nor can they understand life...[೧೧] |
” |
ಪ್ಯಾರಿಸ್
ಬದಲಾಯಿಸಿಆಗಮನ
ಬದಲಾಯಿಸಿಬಳಿಕ ೧೯೦೬ರಲ್ಲಿ ಮೊಡಿಗ್ಲಿಯನಿ ಪ್ಯಾರಿಸ್ ಗೆ ಸ್ಥಳಾಂತರಗೊಳ್ಳುತ್ತಾರೆ, ಅವತ್ತಿನ ದಿನಗಳಲ್ಲಿ ಪ್ಯಾರಿಸ್ ನವ್ಯ-ಪ್ರಯೋಗಕ್ಕೆ ಪ್ರಮುಖ ಕೇಂದ್ರವೆನಿಸಿರುತ್ತದೆ. ವಾಸ್ತವವಾಗಿ, ಕಲಾತ್ಮಕ ಪ್ರಯೋಗಪರೀಕ್ಷಾ ಕೇಂದ್ರಕ್ಕೆ ಅವರ ಆಗಮನವು ಇಬ್ಬರು ಇತರ ವಿದೇಶಿ ಕಲಾವಿದರ ಆಗಮನದೊಂದಿಗೆ ಒಂದಾಯಿತು, ಇವರಿಬ್ಬರೂ ಸಹ ಕಲಾ ಪ್ರಪಂಚದಲ್ಲಿ ತಮ್ಮ ಛಾಪನ್ನು ಮೂಡಿಸುತ್ತಾರೆ: ಗಿನೋ ಸೆವೆರಿನಿ ಹಾಗು ಜುವಾನ್ ಗ್ರಿಸ್. ಅವರು ಲೆ ಬಾತೆಯು-ಲವೊಯಿರ್ ನಲ್ಲಿ ನೆಲೆಸುತ್ತಾರೆ, ಮೊಂಟ್ಮಾಟ್ರೆಯಲ್ಲಿರುವ ಈ ಸ್ಥಳವು ಹಣವಿಲ್ಲದ ಕಲಾವಿದರ ಬೀಡಾಗಿರುತ್ತದೆ, ಅಲ್ಲಿ ಇವರು ರುಯೇ ಕೌಲೈನ್ಕೋರ್ಟ್ ನಲ್ಲಿರುವ ಒಂದು ಸ್ಟುಡಿಯೋ ಬಾಡಿಗೆಗೆ ಪಡೆಯುತ್ತಾರೆ. ಮೊಂಟ್ಮಾರ್ಟ್ರೆಯ ಈ ಕಲಾವಿದರ ವಸತಿ ನೆಲೆಯು, ಸಾಮಾನ್ಯವಾಗಿ ಬಡತನದಿಂದ ಕೂಡಿರುತ್ತದೆ. ಆರಂಭದಲ್ಲಿ ಮೊಡಿಗ್ಲಿಯನಿ ಎಲ್ಲರೂ ತಾವೊಬ್ಬ, ಸಿರಿ ಸಂಪತ್ತು ಕಳೆದುಕೊಂಡ ಶ್ರೀಮಂತ ಕುಟುಂಬದಿಂದ ಬಂದಿರಬೇಕು ಎಂದು ಭಾವಿಸಲು ಅಂತಹ ವ್ಯಕ್ತಿಯ ಚಹರೆಯನ್ನು ಹೊಂದಿದರು: ಅವರ ಬಟ್ಟೆಬೀರುವು ಯಾವುದೇ ಆಡಂಬರವಿಲ್ಲದೆ ನೀಟಾಗಿತ್ತು, ಹಾಗು ಅವರು ಬಾಡಿಗೆಗೆ ಪಡೆದ ಸ್ಟುಡಿಯೋ, ಪ್ಲಷ್ ಪರದೆ ಹಾಗು ನವೋದಯದ ಅನುಕೃತವಾಗಿಯಲ್ಲದೇ ಉತ್ತಮವಾಗಿ ಅನುವುಗೊಂಡ ಅಭಿರುಚಿಯುಳ್ಳ ವ್ಯಕ್ತಿಯ ಸೂಕ್ತ ಶೈಲಿಯಿಂದ ನಿಯೋಜಿತವಾಗಿತ್ತು. ಅವರು ಶೀಘ್ರದಲ್ಲೇ ಬೋಹೆಮಿಯನ್ ಕಲಾವಿದನ ವೇಷ ಧರಿಸಲು ಪ್ರಯತ್ನಿಸಿದರು, ಆದರೆ, ಅವರ ಕಂದು ಬಣ್ಣದ ಒರಟು ಹುರಿಬಟ್ಟೆಗಳು, ಕಡುಗೆಂಪು ಬಣ್ಣದ ಕಂಠವಸ್ತ್ರ ಹಾಗು ಕಪ್ಪು ಬಣ್ಣದ ದೊಡ್ಡ ಟೋಪಿಯೊಂದಿಗೆ ಕಷ್ಟದಲ್ಲೇ ಜೀವನ ಕಳೆದ ಕೊಳೆಗೇರಿಯವರಂತೆ ಒಮ್ಮೊಮ್ಮೆ ತೋರ್ಪಡಿಸಿಕೊಳ್ಳುತ್ತಿದ್ದರು.[೯] ಪ್ಯಾರಿಸ್ ಗೆ ಅವರು ಸ್ಥಳಾಂತರಗೊಂಡ ಹೊಸದರಲ್ಲಿ, ನಿಯಮಿತವಾಗಿ ತಮ್ಮ ತಾಯಿಗೆ ಪತ್ರ ಬರೆಯುತ್ತಿದ್ದರು. ಅಕಾಡೆಮಿ ಕಾಲರೋಸ್ಸಿಯಲ್ಲಿ ತಮ್ಮ ಅಭಿರುಚಿಯ ನಗ್ನ ಚಿತ್ರಗಳನ್ನು ಬಿಡಿಸುತ್ತಿದ್ದರು, ಹಾಗು ವಿರಾಮವಾಗಿ ವೈನ್ ನ್ನು ಕುಡಿಯುತ್ತಿದ್ದರು. ಅವರನ್ನು ಬಲ್ಲವರು ಅವರೊಬ್ಬ ಸಾಂಘಿಕ ಸಮಾಜದೆಡೆ ವಿರೋಧ ತೋರುವ,ಏಕಾಂಗಿತನೆಡೆಗೆ ಒಲವು ಹೊಂದಿರುವ, ಬಿಗುಮಾನದ ವ್ಯಕ್ತಿಯೆಂದು ಪರಿಗಣಿಸುತ್ತಿದ್ದರು.[೯] ಪಿಕಾಸ್ಸೋರನ್ನು ಸಂಧಿಸಿ ಆಗ ಅವರನ್ನೇ ಟೀಕಿಸಿದ್ದಕ್ಕೆ ಮೊಡಿಗ್ಲಿಯನಿ ಪ್ರಸಿದ್ಧರಾದರು.ಆ ಸಮಯದಲ್ಲಿ ಪಿಕಾಸ್ಸೋ ತಮ್ಮ ವಿಶಿಷ್ಟ ಗುರುತಾದ ಕಾರ್ಮಿಕನ ವಸ್ತ್ರಗಳನ್ನು ಧರಿಸಿದ್ದರು, ವ್ಯಕ್ತಿಯು ವಿಶಿಷ್ಟ ಸಾಮರ್ಥ್ಯಗಳನ್ನು ಹೊಂದಿದ್ದರೂ, ಅವರ ಒರಟಾದ ಚಹರೆಯು ಇದನ್ನು ಸಮರ್ಥಿಸುತ್ತಿರಲಿಲ್ಲ.[೯]
ಪರಿವರ್ತನೆ
ಬದಲಾಯಿಸಿಆದಾಗ್ಯೂ, ಪ್ಯಾರಿಸ್ ಗೆ ಬಂದ ಒಂದು ವರ್ಷದೊಳಗೆ, ಅವರ ವರ್ತನೆ ಹಾಗು ಖ್ಯಾತಿಯು ನಾಟಕೀಯ ತಿರುವುವಿನೊಂದಿಗೆ ಬದಲಾವಣೆ ಹೊಂದಿತು. ಅಕ್ಯಾಡೆಮಿಯ ನೀಟಾದ ಕಲಾವಿದನಿಂದ ಅವರು ತಮ್ಮನ್ನು ತಾವು ಒಬ್ಬ ಅಲೆಮಾರಿ ಮಾದರಿಯ ಚಹರೆಗೆ ಬದಲಾವಣೆ ಮಾಡಿಕೊಂಡರು. ಈ ಹಿಂದೆ ಸುಸಜ್ಜಿತವಾಗಿದ್ದ ಸ್ಟುಡಿಯೋಕ್ಕೆ ಭೇಟಿ ನೀಡಿದ್ದ ಕವಿ ಹಾಗು ಪತ್ರಕರ್ತ ಲೂಯಿಸ್ ಲಟೌರೆಟ್ಟೆ, ಅವರು ಬದಲಾದ ಮೇಲೆ ಆ ಸ್ಥಳಕ್ಕೆ ಬಂದು, ಈ ಜಾಗೆಯು ಹಠಾತ್ ಆಗಿ ಬದಲಾವಣೆಯಾಗಿರುವುದನ್ನು ಕಂಡರು. ನವೋದಯದ ಲೇಪನದೊಂದಿಗೆ ಅನುಕೃತವಾಗಿ ಅನುವುಗೊಂಡಿದ್ದ ಚಿತ್ರಗಳನ್ನು ಗೋಡೆಯಿಂದ ತೆಗೆದುಹಾಕಲಾಗಿತ್ತು, ಹಾಗು ಪ್ಲಷ್ ಪರದೆಗಳು ಅಸ್ತವ್ಯಸ್ತಗೊಂಡಿದ್ದವು. ಈ ಹೊತ್ತಿಗಾಗಲೇ ಮೊಡಿಗ್ಲಿಯನಿ ಒಬ್ಬ ಮದ್ಯವ್ಯಸನಿ ಹಾಗು ಮಾದಕದ್ರವ್ಯದ ದಾಸರಾಗಿದ್ದರು, ಹಾಗು ಅವರ ಸ್ಟುಡಿಯೋ ಇದನ್ನು ಪ್ರತಿಬಿಂಬಿಸುತ್ತಿತ್ತು. ಈ ಸಮಯದಲ್ಲಿ ಮೊಡಿಗ್ಲಿಯನಿಯವರ ವರ್ತನೆಯು, ಬೆಳವಣಿಗೆಯಾಗುತ್ತಿರುವ ಕಲಾವಿದನಾಗಿ ಅವರ ಶೈಲಿಯ ಮೇಲೆ ಸ್ವಲ್ಪಮಟ್ಟಿಗೆ ಬೆಳಕನ್ನೂ ಚೆಲ್ಲುತ್ತದೆ.ಈ ನಿಟ್ಟಿನಲ್ಲಿ ಸ್ಟುಡಿಯೋ, ಆ ಹಂತದವರೆಗೂ ಅವರು ತರಬೇತಿ ಪಡೆದ ಹಾಗು ಅವರ ಜೀವನಕ್ಕೆ ಮಾರ್ಗ ತೋರಿದ ಶೈಕ್ಷಣಿಕ ಕಲೆಯ ಬಗ್ಗೆ ಅವರ ಅಸಮಾಧಾನಕ್ಕೆ ಬಹುತೇಕ ಒಂದು ಬಲಿಪಶುವಾಗುತ್ತದೆ. ತಮ್ಮ ಸ್ಟುಡಿಯೋದಿಂದ ತಮ್ಮ ಸಾಂಪ್ರದಾಯಿಕ ಪರಂಪರೆಯುಳ್ಳ ಎಲ್ಲ ಅಲಂಕಾರಿಕಗಳನ್ನು ತೆಗೆದು ಹಾಕುವುದಷ್ಟೇ ಅಲ್ಲದೆ, ತಮ್ಮ ಆರಂಭಿಕ ಕೃತಿಗಳನ್ನು ಕಾರ್ಯತಃ ನಾಶಪಡಿಸಲು ಸಜ್ಜಾದರು. ಇಂತಹ ವಿಚಿತ್ರ ಕಾರ್ಯದಿಂದ ಆಶ್ಚರ್ಯಚಕಿತರಾದ ಇವರ ನೆರೆಯವರಿಗೆ ಈ ರೀತಿಯಾಗಿ ವಿವರಣೆ ನೀಡುತ್ತಾರೆ:
“ | Childish baubles, done when I was a dirty bourgeois.[೧೨] | ” |
ತಮ್ಮ ಹಿಂದಿನ ಅಸ್ತಿತ್ವವನ್ನು ಈ ರೀತಿ ರೋಷಾವೇಶದಿಂದ ತಿರಸ್ಕಾರ ಮಾಡುವುದರ ಹಿಂದಿರುವ ಪ್ರಚೋದನೆಯು, ಗಮನಾರ್ಹ ಊಹೆಗೆ ಎಡೆ ಮಾಡಿಕೊಟ್ಟಿದೆ. ಸ್ವತಃ ತಮ್ಮನ್ನು ತಾವು ನಾಶಪಡಿಸಿಕೊಳ್ಳುವ ಪ್ರವೃತ್ತಿಯು ಅವರ ಕ್ಷಯರೋಗದ ಕಾರಣದಿಂದ ಹುಟ್ಟಿಕೊಂಡಿರಬಹುದು, ಹಾಗು ಮುಖ್ಯವಾಗಿ ಕಾಯಿಲೆಯು ಅವರನ್ನು ಚಿಕ್ಕ ವಯಸ್ಸಿನಲ್ಲೇ ಸಾವಿನ ಅಂಚಿಗೆ ದೂಡಿತ್ತೆಂಬ ತಿಳಿವು(ಅಥವಾ ಪೂರ್ವಭಾವನೆ); ಕಲಾವಿದರ ಸಮೂಹದೊಳಗೆ, ಹಲವರು ಇದೇ ರೀತಿಯಾದ ಅಭಿಪ್ರಾಯ ಹೊಂದಿದ್ದರು, ಹಾಗು ಇದಕ್ಕೆ ಮಾದರಿಯಾದ ಪ್ರತಿಕ್ರಿಯೆಯೆಂದರೆ, ಜೀವನವು ಕೊನೆಗೊಳ್ಳುವ ಮೊದಲು ಅದನ್ನು ಪೂರ್ತಿಯಾಗಿ ಅನುಭವಿಸುವುದು, ಅದರಲ್ಲೂ ಮುಖ್ಯವಾಗಿ ತಮ್ಮನ್ನು-ತಾವೇ ನಾಶಮಾಡಿಕೊಳ್ಳುವ ಕ್ರಿಯೆಗಳ ಮೂಲಕ ಅದನ್ನು ಅನುಭವಿಸುವುದು. ಮೊಡಿಗ್ಲಿಯನಿಯವರ ಇಂತಹ ವರ್ತನೆಯು ಮನ್ನಣೆಯ ಕೊರತೆಯಿಂದ ಉಂಟಾಗಿರಬಹುದು; ಅವರು ಉಟ್ರಿಲ್ಲೋ ಹಾಗು ಸೌಟಿನೆಯಂತಹ ಕಲಾವಿದರ ಸಹವಾಸ ಮಾಡಿದರು; ತಮ್ಮ ಸಹೋದ್ಯೋಗಿಗಳಿಂದ ತಮ್ಮ ಕೃತಿಗಳ ಮೆಚ್ಚಿಕೆ ಹಾಗು ಮೌಲ್ಯೀಕರಿಸಲು ಪ್ರಯತ್ನಪಟ್ಟರು.[೧೨] ಮೊಡಿಗ್ಲಿಯನಿಯವರ ವರ್ತನೆಯು ಬೋಹೆಮಿಯನ್ ವಾತಾವರಣದಾಚೆಗೂ ಪ್ರತ್ಯೇಕವಾಗಿ ನಿಲ್ಲುತ್ತಿತ್ತು: ಅವರು ಅನೇಕ ಪ್ರಣಯ ಪ್ರಸಂಗಗಳನ್ನು ಹೊಂದಿದ್ದರು.ಅಧಿಕ ಮದ್ಯಪಾನ, ಹಾಗು ಅಬ್ಸಿನ್ತೆ (ಮಂಚಿಪತ್ರೆಯ ಸಾರ ಸೇರಿಸಿದ ದ್ರಾಕ್ಷಾ ಮದ್ಯ) ಹಾಗು ಮಾದಕ ದ್ರವ್ಯ ಹಶಿಶ್ ನ್ನು ಬಳಸುತ್ತಿದ್ದರು. ಕುಡಿತದ ಅಮಲಿನಲ್ಲಿ, ಅವರು ಕೆಲವೊಂದು ಬಾರಿ ಸಾಮಾಜಿಕ ಕೂಟಗಳಲ್ಲಿ ತಮ್ಮನ್ನು ತಾವು ಬೆತ್ತಲೆಗೊಳಿಸಿಕೊಳ್ಳುತ್ತಿದ್ದರು.[೧೩] ಅವರು ದುರಂತ ಕಲಾವಿದನ ಮೂರ್ತರೂಪವಾದರು, ಹೆಚ್ಚುಕಡಿಮೆ ದಂತಕಥೆಯಾಗಿದ್ದ ದಿವಂಗತ ವಿನ್ಸೆಂಟ್ ವ್ಯಾನ್ ಗೊಗ್ಹ್ ರ ಮಾದರಿಯಾದರು. ಬಳಿಕ ೧೯೨೦ರಲ್ಲಿ, ಮೊಡಿಗ್ಲಿಯನಿಯವರ ವೃತ್ತಿಜೀವನದ ಹಾದಿ ಹಾಗು ಮೊಡಿಗ್ಲಿಯನಿಯವರ ಶೈಲಿಯ ಸೃಷ್ಟಿಪರ್ವಕ್ಕೆ ಹಶಿಶ್ ಹಾಗು ಅಬ್ಸಿನ್ತೆ ಕಾರಣವೆಂದು ಹೇಳುವ ಆಂಡ್ರೆ ಸಾಲ್ಮನ್ ರ ಹೇಳಿಕೆಗಳನ್ನು ಅನುಸರಿಸಿ; ಹಲವರು ಮಾದಕದ್ರವ್ಯ ಹಾಗು ಬೋಹೆಮಿಯನ್ ಆಧಿಕ್ಯದ ಹಾದಿಯನ್ನು ತುಳಿಯುವುದರ ಮೂಲಕ ಅವರ ಮಾದರಿಯ "ಯಶಸ್ಸಿಗಾಗಿ" ಪ್ರಯತ್ನಿಸಿದರು. ಅಶುದ್ಧವಾಗಿ, ಸಾಲ್ಮನ್-ಮೊಡಿಗ್ಲಿಯನಿ, ಕುಡಿತದ ಅಮಲಿನಲ್ಲಿರುವಾಗ ಸಂಪೂರ್ಣವಾಗಿ ಒಬ್ಬ ರಸ್ತೆಬದಿಯ ಕಲಾವಿದನೆಂದು ವಾದಿಸುತ್ತಾರೆ.
“ | ...from the day that he abandoned himself to certain forms of debauchery, an unexpected light came upon him, transforming his art. From that day on, he became one who must be counted among the masters of living art.[೧೪] | ” |
ಈ ಪ್ರತಿಪಾದನೆಯು, ಭಾವನಾತ್ಮಕ ಹಂಬಲಿಕೆಯನ್ನು ದುರಂತವೆಂದು ಕರೆಯುತ್ತಿದ್ದ, ದಂಡನೆಗೆ ಒಳಪಟ್ಟ ಕಲಾವಿದರಿಗೆ ಇದೊಂದು ಪುನಸ್ಸಂಘಟನೆಗೆ ಪ್ರಚಾರವಾಯಿತು. ಈ ಕಾರ್ಯವಿಧಾನಗಳು, ಈಗಾಗಲೇ ಇರುವವರಲ್ಲಿ ಯಾವುದೇ ವಿಶಿಷ್ಟ ಕಲಾತ್ಮಕ ಒಳನೋಟಗಳು ಅಥವಾ ತಂತ್ರಗಳನ್ನು ಉಂಟುಮಾಡಲಿಲ್ಲ. ವಾಸ್ತವವಾಗಿ, ಕಲಾ ಇತಿಹಾಸಜ್ಞರು[೧೪], ಮೊಡಿಗ್ಲಿಯನಿ, ಅಂತರ್ನಿಹಿತರಾಗಿರದಿದ್ದರೆ ಇನ್ನು ಉನ್ನತ ಮಟ್ಟದ ಕಲಾವಿದನಾಗಿ ಸಾಧನೆ ಮಾಡಬಹುದಿತ್ತೆಂದು ಹಾಗು ತಮ್ಮದೇ ಆದ ಸ್ವೇಚ್ಛಾತೃಪ್ತಿಯಿಂದ ಇದನ್ನು ಹಾಳು ಮಾಡಿಕೊಂಡರೆಂದು ಅಭಿಪ್ರಾಯಪಡುತ್ತಾರೆ. ತಮ್ಮ ಸ್ವ-ವಿನಾಶಕಾರಿ ಅನ್ವೇಷಣೆಗಳಿಂದ ಸಂಪೂರ್ಣವಾಗಿ ಹುಟ್ಟಿಕೊಂಡಿದ್ದು ಅವರ ಸಾಧನೆಯೇ ಎಂಬುದನ್ನು ಮಾತ್ರ ನಾವು ಊಹಿಸಬಹುದು.
ಕೃತಿ
ಬದಲಾಯಿಸಿಪ್ಯಾರಿಸ್ ಗೆ ಸ್ಥಳಾಂತರಗೊಂಡ ಆರಂಭಿಕ ವರ್ಷಗಳಲ್ಲಿ, ಮೊಡಿಗ್ಲಿಯನಿ ತೀವ್ರ ಗತಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಸತತವಾಗಿ ರೇಖಾಚಿತ್ರಗಳನ್ನು ಬಿಡಿಸುತ್ತಿದ್ದರು, ಒಂದು ದಿನಕ್ಕೆ ಸುಮಾರು ನೂರು ರೇಖಾಚಿತ್ರಗಳನ್ನು ಬಿಡಿಸುತ್ತಿದ್ದರು. ಆದಾಗ್ಯೂ, ಅವರ ಹಲವು ಕೃತಿಗಳು ನಾಪತ್ತೆಯಾಗಿವೆ-ಅವುಗಳು ಕಳಪೆ ಮಟ್ಟದ್ದವೆಂದು ಕೆಲವೊಂದನ್ನು ಅವರೇ ನಾಶ ಪಡಿಸಿದ್ದಾರೆ. ಮತ್ತೆ ಕೆಲವುಗಳನ್ನು ಅವರು ಪದೇ ಪದೇ ಬದಲಾಯಿಸುತ್ತಿದ್ದ ಮನೆಗಳಲ್ಲಿ ಬಿಟ್ಟಿರುತ್ತಾರೆ, ಅಥವಾ ತಮ್ಮ ಗೆಳತಿಯರಿಗೆ ನೀಡಿದ್ದರು, ಅವುಗಳನ್ನು ಅವರು ತಮ್ಮಲ್ಲಿ ಜೋಪಾನವಾಗಿ ಇರಿಸಿಕೊಳ್ಳುತ್ತಿರಲಿಲ್ಲ.[೧೩] ಅವರು ಮೊದಲಿಗೆ ಹೆನ್ರಿ ಡೆ ಟೌಲೌಸೆ-ಲೌಟ್ರೆಕ್ ರ ಕೃತಿಗಳೆಡೆಗೆ ಆಕರ್ಷಿತರಾಗುತ್ತಾರೆ, ಆದರೆ ೧೯೦೭ರ ಸುಮಾರಿಗೆ ಅವರು ಪಾಲ್ ಸೆಜನ್ನೆಯವರೆಡೆಗೆ ಆಕರ್ಷಿತರಾಗುತ್ತಾರೆ. ಅಂತಿಮವಾಗಿ ಅವರು ತಮ್ಮದೇ ಆದ ವಿಶಿಷ್ಟ ಶೈಲಿಯನ್ನು ಅಭಿವೃದ್ಧಿಪಡಿಸುತ್ತಾರೆ, ಇದನ್ನು ಇತರ ಕಲಾವಿದರ ಕೃತಿಗಳೊಂದಿಗೆ ಸಮರ್ಪಕವಾಗಿ ವರ್ಗೀಕರಣ ಮಾಡಲು ಸಾಧ್ಯವಾಗುವುದಿಲ್ಲ. ಹೀಗೆ ೧೯೧೦ರಲ್ಲಿ ಅವರು ತಮ್ಮ ಜೀವನದಲ್ಲಿ ಗಂಭೀರವಾಗಿ ಮೊದಲ ಬಾರಿಗೆ ತಮ್ಮ ೨೬ನೇ ವಯಸ್ಸಿನಲ್ಲಿ ರಷ್ಯನ್ ಕವಯಿತ್ರಿ ಅನ್ನಾ ಅಕ್ಹ್ಮಟೋವರ ಪ್ರೇಮದ ಬಲೆಯಲ್ಲಿ ಬೀಳುತ್ತಾರೆ. ಅವರಿಬ್ಬರ ಸ್ಟುಡಿಯೋಗಳು ಒಂದೇ ಕಟ್ಟಡದಲ್ಲಿ ಇರುತ್ತವೆ, ಹಾಗು ಆದಾಗ್ಯೂ, ೨೧ ವರ್ಷ ವಯಸ್ಸಿನ ಅನ್ನಾ ಆಗಷ್ಟೇ ಮದುವೆಯಾಗಿದ್ದರೂ, ಅವರಿಬ್ಬರೂ ಸಂಬಂಧವನ್ನು ಮುಂದುವರೆಸುತ್ತಾರೆ.[ಸೂಕ್ತ ಉಲ್ಲೇಖನ ಬೇಕು] ಕಪ್ಪು ಕೂದಲಿನೊಂದಿಗೆ(ಮೊಡಿಗ್ಲಿಯನಿಯ ಮಾದರಿ) ಎತ್ತರವಾಗಿದ್ದು(ಮೊಡಿಗ್ಲಿಯನಿ ಕೇವಲ ೫ ಅಡಿ ೫ ಅಂಗುಲ ಎತ್ತರವಿದ್ದರು), ಬಿಳಿಚಿಕೊಂಡ ಚರ್ಮ ಹಾಗು ಕಡು-ಹಸಿರು ಬಣ್ಣದ ಕಣ್ಣುಗಳನ್ನು ಹೊಂದಿದ್ದ ಈಕೆ, ಮೊಡಿಗ್ಲಿಯನಿಯ ಸೌಂದರ್ಯಪ್ರಜ್ಞೆಗೆ ಆದರ್ಶಪ್ರಾಯವಾಗಿದ್ದಳು, ಹಾಗು ಈ ಜೋಡಿ ಪರಸ್ಪರರಲ್ಲಿ ಮಗ್ನವಾಗಿತ್ತು. ಆದಾಗ್ಯೂ, ಒಂದು ವರ್ಷದ ನಂತರ, ಅನ್ನಾ ತನ್ನ ಪತಿಯಲ್ಲಿಗೆ ಹಿಂದಿರುಗುತ್ತಾಳೆ.
ಕೃತಿಗಳ ಗ್ಯಾಲರಿ
ಬದಲಾಯಿಸಿ-
ಮೂಡೆ ಅಬ್ರಾನ್ಟೆಸ್ ಅವರ ವರ್ಣಚಿತ್ರ, 1907
-
ಪಾಲ್ ಗುಯಿಲ್ಲೌಮೆ, ನೋವೋ ಪಿಲೋಟ, 1915
-
ವಧು ಹಾಗು ವರ, 1915
-
ಜಾಕ್ವೆಸ್ ಹಾಗು ಬರ್ತೆ ಲಿಪ್ಚಿಟ್ಜ್, 1916
-
ಬಿಯಟ್ರೈಸ್ ಹೇಸ್ಟಿಂಗ್ಸ್ ರವರ ವರ್ಣಚಿತ್ರ, 1916
-
ಮೊಯಿಸೆ ಕಿಸ್ಲಿಂಗ್ ಅವರ ವರ್ಣಚಿತ್ರ, 1915
-
ಮೇಡಂ ಕಿಸ್ಲಿಂಗ್, 1917
-
ದಿವಾನ್ ಮೇಲೆ ನಗ್ನವಾಗಿ ಕುಳಿತಿರುವುದು ("ಲಾ ಬೆಲ್ಲೆ ರೋಮೈನೆ"), 1917
-
ರೆಡ್ ನ್ಯೂಡ್, 1917
-
ನೀಲಿ ಮೆತ್ತೆಯ ಮೇಲೆ ನಗ್ನವಾಗಿ ಕುಳಿತಿರುವುದು, 1917
-
ಜಿಯನ್ನೆ ಹೆಬುಟರ್ನೆಯವರ ವರ್ಣಚಿತ್ರ, 1918
-
ನಗ್ನವಾಗಿ ಕುಳಿತಿರುವುದು, 1918, ಹೊನೊಲುಲು ಅಕ್ಯಾಡೆಮಿ ಆಫ್ ಆರ್ಟ್ಸ್
-
ಡೆಡಿ ಹೇಡನ್, 1918, ಸೆಂಟರ್ ಜಾರ್ಜಸ್ ಪೊಂಪಿಡೌ
-
ಸ್ವ-ವರ್ಣಚಿತ್ರ, 1919, ತೈಲ ವರ್ಣಚಿತ್ರ, ಮ್ಯೂಸಿಯಂ ಆಫ್ ಕಾಂಟೆಂಪರರಿ ಆರ್ಟ್, ಸಾವೋ ಪಾಲೋ, ಬ್ರೆಜಿಲ್
-
ಮಗುವಿನೊಂದಿಗೆ ಜಿಪ್ಸಿ ಮಹಿಳೆ, 1919, ನ್ಯಾಷನಲ್ ಗ್ಯಾಲರಿ ಆಫ್ ಆರ್ಟ್
-
ಸಣ್ಣ ವಯಸ್ಸಿನ ಕೃಷಿಕ, 1918, ಟೇಟ್ ಮಾಡ್ರನ್, ಲಂಡನ್
ಶಿಲ್ಪಕಲೆ
ಬದಲಾಯಿಸಿಮೊಡಿಗ್ಲಿಯನಿ, ತಮ್ಮ ಅನಾಗರಿಕ ಜೀವನಶೈಲಿಯಿಂದ ಬೇಸತ್ತು ೧೯೦೯ರಲ್ಲಿ ಅನಾರೋಗ್ಯದಿಂದ ಲಿವೊರ್ನೋದ ತಮ್ಮ ಮನೆಗೆ ಹಿಂದಿರುಗಿದರು. ಶೀಘ್ರದಲ್ಲೇ ಅವರು ಮತ್ತೊಮ್ಮೆ ಪ್ಯಾರಿಸ್ ಗೆ ಹಿಂದಿರುಗಿ, ಈ ಬಾರಿ ಮೊಂಟ್ಪಾರ್ನಸ್ಸೆಯಲ್ಲಿ ಒಂದು ಸ್ಟುಡಿಯೋವನ್ನು ಬಾಡಿಗೆಗೆ ಪಡೆದರು. ತಮ್ಮನ್ನು ತಾವು ಒಬ್ಬ ವರ್ಣಚಿತ್ರಕಾರನಿಗಿಂತ ಹೆಚ್ಚಾಗಿ ಒಬ್ಬ ಶಿಲ್ಪಿಯಾಗಿ ಗುರುತಿಸಿಕೊಂಡರು, ಹಾಗು ಇದರಲ್ಲೇ ಮುಂದುವರಿಯಲು, ಮಹತ್ತ್ವಾಕಾಂಕ್ಷೆಯ ಯುವ ಕಲಾ ವ್ಯಾಪಾರಿ ಪಾಲ್ ಗುಯಿಲ್ಲೌಮೆ ಉತ್ತೇಜಿಸುತ್ತಾರೆ, ಇವರ ಕೃತಿಗಳಲ್ಲಿ ಆಸಕ್ತಿ ತೋರಿದ ಪಾಲ್, ಕಾನ್ಸ್ಟ್ಯಾನ್ಟಿನ್ ಬ್ರಾನುಕುಸಿ ಎಂಬ ಶಿಲ್ಪಿಗೆ ಇವರನ್ನು ಪರಿಚಯಿಸುತ್ತಾರೆ. ಆದಾಗ್ಯೂ, ಮೊಡಿಗ್ಲಿಯನಿಯ ಶಿಲ್ಪಕೃತಿಗಳ ಒಂದು ಸರಣಿಯು ೧೯೧೨ರಲ್ಲಿ ಸಲೋನ್ ಡ' ಆಟೋಮ್ನೆಯಲ್ಲಿ ಪ್ರದರ್ಶಿತಗೊಳ್ಳುತ್ತವೆ. ಹೀಗೆ ೧೯೧೪ರ ಹೊತ್ತಿಗೆ ಅವರು ಶಿಲ್ಪ ರಚನೆಯನ್ನು ನಿಲ್ಲಿಸಿ, ವರ್ಣಚಿತ್ರ ರಚನೆಯ ಮೇಲೆ ತಮ್ಮ ಗಮನ ಕೇಂದ್ರೀಕರಿಸಿದರು, ಯುದ್ಧದ ಏಕಾಏಕಿ ಆರಂಭದಿಂದಾಗಿ ಶಿಲ್ಪ ರಚನೆಗೆ ಬೇಕಾದ ಪದಾರ್ಥಗಳ ಅಲಭ್ಯತೆ ಹಾಗು ಮೊಡಿಗ್ಲಿಯನಿಯವರ ಶಾರೀರಿಕ ದೌರ್ಬಲ್ಯ ಇದಕ್ಕೆ ಕಾರಣವಾಗಿತ್ತು.[೧೫]
ಪ್ರಭಾವಗಳ ಮೇಲೆ ಹುಟ್ಟಿಕೊಂಡ ಪ್ರಶ್ನೆಗಳು
ಬದಲಾಯಿಸಿಮೊಂಟ್ಪಾರ್ನಸ್ಸೆಯಲ್ಲಿ ಮೊಡಿಗ್ಲಿಯನಿ ತಮ್ಮ ಸಮಕಾಲೀನ ಕಲಾವಿದರ ಹಾಗು ಸ್ನೇಹಿತರ ವರ್ಣಚಿತ್ರಗಳ ಸರಣಿಯನ್ನೇ ರಚಿಸಿದರು: ಚೈಮ್ ಸೌತಿನೆ, ಮೊಯಿಸೆ ಕಿಸ್ಲಿಂಗ್, ಪಾಬ್ಲೋ ಪಿಕಾಸ್ಸೋ, ಡಿಗೋ ರಿವೇರಾ, ಮಾರಿ "ಮಾರೆವ್ನ ವೋರೋಬಿಯೇವ್-ಸ್ಟೇಬೆಸ್ಲ್ಕ, ಜುವಾನ್ ಗ್ರಿಸ್, ಮ್ಯಾಕ್ಸ್ ಜೇಕಬ್, ಬ್ಲೈಸೆ ಸೆಂಡ್ರಾರಸ್, ಹಾಗು ಜೀನ್ ಕಾಕ್ಟೆಯು, ಇವರೆಲ್ಲರೂ ವಿಲಕ್ಷಣ ರೀತಿಯಲ್ಲಿ ಕುಳಿತು ಚಿತ್ರ ಬರೆಸಿಕೊಂಡರು. ಏಕಾಏಕಿ ಆರಂಭಗೊಂಡ ಮೊದಲ ವಿಶ್ವ ಸಮರದಲ್ಲಿ, ಮೊಡಿಗ್ಲಿಯನಿ ಸೇನೆಗೆ ಸೇರಲು ಪ್ರಯತ್ನಿಸಿದರು, ಆದರೆ ಅವರ ಅನಾರೋಗ್ಯದ ಕಾರಣಕ್ಕೆ ಅವರ ಮನವಿಯನ್ನು ತಿರಸ್ಕರಿಸಲಾಯಿತು.
ಯುದ್ಧದ ವರ್ಷಗಳು
ಬದಲಾಯಿಸಿ'ಶಾಪಗ್ರಸ್ತ' ಎಂಬ ಅರ್ಥ ನೀಡುವ ಮೊಡಿ ಎಂಬ ಹೆಸರಿನಿಂದ ಹಲವು ಪ್ಯಾರಿಸ್ಸಿಗರಿಗೆ ಪರಿಚಿತರಾಗಿದ್ದರು. ಆದರೆ ತಮ್ಮ ಕುಟುಂಬಕ್ಕೆ ಹಾಗು ಸ್ನೇಹಿತರಿಗೆ ಡೆಡೋ ಎಂದು ಪ್ರಿಯರಾಗಿದ್ದ ಮೊಡಿಗ್ಲಿಯನಿ, ಒಬ್ಬ ಸುಂದರ ವ್ಯಕ್ತಿ ಹಾಗು ಮಹಿಳೆಯರನ್ನು ಹೆಚ್ಚು ಆಕರ್ಷಿಸುತ್ತಿದ್ದರು. ಅವರ ಜೀವನದಲ್ಲಿ ಬಿಯಟ್ರೈಸ್ ಹೇಸ್ಟಿಂಗ್ಸ್ ಬರುವ ತನಕ ಹಲವಾರು ಮಹಿಳೆಯರು ಬಂದು ಹೋಗಿದ್ದರು. ಆಕೆ ಅವರೊಂದಿಗೆ ಎರಡು ವರ್ಷಗಳ ಕಾಲ ಜೊತೆಗಿದ್ದಳು, ಹಾಗು ಅವರ ಹಲವಾರು ವರ್ಣಚಿತ್ರಗಳಿಗೆ ಸ್ಪೂರ್ತಿಯಾಗಿದ್ದಳು, ಇದರಲ್ಲಿ ಮೇಡಂ ಪೊಂಪಡೌರ್ ದು ಉತ್ತಮ ಉದಾಹರಣೆಯಾಗಿದೆ.ಅಲ್ಲದೇ ಮದ್ಯವ್ಯಸನಿಗಳಾಗಿ ಕಡುಕೋಪವುಳ್ಳ ಅವರ ಸಿಟ್ಟಿಗೆ ಗುರಿಯಾಗುತ್ತಿದ್ದಳು.[ಸೂಕ್ತ ಉಲ್ಲೇಖನ ಬೇಕು] ನಂತರ ೧೯೧೪ರಲ್ಲಿ ಮೊಂಟ್ಪಾರ್ನಸ್ಸೆಗೆ ಬ್ರಿಟಿಶ್ ವರ್ಣಚಿತ್ರಗಾರ್ತಿ ನಿನಾ ಹಮ್ನೆಟ್ ರ ಆಗಮಿಸಿದಾಗ, ಆಕೆಯ ಮೊದಲ ಸಂಜೆ ಕೆಫೆಯಲ್ಲಿ ಪಕ್ಕದ ಮೇಜಿನಲ್ಲಿ ಕುಳಿತಿದ್ದ ಅವರು ತಮ್ಮನ್ನು ತಾವು ಮೊಡಿಗ್ಲಿಯನಿ; ವರ್ಣಚಿತ್ರಕಾರ ಹಾಗು ಯೆಹೂದಿ ಎಂದು ಪರಿಚಯಿಸಿಕೊಳ್ಳುತ್ತಾರೆ. ಅವರಿಬ್ಬರೂ ಉತ್ತಮ ಸ್ನೇಹಿತರಾಗುತ್ತಾರೆ. ಹೀಗೆ ೧೯೧೬ರಲ್ಲಿ, ಮೊಡಿಗ್ಲಿಯನಿ, ಪೋಲಿಷ್ ಕವಿ ಹಾಗು ಕಲಾ ವ್ಯಾಪಾರಿ ಲೆಪೋಲ್ಡ್ ಜ್ಬೋರೌಸ್ಕಿ ಹಾಗು ಆತನ ಪತ್ನಿ ಅನ್ನಾರೊಂದಿಗೆ ಗೆಳೆತನ ಮಾಡಿಕೊಳ್ಳುತ್ತಾರೆ.
ಜೆಯನ್ನೆ ಹೆಬುಟರ್ನೆ
ಬದಲಾಯಿಸಿಅದರ ಮುಂದಿನ ಬೇಸಿಗೆಯಲ್ಲಿ, ರಷ್ಯನ್ ಶಿಲ್ಪಿ ಚನಾ ಒರ್ಲೋಫ್ಫ್, ಅವರಿಗೆ ಸುಂದರವಾದ ೧೯ ವರ್ಷ ವಯಸ್ಸಿನ ಕಲಾ ವಿದ್ಯಾರ್ಥಿನಿ ಜೆಯನ್ನೆ ಹೆಬುಟರ್ನೆಯನ್ನು ಪರಿಚಯಿಸಿದರು[೧೬], ಈಕೆ ಅವರ ಕಲಾಕೃತಿ ತ್ಸುಗುಹಾರು ಫೌಜಿತಕ್ಕೆ ಭಂಗಿ ನೀಡಿದಳು. ಸಾಂಪ್ರದಾಯಿಕ ಮಧ್ಯಮವರ್ಗದ ಹಿನ್ನೆಲೆ ಹೊಂದಿದ್ದ ಹೆಬುಟರ್ನೆಯನ್ನು, ವರ್ಣಚಿತ್ರಕಾರನೊಂದಿಗೆ ಆಕೆಯು ಹೊಂದಿದ್ದ ಸಂಬಂಧದಿಂದಾಗಿ ಆಕೆಯ ಧರ್ಮನಿಷ್ಠ ರೋಮನ್ ಕ್ಯಾಥೊಲಿಕ್ ಕುಟುಂಬವು ಆಕೆಯೊಂದಿಗೆ ಸಂಬಂಧ ಕಡಿದುಕೊಂಡಿತು. ಅವರನ್ನು ಕುಟುಂಬವು ನೀತಿಗೆಟ್ಟ ಪರಿತ್ಯಕ್ತನೆಂದು, ಹಾಗು ಅದಕ್ಕೂ ಮೀರಿ ಅವರೊಬ್ಬ ಯೆಹೂದಿಯೆಂದು ಪರಿಗಣಿಸಿತು. ಆಕೆಯ ಕುಟುಂಬದ ಆಕ್ಷೇಪಣೆಯ ಹೊರತಾಗಿಯೂ, ಇವರಿಬ್ಬರೂ ಒಟ್ಟಾಗಿ ಜೀವಿಸಲು ಆರಂಭಿಸಿದರು, ಹಾಗು ಆದಾಗ್ಯೂ ಹೆಬುಟರ್ನೆ ಇವರ ಹಾಲಿ ಪ್ರೇಮವಾಗಿದ್ದರೂ ಸಹ, ಮೊಡಿಗ್ಲಿಯನಿ ಕುಡಿದು ಅಪಹಾಸ್ಯಕ್ಕೀಡಾಗುವಕ್ಕಿಂತಲೂ ಹೆಚ್ಚಾಗಿ ಇವರಿಬ್ಬರೂ ಸಾರ್ವಜನಿಕವಾಗಿ ಒಟ್ಟಾಗಿ ಕಾಣಿಸಿಕೊಳ್ಳುವುದು ಹೆಚ್ಚು ಪ್ರಸಿದ್ದವಾಯಿತು.[ಸೂಕ್ತ ಉಲ್ಲೇಖನ ಬೇಕು]
ಡಿಸೆಂಬರ್ ೩, ೧೯೧೭ರಲ್ಲಿ, ಮೊಡಿಗ್ಲಿಯನಿಯವರ ಮೊದಲ ಏಕ-ವ್ಯಕ್ತಿ ಪ್ರದರ್ಶನವು ಬರ್ತೆ ವೆಯಿಲ್ ಗ್ಯಾಲರಿಯಲ್ಲಿ ಆರಂಭಗೊಂಡಿತು. ಪ್ಯಾರಿಸ್ ನ ಪೋಲಿಸ್ ಮುಖ್ಯಸ್ಥರು, ಮೊಡಿಗ್ಲಿಯನಿಯವರ ನಗ್ನ ಚಿತ್ರಗಳಿಂದ ಅಪವಾದಕ್ಕೆ ಗುರಿಯಾದರು, ಹಾಗು ಪ್ರದರ್ಶನವು ಆರಂಭಗೊಂಡ ಕೆಲವೇ ಗಂಟೆಗಳಲ್ಲಿ ಬಲವಂತದಿಂದ ಅದನ್ನು ಮುಚ್ಚಿಸಲಾಯಿತು. ಅವರು ಹಾಗು ಹೆಬುಟರ್ನೆ ನೈಸ್ ಗೆ ಸ್ಥಳಾಂತರಗೊಂಡ ನಂತರ, ಆಕೆ ಗರ್ಭವತಿಯಾದಳು, ಹಾಗು ನವೆಂಬರ್ ೨೯, ೧೯೧೮ರಲ್ಲಿ ಜನಿಸಿದ ಹೆಣ್ಣು ಮಗುವಿಗೆ ಜೆಯನ್ನೆ(೧೯೧೮–೧೯೮೪) ಎಂದು ನಾಮಕರಣ ಮಾಡಲಾಗುತ್ತದೆ. ಜನವರಿ ೨೪, ೧೯೨೦ರಲ್ಲಿ ಮೊಡಿಗ್ಲಿಯನಿ ನಿಧನರಾದಾಗ, ಹೆಬುಟರ್ನೆ ಅವರ ಎರಡನೇ ಮಗುವಿಗೆ ಗರ್ಭವತಿಯಾಗಿದ್ದಳು.
ನೈಸ್
ಬದಲಾಯಿಸಿಲೆಪೋಲ್ಡ್ ಜ್ಬೋರ್ವೊಸ್ಕಿ ಚರ್ಚಿಸಿ, ವ್ಯವಸ್ಥೆ ಮಾಡಿಕೊಟ್ಟಿದ್ದ ನೈಸ್ನ ಪ್ರವಾಸದಲ್ಲಿ, ಮೊಡಿಗ್ಲಿಯನಿ, ಫೌಜಿತ ಹಾಗು ಇತರ ಕಲಾವಿದರು ತಮ್ಮ ಕೃತಿಗಳನ್ನು ಶ್ರೀಮಂತ ಪ್ರವಾಸಿಗರಿಗೆ ಮಾರಾಟ ಮಾಡಲು ಪ್ರಯತ್ನಿಸಿದರು. ಮೊಡಿಗ್ಲಿಯನಿ ಕೆಲವು ಚಿತ್ರಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾದರು, ಆದರೆ ಪ್ರತಿಯೊಂದಕ್ಕೂ ಕೆಲವೇ ಕೆಲವು ಫ್ರಾಂಕ್ ಗಳು ದೊರೆತವು. ಇವೆಲ್ಲದರ ಹೊರತಾಗಿಯೂ, ಈ ಸಮಯದಲ್ಲಿ ಕೆಲವಾರು ವರ್ಣಚಿತ್ರಗಳನ್ನು ರಚಿಸಿದರು, ಅವುಗಳು ನಂತರದಲ್ಲಿ ಅತ್ಯಂತ ಜನಪ್ರಿಯ ಹಾಗು ಮಹತ್ವದ ಕೃತಿಗಳೆನಿಸಿಕೊಂಡವು.[ಸೂಕ್ತ ಉಲ್ಲೇಖನ ಬೇಕು] ಅವರ ಜೀವಿತಾವಧಿಯಲ್ಲಿ ತಮ್ಮ ಹಲವಾರು ಕೃತಿಗಳನ್ನು ಮಾರಾಟ ಮಾಡಿದರು, ಆದರೆ ಯಾವುದಕ್ಕೂ ಹೇಳಿಕೊಳ್ಳುವಂತಹ ಹೆಚ್ಚಿನ ಮೌಲ್ಯ ದೊರೆಯಲಿಲ್ಲ. ಅವರಿಗೆ ದೊರೆತ ಹಣವು, ಶೀಘ್ರದಲ್ಲೇ ಅವರ ವ್ಯಸನಕ್ಕೆ ಗುರಿಯಾಯಿತು.[ಸೂಕ್ತ ಉಲ್ಲೇಖನ ಬೇಕು] ಮೇ ೧೯೧೯ರಲ್ಲಿ, ಅವರು ಪ್ಯಾರಿಸ್ ಗೆ ಹಿಂದಿರುಗಿದರು, ಅಲ್ಲಿ ಅವರು ಹೆಬುಟರ್ನೆ ಹಾಗು ತಮ್ಮ ಮಗಳೊಂದಿಗೆ, ರುಯೇ ಡೆ ಲಾ ಗ್ರಾಂಡೆ ಚುಮಿಯೇರೆನಲ್ಲಿ ಒಂದು ಮನೆ ಬಾಡಿಗೆಗೆ ಪಡೆಯುತ್ತಾರೆ. ಅಲ್ಲಿರುವಂತೆಯೇ, ಜೆಯನ್ನೆ ಹೆಬುಟರ್ನೆ ಹಾಗು ಅಮೆಡೆಯೋ ಮೊಡಿಗ್ಲಿಯನಿ ಇಬ್ಬರು ಪರಸ್ಪರರ ಹಾಗು ಖುದ್ದು ತಮ್ಮ ವರ್ಣಚಿತ್ರಗಳನ್ನು ರಚಿಸಿಕೊಂಡರು.[ಸೂಕ್ತ ಉಲ್ಲೇಖನ ಬೇಕು]
ಮರಣ
ಬದಲಾಯಿಸಿಅವರು ಚಿತ್ರ ರಚನೆಯನ್ನು ಮುಂದುವರೆಸಿದರೂ ಸಹ, ಮೊಡಿಗ್ಲಿಯನಿಯವರ ಆರೋಗ್ಯವು ತ್ವರಿತವಾಗಿ ಕ್ಷೀಣಿಸಿತು, ಹಾಗು ಮದ್ಯಪಾನದಿಂದ-ಉಂಟಾಗುತ್ತಿದ್ದ ತಾತ್ಕಾಲಿಕ ವಿಸ್ಮೃತಿಯು ಪದೇ ಪದೇ ಕಾಡುತ್ತಿತ್ತು. ಆಗ ೧೯೨೦ರಲ್ಲಿ, ಹಲವಾರು ದಿನಗಳಿಂದ ಅವರನ್ನು ಕಾಣದ, ಅವರ ಕೆಳಮನೆಯವರು ಇವರ ಮನೆಗೆ ಬಂದರು, ಹಾಗು ಹಾಸಿಗೆಯಲ್ಲಿದ್ದ ಭಾವೊನ್ಮತ್ತರಾದ ಮೊಡಿಗ್ಲಿಯನಿ, ಒಂಬತ್ತು ತಿಂಗಳ ಬಸುರಿಯಾಗಿದ್ದ ಹೆಬುಟರ್ನೆಯ ಕೈಹಿಡಿದುಕೊಂಡಿರುವುದನ್ನು ಕಂಡರು. ಅವರು ವೈದ್ಯರಿಗೆ ಕರೆ ಕಳುಹಿಸಿದರಾದರೂ, ಪರಿಸ್ಥಿತಿಯು ಕೈಮೀರಿ ಹೋಗಿತ್ತು, ಮೊಡಿಗ್ಲಿಯನಿ ವಾಸಿ ಮಾಡಲಾಗದ ಟ್ಯೂಬರ್ಕ್ಯುಲರ್ ಮೆನಿನ್ಜೈಟಿಸ್ ನಿಂದ ಸಾವಿನ ಅಂಚನ್ನು ತಲುಪಿದ್ದರು. ಜನವರಿ ೨೪, ೧೯೨೦ರಲ್ಲಿ ಮೊಡಿಗ್ಲಿಯನಿ ಸಾವನ್ನಪ್ಪಿದರು. ಅಂತ್ಯಸಂಸ್ಕಾರದಲ್ಲಿ ಅಪಾರ ಜನರು ಪಾಲ್ಗೊಂಡರು, ಮೊಂಟ್ಮಾರ್ಟ್ರೆ ಹಾಗು ಮೊಂಟ್ಪಾರ್ನಸ್ಸೆಯಿಂದ ಕಲಾವಿದ ಸಮುದಾಯಕ್ಕೆ ಸೇರಿದ ಹಲವರು ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡರು. ಹೆಬುಟರ್ನೆಯನ್ನು ಆಕೆಯ ತವರು ಮನೆಯವರು ಕರೆದೊಯ್ದರು, ದುಃಖದಿಂದ ಹೊರಬರದ ಆಕೆ, ಮೊಡಿಗ್ಲಿಯನಿಯ ಸಾವಿನ ಎರಡು ದಿನಗಳ ನಂತರ ಮನೆಯ ಐದನೇ ಮಹಡಿಯಿಂದ ಜಿಗಿದು, ಇನ್ನೂ ಜಗತ್ತನ್ನು ಕಾಣದ ಮಗುವಿನೊಂದಿಗೆ ಸಾವನ್ನಪ್ಪುತ್ತಾಳೆ. ಪೆರೇ ಲಚೈಸೆ ಸ್ಮಶಾನದಲ್ಲಿ ಮೊಡಿಗ್ಲಿಯನಿಯ ಅಂತ್ಯಸಂಸ್ಕಾರ ನಡೆಸಲಾಯಿತು. ಹೆಬುಟರ್ನೆಯನ್ನು ಪ್ಯಾರಿಸ್ ಸಮೀಪದ ಸಿಮೆಟಿಯೇರೆ ಡೆ ಬಗ್ನಯೂಕ್ಸ್ ನಲ್ಲಿ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ, ಹಾಗು ೧೯೩೦ರ ತನಕವೂ ಆಕೆಯ ದೇಹವನ್ನು ಮೊಡಿಗ್ಲಿಯನಿಯವರ ಸಮಾಧಿಯ ಪಕ್ಕದಲ್ಲಿ ಇರಿಸಲು ಆಕೆಯ ಕೆರಳಿದ ಕುಟುಂಬವು ಒಪ್ಪಿರಲಿಲ್ಲ. ಇಬ್ಬರ ಗೌರವಾರ್ಥವಾಗಿ ಒಂದೇ ಒಂದು ಸಮಾಧಿಶಿಲೆಯಿದೆ. ಅವರ ಸಮಾಧಿಲೇಖವು ಈ ರೀತಿಯಾಗಿದೆ: "ಜೀವನದ ಉಚ್ಛ್ರಾಯಸ್ಥಿತಿಯಲ್ಲಿರುವಾಗಲೇ ಸಾವಿಗೆ ಗುರಿಯಾದರು." ಆಕೆಯ ಸಮಾಧಿಲೇಖದಲ್ಲಿ: "ಉತ್ಕಟವಾದ ತ್ಯಾಗ ಮಾಡಿದ ನಿಷ್ಠ ಸಂಗಾತಿ." [೧೭] ಮೊಡಿಗ್ಲಿಯನಿ ನಿರ್ಗತಿಕರಾಗಿ ಹಾಗು ನಿರ್ಧನರಾಗಿ ಮರಣವನ್ನಪ್ಪಿದರು-ತಮ್ಮ ಜೀವಿತಾವಧಿಯಲ್ಲಿ ಕೇವಲ ಒಂದೇ ಒಂದು ಏಕವ್ಯಕ್ತಿ ಪ್ರದರ್ಶನವನ್ನು ನೀಡುವುದರ ಜೊತೆಗೆ ಹೊಟೇಲುಗಳಲ್ಲಿ ತಮ್ಮ ಚಿತ್ರಗಳನ್ನು ಮಾರಿ ಊಟ ಪಡೆಯುತ್ತಿದ್ದರು. ಅವರ ಮರಣದ ನಂತರ ಅವರ ಖ್ಯಾತಿಯು ಉತ್ತುಂಗಕ್ಕೇರಿತು. ಅವರ ಬದುಕನ್ನು ಕುರಿತು ಒಂಬತ್ತು ಕಾದಂಬರಿಗಳು, ಒಂದು ನಾಟಕ, ಒಂದು ಸಾಕ್ಷ್ಯಚಿತ್ರ ಹಾಗು ಮೂರು ಚಲನಚಿತ್ರಗಳು ಬಿಡುಗಡೆಯಾಗಿವೆ. ನವೆಂಬರ್ ೨೦೧೦ರಲ್ಲಿ, ೧೯೧೭ರ ಸುಮಾರಿನಲ್ಲಿ ರಚಿಸಲಾದ ನಗ್ನ ಚಿತ್ರಗಳ ಸರಣಿಯಲ್ಲಿ, ಅಮೆಡೆಯೋ ಮೊಡಿಗ್ಲಿಯನಿಯವರು ರಚಿಸಿದ ನಗ್ನ ಚಿತ್ರವು, ನ್ಯೂಯಾರ್ಕ್ ನ ಒಂದು ಹರಾಜಿನಲ್ಲಿ $೬೮.೯ ದಶಲಕ್ಷ (£೪೨.೭ ದಶಲಕ್ಷ)ಕ್ಕೂ ಅಧಿಕ ಮೊತ್ತಕ್ಕೆ ಮಾರಾಟವಾಯಿತು-ಇದು ಈ ಕಲಾವಿದನ ರಚನೆಗೆ ಸಂದಾಯವಾದ ಅಧಿಕ ಮೊತ್ತವಾಗಿ ದಾಖಲೆಯಾಗಿದೆ. "ಲಾ ಬೆಲ್ಲೆ ರೊಮೈನ್" ಕೃತಿಯು ಹರಾಜಿನಲ್ಲಿ, ಅಂದಾಜು $೪೦ ದಶಲಕ್ಷ(£೨೪.೮ ದಶಲಕ್ಷ)ಕ್ಕೆ ಮಾರಾಟವಾಯಿತು. ಈ ವರ್ಷದ ಆರಂಭದಲ್ಲಿ ಪ್ಯಾರಿಸ್ ನಲ್ಲಿ ದಾಖಲಾದ ಮೊಡಿಗ್ಲಿಯನಿಯವರ ಹಿಂದಿನ ಹರಾಜು ದಾಖಲೆಯು ೪೩.೨ ದಶಲಕ್ಷ ಯುರೋಗಳಾಗಿತ್ತು. (£೩೫.೮ ದಶಲಕ್ಷ) ಇವರ ಮತ್ತೊಂದು ವರ್ಣಚಿತ್ರ-ಜೆಯನ್ನೆ ಹೆಬುಟರ್ನೆ(ಔ ಚಾಪೆಯು) - ತಮ್ಮ ಪ್ರಿಯತಮೆಗಾಗಿ ಚಿತ್ರಿಸಿದ ಮೊದಲ ವರ್ಣಚಿತ್ರಗಳಲ್ಲಿ ಒಂದೆನಿಸಿದೆ. ಇದು $೧೯.೧ ದಶಲಕ್ಷ($೧೯.೧ ದಶಲಕ್ಷ) ಕ್ಕೆ ಮಾರಾಟವಾಯಿತು, ಇದು ಅಂದಾಜಿಸಲಾದ $೯–೧೨ ದಶಲಕ್ಷ (£೫.೬-೭.೪ ದಶಲಕ್ಷ) ಕ್ಕೂ ಅಧಿಕವಾಗಿತ್ತು.[೧೮]
ಪರಂಪರೆ
ಬದಲಾಯಿಸಿಮೊಡಿಗ್ಲಿಯನಿಯವರ ಸಹೋದರಿ ಫ್ಲಾರೆನ್ಸ್ ನಲ್ಲಿ ಅವರ ೧೫-ತಿಂಗಳ ಪುತ್ರಿ, ಜೆಯನ್ನೆಯನ್ನು (೧೯೧೮–೧೯೮೪) ದತ್ತು ಪಡೆದರು. ವಯಸ್ಕಳಾದ ಮೇಲೆ, ಆಕೆ ಮೊಡಿಗ್ಲಿಯನಿ: ಮ್ಯಾನ್ ಅಂಡ್ ಮಿಥ್ ಹೆಸರಿನ ತಮ್ಮ ತಂದೆಯ ಜೀವನಚರಿತ್ರೆಯನ್ನು ಬರೆದಳು.
ವಿಮರ್ಶಾತ್ಮ ಪ್ರತಿಕ್ರಿಯೆ
ಬದಲಾಯಿಸಿಪೀಟರ್ ಸ್ಚ್ಜೆಲ್ಡಹ್ಲ್ ಈ ರೀತಿಯಾಗಿ ಬರೆಯುತ್ತಾರೆ:
- ಅವರ ಉದ್ದ-ಕತ್ತಿನ ಮಹಿಳೆ, ಜೊತೆಗೆ ಅವರ ಉತ್ತೇಜಕವಾದ ಬಾಗಿದ ತಲೆಗಳು ಹಾಗು ಮುಖವಾಡ-ಮಾದರಿಯ ಮುಖಗಳ ಬಗ್ಗೆ ಹದಿಹರೆಯದವನಾಗಿ ನನ್ನ ಮೊದಲ ರೋಮಾಂಚಿತ ಅನುಭವವನ್ನು ನಾನು ಸ್ಮರಿಸುತ್ತೇನೆ. ಅವರ ಕಲೆಗಳಲ್ಲಿ ಸೊಗಸಾದ ವಿಲಕ್ಷಣೀಕರಣ ಹಾಗು ರಸವತ್ತಾದ ವರ್ಣವನ್ನು ಅನುಭವಿಸಲು ಸುಲಭವಾಗಿತ್ತು, ಹಾಗು ಸ್ಫುಟ ಹಾಗು ಸೂಕ್ಷ್ಮ ಹಾಗು ಅತ್ಯುತ್ತಮವಾದ ನನ್ನ ವೈಯಕ್ತಿಕ ಆಸೆಗಳನ್ನು ಸೂಚಿಸಿದ ಮಾದರಿ ಪರಾಕಾಷ್ಠೆಯು ಉತ್ಸಾಹಭರಿತ ಶೃಂಗಾರಕಾವ್ಯವಾಗಿರುತ್ತಿತ್ತು, ನನಗಿದ್ದ ದುರ್ಬಲತೆಯನ್ನು ಜಯಿಸುತ್ತಿತ್ತು. ಆ ಕ್ಷಣದಲ್ಲಿ, ನಾನು ನನ್ನ ಜೀವನಕ್ಕೆ ಮೊಡಿಗ್ಲಿಯನಿಯವರ ಮೌಲ್ಯಗಳನ್ನು ಬಳಸಿಕೊಂಡೆ. ಆದರೆ ಮ್ಯೂಸಿಯಂಗಳಲ್ಲಿ ಅವಶಿಷ್ಟವಾಗಿ ಕೃತಜ್ಞತೆಯೊಂದಿಗೆ, ಕ್ಷಣಕಾಲದ ನೋಟದೊಂದಿಗೆ ಅವರ ಚಿತ್ರಗಳಿಗೆ ವಂದಿಸಲು ನನಗೆ ಸಂತೋಷವಾಗುತ್ತಿತ್ತು.[೧೯]
ಸ್ಚ್ಜೆಲ್ಡಹ್ಲ್, ಮೆರ್ಯ್ಲೇ ಸೆಕ್ರೆಸ್ಟ್ ರ ಊಹೆಯ ಶಕ್ತಿಯನ್ನು ವರದಿ ಮಾಡುತ್ತಾರೆ, ಅದರಂತೆ, ಮೊಡಿಗ್ಲಿಯನಿಗೆ ತಮ್ಮನ್ನು ಜನರು ಒಬ್ಬ ಮದ್ಯಪಾನಿ ಹಾಗು ಮಾದಕದ್ರವ್ಯ ವ್ಯಸನಿ ಎಂದು ಪರಿಗಣಿಸುತ್ತಿದ್ದುದ್ದು ಸಂತೋಷವನ್ನು ನೀಡುತ್ತಿತ್ತು, "ಹಾಗು ಗೋಪ್ಯವಾಗಿರಿಸಲಾದ ಕ್ಷಯರೋಗದ ಲಕ್ಷಣಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳುವಂತೆ ಮಾಡುತ್ತಿತ್ತು. ಮದ್ಯಪಾನಿಗಳನ್ನು ಸಹಿಸಬಹುದಿತ್ತು; ಸೋಂಕುವಾಹಿ ವ್ಯಕ್ತಿಯನ್ನು ಸಹಿಸುವುದು ಕಷ್ಟವಾಗಿತ್ತು."[೧೯]
ಚಲನಚಿತ್ರ
ಬದಲಾಯಿಸಿಮೊಡಿಗ್ಲಿಯನಿಯವರ ಬಗ್ಗೆ ಎರಡು ಚಲನಚಿತ್ರಗಳನ್ನು ನಿರ್ಮಿಸಲಾಗಿದೆ: ೧೯೫೮ರಲ್ಲಿ ಬಿಡುಗಡೆಯಾದ ಲೆಸ್ ಅಮಾಂಟ್ಸ್ ಡೆ ಮೊಂಟ್ಪಾರ್ನಸ್ಸೆ ಚಿತ್ರವನ್ನು ಜಾಕ್ವೆಸ್ ಬೇಕರ್ ನಿರ್ದೇಶಿಸಿದ್ದಾರೆ, ಹಾಗು ೨೦೦೪ರಲ್ಲಿ ಬಿಡುಗಡೆಯಾದ ಮೊಡಿಗ್ಲಿಯನಿ ಚಿತ್ರವನ್ನು ಮಿಕ್ ಡೇವಿಸ್ ನಿರ್ದೇಶನದ ಈ ಚಿತ್ರದಲ್ಲಿ ಆಂಡಿ ಗಾರ್ಷಿಯ ಮೊಡಿಗ್ಲಿಯನಿಯ ಪಾತ್ರ ನಿರ್ವಹಿಸಿದ್ದಾರೆ. ನಂತರದಲ್ಲಿನ ೧೯೭೨ರ ಟ್ರ್ಯಾವೆಲ್ಸ್ ವಿಥ್ ಮೈ ಆಂಟ್ ಚಿತ್ರದಲ್ಲಿ ರೆಡ್ ನ್ಯೂಡ್(೧೯೧೭) ವರ್ಣಚಿತ್ರವು ಮಹತ್ವದ ಪಾತ್ರ ವಹಿಸುತ್ತದೆ. ಮ್ಯಾಗಿ ಸ್ಮಿತ್ ರ ಕಪಟ ತುಂಬಿದ ಕಣ್ಣು ಮಿಟುಕಿಸುವ ಚಹರೆ, ಗಾಢವಾದ ಕೆಂಪು ಕೂದಲಿನೊಂದಿಗೆ ಸಂಪೂರ್ಣವಾಗಿದೆ, ಇದು ಮೂಲ ವರ್ಣಚಿತ್ರದ ಮೇಲೆ ಅಧ್ಯಾರೋಪವಾಗಿರುವಂತೆ ಕಂಡುಬರುತ್ತದೆ. ಆಗ ೧೯೬೮ರ ಫ್ರೆಂಚ್ ಚಿತ್ರ, ಲೇ ಟಟೌ ನಲ್ಲಿ ಕಾಲ್ಪನಿಕ ಪಾತ್ರವಾದ ಲೆಗಿಯೊಂನೈರೆ, ಮೊಡಿಗ್ಲಿಯನಿಯವರ ಒಂದು ಹಚ್ಚೆಯನ್ನು ತನ್ನ ಬೆನ್ನಿನಲ್ಲಿ ಹಾಕಿಸಿಕೊಂಡಿರುವುದು ಕಾಣಿಸುತ್ತದೆ. ಅವರ ಮರಣದ ನಂತರ, ಮೊಡಿಗ್ಲಿಯನಿಯವರ ಕೃತಿಗಳ ಮೌಲ್ಯವು ಗಗನಕ್ಕೇರಿದೆ, ಚಲನಚಿತ್ರದಲ್ಲಿ ಒಬ್ಬ ಕಲಾಕೃತಿಗಳ ಮಾರಾಟಗಾರನು ಲೆಗಿಯೊಂನೈರೆಯ ಬೆನ್ನಿಗೆ ಹತ್ತಿದ ಹಚ್ಚೆಯನ್ನು ತೆಗೆದುಹಾಕಲು ಕಾಲ ಹರಣ ಮಾಡುತ್ತಾನೆ.ಅದಲ್ಲದೇ ಮ್ಯೂಸಿಯಂನಲ್ಲಿಯೇ ತನ್ನ ಹೆಚ್ಚಿನ ಸಮಯವನ್ನು ಕಳೆಯುತ್ತಾನೆ.
ಆಯ್ದ ಕೃತಿಗಳು
ಬದಲಾಯಿಸಿವರ್ಣಚಿತ್ರಗಳು
ಬದಲಾಯಿಸಿ- ಹೆಡ್ ಆಫ್ ಏ ಉಮನ್ ವಿಥ್ ಏ ಹ್ಯಾಟ್ (೧೯೦೭)
- ಪೋರ್ಟ್ರೈಟ್ ಆಫ್ ಜುವಾನ್ ಗ್ರಿಸ್ (೧೯೧೫)
- ಪೋರ್ಟ್ರೈಟ್ ಆಫ್ ದಿ ಆರ್ಟ್ ಡೀಲರ್ ಪಾಲ್ ಗುಯಿಲ್ಲೌಮೆ (೧೯೧೬)
- ಪೋರ್ಟ್ರೈಟ್ ಆಫ್ ಜೀನ್ ಕಾಕ್ಟೆಯು (೧೯೧೬)
- ಸೀಟೆಡ್ ನ್ಯೂಡ್ (ಸುಮಾರು. ೧೯೧೮) ಹೊನೊಲುಲು ಅಕ್ಯಾಡೆಮಿ ಆಫ್ ಆರ್ಟ್ಸ್
- ಪೋರ್ಟ್ರೈಟ್ ಆಫ್ ಜೆನ್ನೆ ಹೆಬುಟರ್ನೆ (೧೯೧೮)
- ಉಮನ್ ವಿಥ್ ಏ ಫ್ಯಾನ್ (೧೯೧೯), ಪ್ಯಾರಿಸ್ ನಲ್ಲಿರುವ ಮ್ಯೂಸಿಯಂ ಆಫ್ ಮಾಡರ್ನ್ ಆರ್ಟ್ಸ್ ನಿಂದ ಅಪಹರಿಸಲಾಗಿದೆ May 19, 2010.[೧]
- ಪೋರ್ಟ್ರೈಟ್ ಆಫ್ ಮಾರಿಯೋಸ್ ವರ್ವೊಗ್ಲಿಸ್ (೧೯೨೦; ಮೊಡಿಗ್ಲಿಯನಿಯವರ ಕೊನೆಯ ವರ್ಣಚಿತ್ರ)
ಶಿಲ್ಪಕೃತಿಗಳು
ಬದಲಾಯಿಸಿ(ಮೊಡಿಗ್ಲಿಯನಿಯವರ ಕೇವಲ ೨೭ ಶಿಲ್ಪಕೃತಿಗಳು ಉಳಿದುಕೊಂಡಿವೆಯೆಂದು ಹೇಳಲಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು])
- ಹೆಡ್ ಆಫ್ ಏ ವುಮನ್ (೧೯೧೦/೧೯೧೧).
- ಹೆಡ್ (೧೯೧೧–೧೯೧೩).
- ಹೆಡ್ (೧೯೧೧–೧೯೧೨).
- ಹೆಡ್ (೧೯೧೨).
- ರೋಸ್ ಕಾರ್ಯಟಿಡ್ (೧೯೧೪).
ಇವನ್ನೂ ಗಮನಿಸಿ
ಬದಲಾಯಿಸಿ- Painting the Century: 101 Portrait Masterpieces 1900-2000
- ಲಿಲ್ಲೆ ಮೆಟ್ರೋಪೋಲ್ ಮ್ಯೂಸಿಯಂ ಆಫ್ ಮಾಡರ್ನ್, ಕಾಂಟೆಂಪೊರರಿ ಅಂಡ್ ಔಟ್ಸೈಡರ್ ಆರ್ಟ್
- ದಿವಾನ್ ಮೇಲೆ ನಗ್ನರಾಗಿ ಕುಳಿತಿರುವ ಚಿತ್ರಣ
ಉಲ್ಲೇಖಗಳು
ಬದಲಾಯಿಸಿ- ↑ Werner, Alfred (1967). Amedeo Modigliani. London: Thames and Hudson. p. 13.
- ↑ Fifield, William (19 June 1978). Modigliani: A Biography. W.H. Allen. p. 316.
- ↑ Diehl, Gaston (Reissue edition (Jul 1989)). Modigliani. Crown Pub. p. 96.
{{cite book}}
: Check date values in:|year=
(help)CS1 maint: year (link) - ↑ Soby, James Thrall (Sep 1977). Amedeo Modigliani. New York: Arno P. p. 55.
{{cite book}}
: CS1 maint: year (link) - ↑ Werner, Alfred (1967). Amedeo Modigliani. London: Thames and Hudson. p. 14.
- ↑ ೬.೦ ೬.೧ Mann, Carol (1980). Modigliani. London: Thames and Hudson. p. 12. ISBN 0-500-20176-5.
- ↑ Werner, Alfred (1967). Amedeo Modigliani. London: Thames and Hudson. p. 16.
- ↑ ೮.೦ ೮.೧ Mann, Carol (1980). Modigliani. London: Thames and Hudson. p. 16. ISBN 0-500-20176-5.
- ↑ ೯.೦ ೯.೧ ೯.೨ ೯.೩ Werner, Alfred (1967). Amedeo Modigliani. London: Thames and Hudson. p. 17.
- ↑ Mann, Carol (1980). Modigliani. London: Thames and Hudson. pp. 19–22. ISBN 0-500-20176-5.
- ↑ Mann, Carol (1980). Modigliani. London: Thames and Hudson. p. 20. ISBN 0-500-20176-5.
- ↑ ೧೨.೦ ೧೨.೧ Werner, Alfred (1967). Amedeo Modigliani. London: Thames and Hudson. p. 19.
- ↑ ೧೩.೦ ೧೩.೧ Werner, Alfred (1985). Amedeo Modigliani. New York: Harry N. Abrams, Inc. p. 24. ISBN 0-8109-1416-6.
- ↑ ೧೪.೦ ೧೪.೧ Werner, Alfred (1967). Amedeo Modigliani. London: Thames and Hudson. p. 20.
- ↑ ಕ್ಲೆಯಿನ್, ಮಸೋನ್,ಮತ್ತಿತರರು., ಮೊಡಿಗ್ಲಿಯನಿ: ಬಿಯಾಂಡ್ ದಿ ಮಿಥ್ , ಪುಟ ೧೯೭. ಜ್ಯೂಯಿಶ್ ಮ್ಯೂಸಿಯಂ ಹಾಗು ಯೇಲ್ ಯೂನಿವರ್ಸಿಟಿ ಪ್ರೆಸ್, ೨೦೦೪.
- ↑ "Photo". Museo Thyssen - Bornemisza. Archived from the original on ಫೆಬ್ರವರಿ 29, 2008. Retrieved retrieved June 8, 2009.
{{cite web}}
: Check date values in:|accessdate=
(help) - ↑ Lappin, Linda (2002). "Missing person in Montparnasse: The case of Jeanne Hebuterne". Literary Review: an international journal of contemporary writing. 45 (4): 785–811. 00244589.
{{cite journal}}
:|access-date=
requires|url=
(help); Cite has empty unknown parameter:|coauthors=
(help); Unknown parameter|month=
ignored (help) - ↑ BBC ನ್ಯೂಸ್ - ಮೊಡಿಗ್ಲಿಯನಿಯವರ ನಗ್ನ ಚಿತ್ರವು ದಾಖಲೆ $68.9 ದಶಲಕ್ಷಕ್ಕೆ ಮಾರಾಟವಾಯಿತು
- ↑ ೧೯.೦ ೧೯.೧ ಪೀಟರ್ ಸ್ಚ್ಜೆಲ್ಡಹ್ಲ್, ಮೆರ್ಯ್ಲೇ ಸೆಕ್ರೆಸ್ಟ್ ರ "ಮೊಡಿಗ್ಲಿಯನಿ: ಏ ಲೈಫ್" ಪುಸ್ತಕದ ವಿಮರ್ಶೆ, ದಿ ನ್ಯೂಯಾರ್ಕರ್, ಮಾರ್ಚ್ ೭, ೨೦೧೧ ಅಬ್ಸ್ಟ್ರ್ಯಾಕ್ಟ್
ಬಾಹ್ಯ ಕೊಂಡಿಗಳು
ಬದಲಾಯಿಸಿ- ಹೆಚ್ಟ್ ಮ್ಯೂಸಿಯಂ Archived 2011-04-09 ವೇಬ್ಯಾಕ್ ಮೆಷಿನ್ ನಲ್ಲಿ.
- ಮೊಡಿಗ್ಲಿಯನಿ: ಬಿಯಾಂಡ್ ದಿ ಮಿಥ್ Archived 2007-03-07 ವೇಬ್ಯಾಕ್ ಮೆಷಿನ್ ನಲ್ಲಿ., ದಿ ಜ್ಯೂಯಿಶ್ ಮ್ಯೂಸಿಯಂ, ನ್ಯೂ ಯಾರ್ಕ್ ೨೦೦೪
- ಮೊಡಿಗ್ಲಿಯನಿ ಅಂಡ್ ಹಿಸ್ ಮಾಡೆಲ್ಸ್ Archived 2007-05-16 ವೇಬ್ಯಾಕ್ ಮೆಷಿನ್ ನಲ್ಲಿ., ದಿ ರಾಯಲ್ ಅಕ್ಯಾಡೆಮಿ ಆಫ್ ಆರ್ಟ್ಸ್, ಲಂಡನ್ ೨೦೦೬
- ರಿವ್ಯೂ ಆಫ್ ಎಕ್ಸಿಬಿಶನ್ ರಾಯಲ್ ಅಕ್ಯಾಡೆಮಿ ಆಫ್ ಆರ್ಟ್ಸ್, ಲಂಡನ್ ನಲ್ಲಿ ಮೊಡಿಗ್ಲಿಯನಿ
- ಇಲಿಯ ಹಲ್ಲುಗಳು ಹಾಗು ಶೂನ್ಯ ಕಣ್ಣುಗಳು, ಮೊಡಿಗ್ಲಿಯನಿಯವರ ಕೃತಿಗಳ ಮೇಲೆ ಗೌರವ ಕುಂದಿಸುವ ಅಭಿಪ್ರಾಯ, ೨೦೦೬ರ RA ಪ್ರದರ್ಶನದಲ್ಲಿ, ದಿ ಗಾರ್ಡಿಯನ್ ವಿಮರ್ಶೆ.
- ಮೊಡಿಗ್ಲಿಯನಿಯವರ ಮೇಲೆ ಯೆಹೂದಿ ಪ್ರಭಾವಗಳು